1 00:00:06,080 --> 00:00:07,030 ರೀಚರ್ ಹಿಂದಿನ ಸಂಚಿಕೆಯಲ್ಲಿ 2 00:00:07,230 --> 00:00:10,030 ಆದರೆ ಏನೋ ಕೊಲ್ಲಿಸುವಷ್ಟು ದೊಡ್ಡದರಲ್ಲಿ ನಿಮ್ಮ ಗೆಳೆಯರು ಭಾಗಿ ಆಗಿದ್ದರು. 3 00:00:10,230 --> 00:00:12,950 ನಾನು ಭರ್ತಿ ಮಾಡಿಕೊಂಡ ಟೋನಿ ಸ್ವಾನ್ ಇದರ ಭಾಗವಾಗಿರಲು ಸಾಧ್ಯವಿಲ್ಲ. 4 00:00:13,150 --> 00:00:16,590 ಅವನಲ್ಲಿ ಸಹಾಯಕ ಭದ್ರತಾ ನಿರ್ದೇಶಕನಾಗಿದ್ದ. 5 00:00:17,260 --> 00:00:19,660 {\an8}"ಶೇನ್ ಲಾಂಗ್ಟನ್. ಭದ್ರತಾ ನಿರ್ದೇಶಕ." 6 00:00:19,860 --> 00:00:21,920 ಅಟ್ಲಾಂಟಿಕ್ ನಲ್ಲಿ ಇವನೊಂದಿಗೆಯೇ ಫೋನಲ್ಲಿ ಮಾತಾಡಿದ್ದಿರಬೇಕು. 7 00:00:22,120 --> 00:00:23,210 ಮಾಲ್ಕಮ್ ಲಾವೊಯ್ ಜೊತೆ ಮಾತಾಡಬೇಕು. 8 00:00:23,410 --> 00:00:26,590 ಏನು ಗೊತ್ತು ಎಂದು ತಿಳಿಯುವಷ್ಟು ಅವನ ಹತ್ತಿರ ಹೋಗುವುದು ಸಾಧ್ಯವಿಲ್ಲ. 9 00:00:26,790 --> 00:00:30,050 {\an8}ಬೇಕಾಗಿಲ್ಲ. ಡೇನಿಯಲ್ ಬಾಯ್ಡ್, ಸಚಿವ ಲಾವೊಯ್ ಯ ಶಾಸಕಾಂಗ ನಿರ್ದೇಶಕ. 10 00:00:30,250 --> 00:00:33,260 ಲಿಟಲ್ ವಿಂಗ್ ಆಕಾಶದಿಂದ ಏನನ್ನಾದರೂ ಉರುಳಿಸಬಲ್ಲದು. 11 00:00:33,460 --> 00:00:35,180 ನ್ಯೂ ಏಜ್ ನದ್ದು ಎರಡು ನೆಲೆಗಳಿವೆ. 12 00:00:35,380 --> 00:00:38,310 ಸಾಫ್ಟ್ವೇರ್ ಗೆ ನ್ಯೂ ಯಾರ್ಕ್, ಹಾರ್ಡ್ವೇರ್ ಗೆ ಡೆನ್ವರ್ ನ ಉತ್ಪಾದನಾ ಘಟಕ. 13 00:00:38,510 --> 00:00:39,520 ಏನು ಆದೇಶ ನಮಗೆ? 14 00:00:39,720 --> 00:00:42,850 ನೀನು, ಡಿಕ್ಸನ್ ಡೆನ್ವರ್ ಗೆ ಹೋಗಿ. ಓ'ಡೊನೆಲ್ ಮತ್ತು ನಾನು ಡಿಸಿಗೆ ಹೋಗುವೆವು. 15 00:00:43,050 --> 00:00:45,570 ಹೋಂಲ್ಯಾಂಡ್ ಬಳಿ ಹೋಗಿ, ಅವರಿಗೆ ಎಎಂ ಬಗ್ಗೆ ಏನು ಗೊತ್ತು ನೋಡೋಣ. 16 00:00:45,760 --> 00:00:46,870 ತಯಾರಾಗಿ, 17 00:00:48,040 --> 00:00:50,380 ಏಕೆಂದರೆ ನಾವು ತುಂಬಾ ಗೂಂಡಾಗಿರಿ ಮಾಡಲಿದ್ದೇವೆ. 18 00:00:55,550 --> 00:00:56,380 ಹೋಗುವೆ ನಾನು! 19 00:01:00,930 --> 00:01:01,790 ಬಿಡು! 20 00:01:01,990 --> 00:01:03,670 ಸಿಕ್ಕುವೆ ನೀನು ನನಗೆ! 21 00:01:03,870 --> 00:01:05,080 ಇಲ್ಲ, ಸಿಗಲ್ಲ. 22 00:01:05,280 --> 00:01:07,670 ಮತ್ತೆಂದೂ ನನ್ನ ಗೊಂಬೆಯನ್ನು ಬೀಳಿಸಬೇಡ, ಇಲ್ಲದಿದ್ದರೆ ನಾನು... 23 00:01:07,870 --> 00:01:09,150 ...ನಿನ್ನ ಮುಖ! 24 00:01:11,230 --> 00:01:13,690 ನಿಲ್ಲಿಸು! 25 00:01:14,650 --> 00:01:16,100 ಛೇ. ಎಪಿಪೆನ್ ಇಟ್ಟುಕೊಂಡೆಯಾ? 26 00:01:16,300 --> 00:01:17,390 - ಹೂಂ, ಇಟ್ಟುಕೊಂಡೆ. - ಮತ್ತು ವೂಬಿ? 27 00:01:17,590 --> 00:01:20,140 ವೂಬಿ, ಪಾಂಡ-ಪಾಲ್, ಲಿಂಡ್ಸೆ ಮಂಗ, ಎಲ್ಲವನ್ನೂ ಇಟ್ಟುಕೊಂಡೆ. 28 00:01:20,340 --> 00:01:22,850 ಎಸೆಯುವ ಫೋನ್ ಇಟ್ಟುಕೋ. ಯಾರೊಂದಿಗೂ ಸಂಪರ್ಕ ಬೇಡ. ಅಪ್ಪ ಅಮ್ಮ, 29 00:01:23,050 --> 00:01:25,350 ನಿನ್ನ ತಂಗಿಯೊಂದಿಗೂ. ಎಲ್ಲವನ್ನೂ ಫೇಸ್ಬುಕ್ ನಲ್ಲಿ ಹಾಕುತ್ತಾಳೆ. 30 00:01:25,550 --> 00:01:26,860 ಇದೆಲ್ಲಾ ಗೊತ್ತು ನನಗೆ. 31 00:01:27,060 --> 00:01:28,900 ಆಶ್ವಿಲ್ ಗೆ ಹೋಗು. ಹುಡುಗರ ಜೊತೆ. ಅಲ್ಲಿ ಬೇಕಾದದ್ದಿದೆ. 32 00:01:29,100 --> 00:01:30,320 ಪ್ರವಾಸಿ ತಾಣ. ಸೇರಿ ಹೋಗುವೆ. 33 00:01:30,520 --> 00:01:32,800 ನಗದು ಮತ್ತು ಪೇ-ಆಸ್-ಯು-ಗೋ ಕ್ರೆಡಿಟ್ ಕಾರ್ಡ್ ಮಾತ್ರ ಬಳಸು. 34 00:01:33,460 --> 00:01:35,570 ಒಂದರಿಂದ ಹತ್ತರಲ್ಲಿ ಹೇಳು, ಇದು ಎಷ್ಟು ಕೆಟ್ಟದಾಗಿದೆ? 35 00:01:35,770 --> 00:01:37,120 ಅವರು ನಿಮ್ಮ ಹಿಂದೆ ಬರುವುದಿಲ್ಲ. 36 00:01:37,320 --> 00:01:39,660 ಸ್ವಲ್ಪ ಹೆಚ್ಚು ನಿಗಾ ವಹಿಸುತ್ತಿದ್ದೇವೆ, ಅಷ್ಟೇ. 37 00:01:39,860 --> 00:01:40,720 ಒಂದರಿಂದ ಹತ್ತರಲ್ಲಿ. 38 00:01:42,890 --> 00:01:44,810 ನಿಮಗೆ, ಅಬ್ಬಬ್ಬಾ ಎಂದರೆ ನಾಲ್ಕು. 39 00:01:45,350 --> 00:01:46,330 ನಿನಗೆ? 40 00:01:46,530 --> 00:01:48,710 ಕೆಲವು ಬಹಳ ಕೆಟ್ಟ ಜನರ ಹಿಂದೆ ಹೋಗುತ್ತಿದ್ದೇವೆ, 41 00:01:48,910 --> 00:01:51,050 ಆದರೆ ನನ್ನ ಜೊತೆ ನನ್ನ ತಂಡ ಇದೆ. ತೊಂದರೆ ಏನಿಲ್ಲ. 42 00:01:51,250 --> 00:01:52,470 ಎರಡು ಮೂರು ದಿನಗಳಲ್ಲಿ ಮುಗಿಯುತ್ತೆ. 43 00:01:52,660 --> 00:01:53,930 ನಾನು ಮಗುವನ್ನು ತಯಾರು ಮಾಡಬೇಕು. 44 00:01:54,120 --> 00:01:56,860 ಕೊನೆ ಬಾರಿ ನಾನು ಮಾಡಿದಂತೆ. 45 00:01:57,860 --> 00:02:00,610 ನನ್ನ ಗೊಂಬೆ ಹಿಂದಿರುಗಿಸು! 46 00:02:00,990 --> 00:02:01,810 ಹೋಗಿ... 47 00:02:02,010 --> 00:02:02,980 ಅವಳಿಗೆ ಭಯವಾಗಿಲ್ಲ. 48 00:02:03,180 --> 00:02:04,190 ನಿನ್ನ ಬಟ್ಟೆ ಎತ್ತಿಡು. 49 00:02:04,380 --> 00:02:06,040 ವಾಸ್ತವವನ್ನು ಒಪ್ಪಿಕೊಳ್ಳುತ್ತಾಳೆ. 50 00:02:07,120 --> 00:02:08,940 ತುರ್ತು ಶುಶ್ರೂಷಕಿ, ಅಗ್ನಿಶಾಮಕ ಮುಖ್ಯಸ್ಥನ ಮಗಳು. 51 00:02:09,140 --> 00:02:10,150 ಗಟ್ಟಿಗಳು. 52 00:02:10,350 --> 00:02:12,190 ಸುಂದರಿ, ಗಟ್ಟಿಗಳು, ಜಾಣೆ. 53 00:02:12,390 --> 00:02:13,460 ಬೆಟ್ ಸೋತು ಮದುವೆಯಾದಳೇ? 54 00:02:14,960 --> 00:02:16,820 ಅದೇ ಅಂದುಕೊಂಡೆ. 55 00:02:17,020 --> 00:02:19,950 ಮೊದಲು ಯಾರಾದರೂ ನನ್ನನ್ನು ನಿನ್ನ ಗತಿ ಏನಾಗುತ್ತೆ ಎಂದು ಕೇಳಿದ್ದರೆ, 56 00:02:20,150 --> 00:02:21,910 ಏಡ್ಸ್ ಬಂದು ನಿಧಾನವಾಗಿ ಸಾಯುತ್ತಿದ್ದೆ, 57 00:02:22,110 --> 00:02:24,600 ನಿನ್ನ ಗೆಳತಿಯರು ನಿನ್ನ ಮಾರುತಿಗೆ ಜಗಳ ಮಾಡಬೇಕಾದರೆ ಎನ್ನುತ್ತಿದ್ದೆ. 58 00:02:24,800 --> 00:02:28,170 ಹೂಂ, ಜಗತ್ತಿನ ಎಲ್ಲಾ ಹುಡುಗಿಯರು ಬೇಕಿರಲಿಲ್ಲ ನನಗೆ. 59 00:02:28,370 --> 00:02:29,270 ಸರಿಯಾದ ಹುಡುಗಿ ಬೇಕಿತ್ತು. 60 00:02:31,560 --> 00:02:33,110 ಟೈಮ್ ಔಟ್ ಬೇಕೇ ನಿನಗೆ? 61 00:02:35,150 --> 00:02:37,180 ನೀಗ್ಲೇ ಮತ್ತು ಡಿಕ್ಸನ್ ಡೆನ್ವರ್ ಘಟಕ ಹೋಗಿ ಸೇರಿದರು. 62 00:02:37,380 --> 00:02:39,180 ಒಳ್ಳೆಯದು. ಅವರಿಗೆ ಕ್ಷಿಪಣಿ ಬಗ್ಗೆ ಬೇಗ ಗೊತ್ತಾದರೆ 63 00:02:39,380 --> 00:02:41,030 ನಿನ್ನ ಕುಟುಂಬ ಹೆಚ್ಚು ದಿನ ದೂರ ಇರಬೇಕಾಗಿಲ್ಲ. 64 00:02:42,160 --> 00:02:43,660 ನೀನು ತುಂಬಾ ನಿಧಾನ. 65 00:02:47,620 --> 00:02:48,660 ಸರಿ. 66 00:02:51,710 --> 00:02:52,880 ಸ್ವಲ್ಪ ದಿನವೆಂದರೆ ಪರವಾಗಿಲ್ಲ. 67 00:02:56,840 --> 00:02:57,740 ನಾನು ಮಾಡುವೆ. 68 00:02:57,940 --> 00:03:00,840 {\an8}ಡೆನ್ವರ್, ಕೊಲರೆಡೊ 69 00:03:03,010 --> 00:03:05,100 ಡಿಸಿಎಂಎ ಒಂದು ತಿಂಗಳ ಹಿಂದೆ ಬಂದಿತ್ತು. 70 00:03:05,800 --> 00:03:06,960 ಹೂಂ. ಈಗ ಮತ್ತೆ ಬಂದಿದ್ದೇವೆ. 71 00:03:07,160 --> 00:03:09,920 ನಾವು ಹಾಗೇ, ಬೇಡದಿದ್ದಾಗ ಬರುತ್ತೇವೆ. 72 00:03:10,120 --> 00:03:12,090 ಈಗ ಕರೆದೊಯ್ಯುವೆಯಾ? ನಿಮ್ಮ ಸೂಪರ್ವೈಸರ್ ಬಳಿ. 73 00:03:12,290 --> 00:03:13,710 ನ್ಯೂ ಏಜ್ ತಂತ್ರಜ್ಞಾನ ವಿತರಣಾ ಗೋದಾಮು 74 00:03:13,910 --> 00:03:14,730 ಇಲ್ಲೇ ಇರಿ. 75 00:03:18,440 --> 00:03:20,800 ಅಧಿಕಾರಿಗಳಂತೆ ನಾಟಕ ಮಾಡಿದರೆ ಸಾಕು 76 00:03:21,000 --> 00:03:24,620 ನೀನು ಎಲ್ಲಿ ಬೇಕಾದರೂ ಹೋಗಿ ಏನು ಬೇಕಾದರೋ ಮಾಡಬಹುದು. 77 00:03:28,240 --> 00:03:29,200 ಹೇಗಿರುವೆ? 78 00:03:30,330 --> 00:03:31,560 ಸ್ವಲ್ಪ ನೋವಿದೆ. 79 00:03:31,760 --> 00:03:34,650 ಹೀಲ್ಸ್ ನಲ್ಲಿ ಹೋರಾಡುವುದಕ್ಕೆ ಸ್ವಲ್ಪ ಅಭ್ಯಾಸ ಬೇಕು. 80 00:03:34,850 --> 00:03:37,800 ಹೀಲ್ಸ್ ನಲ್ಲಿ ನಡೆಯುವುದಕ್ಕೆ ಸ್ವಲ್ಪ ಅಭ್ಯಾಸ ಬೇಕು. ಎಂದೂ ಹಾಕಿಲ್ಲ. 81 00:03:38,960 --> 00:03:40,620 ಎಂದೂ ಹೀಲ್ಸ್ ಹಾಕಿಲ್ಲವೇ? 