1 00:00:06,080 --> 00:00:08,290 ರೀಚರ್ ಹಿಂದಿನ ಸಂಚಿಕೆಯಲ್ಲಿ... 2 00:00:11,260 --> 00:00:12,070 ನಿನ್ನ ಸಂದೇಶ ಸಿಕ್ಕಿತು. 3 00:00:12,270 --> 00:00:14,330 110, 10-30. ಸಂಕಟದ ಕರೆ. 4 00:00:14,530 --> 00:00:15,700 ಕಾಲ್ವಿನ್ ಫ್ರಾನ್ಸ್ ಕೊಲೆಯಾಗಿದೆ. 5 00:00:15,900 --> 00:00:18,660 ನಿನಗೆ ಕರೆ ಮಾಡಿದನೆಂದರೆ, ಘಟಕದ ಉಳಿದವರನ್ನೂ ಸಂಪರ್ಕಿಸಿರಬಹುದು. 6 00:00:18,860 --> 00:00:22,180 ಓ'ಡೊನೆಲ್, ಡಿಕ್ಸನ್, ಸ್ಯಾಂಚೆಜ್, ಒರೊಜ್ಕೊಗೆ ಕರೆ ಮಾಡಿದೆ. ಯಾರೂ ಉತ್ತರಿಸುತ್ತಿಲ್ಲ. 7 00:00:29,110 --> 00:00:30,220 ಸಹಾಯಕನಿಗೆ ದುಡ್ಡು ಕೊಟ್ಟೆ. 8 00:00:30,420 --> 00:00:31,720 ನೀಗ್ಲೇ ಚೆಕ್ ಇನ್ ಮಾಡಿದಳೆಂದು... 9 00:00:31,920 --> 00:00:34,760 ಆ ಹೋಟೆಲ್ ಮತ್ತು ಅವರ ಮೇಲೆ ಕಣ್ಣಿಡು. 10 00:00:34,960 --> 00:00:37,700 - ನೀನು ಯಾರೆಂದು ಯಾರಿಗೂ ತಿಳಿಯುವುದಿಲ್ಲ. - ಆದರೆ ನಿಮಗೆ ತಿಳಿದಿದೆ. 11 00:00:45,290 --> 00:00:47,630 - ಹೇ, ಓ'ಡೊನೆಲ್. - ಹೇ, ನೀಗ್ಲೇ. 12 00:00:48,210 --> 00:00:50,950 ಎಎಮ್ ಮೊದಲಕ್ಷರ ಬರುವ ಕೆಲವು ಹೆಸರುಗಳ ಪಟ್ಟಿ. 13 00:00:51,140 --> 00:00:53,240 ನನಗೆ ಎಲ್ಲಾ ಪುಟದಲ್ಲೂ ಕೇವಲ ಸಂಖ್ಯೆಗಳು ಸಿಕ್ಕಿವೆ. 14 00:00:53,440 --> 00:00:56,530 - ಕ್ರಮವಿಲ್ಲ, ಅರ್ಥವಿಲ್ಲ. ಏನೂ ಇಲ್ಲ. - ನಮಗೆ. ಸದ್ಯಕ್ಕೆ. 15 00:00:56,730 --> 00:00:57,580 ಏನು ಯೋಚಿಸುತ್ತಿರುವೆ? 16 00:00:57,780 --> 00:01:01,330 ವಿಶೇಷ ತನಿಖಾಧಿಕಾರಿಗಳನ್ನು ಕೊಲ್ಲಲು ಯಾರೋ ಸಂಚು ಮಾಡುತ್ತಿದ್ದಾರೆ. 17 00:01:01,530 --> 00:01:03,060 ಅವರು ನಮ್ಮನ್ನು ಬೆನ್ನಟ್ಟುತ್ತಿದ್ದಾರೆ. 18 00:01:04,060 --> 00:01:05,020 ಒಳ್ಳೆಯದು. 19 00:01:09,190 --> 00:01:12,930 ಯಾರಾದರೂ 110 ರ ಹಿಂದೆ ಬಿದ್ದಿದ್ದರೆ, ಅವರು ನಮ್ಮನ್ನೇಕೆ ಸುಮ್ಮನೆ ಬಿಟ್ಟಿದ್ದಾರೆ? 20 00:01:13,130 --> 00:01:16,300 ನೀನು ನಿನ್ನ ಕುಟುಂಬದೊಂದಿಗೆ ಕಾಡಿನಲ್ಲಿದ್ದೆ, ನನ್ನನ್ನು ಯಾರೂ ಹುಡುಕಲು ಸಾಧ್ಯವಿರಲಿಲ್ಲ, 21 00:01:16,500 --> 00:01:18,560 ಮತ್ತು ಬಹುಶಃ ಅವರಿನ್ನೂ ನೀಗ್ಲೇಯನ್ನು ತಲುಪಿಲ್ಲ. 22 00:01:18,760 --> 00:01:20,140 ಅವರು ನಮ್ಮ ಹೋಟೆಲ್ ಕೋಣೆಗಳಲ್ಲಿದ್ದರು. 23 00:01:20,340 --> 00:01:24,150 ಬಹುಶಃ ನಮ್ಮನ್ನು ಹಿಡಿಯಲು ಅಥವಾ ಎಲ್ಲಿಗೋ ಕರೆದೊಯ್ಯಲು, ನಂತರ ಏಕೋ ಹಿಂದೆ ಸರಿದಿರಬೇಕು. 24 00:01:24,340 --> 00:01:26,400 ಇತರರನ್ನು ಎಚ್ಚರಿಸಲು ನಾವು ಮತ್ತೆ ಪ್ರಯತ್ನಿಸಬೇಕು. 25 00:01:26,600 --> 00:01:29,030 - ಸ್ಯಾಂಚೆಜ್, ಒರೊಜ್ಕೊಗೆ ಕರೆ ಮಾಡುತ್ತೇನೆ. - ನಾನು ಡಿಕ್ಸನ್ ಗೆ. 26 00:01:29,220 --> 00:01:31,900 ರಸ್ತೆಯ ಆ ಬದಿಯಲ್ಲಿ ಎರಡು ಮನೆಗಳ ಆಚೆ ಕಪ್ಪು ಸೆಡಾನ್ ಇದೆ 27 00:01:32,100 --> 00:01:33,500 ನಿನ್ನೆಯದೇ. 28 00:01:34,550 --> 00:01:37,130 ನಿನ್ನ ಊಹೆ ಸರಿಯಾಗಿರಬಹುದು. ನಮ್ಮನ್ನು ಹಿಂಬಾಲಿಸುತ್ತಿದ್ದಾರೆ. 29 00:01:38,130 --> 00:01:39,410 ಏನು ಮಾಡಬೇಕೆಂದಿರುವೆ? 30 00:01:39,610 --> 00:01:41,350 ನಾನು ಹೋಗಿ ನನ್ನನ್ನು ಪರಿಚಯಿಸಿಕೊಳ್ಳುವೆ. 31 00:01:50,020 --> 00:01:51,810 ಆಹಾ ಎಂಥ ಸುಂದರಾಂಗ. 32 00:01:54,570 --> 00:01:55,990 ಅವನೇನು ಮಾಡಲಿದ್ದಾನೆ? 33 00:02:05,450 --> 00:02:07,120 ಅಯ್ಯೋ, ನನ್ನ ಮೂಗು! 34 00:02:09,870 --> 00:02:10,710 ಬಂದೂಕು! 35 00:02:18,470 --> 00:02:20,580 ಹಳೆಯ ದಿನಗಳ ನೆನಪಾಯಿತು. 36 00:02:20,780 --> 00:02:24,560 ಹೌದು, ನಾನು ಕೆಲಸಗಳನ್ನು ಮುಗಿಸುವಾಗ, ನೀನು ಪಕ್ಕದಲ್ಲಿ ನಿಂತು ನೋಡುವುದು. 37 00:02:25,390 --> 00:02:28,270 ಸ್ನೇಹಿತರೇ, ಇದು ಅವನ ಬಂದೂಕು. 