1 00:00:06,091 --> 00:00:07,509 ರೀಚರ್ ಹಿಂದಿನ ಸಂಚಿಕೆಯಲ್ಲಿ... 2 00:00:07,509 --> 00:00:10,637 ಲಿಟಲ್ ವಿಂಗ್ ಆಕಾಶದಿಂದ ಏನನ್ನಾದರೂ ಉರುಳಿಸಬಲ್ಲದು. 3 00:00:10,637 --> 00:00:12,473 - ಅಜಾರಿ ಮಹಮೂದ್. - ನಾವವನನ್ನು ಎ.ಎಂ. ಎಂದು ಕರೆಯುವುದು. 4 00:00:12,473 --> 00:00:13,807 ಅವನಿಗೆ ಹಣವೇ ದೇವರು. 5 00:00:13,807 --> 00:00:15,601 ಇದನ್ನು ಬಾಂಡ್ ಬಳಸಿ ಕೊಳ್ಳುವವರಿದ್ದರು. 6 00:00:15,601 --> 00:00:18,187 ಬಹಳಷ್ಟು ಹಣವನ್ನು ಒಂದು ಸೂಟ್ಕೇಸ್ ನಲ್ಲಿ ಒಯ್ಯಬಹುದು. 7 00:00:18,187 --> 00:00:19,354 ಟೋನಿ ಸ್ವಾನ್ ಬದುಕಿದ್ದಾನೆ. 8 00:00:19,354 --> 00:00:21,148 ಈ ಡೆಲಿವರಿಗೆ ಸಹಿ ಹಾಕಿದ್ದು ಅವನೇ. 9 00:00:21,148 --> 00:00:22,399 ಇದು ಡಿಜಿಟಲ್ ಬೆರಳಚ್ಚು. 10 00:00:22,399 --> 00:00:23,942 ನಾನು ಸ್ವಾನ್ ಭ್ರಷ್ಟ ಅಂದುಕೊಳ್ಳುವುದಿಲ್ಲ. 11 00:00:23,942 --> 00:00:25,694 ತನಿಖೆಯಲ್ಲಿ ಅನಿಸಿಕೆಗಳು ಕೊಲ್ಲುತ್ತವೆ. 12 00:00:25,694 --> 00:00:26,695 ಮಾಲ್ಕಮ್ ಲಾವೋಯ್. 13 00:00:26,695 --> 00:00:29,031 ನಿನ್ನ ಕೈವಾಡ ಇದೆ ಎಂದು ಗೊತ್ತಾದರೆ ನಿನ್ನ ಮೇಲೆ ಆರೋಪ ಬರುವುದು. 14 00:00:29,031 --> 00:00:30,616 ಕೆಟ್ಟವರ ನಿರ್ಮೂಲನೆ, ನನ್ನ ಕೈಗಳು ಮಲಿನವಾಗದೆ. 15 00:00:30,616 --> 00:00:31,575 ವಿನ್-ವಿನ್ ಎನ್ನುತ್ತೇವೆ. 16 00:00:31,575 --> 00:00:34,286 ಯಾರೋ ಇಂಜಿನಿಯರಿಂಗ್ ನವರು ಟೆಸ್ಟಿಂಗ್ ಬೋರ್ಡ್ ಅನ್ನು ಬದಲಿಸಿದ್ದಾರೆ 17 00:00:34,286 --> 00:00:36,830 ಸರಿಯಾದ ಚಿಪ್ ಅನ್ನು ದೋಷಪೂರಿತ ಎಂದು ತೋರುವಂತೆ. 18 00:00:36,830 --> 00:00:39,500 ನೀನಿಲ್ಲಿ ಬರುವಷ್ಟರಲ್ಲಿ ಲಿಟಲ್ ವಿಂಗ್ ಚಿಪ್ ಗಳು ಕ್ಷಿಪಣಿಯಲ್ಲಿ 19 00:00:39,500 --> 00:00:41,251 - ಅಳವಡಿಸಲು ತಯಾರಾಗಿರುತ್ತವೆ. - ಅದ್ಭುತ. 20 00:00:41,251 --> 00:00:45,005 ಇದನ್ನು ತಡೆಯಲು, ಕ್ಷಿಪಣಿಗಳು ಎಲ್ಲಿ ಹೋಗುತ್ತಿವೆ ಎಂದು ಸರಿಯಾಗಿ ಗೊತ್ತಾಗಬೇಕು. 21 00:00:46,715 --> 00:00:48,759 - ನಿನಗೇನು ಬೇಕು? - ನೀನು ಮತ್ತು ನಿನ್ನ ಗೆಳತಿ ಇಲ್ಲಿ ಬನ್ನಿ, 22 00:00:48,759 --> 00:00:50,886 ನನ್ನ ಗೆಳತಿಯ ಹೆಸರು ನೀಗ್ಲೇ, ಮತ್ತವಳು ಸತ್ತಿದ್ದಾಳೆ. 23 00:00:50,886 --> 00:00:53,013 ನಿನ್ನ ಖಾಸಗಿ ಸೆಕ್ಯುರಿಟಿ. ಮಾಜಿ ಸೀಲ್ ಮತ್ತು ರೇಂಜರ್ ಗಳು? 24 00:00:53,013 --> 00:00:53,931 - ನನಗವರು ಬೇಕು. - ಸರಿ. 25 00:00:53,931 --> 00:00:55,265 ಹೇ! ಹೊರಡಿ ಇಲ್ಲಿಂದ. 26 00:00:56,850 --> 00:00:58,310 ಅವನು ನನಗೆ ಒಂದು ಉಪಾಯ ನೀಡಿದ. 27 00:00:58,310 --> 00:00:59,645 ಹಾಗೆಯೇ ಒಳಗೆ ಹೋಗುವೆಯಾ? 28 00:00:59,645 --> 00:01:02,314 ಚಿಂತೆ ಬೇಡ. ನಾನು ಸುಮ್ಮನೆ ಅದನ್ನು ನೋಡುತ್ತಾ ಕೂರುವುದಿಲ್ಲ. 29 00:01:03,273 --> 00:01:04,107 ಕೈ ಮೇಲೆತ್ತು. 30 00:01:25,504 --> 00:01:27,005 ನಿಲ್ಲು. 31 00:01:36,682 --> 00:01:37,558 ಛೇ. 32 00:01:38,642 --> 00:01:41,228 ಕ್ಯಾಮೆರಾ ಚಿತ್ರಗಳು ನಿನಗೆ ನ್ಯಾಯ ಮಾಡುವುದಿಲ್ಲ. 33 00:01:47,234 --> 00:01:50,696 ನೆಲಕ್ಕೆ ಬಿದ್ದಾಗ ನೀನು ದೊಡ್ಡ ತೂತು ಮಾಡುವೆ. 34 00:01:53,824 --> 00:01:55,534 ದೊಡ್ಡ ತೂತು. 35 00:02:04,251 --> 00:02:05,085 ಅವನನ್ನು ತಯಾರು ಮಾಡಿ. 36 00:02:06,753 --> 00:02:08,171 ಹೂಂ, ಏನು ಗೊತ್ತಾಯಿತು ನಿನಗೆ? 37 00:02:11,258 --> 00:02:12,092 ಹತ್ತು. 38 00:02:13,427 --> 00:02:14,261 ಇಲ್ಲ. 39 00:02:17,681 --> 00:02:18,515 "ಇಲ್ಲ"? 40 00:02:20,309 --> 00:02:21,143 ನಿನ್ನ ಉಸ್ತುವಾರಿ ಅಲ್ಲ... 41 00:02:21,768 --> 00:02:22,686 ಬೇವರ್ಸಿ! 42 00:02:39,494 --> 00:02:40,329 ಎಲ್ಲಿದ್ದಾಳೆ ಅವಳು? 43 00:02:41,580 --> 00:02:43,916 ನಿನ್ನ ಪೊಲೀಸ್ ಗೆಳೆಯನಿಂದ ಕರೆ ಬಂದಿರಬೇಕು. 44 00:02:43,916 --> 00:02:46,209 ಆಸ್ಪತ್ರೆಯಲ್ಲಿ ಸಿಕ್ಕಿದ್ದು ಒಂದೇ ದೇಹ, 45 00:02:46,209 --> 00:02:48,629 ಅದು ನೀಗ್ಲೇಯದ್ದಲ್ಲ. ಎಲ್ಲಿದ್ದಾಳೆ ಅವಳು? 46 00:02:48,629 --> 00:02:50,380 ಬಂದೂಕು ಕೆಳಗೆ ಹಾಕು. 47 00:02:50,380 --> 00:02:53,550 ಅವಳು ಸಿಗುವವರೆಗೂ ನೀನು ನನ್ನ ಮೇಲೆ ಗುಂಡು ಹಾರಿಸಲ್ಲ. 48 00:02:53,675 --> 00:02:55,302 ಅವಳು ನಿನ್ನ ಕೊನೆಯ ಬಾಧ್ಯತೆ. 49 00:02:57,888 --> 00:03:00,807 ನಿಜ. ನಿನ್ನ ಮೇಲೆ ಗುಂಡು ಹಾರಿಸಲ್ಲ. 50 00:03:02,392 --> 00:03:03,226 ಅಯ್ಯೋ. 51 00:03:06,897 --> 00:03:08,690 ಕುಳಿತುಕೋ. ಮಾತಾಡೋಣ. 52 00:03:15,864 --> 00:03:19,368 ಬ್ಯಾಲಿಸ್ಟಿಕ್ಸ್ ತಂಡಕ್ಕೆ ಏನೂ ಬಿಡುವುದು ಬೇಡ. ಬುಲ್ಲೆಟ್ ಹೊರತೆಗೆಯಿರಿ. 