82 00:03:40,810 --> 00:03:41,910 ಇಲ್ಲ. 83 00:03:42,110 --> 00:03:43,660 ಶಾಲಾ ಕಾರ್ಯಕ್ರಮಕ್ಕೂ ಹಾಕಿಲ್ಲವೇ? 84 00:03:43,860 --> 00:03:45,080 ಹೋಗೇ ಇಲ್ಲ. 85 00:03:45,280 --> 00:03:48,430 ಓದು ಅಥವಾ ಅಪ್ಪನನ್ನು ನೋಡಿಕೊಳ್ಳಲು ಇಲ್ಲದಿದ್ದಾಗ, ಕೆಲಸ ಮಾಡಬೇಕಿತ್ತು. 86 00:03:50,140 --> 00:03:54,190 ಕೆಟ್ಟ ಸಂಗೀತ, ಬೆಚ್ಚನೆಯ ಪಾನೀಯ, ಬೇಡದಿರುವಲ್ಲಿ ಮುಟ್ಟುವ ಜನ. 87 00:03:54,690 --> 00:03:55,770 ಹೆಚ್ಚೇನೂ ಮಿಸ್ ಮಾಡಿಲ್ಲ. 88 00:04:01,940 --> 00:04:03,260 ಯಾರೂ ಹೇಳಲಿಲ್ಲ ಇದರ ಬಗ್ಗೆ. 89 00:04:03,460 --> 00:04:06,560 ಮೊದಲೇ ಹೇಳಿದರೆ ಸರ್ಪ್ರೈಸ್ ಪರಿಶೀಲನೆ ಹೇಗೆ ಆಗುತ್ತೆ? 90 00:04:06,760 --> 00:04:09,600 ಹಣವನ್ನು ದುರುಪಯೋಗ ಮಾಡುತ್ತಿಲ್ಲ ಎಂದು ಸರ್ಕಾರಕ್ಕೆ ಗೊತ್ತಾಗಬೇಕಲ್ಲ, 91 00:04:09,800 --> 00:04:13,150 ಹಾಗಾಗಿ ನಾವಿಲ್ಲಿ ಲಿಟಲ್ ವಿಂಗ್ ನ ಹೆಗಲಿನ ಮೇಲಿನ ಲಾಂಚರ್ ಗಳನ್ನು, 92 00:04:13,350 --> 00:04:16,690 ಕ್ಷಿಪಣಿಗಳನ್ನು ನೋಡಲು ಬಂದಿದ್ದೇವೆ. ವಿಶೇಷಣಗಳು, ಉತ್ಪಾದನಾ ಪ್ರೋಟೋಕಾಲ್ ಗಳು, 93 00:04:16,890 --> 00:04:18,650 ಆರ್ಡರ್ ಮತ್ತು ಡೆಲಿವರಿ ಸರಿ ಇದೆಯೇ ಎಂದು ನೋಡಲು. 94 00:04:18,850 --> 00:04:20,250 ಡೆಲಿವರಿ? 95 00:04:21,340 --> 00:04:23,450 ಹತ್ತು ನಿಮಿಷಗಳ ಮುಂಚೆ ಡೆಲಿವರಿ ಆಯಿತು! 96 00:04:23,650 --> 00:04:25,950 ಈಗಷ್ಟೇ ಅವನ್ನೆಲ್ಲಾ ಹೊರಗೆ ಕಳಿಸಿದೆವು. 97 00:04:26,150 --> 00:04:28,510 650 ಗಳೂ. 98 00:04:29,640 --> 00:04:31,000 650? 99 00:04:31,200 --> 00:04:32,250 ದಾಖಲೆಗಳು ಇಲ್ಲಿವೆ. 100 00:04:32,450 --> 00:04:36,270 ಮೊದಲೇ ಕರೆ ಮಾಡಿದ್ದರೆ, ನಿಮಗಾಗಿ ಡೆಲಿವರಿ ಕಳಿಸುತ್ತಿರಲಿಲ್ಲ. 101 00:04:40,190 --> 00:04:42,230 - ಛೇ. - ಹೂಂ. 102 00:05:09,760 --> 00:05:11,850 ಎನ್ಎಟಿ 103 00:05:13,390 --> 00:05:14,220 ಹಲೋ. 104 00:05:14,850 --> 00:05:16,380 ಸಹಾಯ ಬೇಕೇ? 105 00:05:16,580 --> 00:05:17,390 ನನಗೆ ಬೇಕಿರುವುದು 106 00:05:18,060 --> 00:05:18,980 ನಿನ್ನ ಟ್ರಕ್. 107 00:05:52,140 --> 00:05:53,260 {\an8}ಸ್ಫೋಟಕ ಕ್ಷಿಪಣಿಗಳು 108 00:06:02,400 --> 00:06:03,730 ಕೆಲಸ ನಡೆಯುತ್ತಿದೆ. 109 00:06:08,610 --> 00:06:12,320 ನಿರ್ಬಂಧಿತ ಕರೆ 110 00:06:13,870 --> 00:06:15,060 ಒಳ್ಳೆಯ ಸುದ್ದಿ ನೀಡು. 111 00:06:15,260 --> 00:06:18,830 ಜಿಪಿಎಸ್ ಟ್ರಾಕರ್ ಕೆಲಸ ಮಾಡಿತು. ನ್ಯೂ ಏಜ್ ನ ನಿನ್ನ ಜನ ಕೆಲಸ ಮಾಡಿದರು. 112 00:06:19,250 --> 00:06:21,280 ಆದರೆ ಚಾಲಕನನ್ನು ಕೊಂದೆ ಎಂದವರಿಗೆ ಬೇಜಾರಾಗಬಹುದು. 113 00:06:21,470 --> 00:06:23,780 ಅವರಿಗೆ ದುಡ್ಡು ಸಿಕ್ಕರೆ ಸಾಕು. 114 00:06:23,980 --> 00:06:26,570 ದುರಾಸೆ ಎಲ್ಲವನ್ನೂ ಮಾಡಿಸುತ್ತದೆ. 115 00:06:26,770 --> 00:06:29,370 - ಟ್ರೈಲರ್ ಬದಲಿಸಿಕೊಂಡು ಅಲ್ಲಿಂದ ಹೊರಡಿ. - ಸರಿ. 116 00:06:29,570 --> 00:06:30,840 ನ್ಯೂ ಯಾರ್ಕ್ ನಲ್ಲಿ ಸಿಗೋಣ. 117 00:06:34,600 --> 00:06:35,460 ಅಜಾರಿ ಮಹಮೂದ್ 118 00:06:35,660 --> 00:06:36,520 ಈ ಹೆಸರು. 119 00:06:37,850 --> 00:06:38,850 ಅಜಾರಿ ಮಹಮೂದ್. 120 00:06:41,480 --> 00:06:44,550 ಅಂದರೆ, ಡೆನ್ವರ್ ನಲ್ಲಿ ನಾವು ಬೆನ್ನಟ್ಟುತ್ತಿದ್ದ ಆರೊನ್ ಮೈಕ್ಲಾಸ್, 121 00:06:44,750 --> 00:06:45,970 ಮಹಮೂದೇ ಇರಬಹುದೇ? 122 00:06:46,170 --> 00:06:47,840 ಹೂಂ, ನಾವವನನ್ನು "ಎ.ಎಂ." ಎಂದು ಕರೆಯುವುದು. 123 00:06:48,040 --> 00:06:51,100 ಬಹಳ ಜಾಣ ಅವನು. ಎಂದೂ ಸಿಕ್ಕಿಬಿದ್ದಿಲ್ಲ. ಚಿತ್ರಗಳಿಲ್ಲ. 124 00:06:51,300 --> 00:06:54,810 ಅವನು ಯಾವ ದೇಶದವನು ಎಂದೂ ಗೊತ್ತಿಲ್ಲ. 125 00:06:55,010 --> 00:06:56,140 ನಮಗೆ ಗೊತ್ತಿರುವಂತೆ ಅವನು, 126 00:06:56,340 --> 00:06:58,560 ಯಾರಾದರೂ ಇರಬಹುದು, ಸೆಂಟ್ರಲ್ ಅಮೆರಿಕನ್, 127 00:06:58,760 --> 00:07:00,580 ಇಟಾಲಿಯನ್, ಗ್ರೀಕ್, ಮಿಡಲ್ ಈಸ್ಟರ್ನ್... 128 00:07:01,540 --> 00:07:02,480 ಅವನು ಸುಳಿವೇ ಇಲ್ಲದವ. 129 00:07:02,680 --> 00:07:04,780 ನಮ್ಮಲ್ಲಿ ಅವನ ಮೂರು ಧ್ವನಿ ರೆಕಾರ್ಡಿಂಗ್ ಗಳಿವೆ. 130 00:07:04,980 --> 00:07:07,660 ಧ್ವನಿ ವಿಧಿವಿಜ್ಞಾನ ಅದು ಒಬ್ಬನೇ ವ್ಯಕ್ತಿಯದ್ದು ಎಂದು ಹೇಳಿದೆ. 131 00:07:07,850 --> 00:07:09,700 ಪ್ರತಿ ಬಾರಿ ಬೇರೆ ಗುರುತು ಬಳಸಿದ್ದಾನೆ. 132 00:07:09,900 --> 00:07:10,720 ಅವನ ಸಿದ್ಧಾಂತ? 133 00:07:11,180 --> 00:07:13,580 ಯಾವುದೇ ರಾಜಕೀಯ ಅಥವಾ ಧಾರ್ಮಿಕ ಸಂಬಂಧಗಳಿಲ್ಲ. 134 00:07:13,780 --> 00:07:16,830 ಅವನಿಗೆ ಹಣವೇ ದೇವರು, ಹೆಚ್ಚು ಹಣ ಕೊಡುವವನಿಗೆ ಅವನ ಕೆಲಸ. 135 00:07:17,030 --> 00:07:20,230 ಕೆಟ್ಟ ವ್ಯಕ್ತಿಗಳಿಗೆ ಕೆಟ್ಟ ಕೆಲಸ ಮಾಡಲು ಬೇಕಾದ ಉಪಕರಣ ನೀಡುವವ. 136 00:07:21,230 --> 00:07:23,300 ಆರು ವರ್ಷಗಳ ಹಿಂದೆ ಮೊದಲಿಗೆ ಗಮನ ಅವನೆಡೆ ಹರಿದಿದ್ದು. 137 00:07:23,500 --> 00:07:26,730 ಒಂದು ಭಯೋತ್ಪಾದನಾ ಕೋಶ ಟ್ಯಾಂಕ್ ಗಟ್ಟಲೆ ನರ ವಿಷಾನಿಲ ಪಡೆಯಲು ಪ್ರಯತ್ನಿಸುತ್ತಿತ್ತು. 138 00:07:27,110 --> 00:07:29,010 ಎಲ್ಲರನ್ನೂ ಬಂಧಿಸಿದೆವು, 139 00:07:29,210 --> 00:07:30,860 ಎಲ್ಲರೂ, ಮಹಮೂದನನ್ನು, 140 00:07:31,610 --> 00:07:33,740 ಅಥವಾ ಏನವನ ಹೆಸರೋ, ಅವನನ್ನು ಬಿಟ್ಟು. 141 00:07:34,700 --> 00:07:35,530 ಸುಳಿವಿಲ್ಲದವ. 142 00:07:38,040 --> 00:07:40,440 ಇದನ್ನು ಬಾಂಡ್ ಬಳಸಿ ಕೊಳ್ಳುವವರಿದ್ದರು. 143 00:07:40,640 --> 00:07:42,940 ಹೂಂ, ತೆರಿಗೆ ಕಳ್ಳರು, ಹವಾಲಾದವರು, ಮತ್ತು ಇತರೆ ಬೇವರ್ಸಿಗಳ 144 00:07:43,140 --> 00:07:46,110 ನೆಚ್ಚಿನ ಆರ್ಥಿಕ ಸಾಧನ. 145 00:07:46,310 --> 00:07:48,360 ಯುಎಸ್ ಅವುಗಳನ್ನು 80 ರಲ್ಲೇ ಕೊಡುವುದನ್ನು ನಿಲ್ಲಿಸಿತು. 146 00:07:48,560 --> 00:07:51,160 ಕೆಲವು ದೇಶಗಳು ಇನ್ನೂ ಬಳಸುತ್ತವೆ. ಇವರು ಲಕ್ಸೆಂಬರ್ಗ್ ನವರು. 147 00:07:51,360 --> 00:07:54,450 ಎ.ಎಂ. ನಂತೆ ಎಚ್ಚರ ವಹಿಸುವವರು ಬಾಂಡ್ ಗಳನ್ನೇ ಬಳಸುವರು. 148 00:07:54,650 --> 00:07:55,870 ಸಾಕಷ್ಟು ಪ್ರಮಾಣದಲ್ಲಿ ಕೊಟ್ಟರೆ, 149 00:07:56,070 --> 00:07:58,250 ಬಹಳಷ್ಟು ಹಣವನ್ನು ಒಂದು ಸೂಟ್ಕೇಸ್ ನಲ್ಲಿ ಒಯ್ಯಬಹುದು. 150 00:07:58,450 --> 00:07:59,750 650 ಲಕ್ಷದಷ್ಟು. 151 00:07:59,950 --> 00:08:00,960 ಅದೇ ಸಮಸ್ಯೆ. 152 00:08:01,160 --> 00:08:03,590 ಒಂದು ಬಾಂಡ್ ಇದ್ದರೆ, ಹತ್ತು ಲಕ್ಷದಷ್ಟು ಹಣ ಇದ್ದಂತೆ. 153 00:08:03,790 --> 00:08:04,850 ಯಾರ ಕೈಯಲ್ಲಿದೆಯೋ ಅವನೇ ಮಾಲೀಕ. 154 00:08:05,850 --> 00:08:08,610 ಅಂದರೆ, ಎ.ಎಂ. ತಾನೇ ಖುದ್ದಾಗಿ ಪಾವತಿಸುತ್ತಾನೆ. 155 00:08:09,480 --> 00:08:10,690 ಅಲ್ಲೇ ಅವನು ಸಿಕ್ಕಿಬೀಳುವುದು. 156 00:08:11,240 --> 00:08:12,400 ನಿನ್ನ ಅಣ್ಣನಂತೆಯೇ. 157 00:08:15,450 --> 00:08:17,640 ನಾವಿದರ ಮೇಲೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ, 158 00:08:17,840 --> 00:08:19,480 ಹಣಕಾಸಿನ ಪ್ರಶ್ನೆ ಜೋ ಹತ್ತಿರ ಕೇಳಿದ್ದೆ. 159 00:08:19,680 --> 00:08:21,580 ಅವನು ನೀನು ಹೇಳಿದ ಮಾತನ್ನೇ ಹೇಳಿದ್ದ. 160 00:08:21,780 --> 00:08:23,960 ಪಾವತಿಸಲು ಎ.ಎಂ. ಬರುವ, ಇನ್ಯಾರೂ ಅಲ್ಲ ಎಂದು. 