38 00:02:29,140 --> 00:02:30,350 ಎನ್ ವೈ ಪಿ ಡಿ? 39 00:02:30,810 --> 00:02:32,610 ಹೆಸರು ಗೈಟಾನೊ ರುಸ್ಸೊ. 40 00:02:35,070 --> 00:02:37,690 ಹೇ, ನನ್ನನ್ನು ನೋಡಬೇಡ. ಎಲ್ಲಾ ನೀನೇ ಮಾಡಿದ್ದು ಎಂದೆಯಲ್ಲ. 41 00:02:50,710 --> 00:02:53,790 ದೊಡ್ಡ ತಪ್ಪು ಮಾಡಿದೆ. 42 00:02:54,790 --> 00:02:58,160 ರುಸ್ಸೊ ಎಚ್ಚರಗೊಂಡ ಕೂಡಲೇ, ಇಡೀ ಎನ್ ವೈಪಿಡಿ ನಿನ್ನ ಹಿಂದಿರುತ್ತೆ. 43 00:02:58,360 --> 00:02:59,950 ಅವನಿಗೆ ಏಕೆ ಅಷ್ಟು ಬಲವಾಗಿ ಹೊಡೆದೆ? 44 00:03:00,150 --> 00:03:01,340 ನಾನು ಮೃದುವಾಗಿ ಹೊಡೆಯುವುದಿಲ್ಲ. 45 00:03:02,340 --> 00:03:05,660 - ಪೋಲೀಸನಿಗೆ ಹೊಡೆದದ್ದಕ್ಕೆ ಜೈಲಿಗೆ ಹೋಗುವೆ. - ನನಗೆ ನಾಯಿಯ ಬಗ್ಗೆ ಬೇಜಾರಿತ್ತು. 46 00:03:05,860 --> 00:03:08,460 ಫ್ರಾನ್ಸಿ, ಸ್ವಾನ್ ಅನ್ನು ಕೊಲ್ಲುವಲ್ಲಿ ಅವನ ಕೈವಾಡವಿತ್ತೆಂದುಕೊಂಡೆ. 47 00:03:08,660 --> 00:03:12,130 ನೀನು ನಮಗೆ ಏನು ಕಲಿಸಿದ್ದೆ? "ತನಿಖೆಯಲ್ಲಿ ಊಹೆ ಮಾಡಿದರೆ ಸಾವು ಖಚಿತ." 48 00:03:12,330 --> 00:03:14,550 ಇಲ್ಲ, ಅವನು ಕಲಿಸಿದ್ದು, "ತನಿಖೆಯಲ್ಲಿ ವಿವರಗಳು ಮುಖ್ಯ" ಎಂದು. 49 00:03:14,750 --> 00:03:18,320 ನಾನು ಅವನನ್ನು ಕೊಲ್ಲಲಿಲ್ಲ. ಮೂಗು ಮುರಿದೆ ಅಷ್ಟೇ. ಎಚ್ಚರವಾಗುವಷ್ಟರಲ್ಲಿ ಸರಿಹೋಗಿರುತ್ತಾನೆ. 50 00:03:19,360 --> 00:03:22,430 ಛೇ. ಗೈಟಾನೊ ರುಸ್ಸೊ. 51 00:03:22,630 --> 00:03:26,140 ರುಸ್ಸೊ. ಅವನು ಫ್ರಾನ್ಸ್ ಕೊಲೆಯ ತನಿಖಾಧಿಕಾರಿ. 52 00:03:26,340 --> 00:03:29,730 - ಫೈಲ್ ಗಳಲ್ಲಿ ನೋಡಿದ್ದೆ. - ಅವನು ನಿಮ್ಮ ಜಾಡು ಹೇಗೆ ಹಿಡಿದ? 53 00:03:29,930 --> 00:03:32,650 ಎನ್ವೈಪಿಡಿ ಫ್ರಾನ್ಸ್ ಮಾಡಿದ ಕರೆಗಳನ್ನು ನೋಡಿ, ನಿನ್ನ ಹೆಸರು ಗುರುತಿಸಿ, 54 00:03:32,850 --> 00:03:34,570 ನೀನು ಟಿಕೆಟ್ ಖರೀದಿಸಿದಾಗ ಎಚ್ಚೆತ್ತುಕೊಂಡು, 55 00:03:34,770 --> 00:03:37,280 ನೀನಿಲ್ಲಿ ಬಂದಾಗಿನಿಂದ ನಿನ್ನ ಹಿಂದೆ ಬಿದ್ದಿದೆ. ಏಕೆ ಎಂಬುದು ಪ್ರಶ್ನೆ? 56 00:03:37,480 --> 00:03:38,530 ಎಲ್ಲಿ ಎಂಬುದು ಕೂಡ? 57 00:03:38,730 --> 00:03:42,160 ಜೈಲಿಗೆ ಹೋಗುವುದು ತಪ್ಪಿಸಲು ಈ 6'5" ಗಾತ್ರದವನನ್ನು ಎಲ್ಲಿ ಬಚ್ಚಿಡುವುದು? 58 00:03:42,360 --> 00:03:44,620 ನಾನು ಹೋಗುತ್ತಿಲ್ಲ. ಎಲ್ಲವೂ ಇಲ್ಲಿ ನಡೆಯುತ್ತಿದೆ. 59 00:03:44,820 --> 00:03:46,160 ಅಥವಾ ಇಲ್ಲದಿರಬಹುದು. 60 00:03:46,360 --> 00:03:48,960 ಸ್ಯಾಂಚೆಜ್ ಮತ್ತು ಒರೊಜ್ಕೊಗೆ ಕರೆ ಮಾಡಿದಾಗ, ವಾಯ್ಸ್ ಮೇಲ್ ತುಂಬಿತ್ತು. 61 00:03:49,160 --> 00:03:50,120 ಅದು ಕೆಟ್ಟ ಸಂಕೇತ. 62 00:03:50,320 --> 00:03:53,210 ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಒಳ್ಳೆಯ ಸಮಯ, ಅದೂ, 63 00:03:53,410 --> 00:03:55,650 ಈಗಷ್ಟೇ ನಮ್ಮವನು ಕಾನೂನು ಅಧಿಕಾರಿಗೆ ಹೊಡೆದಿರುವಾಗ. 64 00:03:55,850 --> 00:03:59,200 ಸರಿ. ನಾವು ಅಟ್ಲಾಂಟಿಕ್ ನಗರಕ್ಕೆ ಹೋಗೋಣ, 65 00:03:59,400 --> 00:04:00,970 ನಮ್ಮವರನ್ನು ಹುಡುಕೋಣ. 66 00:04:01,170 --> 00:04:04,220 ಮೊದಲು ಹೋಟೆಲ್ ನಿಂದ ಚೆಕ್ ಔಟ್ ಮಾಡಿ ಒಂದು ಸಾಮಾನ್ಯ ಗಾಡಿಯನ್ನು ಹುಡುಕೋಣ, 67 00:04:04,420 --> 00:04:07,770 ರುಸ್ಸೊ ಪ್ರಜ್ಞೆ ಮರಳಿ ನಮ್ಮನ್ನು ಹುಡುಕುವ ಆದೇಶ ನೀಡುವ ಮುನ್ನ. 68 00:04:07,970 --> 00:04:09,660 ರೇಂಜ್ ರೋವರ್ ಎದ್ದುಕಾಣುತ್ತದೆ. 69 00:04:10,700 --> 00:04:13,000 ನಿನ್ನಿಂದಲೇ ನಾವು ಒಳ್ಳೆಯ ವಸ್ತುಗಳನ್ನು ಪಡೆಯಲು ಸಾಧ್ಯವಿಲ್ಲ. 70 00:04:15,500 --> 00:04:20,420 ರೀಚರ್ 71 00:04:30,720 --> 00:04:33,290 ಇರು, ನನಗೆ ಅರ್ಥವಾಗುತ್ತಿಲ್ಲ! ಕಾರು ಅಪಘಾತವಾಯಿತೇ? 