1 00:00:06,000 --> 00:00:06,840 "ಈ ಸರಣಿಯು ಕಾಲ್ಪನಿಕ. 2 00:00:06,920 --> 00:00:07,760 ಇಲ್ಲಿನ ಹೆಸರುಗಳು, ಸ್ಥಳಗಳು ಮತ್ತು ಘಟನೆಗಳು ಕಾಲ್ಪನಿಕ. 3 00:00:07,840 --> 00:00:08,680 ಯಾವುದೇ ವ್ಯಕ್ತಿ, ಸ್ಥಳ ಅಥವಾ ಘಟನೆಗೆ ಯಾವುದೇ ಹೋಲಿಕೆಯು ಸಂಪೂರ್ಣ ಕಾಕತಾಳೀಯ. 4 00:00:08,760 --> 00:00:09,600 ಇದರ ಸಂಭಾಷಣೆ ಮತ್ತು ಪಾತ್ರಗಳು ಯಾವುದೇ ಪಂಥ ಅಥವಾ ಮತವನ್ನು ಅವಮಾನಿಸುವುದಿಲ್ಲ 5 00:00:09,680 --> 00:00:10,520 ಅಥವಾ ಭಾರತದ ಸ್ವಾತಂತ್ರ್ಯ ಮತ್ತು ಅಂತರರಾಜ್ಯ ಸಂಬಂಧಗಳ ಮೇಲೆ ಪರಿಣಾಮ ಬೀರುವುದಿಲ್ಲ. 6 00:00:10,600 --> 00:00:11,440 ತಯಾರಕರು ಸರ್ಕಾರಿ ಅಧಿಕಾರ/ಸಂಸ್ಥೆಗಳು ಮತ್ತು ಪೊಲೀಸ್ ಒಳಗೊಂಡ ಇಲಾಖೆಗಳನ್ನು ಗೌರವಿಸುತ್ತಾರೆ. 7 00:00:11,520 --> 00:00:12,360 ಈ ಸರಣಿಯಲ್ಲಿ ಅವಾಚ್ಯ ಭಾಷೆ ಬಳಕೆ ಇದೆ. ಇದರಲ್ಲಿ ತಂಬಾಕು ಅಥವಾ ಮಾದಕ ವಸ್ತುಗಳ 8 00:00:12,440 --> 00:00:13,280 ಸೇವನೆಯನ್ನು ಪ್ರಚೋದಿಸುವುದಿಲ್ಲ. ಚಿತ್ರೀಕರಣದಲ್ಲಿ ಪ್ರಾಣಿ ಹಾನಿ ನಡೆದಿಲ್ಲ. 9 00:00:13,360 --> 00:00:14,200 ಅಮೆಜಾನ್ ಇಲ್ಲಿನ ದೃಷ್ಟಿಕೋನವನ್ನು ಅನುಮೋದಿಸುವುದಿಲ್ಲ. 10 00:00:14,280 --> 00:00:15,120 ಯಾವುದೇ ಬಾಲನಟರ ಶೋಷಣೆ ನಡೆದಿಲ್ಲ. 11 00:00:15,200 --> 00:00:15,960 ಇದರಲ್ಲಿನ ವಿಷಯ ಸಂವೇದನಾಸಹಿತವಾಗಿದೆ. ವೀಕ್ಷಕರ ವಿವೇಚನೆ ಪಾಲಿಸಿ." 12 00:01:09,080 --> 00:01:12,160 ಇಂಡಿಯನ್ ಪೊಲೀಸ್ ಫೋರ್ಸ್ 13 00:01:17,080 --> 00:01:20,920 ಒನ್ ರಾಂಗ್ ಕಾಲ್ 14 00:01:32,680 --> 00:01:33,880 ಏನನ್ನ ನೋಡ್ತಿದ್ದೀಯ? 15 00:01:37,240 --> 00:01:41,040 ಏನಿಲ್ಲ. ಹವಾಮಾನ ಬದಲಾಗುತ್ತಿದೆ ಅಷ್ಟೇ. 16 00:01:42,000 --> 00:01:43,280 ಚಳಿಗಾಲ ಬರುತ್ತಿದೆ. 17 00:01:43,360 --> 00:01:45,440 ಓಹ್, ದೆಹಲಿಯ ಚಳಿಗಾಲ. 18 00:01:46,240 --> 00:01:49,840 ರುಚಿಯಾದ ಆಹಾರ, ಬೆಚ್ಚಗಿನ ಬಟ್ಟೆ, ಮಂಜಿನ ಮುಂಜಾನೆ. 19 00:01:51,520 --> 00:01:55,040 ಹೊಗೆ, ಮಾಲಿನ್ಯ, ಟ್ರಾಫಿಕ್ ಮತ್ತು ಅಪಘಾತಗಳನ್ನು ಮರೆಯುತ್ತಿದ್ದೀಯಾ. 20 00:01:56,920 --> 00:02:00,480 ಗೊತ್ತಾ, ಬದಲಾವಣೆಯನ್ನ ಮೆಚ್ಚುವುದು ಸರಿ. ಹವಾಮಾನದ್ದಾಗಿರಲಿ, ಜನರದ್ದಾಗಲಿ. 21 00:02:00,560 --> 00:02:03,800 ಇದು ಬದುಕನ್ನ ಹೆಚ್ಚು ಆಸಕ್ತಿಕರವಾಗಿಸುವುದು, ದೀರ್ಘವಾಗಿ ತೋರುವುದು. 22 00:02:05,160 --> 00:02:07,400 - ಮುಖ್ಯವಾಗಿ ನಿನಗೆ ತಿಳಿಯುವಾಗ... - ಮುಚ್ಚು, ಆಶು. 23 00:02:11,600 --> 00:02:13,160 ಅದರ ಬಗ್ಗೆ ಮಾತಾಡೋದು ತಪ್ಪಲ್ಲ. 24 00:02:13,280 --> 00:02:14,960 ನನಗೆ ಇದು ಸರಿಯಲ್ಲ ಅನ್ಸುತ್ತೆ. 25 00:02:15,040 --> 00:02:17,160 ನಾವು ಬೇರೆ ವೈದ್ಯರನ್ನ ಭೇಟಿಯಾಗಬೇಕು ಅನ್ಸುತ್ತೆ. 26 00:02:18,880 --> 00:02:20,440 ಜೀವನ ಚಿಕ್ಕದು, ಆಯ್ತಾ? 27 00:02:21,240 --> 00:02:22,520 ರೋಗವಿರಲಿ ಅಥವಾ ಇಲ್ಲದಿರಲಿ, 28 00:02:23,880 --> 00:02:28,320 "ಬದುಕು ದೊಡ್ಡದಾಗಿರಬೇಕು, ದೀರ್ಘವಾಗಿ ಅಲ್ಲ, ನಮ್ಮ ಯಜಮಾನರೇ." 29 00:02:29,960 --> 00:02:32,160 - ನನಗೆ ಆ ಸಿನಿಮಾ ಇಷ್ಟವಿಲ್ಲ. - ಇಲ್ಲ, ನಿನಗಿಷ್ಟ. 30 00:02:35,120 --> 00:02:38,880 ನೀನು ಗಮನಿಸಿದ್ದೀಯಾ? ನೀನು ನನ್ನ ಒಂದು ಮಾತನ್ನೂ ಕೇಳುವುದಿಲ್ಲ. 31 00:02:39,000 --> 00:02:40,560 ಎಷ್ಟೇ ಆದರೂ, ನಾನು ನಿನ್ನ ಗಂಡ. 32 00:02:41,360 --> 00:02:43,240 ನಾನು ನಿನ್ನನ್ನು ಚೆನ್ನಾಗಿ ಬಲ್ಲೆ. 33 00:02:43,320 --> 00:02:45,440 ನಿನ್ನಲ್ಲಿ ಕೆಲವು ಸಮಸ್ಯೆಗಳಿವೆ. 34 00:02:45,520 --> 00:02:47,560 ನನ್ನಲ್ಲಿ? ಯಾವ ಥರದ್ದು? 35 00:02:47,640 --> 00:02:48,840 ಕೋಪ ತುಂಬಾ ಬರುತ್ತೆ. 36 00:02:51,760 --> 00:02:54,080 - ಮತ್ತು? - ನೀನು ಅವಸರದಲ್ಲಿದ್ದಾಗ, 37 00:02:54,160 --> 00:02:55,840 ಸಾಕ್ಸ್ ತಪ್ಪಾಗಿ ಧರಿಸುತ್ತೀಯಾ. 38 00:02:58,520 --> 00:03:00,440 ಸಾಕ್ಸ್ ತಪ್ಪಾಗಿ ಧರಿಸುತ್ತಿದ್ದೀಯಾ. 39 00:03:17,560 --> 00:03:19,600 ನನಗೂ ಅವಳ ನೆನಪು ತುಂಬಾ ಆಗುತ್ತೆ. 40 00:03:24,000 --> 00:03:26,800 ನಾವು ಪರಸ್ಪರ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ, 41 00:03:28,960 --> 00:03:30,680 ಆದರೆ ನಾವು ಕೂಡಿಟ್ಟುಕೊಂಡ ನೆನಪುಗಳು 42 00:03:32,520 --> 00:03:34,320 ಜೀವಮಾನಕ್ಕೆ ಸಾಕು. 43 00:03:41,320 --> 00:03:43,480 ಇದಕ್ಕಾಗಿ ನಮ್ಮನ್ನ ತಯಾರಿರುವಂತೆ ಮಾಡಿದಳು. 44 00:03:46,240 --> 00:03:49,920 ಲೂಪಸ್, ಅಪರೂಪದ ಕಾಯಿಲೆ. 45 00:03:52,560 --> 00:03:53,680 ಅವಳಂತೆಯೇ. 46 00:03:55,760 --> 00:03:56,760 ಅಪರೂಪ. 47 00:03:59,320 --> 00:04:01,000 ಉತ್ಸಾಹಭರಿತ ಹುಡುಗಿಯಾಗಿದ್ದಳು. 48 00:04:02,680 --> 00:04:04,760 ಜೀವನದಲ್ಲಿ ಬದುಕುವುದನ್ನ ತಿಳಿದಿದ್ದಳು. 49 00:04:13,320 --> 00:04:14,320 ಅಮ್ಮ, 50 00:04:15,840 --> 00:04:18,960 ಅಪ್ಪ ತೀರಿಕೊಂಡಮೇಲೆ ನೀವು ಎಲ್ಲವನ್ನೂ ಹೇಗೆ ನಿರ್ವಹಿಸಿದಿರಿ? 51 00:04:21,600 --> 00:04:24,440 ಒಂದೇ ಏಟಿಗೆ ಎಲ್ಲವೂ ಛಿದ್ರಗೊಂಡಾಗ, 52 00:04:25,760 --> 00:04:27,560 ಒಬ್ಬ ವ್ಯಕ್ತಿ ಹೇಗೆ ಮುಂದೆ ಸಾಗುತ್ತಾನೆ? 53 00:04:31,760 --> 00:04:34,320 ಛಿದ್ರವಾದ ಒಂದೊಂದೇ ತುಂಡುಗಳನ್ನು ಎತ್ತಿಕೊಂಡು. 54 00:04:39,520 --> 00:04:43,120 ಮತ್ತು ನೀನು ನನ್ನ ಜೊತೆ ಇದ್ದೆಯಲ್ಲಾ. 55 00:04:47,520 --> 00:04:48,360 ನೋಡು, 56 00:04:50,200 --> 00:04:52,800 ಕೈಯಲ್ಲಿ ಒಂದೇ ಒಂದು ಹುಲ್ಲುಕಡ್ಡಿ ಇರಲಿ, 57 00:04:54,640 --> 00:04:56,040 ಅದನ್ನು ಹಿಡಿದು, 58 00:04:56,920 --> 00:05:00,160 ಬಿರುಗಾಳಿಗಳನ್ನು ಧೈರ್ಯದಿಂದ ಎದುರಿಸುವುದನ್ನು 59 00:05:01,480 --> 00:05:02,520 ಜೀವನ ಎನ್ನುತ್ತಾರೆ. 60 00:05:27,680 --> 00:05:31,720 ಓ ನನ್ನ ಪ್ರಿಯತಮೆ, ನನ್ನ ಹೃದಯ ಹಾಡಿದೆ 61 00:05:32,480 --> 00:05:36,560 ನೀನು ಶಶಿಗಿಂತ ಸುಂದರ ಎಂದಿದೆ 62 00:05:37,280 --> 00:05:42,000 ಓ ನನ್ನ ಪ್ರಿಯತಮೆ, ಈ ತಂಗಾಳಿಯು 63 00:05:42,080 --> 00:05:46,160 ನಿನ್ನ ಸುಂದರ ಕೇಶವ ಸ್ಪರ್ಶಿಸಲು ಹಂಬಲಿಸಿದೆ 64 00:05:47,080 --> 00:05:49,440 ಹೇಗೆ ನಾ ಹೇಳಲಿ 65 00:05:49,520 --> 00:05:55,480 ನನ್ನ ಕಂಗಳು ನಿನ್ನ ನೋಟವ ಕಂಡಾಗಿನಿಂದ 66 00:05:56,640 --> 00:06:01,440 ನಾನು ಪ್ರೀತಿಯ ಹಾದಿಯಲ್ಲಿ ಅಲೆದಾಡುತಿರುವೆ 67 00:06:01,520 --> 00:06:05,480 ನಿನ್ನ ಗುಂಗಿನಲ್ಲೇ ಕಳೆದುಹೋಗಿರುವೆ 68 00:06:06,080 --> 00:06:11,160 ಓ ವೈರಿಯೇ, ವೈರಿಯೇ 69 00:06:11,240 --> 00:06:14,280 ನೀ ನನ್ನ ವೈರಿಯೇ 70 00:06:14,360 --> 00:06:17,440 ನನಗೆ ನಿದಿರೆಯಿಲ್ಲದ ಇರುಳುಗಳ ನೀಡಿದೆ 71 00:06:17,520 --> 00:06:22,240 ನೀ ನನ್ನ ವೈರಿಯೇ 72 00:06:32,360 --> 00:06:37,600 ನೀನೇ ನನಗೆ ಎಲ್ಲವೂ ಆಗಿರುವಾಗ ಇನ್ನೇನೆಂದು ನಿನ್ನನು ದೂರಲಿ? 