161 00:08:25,040 --> 00:08:27,610 ಸರಿ, ನಮ್ಮ ಬಳಿ ಇದ್ದದ್ದೆಲ್ಲಾ ತೋರಿದೆವು. 162 00:08:27,810 --> 00:08:28,710 ಈಗ, ನಿಮ್ಮ ಬಾರಿ. 163 00:08:34,930 --> 00:08:37,680 ನಾವಿನ್ನೂ ವಿವರಗಳನ್ನು ಕಲೆ ಹಾಕುತ್ತಿದ್ದೇವೆ, 164 00:08:38,640 --> 00:08:41,370 ಆದರೆ ಮಾತು ಕೊಡುತ್ತಿದ್ದೇವೆ, ಏನಾದರೂ ಗೊತ್ತಾದರೆ, 165 00:08:41,570 --> 00:08:42,580 - ನಿಮಗೆ ಹೇಳುವೆ. - ನನ್ನಾಣೆ. 166 00:08:42,780 --> 00:08:45,210 ಇವನು ಮತ್ತೆ ಕೈಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವೆವು. 167 00:08:45,410 --> 00:08:46,750 ಎ.ಎಂ. ಮತ್ತವನ ಜೊತೆ ಕೆಲಸ ಮಾಡುವವರು 168 00:08:46,950 --> 00:08:49,480 ಕಾನೂನಿನ ಪ್ರಕಾರ ಶಿಕ್ಷೆಗೆ ಒಳಗಾಗುತ್ತಾರೆ. 169 00:08:52,400 --> 00:08:53,900 ನಾವು ಅವರನ್ನು ಮೊದಲೇ ಕೊಲ್ಲದಿದ್ದರೆ. 170 00:08:59,620 --> 00:09:00,580 ಧನ್ಯವಾದಗಳು. 171 00:09:07,000 --> 00:09:08,130 ಅವನ ಅಣ್ಣನಂತೆಯೇ. 172 00:09:10,090 --> 00:09:15,010 ರೀಚರ್ 173 00:09:39,450 --> 00:09:41,600 18 ಚಕ್ರದ ವಾಹನ ಈ ರಸ್ತೆಯಲ್ಲಿ ಬೇಗ ಹೋಗಲು ಸಾಧ್ಯವಿಲ್ಲ. 174 00:09:41,800 --> 00:09:43,160 ಅದನ್ನು ಹಿಡಿಯಬಹುದು. 175 00:09:48,290 --> 00:09:50,000 ಹೂಂ, ಅದೂ ಅವರೆಲ್ಲಾದರೂ ನಿಲ್ಲಿಸಿದರೆ. 176 00:09:58,050 --> 00:09:59,100 ಇವರು ಯಾರು? 177 00:09:59,300 --> 00:10:01,620 ಇವರು ಟ್ರಕ್ ಹಾಳಾಯಿತು, 178 00:10:01,820 --> 00:10:04,710 ವರ್ಗಾಯಿಸಲು ಇನ್ನೊಂದನ್ನು ಬರಹೇಳಿದೆವು ಎಂದು ಹೇಳುವವರು. 179 00:10:04,910 --> 00:10:07,500 ನಾಮಗಿಂತ ಮುಂಚೆ ಇಲ್ಲಿಗೆ ಎರಡನೇ ಟ್ರಕ್ ಬರಲು ಸಾಧ್ಯವೇ ಇಲ್ಲ. 180 00:10:07,700 --> 00:10:08,480 ಹೌದು. 181 00:10:09,140 --> 00:10:10,480 ಇವರು ಕದಿಯುತ್ತಿದ್ದಾರೆ. 182 00:10:12,560 --> 00:10:13,770 ನೀನು ತಪ್ಪಾಗಿದ್ದರೆ? 183 00:10:17,190 --> 00:10:19,680 ಖಂಡಿತ ತಪ್ಪಲ್ಲ. ನಾವ್ಯಾರೆಂದು ಅವರಿಗೆ ಹೇಗೆ ಗೊತ್ತು. 184 00:10:19,880 --> 00:10:22,870 ಸೂಪರ್ವೈಸರ್ ನ್ಯೂ ಏಜ್ ಗೆ ಎರಡು ಇನ್ಸ್ಪೆಕ್ಟರ್ ಗಳು ಬಂದ ಬಗ್ಗೆ ಹೇಳಿರಬೇಕು. 185 00:10:23,070 --> 00:10:25,740 ಲ್ಯಾಂಗ್ಸ್ಟನ್ ಗೆ ಗೊತ್ತಾಗಿ ಈ ಬೇವರ್ಸಿಗಳಿಗೆ ಕರೆ ಮಾಡಿರಬೇಕು. 186 00:11:11,250 --> 00:11:12,460 ಏನಿದು? 187 00:11:37,650 --> 00:11:39,150 ಸತ್ತ ಅನಿಸುತ್ತೆ. 188 00:11:39,360 --> 00:11:40,150 ಹೂಂ. 189 00:11:41,190 --> 00:11:43,820 ನಮ್ಮ ಮುಂದಿನ ಟಯರ್ ಪಂಕ್ಚರ್ ಆಗಿದೆ, ಪೆಟ್ರೋಲ್ ಕೂಡ ಖಾಲಿ. 190 00:11:46,490 --> 00:11:49,560 - ಇಲ್ಲಿಂದ ಹೋಗುವುದು ಕಷ್ಟ. - ಇಲ್ಲ, ನಾನು ಪೊಲೀಸರಿಗೆ ಕರೆ ಮಾಡುವೆ. 191 00:11:49,760 --> 00:11:51,110 ಅನಾಮಿಕ ಕರೆ ಮಾಡು. 192 00:11:51,300 --> 00:11:52,060 ಸರಿ. 193 00:11:52,260 --> 00:11:55,670 ಒಂದು ಕೆಲಸ ಮಾಡು, ದಾಖಲೆಗಳು ಮತ್ತು ಪರವಾನಗಿಯನ್ನು ತೆಗೆದುಕೊಂಡು ಬಾ. 194 00:12:07,550 --> 00:12:09,470 ಅಯ್ಯೋ. 195 00:12:12,890 --> 00:12:13,840 ಏನಾಯಿತು, ನೀಗ್ಲೇ? 196 00:12:14,040 --> 00:12:15,380 ತುಂಬಾನೇ ನಡೆಯಿತು. 197 00:12:15,580 --> 00:12:17,710 ಬೇಗ ಕೇಳು. ಪೊಲೀಸರು ಬರುತ್ತಿದ್ದಾರೆ, ಇಲ್ಲಿ ಮೃತ ದೇಹಗಳಿವೆ, 198 00:12:17,910 --> 00:12:19,650 ಅವರು ಬರುವ ಮುಂಚೆ ದೂರ ಹೋಗಿರಬೇಕು ನಾವು. 199 00:12:20,400 --> 00:12:22,010 ನೀವೇ ಮಾಡಿದ್ದು ಎಂಬುದಕ್ಕೆ ಪುರಾವೆ ಇದೆಯೇ? 200 00:12:22,210 --> 00:12:23,010 ನಮ್ಮ ಬಾಡಿಗೆ ಕಾರ್. 201 00:12:23,210 --> 00:12:25,510 ಗುಂಡು ಹಾರಿದೆ. ಡಿಕ್ಸನ್ ನ ನಕಲಿ ಐಡಿಯಿಂದ ಬಾಡಿಗೆ ಪಡೆದದ್ದು. 202 00:12:25,710 --> 00:12:27,390 ಬೆರಳಚ್ಚು, ಡಿಎನ್ಎ ಅಳಿಸಲು ಬೆಂಕಿ ಹಚ್ಚಿದೆವು. 203 00:12:27,590 --> 00:12:29,520 ಒಳ್ಳೆಯದು. ಏನಾಯಿತು ಅಲ್ಲಿ? 204 00:12:29,720 --> 00:12:31,310 ಕೆಟ್ಟ ಸುದ್ದಿ ಬೇಕೇ, ಬಹಳ ಕೆಟ್ಟ ಸುದ್ದಿಯೇ? 205 00:12:31,510 --> 00:12:32,230 ಎಲ್ಲವನ್ನೂ ಹೇಳು. 206 00:12:32,430 --> 00:12:35,920 650 ಕ್ಷಿಪಣಿ ಇರುವ ನ್ಯೂ ಏಜ್ ನ ಟ್ರಕ್ ಹೈಜ್ಯಾಕ್ ಆಗಿದೆ. 207 00:12:38,000 --> 00:12:40,110 - ಇದು ಅತಿ ಕೆಟ್ಟ ಸುದ್ದಿಯೇ? - ಆಗಿದ್ದರೆ ಚೆನ್ನಾಗಿತ್ತು. 208 00:12:40,310 --> 00:12:41,700 ಟೋನಿ ಸ್ವಾನ್ ಬದುಕಿದ್ದಾನೆ. 209 00:12:41,900 --> 00:12:43,320 - ಅದು ಒಳ್ಳೆಯ ವಿಷಯ. - ಇಲ್ಲ, 210 00:12:43,520 --> 00:12:45,580 ಅವನಿನ್ನೂ ನ್ಯೂ ಏಜ್ ಗೆ ಕೆಲಸ ಮಾಡುತ್ತಿದ್ದಾನೆ. 211 00:12:45,780 --> 00:12:48,500 ಇದರ ಬಿಲ್ ಪ್ರಕಾರ, ಕಾರ್ಖಾನೆಯಿಂದ ಹೊರಬಂದಾಗ ಈ ಡೆಲಿವರಿಗೆ 212 00:12:48,700 --> 00:12:49,790 ಸಹಿ ಹಾಕಿದ್ದು ಅವನೇ. 213 00:12:49,990 --> 00:12:50,870 ಡೆನ್ವರ್ ನಲ್ಲಿದ್ದಾನೆಯೇ? 214 00:12:51,070 --> 00:12:53,040 ದಾಖಲೆ ಪ್ರಕಾರ ನ್ಯೂ ಯಾರ್ಕಿಂದ ಅಧಿಕೃತಗೊಳಿಸಿದ್ದಾನೆ. 215 00:12:53,240 --> 00:12:54,880 ಅಂದರೆ ಅವನ ಸಹಿಯನ್ನು ನಕಲಿಸಿದ್ದಾರೆ. 216 00:12:55,080 --> 00:12:57,550 - ಇದು ಡಿಜಿಟಲ್ ಬೆರಳಚ್ಚು. - ಅಂದರೆ ಬಲವಂತವಾಗಿ ಮಾಡಿಸಿದ್ದಾರೆ. 217 00:12:57,750 --> 00:13:00,090 ನ್ಯೂ ಯಾರ್ಕ್ ನ್ಯೂ ಏಜ್ ನಲ್ಲಿ ಬಾಗಿಲಿಗೆ ಐರಿಸ್ ಸ್ಕ್ಯಾನರ್, 218 00:13:00,290 --> 00:13:01,430 ಕಂಪ್ಯೂಟರ್ ಗೆ ಬೆರಳಚ್ಚು ಲಾಕ್ ಇವೆ. 219 00:13:01,620 --> 00:13:03,800 ಇಷ್ಟೆಲ್ಲಾ ಭದ್ರತೆ ಇಟ್ಟುಕೊಂಡು ಯಾರಿಗೂ ಗೊತ್ತಾಗದಂತೆ 220 00:13:04,000 --> 00:13:07,390 ಅವನನ್ನು ಬಲವಂತಪಡಿಸಲು ಸಾಧ್ಯವಿಲ್ಲ. 221 00:13:07,590 --> 00:13:09,520 ದೊಡ್ಡ ಗಲಭೆ ಆಗದೆ ಇದು ನಡೆಯಬೇಕೆಂದರೆ 222 00:13:09,720 --> 00:13:12,480 ಸಾವಿರಕ್ಕೆ ಸಾವಿರ ಕರ್ಮಚಾರಿಗಳು ಇದರ ಭಾಗಿಯಾಗಿರಬೇಕು, 223 00:13:12,680 --> 00:13:14,520 ಅಷ್ಟು ದೊಡ್ಡ ಪಿತೂರಿಯ ಸಾಧ್ಯತೆ... 224 00:13:14,720 --> 00:13:15,540 ಬಹಳ ಕಡಿಮೆ. 225 00:13:17,670 --> 00:13:20,650 ಸ್ವಾನ್ ಭ್ರಷ್ಟನಲ್ಲ ಎಂದು ನಿನ್ನಂತೆಯೇ ನಮಗೂ ನಂಬಬೇಕು, ಬಾಸ್. 226 00:13:20,850 --> 00:13:24,590 ಆದರೆ ವಿಷಯಗಳು ಹಾಗಿಲ್ಲ ಇಲ್ಲಿ. ಸುರಕ್ಷಿತ ಜಾಗಕ್ಕೆ ಬಂದು ಮಾತಾಡುವೆವು, ಸರಿಯೇ? 227 00:13:26,420 --> 00:13:27,260 ರೀಚರ್? 228 00:13:29,840 --> 00:13:30,680 ಸರಿ. 229 00:13:33,100 --> 00:13:34,770 ಎಲ್ಲರನ್ನೂ ಕೊಲ್ಲುವೆವು ಅಂದೆಯಲ್ಲ, 230 00:13:36,140 --> 00:13:37,310 ಅದರಲ್ಲಿ ಸ್ವಾನ್ ಕೂಡ ಒಬ್ಬನೇ? 231 00:13:42,650 --> 00:13:43,730 ನಾನು ವಾಕ್ ಹೋಗಿ ಬರುವೆ. 232 00:13:55,370 --> 00:13:56,620 ನಿಮಗಿವು ಬೇಕಾಗಿಲ್ಲ. 233 00:13:57,660 --> 00:13:59,170 ನಾವೆಲ್ಲಾ ಸ್ನೇಹಿತರೇ ಇಲ್ಲಿ. 234 00:14:02,920 --> 00:14:03,950 ಅವರ ಬಂದೂಕು ತೆಗೆದುಕೊಂಡರು. 235 00:14:04,150 --> 00:14:06,200 ಸ್ವಾನ್ ಹಾಕಿರುವ ವೈರ್ ಅವರಿಗೆ ಸಿಗದಿದ್ದರೆ ಸರಿ, 236 00:14:06,400 --> 00:14:07,450 ಏನೂ ತೊಂದರೆ ಇಲ್ಲ. 237 00:14:07,650 --> 00:14:08,870 ಆ ಗೂಂಡಾ ಹೇಳಿದಂತೆ, 238 00:14:09,070 --> 00:14:10,430 "ನಾವೆಲ್ಲಾ ಸ್ನೇಹಿತರೇ ಇಲ್ಲಿ." 239 00:14:12,300 --> 00:14:14,160 - ನೋಡೋಣ ನಿನ್ನ ಬಳಿ ಏನಿದೆ, ಜಿ.ಐ. ಜೋ. - ಜಿ.ಐ. ಜೋ? 240 00:14:14,360 --> 00:14:15,920 ಮೈಟಿ ಜೋ ಯಂಗ್ ನಂತಿದ್ದಾನೆ. 