53 00:03:19,493 --> 00:03:21,954 ನಮಗೆಲ್ಲಿ ಬೇಕೋ ಇವರಲ್ಲೇ ಇರುವರು, ಬಾಸ್. 54 00:03:31,588 --> 00:03:36,510 ರೀಚರ್ 55 00:04:05,080 --> 00:04:05,914 ಒಂದು. 56 00:04:08,959 --> 00:04:09,793 ಎರಡು. 57 00:04:11,753 --> 00:04:12,587 ಒಂದು. 58 00:04:14,006 --> 00:04:14,840 ಎರಡು. 59 00:04:16,049 --> 00:04:17,134 ಒಂದು. 60 00:04:18,969 --> 00:04:20,095 ಎರಡು. 61 00:04:28,228 --> 00:04:30,689 ಹೊರಗಿನ ಚೌಕಿದಾರರು ಸತ್ತಿದ್ದಾರೆ. ನಿಮಗೆ ಬರಲು ಎಷ್ಟು ಹೊತ್ತು? 62 00:04:30,689 --> 00:04:32,024 ಮೂರು ನಿಮಿಷಗಳು. 63 00:04:32,024 --> 00:04:32,941 ಸರಿ. 64 00:04:37,487 --> 00:04:40,574 ದೇವರೇ. ಎಲ್ಲಾ ಯೋಜನೆ ಮಾಡಿ ಮುಗಿದಿತ್ತು. 65 00:04:41,742 --> 00:04:42,993 ಹಣ ಸಿಗುತ್ತೆ, 66 00:04:42,993 --> 00:04:46,371 ಸ್ವಲ್ಪ ಸಮಯ ಕಳೆಯಲಿ, ಆಮೇಲೆ ಆರಾಮವಾಗಿ ನಿವೃತ್ತಿ ಪಡೆಯೋಣ ಎಂದಿದ್ದೆ. 67 00:04:47,456 --> 00:04:50,917 ಆದರೆ ನಿನ್ನ ಹುಡುಗ ಸ್ವಾನ್ ಮಾಹಿತಿ ಹೊರತೆಗೆಯಲು ನೋಡಿದ. 68 00:04:50,917 --> 00:04:52,335 ತನ್ನ ಗೆಳೆಯರನ್ನು ಕರೆತಂದು 69 00:04:53,211 --> 00:04:56,631 ಅಷ್ಟು ಒಳ್ಳೆಯ ಯೋಜನೆಯ ಮೇಲೆ 70 00:04:57,674 --> 00:05:01,261 ಉಚ್ಚೆ ಹೊಯ್ದ. 71 00:05:05,599 --> 00:05:08,727 ಆದರೆ ಪರವಾಗಿಲ್ಲ, ಯಾಕೆಂದರೆ ನಾವು ಸ್ವಾನ್ ನನ್ನು ಸಹಿ ಹಾಕಲು ಬಳಸಿದೆವು. 72 00:05:08,727 --> 00:05:11,021 ಯಾರಾದರೂ ತನಿಖೆ ನಡೆಸಿದರೆ, 73 00:05:11,021 --> 00:05:13,607 ಅವನು ಒಪ್ಪಂದ ಮಾಡಿಕೊಂಡು, ಹಣ ಪಡೆದು ಓಡಿದಂತೆ ಕಾಣುವುದು 74 00:05:13,607 --> 00:05:16,026 ಮತ್ತು ನಾನು ಯಾವುದಾದರೂ ಬೀಚ್ ಮೇಲೆ 75 00:05:16,026 --> 00:05:18,487 ಹೆಂಗಸರೊಂದಿಗೆ ಆನಂದಿಸುತ್ತಿರಬಹುದು ಎಂದು. 76 00:05:18,487 --> 00:05:20,405 ಆದರೆ ಈಗ, ಆ ಯೋಜನೆಯೂ ಹಾಳಾಯಿತು, 77 00:05:20,405 --> 00:05:24,117 ಯಾಕೆಂದರೆ ನಿಮ್ಮಲ್ಲಿ ಒಂದು ಬೇವರ್ಸಿ ಅಲ್ಲಿ ಹೊರಗಿದ್ದಾಳೆ. 78 00:05:24,117 --> 00:05:25,077 ಎಲ್ಲಿದ್ದಾಳೆ ಅವಳು? 79 00:05:29,539 --> 00:05:31,124 ಚಿಂತೆಯಲ್ಲಿರುವಂತಿದೆ. 80 00:05:31,124 --> 00:05:34,169 ನೀನು ತುಂಬಾ ಹಠಮಾರಿ. 81 00:05:35,170 --> 00:05:36,880 ನಿನ್ನ ತಂಡದವರಂತೆಯೇ. 82 00:05:38,256 --> 00:05:40,300 ನಾನು ಸ್ವಾನ್ ಗೂ ಪಾಲು ಕೊಡುವುದಾಗಿ ಹೇಳಿದೆ. 83 00:05:41,093 --> 00:05:43,261 - ಎಲ್ಲಿದ್ದಾನೆ ಅವನು? - ನಿನ್ನ ಗೆಳೆಯನೇ? 84 00:05:43,261 --> 00:05:44,471 ಇಲ್ಲೇ ಇದ್ದಾನೆ. 85 00:05:46,723 --> 00:05:47,641 ನೋಡಬೇಕೇ? 86 00:06:03,073 --> 00:06:05,450 ನೋಡು, ಅವನನ್ನು ಸಿಲುಕಿಸಲು ಅವನ ಪೂರ್ತಿ ದೇಹ ಬೇಕಿರಲಿಲ್ಲ. 87 00:06:07,369 --> 00:06:10,122 ಕಂಪ್ಯೂಟರ್ ಒಳಹೊಕ್ಕಲು ಮತ್ತು ದಾಖಲೆ ಸಹಿ ಮಾಡಲು 88 00:06:11,164 --> 00:06:13,041 ಅವನ ಬೆರಳಚ್ಚು, 89 00:06:13,041 --> 00:06:16,211 ಮತ್ತು ಕಣ್ಣು ಗುಡ್ಡೆ ಸ್ಕ್ಯಾನ್ ಮಾಡಿ 90 00:06:16,211 --> 00:06:19,798 ಕಟ್ಟಡದ ಮತ್ತು ಮನೆಯ 91 00:06:20,632 --> 00:06:22,843 ಒಳ ಹೊರ ಹೋಗಲು. 92 00:06:22,968 --> 00:06:25,887 ಅವನು ಹಣ ಪಡೆದು ಓಡಿ ಹೋದಂತೆ ಕಾಣುತ್ತಿತ್ತು 93 00:06:26,012 --> 00:06:28,348 ಆ ನಾಯಿಯನ್ನೂ ಸಾಯಲು ಬಿಟ್ಟು. 94 00:06:38,400 --> 00:06:40,235 ಆದರೆ ಅವನಿಗೆ ಹೀರೋ ಆಗಬೇಕಿತ್ತು. 95 00:06:40,360 --> 00:06:41,695 ನಿನ್ನಿಂದ ಕಲಿತದ್ದೇ? 96 00:06:41,695 --> 00:06:43,446 ಇದು ನಿನ್ನ ತಪ್ಪೇ? 97 00:06:49,411 --> 00:06:50,495 ಪುನರ್ಮಿಲನ ಸಾಕು. 98 00:06:50,495 --> 00:06:53,540 ನನಗೆ 650 ಲಕ್ಷ ಡಾಲರ್ ಕೊಡುವವನನ್ನು ಭೇಟಿ ಆಗುವುದಿದೆ. 99 00:06:54,207 --> 00:06:57,711 ಅವರಿಬ್ಬರನ್ನು ಹೆಲಿಕಾಪ್ಟರ್ ನಲ್ಲಿ ಹಾಕಿ, ಆಮೇಲೆ ಈ ಬೇವರ್ಸಿಯನ್ನು ಕರೆದೊಯ್ಯಿರಿ. 100 00:07:09,097 --> 00:07:10,307 ನಾನು ನಿನಗೆ ಏನೇ ಮಾಡಿದರೂ, 101 00:07:10,307 --> 00:07:12,267 ನೀಗ್ಲೇ ಎಲ್ಲಿರುವಳೆಂದು ನೀನು ಹೇಳುವುದಿಲ್ಲ, ಅಲ್ಲವೇ? 102 00:07:14,644 --> 00:07:17,898 ಹೌದು. ಹೊಲಸು ನನ್ನ ಮಗನೇ! 103 00:07:39,336 --> 00:07:40,545 ಮಾತು ಉಳಿಸಿಕೊಂಡೆ, ಲಾವೋಯ್. 104 00:07:41,421 --> 00:07:42,589 ಒಳ್ಳೆಯದು. 105 00:07:55,060 --> 00:07:56,144 ಛೇ. 106 00:08:10,367 --> 00:08:12,702 ಏನನ್ನೂ ಬಿಡುವುದು ಬೇಡ ಇಲ್ಲಿ. ಇದನ್ನು ಫ್ಲಶ್ ಮಾಡು. 