73 00:06:38,160 --> 00:06:41,920 ನನ್ನ ಹೃದಯವನು ನಿನ್ನ ಹೆಸರಿಗೆ ಮಾಡಿದೆ 74 00:06:42,000 --> 00:06:47,040 ನನ್ನ ಮನೆಯೊಳಗೆ ನೀನು ಕಾಲಿಟ್ಟಾಗಿನಿಂದ 75 00:06:47,720 --> 00:06:51,560 ನನ್ನ ಮನೆ ಸ್ವರ್ಗವಾಗಿ ಬದಲಾಯಿತು 76 00:06:52,120 --> 00:06:56,400 ನಿನ್ನನು ಕಂಡಾಗ, ನನ್ನ ದಾರಿಯ ಕಾಣುವೆ 77 00:06:56,480 --> 00:07:00,520 ಈಗಿನಿಂದ ಈ ಆಯಾಸವಿಲ್ಲದ ಪಯಣ ನನ್ನದು ನಿನ್ನದು 78 00:07:01,520 --> 00:07:04,000 ಹೇಗೆ ನಾ ಹೇಳಲಿ 79 00:07:04,080 --> 00:07:09,800 ನನ್ನ ಕಂಗಳು ನಿನ್ನ ನೋಟವ ಕಂಡಾಗಿನಿಂದ 80 00:07:11,120 --> 00:07:15,720 ನಾನು ಪ್ರೀತಿಯ ಹಾದಿಯಲ್ಲಿ ಅಲೆದಾಡುತಿರುವೆ 81 00:07:15,800 --> 00:07:20,360 ನಿನ್ನ ಆಲೋಚನೆಯಲ್ಲೇ ಕಳೆದುಹೋಗಿರುವೆ 82 00:07:20,440 --> 00:07:25,280 ಓ ವೈರಿಯೇ, ವೈರಿಯೇ 83 00:07:25,360 --> 00:07:28,840 ನೀ ನನ್ನ ವೈರಿಯೇ 84 00:07:28,920 --> 00:07:31,720 ನನಗೆ ನಿದಿರೆಯಿಲ್ಲದ ಇರುಳುಗಳ ನೀಡಿದೆ 85 00:07:31,800 --> 00:07:33,800 ನೀ ನನ್ನ ವೈರಿಯೇ 86 00:07:33,880 --> 00:07:36,560 ನನಗೆ ನಿದಿರೆಯಿಲ್ಲದ ಇರುಳುಗಳ ನೀಡಿದೆ 87 00:07:36,640 --> 00:07:42,160 ನೀ ನನ್ನ ವೈರಿಯೇ 88 00:07:44,800 --> 00:07:50,760 ನೀ ನನ್ನ ವೈರಿಯೇ 89 00:07:56,040 --> 00:08:01,960 ಸಾಕ್ಷ್ಯಾಧಾರಗಳ ಉಗ್ರಾಣ 90 00:08:06,320 --> 00:08:09,920 ಸರ್, ಈ ರೀತಿಯ ಇನ್ನೂ ಐದು ಬಿಡಾರಗಳು ಸ್ಪೋಟಗೊಂಡ ವಸ್ತುಗಳಿಂದ ತುಂಬಿವೆ. 91 00:08:10,640 --> 00:08:16,080 ವಿನಾಶವನ್ನು ನಿರ್ಣಯಿಸುವುದು ಈ ವಸ್ತುಗಳಿಂದಲ್ಲ, ನಾವು ಕಳೆದುಕೊಂಡ ಜೀವಗಳಿಂದ. 92 00:08:16,160 --> 00:08:17,320 ಹೌದು, ಸರ್. 93 00:08:18,080 --> 00:08:20,920 ನಾವು ಕಳೆದುಕೊಂಡಿರುವುದು 250 ಅಮಾಯಕ ನಾಗರಿಕರನ್ನು. 94 00:08:21,960 --> 00:08:24,320 ವಿಕ್ರಂ, ಇದಕ್ಕೆ ಏನು ಬೇಕೋ ಅದನ್ನ ಮಾಡು. 95 00:08:24,400 --> 00:08:25,680 ನನಗೆ ಆ ಸೂಳೆಮಕ್ಕಳು ಬೇಕು. 96 00:09:01,640 --> 00:09:03,320 - ಜೈ ಹಿಂದ್, ಸರ್. - ಜೈ ಹಿಂದ್. 97 00:09:03,400 --> 00:09:06,760 ತಂಡದವರೇ, ತಾರಾ ಶೆಟ್ಟಿ, ಗುಜರಾತ್ ಎ ಟಿ ಸ್ ಮುಖ್ಯಸ್ಥೆ. 98 00:09:06,880 --> 00:09:09,400 ತಾರಾ, ಇವರು ಕಬೀರ್ ಮತ್ತು ರಾಣಾ. 99 00:09:09,480 --> 00:09:12,640 ನಿನಗೆ ವಿಕ್ರಂ ಪರಿಚಯವಿದೆ. ಇವರು ಈ ಕೇಸನ್ನ ನಡೆಸುತ್ತಿದ್ದಾರೆ. 100 00:09:14,160 --> 00:09:16,440 ಅವರು ಗುಜರಾತ್ ಮಾದರಿಯನ್ನ ಪುನರಾವರ್ತಿಸಿದರು. 101 00:09:16,520 --> 00:09:19,880 ನಿಸ್ಸಂಶಯವಾಗಿ. ಸರ್, ಐ ಎಂ ಈಗಾಗಲೇ ಅದರ ಹೊಣೆ ಹೊತ್ತುಕೊಂಡಾಗಿದೆ. 102 00:09:20,000 --> 00:09:22,120 ಇದು ಗುಜರಾತ್'ನಂತೆಯೇ ಎಂದು ನಮಗೆಲ್ಲರಿಗೂ ಗೊತ್ತು. 103 00:09:23,080 --> 00:09:25,960 ಸರ್, ಆದರೆ ಈ ಕೆಲಸ ಸ್ಥಳೀಯರ ಸಹಾಯವಿಲ್ಲದೆ ಆಗುತ್ತಿರಲಿಲ್ಲ. 104 00:09:26,040 --> 00:09:28,360 ಇಷ್ಟು ಮಾಹಿತಿ ನಮಗೂ ಇದೆ, ಶೆಟ್ಟಿ. ಹೊಸದೇನಿದೆ? 105 00:09:28,440 --> 00:09:31,280 ಅಷ್ಟು ಮಾಹಿತಿ ಇದ್ದವರಾದರೆ, ನಮ್ಮ ಮಾಹಿತಿಯನ್ನ ಯಾಕೆ ಗಮನಿಸಲಿಲ್ಲ? 106 00:09:31,360 --> 00:09:33,160 ಯಾವ ಮಾಹಿತಿ ಬಗ್ಗೆ ಮಾತಾಡ್ತಿದ್ದೀರ? 107 00:09:33,880 --> 00:09:36,760 - ನಿಮ್ಮ ಮಾಹಿತಿ ಗಣರಾಜ್ಯ ದಿನದದ್ದಾಗಿತ್ತು. - ಕ್ಷಮಿಸಿ. 108 00:09:36,880 --> 00:09:40,440 ಐ ಎಂ ನಿಮ್ಮ ವೇಳಾಪಟ್ಟಿ ಮತ್ತು ನಿರೀಕ್ಷೆ ಪ್ರಕಾರ ಕಾರ್ಯನಿರ್ವಹಿಸೋದಿಲ್ಲ. 109 00:09:41,120 --> 00:09:46,040 ಸರ್, ನಾವು ಅಧಿಕವಾಗಿ ಸ್ಪಷ್ಟಪಡಿಸಿದ್ದೆವು ಅಹಮದಾಬಾದ್ ನಂತರ ದೆಹಲಿ ಗುರಿಯಾಗಿರಬಹುದು ಎಂದು. 110 00:09:46,120 --> 00:09:50,040 ಯಾವ ಇಲಾಖೆಗೆ ಹೇಳಿದ್ದಿರಿ? ನಮಗೂ ನೇರವಾಗಿ ಎಚ್ಚರಿಸಬಹುದಿತ್ತು, ಸರ್. 111 00:09:50,120 --> 00:09:51,120 ನಿಯಮಾವಳಿ, ವಿಕ್ರಂ. 112 00:09:51,200 --> 00:09:53,160 - ನಿಮ್ಮ ನಿಯಮಾವಳಿಯನ್ನು... - ವಿಕ್ರಂ. 113 00:09:53,760 --> 00:09:55,040 ಸಾಕು, ತಾರಾ. 114 00:09:55,120 --> 00:09:58,040 ಇದು ವಾದ ಮಾಡುವ ಸಮಯವಲ್ಲ, ಕ್ರಮ ತೆಗೆದುಕೊಳ್ಳುವ ಸಮಯ. 115 00:09:58,120 --> 00:10:00,280 - ಹೌದು, ಸರ್. - ಸಂಪೂರ್ಣವಾಗಿ ಒಪ್ಪುತ್ತೇನೆ, ಸರ್. 116 00:10:00,880 --> 00:10:03,480 ನಾನೂ ನನ್ನ ತಂಡವೂ ಈ ಕೇಸಲ್ಲಿ ಛಲ ಬಿಡದೇ ಶ್ರಮಿಸಿದ್ದೇವೆ. 117 00:10:03,520 --> 00:10:07,520 ಅರ್ಧ ಭಾರತದ ಗಲ್ಲಿಗಳನ್ನೆಲ್ಲಾ ಶೋಧಿಸಿದ್ದೇವೆ. ನಾನು ಈ ಸೂಳೆಮಕ್ಕಳನ್ನು ಹಿಡಿಯಬೇಕು. 118 00:10:07,640 --> 00:10:10,240 ಗುಜರಾತ್ ಎ ಟಿ ಸ್ ಇಲ್ಲಿರೋದು ಎಲ್ಲಾ ಮಾಹಿತಿ ಹಂಚಿಕೊಳ್ಳಲು. 119 00:10:10,320 --> 00:10:13,280 ಆದರೆ, ಸರ್, ನನಗೆ ಸಂಪೂರ್ಣ ಸಹಕಾರ ಬೇಕು. 120 00:10:13,360 --> 00:10:14,760 ಅದರಲ್ಲೂ ವಿಕ್ರಂ ಅವರಿಂದ. 121 00:10:15,840 --> 00:10:18,520 ಇದರಲ್ಲಿ ವಿಕ್ರಂ'ಗೆ ಏನೂ ಸಮಸ್ಯೆ ಇಲ್ಲ ಅಂದುಕೊಳ್ಳುವೆ. 122 00:10:20,200 --> 00:10:21,080 ಸರಿನಾ, ವಿಕ್ರಂ? 123 00:10:22,960 --> 00:10:24,040 ಸರಿ, ಸರ್. 124 00:10:25,440 --> 00:10:27,360 - ಮೇಡಂ. - ಧನ್ಯವಾದಗಳು. 125 00:10:28,880 --> 00:10:30,640 - ಕಬೀರ್, ಅಲ್ವಾ? - ಹೌದು, ಮೇಡಂ. 126 00:10:31,280 --> 00:10:33,520 ಎಷ್ಟು ವರ್ಷಗಳಿಂದ ವಿಕ್ರಂ ತಂಡದಲ್ಲಿದ್ದೀಯ? 127 00:10:34,520 --> 00:10:36,240 ಸುಮಾರು ಮೂರು ವರ್ಷಗಳು, ಮೇಡಮ್. 128 00:10:37,120 --> 00:10:40,080 ಹಾಗಾದರೆ ನಿನ್ನ ಬಗ್ಗೆ ನಾನು ಕೇಳಿದ್ದು ಸರಿಯಿದೆ. 129 00:10:41,280 --> 00:10:43,120 ಒಳ್ಳೆಯದನ್ನೇ ಕೇಳಿರಬೇಕು ಅಂದುಕೊಳ್ಳುವೆ. 130 00:10:45,480 --> 00:10:47,720 ನಿರಾಶೆಗೊಳಿಸಲು ಬೇಜಾರು. ಆದರೆ ಇಲ್ಲ. 131 00:10:48,880 --> 00:10:51,840 ಕೇಳ್ಪಟ್ಟೆ ನೀನೊಬ್ಬ ಬುದ್ಧಿಕೆಟ್ಟವನು, ನಿಯಮಾವಳಿ ಅನುಸರಿಸಲ್ಲ ಅಂತ. 132 00:10:52,440 --> 00:10:55,280 ದುಡುಕುವ ಬುದ್ದಿಯವನು. ಆದರೆ ನೀನೇನು ಮಾಡ್ತೀಯಾ? 133 00:10:55,360 --> 00:10:58,440 ನಿನ್ನ ಮೇಲಾಧಿಕಾರಿಯೇ ಹೀಗಿರುವಾಗ, ತರಬೇತಿಯೂ ಹಾಗೇ ಇರುತ್ತದೆ. 134 00:10:59,080 --> 00:11:00,760 ಖಂಡಿತ, ಶೆಟ್ಟಿ. 135 00:11:00,840 --> 00:11:04,440 ನೀನಂತೂ ದೊಡ್ಡದಾಗಿ ಸಾಧಿಸಿಬಿಟ್ಟೆ ನಿಯಮಾವಳಿ ಅನುಸರಿಸುತ್ತಾ. 136 00:11:04,960 --> 00:11:06,880 ಕೋಪವನ್ನು ನಿಯಂತ್ರಿಸು, ಮಾರಾಯ. 137 00:11:07,760 --> 00:11:10,160 ಈಗ ನಮ್ಮದು ವಿದ್ಯಾಸಂಸ್ಥೆಯಲ್ಲಿದ್ದ ವಯಸ್ಸಲ್ಲ. 138 00:11:10,240 --> 00:11:11,440 ವಯಸ್ಸಂತೆ. 139 00:11:11,520 --> 00:11:13,880 ನಿಮ್ಮ ಅನುಭವಗಳ ಮೇಲೆ ಪುಸ್ತಕ ಬರೀತಿದ್ದೀರ ಅಂತೆ. 140 00:11:13,960 --> 00:11:16,160 ಹೂಂ. ನಿನಗೆ ಯಾರು ಹೇಳಿದ್ದು? 141 00:11:17,160 --> 00:11:19,880 ವಿಕ್ರಂ ಸರ್. ನಿಮ್ಮ ಬಗ್ಗೆ ಹೇಳುತ್ತಿರುತ್ತಾರೆ. 142 00:11:19,960 --> 00:11:24,160 ವಾಹ್. ನನ್ನ ಬಗ್ಗೆ ಸ್ವಲ್ಪ ಒಳ್ಳೆಯದನ್ನೂ ಹೇಳುತ್ತಾರೆ ಅಂದುಕೊಳ್ಳುತ್ತೇನೆ. 143 00:11:25,120 --> 00:11:28,040 ನಿರಾಶೆಗೊಳಿಸಿದ್ದಕ್ಕೆ ಕ್ಷಮಿಸಿ, ಮೇಡಂ, ಆದರೆ ಇಲ್ಲ. 144 00:11:33,000 --> 00:11:35,520 - ಶೃತಿ ಹೇಗಿದ್ದಾಳೆ? - ತುಂಬಾ ಚೆನ್ನಾಗಿದ್ದಾಳೆ. 145 00:11:35,600 --> 00:11:37,200 ಆಯುಷ್'ಗೆ ಈಗ ಎಷ್ಟು ವಯಸ್ಸು? 146 00:11:37,280 --> 00:11:39,600 ಕೆಲ ದಿನಗಳಲ್ಲಿ ಅವನಿಗೆ ಹತ್ತು ವರ್ಷವಾಗುತ್ತದೆ. 147 00:11:39,680 --> 00:11:42,160 - ಅದ್ಭುತ! - ನೀನು ಯಾವಾಗ ಮದುವೆಯಾಗುವೆ, ಶೆಟ್ಟಿ? 148 00:11:42,240 --> 00:11:44,440 ನಾನು ಅವಿವಾಹಿತೆ ಮತ್ತು ಸಂತೋಷವಾಗಿದ್ದೇನೆ. 149 00:11:44,520 --> 00:11:46,640 ನೀನು ಮದುವೆಯಾಗದಿದ್ದದ್ದು ಒಳ್ಳೆಯದಾಯಿತು. 150 00:11:46,720 --> 00:11:49,680 ಏಕೆಂದರೆ ಮದುವೆಯಾಗಲು ನೀನು ಪಾಲುವಂತಿಗೆಯಲ್ಲಿ ಉತ್ತಮಳಾಗಿರಬೇಕು. 151 00:11:49,760 --> 00:11:51,120 ನೀನಂತೂ ಸಂಪೂರ್ಣ ಸ್ವಾರ್ಥಿ. 152 00:11:51,720 --> 00:11:53,640 ಅದೇ ಹಳೆಯ ಸ್ವಾರ್ಥಿ ಶೆಟ್ಟಿ. 153 00:11:53,720 --> 00:11:56,160 ಸ್ವಾರ್ಥಿ? ನಾನು? 154 00:11:57,680 --> 00:11:59,480 ನಿನಗೋಸ್ಕರ ಮಾಹಿತಿ ತಂದಿದ್ದೇನೆ. 