241 00:14:16,120 --> 00:14:19,000 ಈ ದೈತ್ಯ ಸೂಳೆಮಗನೊಂದಿಗೆ ನಿನ್ನನ್ನು ಕೂಪದಲ್ಲಿ ಕೊಡಿಹಾಕಿದರೆ ಹೇಗಿರುತ್ತೆ? 242 00:14:19,200 --> 00:14:20,710 ಈಗಿನ ಬೆಲೆಗಿಂತ ಕಡಿಮೆಗೆ ಕೊಡುತ್ತೇವೆ. 243 00:14:20,910 --> 00:14:24,090 ನಮ್ಮ ಪೂರೈಕೆದಾರ ನಿಮಗೆ ಬೇಕಾದಷ್ಟು ಹೆರೋಯಿನ್ ಕೊಡುವ 244 00:14:24,290 --> 00:14:26,130 ಕೊಡಲೊಪ್ಪದ ವಿದೇಶೀ ಮೂಲಗಳಿಂದ. 245 00:14:26,330 --> 00:14:28,570 ಉಳಿದ ಎಲ್ಲಾ ಹಣ ನಿಮಗೆ. 246 00:14:44,790 --> 00:14:45,630 ಸರಿ. 247 00:14:46,500 --> 00:14:47,570 ಹಣದ ಬಗ್ಗೆ ಮಾತಾಡೋಣ. 248 00:14:47,770 --> 00:14:49,700 ಅವರು ಒಪ್ಪಂದ ಮಾಡಿಕೊಂಡ ತಕ್ಷಣ ಹೋಗೋಣ. 249 00:14:49,900 --> 00:14:52,330 ಹಿಡಿದು, ಬಾಯಿ ಬಿಡಿಸಿ, ಮೂಲಗಳ ಬಗ್ಗೆ ತಿಳಿಯೋಣ. 250 00:14:52,530 --> 00:14:54,290 ಅವರನ್ನು ಹಿಡಿದರೆ, ನಮಗೆ ಬಡ್ತಿ ಸಿಗುತ್ತೆ. 251 00:14:54,490 --> 00:14:55,710 ಎದೆ ಮೇಲೆ ಇನ್ನಷ್ಟು ಮೆಡಲ್ ಗಳು. 252 00:14:55,910 --> 00:14:57,930 ಸಂಬಳದ ಚೀಟಿಯಲ್ಲಿ ಇನ್ನಷ್ಟು ಡಾಲರ್ ಚಿಹ್ನೆಗಳು. 253 00:14:59,140 --> 00:15:01,000 ಇನ್ನಷ್ಟು ಡಾಲರ್ ಚಿಹ್ನೆ ಏಕೆ ಸೇರಿಸುವರು? 254 00:15:01,200 --> 00:15:02,170 ಬಾಯಿ ಮುಚ್ಚು, ಫ್ರಾನ್ಸಿ. 255 00:15:02,370 --> 00:15:05,550 ಅವನು ಹೇಳಿದ್ದು ಸರಿ, ಮಾನ್ಯುಯಲ್. ಒಂದೇ ಡಾಲರ್ ಚಿಹ್ನೆ ಹಾಕುವುದು. 256 00:15:05,750 --> 00:15:06,840 ಬೇವರ್ಸಿಗಳು. 257 00:15:07,040 --> 00:15:08,610 ಎಚ್ಚರಿಕೆ. ಯಾರೋ ಬರುತ್ತಿದ್ದಾರೆ. 258 00:15:25,750 --> 00:15:26,670 ಯಾಕೆ ಇಷ್ಟು ಹೊತ್ತು? 259 00:15:30,880 --> 00:15:31,660 ನೂರ ಹತ್ತು? 260 00:15:31,860 --> 00:15:33,410 ಈಗಿನ ಬೆಲೆಗಿಂತ ಕಡಿಮೆ ಎಂದಿದ್ದೆ. 261 00:15:33,610 --> 00:15:34,470 ಕಡಿಮೆಯೇ ಹೇಳುತ್ತಿರುವೆ. 262 00:15:35,720 --> 00:15:36,500 ಸಾಕಷ್ಟಲ್ಲ. 263 00:15:36,700 --> 00:15:38,750 ಪೂರೈಕೆದಾರರನ್ನು ಬದಲಿಸಲು ಇನ್ನಷ್ಟು ಸ್ಪೂರ್ತಿ ಬೇಕು. 264 00:15:38,950 --> 00:15:39,810 ಕೋಳಿ? ಪೋರ್ಕ್ ಬೇಕಿತ್ತು. 265 00:15:40,890 --> 00:15:43,560 ಸರಿ, ನೂರ ಐದು? 266 00:15:44,230 --> 00:15:46,300 ನನ್ನ ಸಮಯ ವ್ಯರ್ಥ ಮಾಡುತ್ತಿರುವೆ. 267 00:15:46,500 --> 00:15:48,430 ನೂರ ಐದಕ್ಕೆ ಇಷ್ಟು ಶುದ್ಧ ಹೆರೋಯಿನ್ ಸಿಕ್ಕಿದೆಯೇ? 268 00:15:48,620 --> 00:15:50,140 - ಇದಕ್ಕಿಂತಲೂ ಶುದ್ಧ ಸಿಕ್ಕಿದೆ. - ಕಟ್ಟುಕತೆ. 269 00:15:50,330 --> 00:15:51,850 ಹತ್ತಿರದಲ್ಲೇ ಬೇರೆ ಖರೀದಿದಾರರು ಇದ್ದಾರೆ. 270 00:15:52,040 --> 00:15:53,640 - ನಿನ್ನ ಬಳಿ ಬಂದದ್ದು... - ನನಗೆ ನೀನು ಗೊತ್ತು. 271 00:15:53,840 --> 00:15:55,560 - ನೀನು ಹೆಚ್ಚು ಕೊಳ್ಳುವೆ ಎಂದು. - ಇಲ್ಲ ಅನಿಸುತ್ತೆ. 272 00:15:55,760 --> 00:15:57,540 ಇಲ್ಲ, ಗೊತ್ತು. ಎಲ್ಲಿ ನೋಡಿರುವೆ ನಿನ್ನನ್ನು? 273 00:15:57,740 --> 00:15:58,520 ಅಯ್ಯೋ. 274 00:15:58,720 --> 00:16:00,080 ಇರು. ಏನೂ ಇಲ್ಲದಿರಬಹುದು. 275 00:16:00,700 --> 00:16:02,960 - ಗೊತ್ತಿಲ್ಲ. - ಮೊದಲು ಭೇಟಿಯಾಗಿದ್ದೇವೆ ನಾವು. 276 00:16:03,960 --> 00:16:07,130 - ಎಷ್ಟಕ್ಕೆ ಕೊಡುವೆ? - ನೂರು. ಕೊನೆಯ ಬೆಲೆ. 277 00:16:08,420 --> 00:16:10,590 ಸ್ವಲ್ಪ ದಿನಗಳ ಹಿಂದೆ ನಿನಗೆ ನಾನು ಗಿಟಾರ್ ಮಾರಿದ್ದೆ. 278 00:16:15,140 --> 00:16:16,850 ಅದು ಬೇರೆ ಯಾರೋ ಇರಬೇಕು. 279 00:16:17,550 --> 00:16:18,660 ಕ್ರೈಗ್ಲಿಸ್ಟ್ ನಲ್ಲಿ. 280 00:16:18,860 --> 00:16:20,140 ನೀನು ನನ್ನ ಗಿಟಾರ್ ಖರೀದಿಸಿದೆ. 281 00:16:24,850 --> 00:16:27,420 ಮಾತಾಡುತ್ತಲೇ ಇರುವುದೇ ಅಥವಾ ಒಪ್ಪಂದ ಮಾಡುವುದೇ? 282 00:16:27,620 --> 00:16:30,820 ನಿಮಗೆ ಇದು ಬೇಡವೆಂದರೆ, ಬೇರೆಯವರಿಗೆ ಮಾರುವೆ. 283 00:16:32,570 --> 00:16:33,760 ಒಂದು ನಿಮಿಷ. 284 00:16:33,960 --> 00:16:35,780 ಒಂದು ನಿಮಿಷ. ಗಿಟಾರ್ ಖರೀದಿಸಿದಾಗ, 285 00:16:36,700 --> 00:16:38,530 ಇವನು ಆರ್ಮಿ ಸಮವಸ್ತ್ರದಲ್ಲಿದ್ದ. 286 00:16:52,710 --> 00:16:53,670 ಹೋಗೋಣ! 287 00:16:56,760 --> 00:16:57,590 ನೋಡಿಕೊಂಡು! 288 00:17:04,430 --> 00:17:06,690 - ಆಂಬ್ಯುಲೆನ್ಸ್ ಗೆ ಕರೆ ಮಾಡಿ. - ಗುಂಡು ಹಾರಿಸಬೇಡಿ. 289 00:17:06,890 --> 00:17:09,050 ಒಬ್ಬ ಅಧಿಕಾರಿಗೆ ಏಟಾಗಿದೆ. ವೈದ್ಯಕೀಯ ಸಹಾಯ ಬೇಕು. 290 00:17:09,250 --> 00:17:12,190 - ಗುಂಡು ಹೃದಯಕ್ಕೆ ಹೋಗಲಿಲ್ಲ. - ಆದರೆ ಹೆಗಲ ಮೂಳೆ ಮುರಿಯಿತು. 291 00:17:13,570 --> 00:17:15,680 ಆ ಗಿಟಾರ್ ಇನ್ನು ಸ್ವಲ್ಪ ಸಮಯ ಬಾರಿಸಲ್ಲ ನಾನು. 292 00:17:15,880 --> 00:17:16,700 ಒಳ್ಳೆಯದೇ. 293 00:17:17,530 --> 00:17:18,360 ಹಾಳಾಗಿ ಹೋಗು. 294 00:17:19,200 --> 00:17:20,390 ಹೇ. ಯಾರ ತಂಟೆಗೆ ಹೋಗಬಾರದು? 295 00:17:20,590 --> 00:17:21,530 ಟೀಮ್ಸ್ಟರ್ಸ್? 296 00:17:26,790 --> 00:17:27,750 ನಾನು ನಿನಗೆ ಋಣಿ. 297 00:17:45,560 --> 00:17:46,460 ನಾನೇ ಊಹಿಸುವೆ. 298 00:17:46,660 --> 00:17:50,360 ಸರ್ಕಾರದ ಫಲಕ. ಸರ್ಕಾರಿ ಬಟ್ಟೆ. ಸರ್ಕಾರಿ ಗಾಡಿಗಳು. 299 00:17:50,560 --> 00:17:52,590 ಸಚಿವ ಲಾವೊಯ್ ಗೆ ಇಷ್ಟು ಸಮಯ ಹಿಡಿಯಿತೇ, ಅವನ ಸಹಾಯಕನನ್ನು 300 00:17:52,790 --> 00:17:54,050 ಯಾರು ಹಿಡಿದದ್ದು ತಿಳಿಯಲು. 301 00:17:54,250 --> 00:17:57,110 ನಿನಗಾಗಿ ಸಚಿವರ ಪ್ರಸ್ತಾವನೆ ಇದೆ. ಒಳಗೆ ಬಾ. 302 00:17:58,110 --> 00:17:58,930 ಇಲ್ಲ. 303 00:17:59,130 --> 00:18:00,770 ಯಾಕೆ, ರೀಚರ್ ಅವರೇ? 304 00:18:00,970 --> 00:18:02,890 ರೀಚರ್ ಸಾಕು. 305 00:18:03,090 --> 00:18:06,310 ಸರಿ. ರೀಚರ್. ಕಾರ್ ಒಳಗೆ ಯಾಕೆ ಬರಲ್ಲ? 306 00:18:06,510 --> 00:18:08,290 ಯಾಕೆಂದರೆ ಅವನು ಪ್ರೀತಿಯಿಂದ ಕೇಳಲಿಲ್ಲ. 307 00:18:09,080 --> 00:18:10,150 ಸರಿ. 308 00:18:10,350 --> 00:18:12,250 ಹಾರ್ಟ್. ಪ್ರೀತಿಯಿಂದ ಕೇಳು. 309 00:18:16,170 --> 00:18:17,760 ದಯವಿಟ್ಟು ಕಾರ್ ಒಳಗೆ ಬನ್ನಿ. 310 00:18:32,770 --> 00:18:35,090 ಡೆನ್ವರ್ ನ ನನ್ನ ಹುಡುಗ ಸರಕಿನೊಂದಿಗೆ ಹೇಗೋ ತಪ್ಪಿಸಿಕೊಂಡ. 311 00:18:35,290 --> 00:18:38,260 ಸಮಸ್ಯೆಯಿಲ್ಲದ ವ್ಯವಹಾರಕ್ಕಾಗಿ ನಾನು ಹೆಚ್ಚು ಹಣ ಪಾವತಿಸುತ್ತಿರುವೆ, 312 00:18:38,460 --> 00:18:41,390 ಆದರೆ ಇದುವರೆಗೂ ಸಮಸ್ಯೆಗಳೇ ಆಗಿವೆ. 313 00:18:41,590 --> 00:18:44,410 ಇಷ್ಟು ಸಮಸ್ಯೆಗಳು ಬರುತ್ತಿದ್ದರೆ, ಹಣ ಕಡಿಮೆ ಮಾಡಬೇಕಾಗಬಹುದು. 314 00:18:44,870 --> 00:18:47,650 ಸ್ವಾನ್ ನ ಹಳೆಯ ಗೆಳೆಯರು ನಮಗೆ ತೊಂದರೆ ನೀಡುತ್ತಿದ್ದಾರೆ, 315 00:18:47,850 --> 00:18:49,410 ಆದರೆ ನಾನು ನೋಡಿಕೊಳ್ಳುವೆ. 316 00:18:50,250 --> 00:18:52,630 ಸರಕು ಬೇಕೆಂದರೆ, ಒಪ್ಪಂದಕ್ಕೆ ಬೆಲೆ ಕೊಡಬೇಕು. 317 00:18:53,590 --> 00:18:55,210 ನೀನು ನಿನ್ನ ಮಾತು ಉಳಿಸಿಕೋ, ನಾನು ನನ್ನದು. 318 00:18:57,380 --> 00:18:58,210 ಸರಿ. 319 00:18:59,090 --> 00:18:59,920 ಒಳ್ಳೆಯದು. 320 00:19:01,010 --> 00:19:02,080 ಈಗ ಎಲ್ಲಿರುವೆ? 321 00:19:02,280 --> 00:19:05,330 ಇಲ್ಲೇ ಹೊರಗೆ. 322 00:19:05,530 --> 00:19:08,680 ಇಲ್ಲ. ಇದು ಸರಿಯಲ್ಲ. "ಫ್ರೆಂಚ್ ಲಿಕ್"? 323 00:19:09,350 --> 00:19:10,790 ಹುಚ್ಚು ಅಮೆರಿಕನ್ನರು. 324 00:19:10,990 --> 00:19:11,770 ಇಂಡಿಯಾನಾ. 