72 00:04:33,490 --> 00:04:35,270 ಇಲ್ಲ. ಅವನು ಕಾರಿಗೆ ಒದ್ದನಷ್ಟೇ. 73 00:04:36,100 --> 00:04:39,340 ಸರಿ, ಹಾಗಾದರೆ ಏರ್ ಬ್ಯಾಗ್ ಹೊರಗೆ ಹೇಗೆ ಬಂತು? 74 00:04:39,540 --> 00:04:40,680 ಅವನು ಕಾರಿಗೆ ಒದ್ದು, 75 00:04:40,870 --> 00:04:44,550 ನಂತರ ಪೋಲೀಸನ್ನು ಹೊರಗೆಳೆದು ನೆಲಕ್ಕುರುಳಿಸಿದನು. 76 00:04:44,750 --> 00:04:46,360 ಈ ವ್ಯಕ್ತಿ ಒಂದು ಪ್ರಾಣಿ. 77 00:04:46,610 --> 00:04:48,820 ಸಮಯ ಬಂದಾಗ, ನನಗೆ ಇನ್ನಷ್ಟು ಜನರು ಬೇಕಾಗುತ್ತಾರೆ. 78 00:04:49,410 --> 00:04:50,490 ಸಿಗುತ್ತದೆ. 79 00:04:51,660 --> 00:04:55,750 ಆದರೆ ಸದ್ಯಕ್ಕೆ, ನೀನು ಅವರನ್ನು ಹಿಂಬಾಲಿಸು ಮತ್ತು ಇದನ್ನು ಹಾಳುಮಾಡಬೇಡ. 80 00:04:56,460 --> 00:04:57,460 ಅರ್ಥವಾಯಿತು. 81 00:05:02,340 --> 00:05:05,170 ಅಲ್ಪಾವಧಿಯ ವಿಮಾನ ನಿಲ್ದಾಣ ಪಾರ್ಕಿಂಗ್ ಲಾಟ್ ಒನ್ ನಲ್ಲಿ ಮಾತ್ರ. 82 00:05:06,840 --> 00:05:09,930 ಅಲ್ಪಾವಧಿಯ ವಿಮಾನ ನಿಲ್ದಾಣ ಪಾರ್ಕಿಂಗ್ ಲಾಟ್ ಒನ್ ನಲ್ಲಿ ಮಾತ್ರ. 83 00:05:11,890 --> 00:05:16,040 ಟ್ರೆಮಾಂಟ್ ನಲ್ಲಿ 2019 ರ ಎಕಾರ್ಡ್ ಒಂದು ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆಗೆ ಮಾರಾಟಕ್ಕಿದೆ. 84 00:05:16,240 --> 00:05:17,340 ನಗದಿಗೆ ಮಾತ್ರ. 85 00:05:17,540 --> 00:05:21,260 ಬ್ರಾಂಕ್ಸ್ ನಲ್ಲಿ ಅತಿ ಹೆಚ್ಚು ಕದಿಯಲ್ಪಡುವ ಮಾದರಿಯಾದರೂ ಅವನಿಗೆ ಕಾಗದಪತ್ರಗಳು ಬೇಕಿಲ್ಲವೇ? 86 00:05:21,460 --> 00:05:23,340 ಅದನ್ನು ತೆಗೆದುಕೊಂಡರೆ, ಕುಂಡಿ ಸುಟ್ಟುಕೊಂಡಂತೆ. 87 00:05:23,540 --> 00:05:27,140 ಬೇರೆ ಆಯ್ಕೆ ಇಲ್ಲ. ನಮ್ಮ ಮೇಲೆ ನಿಗಾ ಇಟ್ಟಿದ್ದಾರೆ. ಬಾಡಿಗೆ ಪಡೆಯಲು ಸಾಧ್ಯವಿಲ್ಲ. 88 00:05:27,340 --> 00:05:31,140 ಕದ್ದ ವಾಹನದಲ್ಲಿ ಓಡಾಡಿದರೆ, ಬಂಧಿಸಲ್ಪಡುವ ಸಾಧ್ಯತೆ ಇದೆ. 89 00:05:31,340 --> 00:05:32,700 ನನ್ನ ಬಳಿ ಪರಿಹಾರ ಇದೆ. 90 00:05:45,260 --> 00:05:46,920 ನಿನ್ನ ರಹಸ್ಯ ಕೆಲಸ ಹೇಗಿತ್ತು? 91 00:05:48,680 --> 00:05:49,590 ರೀಚರ್. 92 00:05:52,140 --> 00:05:54,080 ರಹಸ್ಯ ಕೆಲಸದ ಬಗ್ಗೆ ನಿನಗೆ ಹೇಗೆ ತಿಳಿಯಿತು? 93 00:05:54,280 --> 00:05:56,750 ಈ ಪರಿಸ್ಥಿತಿಯಲ್ಲಿ ನೀನು ಕೂಡಲೇ ಬರಬೇಕಿತ್ತು. 94 00:05:56,950 --> 00:06:00,000 ಆದರೆ ನೀನು ಬರಲಿಲ್ಲ, ಅಂದರೆ ನಿನಗೆ ನಮ್ಮ ಸಂದೇಶಗಳು ಇತ್ತೀಚೆಗಷ್ಟೇ ಸಿಕ್ಕಿದೆ. 95 00:06:00,200 --> 00:06:03,050 ನೀನು ರಜೆಯಲ್ಲಿದ್ದರೆ, ನಿನ್ನ ಕಚೇರಿಯೊಂದಿಗೆ ಆಗಾಗ್ಗೆ ಸಂಪರ್ಕದಲ್ಲಿರುತ್ತಿದ್ದೆ. 96 00:06:03,250 --> 00:06:06,180 ನೀನು ರಹಸ್ಯ ಕೆಲಸದ ಮೇಲಿದ್ದೆ, ಬಹಳ ರಹಸ್ಯದ ಕೆಲಸ, 97 00:06:06,380 --> 00:06:08,470 ಆಗಾಗ್ಗೆ ಸಂಪರ್ಕಿಸುವುದು ಸಾಧ್ಯವಾಗದಷ್ಟು. 98 00:06:08,670 --> 00:06:09,950 ಅದೇ ಹಳೆಯ ರೀಚರ್. 99 00:06:11,320 --> 00:06:12,600 ಕಾರ್ಪೊರೇಟ್ ದುರುಪಯೋಗ ಪ್ರಕರಣ. 100 00:06:12,800 --> 00:06:13,810 ಇಷ್ಟು ದಿನ ಟೆಕ್ಸಾಸ್ ನಲ್ಲಿದ್ದು 101 00:06:14,010 --> 00:06:17,020 ಕೌಬಾಯ್ ಬೂಟು, ಪ್ರೌಢಶಾಲಾ ಫುಟ್ಬಾಲ್ ಇಷ್ಪ ಪಡುವ ಮಟ್ಟಿಗೆ ಬಂದಿದ್ದೆನೇನೋ. 102 00:06:17,220 --> 00:06:18,650 ನಿನ್ನ ನಕಲಿ ಐಡಿ ಇನ್ನೂ ಇದೆಯೇ? 103 00:06:18,850 --> 00:06:20,250 - ಹೌದು. - ಒಳ್ಳೆಯದು. 104 00:06:20,450 --> 00:06:22,860 - ಕಾರನ್ನು ಬಾಡಿಗೆಗೆ ಪಡೆಯಲು ಬೇಕು. - ಏನಕ್ಕಿಷ್ಟು ರಹಸ್ಯ? 105 00:06:23,060 --> 00:06:25,820 ನೀಗ್ಲೇ, ಓ'ಡೊನೆಲ್ ಮತ್ತು ನನ್ನನ್ನು ಗುರುತಿಸಲಾಗಿದೆ. 106 00:06:26,020 --> 00:06:27,210 ಮತ್ತು ನಾನೊಬ್ಬ ಪೋಲೀಸನಿಗೆ ಹೊಡೆದೆ. 107 00:06:28,800 --> 00:06:30,180 ನೀನು ಹಾಗೆ ಮಾಡುವವನೇ. 