107 00:08:12,702 --> 00:08:17,207 ನನಗೆ ಹಣ ಸಿಕ್ಕಿದ ಮೇಲೆ, ನನ್ನ ಕೆಲವು ಜನರನ್ನು ಕಳಿಸಿ, 108 00:08:17,207 --> 00:08:19,334 ನೀಗ್ಲೇಯ ತಂದೆಯನ್ನು ಕರೆತರಲು ಹೇಳುವೆ. 109 00:08:19,334 --> 00:08:21,628 ಅದು ಅವಳನ್ನು ಹೊರತರಬೇಕು. ಅಲ್ಲವೇ? 110 00:08:21,628 --> 00:08:24,047 ನನಗೆ ನಿಜವಾಗಿಯೂ ಸುಳಿವು ಬಿಡಲು ಇಷ್ಟ ಇಲ್ಲ. 111 00:08:42,107 --> 00:08:43,525 ಆ ಮಕ್ಕಳು ತಿರುಗಿ ಬಂದರೇ? 112 00:08:45,360 --> 00:08:46,945 ಓಡಿಸು ಅವರನ್ನು. 113 00:08:46,945 --> 00:08:48,947 ನಾವು ಹೋಗುವಾಗ ಯಾವುದೇ ಸಾಕ್ಷಿಗಳು ಇರುವುದು ಬೇಡ. 114 00:09:09,718 --> 00:09:10,969 ಹೇ! 115 00:09:11,094 --> 00:09:14,431 ನಿಮಗೆ ಇಲ್ಲಿ ಬರಬಾರದು ಎಂದು ಹೇಳಿದ್ದೆನಲ್ಲವೇ? 116 00:09:22,689 --> 00:09:25,317 ಕೊನೆ ಬಾರಿ ಹೇಳುತ್ತಿದ್ದೇನೆ, ಏಟು ತಿನ್ನುವ ಮುಂಚೆ 117 00:09:25,317 --> 00:09:27,986 ಕಾರು ಹತ್ತಿ ಹೊರಡಿ. 118 00:09:27,986 --> 00:09:30,905 ಸರಿ, ಬಾಸ್. ಈ ಬಿಯರ್ ಮುಗಿಸಿ ಹೊರಡುವೆ. ಸರಿಯೇ? 119 00:09:38,330 --> 00:09:41,041 ಅವರನ್ನು ಕಾಪ್ಟರ್ ಹತ್ತಿಸಿದ ತಕ್ಷಣ 120 00:09:41,041 --> 00:09:44,336 ಈ ಸಂಗೀತ ಏಕೆ ಇನ್ನೂ ನುಡಿಯುತ್ತಿದೆ ನೋಡಿ ಬಾ. 121 00:09:56,973 --> 00:09:58,516 ಏನಾಗುತ್ತಿದೆ? 122 00:09:58,516 --> 00:09:59,434 ಈಗ! 123 00:10:47,440 --> 00:10:51,319 ಹೇ! ಹೇ! ತಲೆ ಬಗ್ಗಿಸು, ಇಲ್ಲೇ ಇರು! 124 00:10:51,319 --> 00:10:53,154 - ಲೆನಾಕ್ಸ್, ಅಲ್ಲಿ! - ಇಲ್ಲೇ ಇರು! 125 00:11:23,226 --> 00:11:24,769 - ಹೇ, ಬಾಸ್. - ನೀಗ್ಲೇ. 126 00:11:24,769 --> 00:11:26,229 ನಾವು ಈ ಜಾಗವನ್ನು ತೊರೆಯಬೇಕು. 127 00:11:26,229 --> 00:11:28,606 ಖರೀದಿದಾರನನ್ನು ಭೇಟಿಯಾಗಿ, ಹಣ ಪಡೆದು, 128 00:11:28,606 --> 00:11:32,402 ಪೊಲೀಸರು ಮತ್ತು ಫೆಡ್ ನವರು ಬರುವ ಮುಂಚೆ ದೇಶ ಬಿಟ್ಟು ಹೋಗಬೇಕು. 129 00:11:34,779 --> 00:11:36,823 ಜೆಫರ್ಸನ್ ಏರ್ಪ್ಲೇನ್? ಹೆಂಡ್ರಿಕ್ಸ್ ಯಾಕಲ್ಲ? 130 00:11:36,823 --> 00:11:39,409 ಸ್ವಾನ್ ಮಾತು ಒಪ್ಪುವೆ. ಹೆಂಡ್ರಿಕ್ಸ್ ಅಷ್ಟೇನೂ ಚೆನ್ನಾಗಿಲ್ಲ. 131 00:11:41,161 --> 00:11:43,496 - ಉಳಿದವರನ್ನು ಏನು ಮಾಡುವುದು? - ಅವರು ಸಾಯಲಿ. 132 00:11:57,844 --> 00:11:58,761 ಲ್ಯಾಂಗ್ಸ್ಟನ್ ಹೊರಟ. 133 00:12:05,435 --> 00:12:06,811 ಇದನ್ನು ಹಾರಿಸು ಬೇಗ! 134 00:12:06,811 --> 00:12:09,147 ಬೆಚ್ಚಗಾಗಲು ಇದಕ್ಕೆ ಸ್ವಲ್ಪ ಹೊತ್ತು ಬೇಕು. 135 00:12:09,147 --> 00:12:11,441 ಈಗಲೇ ಹೊರಡು, ಸೂಳೆಮಗನೇ! 136 00:12:11,441 --> 00:12:12,358 ಸರಿ. 137 00:12:16,154 --> 00:12:17,322 ಎಷ್ಟು ಗುಂಡು ಬಾಕಿ ಇದೆ? 138 00:12:17,322 --> 00:12:20,200 ನಿನ್ನಷ್ಟು ನಿಧಾನವಾಗಿ ಓಡುವವನನ್ನು ರಕ್ಷಿಸಲು ಆಗುವಷ್ಟು ಇಲ್ಲ. 139 00:12:20,200 --> 00:12:21,409 ಹೇಗಾದರೂ ಮಾಡಲೇಬೇಕು. 140 00:12:21,409 --> 00:12:22,494 ಮೂರರ ಎಣಿಕೆಗೆ. 141 00:12:22,494 --> 00:12:25,371 ಒಂದು, ಎರಡು, ಮೂರು. 142 00:12:42,096 --> 00:12:42,931 ಇಗೋ ಹೊರಟೆ. 143 00:12:54,067 --> 00:12:54,943 ಛೇ! 144 00:13:10,708 --> 00:13:11,709 ಹಿಂದಿನ ಬಾಗಿಲು ತೆರೆ. 145 00:13:22,011 --> 00:13:23,304 ಮಹಿಳೆಯರು ಮೊದಲು! 146 00:13:24,180 --> 00:13:25,682 ಈಗ ನಿನ್ನ ಬಾರಿ, ಚಿನ್ನ. 147 00:13:28,518 --> 00:13:30,603 ಹಾರುವ ಸಮಯ ಬಂದಾಯಿತು. 148 00:13:35,817 --> 00:13:36,651 ಛೇ! 149 00:13:57,964 --> 00:14:00,008 ಛೇ! ಬೇಗ! 150 00:14:04,804 --> 00:14:06,472 ರೀಚರ್! 151 00:14:25,700 --> 00:14:26,826 ಇಲ್ಲ! 152 00:14:40,381 --> 00:14:42,175 ದೇವರೇ, ರೀಚರ್! 153 00:14:42,175 --> 00:14:45,053 ನಿನಗೆ ಯಾವಾಗ ಬಿಟ್ಟುಬಿಡಬೇಕು ಗೊತ್ತಿಲ್ಲ! 154 00:14:57,357 --> 00:14:59,984 ಗಟ್ಟಿಗ ಬೇವರ್ಸಿ ನೀನು, ಆದಂತೂ ನಿಜ. 155 00:15:03,446 --> 00:15:04,739 ಸಾಯಿಸು ಅವನನ್ನು. 156 00:15:08,826 --> 00:15:10,078 ಒಂದು ಒಪ್ಪಂದ ಮಾಡೋಣ. 157 00:15:10,078 --> 00:15:13,122 ನಾನು ನಿನ್ನ ಗೆಳೆಯನ ಹಿತ್ತಾಳೆ ನಕಲ್ಸ್ ಬಳಸಿ 158 00:15:13,122 --> 00:15:15,708 ನಿನ್ನ ಬುರುಡೆ ಒಡೆಯಬಹುದು, 159 00:15:15,708 --> 00:15:18,127 ಅಥವಾ ನೀನು ಆ ನಾಯಿಯನ್ನು ಬೀಳಲುಬಿಡಬಹುದು, 160 00:15:18,795 --> 00:15:19,921 ಮತ್ತು ನಾನು ಕರುಣೆಯಿಂದ 161 00:15:19,921 --> 00:15:22,048 ನಂತರ ನಿನ್ನನ್ನೂ ಹೊರಗೆಸೆಯುವೆ. 162 00:15:40,316 --> 00:15:41,150 ಇಲ್ಲ. 163 00:15:43,361 --> 00:15:44,195 ಇರು. 