155 00:12:02,920 --> 00:12:07,160 ಅಹಮದಾಬಾದಿನ ಮನೆಮಾಲೀಕನೊಬ್ಬನಿಗೆ ತನ್ನ 4 ಬಾಡಿಗೆದಾರರ ಚಟುವಟಿಕೆಗಳ ಮೇಲೆ ಶಂಕೆ ಬಂತು. 156 00:12:08,120 --> 00:12:09,560 ಮೊದಲು ಅವನಿಗೆ ಖಚಿತವಿರಲಿಲ್ಲ, 157 00:12:10,080 --> 00:12:13,600 ಆದರೆ ಸ್ಫೋಟದ ಎರಡು ದಿನಗಳ ನಂತರ ಹುಡುಗರು ಕಣ್ಮರೆಯಾದಾಗ, 158 00:12:13,680 --> 00:12:15,840 ಅವನು ಸ್ಥಳೀಯ ಪೊಲೀಸರಿಗೆ ವರದಿ ಮಾಡಿದ. 159 00:12:15,920 --> 00:12:20,160 ನಾವು ಅಲ್ಲಿಗೆ ಹೋದಾಗ, ಬಾಂಬ್ ತಯಾರಿಕೆ ಸಾಮಗ್ರಿಗಳ ಕುರುಹುಗಳು ಅವರ ರೂಮಿನಲ್ಲಿ ಸಿಕ್ಕವು. 160 00:12:20,240 --> 00:12:22,560 ಒಟ್ಟಿನಲ್ಲಿ ಅದು ಅವಸರದಲ್ಲಿ ನುಗ್ಗಿದಂತಿದೆ. 161 00:12:23,240 --> 00:12:25,560 ಆಮೇಲೆ ಆ ಪ್ರದೇಶದ ಎಲ್ಲಾ ಕರೆಗಳ ಜಾಡುಹಿಡಿದು, 162 00:12:25,640 --> 00:12:28,240 ಮತ್ತು ಬಹಳ ಕಷ್ಟದಿಂದ ನಮಗೆ ಈ ಸಂಖ್ಯೆ ಸಿಕ್ಕಿತು. 163 00:12:29,440 --> 00:12:32,440 - ಮನಿಷಾ, ಈ ಸಂಖ್ಯೆಯನ್ನ ಟ್ರೇಸ್'ಗೆ ಹಾಕು. - ಸರಿ, ಸರ್. 164 00:12:32,520 --> 00:12:36,560 ಕೆಲವು ದಿನಗಳ ಹಿಂದೆ, ಈ ಸಂಖ್ಯೆಯನ್ನ ದೆಹಲಿಯಿಂದ ಆಜಂಗಢ್'ಗೆ ಕರೆ ಮಾಡಲು ಮತ್ತೆ ಬಳಸಲಾಯಿತು. 165 00:12:37,480 --> 00:12:40,760 ಮತ್ತೆ ಸುಳಿವು ಕಳೆದುಕೊಂಡದ್ದರಿಂದ, ದೆಹಲಿಯನ್ನ ಎಚ್ಚರಿಕೆಯಲ್ಲಿಟ್ಟಿದ್ದೇವೆ. 166 00:12:41,640 --> 00:12:45,080 ನಾವೇನಾದ್ರೂ ಮಾಡೋಣ ಎನ್ನುವಷ್ಟರಲ್ಲಿ, ಸ್ಪೋಟದ ಸುದ್ಧಿ ಬಂದಿತು. 167 00:12:46,000 --> 00:12:47,640 ಈಗ ನಮ್ಮಲ್ಲಿರುವುದು ಈ ಸಂಖ್ಯೆ. 168 00:12:48,160 --> 00:12:50,360 ಮತ್ತು ಮನೆಮಾಲೀಕನ ಸಹಾಯದಿಂದ ಬರೆಸಿದ ಈ ಸ್ಕೆಚ್. 169 00:12:55,320 --> 00:12:56,760 ಇವನು ಆ ವ್ಯಕ್ತಿಯಲ್ಲ. 170 00:12:56,840 --> 00:12:58,920 ಪವನ್, ನಮ್ಮ ಬಳಿ ಇರುವ ಸ್ಕೆಚ್ ತೋರಿಸಿ. 171 00:13:02,600 --> 00:13:06,560 ಆ ಮನೆಮಾಲೀಕ ಹೇಳಿದ, ಆ ಹುಡುಗರನ್ನು ಭೇಟಿಯಾಗಲು ಯಾರೋ ಒಬ್ಬ ಬರುತ್ತಿದ್ದ ಅಂತ. 172 00:13:09,280 --> 00:13:10,760 ಬಹುಶಃ ಇದು ಅವನೇ. 173 00:14:17,600 --> 00:14:18,440 ಯಾರು? 174 00:14:19,400 --> 00:14:23,760 ಸರ್, ನಾನು ಹೆಚ್ ಜಿ ಎಫ್ ಎಲ್ ಬ್ಯಾಂಕಿನಿಂದ. ನಿಮ್ಮ ಸಾಲದ ಅರ್ಜಿಯ ಬಗ್ಗೆ ಮಾತಾಡಬೇಕು. 175 00:14:28,480 --> 00:14:30,080 - ನಮಸ್ತೆ, ಭಾಯ್. - ನಮಸ್ತೆ. 176 00:14:36,280 --> 00:14:37,560 ಅಭಿನಂದನೆಗಳು, ಭಾಯ್. 177 00:14:39,600 --> 00:14:40,960 - ನಮಸ್ತೆ. - ನಮಸ್ತೆ, ಭಾಯ್. 178 00:14:41,040 --> 00:14:43,240 - ನಮಸ್ತೆ. - ನಿಮ್ಮೆಲ್ಲರಿಗೂ ಅಭಿನಂದನೆಗಳು. 179 00:14:43,320 --> 00:14:46,040 ರಫೀಕ್ ಭಾಯ್'ಗೆ ಈ ಗುರಿಯ ಯಶಸ್ಸು ಬಹಳ ಸಂತೋಷ ನೀಡಿದೆ. 180 00:14:46,600 --> 00:14:48,480 ಜನರು ಆಶೀರ್ವಾದ ಕಳಿಸುತ್ತಿದ್ದಾರೆ. 181 00:14:52,320 --> 00:14:56,360 - ಶಾದಾಬ್ ಎಲ್ಲಿ? - ಅವನಿಗೆ ಜ್ವರ. ಒಳಗೆ ವಿಶ್ರಮಿಸುತ್ತಿದ್ದಾನೆ. 182 00:15:13,880 --> 00:15:14,800 ಶಾದಾಬ್. 183 00:15:17,960 --> 00:15:18,800 ಭಾಯ್. 184 00:15:19,400 --> 00:15:22,800 ಈಗ ನಮ್ಮಲ್ಲಿರುವುದು ಈ ಸಂಖ್ಯೆ. ಮನೆಮಾಲೀಕನ ಸಹಾಯದಿಂದ ಬರೆಸಿದ ಈ ಸ್ಕೆಚ್. 185 00:15:23,280 --> 00:15:24,440 ಇವನು ಆ ವ್ಯಕ್ತಿಯಲ್ಲ. 186 00:15:27,200 --> 00:15:28,080 ವಿಶ್ರಾಂತಿ ತಗೋ. 187 00:15:35,200 --> 00:15:36,360 ಜ್ವರ ಅಷ್ಟೇನಿಲ್ಲ. 188 00:15:38,000 --> 00:15:39,520 ಮುಂದಿನ ಸಲ ಔಷಧಿ ತರುತ್ತೇನೆ. 189 00:15:40,120 --> 00:15:42,960 - ಅಭಿನಂದನೆಗಳು, ಜರಾರ್ ಭಾಯ್. - ನಿನಗೂ ಕೂಡ. 190 00:15:44,080 --> 00:15:46,880 ಚಿಕ್ಕ ವಯಸ್ಸಿನಲ್ಲೇ ದೇವರ ಅನುಗ್ರಹದಿಂದ ಆಶೀರ್ವದಿಸಲ್ಪಟ್ಟಿರುವೆ. 191 00:15:47,880 --> 00:15:49,480 ಹೀಗೆ ಮುಂದೆ ಸಾಗುತ್ತಿರು. 192 00:15:52,560 --> 00:15:56,000 ನನಗೆ... ಮನೆಯ ನೆನಪು ತುಂಬಾ ಬರುತ್ತೆ, ಜರಾರ್ ಭಾಯ್. 193 00:16:07,680 --> 00:16:08,800 ಅತ್ತುಬಿಡು. 194 00:16:10,920 --> 00:16:12,160 ಅತ್ತರೆ ಮನ ಹಗುರವಾಗುತ್ತೆ. 195 00:16:14,000 --> 00:16:16,080 ಆದರೆ ಗುರಿಯನ್ನು ತಲುಪಲು ಬಯಸಿದರೆ, 196 00:16:16,800 --> 00:16:18,960 ನಿನ್ನ ಭಾವನೆಗಳನ್ನ ಮೀರಿ ನಿಲ್ಲಬೇಕು, ಶಾದಾಬ್. 197 00:16:19,520 --> 00:16:20,400 ಸರಿ, ಭಾಯ್. 198 00:16:24,160 --> 00:16:27,160 ಬರ್ತೀನಿ. ಕಾಳಜಿ ವಹಿಸು. 199 00:16:39,800 --> 00:16:40,800 ಅಬ್ಬಾಸ್. 200 00:16:42,240 --> 00:16:43,240 ಹೇಳಿ, ಭಾಯ್. 201 00:16:43,920 --> 00:16:45,840 - ಶಾದಾಬ್'ನನ್ನ ನೋಡಿಕೊಳ್ಳಿ. - ಸರಿ, ಭಾಯ್. 202 00:16:46,440 --> 00:16:48,520 ಅವನ ಐ ಡಿ, ಮೊಬೈಲ್ ತಗೊಂಡು ಸುರಕ್ಷಿತವಾಗಿಟ್ಕೊ. 203 00:16:48,600 --> 00:16:49,440 ಸರಿ, ಭಾಯ್. 204 00:16:49,520 --> 00:16:53,320 ಜನ ದುರ್ಬಲರಾಗಿದ್ದಾಗ ತಪ್ಪುಗಳನ್ನ ಮಾಡ್ತಾರೆ, ಅದರಿಂದ ಎಲ್ಲರೂ ಬೆಲೆ ತೆರಬೇಕಾಗುತ್ತೆ. 205 00:16:59,040 --> 00:16:59,960 ದೆಹಲಿ ಪೊಲೀಸ್. 206 00:17:00,760 --> 00:17:05,760 10-12 ದಿನಗಳ ಹಿಂದೆ, ಬಾಲ್'ಬೇರಿಂಗ್, ಮೊಳೆಗಳನ್ನ ದೊಡ್ಡ ಪ್ರಮಾಣದಲ್ಲಿ ಯಾರಾದರೂ ಖರೀದಿಸಿದ್ರಾ? 207 00:17:05,840 --> 00:17:08,120 - ಇಲ್ಲ, ಸರ್, ಯಾರೂ ಮಾಡಿಲ್ಲ. - ರಸೀದಿಗಳನ್ನ ತೋರಿಸು. 208 00:17:08,240 --> 00:17:09,080 ಖಂಡಿತ. 209 00:17:11,400 --> 00:17:14,680 ಸರಿ, ಅದು ಮುಗಿಯಿತು. ನನಗೆ ಸಿಸಿಟಿವಿ ದೃಶ್ಯ ತೋರಿಸಿ. 210 00:17:14,800 --> 00:17:17,560 - ಸರ್, ಅದು ಕೆಲಸ ಮಾಡ್ತಿಲ್ಲ. - ಏನು? ಕೆಲಸ ಮಾಡ್ತಿಲ್ವಾ? 211 00:17:17,680 --> 00:17:20,520 ಹಾಗಾದ್ರೆ ಯಾಕೆ ಹಾಕಿಸಿದ್ದೀಯ? ಪ್ರದರ್ಶನಕ್ಕಾ? 212 00:17:20,560 --> 00:17:21,880 ತೆಗೆದುಬಿಡು. 213 00:17:22,560 --> 00:17:23,440 ದಡ್ಡ. 214 00:17:28,920 --> 00:17:30,240 ಇದು ಕೆಲಸ ಮಾಡುತ್ತಾ? 215 00:17:32,720 --> 00:17:34,200 {\an8}ಹೌದು, ಮಾಡುತ್ತೆ. 216 00:17:43,920 --> 00:17:45,760 ಮುಂದೆ ಓಡಿಸು. ವೇಗವನ್ನು ಹೆಚ್ಚಿಸಿ. 217 00:17:48,760 --> 00:17:52,960 ಸರಿ, ಇರಲಿ. ಒಂದು ಮಾತು ಹೇಳು. ಸುತ್ತಮುತ್ತ ದೊಡ್ಡ ಹಾರ್ಡ್'ವೇರ್ ಅಂಗಡಿ ಇದೆಯಾ? 218 00:17:53,040 --> 00:17:55,080 ಹೂಂ, 2 ಗಲ್ಲಿ ಬಿಟ್ಟು ಇನ್ನೊಂದು ಅಂಗಡಿಯಿದೆ. 219 00:17:55,240 --> 00:17:57,920 - ಈ ಕಡೆನಾ? - ಹೌದು, ಸರ್. ನೀವು ಅಲ್ಲಿ ಪರಿಶೀಲಿಸಿ. 220 00:17:58,880 --> 00:18:00,880 - ಇವನೇನಾ? - ಹೌದು, ಸರ್, ಇವನೇ. 221 00:18:01,080 --> 00:18:03,200 2 ದಿನಗಳ ಹಿಂದೆ ಬಹಳಷ್ಟು ವಸ್ತುಗಳನ್ನ ಒಯ್ದನು. 222 00:18:05,280 --> 00:18:09,280 ಸರ್, ಇವನು ಅಬ್ದುಲ್. ವಿವಿಧ ಅಂಗಡಿಗಳಿಂದ ಹೆಚ್ಚು ಪ್ರಮಾಣದ ಹಾರ್ಡ್ವೇರ್ ಖರೀದಿಸಿದ. 223 00:18:09,920 --> 00:18:12,160 ಲೋಧಿ ರಸ್ತೆಯಲ್ಲಿ ಮಿಠಾಯಿ ವ್ಯಾಪಾರಿಯಾಗಿದ್ದಾನೆ. 224 00:18:12,240 --> 00:18:13,760 ಅವನನ್ನ ವಿಚಾರಿಸಬೇಕು ಅನ್ಸುತ್ತೆ. 225 00:18:16,680 --> 00:18:17,680 ಎತ್ತಾಕ್ಕೊಂಡ್ ಬನ್ನಿ. 226 00:18:36,240 --> 00:18:38,200 ಸರ್, ಇವನೇ. 227 00:18:38,280 --> 00:18:40,320 {\an8}ವಿಶೇಷ ಸಂವಿಭಾಗದ ರಕ್ಷಣಾ ಗೃಹ 228 00:18:40,400 --> 00:18:42,920 {\an8}ಅವರು ಹೊಲ ಹೂಳಲು ಬಿಡಲಿಲ್ಲ, ಕೂಲಿಯೂ ಕೊಡಲ್ಲ. 229 00:18:43,000 --> 00:18:46,200 {\an8}ಏನು ಮಾಡಲಿ? ಹಳ್ಳಿಯಿಂದ ಓಡಿ ಹೋದೆ. ಮೊದಲು ಅಹಮದಾಬಾದ್, ನಂತರ ದೆಹಲಿ. 230 00:18:46,800 --> 00:18:50,200 ಮೊದಲು ಅಹಮದಾಬಾದ್, ನಂತರ ದೆಹಲಿ. 231 00:18:51,320 --> 00:18:53,440 - ಕೆಲಸ ಎಲ್ಲಿ ಕಲಿತೆ? - ದೆಹಲಿಯಲ್ಲಿ, ಸರ್. 