325 00:19:12,730 --> 00:19:16,930 ಸರಿ. ನೀನಿಲ್ಲಿ ಬರುವಷ್ಟರಲ್ಲಿ ಲಿಟಲ್ ವಿಂಗ್ ಚಿಪ್ ಗಳು 326 00:19:17,120 --> 00:19:18,680 ಕ್ಷಿಪಣಿಯಲ್ಲಿ ಅಳವಡಿಸಲು ತಯಾರಾಗಿರುತ್ತವೆ. 327 00:19:18,880 --> 00:19:21,390 ಮತ್ತು ಸ್ವಾನ್ ನ ಗೆಳೆಯರಿಗೂ ಒಂದು ಗತಿ ಕಾಣಿಸಿರುತ್ತೇನೆ. 328 00:19:21,590 --> 00:19:23,110 ಈಗಾಗಲೇ ಕೆಲಸ ನಡೆಯುತ್ತಿದೆ. 329 00:19:26,280 --> 00:19:27,410 ನಿನ್ನ ರಾಜನ ಮನೆ ಹಾಳಾಗ. 330 00:19:28,620 --> 00:19:29,440 ಬೇವರ್ಸಿ. 331 00:19:29,640 --> 00:19:32,870 {\an8}ಸ್ಮಿತ್ಸೋನಿಯನ್ ರಾಷ್ಟ್ರೀಯ ಝೂಲಾಜಿಕಲ್ ಪಾರ್ಕ್ ವಾಷಿಂಗ್ಟನ್, ಡಿ.ಸಿ. 332 00:19:38,460 --> 00:19:40,420 ಮಂಗಗಳ ಪ್ರದರ್ಶನದ ತೆರೆಯ ಹಿಂದೆ. 333 00:19:41,760 --> 00:19:43,080 ಎಷ್ಟು ನಾಟಕ. 334 00:19:43,280 --> 00:19:45,510 ಗೋರಿಲ್ಲಾಗಳ ಮಧ್ಯೆ ನಿನಗೆ ಸರಿ ಎನಿಸಬಹುದು ಅಂದುಕೊಂಡೆ. 335 00:19:46,930 --> 00:19:49,710 ರೀಚರ್ ಅವರೇ, ನಾನು ಮಾಲ್ಕಮ್ ಲಾವೊಯ್. 336 00:19:49,910 --> 00:19:52,500 - ರೀಚರ್ ಅಷ್ಟೇ ಅನ್ನಬೇಕಂತೆ. - ಇಲ್ಲ. 337 00:19:52,700 --> 00:19:54,210 "ಅವರೇ" ಸೇರಿಸಲಿ ಇವರು. 338 00:19:54,410 --> 00:19:58,150 ನಿಮ್ಮನ್ನು ಈ ರೀತಿ ಇಲ್ಲಿಗೆ ಕರೆತಂದದ್ದಕ್ಕೆ ಕ್ಷಮಿಸಿ, ರೀಚರ್ ಅವರೇ. 339 00:19:58,780 --> 00:20:01,850 ಯಾರ ಕಣ್ಣಿಗೂ ಬೀಳದಂತೆ ಭೇಟಿಯಾಗಲು 340 00:20:02,040 --> 00:20:04,890 ಡಿಸಿಯಲ್ಲಿರುವ ಕೆಲವು ಜಾಗಗಳಲ್ಲಿ ಇದೂ ಒಂದು ಅನಿಸುತ್ತೆ. 341 00:20:05,090 --> 00:20:07,490 ಇದಕ್ಕಾಗಿಯೇ ಇದರ ಮಂಡಳಿಯ ಸದಸ್ಯನಾಗಿದ್ದು ನಾನು. 342 00:20:08,910 --> 00:20:11,770 ನಿಮಗೆ ನನ್ನ ಶಾಸಕಾಂಗ ನಿರ್ದೇಶಕ ಬಾಯ್ಡ್ ಗೊತ್ತಿರಬೇಕು. 343 00:20:11,970 --> 00:20:13,020 ಹೂಂ. 344 00:20:13,220 --> 00:20:14,870 ಕೋಕೇನ್ ಇಷ್ಟ ಇರುವವನು. 345 00:20:16,000 --> 00:20:17,400 ಏನಾಯಿತು ಎಂದು ಗೊತ್ತಾದಾಗ, 346 00:20:17,600 --> 00:20:19,400 ನಾನು ಬ್ಯುರೋದ ನನ್ನ ಗೆಳೆಯನ ಬಳಿ ಮಾತಾಡಿದೆ. 347 00:20:19,600 --> 00:20:21,320 ಅವನು ನಮ್ಮ ರಹಸ್ಯಗಳನ್ನು ಬಿಚ್ಚಿಟ್ಟಿದ್ದು 348 00:20:21,520 --> 00:20:24,910 ಎಫ್ಬಿಐ ಏಜೆಂಟ್ ಗಳ ಮುಂದೆ ಅಲ್ಲ ಎಂದು ತಿಳಿದಾಗ ಬಾಯ್ಡ್ ಗೆ ಎಷ್ಟು 349 00:20:25,110 --> 00:20:26,890 ನಾಚಿಕೆ ಆಗಿರಬೇಕು ಹೇಳು. 350 00:20:27,890 --> 00:20:31,040 ಸೆಕ್ಯುರಿಟಿ ಕ್ಯಾಮೆರಾದಲ್ಲಿ ನೀನು ಠಾಣೆಯ ಒಳಗೆ ಬರುವುದು ಕಂಡಿತು, 351 00:20:31,240 --> 00:20:34,960 ಮುಖ ಗುರುತಿಸುವಿಕೆ ಸಾಫ್ಟ್ವೇರ್ ನಲ್ಲಿ ನಿನ್ನ ಮುಖ ಮಿಲಿಟರಿ ಐಡಿಗೆ ಹೊಂದಿತು. 352 00:20:35,160 --> 00:20:37,130 ಜ್ಯಾಕ್ ರೀಚರ್. 353 00:20:37,330 --> 00:20:41,010 ಯಾವುದೇ ಮಧ್ಯನಾಮಗಳಿಲ್ಲ. ವೆಸ್ಟ್ ಪಾಯಿಂಟ್. ಎರಡು ಬೆಳ್ಳಿ ಸ್ಟಾರ್ ಗಳು, 354 00:20:41,210 --> 00:20:44,050 ಒಂದು ಕಂಚು ಸ್ಟಾರ್, ನೇರಳೆ ಹೃದಯ, ಇತ್ಯಾದಿ. 355 00:20:44,250 --> 00:20:45,240 ಸ್ವಲ್ಪ ಮರ್ಯಾದೆ ನೀಡು. 356 00:20:46,700 --> 00:20:49,980 ಅದು ದೊಡ್ಡ ಪಟ್ಟಿ, ಅಂದ ಹಾಗೆ, ನಿಮ್ಮ ಸೇವೆಗೆ ಧನ್ಯವಾದಗಳು. 357 00:20:50,180 --> 00:20:53,060 ನಿವೃತ್ತಿಯ ನಂತರ ಭೂಮಿ ಮೇಲಿಂದ ಕಾಣೆಯಾದಂತಿರುವೆ. 358 00:20:53,260 --> 00:20:57,420 ಎರಡು ವರ್ಷಗಳ ಹಿಂದಿನ ಮಾರ್ಗ್ರೇವ್, ಜಾರ್ಜಿಯದ ಕಾಂಡದ ನಂತರ. 359 00:20:58,380 --> 00:21:00,800 ತನ್ನದೇ ಅಣ್ಣನ ಕೊಲೆ ಮಾಡಿದ ಅಪವಾದದೊಂದಿಗೆ. 360 00:21:01,590 --> 00:21:03,260 ನಂತರ ಹೇಗೂ ದೋಷಮುಕ್ತಗೊಳಿಸಲಾಯಿತು. 361 00:21:03,880 --> 00:21:06,580 ಜೋ ಪರಿಶೀಲಿಸುತ್ತಿದ್ದ 362 00:21:06,780 --> 00:21:08,410 ಒಂದು ದೊಡ್ಡ ನಕಲಿ ಕಾರ್ಯಾಚರಣೆ 363 00:21:08,610 --> 00:21:11,460 ಅಲ್ಲಿಗೆ ನೆಲ ಕಚ್ಚಿತು. 364 00:21:11,660 --> 00:21:13,120 ಅಧಿಕೃತವಾಗಿ ಕತೆ ಏನೆಂದರೆ 365 00:21:13,320 --> 00:21:18,000 ಇದು ಒಂದು ಹೊಸ ಪೊಲೀಸ್ ಮತ್ತು ಹೊರ ಊರಿನ ನಿವೃತ್ತ ಮಿಲಿಟರಿ ಮಾಡಿದ ಕಾಂಡ ಎಂದು. 366 00:21:18,200 --> 00:21:21,300 ಈ ಅದೇ ನಿವೃತ್ತ ಮಿಲಿಟರಿ ವ್ಯಕ್ತಿ ಬಾಯ್ಡ್ ನನ್ನು ಬೋಸ್ಟನ್ ನಲ್ಲಿ ಬಂಧಿಸಿದ. 367 00:21:21,500 --> 00:21:25,350 ವಿಷಯಕ್ಕೆ ಬಾ. ಈ ವಾಸನೆಯಲ್ಲಿ ನಿಲ್ಲಕ್ಕಾಗಲ್ಲ. 368 00:21:25,540 --> 00:21:28,740 ಮಾರ್ಗ್ರೇವ್ ಕೆಲಸ ನಿಮ್ಮದೇ ಎಂದು ನನಗೆ ಗೊತ್ತು, ರೀಚರ್ ಅವರೇ. 369 00:21:29,700 --> 00:21:32,830 ಈಗ ಅದೇ ಕೆಲಸವನ್ನು ನೀವು ಇಲ್ಲಿ ಮಾಡಬೇಕು. 370 00:21:39,330 --> 00:21:40,110 ಯಾಕೆ? 371 00:21:40,310 --> 00:21:42,320 ಬೋಸ್ಟನ್ ನಲ್ಲಿ ನೀವು ಬಾಯ್ಡ್ ಗೆ ಹೇಳಿದ ಪ್ರಕಾರ 372 00:21:42,520 --> 00:21:46,320 ಲಿಟಲ್ ವಿಂಗ್ ನಿಂದಾಗಿ ಮಿಲಿಟರಿ ಮತ್ತು ವಾಣಿಜ್ಯ ವಿಮಾನಗಳು ಅಪಾಯದಲ್ಲಿವೆ. 373 00:21:46,520 --> 00:21:47,830 ಅದರ ಅರ್ಥ, ಈ ತಂತ್ರಜ್ಞಾನದಲ್ಲಿ 374 00:21:48,030 --> 00:21:49,660 ಭಯೋತ್ಪಾದಕರು ಆಸಕ್ತಿ ತೋರಿದ್ದಾರೆ. 375 00:21:49,860 --> 00:21:51,000 ಇದನ್ನು ಪಡೆಯಲು ನೋಡುತ್ತಿದ್ದಾರೆ. 376 00:21:51,200 --> 00:21:53,960 ನಿಮ್ಮನ್ನು ಗುರುತಿಸಿದ ನಂತರ, ನಿಮ್ಮ ಬಗ್ಗೆ ಇನ್ನಷ್ಟು ಹುಡುಕಿದೆವು, 377 00:21:54,160 --> 00:21:56,790 ನಿಮ್ಮ ಹಳೆಯ ತಂಡ ಮತ್ತೆ ಒಂದಾಗಿರುವುದು ತಿಳಿಯಿತು. 378 00:21:56,990 --> 00:21:58,440 ಕೆಲವರು ಸತ್ತಿದ್ದಾರೆ. 379 00:21:58,900 --> 00:22:00,670 ಅಷ್ಟು ಆಶ್ಚರ್ಯಚಕಿತರಾಗಬೇಡಿ, ರೀಚರ್ ಅವರೇ. 380 00:22:00,870 --> 00:22:02,590 ನಾನು ಯುಎಸ್ ಸಚಿವ. ನಾನು ಕೆಲಸ ಮಾಡಿಸಬಲ್ಲೆ. 381 00:22:02,790 --> 00:22:05,990 ನಾನು ಆಶ್ಚರ್ಯಚಕಿತನಾಗಿದ್ದು ಯುಎಸ್ ಸಚಿವ ಕೆಲಸ ಮಾಡಿಸಿದನು ಎಂದು. 382 00:22:08,650 --> 00:22:10,700 ಅಪವಾದಗಳು ನನಗೆ ಹೊಸದಲ್ಲ, ರೀಚರ್ ಅವರೇ. 383 00:22:11,990 --> 00:22:15,960 ನಾನು ಹೇಳುವುದು ಇಷ್ಟೇ, ಯಾರು ಈ ಅಸ್ತ್ರದ ಹಿಂದಿದ್ದಾರೋ, 384 00:22:16,160 --> 00:22:17,610 ಅವರ ಕೈಗೆ ಇದು ಸಿಗಬಾರದು. 385 00:22:17,810 --> 00:22:20,570 ಯಾಕೆಂದರೆ, ಲಿಟಲ್ ವಿಂಗ್ ನ ಹಿಂದೆ ನಿನ್ನ ಕೈವಾಡ ಇದೆ ಎಂದು ಗೊತ್ತಾದರೆ 386 00:22:20,770 --> 00:22:24,090 ನಿನ್ನ ಮೇಲೆ ಆರೋಪ ಬರುವುದು. 387 00:22:24,290 --> 00:22:26,570 ಕೆಟ್ಟವರ ನಿರ್ಮೂಲನೆ, ನನ್ನ ಕೈಗಳನ್ನು ಮಲಿನಗೊಳಿಸದೆ. 388 00:22:26,770 --> 00:22:28,260 ನಾವದನ್ನು ವಿನ್-ವಿನ್ ಎನ್ನುತ್ತೇವೆ. 389 00:22:30,430 --> 00:22:34,220 ನಾನು ಮಾಡಿದ್ದು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಮ್ಮವರಿಗೆ ಬೇಕಾದ ಅಸ್ತ್ರಗಳನ್ನು ನೀಡಲು. 390 00:22:34,930 --> 00:22:38,710 ಸುಮ್ಮನೆ ಎಲ್ಲವನ್ನೂ ನಿಧಾನವಾಗಿಸಿ ಜನರು ಸಾಯುವಂತೆ ಮಾಡುವ ಅಧಿಕಾರಿಗಳ ಮೂಲಕ 391 00:22:38,910 --> 00:22:39,630 ಹೋಗಲಿಲ್ಲವಷ್ಟೇ. 392 00:22:39,830 --> 00:22:41,920 ಅದರೊಂದಿಗೆ ಗಿಂಬಳವೂ ಸಿಕ್ಕಿತು. 393 00:22:42,120 --> 00:22:43,770 ಮತ್ತೆ, ವಿನ್-ವಿನ್. 394 00:22:44,940 --> 00:22:47,660 ಆದರೆ ಇದರಿಂದ ಮುಗ್ಧ ಜನರು ಸಾಯುವುದು ನನಗೆ ಇಷ್ಟವಿಲ್ಲ. 395 00:22:47,860 --> 00:22:50,450 ನಾನು ರಾಜಕಾರಣಿ, ರಾಕ್ಷಸನಲ್ಲ, ರೀಚರ್ ಅವರೇ. 396 00:22:51,030 --> 00:22:53,320 ಮತ್ತು ನಾನು ನಿಮ್ಮ ಸಹಾಯ ಕೇಳುತ್ತಿಲ್ಲ. 397 00:22:53,990 --> 00:22:55,140 ನನ್ನ ಸಹಾಯ ನೀಡುತ್ತಿರುವೆ. 