164 00:15:49,033 --> 00:15:50,493 ಇದನ್ನು ಸರಿಯಾಗಿ ಹಾರಿಸಿದರೆ ಸರಿ, 165 00:15:50,493 --> 00:15:53,246 ಇಲ್ಲವಾದರೆ ನಾನು ಹಾರಿಸಬಹುದೇ ತಿಳಿಯಬೇಕಾಗುತ್ತೆ, ಅದು ಚೆನ್ನಾಗಿರಲ್ಲ. 166 00:15:53,246 --> 00:15:54,163 ಸರಿ, ಮೇಡಮ್! 167 00:15:54,163 --> 00:15:56,708 ಇರು. 168 00:16:00,670 --> 00:16:01,713 ಇಲ್ಲ! 169 00:16:01,713 --> 00:16:03,339 ನೀನಿನ್ನೂ ಕ್ಷಿಪಣಿಗಳು 170 00:16:03,339 --> 00:16:05,508 ಭಯೋತ್ಪಾದಕರ ಕೈಸೇರದಂತೆ ತಡೆಯಬಹುದು. 171 00:16:05,508 --> 00:16:07,051 ಇಲ್ಲ! 172 00:16:07,051 --> 00:16:10,179 ನನ್ನನ್ನು ಕೊಲ್ಲಬೇಡ, ಮಹಮೂದನನ್ನು ನಾನೆಲ್ಲಿ ಭೇಟಿಯಾಗುವವನಿದ್ದೆ ಹೇಳುವೆ. 173 00:16:10,179 --> 00:16:12,849 ಆ ಮಾಹಿತಿ ನನಗೆ ಬೇಕಿರಬಹುದು ಎಂಬುದು ನಿನ್ನ ಅನಿಸಿಕೆ, ಲ್ಯಾಂಗ್ಸ್ಟನ್. 174 00:16:14,183 --> 00:16:17,687 ಆದರೆ ತನಿಖೆಯಲ್ಲಿ ಅನಿಸಿಕೆಗಳು ಕೊಲ್ಲುತ್ತವೆ. 175 00:16:17,687 --> 00:16:18,646 ಇಲ್ಲ! 176 00:16:28,823 --> 00:16:30,867 ಡೈಲಾಗ್ ಚೆನ್ನಾಗಿತ್ತು. 177 00:16:30,867 --> 00:16:34,036 ಎ.ಎಂ. ಎಲ್ಲಿ ಹೋಗುತ್ತಿರುವ ಎಂದು ನಿನಗೆ ಗೊತ್ತು ಅನಿಸುತ್ತೆ. 178 00:16:34,036 --> 00:16:36,956 ನನಗೆ ಗೊತ್ತಿಲ್ಲ, ಆದರೆ ಇವನಿಗೆ ಗೊತ್ತು. 179 00:16:37,081 --> 00:16:39,125 ಏನು, ಹಾರಾಟಗಾರ? 180 00:16:39,125 --> 00:16:41,544 ಒಬ್ಬ ನ್ಯೂ ಏಜ್ ಇಂಜಿನಿಯರ್ ನ ಮನೆಯಲ್ಲಿ ಭೇಟಿಯಾಗುವವರಿದ್ದರು, 181 00:16:41,544 --> 00:16:45,256 ಅವನು ಲಿಟಲ್ ವಿಂಗ್ ಚಿಪ್ಸ್ ಅಳವಡಿಕೆ ಕಲಿಸುವವನಿದ್ದ. 182 00:16:45,381 --> 00:16:48,342 ನನ್ನ ಬಳಿ ವಿಳಾಸವಿದೆ. ದಯವಿಟ್ಟು, ನನ್ನನ್ನು ಕೊಲ್ಲಬೇಡಿ. 183 00:16:49,051 --> 00:16:49,886 ಅಲ್ಲಿಗೆ ಕರೆದೊಯ್ಯಿ. 184 00:17:33,596 --> 00:17:35,765 ಅದ್ಭುತ. ಲ್ಯಾಂಗ್ಸ್ಟನ್ ಬಂದಾಯಿತು. 185 00:17:59,831 --> 00:18:00,873 ನೀನು ಲ್ಯಾಂಗ್ಸ್ಟನ್ ಅಲ್ಲ. 186 00:18:02,458 --> 00:18:03,292 ಅದು ನಿಜ. 187 00:18:07,004 --> 00:18:08,214 ಒಳಗೆ ನಡೆ. 188 00:18:18,474 --> 00:18:21,561 ಏನೋ ತಪ್ಪಾಗಿರಬೇಕು. ನನಗೆ ನೀವ್ಯಾರೂ ಗೊತ್ತಿಲ್ಲ. 189 00:18:21,561 --> 00:18:23,354 ನಿರಾಶೆಯಾಯಿತೇ? 190 00:18:23,354 --> 00:18:25,940 ನಿನ್ನ ವಿಜ್ಞಾನಿ ಮತ್ತು ಪೈಲಟ್ ಹಿತ್ತಲಲ್ಲಿ ಬಂಧಿಯಾಗಿದ್ದಾರೆ. 191 00:18:27,817 --> 00:18:29,193 ನೀನು ನಮ್ಮ ಗೆಳೆಯರನ್ನು ಕೊಂದೆ. 192 00:18:33,823 --> 00:18:35,074 ಈ ವಸ್ತುಗಳಿಗಾಗಿ. 193 00:18:40,288 --> 00:18:41,122 ನೀನವರನ್ನು ಕೊಂದೆ. 194 00:18:41,122 --> 00:18:44,542 ನಿಮಗೆ ಬೇಜಾರಾಗಿರುವುದು ಅರ್ಥ ಆಗುತ್ತೆ, ಆದರೆ ನಾನವರನ್ನು ಕೊಲ್ಲಲಿಲ್ಲ. 195 00:18:44,542 --> 00:18:45,626 ನನಗವರು ಗೊತ್ತೂ ಇರಲಿಲ್ಲ. 196 00:18:45,626 --> 00:18:46,752 ಆದರೆ ನನಗೆ ನೀನು ಗೊತ್ತು. 197 00:18:46,752 --> 00:18:50,548 ನಿನಗೆ ಹಣ ಸಿಗುತ್ತಿರುವವರೆಗೂ, ಎಷ್ಟು ಜನ ಸತ್ತರೂ ನಿನಗೇನೂ ಚಿಂತೆ ಇಲ್ಲ. 198 00:18:50,548 --> 00:18:52,216 ನನ್ನನ್ನು ಬಂಧಿಸಿ ನಿಮ್ಮ ಕೆಲಸ ಮುಗಿಸಿ. 199 00:18:53,968 --> 00:18:58,472 ಹಾಗೆ ಮಾಡಬಹುದು, ಆದರೆ ನಿನ್ನಂತಹ ವ್ಯಕ್ತಿ 200 00:19:00,474 --> 00:19:03,603 ದೊಡ್ಡ ವಕೀಲನನ್ನು ಇಟ್ಟುಕೊಂಡಿರಬಹುದು. 201 00:19:04,270 --> 00:19:07,732 ಒಂದು ಅವಕಾಶ ನೀಡುವೆವು ನಿನಗೆ. ಈ ಅಸ್ತ್ರಗಳನ್ನು ಯಾರಿಗೆ ಮಾರಬೇಕೆಂದಿದ್ದೆ ಹೇಳು. 202 00:19:08,316 --> 00:19:11,861 ಕ್ಷಮಿಸಿ, ಹೇಳಲಾಗಲ್ಲ. ಅದು ನನ್ನ ಹೆಸರು, ವ್ಯವಹಾರ ಎರಡನ್ನೂ ಕೆಡಿಸುತ್ತೆ. 203 00:19:11,861 --> 00:19:14,071 ನಿಮಗೆ ಅರ್ಥವಾಗದೆ ಇರಬಹುದು. 204 00:19:14,071 --> 00:19:15,531 ನೀವು ಆದರ್ಶವಾದಿಗಳು. 205 00:19:16,198 --> 00:19:18,409 ಅಷ್ಟಲ್ಲದೆ, ನಿಮಗೆ ಸಮಸ್ಯೆ ಇರುವುದು ನನ್ನಿಂದಲ್ಲ. 206 00:19:18,409 --> 00:19:20,369 ನಾನು ಅಸ್ತ್ರಗಳನ್ನು ಬಳಸಲ್ಲ, ದಲ್ಲಾಳಿ ಅಷ್ಟೇ. 207 00:19:20,369 --> 00:19:21,829 ಇದು ವ್ಯವಹಾರ ಅಷ್ಟೇ. 208 00:19:21,829 --> 00:19:23,372 ನೀನು ಕಡಿಮೆ ತಪ್ಪು ಮಾಡಿರುವೆಯೆಂದೇ? 209 00:19:23,372 --> 00:19:24,498 ಹೌದು. 210 00:19:24,498 --> 00:19:28,377 ಬಂದೂಕನ್ನು ಮಾರುವ ಮತ್ತು ಬಳಸುವ ಆಯ್ಕೆ ಇದ್ದಲ್ಲಿ, ನಾನು ಮಾರಲು ಇಷ್ಟಪಡುವೆ. 211 00:19:28,377 --> 00:19:30,796 ಒಬ್ಬ ಮನುಷ್ಯ ಗುಂಡು ಹಾರಿಸಲು ಅಳವಡಿಸಿಕೊಳ್ಳಬೇಕಾದ 212 00:19:30,796 --> 00:19:33,299 ಮೂಲ ಮನಸ್ಥಿತಿ... 213 00:20:13,464 --> 00:20:14,298 ಇಗೋ. 