108 00:06:34,850 --> 00:06:35,680 ಹಾಗಿದ್ದರೆ, 109 00:06:37,270 --> 00:06:38,350 ಫ್ರಾನ್ಸ್... 110 00:06:38,600 --> 00:06:39,430 ಹೌದು. 111 00:06:40,190 --> 00:06:41,850 ಬಹುಶಃ ಸ್ವಾನ್ ಕೂಡ. 112 00:06:42,810 --> 00:06:44,860 ಸ್ಯಾಂಚೆಜ್ ಮತ್ತು ಒರೊಜ್ಕೊ ಕೂಡ ಮಾತಾಡಲು ಸಿಗುತ್ತಿಲ್ಲ. 113 00:06:48,530 --> 00:06:49,360 ಸರಿ. 114 00:06:52,570 --> 00:06:54,620 ಸರಿ. ಇದನ್ನು ನೋಡಿಕೊಳ್ಳೋಣ. 115 00:06:55,660 --> 00:06:58,370 ವಿಶೇಷ ತನಿಖಾಧಿಕಾರಿಗಳಿಗೆ ಕೋಪ ಬರಿಸಬಾರದು. 116 00:07:01,120 --> 00:07:01,960 ಮುಂದೆ. 117 00:07:06,210 --> 00:07:09,340 - ನನಗೆ ಒಂದು... - ಎಸ್ಯುವಿ. ಗೊತ್ತು. ನಿನಗೆ ಹೆಚ್ಚು ಜಾಗ ಬೇಕು. 118 00:07:22,310 --> 00:07:24,820 ಒಳ್ಳೆಯದು. ಇನ್ನೂ ಇಲ್ಲೇ ಇರುವೆ. 119 00:07:25,020 --> 00:07:26,590 ನಾನು ಎಂದಿಗೂ ಹೋಗುವುದಿಲ್ಲ ಅನಿಸುತ್ತೆ. 120 00:07:26,790 --> 00:07:29,090 ಉಲ್ಲಂಘನೆ ಎಷ್ಟೇ ಸಣ್ಣದಾಗಿರಲಿ, 121 00:07:29,290 --> 00:07:32,700 ಜಗತ್ತಿನ ಯಾವುದೇ ಸೇನಾ ನೆಲೆಯಲ್ಲಿ ವರದಿಯಾಗಿದ್ದರೂ, ನಮಗೆ ವಿಷಯ ತಿಳಿಯುತ್ತೆ. 122 00:07:34,160 --> 00:07:35,810 ಏನಾದರೂ ಸಿಕ್ಕಿತೇ? 123 00:07:36,010 --> 00:07:38,890 ಹೌದು. ಸುಮಾರು 20 ನಿಮಿಷಗಳ ಹಿಂದೆ ಒಂದು ದೊಡ್ಡ ಗಾತ್ರದ ಇಲಿ ಸಿಕ್ಕಿತು. 124 00:07:39,090 --> 00:07:39,900 ನಿಜವಾಗಿಯೂ? 125 00:07:40,100 --> 00:07:41,650 ಅದು ಆ ಪೆಟ್ಟಿಗೆಗಳಲ್ಲಿ ಎಲ್ಲೋ ಇದೆ. 126 00:07:41,850 --> 00:07:43,020 ಛೀ. 127 00:07:43,220 --> 00:07:46,400 ಅಂದ ಹಾಗೆ, ಇಲ್ಲೇನೋ ವಿಷಯ ಸಿಕ್ಕಂತಿದೆ. 128 00:07:46,600 --> 00:07:50,950 ಅಫ್ಘಾನಿಸ್ತಾನದಲ್ಲಿ ಕಮಾಂಡಿಂಗ್ ಅಧಿಕಾರಿ ಒಬ್ಬ ವಾಯುಯಾನ ಇಂಧನ ಕದಿಯುತ್ತಿದ್ದಾರೆಂದುಕೊಂಡಿರುವ. 129 00:07:51,150 --> 00:07:54,080 ಮರು ಮಾರಾಟ ಮಾಡಲು ಕದಿಯುತ್ತಿದ್ದಾರೆಂದೇ? 130 00:07:54,280 --> 00:07:57,370 ಸೈನ್ಯವು ನಾವು ಇಂತಹ ಪ್ರಕರಣಗಳಿಗೆ ಆದ್ಯತೆ ನೀಡುವುದು ಬಯಸುವುದಿಲ್ಲ. 131 00:07:57,570 --> 00:08:00,790 ನನಗನಿಸುವಂತೆ, ಯಾರೂ ಏನನ್ನೂ ಕದಿಯುತ್ತಿಲ್ಲ, ಮಾರುತ್ತಲೂ ಇಲ್ಲ. 132 00:08:00,990 --> 00:08:04,420 ಈ ಸಂಖ್ಯೆಗಳನ್ನು ನೋಡು, ಅವುಗಳ ಹಿಂದೆ ಒಂದು ಕತೆ ಇರುತ್ತೆ. 133 00:08:04,620 --> 00:08:07,170 ಪ್ರತಿ ಬಾರಿಯೂ ಇಂಧನ ನೆಲೆಯಿಂದ ಇಂಧನ ಕಾಣೆಯಾದಾಗ, 134 00:08:07,370 --> 00:08:09,630 ಅದು ಯಾವಾಗಲೂ ಒಂದು ನಿರ್ದಿಷ್ಟ ವಿಮಾನದ ಹಾರಾಟದ ನಂತರ. 135 00:08:09,830 --> 00:08:12,800 ಸಿ -17 ಗಳು ಹಮ್ವೀಸ್ ಅನ್ನು ಮನೆಗೆ ಅಂದರೆ ಅಮೆರಿಕಾಕ್ಕೆ ಕರೆತಂದಾಗ. 136 00:08:13,000 --> 00:08:17,280 ಅಂದರೆ, ಇದು ಒಂದು ಸಣ್ಣ ವಿವರ, ಆದರೆ ತನಿಖೆಯಲ್ಲಿ, ವಿವರಗಳು ಮುಖ್ಯವಾಗುತ್ತವೆ. 137 00:08:18,780 --> 00:08:20,520 ನನಗೆ ಇದು ಹಿಡಿಸಿತು. 138 00:08:20,720 --> 00:08:22,480 ನಾನು ಇದನ್ನು ಬಳಸಲಿದ್ದೇನೆ. 139 00:08:22,680 --> 00:08:24,120 ನನ್ನದೆಲ್ಲ ನಿನ್ನದು. 140 00:08:25,370 --> 00:08:26,210 ಹಾಗಿದ್ದರೆ, 141 00:08:28,340 --> 00:08:29,360 ನಿನ್ನ ಊಹೆ ಏನು? 142 00:08:29,560 --> 00:08:32,280 ಹೂಂ. ಕಪ್ಪು ಮಾರುಕಟ್ಟೆಯಲ್ಲಿ ಇಂಧನ ಮಾರಾಟದ ಯಾವುದೇ ಸೂಚನೆ ಇಲ್ಲ, 143 00:08:32,480 --> 00:08:34,280 ನೆಲೆಯ ಬಳಿ ಆಗಲಿ ಅಥವಾ ಸುತ್ತಮುತ್ತ ಎಲ್ಲಿಯೂ. 144 00:08:34,480 --> 00:08:36,450 ಹಾಗಾದರೆ, ಆ ಎಲ್ಲಾ ಇಂಧನವು ಎಲ್ಲಿ ಹೋಗುತ್ತಿದೆ? 145 00:08:36,650 --> 00:08:38,580 ಅನಿಲ ಕಣ್ಮರೆಯಾಗಲು ಉತ್ತಮ ಮಾರ್ಗ ಅದನ್ನು ಸುಡುವುದು. 