232 00:18:53,520 --> 00:18:55,720 - ಯಾರಿಂದ? - ಈ ನನ್ನ ಮಾರ್ಗದರ್ಶಕರಿಂದ. 233 00:18:59,040 --> 00:19:01,040 - ಸಾಮಾನು ಎಲ್ಲಿ ಖರೀದಿಸಿದೆ? - ಸಂಗೀತಾ ಅವರಿಂದ. 234 00:19:01,080 --> 00:19:02,280 ಏನನ್ನು ಖರೀದಿಸಿದೆ? 235 00:19:02,320 --> 00:19:05,040 ಮಾವಾ ಸಿಹಿತಿಂಡಿ, ಪಿಸ್ತಾ, ಒಣ ಹಣ್ಣುಗಳು, ಜಾಯಿಕಾಯಿ. 236 00:19:05,080 --> 00:19:06,080 ಬೇವರ್ಸಿ. 237 00:19:08,400 --> 00:19:11,400 ಹಾರ್ಡ್'ವೇರ್ ಅಂಗಡಿಯಲ್ಲಿ ಲಾಡು ತಯಾರಿಸುವ ಸಾಮಾನು ಕೊಂಡೆಯಾ? 238 00:19:11,480 --> 00:19:14,560 ಅರ್ಧ ಗಂಟೆಯಿಂದ ಗಿರಕಿ ಹೊಡಿಸುತ್ತಿದ್ದಾನೆ. ತಮಾಷೆ ನಡೀತಿದೆಯಾ? 239 00:19:14,680 --> 00:19:17,480 ಬಿಸಿ ಮುಟ್ಟಿತಾ? ಈಗ ನೇರವಾಗಿ ಉತ್ತರ ಕೊಡು. 240 00:19:17,560 --> 00:19:19,960 ಸರ್, ನಾನು ಒಮ್ಮೆ ಎಮ್ಮೆ ಕದ್ದಿದ್ದೆ. 241 00:19:20,040 --> 00:19:22,720 - ನಾನು ಈಗಾಗಲೇ ಅದನ್ನು ಒಪ್ಪಿಕೊಂಡೆ. - ಎಮ್ಮೆ? 242 00:19:23,320 --> 00:19:25,320 ಅಯ್ಯೋ ಹಾಳಾದವನೇ... 243 00:19:25,440 --> 00:19:27,320 ಬಾಂಬ್ ತಯಾರಿಸುವ ಸಾಮಾನು ಖರೀದಿಸಿದೆಯಾ? 244 00:19:27,440 --> 00:19:30,280 ಬಾಂಬ್? ಯಾವ ಬಾಂಬ್? 245 00:19:30,320 --> 00:19:33,880 ಯಾವ ಬಾಂಬ್'ಗಾಗಿ ಮೊಳೆಗಳು, ಬಾಲ್ ಬೇರಿಂಗ್'ಗಳನ್ನು ಖರೀದಿಸಿದೆಯೋ ಅದು. 246 00:19:33,960 --> 00:19:35,320 ಮೊಳೆ ಮತ್ತು ಬಾಲ್ ಬೇರಿಂಗ್? 247 00:19:36,400 --> 00:19:38,520 ಹೇಳಿಬಿಡೋ. ನಿಜಕ್ಕೂ ಇದಕ್ಕಾಗಿ ನೀನು ಸಾಯಬೇಕಾ? 248 00:19:38,560 --> 00:19:40,880 ಖರೀದಿಸಿದೆಯಾ ಅಥವಾ ಇಲ್ವಾ? ಹೇಳು. 249 00:19:41,800 --> 00:19:43,800 - ಖರೀದಿಸಿದೆ. - ಹಾಗಿದ್ರೆ ಯಾಕೆ ಖರೀದಿಸಿದೆ? 250 00:19:43,920 --> 00:19:45,920 - ಖಾನ್ ಸಾಹೇಬನಿಗಾಗಿ. - ಯಾರು ಖಾನ್? 251 00:19:46,520 --> 00:19:48,080 ನಾಜ್ ಸ್ವೀಟ್ಸ್ ಮಾಲೀಕ, ಸರ್. 252 00:19:49,080 --> 00:19:50,160 ನಾಜ್ ಸ್ವೀಟ್ಸ್? 253 00:19:50,760 --> 00:19:54,680 ಹೂಂ, ಸರ್. ನಾವು ಅಲ್ಲಿಯೇ ಕೆಲಸ ಮಾಡೋದು. ಮನೆಯ ರಿಪೇರಿ ಕೆಲಸ ನಡೆಯುತ್ತಿದೆ ಅಂದರು. 254 00:19:54,760 --> 00:19:57,320 ಅವರು ಸಾಮಾನುಗಳ ಪಟ್ಟಿ ಕೊಟ್ಟರು, ಅವುಗಳನ್ನೇ ತಂದೆ. 255 00:19:57,440 --> 00:19:58,880 ನನಗೆ ಅಷ್ಟೇ ಗೊತ್ತಿರುವುದು. 256 00:20:01,080 --> 00:20:03,000 - ಜೈ ಹಿಂದ್, ಸರ್. - ಜೈ ಹಿಂದ್. 257 00:20:03,080 --> 00:20:04,680 ಒಂದು ದೊಡ್ಡ ಮಾಹಿತಿ ಸಿಕ್ಕಿದೆ. 258 00:20:05,240 --> 00:20:06,520 ನಿಮ್ಮನ್ನ ಭೇಟಿಯಾಗಬೇಕು. 259 00:20:08,520 --> 00:20:10,880 ನನಗೆ ಈಗಾಗಲೇ ತಡವಾಗಿದೆ. ನಿನಗೆ ಇದರ ಕಾಳಜಿಯೇ ಇಲ್ಲ. 260 00:20:12,920 --> 00:20:14,800 ನೀನು ನವಿಲಿನಂತೆ. 261 00:20:14,880 --> 00:20:16,800 ಬುದ್ಧಿಯೂ ನಿನ್ನಲ್ಲಿ ಅದರಂತೆಯೇ ಇದೆ. 262 00:20:17,400 --> 00:20:19,800 ಆಪಾ, ಸ್ಕೂಟರ್ ಕೆಟ್ಟುಹೋದರೆ ನಾನೇನು ಮಾಡಲಿ? 263 00:20:19,920 --> 00:20:22,520 ನಾನೇನು ಮಾಡಲಿ ಅಂದರೆ? ನೀನೊಬ್ಬ ಮೆಕ್ಯಾನಿಕ್'ನ ಮಗ. 264 00:20:23,080 --> 00:20:26,040 ನೆರೆಹೊರೆಯಲ್ಲಿ ಸ್ಕೂಟರ್ ತಳ್ಕೊಂಡು ಹೋದರೆ ಚೆನ್ನಾಗಿರುತ್ತಾ? 265 00:20:26,080 --> 00:20:28,040 ಅಬ್ಬುಗೆ ಮಾತ್ರ ಈ ಗಾಡಿ ಓಡಿಸಲು ಸಾಧ್ಯ. 266 00:20:28,080 --> 00:20:31,960 ನೀನೆ ಯಾಕೆ ಓಡಿಸೋದನ್ನ ಕಲಿಯಬಾರದು? ಯಾವಾಗಲೂ ಮೊಯಿನ್, ಮೊಯಿನ್ ಅಂತೀಯಾ. 267 00:20:32,480 --> 00:20:35,760 ನಿನ್ನನ್ನ ವರದಕ್ಷಿಣೆ ಜೊತೆಯಲ್ಲೇ ಕರ್ಕೊಂಡು ಹೋಗ್ತೀನಿ, ನನ್ನ ನವಿಲೇ. 268 00:20:36,480 --> 00:20:39,800 ಕೂದಲಿನ ಜೊತೆ ತಮಾಷೆ ಬೇಡ. ನೆರೆಹೊರೆಯಲ್ಲಿ ನನಗೆ ಗೌರವ ಇದೆ. 269 00:20:44,680 --> 00:20:45,960 ಸುಮ್ಮನೆ ತಳ್ಳು. 270 00:20:46,640 --> 00:20:49,160 - ಗೌರವ-- - ಮೊಯಿನ್, ಏನಾಯಿತು? 271 00:20:49,760 --> 00:20:51,080 ಇದು ಮತ್ತೆ ನಿಂತುಹೋಯಿತು. 272 00:20:52,240 --> 00:20:53,920 ಕೂತ್ಕೊ. ನಾನು ತಳ್ಳುತ್ತೇನೆ. 273 00:20:55,320 --> 00:20:56,320 ಹೊರಡು. 274 00:21:02,040 --> 00:21:03,040 ನಾನು ಕೂರುತ್ತಿದ್ದೇನೆ. 275 00:21:03,080 --> 00:21:06,040 - ನಿಮ್ಮ ನವಿಲು ಹಾರಿಹೋಯಿತು ಆಪಾ! ಕ್ಷಮಿಸು! - ಮೊಯಿನ್! 276 00:21:13,080 --> 00:21:16,200 ಅಂದಹಾಗೆ, ಇನ್ನು ಈ ಟ್ಯೂಬ್ ಲೈಟ್'ನ ಅಗತ್ಯವಿಲ್ಲ. 277 00:21:16,960 --> 00:21:19,200 ನಾನು ನಿಮ್ಮ ಕೆಲವೇ ದಿನಗಳ ಅತಿಥಿ. 278 00:21:20,040 --> 00:21:21,200 ನೀನು ಹೊರಡುತ್ತಿದ್ದೀಯ? 279 00:21:23,520 --> 00:21:26,080 ಬೆಳಿಗ್ಗೆ ನಾನು ಅಂದ ಮಾತಿಂದ ನಿನಗೆ ಬೇಜಾರಾಯಿತಾ? 280 00:21:26,680 --> 00:21:30,040 - ನನ್ನ ಮಾತಿನ ಅರ್ಥ ಹಾಗಿರಲಿಲ್ಲ. - ಇಲ್ಲ, ಖಂಡಿತಾ ಇಲ್ಲ. 281 00:21:31,440 --> 00:21:33,440 ನನ್ನ ಇಲ್ಲಿನ ಕೆಲಸ ಮುಗಿದಿದೆ. 282 00:21:34,440 --> 00:21:35,920 ಉಳಿಯಲು ಬೇರೆ ಯಾವುದೇ ಕಾರಣವಿಲ್ಲ. 283 00:21:37,080 --> 00:21:38,200 ಆದ್ದರಿಂದ... 284 00:21:40,560 --> 00:21:41,960 ಮತ್ತೆ ಯಾವಾಗ ಬರಲು ಸಾಧ್ಯ? 285 00:21:42,760 --> 00:21:46,760 ಮಹಾರಾಣಿ ಕರೆದಾಗಲೆಲ್ಲಾ, ಸುಗಂಧ ದ್ರವ್ಯ ತಯಾರಕ ಅವಳ ಸೇವೆಯಲ್ಲಿರುತ್ತಾನೆ. 286 00:21:49,920 --> 00:21:52,840 ಓಹ್, ನಿನ್ನನ್ನ ಒಪ್ಪಿಕೊಳ್ಳಲೇಬೇಕು, ಕಬೀರ್. 287 00:21:53,440 --> 00:21:55,600 ದೆಹಲಿಯ ಒಂದೊಂದು ಕೂಡುವ ಜಾಗವೂ ನಿನಗೆ ಗೊತ್ತು. 288 00:21:56,600 --> 00:21:59,480 ನೀನು ನನ್ನ ತಂಡದಲ್ಲಿರಲೆಂದು ಬಯಸಲು ಇದು ಮುಖ್ಯ ಕಾರಣಗಳಲ್ಲೊಂದು. 289 00:21:59,560 --> 00:22:01,840 - ಇದಾ? - ಈ ರೆಸ್ಟೋರೆಂಟ್ ಅಲ್ಲ. 290 00:22:01,920 --> 00:22:05,520 ನನಗೆ ದೆಹಲಿಯನ್ನ ಹತ್ತಿರದಿಂದ ತಿಳಿದಿರುವ ಒಬ್ಬ ವ್ಯಕ್ತಿ ಬೇಕಿತ್ತು. 291 00:22:07,280 --> 00:22:09,480 ಸರ್, ಬಹುಶಃ ಪೂರ್ತಿ ದೆಹಲಿ ಗೊತ್ತಿಲ್ಲ, 292 00:22:10,000 --> 00:22:12,280 ಆದರೆ ರಶ್ಮಿಯಿಂದಾಗಿ ನನಗೆ ಈ ಸ್ಥಳ ಗೊತ್ತು. 293 00:22:13,800 --> 00:22:15,880 ಆಕೆ ದೊಡ್ಡ ಆಹಾರಪ್ರಿಯೆ ಅಂತ ತಿಳಿದಿದ್ದೆ. 294 00:22:17,440 --> 00:22:19,960 ಇದು ಅವಳ ನೆಚ್ಚಿನ ರೆಸ್ಟೋರೆಂಟ್ ಆಗಿತ್ತು, ಸರ್. 295 00:22:31,680 --> 00:22:33,560 ಅಪ್ಪನ ಬಗ್ಗೆ ಅಮ್ಮ ಹೇಳುತ್ತಿದ್ದರು. 296 00:22:35,320 --> 00:22:37,000 ನಮ್ಮನ್ನು ಬಿಟ್ಟು ಬೇಗ ಹೋಗುವವರನ್ನ 297 00:22:38,600 --> 00:22:40,680 ಮರೆಯುವುದು ಬಹಳ ಕಷ್ಟ. 298 00:22:43,360 --> 00:22:47,400 ಈ ಮಿಷನ್ ಮುಗಿದ ನಂತರ, ನಿನಗೆ ವಿರಾಮ ತೆಗೆದುಕೊಳ್ಳಲು ಆದೇಶಿಸಲಿದ್ದೇನೆ. 299 00:22:50,240 --> 00:22:53,880 ಇಂತಹ ಗಾಯಗಳನ್ನು ಗುಣಪಡಿಸಲು ಎರಡು ದಿನಗಳ ರಜೆ ಸಾಕಾಗುವುದಿಲ್ಲ. 300 00:22:55,040 --> 00:22:56,080 ಇಲ್ಲ, ಸರ್. 301 00:22:57,040 --> 00:23:00,080 ನೆನಪುಗಳು ನನ್ನನ್ನು ಕಾಡದ ಏಕೈಕ ಸ್ಥಳವೆಂದರೆ ಕೆಲಸ. 302 00:23:02,920 --> 00:23:05,240 ಈ ಶೆಟ್ಟಿ ಮೇಡಂ ಅವರದ್ದು ಏನು ವಿಷಯ? 303 00:23:06,080 --> 00:23:08,640 ಅವಳು ರಾಕ್ಷಸಿ. ಬಹಳ ದೊಡ್ಡ ರಾಕ್ಷಸಿ. 304 00:23:09,400 --> 00:23:12,200 ಆದರೆ ಉತ್ತಮ ಅಧಿಕಾರಿ. ಸದಾ ಫಲಿತಾಂಶಗಳನ್ನ ಕೊಡುತ್ತಾಳೆ. 305 00:23:13,840 --> 00:23:16,760 ಆಕೆ ನನ್ನ ಜೊತೆ ನನ್ನ ಗುಂಪಿನಲ್ಲಿದ್ದಳು. ನಾವು ಮೂವರು ಇದ್ದೆವು. 306 00:23:17,280 --> 00:23:19,080 ನಾನು, ಶೆಟ್ಟಿ ಹಾಗೂ ಜಗ್ತಾಪ್. 307 00:23:20,160 --> 00:23:22,720 - ಈ ಜಗ್ತಾಪ್ ಸರ್ ಎಲ್ಲಿದ್ದಾರೆ? - ಗುಪ್ತಚರ ವಿಭಾಗದಲ್ಲಿ. 