214 00:20:28,145 --> 00:20:29,522 ಗುಂಡು ಹಾರುವ ಶಬ್ದ ಕೇಳಿದರೆ, 215 00:20:29,522 --> 00:20:31,899 ಇನ್ಯಾರೂ ಉಳಿದಿಲ್ಲ ಅನಿಸುತ್ತೆ. 216 00:20:31,899 --> 00:20:32,984 ಹೌದು. 217 00:20:34,235 --> 00:20:36,070 ಇವರಿಬ್ಬರನ್ನು ಏನು ಮಾಡುವುದು? 218 00:20:42,326 --> 00:20:44,495 ಹೇ, ನಾನು ಯಾರನ್ನೂ ಕೊಲ್ಲಲಿಲ್ಲ, 219 00:20:44,495 --> 00:20:46,664 ಆ ಕ್ಷಿಪಣಿಗಳ ಬಗ್ಗೆಯೂ ನನಗೆ ತಿಳಿದಿಲ್ಲ. 220 00:20:46,664 --> 00:20:49,166 ಕಾಪ್ಟರ್ ಹಾರಿಸುತ್ತಿದ್ದೆನಷ್ಟೆ. ನನ್ನ ಕೆಲಸ ಮಾಡುತ್ತಿದ್ದೆ. 221 00:20:49,959 --> 00:20:51,002 ನಿನ್ನ ಬಳಿ ಏನು ಕಾರಣವಿದೆ? 222 00:20:51,002 --> 00:20:53,337 ನಾನವನಿಗೆ ಚಿಪ್ಸ್ ಅಳವಡಿಕೆ ಕಲಿಸುವವನಿದ್ದೆ. 223 00:20:53,337 --> 00:20:56,257 ಅದನ್ನು ಹೇಗೆ ಬಳಸುವವರಿದ್ದರು ನನಗೆ ಗೊತ್ತಿರಲಿಲ್ಲ. 224 00:20:56,257 --> 00:20:58,759 ದಯವಿಟ್ಟು, ನಾನೊಬ್ಬ ಇಂಜಿನಿಯರ್ ಅಷ್ಟೇ. 225 00:21:03,806 --> 00:21:05,808 ತೊಲಗಿ ಇಲ್ಲಿಂದ. ಇಬ್ಬರೂ. 226 00:21:06,559 --> 00:21:08,102 - ಸರಿ, ಧನ್ಯವಾದ. - ಧನ್ಯವಾದ. 227 00:21:38,007 --> 00:21:39,592 ಎಲ್ಲಾ ಮುಗಿಸಬೇಡ, ಓ'ಡೊನೆಲ್. 228 00:21:39,592 --> 00:21:40,509 ಹೂಂ. 229 00:21:50,728 --> 00:21:51,562 ತಂಪಾಗಿದೆ ಇವತ್ತು. 230 00:21:52,563 --> 00:21:54,690 ಇನ್ನೂ ತಂಪಾಗುತ್ತೆ ಇನ್ನು. 231 00:21:54,690 --> 00:21:55,608 ಹೂಂ. 232 00:21:58,319 --> 00:22:01,947 ಅವರು ನದಿಯ ಬಳಿ ಹೋಗುವವರೆಗೂ ಕಾಯಿರಿ. ಆ ಗುಡ್ಡ ದಾಟಲಿ. 233 00:22:01,947 --> 00:22:03,240 ಸರಿ. 234 00:22:15,628 --> 00:22:16,879 ಸಾಕು ಅನಿಸುತ್ತೆ, ನೀಗ್ಲೇ. 235 00:22:16,879 --> 00:22:18,172 ಸ್ಫೋಟಗೊಳ್ಳಲಿದೆ! 236 00:22:26,931 --> 00:22:28,224 ಕಾಯಿರಿ. 237 00:22:36,482 --> 00:22:38,067 ಲಿಟಲ್ ವಿಂಗ್ ಕೆಲಸ ಮಾಡುತ್ತೆ ಹಾಗಿದ್ದರೆ. 238 00:22:43,489 --> 00:22:45,491 ಏನು, ತಮಾಷೆಯಾ? 239 00:22:45,491 --> 00:22:47,618 ಕ್ಷಮಿಸಿ, ಆದರೆ ಸಚಿವ ಲಾವೋಯ್ ಸ್ಪಷ್ಟವಾಗಿ ಹೇಳಿದರು. 240 00:22:47,618 --> 00:22:49,620 ಏನಾಯಿತೆಂದು ಯಾರಿಗೂ ಗೊತ್ತಾಗಬಾರದು ಎಂದು. 241 00:22:49,620 --> 00:22:51,705 ನಿಮ್ಮಲ್ಲಿ ಯಾರಾದರೂ ಬಾಯಿ ಬಿಡುವ ಅಪಾಯ ಇದ್ದೇ ಇದೆ. 242 00:22:51,705 --> 00:22:53,207 ನಿಮ್ಮ ಬಗ್ಗೆ ಕಡಿಮೆ ಅಂದಾಜು ಮಾಡಿದೆ. 243 00:22:53,207 --> 00:22:54,834 ಕೊಲ್ಲಲು ಹೋಗುವುದಿಲ್ಲ ಅಂದುಕೊಂಡೆಯಾ? 244 00:22:54,834 --> 00:22:56,210 ಇಷ್ಟು ಕಾಯುವಿರಿ ಅಂದುಕೊಳ್ಳಲಿಲ್ಲ. 245 00:22:56,210 --> 00:22:58,712 ಅವರನ್ನು ಕಾಪ್ಟರ್ ಏರಲು ಬಿಟ್ಟ ತಕ್ಷಣ ಕೊಲ್ಲುವಿರಿ ಅಂದುಕೊಂಡೆ. 246 00:22:58,712 --> 00:23:00,005 ನಾನೂ ಸಹ. 247 00:23:00,005 --> 00:23:02,800 ಬಹುಶಃ ಅವರಿಗೆ ನಾನು ಗುಂಡು ಹಾರಿಸುವುದು ನೋಡಬೇಕಿತ್ತು. 248 00:23:02,800 --> 00:23:04,009 ಚೆನ್ನಾಗಿತ್ತು ಅದು. 249 00:23:04,885 --> 00:23:07,930 ನನಗೆ ಗೊತ್ತಿತ್ತು ಲಾವೋಯ್ ಕೈತೊಳೆದುಕೊಳ್ಳುವ ಮನುಷ್ಯ ಎಂದು. 250 00:23:07,930 --> 00:23:09,974 ಅದಕ್ಕೇ ನಾನು ಅವನಿಗೆ ಮಾತ್ರ ಕರೆ ಮಾಡಲಿಲ್ಲ, 251 00:23:09,974 --> 00:23:11,934 ಹೋಂಲ್ಯಾಂಡ್ ನ ಓಮರ್ ಕರೀಂಗೂ ಸಹ ಕರೆ ಮಾಡಿದ್ದೆ. 252 00:23:13,185 --> 00:23:15,146 ಅದು ಅವನೇ ಅನಿಸುತ್ತೆ. 253 00:23:20,317 --> 00:23:21,318 ಕೆಳಗೆ! 254 00:23:21,318 --> 00:23:23,696 ಕೈಗಳು. ನಿಮ್ಮ ಕೈಗಳನ್ನು ತೋರಿಸಿ. ನಡೆಯಿರಿ. 255 00:23:23,696 --> 00:23:25,197 ಸ್ವಲ್ಪ ತಡವಾಗಿದ್ದರೆ? 256 00:23:25,197 --> 00:23:26,657 ಸರ್ಕಾರ ಯಾವಾಗ ತಾನೇ ಬೇಗ ಬರುತ್ತೆ? 257 00:23:28,659 --> 00:23:31,453 - ಲಾವೋಯ್? - ಟಿಎಸಿ ತಂಡ ಕಾಯುತ್ತಿದೆ. 258 00:23:31,579 --> 00:23:33,706 ನೀನು ಆದೇಶ ಕೊಡಬಹುದು ಅಂದುಕೊಂಡೆ. 259 00:23:49,805 --> 00:23:50,931 ಮುಗಿಯಿತೇ? 260 00:23:50,931 --> 00:23:52,641 ಬಹುತೇಕ. 261 00:23:52,641 --> 00:23:55,561 ಒಂದು ಕೊನೆಯ ಬಾಧ್ಯತೆಯನ್ನು ನೋಡಿಕೊಳ್ಳಬೇಕಿದೆ. 262 00:23:55,561 --> 00:23:57,646 ಇದನ್ನೇ ಅಲ್ಲವೇ "ವಿನ್-ವಿನ್" ಎನ್ನುವುದು. 263 00:24:01,233 --> 00:24:02,234 ಒಪ್ಪಿಗೆ ಇದೆ. 264 00:24:02,902 --> 00:24:04,862 ಲಾವೋಯ್, ಹೋಂಲ್ಯಾಂಡ್ ಸೆಕ್ಯುರಿಟಿ. 265 00:24:04,987 --> 00:24:07,156 ಕೆಳಗೆ! ಮಂಡಿಯೂರು! 266 00:24:07,156 --> 00:24:09,450 ಕೈಗಳನ್ನು ತೋರಿಸು! ನಡೆ! 