398 00:22:55,340 --> 00:22:58,020 ನೀವೂ ಕೆಲಸ ಮಾಡಿಸಬಲ್ಲ ವ್ಯಕ್ತಿ. 399 00:22:58,220 --> 00:23:00,400 ನಿನ್ನ ಮಾರ್ಗ್ರೇವ್ ಮತ್ತು ಮಿಲಿಟರಿ ರೆಕಾರ್ಡ್ ಅದನ್ನು ತೋರುತ್ತೆ. 400 00:23:00,600 --> 00:23:02,940 ನಿಮಗೆ ಯೋಜನೆಗಳನ್ನು ಹಾಳು ಮಾಡುವುದು ಇಷ್ಟ. 401 00:23:03,140 --> 00:23:06,630 ಅದನ್ನು ಮಾಡಲು ನಿಮಗೆ ಏನು ಬೇಕೋ ಅದನ್ನು ಕೊಡಲು ನಾನು ತಯಾರಿರುವೆ. 402 00:23:07,510 --> 00:23:08,590 ನಿಮ್ಮ ಕೆಲಸ ಮುಗಿದಾಗ, 403 00:23:09,590 --> 00:23:12,970 ನೀವೇ ಯೋಜನೆ ಕೆಡಿಸಿದ್ದು ಎಂದು ಯಾರಿಗೂ ತಿಳಿಯುವುದೂ ಇಲ್ಲ. 404 00:23:14,680 --> 00:23:16,460 ಇದರ ಕತೆ ಮುಗಿಸಿಬಿಡಿ. 405 00:23:16,660 --> 00:23:20,060 ಯಾರೂ ಉಳಿದಿರಬಾರದು. ಬೇರೆಯವರ ಜೀವವನ್ನು ಅಪಾಯಕ್ಕೆ ಒಡ್ಡುವವರು. 406 00:23:20,690 --> 00:23:24,690 ಆಮೇಲೆ ನೀವು ಮತ್ತೆ ಮಾಯವಾಗಬಹುದು. ಯಾರೂ ನಿಮ್ಮ ತಂಟೆಗೆ ಬರುವುದಿಲ್ಲ. 407 00:23:25,730 --> 00:23:26,900 ನಾವು ನಿಮ್ಮ ಸ್ನೇಹಿತರು. 408 00:23:53,800 --> 00:23:54,580 ಹೌದೇ? 409 00:23:54,780 --> 00:23:56,620 ಹೇ, ಸಂತಸವಿಲ್ಲದ ಹಸಿರು ದೈತ್ಯನೇ. 410 00:23:56,820 --> 00:23:57,960 ಆ ಸೂಟನ್ನೂ ಎಸೆದಾಯಿತೇ? 411 00:23:58,160 --> 00:23:59,460 ಇಲ್ಲ. ಯಾಕೆ? 412 00:23:59,660 --> 00:24:01,210 ಕಡೆಗೂ ಫ್ರಾನ್ಸ್ ನ ದೇಹ ಬಿಡುಗಡೆಯಾಯಿತು. 413 00:24:01,410 --> 00:24:02,440 ನಾಳೆ ಅಂತ್ಯಕ್ರಿಯೆ. 414 00:24:03,640 --> 00:24:05,150 ನ್ಯೂ ಯಾರ್ಕ್ ಗೆ ಹಿಂದಿರುಗಬೇಕು. 415 00:24:15,530 --> 00:24:16,470 ಅಂತ್ಯಕ್ರಿಯೆ 416 00:24:16,670 --> 00:24:19,190 ನನ್ನ ಕಚೇರಿಯಿಂದ ಕೆಲವು ವಿಚಾರಣೆಗಳನ್ನು ನಡೆಸಿದೆ. 417 00:24:19,390 --> 00:24:22,060 ಡೆನ್ವರ್ ಪೊಲೀಸರಿಗೆ ಬದಲಿಸಿದ ಟ್ರೈಲರ್ ನೊಂದಿಗೆ ಟ್ರಕ್ ಸಿಕ್ಕಿದೆ. 418 00:24:22,260 --> 00:24:24,690 - ಬರೀ ಇಟ್ಟಿಗೆಗಳೇ ಇದ್ದವಂತೆ. - ಕ್ಷಿಪಣಿಗಳ ಭಾರದಷ್ಟೇ 419 00:24:24,890 --> 00:24:26,860 ಇದರ ಭಾರವೂ ಇತ್ತೇ? 420 00:24:27,060 --> 00:24:29,240 ಹೌದು. ಇಟ್ಟಿಗೆ ಕಾರ್ಗೋವನ್ನು ಎಲ್ಎ ಬಂದರಿಗೆ ಕೊಂಡೊಯ್ಯುವ 421 00:24:29,440 --> 00:24:30,610 ಯೋಜನೆ ಇತ್ತು ಅನಿಸುತ್ತೆ. 422 00:24:30,810 --> 00:24:32,660 ಮತ್ತದನ್ನು ಫಿಲಿಪಿನ್ಸ್ ನ ಆರ್ಮಿ ನೆಲೆಗೆ, 423 00:24:32,860 --> 00:24:34,870 ಅಥವಾ ಅಸ್ತ್ರ ಹೋಗಬೇಕಿದ್ದಲ್ಲಿಗೆ ಕಳಿಸುವ ಯೋಜನೆ ಇತ್ತೇನೋ. 424 00:24:35,070 --> 00:24:37,470 ದಾಖಲೆಗಳ ಪ್ರಕಾರ ಸೌತ್ ಕೊರಿಯಾಗೆ. 425 00:24:38,300 --> 00:24:39,160 ಬುದ್ಧಿವಂತರು. 426 00:24:39,360 --> 00:24:42,460 ವೆಸ್ಟ್ ಕೋಸ್ಟ್ ನಿಂದ ಅಲ್ಲಿಗೆ ತಲುಪಲು ಕಾರ್ಗೋ ಹಡಗಿಗೆ ಮೂರರಿಂದ ನಾಲ್ಕು ವಾರ. 427 00:24:42,660 --> 00:24:45,210 ಅಲ್ಲಿ ತಲುಪವರೆಗೂ ಯಾರಿಗೂ ಅಸ್ತ್ರಗಳು ಇಲ್ಲ ಎಂಬುದು ಗೊತ್ತಿಲ್ಲ. 428 00:24:45,410 --> 00:24:47,170 ಯಾವಾಗ ನೋಡುವರೋ ಯಾರಿಗೆ ಗೊತ್ತು. 429 00:24:47,370 --> 00:24:50,090 ಸಂಗ್ರಹಣೆಯಲ್ಲಿಟ್ಟು ತಿಂಗಳುಗಟ್ಟಲೆ ನೋಡದೇ ಇರಬಹುದು. 430 00:24:50,290 --> 00:24:51,860 ಅಷ್ಟರಲ್ಲಿ, ಬಹಳ ತಡವಾಗಿರುತ್ತಿತ್ತು. 431 00:24:52,060 --> 00:24:53,600 ಭಯೋತ್ಪಾದಕರು ವಿಮಾನ ಉರುಳಿಸುತ್ತಿದ್ದರು 432 00:24:53,790 --> 00:24:55,430 ಮತ್ತು ನಮಗೆ ಹೇಗೆ ಎಂದೂ ತಿಳಿಯುತ್ತಿರಲಿಲ್ಲ. 433 00:24:55,630 --> 00:24:57,060 ಅಂದ ಹಾಗೆ, 434 00:24:57,260 --> 00:24:59,230 ನಿಜವಾದ ಕ್ಷಿಪಣಿಗಳು ಎಲ್ಲಿ ಹೋದವು ಗೊತ್ತಾಯಿತೇ? 435 00:24:59,430 --> 00:25:02,940 ಕೊಲರೆಡೊ ಪೊಲೀಸರಿಗೆ ಡೆನ್ವರ್ ನ ಹೊರಗೆ ಟ್ರಕ್ ಸಿಕ್ಕಿದೆ. ಆದರೆ ಖಾಲಿ. 436 00:25:03,140 --> 00:25:04,360 ಮಣ್ಣಿನ ಮೇಲಿನ ಗುರುತು ನೋಡಿದರೆ, 437 00:25:04,560 --> 00:25:07,230 ಖಾಸಗಿ ವಿಮಾನವೊಂದು ಅವುಗಳನ್ನು ಕೊಂಡೊಯ್ಯಿತು ಅನಿಸುತ್ತೆ. 438 00:25:07,430 --> 00:25:08,630 ಇಲ್ಲಿಗೇ ಬರುತ್ತಿರಬಹುದು. 439 00:25:08,830 --> 00:25:11,990 9/11 ರ ನಂತರ ನ್ಯೂ ಯಾರ್ಕ್ ಗೆ ಬರುವ ವಿಮಾನಗಳ ಮೇಲೆ ತೀವ್ರ ನಿಗಾ ಇದೆ. 440 00:25:12,190 --> 00:25:13,420 ಎ.ಎಂ. ಎಚ್ಚರಿಕೆಯ ಮನುಷ್ಯ. 441 00:25:13,970 --> 00:25:15,200 ನಾನು ಅವನಾಗಿದ್ದರೆ, 442 00:25:15,400 --> 00:25:17,580 ಪೆನ್ಸಿಲ್ವೇನಿಯಾ ಇಲ್ಲವೇ ನ್ಯೂ ಹಾಂಪ್ಶೈರ್ ಗೆ ಕೊಂಡೊಯ್ದು, 443 00:25:17,780 --> 00:25:19,950 ಅಲ್ಲಿಂದ ನ್ಯೂ ಯಾರ್ಕ್ ಗೆ ಗಾಡಿಯಲ್ಲಿ ತರುತ್ತಿದ್ದೆ, 444 00:25:20,150 --> 00:25:21,920 ಲಿಟಲ್ ವಿಂಗ್ ಸಾಫ್ಟ್ವೇರ್ ಅಳವಡಿಸಲು. 445 00:25:22,110 --> 00:25:22,830 ಅದು ಸರಿ. 446 00:25:23,030 --> 00:25:26,590 ಇದನ್ನು ತಡೆಯಲು, ಕ್ಷಿಪಣಿಗಳು ಎಲ್ಲಿ ಹೋಗುತ್ತಿವೆ ಎಂದು ಸರಿಯಾಗಿ ಗೊತ್ತಾಗಬೇಕು, 447 00:25:26,790 --> 00:25:28,760 ಯಾಕೆಂದರೆ ಹಣ ವಿನಿಮಯ ಆಗುವಾಗ, 448 00:25:28,950 --> 00:25:31,820 ಅಲ್ಲಿ ಎ.ಎಂ. ಇರುತ್ತಾನೆ ಮತ್ತು ನಮ್ಮ ಗೆಳೆಯರನ್ನು ಕೊಂದವರೂ ಸಹ. 449 00:25:38,780 --> 00:25:40,570 ರೀಚರ್, ಅದನ್ನು ನೋಡಿದೆಯಾ? 450 00:25:42,200 --> 00:25:44,690 ಅವನ ಗಾಡಿಯಲ್ಲಿದ್ದ ಆಟಸಾಮಾನುಗಳಲ್ಲವೇ ಅವು? 451 00:25:44,890 --> 00:25:47,790 ಮೈಕಿ, ನನ್ನ ಅಕ್ಕನ ಮಕ್ಕಳ ಬಳಿಯೂ ಇದೇ ಇದೆ. 452 00:25:48,620 --> 00:25:51,920 ಇದು ಒಳ್ಳೆಯ ಆಟಿಕೆ. ಯಾವಾಗಲೂ ಇದರಲ್ಲಿ ಆಡುತ್ತೇವೆ. 453 00:25:53,380 --> 00:25:56,470 ನಾನು ಚಿಕ್ಕವನಿದ್ದಾಗ ನನ್ನ ಬಳಿ ಅಕ್ವಮ್ಯಾನ್ ಇತ್ತು. 454 00:25:57,550 --> 00:26:00,470 ಅವನು ಎಷ್ಟು ಚೆನ್ನಾಗಿ ಮೀನುಗಳೊಂದಿಗೆ ಮಾತಾಡುತ್ತಿದ್ದ, 455 00:26:01,850 --> 00:26:04,020 ನನಗೂ ಹಾಗೇ ನನ್ನ ನಾಯಿಯೊಂದಿಗೆ ಮಾತಾಡುವುದಿತ್ತು, ಗೊತ್ತೇ? 456 00:26:11,060 --> 00:26:11,900 ಹೇ. 457 00:26:14,150 --> 00:26:17,240 ಇದನ್ನೂ ತಗೋ. ಇದು ನನ್ನದು. 458 00:26:18,240 --> 00:26:19,350 ಸಂತ ಜೆರೋಮ್. 459 00:26:19,550 --> 00:26:23,240 ಯಾವ ಮಗುವಿನ ಅಪ್ಪ ಅಥವಾ ಅಮ್ಮ ದೇವರ ಬಳಿ ಹೋಗುತ್ತಾರೋ, ಅವರ ಪೋಷಕ. 460 00:26:24,790 --> 00:26:26,250 ಇದರ ಹಿಂದಿರುವ ಪ್ರಾರ್ಥನೆಯನ್ನು 461 00:26:28,660 --> 00:26:31,920 ಪ್ರತಿ ರಾತ್ರಿ ಓದು, 462 00:26:34,050 --> 00:26:35,670 ಅಪ್ಪ ಹತ್ತಿರದಲ್ಲೇ ಇರುತ್ತಾರೆ. 463 00:26:39,510 --> 00:26:40,430 ಓದುವೆಯಾ? 464 00:26:43,550 --> 00:26:44,390 ಒಳ್ಳೆಯ ಹುಡುಗ. 465 00:26:46,930 --> 00:26:47,770 ಒಳ್ಳೆಯ ಹುಡುಗ. 466 00:26:50,810 --> 00:26:52,400 ಏನು ಬೇಕಿದ್ದರೂ ಕರೆ ಮಾಡು. 467 00:26:53,860 --> 00:26:55,360 ಹಗಲಿರುಳು ನೋಡದೆ. 468 00:26:55,560 --> 00:26:56,940 - ಧನ್ಯವಾದ. - ಸರಿ. 469 00:26:58,070 --> 00:27:00,280 ಬಾ, ಮೈಕಿ. ಶುರುವಾಗಲಿದೆ. 470 00:27:04,450 --> 00:27:06,730 ನನ್ನ ಸತ್ತ ಸ್ನೇಹಿತನ ಮಗನಿಗೆ ಆಟಿಕೆ ಏಕೆ ನೀಡುತ್ತಿರುವೆ? 471 00:27:06,930 --> 00:27:07,790 ಏನು? 472 00:27:08,910 --> 00:27:12,780 ಮಗುವನ್ನು ಬುಟ್ಟಿಗೆ ಹಾಕಿಕೊಂಡು, ತಾಯಿಯನ್ನು ಮರುಳು ಮಾಡಲೇ? 473 00:27:12,980 --> 00:27:15,880 ಅಳುತ್ತಿರುವ ವಿಧವೆಯನ್ನು ನೋಡಿ, "ಮರುಳು ಮಾಡಲು ಸುಲಭ" ಎಂದುಕೊಂಡೆಯಾ? 474 00:27:17,000 --> 00:27:21,030 ತಮಾಷೆ ಮಾಡುತ್ತಿರುವೆಯಾ? ನಿನಗೇನು ಸಾಯಬೇಕೇ? 475 00:27:21,230 --> 00:27:22,580 ಕೆಲವು ಜನರ ಪ್ರಕಾರ. 476 00:27:22,780 --> 00:27:23,660 ಆತ್ಮಕ್ಕೆ ಶಾಂತಿ ಕೋರಲು ಬಂದೆ. 