308 00:23:24,040 --> 00:23:25,560 - ಇಲ್ಲಿ ದೆಹಲಿಯಲ್ಲಾ? - ಇಲ್ಲ. 309 00:23:26,280 --> 00:23:29,680 - ಮತ್ತೆ? - ಹೇಳಲಾರೆ. ನಿಯಮಾವಳಿ. 310 00:23:31,680 --> 00:23:32,680 ಸರ್ ಬಂದರು. 311 00:23:38,880 --> 00:23:41,480 - ಜೈ ಹಿಂದ್, ಸರ್. - ಜೈ ಹಿಂದ್. ಕುಳಿತುಕೊಳ್ಳಿ. 312 00:23:45,600 --> 00:23:48,560 - ರೋಟಿ ಎಲ್ಲಪ್ಪಾ? - ಸರ್, ನಿಮಗಾಗಿ ಕಾಯುತ್ತಿದ್ದೆವು. 313 00:23:48,640 --> 00:23:50,120 ಹಾಗಾದ್ರೆ ಮಾಡೋಣ. 314 00:23:51,080 --> 00:23:53,600 ಏನಪ್ಪಾ? ಪೊಲೀಸರಿಗೆ ಹಸಿವಾಗಲ್ವಾ? 315 00:23:53,720 --> 00:23:56,000 - ಕ್ಷಮಿಸಿ, ಸರ್. - ತಿನ್ನು. ಆಹಾರವನ್ನ ಆಸ್ವಾದಿಸು. 316 00:23:57,200 --> 00:24:01,320 ಸಮವಸ್ತ್ರದಲ್ಲಿರಲಿ ಅಥವಾ ಇಲ್ಲದಿರಲಿ, ಜನರು ಪೊಲೀಸರನ್ನ ಗುರುತುಹಿಡಿದೇಬಿಡುತ್ತಾರೆ. 317 00:24:02,640 --> 00:24:04,680 ಇಂದು ಒಬ್ಬ ಮಿಠಾಯಿಯವನನ್ನ ಬಂಧಿಸಿದೆವು. 318 00:24:06,160 --> 00:24:08,720 ಅವನು ಕೊಟ್ಟ ಮಾಹಿತಿ ಅನಿಸುತ್ತಿರುವುದು, 319 00:24:09,720 --> 00:24:11,280 ಸ್ಫೋಟದಲ್ಲಿ ಖಾನ್ ಸಾಹೇಬರ ಶಾಮೀಲು. 320 00:24:11,360 --> 00:24:13,360 ಖಾನ್ ಸಾಹೇಬನಾ? ಯಾರು ಆ ಖಾನ್ ಸಾಹೇಬ? 321 00:24:15,200 --> 00:24:16,960 ನಾಜ್ ಸ್ವೀಟ್ಸ್ ಮಾಲೀಕರು. 322 00:24:21,160 --> 00:24:22,280 ನಾಜ್ ಸ್ವೀಟ್ಸ್ ಮಾಲೀಕರಾ? 323 00:24:22,360 --> 00:24:25,160 ಸರ್, ಅವನು ಈ ಸ್ಫೋಟಗಳ ಹಿಂದಿನ ನಿಯೋಜಕ ಅಲ್ಲದಿರಬಹುದು. 324 00:24:25,240 --> 00:24:27,000 ಆದರೆ ಶಾಮೀಲಾಗಿರುವುದು ಖಂಡಿತ. 325 00:24:27,080 --> 00:24:29,920 ಸ್ಫೋಟಕ್ಕೆ ಬೇಕಾದ ವಸ್ತುಗಳನ್ನ ಕೊಳ್ಳಲು ನೆರವಾಗಿದ್ದಾನೆ. 326 00:24:31,800 --> 00:24:35,800 ಆದರೆ ಖಾನ್ ಒಬ್ಬ ಧಾರ್ಮಿಕ ನಾಯಕ. ಮತ್ತು ರಾಜಕೀಯವಾಗಿ ಉತ್ತಮ ಸಂಪರ್ಕ ಹೊಂದಿದ್ದಾರೆ. 327 00:24:36,480 --> 00:24:39,880 ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಆಗಬಹುದು. ಆ ಸಾಹಸ ಮಾಡಲಾರೆ. 328 00:24:39,960 --> 00:24:44,000 ಸರ್, ಇದೀಗ ಇಡೀ ಜಗತ್ತು ದೆಹಲಿ ಪೊಲೀಸರತ್ತ ಬೆರಳು ತೋರಿಸುತ್ತಿದೆ. 329 00:24:44,960 --> 00:24:46,160 ನಾವು ಪ್ರತಿದಾಳಿ ಮಾಡಬೇಕು. 330 00:24:47,560 --> 00:24:49,480 ಇದು ನಮಗೆ ಮುಖ್ಯವಾದ ಮಾಹಿತಿ ಸರ್. 331 00:24:50,560 --> 00:24:52,880 ಸರ್, ಹಣವೂ ಅದೇ ಅಂಗಡಿಯಿಂದಲೇ ಬರುತ್ತಿರಬೇಕು. 332 00:24:52,960 --> 00:24:55,000 ಕಾನೂನುಬಾಹಿರ ಹಣ ವರ್ಗಾವಣೆಯ ಮುಖವಾಗಿರಬೇಕು. 333 00:24:55,080 --> 00:24:57,600 ನೀವು ತಡಮಾಡಿಬಿಟ್ಟರೆ, ಸರ್, ಅವರು ಕಣ್ಮರೆಯಾಗಬಹುದು. 334 00:24:59,880 --> 00:25:03,560 ಅನುಮಾನ-ಸಿದ್ಧಾಂತದ ಆಧಾರದ ಮೇಲೆ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ, ಕಬೀರ್. 335 00:25:04,600 --> 00:25:05,800 ನನ್ನನ್ನು ಕ್ಷಮಿಸು. 336 00:25:06,480 --> 00:25:09,120 - ಅದೇನೇ ಇದ್ದರೂ, ಭೋಜನಕ್ಕೆ ವಂದನೆ. - ಬಹಳ ಅಭಿವಂದಿಸುವೆ, ಸರ್. 337 00:25:10,520 --> 00:25:11,520 ಹೊರಡೋಣ. 338 00:25:12,360 --> 00:25:13,200 - ಸರ್. - ಸರಿ, ಸರ್. 339 00:25:13,280 --> 00:25:14,600 ನೀವೂ ಸ್ವಲ್ಪ ವಿಶ್ರಮಿಸಿ. 340 00:25:14,680 --> 00:25:15,640 - ಸರಿ, ಸರ್. - ಸರ್. 341 00:25:15,720 --> 00:25:16,880 - ಶುಭ ರಾತ್ರಿ, ಸರ್. - ಬೈ. 342 00:25:16,960 --> 00:25:18,200 - ಜೈ ಹಿಂದ್. - ಜೈ ಹಿಂದ್. 343 00:25:24,760 --> 00:25:26,240 ಕಬೀರ್. 344 00:25:26,400 --> 00:25:27,960 ನಾನು ನಿನ್ನ ವಯಸ್ಸಿನಲ್ಲಿದ್ದಾಗ, 345 00:25:29,120 --> 00:25:33,040 ನಾನು ನನ್ನ ಮೇಲಾಧಿಕಾರಿಯ ಮಾತು ಕೇಳದೇ, ಒಬ್ಬ ಶಂಕಿತನನ್ನು ಬಂಧಿಸಿದ್ದೆ. 346 00:25:34,480 --> 00:25:37,000 ನಂತರ, ಕ್ಷಮಿಸಿ ಅಂತ ಹೇಳಿಬಿಟ್ಟೆ. 347 00:25:38,520 --> 00:25:41,160 ನೀನೂ ಹೇಳಿಬಿಡು. ನಂತರ ಸಂಭಾಳಿಸಿಕೊಳ್ಳೋಣ. 348 00:25:42,360 --> 00:25:43,560 ಸರಿನಾ, ವಿಕ್ರಂ? 349 00:25:44,760 --> 00:25:45,760 ಸರಿನಾ, ಕಬೀರ್? 350 00:25:48,000 --> 00:25:48,960 ಸರಿ, ಸರ್. 351 00:25:50,200 --> 00:25:52,640 ಈ ಮಾತಿಗೆ, ನಿಮಗೆ ಮಿಶ್ರಾರವರ ಪಾನ್ ಕೊಡಿಸುವೆನು. 352 00:25:52,760 --> 00:25:53,760 ತೆರೆದಿರುತ್ತಾರಾ? 353 00:25:53,840 --> 00:25:56,240 ತೆರೆಸಿಬಿಡೋಣ, ಸರ್. ನಾವು ದೆಹಲಿ ಪೊಲೀಸರು. 354 00:25:57,400 --> 00:25:59,920 ಇರಾನ್ 355 00:26:03,280 --> 00:26:05,040 ದೆಹಲಿ - ಯು ಪಿ ಗಡಿ 356 00:26:05,120 --> 00:26:06,120 ದೆಹಲಿ - ನೋಯ್ಡಾ 357 00:26:06,240 --> 00:26:08,000 - ನಮಸ್ತೆ, ರಫೀಕ್ ಭಾಯ್. - ನಮಸ್ತೆ. 358 00:26:08,920 --> 00:26:11,600 ಕಾರ್ಯಾಚರಣೆಯ ಯಶಸ್ಸಿಗೆ ಅಭಿನಂದನೆಗಳು. 359 00:26:11,680 --> 00:26:15,000 - ಪ್ರಪಂಚದಲ್ಲೆಡೆಯಿಂದ ಅಭಿನಂದಿಸುತ್ತಿರುವರು. - ಧನ್ಯವಾದ, ಭಾಯ್. 360 00:26:16,400 --> 00:26:17,880 ಈಗ ವಿದ್ಯಾರ್ಥಿಗಳು ದಣಿದಿರುವರು. 361 00:26:18,480 --> 00:26:19,520 ಅವರಿಗೆ ರಜೆ ಬೇಕಂತೆ. 362 00:26:20,200 --> 00:26:24,080 ಇಂತಹ ಕಠಿಣ ಪರೀಕ್ಷೆಯ ನಂತರ, ಅವರಿಗೆ ರಜೆ ಕೊಡಲೇಬೇಕು. 363 00:26:25,680 --> 00:26:27,120 ನಿನಗೆ ಹಣ ತಲುಪುತ್ತದೆ. 364 00:26:27,200 --> 00:26:30,560 - ಭಾಯ್, ನಾವು ಇರಾನಿಗೆ ಯಾವಾಗ ಹೋಗೋದು? - ಸರಿಯಾದ ಸಮಯ ಬಂದಾಗ. 365 00:26:32,760 --> 00:26:35,000 - ವಿದಾಯ. - ವಿದಾಯ. 366 00:26:44,000 --> 00:26:45,520 ಹಳೆ ದೆಹಲಿಗೆ ಬರ್ತೀಯಾ? 367 00:27:01,200 --> 00:27:03,880 ಮೊಯಿನ್, ಕೇಳು. ನನ್ನ ಕಡೆ ನೋಡು. 368 00:27:04,520 --> 00:27:07,360 ಕನಿಷ್ಠ ನಾನು ಹೇಳ್ತಿರೋದನ್ನಾದರೂ ಕೇಳು. 369 00:27:08,120 --> 00:27:09,800 ನನ್ನನ್ನು ನೋಡು. 370 00:27:10,320 --> 00:27:12,240 ಏನ್ ಆಪಾ ನೀನು! ನಿನ್ನಿಂದ ಸೋತುಹೋದೆ. 371 00:27:14,680 --> 00:27:17,680 ಹುಡುಗನನ್ನು ಹುಡುಕಿ, ಮದುವೆಯಾಗಿ, ಹೋಗಿಬಿಡಮ್ಮಾ. 372 00:27:19,400 --> 00:27:22,720 ನಾನು ಹೊರಡುವ ದಿನ ಹೆಚ್ಚು ಅಳುವುದು ನೀನೇ. 373 00:27:22,800 --> 00:27:24,440 - ಹೌದಾ? ಏನಿಲ್ಲ. - ಅರ್ಥವಾಯಿತಾ? 374 00:27:25,040 --> 00:27:26,760 ನಿನಗೆ ಹೇಳಿದೆ, ಕೂದಲು ಕೆಡಿಸಬೇಡ. 375 00:27:37,120 --> 00:27:41,080 - ಆ ಮುಗ್ಧ ಹುಡುಗನನ್ನ ಗೋಳುಹೊಯ್ಕೋಬೇಡ. - ಮುಗ್ಧ ಹುಡುಗನಾ? 376 00:27:42,080 --> 00:27:44,560 ಅವನ ಜೊತೆ 21 ವರ್ಷ ಕಳೆ, ಆಮೇಲೆ ಗೊತ್ತಾಗುತ್ತೆ. 377 00:27:45,120 --> 00:27:46,720 ಅವನೊಬ್ಬ ದೊಡ್ಡ ರಾಕ್ಷಸ. 378 00:27:47,360 --> 00:27:50,080 - ಅವನಿಗೆ ತೊಂದರೆ ಕೊಡುವುದೇ ನನ್ನ ಕೆಲಸ. - ಖಂಡಿತವಾಗಿ. 379 00:27:51,200 --> 00:27:54,800 ನಿಜ ಹೇಳಬೇಕಂದರೆ, ಮೊಯಿನ್'ನನ್ನು ನೋಡಿ ನನಗೆ ಸಿಕ್ಕುವಿನ ನೆನಪಾಗುತ್ತೆ. 380 00:27:55,600 --> 00:27:58,600 - ಸಿಕ್ಕು ಯಾರು? - ನನ್ನ ತಮ್ಮ. 381 00:27:59,160 --> 00:28:01,160 ಹೌದಾ? ಅವನು ಎಲ್ಲಿದ್ದಾನೆ? 382 00:28:02,400 --> 00:28:04,280 ಕೆಲಸದ ವಿಷಯವಾಗಿ ಪ್ರಯಾಣಿಸ್ತಾ ಇರ್ತಾನೆ. 383 00:28:05,080 --> 00:28:06,080 ನನ್ನ ತರಹ. 384 00:28:08,000 --> 00:28:10,600 ಹಾಗಾದ್ರೆ ನೀವು ಅಲೆಮಾರಿಗಳ ಕುಟುಂಬ. 385 00:28:13,160 --> 00:28:14,600 ಮತ್ತು ನಿನ್ನ ಅಮ್ಮಿ-ಅಬ್ಬು? 386 00:28:16,280 --> 00:28:19,560 ಚಿಕ್ಕವನಿದ್ದಾಗ ಅವರಿಬ್ಬರೂ ಅನಾಹುತದಲ್ಲಿ ತೀರಿಹೋದರು. 