267 00:24:10,492 --> 00:24:12,369 ಲಾವೋಯ್ ನ ದಿನ ಸರಿಯಿಲ್ಲ. 268 00:24:12,369 --> 00:24:13,537 ನಮ್ಮ ನಡುವೆ ಒಪ್ಪಂದವಿತ್ತು. 269 00:24:14,163 --> 00:24:15,331 ಹೊರಡು. ಇದನ್ನು ನೋಡಿಕೊಳ್ಳುವೆ. 270 00:24:20,836 --> 00:24:21,795 ಇನ್ನೊಂದು ವಿಷಯ. 271 00:24:21,795 --> 00:24:22,880 ಹಣ ಎಲ್ಲಿ? 272 00:24:25,174 --> 00:24:26,425 ಯಾವ ಹಣ? 273 00:25:13,722 --> 00:25:15,015 ರಾತ್ರಿ ಕೆಟ್ಟದಿತ್ತು ಅನಿಸುತ್ತೆ. 274 00:25:15,975 --> 00:25:17,059 ಇನ್ನೂ ಕೆಟ್ಟದ್ದು ನೋಡಿದ್ದೇವೆ. 275 00:25:17,059 --> 00:25:18,477 ಏನು ತರಲಿ? 276 00:25:18,477 --> 00:25:20,145 ಕಪ್ಪು ಕಾಫಿ. 277 00:25:21,272 --> 00:25:23,274 - ನನಗೂ. - ಹೇ, ಒಂದು ಪಾತ್ರೆ ಪೂರ್ತಿ ತಂದುಬಿಡಿ. 278 00:25:24,108 --> 00:25:25,150 ನಿಮಗೆ, ಮೇಡಮ್. 279 00:25:25,150 --> 00:25:26,110 ತಿಂಡಿ. 280 00:25:26,110 --> 00:25:29,113 ಪಾಪ್ಸ್, ಪಫ್ಸ್ ಅಥವಾ ಪೆಬಲ್ಸ್ ಅದೇ ಕ್ರಮದಲ್ಲಿ. 281 00:25:29,113 --> 00:25:30,614 ಒಂದು ಚಾಕ್ಲೆಟ್ ಮಿಲ್ಕ್ಶೇಕ್, ಧನ್ಯವಾದ. 282 00:25:38,122 --> 00:25:38,956 ಮತ್ತೆ, 283 00:25:40,165 --> 00:25:42,584 ಈ 650 ಲಕ್ಷ ಹಸಿರು ಎಲೆಗಳನ್ನು ಏನು ಮಾಡುವುದು? 284 00:25:43,127 --> 00:25:44,336 ತುಂಬಾ ಜಾಸ್ತಿ ಎಲೆಗಳಿವೆ. 285 00:25:44,336 --> 00:25:47,631 ಆದ ನೋವುಗಳನ್ನು ಮರೆಮಾಚಾಲು ಅವನ್ನು ಬಳಸಬಹುದು. 286 00:25:47,631 --> 00:25:50,050 ಖಂಡಿತ, ಆದರೆ ನಿರ್ದಿಷ್ಟವಾಗಿ ಯಾವುದನ್ನು? 287 00:25:51,760 --> 00:25:52,845 ದೊಡ್ಡ ನಿರ್ಧಾರಗಳು. 288 00:25:52,845 --> 00:25:57,224 ಪುಣ್ಯ, ನಾನು ಇಲ್ಲಿನ ಹಿರಿಯ ಅಧಿಕಾರಿ ಅಲ್ಲ, 289 00:25:57,224 --> 00:25:58,642 ಅಂತಹ ಆಯ್ಕೆಗಳನ್ನು ಮಾಡಲು. 290 00:25:58,642 --> 00:26:00,227 ನನ್ನತ್ತ ನೋಡಬೇಡ. 291 00:26:00,227 --> 00:26:02,062 ಏನಾಶ್ಚರ್ಯ? 292 00:26:02,062 --> 00:26:03,439 ಯಾವುದೇ ಅಡಮಾನಗಳಿಲ್ಲದ, 293 00:26:03,439 --> 00:26:06,358 ಕಾರು ಪಾವತಿಗಳು ಮತ್ತು ಕೆಲಸ ಇಲ್ಲದವನಿಗೆ ಜವಾಬ್ದಾರಿಗಳು ಬೇಡವಂತೆ. 294 00:26:06,358 --> 00:26:09,695 ನಿನಗೆ ಹಣದ ಮೇಲೆ ಆಸೆ ಇಲ್ಲ ಎಂದು ಗೊತ್ತು, ರೀಚರ್. 295 00:26:09,820 --> 00:26:12,531 ನೀನೇ ಜವಾಬ್ದಾರಿ ತಗೋ. ನಿನ್ನಿಂದ ಆಗುತ್ತೆ, ದೊಡ್ಡಣ್ಣ. 296 00:26:14,950 --> 00:26:15,784 ಧನ್ಯವಾದ. 297 00:26:15,784 --> 00:26:16,744 ಈಗಷ್ಟೇ ಬಂದ ವರದಿ ಪ್ರಕಾರ, 298 00:26:16,744 --> 00:26:18,787 ಪೊಲೀಸರು ಹಡ್ಸನ್ ನದಿಯ ಬಳಿ ಇಂದು ಬೆಳಗ್ಗೆ 299 00:26:18,787 --> 00:26:20,247 ಹೆಲಿಕಾಪ್ಟರ್ ನ ಅವಶೇಷಗಳೊಂದಿಗೆ 300 00:26:20,247 --> 00:26:23,083 ಎರಡು ಶವಗಳನ್ನು ಕಂಡುಕೊಂಡಿದ್ದಾರೆ. 301 00:26:23,083 --> 00:26:24,001 ಭಯಾನಕ. 302 00:26:24,001 --> 00:26:26,003 - ಅಪಘಾತವನ್ನು ನೋಡಿದ ಮೀನುಗಾರನೊಬ್ಬ... - ಹೂಂ. 303 00:26:26,003 --> 00:26:28,047 - ನಾಚಿಕೆಗೇಡು. - ...ಅದರಿಂದ ಹೊಗೆ ಬರುತ್ತಿತ್ತು, 304 00:26:28,047 --> 00:26:31,050 ನಂತರ ಸ್ಫೋಟಗೊಂಡಿತು ಎಂದು ಹೇಳಿಕೆ ನೀಡಿದ್ದಾನೆ. 305 00:26:31,050 --> 00:26:34,887 ತನಿಖಾಧಿಕಾರಿಗಳು ವ್ಯವಸ್ಥೆಯಲ್ಲಿ ದೋಷ 306 00:26:34,887 --> 00:26:36,680 ಅಥವಾ ಪೈಲಟ್ ನ ದೋಷ ಇರಬಹುದೆಂದು ಊಹಿಸಿದ್ದಾರೆ. 307 00:26:36,680 --> 00:26:39,391 ನಿನ್ನ ಹೋಂಲ್ಯಾಂಡ್ ಗೆಳೆಯ ಎಲ್ಲಾ ನೋಡಿಕೊಂಡಿರುವಂತಿದೆ. 308 00:26:41,352 --> 00:26:42,353 ಐವತ್ತು ಸೆಂಟ್ ಗಳಿವೆಯೇ? 309 00:26:42,895 --> 00:26:45,314 ನಿನ್ನಿಂದ ಮೂರು ಇಂಚು ದೂರದಲ್ಲಿ 650 ಲಕ್ಷ ಇದೆ. 310 00:26:45,314 --> 00:26:47,441 ಜೂಕ್ಬಾಕ್ಸ್ ನಲ್ಲಿ ಬಾಂಡ್ ಹಾಕಲಾಗಲ್ಲ. 311 00:26:57,534 --> 00:26:58,660 ಹೊಸ ಪಟ್ಟಿ ಶುರು ಮಾಡಿಕೋ. 312 00:27:33,112 --> 00:27:36,865 ನಿನಗೆ ಮತ್ತು ಮೈಕಿಗಾಗಿ - ವಿಶೇಷ ತನಿಖಾಧಿಕಾರಿಗಳು 313 00:27:42,830 --> 00:27:44,832 {\an8}ಅಲೈಡ್ ಕಾಮನ್ವೆಲ್ತ್ ಬ್ಯಾಂಕ್ ಏಂಜೆಲಾ ಫ್ರಾನ್ಸ್ ಗೆ ಪಾವತಿ 314 00:27:47,668 --> 00:27:49,294 ಎಲ್ಲಿಂದ ಬಂತು ಗೊತ್ತಿಲ್ಲ ಅಂದರೆ ಏನರ್ಥ? 315 00:27:49,294 --> 00:27:50,963 ನೀವು ಬ್ಯಾಂಕ್ ನವರು. 316 00:27:51,088 --> 00:27:54,133 ಹೂಂ, ನನ್ನ ಮಗುವಿನ ಹೆಸರಿನಲ್ಲಿ ಲಕ್ಷಾಂತರ ಡಾಲರ್ ಗಳು. 317 00:27:55,551 --> 00:27:57,970 ಖಂಡಿತ ನನ್ನ ಅಣ್ಣನದ್ದಲ್ಲ. 318 00:27:58,637 --> 00:27:59,805 ಅವನು ಇತ್ತೀಚೆಗಷ್ಟೇ ತೀರಿಕೊಂಡ. 319 00:28:03,225 --> 00:28:04,184 ಮಿಸ್ ಮಾಡಿಕೊಳ್ಳುವೆ. 320 00:28:05,352 --> 00:28:06,562 ಜಾಗವನ್ನು ನೋಡಿಕೋ. 