477 00:27:23,860 --> 00:27:26,580 ನೆನ್ನೆ ರಾತ್ರಿ ಬೋಸ್ಟನ್ ನಲ್ಲಿ ಬೈಕರ್ ತಂಡ ನನ್ನ ಮೇಲೆ ದಾಳಿ ಏಕೆ ಮಾಡಿತು? 478 00:27:26,780 --> 00:27:27,500 ನೀನು ಬೇವರ್ಸಿ ಎಂದು. 479 00:27:27,700 --> 00:27:31,290 ಇರಬಹುದು. ಅಥವಾ ನಾನು ನಿನಗೆ ಮಾತ್ರ ನಾವು ಅಲ್ಲಿಗೆ ಹೋಗುವುದರ ಬಗ್ಗೆ ಹೇಳಿದ್ದೆ. 480 00:27:31,490 --> 00:27:34,960 ಇರು. ನಾನು ಭ್ರಷ್ಟನೆಂದು ಹೇಳಲು ನೋಡುತ್ತಿರುವೆಯಾ? 481 00:27:35,160 --> 00:27:36,690 ನಾನೇನೂ ಹೇಳಲು ನೋಡುತ್ತಿಲ್ಲ. 482 00:27:39,190 --> 00:27:42,640 ಮೈಕಿ ಜೊತೆ ಏಕೆ ಮಾತಾಡುತ್ತಿದ್ದೆ ಗೊತ್ತೇ? ಯಾಕೆಂದರೆ ಅವನ ಭಾವನೆ ನನಗೆ ಅರ್ಥ ಆಗುತ್ತೆ. 483 00:27:42,840 --> 00:27:45,270 ಪ್ರತಿ ರಾತ್ರಿ ಕಿಟಕಿಯ ಹೊರಗೆ ನೋಡುತ್ತಾ 484 00:27:45,470 --> 00:27:48,350 ಮುಂದಿನ ಕಾರ್ ಅಪ್ಪನದಿರಲೆಂದು ಕೇಳಿಕೊಳ್ಳುವುದು ಹೇಗಿರುತ್ತೆಂದು ನನಗೆ ಗೊತ್ತು, 485 00:27:48,550 --> 00:27:50,690 ಅಪ್ಪ ಬರುವುದಿಲ್ಲ ಎಂದು ಗೊತ್ತಿದ್ದರೂ, 486 00:27:50,890 --> 00:27:53,190 ಅವರನ್ನು ಮಣ್ಣು ಮಾಡುವುದನ್ನು 487 00:27:53,390 --> 00:27:55,110 ಕಣ್ಣಾರೆ ನೋಡಿದ್ದರೂ. 488 00:27:55,310 --> 00:27:57,280 ಕುಟುಂಬ ಕಳೆದುಕೊಳ್ಳುವ ದುಃಖ ಏನೆಂದು ನಿನಗೆ ಗೊತ್ತೇ? 489 00:27:57,480 --> 00:27:59,820 ಹೂಂ. ಎಲ್ಲರೂ ಸತ್ತಿದ್ದಾರೆ. ಪ್ರತಿಯೊಬ್ಬರೂ. 490 00:28:00,020 --> 00:28:01,570 ಮತ್ತು ನಾನು ನಿನ್ನ ಬಗ್ಗೆ ಹೇಳುತ್ತಿರುವೆ, 491 00:28:01,770 --> 00:28:03,490 - ನಿನ್ನಪ್ಪನ ಬಗ್ಗೆ ಅಲ್ಲ. - ನಾನು ಹೇಳುತ್ತಿರುವೆ. 492 00:28:03,690 --> 00:28:06,120 ನನ್ನ ತಂದೆ ಪೊಲೀಸ್ ಆಗಿದ್ದರು. ಒಳ್ಳೆಯ ಪೊಲೀಸ್. 493 00:28:06,320 --> 00:28:09,350 ಲಂಚ ತೆಗೆದುಕೊಳ್ಳುತ್ತಿರಲಿಲ್ಲ. ಅದಕ್ಕಾಗಿಯೇ ಅವರನ್ನು ಕೊಂದರು. 494 00:28:13,560 --> 00:28:14,650 ನೋಡು, 495 00:28:14,850 --> 00:28:17,720 ನನಗೆ ಗೊತ್ತು, ಅವರು ನಿನ್ನ ಗೆಳೆಯನ ವಿಧವೆ ಮತ್ತು ಮಗ ಎಂದು. 496 00:28:17,920 --> 00:28:19,880 ಆದರೆ ಇನ್ನೊಮ್ಮೆ ನನ್ನನ್ನು ಭ್ರಷ್ಟ ಎಂದರೆ, 497 00:28:20,080 --> 00:28:23,180 ದೇವರ ಮುಂದೆ ನಿಂತಿದ್ದೇವೆ ಎಂದು ನೋಡಲ್ಲ, 498 00:28:23,380 --> 00:28:25,930 ನಿನಗೆ ಬೀಳಬೇಕಿರುವ ಒದೆ ಇಲ್ಲೇ ಕೊಡುವೆ. 499 00:28:26,130 --> 00:28:29,870 ಒಂದು, ಯಾವಾಗ ಬೇಕಾದರೂ ನಾನು ಆ ಜಗಳಕ್ಕೆ ಸಿದ್ಧ. 500 00:28:30,070 --> 00:28:30,870 ಎರಡನೆಯದು, 501 00:28:32,910 --> 00:28:34,400 ನಿನ್ನ ತಂದೆ ಬಗ್ಗೆ ಗೊತ್ತಿರಲಿಲ್ಲ. 502 00:28:34,600 --> 00:28:36,920 ಹೂಂ, ನಿನಗೆ ಗೊತ್ತಿಲ್ಲದಿರುವ ವಿಷಯಗಳು ಬಹಳಷ್ಟಿವೆ. 503 00:28:37,120 --> 00:28:39,780 ಯಾಕೆಂದರೆ ನೀನು ಬೋಸ್ಟನ್ ಗೆ ಅದೇನೋ ಮಾಡಲು ಹೋಗಿರುವಾಗ, 504 00:28:39,980 --> 00:28:42,070 ನಾನು ನ್ಯೂ ಏಜ್ ನ ಭದ್ರತಾ ತಂಡದ ಬಗ್ಗೆ ನೋಡಿದೆ. 505 00:28:42,270 --> 00:28:44,200 ಎಲ್ಲರೂ ಹಳೆಯ ಏನ್ ವೈ ಪಿ ಡಿ, 506 00:28:44,400 --> 00:28:45,790 ಎಲ್ಲರೂ ಮೂರನೇ ಠಾಣೆಯವರು. 507 00:28:45,980 --> 00:28:49,580 ಅವರ ಬಾಸ್, ಲ್ಯಾಂಗ್ಸ್ಟನ್, ಮತ್ತು ಉಳಿದ ಕೆಲವರು, ಐ.ಎ. ಯಿಂದ ತನಿಖೆಗೆ ಒಳಗಾಗಿದ್ದರು. 508 00:28:49,780 --> 00:28:52,710 ಬೇಗ ನಿವೃತ್ತಿ ಹೊಂದಿದರು, ಅಪವಾದಗಳನ್ನು ತೆರವುಗೊಳಿಸಲಾಯಿತು. 509 00:28:52,910 --> 00:28:56,420 ನ್ಯೂ ಏಜ್ ನಲ್ಲಿ ಒಳ್ಳೆಯ ಕೆಲಸ ಪಡೆದರು, ಮತ್ತು ತಮ್ಮ ಗೆಳೆಯರನ್ನು ಭರ್ತಿ ಮಾಡಿಕೊಂಡರು. 510 00:28:56,620 --> 00:28:58,050 ಭ್ರಷ್ಟ ಪೊಲೀಸರ ಸಂಪೂರ್ಣ ತಂಡ? 511 00:28:58,250 --> 00:28:59,760 ಎಲ್ಲರೂ, ಸ್ವಾನ್ ನನ್ನು ಬಿಟ್ಟು. 512 00:28:59,960 --> 00:29:02,140 ಆದರೆ ಭಯೋತ್ಪಾದಕರಿಗೆ ಎಂತಹ ಅಸ್ತ್ರ ಬೇಕೆಂದು ತಿಳಿಯುವಷ್ಟು 513 00:29:02,330 --> 00:29:04,300 ಮಿಲಿಟರಿ ಅನುಭವ ಇರುವುದು ಅವನಿಗೆ ಮಾತ್ರ, ಹಾಗಾಗಿ... 514 00:29:04,500 --> 00:29:06,430 ನೀನು ಸೂಚಿಸುತ್ತಿರುವುದು ನನಗೆ ಕೋಪ ಬರಿಸುತ್ತಿದೆ. 515 00:29:06,630 --> 00:29:08,450 ನೀನದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. 516 00:29:09,660 --> 00:29:12,400 ಅವನ ಹಿನ್ನೆಲೆ ನೋಡಿದರೆ, ಅವನೇ ಇದನ್ನೆಲ್ಲಾ ಯೋಜಿಸಿರುವ ಸಾಧ್ಯತೆ ಇದೆ. 517 00:29:12,590 --> 00:29:16,150 ಎಲ್ಲಾ ಪೊಲೀಸರು, ಎಲ್ಲರೂ ಭ್ರಷ್ಟರು, ಎಲ್ಲರೂ ಒಂದೇ ಠಾಣೆಯವರು. 518 00:29:16,350 --> 00:29:18,610 - ಯಾರನ್ನಾದರೂ ಮಾತಾಡಿಸಿದೆಯಾ? - ಆಗಿಲ್ಲ. 519 00:29:18,810 --> 00:29:20,700 ನೀನವರ ಕಚೇರಿ ಮೇಲೆ ದಾಳಿ ಮಾಡಿದೆ. 520 00:29:20,890 --> 00:29:22,110 ಎಲ್ಲರೂ ಅಡಗಿ ಕೂತಿದ್ದಾರೆ. 521 00:29:22,310 --> 00:29:25,470 ಟೋನಿ ಸ್ವಾನ್ ನಂತೆ ಅವರ ಜಾಗವೂ ಖಾಲಿ ಇದೆ. 522 00:29:26,050 --> 00:29:29,680 ಬೇರೆಯವರನ್ನು ಭ್ರಷ್ಟ ಎನ್ನುವ ಮೊದಲು, ನಿನ್ನ ಅಂಗಳ ನೋಡಿಕೋ. 523 00:29:38,770 --> 00:29:42,820 ಈಗ ನಮ್ಮ ಸಹೋದರ ಫ್ರಾನ್ಸ್ ನನ್ನು ನೆಲಕ್ಕೆ ಇಳಿಸಲಿದ್ದೇವೆ, 524 00:29:43,570 --> 00:29:47,360 ಭೂಮಿಯಲ್ಲಿ ಒಂದಾಗಲು, ಪಂಚಭೂತಗಳಲ್ಲಿ ಒಂದಾಗಲು, 525 00:29:48,570 --> 00:29:51,350 ಅವರ ಆತ್ಮವು ಮೋಕ್ಷ ಹೊಂದುತ್ತದೆ 526 00:29:51,550 --> 00:29:53,900 ಎಂಬ ಭರವಸೆಯೊಂದಿಗೆ. ಆಮೆನ್. 527 00:29:54,090 --> 00:29:56,370 ಆಮೆನ್. 528 00:30:23,570 --> 00:30:25,860 ಫೈರಿಂಗ್ ತಂಡ, ಅಟೆನ್ಷನ್! 529 00:30:27,950 --> 00:30:29,740 ಸ್ಟಾಂಡ್ ಬೈ. 530 00:30:33,120 --> 00:30:33,950 ರೆಡಿ. 531 00:30:37,660 --> 00:30:38,580 ಏಯಿಮ್. 532 00:30:39,750 --> 00:30:40,710 ಫೈರ್! 533 00:30:41,380 --> 00:30:42,500 ರೆಡಿ. 534 00:30:43,960 --> 00:30:45,800 ಏಯಿಮ್. ಫೈರ್! 535 00:30:50,130 --> 00:30:51,550 - ಕೆಳಗೆ! - ಫೈರ್. 536 00:30:54,220 --> 00:30:55,870 ನಾನಿದ್ದೇನೆ. ಬನ್ನಿ, ಹೋಗೋಣ. 537 00:30:56,070 --> 00:30:57,250 ಇಲ್ಲಿಂದ ಹೊರಡಿ. ಹೋಗಿ! 538 00:30:57,450 --> 00:30:59,210 ಗುಂಡು ಹಾರಿಸುತ್ತಿದ್ದಾರೆ. ಓಡಿ! 539 00:30:59,410 --> 00:31:01,190 ಹೋಗಿ! 540 00:31:15,490 --> 00:31:17,270 - ಎಷ್ಟಿದ್ದಾರೆ? - ನನ್ನ ಪ್ರಕಾರ, ಎರಡು. 541 00:31:17,470 --> 00:31:20,230 - ರಸ್ತೆಯ ಆ ಬದಿ. - ಈ ಬಂದೂಕುಗಳು ಉಪಯೋಗವಿಲ್ಲ. ಹತ್ತಿರ ಹೋಗಬೇಕು. 542 00:31:20,430 --> 00:31:22,440 ಅವರನ್ನು ಸುತ್ತುವರೆಯೋಣ. ನೀಗ್ಲೇ ಮತ್ತು ನಾನು ಬಲದಿಂದ. 543 00:31:22,640 --> 00:31:25,290 ನೀವಿಬ್ಬರು ಎಡದಿಂದ. ಹೋಗಿ. 544 00:31:47,780 --> 00:31:50,220 ಇಷ್ಟೇ ಹತ್ತಿರ ಆಗುವುದು. ಸಾಕಾಗಲ್ಲ. 545 00:31:50,420 --> 00:31:51,760 ಪೊಲೀಸರಿಗೆ ಕಾಯಬಹುದು. 546 00:31:51,960 --> 00:31:55,530 ಓಡಿಹೋಗಲು ಬಿಡಬಾರದು. ಸೈರನ್ ಕೇಳಿದೊಡನೆ ಓಡಿ ಹೋಗುವರು. 547 00:31:57,280 --> 00:32:00,520 ಸರಿ, ನಾನವರ ಗಮನ ಸೆಳೆವೆ, ನೀವು ಗುಂಡು ಹೊಡೆಯಿರಿ. 548 00:32:00,720 --> 00:32:02,230 - ಬೇಡ. - ನಿನ್ನಿಂದ ಆಗುತ್ತೆ. 549 00:32:02,430 --> 00:32:03,940 ನೀನು ಚೆನ್ನಾಗಿ ಗುಂಡು ಹಾರಿಸುವೆ. 550 00:32:04,140 --> 00:32:05,170 ಆದರೆ ನೀನು ನಿಧಾನವಾಗಿ ಓಡುವವ. 551 00:32:17,140 --> 00:32:18,220 ಸಾಯಲಿ ಇದು. 552 00:32:20,060 --> 00:32:20,890 ಛೇ! 