387 00:28:22,440 --> 00:28:23,440 ಹೇಗೆ? 388 00:28:32,520 --> 00:28:33,560 ಹೈದರ್? 389 00:28:34,880 --> 00:28:36,200 ಮತ್ತೆ ಯಾವಾಗಾದ್ರೂ ಹೇಳ್ತೀನಿ. 390 00:28:43,400 --> 00:28:47,400 {\an8}ಆಜಂಗಢ್ (ಯುಪಿ) 391 00:28:49,240 --> 00:28:51,640 - ನನ್ನ ಹಜ್ ಅರ್ಜಿ ಸ್ವೀಕರಿಸಲಾಗಿದೆಯಾ? - ಹೌದು. 392 00:28:51,720 --> 00:28:53,960 ಆದರೆ ನಾನು ಅರ್ಜಿ ಸಲ್ಲಿಸಲೇ ಇಲ್ಲ. 393 00:28:54,040 --> 00:28:56,480 ಈ ನಮೂನೆ ಪತ್ರವನ್ನು ನೋಡಿ. 394 00:28:57,480 --> 00:28:58,920 ಹೆಸರು ಸರಿಯಾಗಿದೆಯಾ? 395 00:29:00,320 --> 00:29:02,200 - ಹೌದು. - ಮತ್ತು ಸಂಖ್ಯೆ? 396 00:29:02,440 --> 00:29:05,240 - ಈಗ ನಮ್ಮಲ್ಲಿರುವುದು ಈ ಸಂಖ್ಯೆ. - ಈ ಸಂಖ್ಯೆಯ ಜಾಡುಹಿಡಿಯಿರಿ. 397 00:29:06,480 --> 00:29:09,160 - ಈ ಸಂಖ್ಯೆ ಶಾದಾಬನದ್ದು. - ಹೌದು. 398 00:29:09,280 --> 00:29:12,240 ನಿಮಗಾಗಿ ಬುಕ್ ಮಾಡಿದ್ದು ಅವನೇ ಆಂಟಿ. 399 00:29:12,840 --> 00:29:14,560 - ಶಾದಾಬ್ ಮಾಡಿದ್ದಾ? - ಹೌದು. 400 00:29:15,200 --> 00:29:18,880 ಜಮೀಲಾ, ಕೇಳಿಸಿಕೊಂಡೆಯಾ? ಶಾದಾಬ್ ನಮ್ಮನ್ನ ಹಜ್ ಯಾತ್ರೆಗೆ ಕಳಿಸಬೇಕೆಂದಿದ್ದಾನೆ. 401 00:29:26,680 --> 00:29:28,560 ಭಾಭಿಜೀ, ಈ ಫೋಟೊ ಶಾದಾಬನದ್ದಾ? 402 00:29:30,000 --> 00:29:31,120 ಹೌದು. 403 00:29:31,960 --> 00:29:34,840 ಆಂಟಿ, ಸ್ವಲ್ಪ ನೀರು ಕೊಡುತ್ತೀರಾ? 404 00:29:34,960 --> 00:29:36,320 ಹೂಂ, ಖಚಿತವಾಗಿ. 405 00:29:36,400 --> 00:29:38,280 - ಬಾ, ಜಮೀಲಾ. - ಸರಿ, ಅಮ್ಮಿ. 406 00:29:39,080 --> 00:29:42,440 ಸರ್, ಎರಡು ತಿಂಗಳಾಯಿತು, 407 00:29:43,040 --> 00:29:45,280 ಆ ನಿಷ್ಪ್ರಯೋಜಕ ಒಂದು ಕರೆಯೂ ಮಾಡಲಿಲ್ಲ. 408 00:29:46,800 --> 00:29:49,440 ಯಾವ ರಹಸ್ಯ ವಿಷಯಗಳಲ್ಲಿ ತೊಡಗಿರುತ್ತಾನೋ ಗೊತ್ತಿಲ್ಲ. 409 00:29:49,520 --> 00:29:54,680 ನೋಡಿ, ಯಾರೂ ಸಾಲದ, ಕದ್ದ ಅಥವಾ ಅಕ್ರಮ ಹಣದಿಂದ ಹಜ್'ಗೆ ಹೋಗುವುದಿಲ್ಲ. 410 00:29:55,600 --> 00:30:01,000 ಮತ್ತು ಶಾದಾಬ್ ಈ ಹಣವನ್ನು ಹೇಗೆ ಸಂಪಾದಿಸಿದ ಎಂದೂ ನಮಗೆ ಗೊತ್ತಿಲ್ಲ. 411 00:30:02,480 --> 00:30:04,000 ಹಾಗಾಗಿ ನಾವೆಲ್ಲಿಗೂ ಹೋಗುತ್ತಿಲ್ಲ. 412 00:30:05,320 --> 00:30:06,600 ಆದರೆ ಕೇಳಿ... 413 00:30:11,800 --> 00:30:12,880 ಧನ್ಯವಾದ. 414 00:30:34,680 --> 00:30:37,520 ಜೈ ಹಿಂದ್, ಸರ್. ದೃಢಪಟ್ಟಿದೆ. ಅದು ಶಾದಾಬ್. 415 00:30:38,080 --> 00:30:41,040 ನೀವು ಕಳಿಸಿದ ಸಂಖ್ಯೆ ಮತ್ತು ವಿವರಣೆಯು ಹೊಂದಾಣಿಕೆಯಾಗಿದೆ. 416 00:30:41,640 --> 00:30:43,640 ದೃಢೀಕರಣಕ್ಕಾಗಿ ಫೋಟೊ ಕಳಿಸುತ್ತಿದ್ದೇನೆ. 417 00:31:02,760 --> 00:31:04,200 - ಜೈ ಹಿಂದ್, ಸರ್. - ಜೈ ಹಿಂದ್. 418 00:31:04,400 --> 00:31:07,880 ಖಾನ್ ನಮ್ಮ ಎದುರಲ್ಲಿದ್ದಾನೆ, ಸರ್, ಪೀತಂಪುರದ ಆಂಫಿಥಿಯೇಟರ್'ನಲ್ಲಿ. 419 00:31:07,960 --> 00:31:10,080 ಆಂಫಿಥಿಯೇಟರ್? ಖಾನ್ ಅಲ್ಲೇನು ಮಾಡ್ತಿದ್ದಾನೆ? 420 00:31:10,160 --> 00:31:12,560 ಯಾರಿಗೋ ಕಾಯುತ್ತಿರುವಂತೆ ತೋರುತ್ತಿದೆ. 421 00:31:12,640 --> 00:31:14,520 ಹಾಗಾದರೆ ನೀವೂ ಕಾಯಿರಿ. ಏನಾಗುತ್ತದೆ ನೋಡಿ. 422 00:31:14,600 --> 00:31:17,240 ಸರಿ, ಸರ್. ಅವಕಾಶ ಸಿಗುತ್ತಿದ್ದಂತೆ ಬಂಧಿಸುವೆವು. 423 00:31:17,320 --> 00:31:19,440 ಒಳ್ಳೆಯದು. ಬಂಧಿಸುವ ರೀತಿ ಆರಾಮವಾಗಿರಲಿ. 424 00:31:20,800 --> 00:31:22,320 ಸುತ್ತಮುತ್ತ ಜನರಿಗೆ ತಿಳಿಯದಂತೆ. 425 00:31:22,400 --> 00:31:24,720 ಆಯ್ತು, ಸರ್. ಜೈ ಹಿಂದ್. 426 00:31:35,120 --> 00:31:38,320 ಆ ಹುಡುಗನನ್ನ ಹಿಂಬಾಲಿಸು. ಹೋಗಲು ಬಿಡಬೇಡ. ಖಾನ್'ನನ್ನು ಬಂಧಿಸುವೆ. 427 00:31:46,920 --> 00:31:48,000 ನಡಿಯಿರಿ. 428 00:31:53,520 --> 00:31:55,320 - ನಮಸ್ತೆ, ಖಾನ್ ಅವರೇ. - ನಮಸ್-- 429 00:31:55,400 --> 00:31:57,480 ಎಲ್ಲಿಗೋ ಹೋಗ್ತಿದ್ದೀರಾ? ಬನ್ನಿ, ಬಿಡ್ತೀನಿ. 430 00:32:00,960 --> 00:32:03,480 ಕ್ಷಮಿಸಿ, ನಿಮ್ಮ ಗುರುತು ಸಿಗಲಿಲ್ಲ. 431 00:32:04,080 --> 00:32:06,720 ಇಂದು ಸಮವಸ್ತ್ರ ಹಾಕಿಲ್ಲವಲ್ಲ. ಅದಕ್ಕೇ. 432 00:32:07,280 --> 00:32:09,120 ಕಬೀರ್ ಮಲಿಕ್. ದೆಹಲಿ ಪೊಲೀಸ್. 433 00:32:14,720 --> 00:32:15,720 ಹೊರಡೋಣ್ವಾ ಖಾನ್ ಅವರೇ? 434 00:32:25,680 --> 00:32:28,400 ಖಾನ್ ಅವರು ದಾನಿಶನನ್ನು ಕರೆತರಲು ಹೇಳಿದರು. 435 00:32:28,480 --> 00:32:31,240 - ಯಾಕೆ? ಏನಾಯಿತು? - ಮನೆಯಲ್ಲಿ ಏನೋ ಕೆಲಸವಿದೆಯಂತೆ. 436 00:32:31,320 --> 00:32:35,200 ನೋಡಿ, ಅರ್ಜಿ ನೀಡದೆ ಮಕ್ಕಳನ್ನು ಹೊರಗೆ ಕರೆದೊಯ್ಯಲು ನಾವು ಅವಕಾಶ ನೀಡುವುದಿಲ್ಲ. 437 00:32:35,280 --> 00:32:36,800 ಶಾಲೆಯ ಕೆಲವು ನಿಯಮಗಳಿವೆ. 438 00:32:36,880 --> 00:32:39,560 ಮೇಡಂ, ದೆಹಲಿ ಪೊಲೀಸ್. ನಾವು ನೋಡಿಕೊಳ್ಳುತ್ತೇವೆ. 439 00:32:40,760 --> 00:32:41,880 ನಡಿಯಿರಿ. 440 00:32:50,600 --> 00:32:51,800 ಹಲೋ, ದಾನಿಶ್. 441 00:32:52,560 --> 00:32:56,160 ನಾವು ನಿಮ್ಮ ತಾತನ ಸ್ನೇಹಿತರು. ಅವರ ಬಳಿಯೇ ಹೋಗುತ್ತಿದ್ದೇವೆ. ಹೋಗೋಣ್ವಾ? 442 00:33:36,680 --> 00:33:37,680 ಪೀಸ್ ಮೆಕ್ಯಾನಿಕ್ಸ್ 443 00:33:40,880 --> 00:33:44,320 ಒಳಗೆ ಕುಳಿತುಕೊಳ್ಳಿ. ನಾನು ಇದನ್ನು ಪರಿಶೀಲಿಸುತ್ತೇನೆ. 444 00:33:46,000 --> 00:33:46,840 ಸಿಕ್ಕು? 445 00:33:47,960 --> 00:33:50,240 - ನನ್ನ ಪುಟ್ಟ. - ಭಾಯ್! 446 00:33:51,320 --> 00:33:53,200 - ನಿಮ್ಮ ನೆನಪಾಗುತ್ತಿತ್ತು. - ನನಗೂ ಅಷ್ಟೇ. 447 00:33:56,440 --> 00:33:58,080 ನಿಮ್ಮ ರಜೆಯ ವ್ಯವಸ್ಥೆಗಳು. 448 00:34:00,080 --> 00:34:01,560 ರಫೀಕ್ ಅವರ ಜೊತೆ ಮಾತನಾಡಿದೆ. 449 00:34:02,400 --> 00:34:05,200 - ಪ್ರಾಂಶುಪಾಲರು ತುಂಬಾ ಖುಷಿಯಾಗಿದ್ದಾರೆ ಅಂದರು. - ವಾಹ್. 450 00:34:05,280 --> 00:34:06,960 ಶೀಘ್ರದಲ್ಲೇ ನಮಗೆ ಕರೆ ಬರಲಿದೆ. 451 00:34:07,920 --> 00:34:11,280 ನಿಮ್ಮ ಕೈಗಳಿಗೆ ಮುತ್ತಿಡಲಾ, ಐ ಎಂ ಆದೇಶಕ ಜರಾರ್. 452 00:34:11,400 --> 00:34:12,400 ಸಿಕ್ಕು. 453 00:34:14,360 --> 00:34:15,520 ನಾಳೆ ಹೊರಡುತ್ತೇವೆ. 454 00:34:16,640 --> 00:34:17,640 ನೀನು ಇದನ್ನು ಹೇಳು, 455 00:34:19,160 --> 00:34:20,520 - ಕಾನ್ಪುರದಿಂದ ಕರೆ? - ಇಲ್ಲ. 456 00:34:23,320 --> 00:34:25,680 ಪರವಾಗಿಲ್ಲ. ಹಸಿವಾಗಿದೆಯೇ? 457 00:34:25,800 --> 00:34:27,360 - ತುಂಬಾ. - ಬಿರಿಯಾನಿ ತಿಂತೀಯಾ? 458 00:34:27,480 --> 00:34:29,320 - ನೀವು ಮಾಡಿದ್ದಾ? - ನಾನೇ ಮಾಡಿದ್ದು. 459 00:34:29,400 --> 00:34:30,280 ಬನ್ನಿ. 460 00:34:34,840 --> 00:34:35,640 ತಾತ! 461 00:34:42,280 --> 00:34:43,120 ಏನು? 462 00:34:44,600 --> 00:34:48,320 - ಇದೆಂಥಾ ತಮಾಷೆ? - ಬರುವ ದಾರಿಯಲ್ಲೇ ದಾನಿಶನ ಶಾಲೆ ಇತ್ತು. 463 00:34:48,400 --> 00:34:53,080 ಹೇಗಿದ್ದರೂ ನಿಮ್ಮನ್ನ ಭೇಟಿಯಾಗುತ್ತಿದ್ದೇವೆ. ಹಾಗೆಯೇ ಇವನನ್ನೂ ಕರೆತರೋಣ ಅಂದುಕೊಂಡೆವು. 464 00:34:54,160 --> 00:34:55,040 ಬನ್ನಿ, ಕೂತ್ಕೊಳಿ. 465 00:34:59,200 --> 00:35:02,160 ದಾದು, ನೀವೂ ನಮ್ಮ ಜೊತೆ ಕುತುಬ್ ಮಿನಾರ್'ಗೆ ಬರ್ತಿದ್ದೀರಾ? 466 00:35:02,200 --> 00:35:03,440 ಹೌದು. 467 00:35:03,520 --> 00:35:05,320 ದಾನಿಶ್, ಬಾ ಇಲ್ಲಿ, ಪುಟ್ಟ. 468 00:35:08,520 --> 00:35:11,760 ಮೊದಲು ತಾತನ ಜೊತೆ ಮುಖ್ಯವಾದ ವಿಷಯ ಮಾತಾಡಬೇಕು. ಪರವಾಗಿಲ್ವಾ? 