321 00:28:06,562 --> 00:28:08,522 ಖಂಡಿತ. ಪತ್ರ ಕಳಿಸು. 322 00:28:10,065 --> 00:28:11,108 ಮಾಡು ಇಲ್ಲವೇ ಮಡಿ? 323 00:28:21,743 --> 00:28:23,537 ನಿನ್ನ ಅಣ್ಣನ ಸ್ಮರಣಾರ್ಥ - 110 324 00:28:36,842 --> 00:28:38,927 ಹೆಯ್, ಸ್ವಾನ್ ಹೆಸರಿನವ ಯಾರಾದರೂ ನಮಗೆ ಗೊತ್ತೇ? 325 00:28:38,927 --> 00:28:40,762 ಅಥವಾ ಮೈಸಿ ಹೆಸರಿನ ನಾಯಿ? 326 00:28:40,762 --> 00:28:41,972 ಇಲ್ಲ ಅನಿಸುತ್ತೆ. ಯಾಕೆ? 327 00:28:43,807 --> 00:28:45,184 ಪ್ರಾಣಿ ಆಶ್ರಯ 328 00:28:45,184 --> 00:28:46,852 ಅವನ ಹೆಸರಿನಲ್ಲಿ ದಾನ ಬಂದಿದೆ. 329 00:28:59,198 --> 00:29:03,160 ನೀಗ್ಲೇ ಅವರೇ, ನಾನು ಕೊನ್ನಿ ಬಂಬ್ರಿ, ಶಿಕಾಗೊ ಹೋಂ ಹೆಲ್ತ್ ನಿಂದ. 330 00:29:03,285 --> 00:29:05,078 ನಿಮಗೆ 24 ತಾಸು ಆರೈಕೆ ಮಾಡಲು 331 00:29:05,078 --> 00:29:07,414 ನಮ್ಮನ್ನು ನೇಮಿಸಲಾಗಿದೆ. 332 00:29:14,671 --> 00:29:15,881 ಅದು ನನ್ನ ತಂದೆ. 333 00:29:18,509 --> 00:29:19,593 ಏನು ಮಾಡಿದೆ? 334 00:29:19,593 --> 00:29:22,930 ನಿನಗೆ ಹಣ ಕೊಟ್ಟಿದ್ದರೆ ಇಷ್ಟವಾಗುತ್ತಿರಲಿಲ್ಲ. 335 00:29:22,930 --> 00:29:27,434 ನಿನ್ನ ತಂದೆಯಿಂದ ನೀನಿದನ್ನು ಪಡೆಯುವುದಿಲ್ಲ. ಅವರನ್ನಿನ್ನು ಜೀವನಪೂರ್ತಿ ನೋಡಿಕೊಳ್ಳುತ್ತಾರೆ. 336 00:29:27,434 --> 00:29:31,605 ಅವರಿಗೇನೇ ಬೇಕಿದ್ದರೂ. ನಿನಗಾಗಿ ಸ್ವಲ್ಪ ಉಳಿಸಿದ್ದೇನೆ. 337 00:29:36,443 --> 00:29:38,904 ನೀನು ಒಳ್ಳೆಯ ಸ್ನೇಹಿತ ಎಂದು ಎಂದಾದರೂ ಹೇಳಿದ್ದೇನೆಯೇ, ರೀಚರ್? 338 00:29:40,197 --> 00:29:41,365 ಬೇಕಾದಷ್ಟು ಬಾರಿ ಹೇಳಿಲ್ಲ. 339 00:29:47,287 --> 00:29:48,330 ನನಗೆ? 340 00:29:49,414 --> 00:29:53,001 ಭಯಾನಕ ಸಾಂತಾ ಕ್ಲಾಸ್ ನನಗಾಗಿ ಏನು ತರಲಿದ್ದಾನೆ? 341 00:29:53,001 --> 00:29:54,670 ನಿನಗೆ ಒಂದು ಪೈಸೆ ಕೂಡ ಕೊಡಲಿಲ್ಲ. 342 00:29:55,546 --> 00:29:57,089 ನಿನ್ನ ಮಕ್ಕಳ ಹೆಸರಲ್ಲಿ ಇಟ್ಟಿದ್ದೇನೆ. 343 00:29:57,089 --> 00:29:59,508 ನಿನ್ನ ಮನೆಯ ಹತ್ತಿರದ ಕ್ರೆಡಿಟ್ ಯೂನಿಯನ್ ನಲ್ಲಿ. 344 00:30:00,884 --> 00:30:04,596 ಮಕ್ಕಳ ಶಾಲಾ ಕಾಲೇಜು ಖರ್ಚಿಗೆ ಸಾಲುವಷ್ಟು. 345 00:30:04,596 --> 00:30:07,724 ಅವರಿಗೆ ಡಿಫೆನ್ಸ್ ವಕೀಲರು ಬೇಕಾಗುತ್ತಾರೆ. 346 00:30:09,893 --> 00:30:12,729 ಇನ್ನು ಹೆಚ್ಚು ಅಪಾಯವಿಲ್ಲದ ಕೆಲಸಗಳಷ್ಟೇ ತಗೋ. 347 00:30:16,024 --> 00:30:17,901 ಏನು ಹೇಳಲಿ ಗೊತ್ತಾಗುತ್ತಿಲ್ಲ. 348 00:30:17,901 --> 00:30:19,027 ಮೊದಲ ಬಾರಿಗೆ. 349 00:30:21,697 --> 00:30:24,575 ನೀನು ನಿನ್ನ ಕೆಲಸ ಬಿಡಬಹುದು. 350 00:30:24,575 --> 00:30:27,995 ನಿನ್ನ ಹೆಸರಲ್ಲಿ ಡೆಲವೇರ್ ಎಲ್ ಎಲ್ ಸಿ ಶುರು ಮಾಡಿರುವೆ. 351 00:30:27,995 --> 00:30:29,371 ನಿನ್ನದೇ ಕೆಲಸ ಶುರು ಮಾಡಿಕೋ. 352 00:30:29,371 --> 00:30:31,748 ಬೇರೆಯವರಿಗೆ ಕೆಲಸ ಮಾಡಲು ನೀನು ತುಂಬಾ ಜಾಣೆ. 353 00:30:35,836 --> 00:30:37,379 ನಾನು... 354 00:30:42,092 --> 00:30:42,926 ಧನ್ಯವಾದ. 355 00:30:46,305 --> 00:30:47,598 ನಿನಗಾಗಿ, ದೊಡ್ಡಣ್ಣ? 356 00:30:48,724 --> 00:30:50,267 ನಿನಗಾಗಿ ಏನು ತಗೊಂಡೆ? 357 00:30:53,145 --> 00:30:54,479 ಹೊಸ ಟೂತ್ಬ್ರಷ್ ಬೇಕು. 358 00:31:01,737 --> 00:31:02,904 ದೇವರೇ, ನಿಜವಾಗಿಯೂ? 359 00:31:07,701 --> 00:31:08,994 ಗೊತ್ತೇ, ರೀಚರ್, 360 00:31:08,994 --> 00:31:11,246 ನೀನು ಏನೂ ಇಲ್ಲದೆ 361 00:31:11,371 --> 00:31:15,083 ಭೂಮಿ ಮೇಲೆ ಓಡಾಡುತ್ತಿರುವೆ ಎಂದು ಗೊತ್ತಾದಾಗ 362 00:31:15,792 --> 00:31:17,127 ನಿನಗೆ ಹುಚ್ಚು ಅಂದುಕೊಂಡೆ. 363 00:31:18,837 --> 00:31:20,672 ಆದರೆ ನನ್ನಲ್ಲಿ ಎಲ್ಲೋ ಒಂದು ಭಾಗ 364 00:31:21,882 --> 00:31:24,635 ನೀನು ನಮ್ಮೆಲ್ಲರಿಗಿಂತ ಹೆಚ್ಚು ಅರಿತವ ಎಂದು ನಂಬುತ್ತೆ. 365 00:31:30,349 --> 00:31:32,934 ನಿಜ ಹೇಳಬೇಕೆಂದರೆ, 366 00:31:32,934 --> 00:31:34,686 ಸ್ವಾನ್ ಗಿಟಾರ್ ಮಿಸ್ ಮಾಡಿಕೊಳ್ಳುತ್ತಿರುವೆ. 367 00:31:40,942 --> 00:31:42,361 ಇಲ್ಲದ ಗೆಳೆಯರಿಗೆ. 368 00:31:43,111 --> 00:31:45,030 - ಇಲ್ಲದ ಗೆಳೆಯರಿಗೆ. - ಇಲ್ಲದ ಗೆಳೆಯರಿಗೆ. 369 00:31:51,411 --> 00:31:52,245 ಮತ್ತೆ, 370 00:31:54,206 --> 00:31:55,040 ಅಷ್ಟೇ ಅಲ್ಲವೇ? 371 00:31:57,793 --> 00:31:58,919 ಇದು ಜೊತೆಯಾಗಿ ಕೊನೆಯ ರಾತ್ರಿ. 372 00:32:05,467 --> 00:32:08,387 - ಇನ್ನೊಂದು ಫೋಟೋ ತೆಗೆದುಕೊಳ್ಳಬೇಕು. - ಹೂಂ, ಹೌದು. 373 00:32:09,096 --> 00:32:10,138 ಖಂಡಿತ, ಹೌದು. 