146 00:08:38,780 --> 00:08:41,000 ಅದೇ. ನೀಗ್ಲೇಗೆ ಇಂಧನದ ವಿಷಯದಲ್ಲಿ ಒಳ್ಳೆಯ ಅನುಭವವಿದೆ. 147 00:08:41,200 --> 00:08:45,340 ಅವಳ ಪ್ರಕಾರ ಎಲ್ಲಾ ಹಮ್ವೀ ವಿಮಾನಗಳಲ್ಲಿ ಬೇಕಂತಲೇ ಹೆಚ್ಚು ಇಂಧನ ತುಂಬಲಾಗುತ್ತಿದೆ. 148 00:08:45,540 --> 00:08:47,210 ಆದರೆ ಆ ವಿಮಾನಗಳು ಬಂದಿಳಿದಾಗ, 149 00:08:47,410 --> 00:08:50,340 ಟ್ಯಾಂಕ್ ಗಳಲ್ಲಿನ ಇಂಧನದ ಪ್ರಮಾಣ ಎಷ್ಟಿರಬೇಕೋ ಅಷ್ಟಿರುತ್ತದೆ 150 00:08:50,540 --> 00:08:52,260 ಮತ್ತು ಅದು ಪುಸ್ತಕಗಳಲ್ಲಿ ದಾಖಲಾಗುತ್ತದೆ. 151 00:08:52,460 --> 00:08:53,800 ಅದು ಹೇಗೆ ಸಾಧ್ಯ? 152 00:08:54,000 --> 00:08:56,680 ಹೆಚ್ಚುವರಿ ಇಂಧನವನ್ನು ಹೆಚ್ಚಿನ ತೂಕವನ್ನು ಸಾಗಿಸಲು ಬಳಸಲಾಗುತ್ತಿದೆ, 153 00:08:56,880 --> 00:08:59,450 - ಜನರು ಗ್ರಹಿಸಿದ್ದಕ್ಕಿಂತ ಹೆಚ್ಚು. - ಹೂಂ. 154 00:08:59,650 --> 00:09:03,150 ಭಾರವಾದ ಮತ್ತು ರಹಸ್ಯವಾದ ಏನನ್ನೋ ಸಾಗಿಸಲಾಗುತ್ತಿದೆ. 155 00:09:03,350 --> 00:09:05,400 ಅದೇ. ಹಮ್ವೀಗಳಲ್ಲಿ ನಿಷಿದ್ಧ ಪದಾರ್ಥಗಳು. 156 00:09:05,600 --> 00:09:08,710 ಡ್ರಗ್ಸ್, ಬಂದೂಕುಗಳು, ಕದ್ದ ಹಣ, ಎಲ್ಲವೂ. 157 00:09:10,170 --> 00:09:12,070 ಒಳ್ಳೆಯ ಕೆಲಸ, ಡಿಕ್ಸನ್. 158 00:09:12,270 --> 00:09:14,510 ನಮ್ಮ ಗಮನಕ್ಕೆ ಅರ್ಹವಾದ ಪ್ರಕರಣವನ್ನು ಕಂಡುಹಿಡಿದಿದ್ದೀ. 159 00:09:16,050 --> 00:09:19,950 ನಿನ್ನ ಬಗ್ಗೆ ಗೊತ್ತಿಲ್ಲ, ಆದರೆ ಈ ಎಲ್ಲಾ ಶೋಧನೆಗಳ ನಂತರ ನನಗೆ ಬಾಯಾರಿಕೆ ಆಗಿದೆ. 160 00:09:20,150 --> 00:09:21,870 ಪಾರ್ಟಿ ಮಾಡೋಣವೇ? 161 00:09:22,070 --> 00:09:23,890 ನೀನು ಡ್ರಿಂಕ್ ಕೊಡಿಸಿದರೆ. 162 00:09:27,310 --> 00:09:29,270 ನಾನು ಈ ವರದಿಗಳ ಮೇಲೆ ಇನ್ನಷ್ಟು ಕೆಲಸ ಮಾಡಬೇಕು. 163 00:09:31,610 --> 00:09:33,950 - ಮುಂದಿನ ಬಾರಿ. - ಸರಿ. 164 00:09:34,150 --> 00:09:35,030 ಆದರೆ ಮತ್ತೆ ಹೇಳುವೆ, 165 00:09:36,320 --> 00:09:38,640 - ಅತ್ಯುತ್ತಮ ಕೆಲಸ, ಡಿಕ್ಸನ್. - ಹೂಂ. 166 00:09:38,840 --> 00:09:41,830 ಪರವಾಗಿಲ್ಲ. ನಾನು ಹೇಳಿದಂತೆ, ಸಂಖ್ಯೆಗಳು ಯಾವಾಗಲೂ ಕಥೆಯನ್ನು ಹೇಳುತ್ತವೆ. 167 00:10:10,400 --> 00:10:13,650 ಏನು, ಸಂಖ್ಯೆಗಳು ಕಥೆಯನ್ನು ಹೇಳುತ್ತಿವೆಯೇ? 168 00:10:16,150 --> 00:10:19,560 ಹೌದು, ಇದು ಡೇವಿಡ್ ಲಿಂಚ್ ಚಿತ್ರ, ಸ್ವಲ್ಪವೂ ಅರ್ಥವೇ ಆಗುವುದಿಲ್ಲ. 169 00:10:19,750 --> 00:10:22,600 ಇವುಗಳು ಭಿನ್ನರಾಶಿಗಳೆಂದರೆ, ಇದು ಒಳ್ಳೆಯ ಕೆಲಸವಲ್ಲ. 170 00:10:22,800 --> 00:10:24,520 ಕೆಲವೊಂದನ್ನು ಭಿನ್ನರಾಶಿಯಂತೆ ಲೆಕ್ಕ ಹಾಕಿಲ್ಲ. 171 00:10:24,720 --> 00:10:26,560 ನಾನೂ ಅದನ್ನು ಗಮನಿಸಿದೆ. 172 00:10:26,760 --> 00:10:28,610 ಕಠಿಣ ಪ್ರಮಾಣಗಳಿರಬೇಕು. 173 00:10:28,810 --> 00:10:32,130 ಅಂದರೆ, ಹತ್ತರಲ್ಲಿ ಎಂಟು, ಆದರೆ ಐದನೇ ನಾಲ್ಕು ಭಾಗವಲ್ಲ? 174 00:10:32,330 --> 00:10:33,280 ಇರಬಹುದು. 175 00:10:33,480 --> 00:10:37,200 ಇರಬಹುದು. ಅದನ್ನು ಬಿಟ್ಟು, ಎರಡು ವಿಷಯಗಳು ಗಮನಿಸುವಂತಿವೆ. 176 00:10:37,400 --> 00:10:39,870 ಇವುಗಳಲ್ಲಿ ಯಾವುದೂ 100% ಇಲ್ಲ. ಅಂದರೆ ಒಂಬತ್ತರಲ್ಲಿ ಒಂಬತ್ತು ಇಲ್ಲ 177 00:10:40,070 --> 00:10:44,000 ಅಥವಾ ಹತ್ತರಲ್ಲಿ ಹತ್ತು ಇಲ್ಲ, ಮತ್ತು ಮೊದಲ ನಾಲ್ಕು ಪುಟಗಳು 26 ಸಂಖ್ಯೆಗಳನ್ನು ಹೊಂದಿವೆ, 178 00:10:44,200 --> 00:10:47,330 ಐದನೆಯದು 27, ಮತ್ತು ಕೊನೆಯ ಎರಡರಲ್ಲಿ ಮತ್ತೆ 26 ಇದೆ. 179 00:10:47,530 --> 00:10:50,540 ಗೊತ್ತಿಲ್ಲದೆ ಆಗಿರಬಹುದು. ಮಾಹಿತಿಯನ್ನು ಹಾಗೆ ನಮೂದಿಸಿರಬೇಕು. 