469 00:35:11,840 --> 00:35:13,600 - ಹೂಂ. - ಸರಿ. ಧನ್ಯವಾದ. 470 00:35:15,120 --> 00:35:18,360 ದಾನಿಶ್, ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಏನು ನಡೆಯಿತು ಗೊತ್ತಾ? 471 00:35:18,440 --> 00:35:21,520 - ಡಿ ಸಿ ಪಿ ಸರ್, ನೀವು-- - ಹೂಂ, ವಾರ್ತೆಯಲ್ಲಿ ನೋಡಿದೆ. 472 00:35:21,600 --> 00:35:25,200 - ಬಾಂಬ್ ಸ್ಫೋಟವಾಗಿತ್ತು. - ಶಹಭಾಷ್. ಜಾಣ ಹುಡುಗ. 473 00:35:26,520 --> 00:35:27,960 ನಾವು ದೆಹಲಿ ಪೊಲೀಸರು. 474 00:35:28,560 --> 00:35:32,840 ಇದನ್ನು ಮಾಡಿದ ಕೆಟ್ಟ ವ್ಯಕ್ತಿಗಳನ್ನು ಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ. 475 00:35:32,960 --> 00:35:34,120 ಮತ್ತು ಅದಕ್ಕಾಗಿ 476 00:35:35,920 --> 00:35:38,920 ನಮಗೆ ನಿಮ್ಮ ದಾದುನ ಸಹಾಯ ಬೇಕು. 477 00:35:39,000 --> 00:35:41,480 ಖಂಡಿತ. ನಮ್ಮ ದಾದು ಎಲ್ಲರಿಗೂ ಸಹಾಯ ಮಾಡ್ತಾರೆ. 478 00:35:42,480 --> 00:35:45,520 ಹಾಗಾದರೆ, ತಾತ, ಪೊಲೀಸರಿಗೆ ಸಹಾಯ ಮಾಡ್ತೀರಾ? 479 00:35:49,000 --> 00:35:50,200 ಈ ಜನರು ಯಾರು? 480 00:35:51,600 --> 00:35:53,640 ಮಗು ಸರಿಯಾದ ಪ್ರಶ್ನೆ ಕೇಳಿದ, ಖಾನ್ ಅವರೇ. 481 00:35:54,200 --> 00:35:55,280 ದಾನಿಶ್, 482 00:35:57,520 --> 00:35:59,800 ಹೋಗಿ, ಕಾರಿನಲ್ಲಿರುವ ನನ್ನ ಕನ್ನಡಕ ತಂದುಕೊಡು. 483 00:35:59,880 --> 00:36:01,600 - ಸರಿ, ದಾದು. - ಹೋಗು, ಪುಟ್ಟ. 484 00:36:03,440 --> 00:36:04,920 ನೀವು ಮಾಡ್ತಿರೋದು ತಪ್ಪು. 485 00:36:05,000 --> 00:36:08,520 ಸರಿ ಮತ್ತು ತಪ್ಪಿನ ಬಗ್ಗೆ ಭಾಷಣವನ್ನ ನೀವು ಬಗೆಬೀರಿಕೆ ಮಾಡುವವರಿಗೆ ನೀಡಿ. 486 00:36:09,520 --> 00:36:10,640 ಈ ಜನರು ಯಾರು? 487 00:36:14,960 --> 00:36:16,880 ವಿತರಣೆ ವಸ್ತುವಿಗಾಗಿ ಅಂಗಡಿಗೆ ಬರ್ತಿದ್ದ. 488 00:36:16,960 --> 00:36:19,800 - ಹೆಸರು? - ಬಹುಶಃ ಶಾದಾಬ್. 489 00:36:22,160 --> 00:36:24,320 - ಖಚಿತವಾಗಿ ಹೇಳಲಾರೆ. - ಯಾವ ವಿತರಣೆ ವಸ್ತು? 490 00:36:26,560 --> 00:36:27,600 ಕೇಳಿಸಲಿಲ್ವಾ? 491 00:36:34,360 --> 00:36:37,600 ಮೊದಲ ಸಲ ಎರಡು ಲಕ್ಷ ರೂಪಾಯಿ. 492 00:36:39,080 --> 00:36:41,880 - ಮತ್ತು ಎರಡನೇ ಸಲ-- - ಮೊಳೆಗಳು ಮತ್ತು ಬಾಲ್ ಬೇರಿಂಗ್'ಗಳು. 493 00:36:45,880 --> 00:36:46,840 ಮತ್ತು ಇನ್ನೊಬ್ಬ? 494 00:36:47,680 --> 00:36:49,400 ಇನ್ನೊಬ್ಬನನ್ನು ಎಂದೂ ಭೇಟಿಯಾಗಿಲ್ಲ. 495 00:36:50,960 --> 00:36:52,080 ನನ್ನ ಕೆಲಸ ಆಗಿದ್ದದ್ದು, 496 00:36:53,360 --> 00:36:56,000 - ಹಣ ತಲುಪಿಸುವುದು. - ಇವತ್ತು ತಲುಪಿಸಿದಂತೆ? 497 00:36:56,080 --> 00:36:59,680 ದೇವರಾಣೆ, ನನಗೆ ತಿಳಿದಿರಲಿಲ್ಲ ಇಂತಹ ಭಯೋತ್ಪಾದನೆಗೆ ಕಾರಣವಾಗುತ್ತೆ ಅಂತ... 498 00:37:00,760 --> 00:37:03,400 ಇದೇ ಕೊನೆಯ ಕೆಲಸ ಅಂದಿದ್ದರು. 499 00:37:03,480 --> 00:37:04,840 ಅವರು ಮತ್ತೆ ಎಂದಿಗೂ-- 500 00:37:05,640 --> 00:37:08,160 - ಮೊತ್ತ ಎಷ್ಟು? - ಐದು ಲಕ್ಷ. 501 00:37:08,800 --> 00:37:10,840 ಸಂಪರ್ಕಸಿದವರು ಯಾರು ಮತ್ತು ಹೇಗೆ? 502 00:37:10,920 --> 00:37:13,360 ಗೊತ್ತಿಲ್ಲ. ಬೇರೆ ಬೇರೆ ಸಂಖ್ಯೆಗಳಿಂದ ಕರೆ ಮಾಡಿದರು. 503 00:37:14,320 --> 00:37:18,160 ಈ ಹಣ ಅವರು ಪಾರಾಗುವುದಕ್ಕೋ ಅಥವಾ ಮುಂದಿನ ದಾಳಿಗೋ? 504 00:37:18,360 --> 00:37:21,160 ನೀವು ಪೋಲೀಸ್. ನೀವು ಕಂಡುಹಿಡಿಯಿರಿ. 505 00:37:21,800 --> 00:37:22,840 ನಾವು ಧಾರ್ಮಿಕ ಜನರು. 506 00:37:23,560 --> 00:37:26,200 - ನಮ್ಮನ್ನು ಅಪಹಾಸ್ಯ ಮಾಡಿದ್ದೀರಿ. - ಬಾಯಿ ಮುಚ್ಚು! 507 00:37:27,880 --> 00:37:30,840 ಅಪಹಾಸ್ಯ ಮಾಡುವುದು ಬೇಡವಾಗಿತ್ತು. ಹಾಗಾಗಿ ಇಲ್ಲಿಗೆ ಕರೆತಂದೆವು. 508 00:37:31,600 --> 00:37:35,560 ಇಲ್ಲದಿದ್ದರೆ, ಸೆಕ್ಷನ್ 123ಎ ಮತ್ತು 153ಎ ವಿಧಿಸಿ, 509 00:37:35,640 --> 00:37:37,960 ಪೊಲೀಸ್ ಠಾಣೆಯಲ್ಲಿ ಉಲ್ಟಾ ನೇತುಹಾಕುತ್ತಿದ್ದೆವು. 510 00:37:43,920 --> 00:37:46,200 ನಿಮ್ಮ ಪೂರ್ತಿ ಎರಡು ದಿನಗಳು ಬೇಕು, ಖಾನ್ ಅವರೇ. 511 00:37:47,480 --> 00:37:49,320 ಸುದೀರ್ಘವಾಗಿ ಮಾತಾಡಬೇಕಿದೆ. 512 00:37:50,840 --> 00:37:52,640 ಹುಡುಗನನ್ನು ಮನೆಗೆ ಬಿಡುತ್ತೇವೆ. 513 00:37:57,560 --> 00:37:59,280 - ಎಂಥಾ ತಮಾಷೆ. - ಅಂಕಲ್, ನಿಮ್ಮಾಣೆಗೂ. 514 00:37:59,400 --> 00:38:01,480 ಒಂದು ಚಪ್ಪಲಿ ಕೈಯಲ್ಲಿ, ಇನ್ನೊಂದು ಕಾಲಿನಲ್ಲಿ, 515 00:38:01,560 --> 00:38:03,680 - ಹಾಗೆ ನಮ್ಮನ್ನು ಅಟ್ಟಿಸಿಕೊಂಡು ಬಂದಳು. - ಹೌದು. 516 00:38:03,800 --> 00:38:07,200 ಅಂದಿನಿಂದ ನಮ್ಮ ನೆರೆಹೊರೆಯಲ್ಲಿ ಅವಳನ್ನು 'ಕುಂಟಿ' ಅಂತ ಕರೀತಾರೆ. 517 00:38:08,200 --> 00:38:09,640 - ಆಂಟಿ. - ಹಾಂ? 518 00:38:09,680 --> 00:38:12,680 ನೀವು ಹೀಗೆ ತಿನ್ನಿಸುತ್ತಿದ್ದರೆ, ನಾವು ನಾಳೆ ಹೊರಡಲು ಕಷ್ಟವಾಗುತ್ತೆ. 519 00:38:12,840 --> 00:38:14,600 ಹಾಗಾದ್ರೆ ಹೋಗಬೇಡಿ, ಹೈದರ್ ಭಾಯ್. 520 00:38:17,840 --> 00:38:20,040 ಮತ್ತೆ, ಮುಂದೆ ಏನು ಮಾಡಬೇಕೆಂದು ಯೋಚಿಸಿದ್ದೀರಾ? 521 00:38:20,400 --> 00:38:24,640 ಈಗ ಈ ಪ್ರವಾಸದಲ್ಲಿ ಕೊನೆಯ ಕೆಲಸ ಬಾಕಿ ಇದೆ. 522 00:38:26,680 --> 00:38:28,400 ನಂತರ ದೇವರ ದಯೆಯಿದ್ದರೆ, 523 00:38:28,480 --> 00:38:31,440 ಇರಾನಿನಲ್ಲಿ ವ್ಯಾಪಾರ ಶುರುಮಾಡಿ, ಅಲ್ಲಿಯೇ ನೆಲೆಸುತ್ತೇನೆ. 524 00:38:31,520 --> 00:38:35,200 ಅದು ಹೇಗೆ ಆಗುತ್ತೆ? ಮದುವೆ-ಸಂಸಾರ ಬೇಡವಾ? 525 00:38:35,360 --> 00:38:36,840 ನಾವು ನಿಮ್ಮ ವಯಸ್ಸಿನಲ್ಲಿದ್ದಾಗ, 526 00:38:37,000 --> 00:38:40,440 ನಫೀಸಾಗೆ ಆಗಲೇ ನಾಲ್ಕು ವರ್ಷವಾಗಿತ್ತು. ಹೌದಲ್ವಾ, ರೀ? 527 00:38:41,400 --> 00:38:44,760 ವ್ಯಾಪಾರ ಯಾವಾಗಲೂ ಇದ್ದದ್ದೇ. ಮದುವೆಯಾಗು. 528 00:38:44,840 --> 00:38:46,920 ನೀವು ಹೇಳಿದ್ದು ಸಂಪೂರ್ಣವಾಗಿ ಸರಿ, ಆಂಟಿ. 529 00:38:47,000 --> 00:38:51,640 ಇರಾನ್ನಲ್ಲಿ ಖಾಲಿ ಮನೆಯಲ್ಲಿ ಏನು ಮಾಡುತ್ತೀರಾ? ಹೈದರ್ ಭಾಯ್, ಮದುವೆಯಾಗಿ. ಸಮಯ ಬಂದಿದೆ. 530 00:38:52,680 --> 00:38:53,760 ಅಲ್ವಾ, ನಫೀಸಾ? 531 00:38:54,440 --> 00:38:56,160 - ಏನು? - ಮದುವೆ. 532 00:38:57,600 --> 00:38:59,080 ಮಾಡಿಕೊಳ್ಳಬೇಕೋ ಬೇಡವೋ? 533 00:39:00,960 --> 00:39:04,600 ನಿಜವಾಗಿಯೂ ಪ್ರೀತಿಸುತ್ತಿದ್ದರೆ, ಅದನ್ನು ನಿಭಾಯಿಸುವ ನಿಯತ್ತಿದ್ದರೆ, ಹೌದು. 534 00:39:06,080 --> 00:39:08,960 ಆದರೆ ಜೀವನದುದ್ದಕ್ಕೂ ಪ್ರಯಾಣಿಸುತ್ತಿರಬೇಕು ಅಂತಿದ್ದರೆ, ಬೇಡ. 535 00:39:09,840 --> 00:39:10,840 ನಫೀಸಾ. 536 00:39:23,800 --> 00:39:24,880 ನೀನು ತಪ್ಪಾಗಿ ಹೇಳಿದೆ. 537 00:39:26,440 --> 00:39:27,560 ಈಗಷ್ಟೇ ಕೆಳಗೆ. 538 00:39:34,200 --> 00:39:36,640 ನನಗೆ ಧೈರ್ಯ ಮತ್ತು ನಿಯತ್ತು ಎರಡೂ ಇವೆ. 539 00:39:39,200 --> 00:39:41,520 ಮತ್ತು ಮನೆಯಲ್ಲಿ ಯಾರಾದರೂ ಕಾಯುತ್ತಿದ್ದರೆ, 540 00:39:42,520 --> 00:39:44,600 ಹಿಂತಿರುಗಲು ಮನಸ್ಸೂ ಬರುತ್ತೆ. 541 00:39:45,480 --> 00:39:47,680 ಸುತ್ತಿ ಬಳಸಿ ಮಾತಾಡಿದರೆ, ನಾನು ಹೋಗ್ತೀನಿ. 542 00:39:47,800 --> 00:39:49,040 ನಫೀಸಾ. 543 00:39:51,560 --> 00:39:53,480 ನಿನ್ನನ್ನು ಮನದುಂಬಿ ಪ್ರೀತಿಸುವೆ. 544 00:39:55,160 --> 00:39:58,960 ನಾನು ಈ ಹಿಂದೆ ಯಾರ ಬಗ್ಗೆಯೂ ಈ ರೀತಿ ಭಾವಿಸಿಲ್ಲ. 545 00:39:59,560 --> 00:40:00,920 ಸದಾ ನಿನ್ನನ್ನ ಖುಷಿಯಾಗಿಡುವೆ. 