553 00:32:46,750 --> 00:32:47,790 ಒಳಗೆ ಬಾ! 554 00:32:52,840 --> 00:32:55,410 ಈಗ ನನ್ನ ಮೇಲೆ ನಂಬಿಕೆ ಬಂತೇ ಅಥವಾ ಕೆಲಸ ಆಗಬೇಕಷ್ಟೇ ಏನು ನಿನಗೆ? 555 00:32:55,610 --> 00:32:58,930 ನೀನು ಏಂಜೆಲ ಮತ್ತು ಮೈಕಿಯನ್ನು ಕಾಪಾಡುವುದು ನೋಡಿದೆ. ನೀನು ಭ್ರಷ್ಟನಲ್ಲ ಅನಿಸುತ್ತೆ. 556 00:33:02,180 --> 00:33:04,850 ಆದರೆ ಯಾರೋ ಗೂಢಚಾರಿಗಲಿದ್ದಾರೆ ಪೊಲೀಸರಲ್ಲಿ. ಆದಂತೂ ಖಚಿತ. 557 00:33:11,020 --> 00:33:13,140 ಛೇ, ರುಸ್ಸೋ, ನಿನ್ನ ಬಲಕ್ಕೂ ಒಂದು ಪೆಡಲ್ ಇದೆ. 558 00:33:13,340 --> 00:33:14,150 ಕೆಲಸ ಮಾಡಲು ಬಿಡು. 559 00:33:18,910 --> 00:33:19,770 ಬದಿಯಿಂದ ಹೋಗು. 560 00:33:19,970 --> 00:33:21,310 - ತಡೆ ಇದೆ. - ತಡೆಯನ್ನು ಎಗರು. 561 00:33:21,510 --> 00:33:23,540 ಹಿಂಸೆ ಕೊಡಬೇಡ. 562 00:33:30,590 --> 00:33:32,920 ವೇಗವಾಗಿ ಹಿಂಬಾಲಿಸುವೆ ಎಂದುಕೊಂಡಿದ್ದೆ. 563 00:33:40,680 --> 00:33:43,100 - ನೀನವನನ್ನು ಕಳೆದುಕೊಳ್ಳುತ್ತಿರುವೆ. - ನೀನು ಗಾಡಿ ಓಡಿಸುವೆಯಾ? 564 00:33:44,730 --> 00:33:45,560 ಹೌದು. 565 00:33:46,190 --> 00:33:47,020 ಹೇ! 566 00:34:08,290 --> 00:34:11,000 - ವಿಪತ್ತಿನ ಮನುಷ್ಯ ನೀನು! - ನೀನು ಕುರುಡನಂತೆ ಗಾಡಿ ಓಡಿಸುವೆ. 567 00:34:15,460 --> 00:34:18,630 ಗುಂಡು ಹಾರಿಸಬೇಡಿ, ಸೋತೆ ನಾನು. ಸರಿಯೇ? ಸೋತೆ. 568 00:34:20,340 --> 00:34:22,680 - ನಿನ್ನನ್ನು ಬಂಧಿಸುತ್ತಿರುವೆ, ಬೇವರ್ಸಿ. - ಇಲ್ಲ. 569 00:34:24,310 --> 00:34:27,500 ಹಾಡು ಹಗಲಲ್ಲಿ, ಜನನಿಬಿಡ ಅಂತ್ಯಕ್ರಿಯೆಯಲ್ಲಿ ದಾಳಿ ಮಾಡಿದ್ದಾರೆ. 570 00:34:27,700 --> 00:34:30,550 ತುರ್ತಾಗಿ ಮಾಡುತ್ತಿದ್ದಾರೆ. ಅವರ ಕೆಲಸ ಇನ್ನೇನು ಮುಗಿಯಲಿದೆ ಎಂದರ್ಥ. 571 00:34:30,750 --> 00:34:33,420 ಬಂಧಿಸಿದರೆ, ವಕೀಲರನ್ನು ಕೇಳುತ್ತಾನೆ, ಬೇಗ ಬಾಯಿ ಬಿಡುವುದಿಲ್ಲ, 572 00:34:33,620 --> 00:34:36,260 ಭಯೋತ್ಪಾದಕರಿಗೆ ವಾಣಿಜ್ಯ ವಿಮಾನ ಉರುಳಿಸಲು 650 ಅವಕಾಶಗಳು ಸಿಗಲಿವೆ. 573 00:34:36,460 --> 00:34:37,690 ಮತ್ತೇನು ಮಾಡಲಿ? 574 00:34:38,240 --> 00:34:39,240 ನನಗೆ ಮಾಡಲು ಬಿಡು. 575 00:34:44,280 --> 00:34:45,450 ಹಾಗೆ ಮಾಡಬೇಡ. 576 00:34:49,250 --> 00:34:50,780 ನಿನಗೆ ಗೊತ್ತಿರುವುದನ್ನು ಹೇಳದೆ, 577 00:34:50,970 --> 00:34:52,780 ನನ್ನ ಗೆಳೆಯರನ್ನು ಕೊಂದವರನ್ನು ಉಳಿಸುತ್ತಿರುವೆ. 578 00:34:52,980 --> 00:34:55,990 ನಾನು ಹೆಚ್ಚು ವಿಚಾರಣಾ ತಂತ್ರ ಬಳಸಿ ಸಮಯ ವ್ಯರ್ಥ ಮಾಡಲ್ಲ. 579 00:34:56,190 --> 00:34:57,880 ನಿನ್ನ ಜೀವ ಹಿಂಡಿ ಬಿಡುವೆ ಅಷ್ಟೇ. 580 00:34:58,800 --> 00:35:02,590 ಸಾಯುವ ಮೊದಲು ಏನಾದರೂ ಹೇಳಬೇಕು ಅನಿಸಿದರೆ 581 00:35:04,010 --> 00:35:04,850 ಕಣ್ಣು ಮಿಟುಕಿಸು. 582 00:35:12,100 --> 00:35:13,820 - ಮಾತಾಡು. ಈಗಲೇ. - ಸರಿ. 583 00:35:14,020 --> 00:35:16,940 ಸರಿ, ದೇವರೇ, ಉಸಿರು ತೆಗೆದುಕೊಳ್ಳಲು ಬಿಡು. 584 00:35:21,700 --> 00:35:24,770 ಗನ್ ಫೈರ್ ಸೆಲ್ಯೂಟ್ ಸಮಯದಲ್ಲಿ ನಾವು ಶೂಟ್ ಮಾಡಬೇಕಿತ್ತು, 585 00:35:24,970 --> 00:35:25,810 ನಮ್ಮ ಶಾಟ್ ಕೇಳದಿರಲು. 586 00:35:26,010 --> 00:35:27,270 ನೀನು ಮತ್ತು ನಿನ್ನ ತಂಡವನ್ನು ಕೊಂದು 587 00:35:27,470 --> 00:35:29,520 ಏನಾಯಿತು ಎಂದು ತಿಳಿಯುವ ಮೊದಲು ಓಡಿಹೋಗಬೇಕಿತ್ತು. 588 00:35:29,720 --> 00:35:31,480 ವೃತ್ತಿಪರ ಶೂಟರ್ ಗಳಿಗೆ ಒಳ್ಳೆಯ ಸಂಬಳ. 589 00:35:31,680 --> 00:35:33,730 - ನನಗೆ ಗೊತ್ತಿಲ್ಲದ್ದು ಹೇಳು? - ಏನು ಹೇಳಲಿ? 590 00:35:33,930 --> 00:35:36,200 ಲ್ಯಾಂಗ್ಸ್ಟನ್ ಪೂರ್ತಿ ಹಣವನ್ನು ಒಮ್ಮೆಗೇ ಕೊಟ್ಟಿರಲಿಕ್ಕಿಲ್ಲ. 591 00:35:36,390 --> 00:35:38,660 ಉಳಿದ ಹಣ ಪಡೆಯಲು ಎಲ್ಲಿ ಭೇಟಿ ಆಗುವವರಿದ್ದಿರಿ? 592 00:35:38,860 --> 00:35:41,780 ಕ್ವೀನ್ಸ್ ನಲ್ಲಿ ಯಾವುದೋ ಪಾಳುಬಿದ್ದ ಕಟ್ಟಡದಲ್ಲಿ. 593 00:35:41,980 --> 00:35:43,870 ನೋಡು, ನಿನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಬಲ್ಲೆ, 594 00:35:44,070 --> 00:35:45,890 ಆದರೆ ನನಗೆ ಲ್ಯಾಂಗ್ಸ್ಟನ್ ಯಾರೆಂದು ಗೊತ್ತಿಲ್ಲ. 595 00:35:46,890 --> 00:35:47,850 ನಿನ್ನನ್ನು ಯಾರು ಕಳಿಸಿದ್ದು? 596 00:35:48,470 --> 00:35:49,640 ಸ್ವಾನ್ ಎಂಬುವವನು. 597 00:35:58,900 --> 00:35:59,740 ಸರಿ. 598 00:36:00,940 --> 00:36:04,180 ಡಿಕ್ಸನ್ ಮತ್ತು ಓ'ಡೊನೆಲ್ ಸ್ಥಳದಲ್ಲಿದ್ದಾರೆ. ರುಸ್ಸೋ ರಸ್ತೆಯ ಬದಿಯಲ್ಲಿ. 599 00:36:04,380 --> 00:36:05,640 ಎಲ್ಲಾ ನಿರ್ಗಮನಗಳ ಮೇಲೆ ನಿಗಾ ಇದೆ. 600 00:36:05,840 --> 00:36:08,640 ಕೇಳಿತೇ? ಏನಾದರೂ ಮಾಡಲು ನೋಡಿದರೆ, ಪಶ್ಚಾತ್ತಾಪ ಪಡುವೆ. 601 00:36:08,840 --> 00:36:11,020 ಒಳಗೆ ಹೋಗು, ಹಣ ಪಡೆ, ಮಾಹಿತಿ ನೀಡು. 602 00:36:11,220 --> 00:36:13,320 ಒಳಗೆ ಎಷ್ಟು ಜನರಿದ್ದಾರೆ, ಅವರ ಬಳಿ ಏನಿದೆ. 603 00:36:13,520 --> 00:36:15,530 ಕೋಣೆ ಹೇಗಿದೆ, ಎಲ್ಲರೂ ಎಲ್ಲೆಲ್ಲಿ ಇದ್ದಾರೆ. 604 00:36:15,730 --> 00:36:18,840 ಆಮೇಲೆ ನಿನ್ನನ್ನು ಬಿಡುತ್ತೇವೆ, ಹಣ ನೀನೇ ಇಟ್ಟುಕೋ. ಅರ್ಥ ಆಯಿತೇ? 605 00:36:19,040 --> 00:36:21,160 ಹೂಂ, ಸರಿ, ಏನೋ. 606 00:36:21,360 --> 00:36:23,300 ಮತ್ತೆ ನಿಮ್ಮನ್ನು ನೋಡಲು ಇಷ್ಟ ಇಲ್ಲ ನನಗೆ. 607 00:36:24,760 --> 00:36:25,760 ನಿನ್ನ ಫೋನ್ ಕೊಡು. 608 00:36:32,520 --> 00:36:36,130 ಇದನ್ನು ಜೇಬಿನಲ್ಲಿ ಇಟ್ಟುಕೋ, ನಮಗೆ ನಿನ್ನ ಮಾತು ಕೇಳಬೇಕು. 609 00:36:36,330 --> 00:36:39,820 ಏನಾದರೂ ಮಾಡಲು ನೋಡಿದರೆ, ಒಳಗೆ ಬಂದು ಎಲ್ಲರೊಂದಿಗೆ ನಿನ್ನನ್ನೂ ಕೊಲ್ಲುವೆ. 610 00:36:40,570 --> 00:36:41,690 ಹೊರಡು, ಮೂರ್ಖ. 611 00:36:50,490 --> 00:36:52,190 ಏನಾಗುತ್ತೆ ಎನ್ನುವೆ? 612 00:36:52,390 --> 00:36:54,440 ಸ್ವಾನ್ ನ್ಯೂ ಏಜ್ ಗೆ ಕೆಲಸ ಮಾಡಲು ಹೋದ, 613 00:36:54,640 --> 00:36:57,820 ಬೇಕಾದಷ್ಟು ಹಣ ಮಾಡುವ ಅವಕಾಶ ನೋಡಿ, ಭ್ರಷ್ಟನಾದನೇ? 614 00:36:58,020 --> 00:36:58,740 ಆಮೇಲೆ ಏನು? 615 00:36:58,940 --> 00:37:01,570 ಒಂದೇ ನಗರದಲ್ಲಿ ಇದ್ದು ಫ್ರಾನ್ಸಿ ಜೊತೆ ಓಡಾಡುತ್ತಿದ್ದ. 616 00:37:01,770 --> 00:37:04,420 ಬಾಯಿ ತಪ್ಪಿ ಫ್ರಾನ್ಸಿಗೆ ಸಂಶಯ ಬರುವಂತಹದ್ದು ಏನೋ ಹೇಳಿದ. 617 00:37:05,840 --> 00:37:08,950 ಅಥವಾ, ಫ್ರಾನ್ಸಿಗೆ ಜೊತೆ ಸೇರಲು ಹೇಳಿದ. 618 00:37:09,150 --> 00:37:11,640 ಹೆಂಡತಿ, ಮಗು ಇರುವಾಗ ಅವನಿಗೂ ಹಣ ಬೇಕಾಗಬಹುದು ಎಂದು ಯೋಚಿಸಿ. 619 00:37:12,470 --> 00:37:13,290 ಫ್ರಾನ್ಸ್ ಇಲ್ಲ ಎಂದ, 620 00:37:13,490 --> 00:37:16,960 ನಿಲ್ಲಿಸಲು ನೋಡಿದ, ಸಾಂಚೆಜ್ ಮತ್ತು ಒರೊಜ್ಕೊ ಬಳಿ ಸಹಾಯ ಕೇಳಿದ. 621 00:37:17,160 --> 00:37:18,110 ಇದೇ ಇರಬೇಕಲ್ಲವೇ? 622 00:37:20,070 --> 00:37:22,220 ಗೊತ್ತಿಲ್ಲ. ಆದರೆ ಆ ಕಟ್ಟಡದಲ್ಲಿ ನಿಜವಾಗಿ ಸ್ವಾನ್ ಇದ್ದರೆ, 623 00:37:22,420 --> 00:37:24,510 ಈ ವ್ಯಕ್ತಿಗೆ ಮಾಡಿದ್ದನ್ನೇ ಅವನಿಗೂ ಮಾಡುವೆ. 624 00:37:24,710 --> 00:37:27,890 ಕತ್ತು ಹಿಸುಕಿ ನಿಜ ಕಕ್ಕಿಸುವೆ. 625 00:37:28,090 --> 00:37:29,030 ಆಮೇಲೆ? 626 00:37:34,620 --> 00:37:35,460 ಹಲೋ? 627 00:37:37,420 --> 00:37:38,250 ಯಾರಿದ್ದೀರಿ? 628 00:39:53,220 --> 00:39:55,160 ಅನುವಾದಿಸಿದವರುಉಪ ಶೀರ್ಷಿಕೆ ಅನುವಾದ: ಅನುರಾಧ 629 00:39:55,360 --> 00:39:57,310 ಸೃಜನಶೀಲ ಮೇಲ್ವಿಚಾರಕರು ವಿವೇಕ್