180 00:10:50,740 --> 00:10:53,010 ಇದು ಉದ್ದೇಶಪೂರ್ವಕವೆನಿಸುತ್ತೆ. ಯಾವುದೇ ಪುಟಗಳು ತುಂಬಿಲ್ಲ. 181 00:10:53,200 --> 00:10:54,840 ಎಎಂ ಹೆಸರುಗಳ ಪಟ್ಟಿಯ ಬಗ್ಗೆ ಏನೆನ್ನುವೆ? 182 00:10:55,040 --> 00:10:58,140 ಅರ್ಥವಿಲ್ಲದ್ದು. ಒಪ್ಪುತ್ತೇನೆ. ಇವು ಅಲಿಯಾಸ್ ಗಳಾಗಿರಬೇಕು. 183 00:10:58,330 --> 00:11:01,560 ಬಹುಶಃ ಅದು 110ನೇ ವಿರುದ್ಧ ದ್ವೇಷ ಹೊಂದಿರುವ ಯಾರೋ ಆಗಿರಬಹುದೇ? 184 00:11:01,750 --> 00:11:03,020 ಬಹಳಷ್ಟು ಜನರನ್ನು ಬಂಧಿಸಿದ್ದೇವೆ. 185 00:11:03,210 --> 00:11:05,390 ಜೇಮ್ಸ್ ಬಾರ್ ಇರಬಹುದೇ? 186 00:11:05,590 --> 00:11:07,690 ಅವನ ಬಳಿ ಕೌಶಲ್ಯವಿದೆ ಮತ್ತು ಸ್ವಲ್ಪ ಹುಚ್ಚ ಕೂಡ. 187 00:11:07,890 --> 00:11:11,320 ಬಾರ್ ಒಬ್ಬ ಶೂಟರ್. ಅವನು ಯಾರನ್ನೂ ಹೆಲಿಕಾಪ್ಟರ್ ನಿಂದ ಹೊರಗೆಸೆಯಲ್ಲ ಅನಿಸುತ್ತೆ. 188 00:11:11,510 --> 00:11:13,750 ನಾನು ಕಳೆದ ವರ್ಷ ಇಂಡಿಯಾನಾದಲ್ಲಿ ಅವನನ್ನು ಭೇಟಿಯಾದೆ. 189 00:11:14,630 --> 00:11:15,790 ಅವನು ಈಗ ನನಗೆ ಋಣಿ. 190 00:11:18,590 --> 00:11:19,760 ನನಗೆ ಹೇಳಲೂ ಬೇಡ. 191 00:11:23,930 --> 00:11:25,720 "ಪೈನ್ ಬ್ಯಾರೆನ್ಸ್." 192 00:11:26,600 --> 00:11:28,520 ಸುಮಾರು ಒಂದು ಮಿಲಿಯನ್ ಖಾಲಿ ಎಕರೆಗಳು. 193 00:11:29,560 --> 00:11:32,520 ಫ್ರಾನ್ಸ್ ಸಿಕ್ಕಿದ ನ್ಯೂ ಯಾರ್ಕ್ ನಲ್ಲಿನ ಸ್ಥಳದಂತೆ. 194 00:11:33,690 --> 00:11:36,190 ಅವನ ಮುರಿದ ದೇಹವನ್ನು ಅಲ್ಲೇ ಕೊಳೆಯಲು ಬಿಟ್ಟಿದ್ದರು. 195 00:11:37,610 --> 00:11:39,610 ಯಾರಿಗೆ ಗೊತ್ತು, ಸ್ವಾನ್ ಸಹ ಹಾಗೇ ಎಲ್ಲೋ ಬಿದ್ದಿರಬಹುದು. 196 00:11:40,860 --> 00:11:43,660 ಮತ್ತು ಸ್ಯಾಂಚೆಜ್ ಮತ್ತು ಒರೊಜ್ಕೊ ಸಹ. 197 00:11:47,740 --> 00:11:49,040 ಬ್ಲೂಸ್ ಚಾನೆಲ್ ಇಲ್ಲವೇ? 198 00:11:49,950 --> 00:11:51,860 ಅಣ್ಣ, ನಾವು ಜರ್ಸಿಯಲ್ಲಿದ್ದೇವೆ. 199 00:11:52,060 --> 00:11:53,120 ಇದು ಫೋನ್ ನಿಂದ ಬರುತ್ತಿದೆ. 200 00:11:54,370 --> 00:11:58,000 ಫ್ರಾನ್ಸ್ ಇದನ್ನು ಮುಖ್ಯ ಕಚೇರಿಯಲ್ಲಿ ನೀನಿಲ್ಲದಾಗೆಲ್ಲ ಹಾಕುತ್ತಿದ್ದ. 201 00:12:00,210 --> 00:12:01,050 ಬಿಡು ಅದನ್ನು. 202 00:12:15,310 --> 00:12:19,190 ಅವರು ನಕಲಿ ಹೆಸರಿನಲ್ಲಿ ಕಾರನ್ನು ಬಾಡಿಗೆಗೆ ಪಡೆದಿದ್ದಾರೆ, ಕಾರ್ಲಾ ಡಿಕ್ಸನ್ ನ ಸಹಾಯದಿಂದ. 203 00:12:20,320 --> 00:12:21,340 ಅವಳು ಈಗ ಅವರ ಕಡೆ. 204 00:12:21,540 --> 00:12:24,360 ಅಟ್ಲಾಂಟಿಕ್ ನಗರದ ಕಡೆಗೆ ಹೊರಟಿದ್ದಾರೆ, ಬಹುಶಃ ಅವರ ಸ್ನೇಹಿತರನ್ನು ಹುಡುಕಲು. 205 00:12:24,990 --> 00:12:27,700 ಒಳ್ಳೆಯದು. ಎಲ್ಲರೂ ಒಂದೇ ಸ್ಥಳದಲ್ಲಿ, ಒಟ್ಟಿಗೆ. 206 00:12:28,700 --> 00:12:30,770 ನೀನು ಅಲ್ಲಿಗೆ ತಲುಪಿದಾಗ, ಅವರನ್ನು ಮುಗಿಸಿಬಿಡು. 207 00:12:30,970 --> 00:12:31,850 ಗೊತ್ತಾಯಿತು. 208 00:12:32,050 --> 00:12:35,730 ಬ್ಯಾಕಪ್ ಬಗ್ಗೆ ನಾನು ಹೇಳಿದ್ದು ನೆನಪಿದೆಯೇ? ನನಗೆ ಕೆಲವು ಸ್ಥಳೀಯರು ಗೊತ್ತು. 209 00:12:35,930 --> 00:12:38,440 ನಿನಗೆ ಬೇಕಾದವರನ್ನು ಕರೆದು ತಾ. 210 00:12:38,640 --> 00:12:40,000 ಹಣದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. 211 00:12:41,000 --> 00:12:43,090 ನಾಳೆಯೊಳಗೆ ಅವರು ಸಾಯಬೇಕು ಅಷ್ಟೇ. 212 00:12:43,920 --> 00:12:47,010 ಕೇಳಿಸಿತೇ? ಅವರು ಸಾಯಬೇಕು. 213 00:12:54,850 --> 00:13:00,820 {\an8}ಅಟ್ಲಾಂಟಿಕ್ ಸಿಟಿ, ನ್ಯೂ ಜರ್ಸಿ 214 00:13:14,000 --> 00:13:15,560 ಫ್ರಾನ್ಸ್ನ ಕಚೇರಿಯಂತೆಯೇ ಇದೆ. 215 00:13:15,760 --> 00:13:17,880 ಮತ್ತು ನಮ್ಮ ಹೋಟೆಲ್ ಕೊಠಡಿಗಳಂತೆ. 216 00:13:18,080 --> 00:13:20,740 ಅವರು ಸ್ವಾನ್ ನ ಸ್ಥಳವನ್ನು ಅಸ್ತವ್ಯಸ್ತ ಮಾಡಿಲ್ಲವೆಂದಿದ್ದೆ ನೀನು. 