546 00:40:04,520 --> 00:40:07,520 ನೀನು ಎಲ್ಲಿರುತ್ತೀಯೋ, ಅದೇ ಈ ಅಲೆಮಾರಿಯ ಮನೆಯೂ ಆಗಿರುತ್ತೆ. 547 00:40:12,360 --> 00:40:13,520 ನನ್ನನ್ನ ಮದುವೆ ಆಗ್ತೀಯಾ? 548 00:40:18,520 --> 00:40:19,600 ಯೋಚಿಸಿ ಹೇಳ್ತೀನಿ. 549 00:40:25,800 --> 00:40:28,280 - ಥತ್, ತಡವಾಯ್ತು ಅನ್ಸುತ್ತೆ. ಹಾಯ್. - ಹೌದು, ಸರ್. 550 00:40:28,360 --> 00:40:30,280 ಇಂದು ನಿಮಗೆ ಒದೆಯೂ ಬೀಳಬಹುದು. 551 00:40:30,360 --> 00:40:31,520 - ಅಪ್ಪಾ! - ಹಾಯ್, ಚಾಂಪಿಯನ್! 552 00:40:32,160 --> 00:40:33,320 ಆದರೆ ನನ್ನ ಸೈಕಲ್ ಎಲ್ಲಿ? 553 00:40:33,400 --> 00:40:37,160 ಮೊದಲು ಅಪ್ಪುಗೆ ಕೊಡು, ಹುಟ್ಟುಹಬ್ಬದ ಹುಡುಗನೇ. ಜನ್ಮದಿನದ ಶುಭಾಶಯಗಳು! 554 00:40:37,200 --> 00:40:40,640 ನಿನ್ನ ಸೈಕಲ್ ನಾಳೆ ಬರಲಿದೆ, ಮಾತು ಕೊಡ್ತೀನಿ. ಅದೂ ಕೆಂಪು ಬಣ್ಣದ್ದು! 555 00:40:40,760 --> 00:40:42,040 - ಪಕ್ಕಾನಾ? - ಹುಂ, ಪಕ್ಕಾ. 556 00:40:42,120 --> 00:40:44,000 - ಜನ್ಮದಿನದ ಶುಭಾಶಯ. - ಧನ್ಯವಾದ, ಅಂಕಲ್. 557 00:40:44,080 --> 00:40:45,680 ಆದರೆ, ಅಂಕಲ್, ಉಡುಗೊರೆ ಎಲ್ಲಿ? 558 00:40:46,280 --> 00:40:48,160 ನಿನಗೆ ಉಡುಗೊರೆ... 559 00:40:48,280 --> 00:40:50,680 ನಾಳೆ ನಿನಗೆ ಬರುತ್ತಿರುವ ಸೈಕಲ್, 560 00:40:50,800 --> 00:40:52,480 - ನಾನೇ ಕೊಡುತ್ತಿರುವುದು. - ಹೇ! 561 00:40:52,560 --> 00:40:53,440 - ಅಪ್ಪಾ? - ಏನಂದೆ? 562 00:40:53,520 --> 00:40:54,880 - ಒಂದೇ ತಾನೆ. - ಬಂದ್ರಾ ನೀವು? 563 00:40:54,960 --> 00:40:56,000 - ಹಾಯ್. - ಧನ್ಯವಾದ. 564 00:40:56,680 --> 00:40:59,080 - ಅವನಿಗೆ ಯಾಕೆ ಧನ್ಯವಾದ? - ಯಾಕೆಂದರೆ ನನಗೆ ಗೊತ್ತು 565 00:40:59,160 --> 00:41:01,040 ಇವನೇ ಪಾರ್ಟಿ ಬಗ್ಗೆ ಜ್ಞಾಪಿಸಿರಬೇಕು. 566 00:41:01,600 --> 00:41:04,400 ನಿನ್ನ ಗಂಡನನ್ನ ಕಡಿಮೆ ಅಂದಾಜು ಮಾಡುತ್ತೀಯಾ. 567 00:41:04,480 --> 00:41:06,080 ನಾನು ಸಮಯಕ್ಕೆ ಸಿದ್ಧನಾಗಿದ್ದೆ. 568 00:41:06,160 --> 00:41:08,040 ಈ ಕಬೀರ್'ನಿಂದಾಗಿ ನಮಗೆ ತಡವಾಯಿತು. 569 00:41:08,120 --> 00:41:10,000 - ನಿಜವಾಗಲೂ? - ಅಲ್ವಾ, ಕಬೀರ್? 570 00:41:10,080 --> 00:41:13,040 - ನನ್ನಿಂದನಾ? - ಇರಲಿ ಬಿಡು, ಕಬೀರ್. ನನಗೆ ಚೆನ್ನಾಗಿ ಗೊತ್ತು. 571 00:41:13,120 --> 00:41:14,680 - ತಗೋ, ಕೇಕ್ ತಿನ್ನು. - ಧನ್ಯವಾದ. 572 00:41:14,800 --> 00:41:16,600 - ಕೇಕನ್ನೂ ಕತ್ತರಿಸಿಬಿಟ್ಟೆಯಾ? - ಇನ್ನೇನು? 573 00:41:16,640 --> 00:41:18,920 - ಕೇಕ್ ಕತ್ತರಿಸಿ, ಮುಗಿದೂ ಹೋಯ್ತು. - ಏನು? 574 00:41:19,000 --> 00:41:20,680 2 ತುಣುಕುಗಳು ಉಳಿದವು, ಒಂದು ಇಲ್ಲಿದೆ. 575 00:41:20,800 --> 00:41:23,160 - ಇನ್ನೊಂದು ಎಲ್ಲಿದೆ? - ಇನ್ನೊಂದು ಇಲ್ಲಿದೆ. 576 00:41:25,160 --> 00:41:27,120 ಕ್ಷಮಿಸು, ನಿನ್ನ ಕೇಕ್ ತಿಂದುಬಿಟ್ಟೆ. 577 00:41:27,560 --> 00:41:29,920 ತಾರಾ ದೆಹಲಿಗೆ ಬಂದಿದ್ದಾಳೆಂದು ಹೇಳಲೇ ಇಲ್ಲ. 578 00:41:30,000 --> 00:41:31,760 ಇವಳ ಕರೆ ಬಂತು, ಪಾರ್ಟಿಗೆ ಕರೆದೆ. 579 00:41:31,840 --> 00:41:34,600 ಈಗ ಬಂದಿದ್ದೀಯಾ ಅಂದಮೇಲೆ, ದಯವಿಟ್ಟು ಊಟ ಮಾಡಿ ಹೋಗು. 580 00:41:34,640 --> 00:41:36,200 ಇಷ್ಟು ಪ್ರೀತಿಯಿಂದ ಹೇಳ್ತಿದ್ದೀಯಾ. 581 00:41:37,000 --> 00:41:38,360 ಊಟದಲ್ಲಿ ವಿಷ ಇಲ್ಲ ತಾನೆ? 582 00:41:39,760 --> 00:41:41,160 ನೀನಂತೂ ಆಹ್ವಾನಿಸಲಿಲ್ಲ. 583 00:41:42,040 --> 00:41:45,320 ಆಯುಷ್'ನ ಹುಟ್ಟುಹಬ್ಬವಾದ್ದರಿಂದ ಬಂದೆ. ಸರಿ, ನಾನು ಹೊರಡುತ್ತೇನೆ. 584 00:41:45,400 --> 00:41:47,080 ಇರು, ಶೆಟ್ಟಿ. ಎಲ್ಲಿಗೆ ಹೋಗುವೆ? 585 00:41:47,880 --> 00:41:51,200 - ಗೆಳೆಯನನ್ನು ಭೇಟಿಯಾಗಲು. - ನಿನಗೆ ಗೆಳೆಯನಿದ್ದಾನಾ? ಪಾಪ ಅವನು. 586 00:41:51,320 --> 00:41:52,960 ಊಟ ಮಾಡಿಕೊಂಡು ಹೋಗು. 587 00:41:53,040 --> 00:41:55,520 ಈ ಸಲ ಬೇಡ, ಶೃತಿ. ಸಭೆ ಸೇರುವುದಿದೆ. 588 00:41:55,600 --> 00:41:57,480 - ಜನ್ಮದಿನದ ಶುಭಾಶಯ, ಆಯುಷ್. - ಧನ್ಯವಾದ. 589 00:41:58,120 --> 00:42:00,640 ತಗೋ. ಉಳಿದಿದೆ. ತಿನ್ನು. 590 00:42:03,600 --> 00:42:05,360 ಎಂತಹ ವಿಚಿತ್ರ ಹೆಂಗಸು. 591 00:42:05,440 --> 00:42:07,920 - ನಿಜಕ್ಕೂ ವಿಚಿತ್ರ. - ಮೇಡಂ, ಒಂದು ಕುಟುಂಬದ ಫೋಟೋ. 592 00:42:08,000 --> 00:42:09,760 ಹಾಂ, ಖಂಡಿತಾ. ಕುಟುಂಬದ ಫೋಟೋ. 593 00:42:09,840 --> 00:42:11,200 ಸರಿ. ಬನ್ನಿ. 594 00:42:11,320 --> 00:42:13,280 ನೀನು ಎಲ್ಲಿಗೆ ಹೋಗುತ್ತಿದ್ದೀಯಾ? 595 00:42:13,360 --> 00:42:15,360 ಕೇಳಿಸಲಿಲ್ವಾ? ಕುಟುಂಬದ ಫೋಟೋ. ಬಾ. 596 00:42:15,440 --> 00:42:16,640 - ಬೇಡ. ನೀವೇ... - ಬಾಪ್ಪ. 597 00:42:16,680 --> 00:42:17,840 ಬನ್ನಿ, ಅಂಕಲ್. 598 00:42:19,840 --> 00:42:20,840 ಬನ್ನಿ. 599 00:42:26,280 --> 00:42:30,560 "ನೀವು ಏನನ್ನು ಹುಡುಕುತ್ತಿದ್ದೀರೋ ಅದು ನಿಮ್ಮನ್ನು ಹುಡುಕುತ್ತಿದೆ." ಅಂದರೆ? 600 00:42:31,280 --> 00:42:35,120 ಅಂದರೆ... ಈಗ ಅರ್ಥ ಮಾಡಿಕೊಂಡು ಏನು ಸಾಧಿಸುತ್ತೀಯಾ, ಮೊಹ್ಸಿನ್ ಭಾಯ್? 601 00:42:36,280 --> 00:42:37,160 ಇರಲಿ ಬಿಡು. 602 00:42:41,880 --> 00:42:45,040 - ಮೊಹ್ಸಿನ್, ಮೇಣದಬತ್ತಿ ತಗೊಂಡು ಬಾ. - ನೀನು ಇಟ್ಟಿದ್ದು. ತಗೊಂಡು ಬಾ. 603 00:42:45,120 --> 00:42:48,040 - ಆಯ್ತಪ್ಪಾ. - ಇರಲಿ ಬಿಡು. 604 00:42:48,120 --> 00:42:51,000 ಆ ಕಪಾಟಿನಲ್ಲಿ ನೋಡು. ಹೋಗು. ಅದರಲ್ಲಿ ನೋಡು. 605 00:42:51,080 --> 00:42:53,320 ಈ ವಿದ್ಯುತ್ ಯಾವಾಗ ಬರುತ್ತೋ ಗೊತ್ತಿಲ್ಲ. 606 00:42:53,400 --> 00:42:54,920 ಮೋಂಬತ್ತಿ ಇಟ್ಟೆ ಅಷ್ಟೇ, 607 00:42:55,000 --> 00:42:57,080 ಚರಂಡಿಗೆ ಬಾಲ್ ಹಾಕಿಲ್ಲ ನಾನೇ ಹೋಗಿ ತರೋದಕ್ಕೆ. 608 00:42:59,200 --> 00:43:02,160 ಇವನು ವಸ್ತುಗಳನ್ನು ಎಲ್ಲೆಲ್ಲೋ ಇಟ್ಟು, ಹುಡುಕಲು ನಮಗೆ ಹೇಳ್ತಾನೆ. 609 00:43:02,280 --> 00:43:04,480 ನೀವು ಜಗಳ ನಿಲ್ಲಿಸ್ರೋ. 610 00:43:04,560 --> 00:43:05,960 ಇಲ್ಲಿ ವಿದ್ಯುತ್ ಇಲ್ಲ. 611 00:43:12,520 --> 00:43:13,480 ಸಿಕ್ಕಿತಾ? 612 00:43:16,280 --> 00:43:17,840 ನೀನೇ ಇಟ್ಟಿದ್ದು ಅಂದೆ ತಾನೆ. 613 00:43:17,920 --> 00:43:19,160 ಇದು ಕೊನೆಯದು. 614 00:43:39,160 --> 00:43:41,680 ಸುಮ್ಮನೆ ಪುಸ್ತಕವನ್ನು ಓದು. 615 00:43:44,360 --> 00:43:45,480 ಕ್ಯಾಮನಾಕ್ 616 00:43:58,720 --> 00:44:00,360 - ಹಲೋ? - ಹಲೋ, ಅಮ್ಮಿ. 617 00:44:00,440 --> 00:44:01,600 ಶಾದಾಬ್? 618 00:44:01,680 --> 00:44:04,560 - ಹೌದು, ಅಮ್ಮಿ. - ಜಮೀಲಾ. ಬೇಗ ಬಾ. ಶಾದಾಬನ ಕರೆ. 619 00:44:05,360 --> 00:44:07,160 ಹಲೋ, ಶಾದಾಬ್? ಎಲ್ಲಿದಿಯಾ? 620 00:44:07,240 --> 00:44:09,200 ಅಮ್ಮಿ, ಒಬ್ಬೊಬ್ಬರಾಗಿ ಮಾತಾಡಿ. 621 00:44:09,280 --> 00:44:11,720 ಶಾದಾಬ್, ಹೇಗಿದ್ದೀಯ ಮಗನೇ? ಯಾವಾಗ ವಾಪಸ್ ಬರ್ತೀಯಾ? 622 00:44:11,800 --> 00:44:13,480 ನಾನು ಚೆನ್ನಾಗಿದ್ದೀನಿ, ಅಮ್ಮಿ. 623 00:44:14,640 --> 00:44:15,800 ಬೇಗ ವಾಪಸ್ ಬರ್ತೀನಿ. 624 00:44:15,880 --> 00:44:17,560 ಪಾಂಡೆ, ವಿಕ್ರಂ ಸರ್'ಗೆ ಎಚ್ಚರಿಸು. 625 00:44:18,960 --> 00:44:19,920 ಹುಡುಗರು ಸಿಕ್ಕಿದರು. 626 00:46:40,920 --> 00:46:42,920 ಉಪ ಶೀರ್ಷಿಕೆ ಅನುವಾದ: ಹೇಮಂತ್ ಕುಮಾರ್ 627 00:46:43,000 --> 00:46:45,000 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆ. ಜಿ.