374 00:32:10,138 --> 00:32:12,349 ಬರದೆ ಇರಲು ಬಿಡುವಿರಾ ನೀವು? 375 00:32:12,349 --> 00:32:14,476 - ಸಾಧ್ಯವೇ ಇಲ್ಲ, ಬಾಸ್. - ಬಾ. 376 00:32:18,855 --> 00:32:19,690 ಸರಿ. 377 00:32:51,096 --> 00:32:52,431 ಒಳ್ಳೆಯದು, ಎದ್ದಿರುವೆ. 378 00:32:54,683 --> 00:32:55,851 ನೀನು ಹೋಗಿರುವೆ ಅಂದುಕೊಂಡೆ. 379 00:32:56,601 --> 00:32:57,561 ಹೋಗಿದ್ದೆ. 380 00:32:59,646 --> 00:33:00,647 ಉಡುಗೊರೆ ತಂದೆ ನಿನಗಾಗಿ. 381 00:33:08,947 --> 00:33:12,200 ನಿನಗಾಗಿ ಈ ಹಣದಲ್ಲಿ ಏನಾದರೂ ತೆಗೆದುಕೊಳ್ಳಬಹುದು. 382 00:33:13,785 --> 00:33:17,289 ದಯವಿಟ್ಟು, ರೀಚರ್, ಇಷ್ಟಾದರೂ ತಗೋ. ನನಗಾಗಿ. 383 00:33:19,374 --> 00:33:20,208 ಸರಿ. 384 00:33:23,211 --> 00:33:24,796 ಇನ್ನೊಂದು ಮಾಡಬಹುದು ನೀನು ನನಗಾಗಿ. 385 00:33:24,796 --> 00:33:25,797 ಹೇಳು. 386 00:33:25,797 --> 00:33:29,843 ಮನೆಗೆ ಬಾ. ನನ್ನ ಅಪ್ಪ ಅಮ್ಮನನ್ನು ಭೇಟಿ ಮಾಡಿಸಬೇಕು. 387 00:33:34,681 --> 00:33:35,682 ತಮಾಷೆ ಮಾಡುತ್ತಿರುವೆ. 388 00:33:39,394 --> 00:33:40,562 ನೋಡು, 389 00:33:40,562 --> 00:33:44,733 ನಿನ್ನ ಬಗ್ಗೆ ಗೊತ್ತಿಲ್ಲ, ನಾವು ಹಿಂದಿನ ಕೆಲವು ದಿನಗಳಿಂದ ಮಾಡುತ್ತಿರುವುದು 390 00:33:44,733 --> 00:33:49,154 ಹೊಸ ವ್ಯವಹಾರವಲ್ಲ, 391 00:33:50,238 --> 00:33:52,282 ಹಳೆಯ ವ್ಯವಹಾರ. 392 00:33:57,037 --> 00:34:00,248 ನೋಡಿಕೊಳ್ಳಲೇಬೇಕಾಗಿದ್ದ ಹಳೆಯ ವ್ಯವಹಾರ. 393 00:34:00,373 --> 00:34:01,792 ಹೌದು, ಖಂಡಿತ. 394 00:34:03,001 --> 00:34:06,087 ಈ ಭೇಟಿಯನ್ನು ಮುಗಿಸುವ ಮೊದಲು 395 00:34:07,047 --> 00:34:11,009 ಇದೊಂದು ವಿಷಯ ಮತ್ತೆ ನೋಡಿಕೊಳ್ಳೋಣ. 396 00:34:12,219 --> 00:34:13,762 ನಾನೂ ಅದೇ ಹೇಳುವುದು. 397 00:34:14,763 --> 00:34:17,933 ಆದರೆ ಓ'ಡೊನೆಲ್ ಹೊರಗೆ ನಿಂತಿದ್ದ, ನಾನವನೊಂದಿಗೆ ಏರ್ಪೋರ್ಟ್ ಗೆ ಕ್ಯಾಬ್ 398 00:34:17,933 --> 00:34:20,393 ಹಂಚಿಕೊಳ್ಳುವುದಾಗಿ ಹೇಳಿದೆ. ನನ್ನ ಬಳಿ ಒಂದೇ ನಿಮಿಷ ಇರುವುದು. 399 00:34:21,728 --> 00:34:23,522 ಒಂದು ನಿಮಿಷಕ್ಕಿಂತ ಹೆಚ್ಚು ಬೇಕಾಗಬಹುದು. 400 00:34:25,524 --> 00:34:27,275 ಓ'ಡೊನೆಲ್ ಹಾಗೆ ಹೇಳಲಿಲ್ಲ. 401 00:34:37,202 --> 00:34:39,412 ನಿನಗಾಗಿ ನೀನು ಇದನ್ನೇ ಖರೀದಿಸಿದ್ದು? 402 00:34:39,538 --> 00:34:40,914 ಒಂದು ಬಸ್ ಪಾಸ್? 403 00:34:40,914 --> 00:34:42,874 ಅದು ಟ್ರೈಲ್ವೇ ಪಾಸ್. 404 00:34:42,874 --> 00:34:45,710 ಬಸ್ ನಲ್ಲಿ ಒಂದು ವರ್ಷ ದೇಶದಲ್ಲಿ ಎಲ್ಲಿ ಬೇಕಾದರೂ ಉಚಿತವಾಗಿ ಓಡಾಡಬಹುದು. 405 00:34:45,710 --> 00:34:49,047 1980 ಡಾಲರ್ ಗಳ ಉಚಿತ ಪ್ರಯಾಣ, ನೀಗ್ಲೇ. 406 00:34:49,047 --> 00:34:51,508 ಇನ್ನು 365 ದಿನಗಳು, 407 00:34:51,508 --> 00:34:54,970 ನೀನು ರೈಲುಗಳ ಮೇಲೆ ಹಾರುವೆ ಎಂಬ ಚಿಂತೆ ಮಾಡಬೇಕಿಲ್ಲ ನಾನು. 408 00:34:56,555 --> 00:34:57,681 ಅಂದ ಹಾಗೆ, 409 00:35:00,475 --> 00:35:03,228 ನನಗೆ ಈ ವ್ಯವಸ್ಥೆ ಅಷ್ಟು ಇಷ್ಟ ಆಗಲಿಲ್ಲ. 410 00:35:03,228 --> 00:35:06,189 ವರ್ಷಾನುಗಟ್ಟಲೆ ಒಬ್ಬರನ್ನೊಬ್ಬರು ನೋಡದೆ, ಮಾತೂ ಆಡದೆ, 411 00:35:06,189 --> 00:35:08,608 ನಮ್ಮ ಮೇಲೆ ಗುಂಡು ಹಾರುತ್ತಿದ್ದಾಗ ಮಾತ್ರ ಭೇಟಿ ಆಗುವುದು. 412 00:35:10,694 --> 00:35:12,821 ನೀನು ಹೆಚ್ಚು ಸಂಪರ್ಕದಲ್ಲಿರಬೇಕು. 413 00:35:14,781 --> 00:35:15,782 ಅರ್ಥ ಆಯಿತೇ? 414 00:35:16,658 --> 00:35:18,076 ಹೂಂ, ಮಾಸ್ಟರ್ ಸರ್ಜನ್ಟ್. 415 00:35:32,299 --> 00:35:33,300 ಬಾಯ್, ನೀಗ್ಲೇ. 416 00:35:38,972 --> 00:35:39,931 ಇನ್ನೊಂದು ವಿಷಯ. 417 00:35:41,349 --> 00:35:44,686 ನೀನು ವಿಶೇಷ ತನಿಖಾಧಿಕಾರಿಗಳನ್ನು ನಿನ್ನ ತಂಡ, 418 00:35:44,686 --> 00:35:47,147 ನಿನ್ನ ಸೈನ್ಯ, ನಿನ್ನ ಗೆಳೆಯರು ಎಂದು ಕರೆದೆ. 419 00:35:49,232 --> 00:35:51,109 ಆದರೆ ನಾವು ಅದೆಲ್ಲಕ್ಕಿಂತ ಹೆಚ್ಚು, ಗೊತ್ತಲ್ಲವೇ? 420 00:36:29,856 --> 00:36:31,483 ನೀನು ಎಲ್ಲಿಂದ ಬರುತ್ತಿರುವೆ? 421 00:36:32,817 --> 00:36:33,860 ಇಲ್ಲಿಂದಲೇ. 422 00:36:34,361 --> 00:36:35,195 ಏನು ಮಾಡಲು? 423 00:36:38,531 --> 00:36:39,658 ಕುಟುಂಬದವರನ್ನು ನೋಡಲು. 424 00:36:42,369 --> 00:36:43,244 ಎಲ್ಲಿ ಹೋಗುತ್ತಿರುವೆ? 425 00:36:46,790 --> 00:36:47,749 ಗೊತ್ತಿಲ್ಲ. 426 00:39:07,806 --> 00:39:09,808 ಉಪ ಶೀರ್ಷಿಕೆ ಅನುವಾದ: ಅನುರಾಧ 427 00:39:09,808 --> 00:39:11,893 ಸೃಜನಶೀಲ ಮೇಲ್ವಿಚಾರಕರು ವಿವೇಕ್