217 00:13:20,940 --> 00:13:22,860 - ಹೌದು. - ಅದನ್ನೂ ನೆನಪಿಟ್ಟುಕೋ. 218 00:13:23,060 --> 00:13:24,550 ಏನೋ ಕಾರಣವಿರಬೇಕು. 219 00:13:29,430 --> 00:13:33,010 ಒರೊಜ್ಕೊ ಅವನ ಲೈಟರ್ ಬಿಟ್ಟು ಎಲ್ಲಿಗಾದರೂ ಹೋಗುವುದು ನಿಮಗೆ ತಿಳಿದಿದೆಯೇ? 220 00:13:36,310 --> 00:13:37,390 ಉತ್ತಮ ದಿನಗಳು. 221 00:13:43,190 --> 00:13:45,340 ಈ ಫೋಟೋ ನನ್ನೊಬ್ಬನ ಬಳಿ ಮಾತ್ರ ಇಲ್ಲವೇ? 222 00:13:45,540 --> 00:13:47,300 - ನನ್ನ ಬಳಿಯಿದೆ. - ನನ್ನ ಬಳಿಯಿದೆ. 223 00:13:47,500 --> 00:13:48,610 ನನ್ನ ಪುಸ್ತಕದ ಕಪಾಟಿನಲ್ಲಿದೆ. 224 00:13:49,570 --> 00:13:52,410 ಚಿತ್ರವನ್ನು ನೇತುಹಾಕಲು ನಿನ್ನ ಬಳಿ ಗೋಡೆಗಳೆಲ್ಲಿವೆ? 225 00:13:56,830 --> 00:13:58,360 ನಾವಿಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದೇವೆ. 226 00:13:58,560 --> 00:14:02,280 ಹೌದು. ಕೊಲೆಗಾರರಿಗೆ ಏನು ಬೇಕೋ ಅದು ನಮ್ಮ ಬಳಿ ಇದೆ ಇಲ್ಲವೇ ಅವರಿಗೆ ಬೇಕಿರುವುದು 227 00:14:02,480 --> 00:14:03,880 ಅವರಿಗೆ ಈಗಾಗಲೇ ಸಿಕ್ಕಾಗಿದೆ. 228 00:14:04,080 --> 00:14:05,170 ಮುಂದೆ ಎಲ್ಲಿಗೆ? 229 00:14:06,420 --> 00:14:07,620 ಬಾರ್ ಗೆ. 230 00:14:07,820 --> 00:14:10,410 ಸ್ಯಾಂಚೆಜ್ ಮತ್ತು ಈ ಮಹಿಳೆಯ ಫೋಟೋಗಳನ್ನು ನೋಡಿ. 231 00:14:10,610 --> 00:14:13,520 - ಈಗಲೂ ಯಾರಾದರೂ ಚಿತ್ರ ಫ್ರೇಮ್ ಮಾಡುತ್ತಾರೆಯೇ? - ನಾವು. 232 00:14:13,720 --> 00:14:16,330 110ಥ್ ನದ್ದು ಬಿಟ್ಟು, ನಿನ್ನ ಬಳಿ ಎಷ್ಟು ಫೋಟೋಗಳಿವೆ? 233 00:14:16,530 --> 00:14:19,600 - ಹೆಚ್ಚು ಇಲ್ಲ. - ಆದರೆ ಅವಳು ಮುಖ್ಯ, ಅದಕ್ಕೇ ಫ್ರೇಮಲ್ಲಿದ್ದಾಳೆ. 234 00:14:21,060 --> 00:14:23,060 ನಾವು ಲಕ್ಕಿ ಲಾಂಜ್ ಗೆ ಹೋಗುತ್ತಿದ್ದೇವೆ. 235 00:14:25,400 --> 00:14:28,610 ಲಕ್ಕಿ ಲಾಂಜ್ 236 00:14:36,370 --> 00:14:39,270 ಇಲ್ಲ. ನೀವಿಬ್ಬರೂ ಇಲ್ಲಿಯೇ ಇರಿ. 237 00:14:39,470 --> 00:14:41,500 ನೀವಿಬ್ಬರೂ ಪೊಲೀಸರಂತೆ ಕಾಣುತ್ತೀರಿ. 238 00:14:41,700 --> 00:14:43,040 ನೀವಿಬ್ಬರು ಹೇಗೆ ಕಾಣುತ್ತೀರಿ? 239 00:14:44,090 --> 00:14:45,210 ಲೇಡಿ ಅಂಡ್ ದಿ ಟ್ರ್ಯಾಂಪ್. 240 00:15:08,860 --> 00:15:11,660 ಹೇ, ಈ ಮಹಿಳೆ ಇಂದು ಕೆಲಸ ಮಾಡುತ್ತಿದ್ದಾರೆಯೇ? 241 00:15:12,610 --> 00:15:13,930 ನೀವು ಯಾರು? 242 00:15:14,130 --> 00:15:15,370 ಜಾರ್ಜ್ ಸ್ಯಾಂಚೆಜ್ ನ ಗೆಳೆಯರು. 243 00:15:18,160 --> 00:15:19,040 ಹೇ, ಡಲ್ಸ್, 244 00:15:20,120 --> 00:15:23,280 ಇವರು ಸ್ಯಾಂಚೆಜ್ ನ ಗೆಳೆಯರಂತೆ, ಮಿಲೇನಾಳೊಂದಿಗೆ ಮಾತನಾಡಬೇಕಂತೆ. 245 00:15:23,470 --> 00:15:25,500 ಹಿಂದೆ ಕರೆದೊಯ್ಯಿ, ಅವಳಲ್ಲಿ ಲೆಕ್ಕ ಬರೆಯುತ್ತಿದ್ದಾಳೆ. 246 00:15:44,730 --> 00:15:45,860 ಮಿಲೇನಾ. 247 00:15:50,690 --> 00:15:53,310 ಈ ಕೂಡಲೇ ನಿನ್ನ ಸಾಮಾನು ತಗೊಂಡು ಇಲ್ಲಿಂದ ಹೊರಡು. 248 00:15:53,500 --> 00:15:54,930 ಅವನು ವಿಭಿನ್ನ ಎಂದು ತಿಳಿದಿದೆ, 249 00:15:55,130 --> 00:15:58,080 ಆದರೆ ನಮ್ಮ ಕಮಾಂಡಿಂಗ್ ಆಫೀಸರ್ ಬಳಸಿದ ಒಳ ಉಡುಪುಗಳನ್ನು ಖರೀದಿಸುವವನೇ? 250 00:16:02,410 --> 00:16:05,130 - ಫೋಟೋದಲ್ಲಿರುವ ಹುಡುಗಿ ಅವಳೇ ಅಲ್ಲವೇ? - ಓಹ್, ಹೌದು! 251 00:16:07,670 --> 00:16:08,590 ಹೇ! 252 00:16:10,920 --> 00:16:12,470 ಇಲ್ಲಿಯವರೆಗಷ್ಟೇ ಸಾಕು. 253 00:16:18,260 --> 00:16:19,830 ಏನಾಗುತ್ತಿದೆ ಇಲ್ಲಿ? 254 00:16:20,030 --> 00:16:22,500 ನೀವಿಲ್ಲಿ ಬರುವುದು ನಿಲ್ಲಿಸಿ, ನಮ್ಮ ಗೆಳೆಯರ ತಂಟೆಗೆ ಬರಬೇಡಿ. 255 00:16:22,700 --> 00:16:24,940 ನೋಡು, ಗೆಳೆಯ, ನಿನಗೆ ಏನೋ... 256 00:16:27,360 --> 00:16:29,070 ನನ್ನನ್ನು ಮುಟ್ಟಬೇಡ! 257 00:16:44,660 --> 00:16:45,670 ಇರು! 258 00:16:50,130 --> 00:16:51,660 ನಡಿ ಇಲ್ಲಿಂದ. 259 00:16:51,850 --> 00:16:54,220 ಸಾಕು. ನಾನೇನೂ ಮಾಡುವುದಿಲ್ಲ. 260 00:16:54,420 --> 00:16:57,310 ಓ'ಡೊನೆಲ್ ಮತ್ತು ನಾನು ಒಳಗೆ ಹೋಗದ್ದು ಒಳ್ಳೆಯದೇ ಆಯಿತು. 261 00:16:57,510 --> 00:16:59,390 ಇಲ್ಲವಾದರೆ ಎಡವಟ್ಟಾಗುತ್ತಿತ್ತು. 262 00:17:03,310 --> 00:17:05,060 ಹೊಸ ಗೆಳೆಯರೇ, ಅಣ್ಣ? 263 00:17:06,850 --> 00:17:09,970 ಕ್ಷಮಿಸಿ. ನೀವು ಯಾರೆಂದು ನನಗೆ ತಿಳಿದಿದ್ದರೆ, ನಾನು ಓಡುತ್ತಿರಲಿಲ್ಲ. 264 00:17:10,160 --> 00:17:13,090 ನಾನು ಜಾರ್ಜ್ ನ ಫೋಟೋಗಳಿಂದ ನಿಮ್ಮನ್ನು ಗುರುತಿಸಬೇಕಿತ್ತು. 265 00:17:13,290 --> 00:17:16,010 ನಮ್ಮವರು ನನ್ನನ್ನು ಕಾಪಾಡುತ್ತಿದ್ದರಷ್ಟೇ. 266 00:17:16,210 --> 00:17:18,930 ಒಂದು ವಾರದ ಹಿಂದೆ ಇವಳನ್ನು ಕೇಳಿಕೊಂಡು ಒಬ್ಬ ಭಯಾನಕ ವ್ಯಕ್ತಿ ಬಂದಿದ್ದ. 267 00:17:19,130 --> 00:17:22,230 ಅವನು ಸ್ಯಾಂಚೆಜ್, ಒರೊಜ್ಕೊರೊಂದಿಗೆ ಭದ್ರತಾ ಕೆಲಸ ಮಾಡುತ್ತಿರುವುದಾಗಿ ಹೇಳಿದ. 268 00:17:22,430 --> 00:17:23,810 ಅಗಲ ಭುಜದ, ಬೋಳು ವ್ಯಕ್ತಿಯೇ? 269 00:17:24,010 --> 00:17:25,960 ಇಲ್ಲ. ಅವನಿಗೆ ಕೂದಲು ಇತ್ತು. 270 00:17:26,160 --> 00:17:27,770 ಅವನ ಕೆನ್ನೆಯ ಮೇಲೆ ಗಾಯದ ಗುರುತಿತ್ತು. 271 00:17:27,970 --> 00:17:31,990 ಸ್ಯಾಂಚೆಜ್ ನನ್ನಲ್ಲಿ ಯಾವುದೇ ಡಿಜಿಟಲ್ ಸಂಗ್ರಹ ಸಾಧನ ಬಿಟ್ಟು ಹೋಗಿದ್ದಾನೆಯೇ ಎಂದು ಕೇಳಿದ. 272 00:17:32,190 --> 00:17:34,070 ಅವನೇನು ಮಾತಾಡುತ್ತಿದ್ದಾನೆಂದು ನನಗೆ ತಿಳಿದಿರಲಿಲ್ಲ. 273 00:17:34,270 --> 00:17:38,010 ಆ ವ್ಯಕ್ತಿ ನನಗೆ ಸರಿ ಎನಿಸಲಿಲ್ಲ. ಅವನು ಹೋದ ಕೂಡಲೇ, ನಾನು ಜಾರ್ಜ್ ಗೆ ಕರೆ ಮಾಡಿದೆ. 274 00:17:39,010 --> 00:17:40,050 ಅವನು ಉತ್ತರಿಸಲಿಲ್ಲ. 275 00:17:41,140 --> 00:17:44,060 ಅವನು ಎಷ್ಟೋ ಬಾರಿ ಕರೆಗೆ ಸಿಗುವುದಿಲ್ಲ, ಅವನ ಕೆಲಸವೇ ಹಾಗೆ, ಆದರೆ ಇದು... 276 00:17:44,890 --> 00:17:46,000 ...ವಿಭಿನ್ನವೆನಿಸುತ್ತಿದೆ. 277 00:17:46,200 --> 00:17:47,710 ನೀವು ಸ್ಯಾಂಚೆಜ್ ಗೊತ್ತು ಎಂದು ಹೇಳಿದ್ದು, 278 00:17:47,910 --> 00:17:50,630 ನಿಮ್ಮೆಲ್ಲರ ಮೈಕಟ್ಟು ನೋಡಿ, ಹೊಡೆದಾಡಲು ಬಂದಿರಿ ಎಂದುಕೊಂಡೆ. 279 00:17:50,830 --> 00:17:53,070 ಕೆಟ್ಟದು ಮಾಡಲು ಬಂದಿರುವಿರೆಂದುಕೊಂಡೆ. ತಪ್ಪು ತಿಳಿಯಬೇಡಿ. 280 00:17:53,940 --> 00:17:56,140 ಸ್ಯಾಂಚೆಜ್ ಮತ್ತು ಒರೊಜ್ಕೊ ಇತ್ತೀಚೆಗೆ ಕ್ಯಾಲ್ವಿನ್ ಫ್ರಾನ್ಸ್ ಅಥವಾ 281 00:17:56,340 --> 00:17:57,800 ಟೋನಿ ಸ್ವಾನ್ ನೊಂದಿಗೆ ಸಂಪರ್ಕದಲ್ಲಿದ್ದರೇ? 282 00:17:58,000 --> 00:18:02,200 ಹೌದು, ಕೆಲ ವಾರಗಳ ಹಿಂದೆ ಇಲ್ಲಿಗೆ ಬಂದಿದ್ದ. ತುಂಬಾ ಸಮಯದಿಂದ ಒಬ್ಬರನ್ನೊಬ್ಬರು ನೋಡಿರಲಿಲ್ಲ. 283 00:18:02,410 --> 00:18:03,950 ನಾನು ಅವರ ಚಿತ್ರವನ್ನು ತೆಗೆದೆ. 284 00:18:07,500 --> 00:18:08,690 ಅವರು ಏನೋ ಕೆಲಸದ ಮೇಲಿದ್ದರು. 285 00:18:08,890 --> 00:18:10,610 - ಸ್ಯಾಂಚೆಜ್ ನಿನಗೆ ಹೇಳಿದನೇ? - ಹೌದು. 286 00:18:10,810 --> 00:18:12,110 ಏನದು? 287 00:18:12,310 --> 00:18:13,650 ವಿವರಗಳನ್ನು ಹೇಳಲಿಲ್ಲ. 288 00:18:13,850 --> 00:18:15,050 ಸ್ವಾನ್ ಇದರಲ್ಲಿ ಭಾಗಿಯಾಗಿದ್ದನೇ? 289 00:18:16,050 --> 00:18:17,380 ಅವನು ನಗರಕ್ಕೆ ಬರಲಿಲ್ಲ. 290 00:18:18,300 --> 00:18:20,050 ಆದರೆ ಅವರು ಅವನ ಹೆಸರನ್ನು ಹೇಳಿದ್ದು ಕೇಳಿತು. 291 00:18:21,140 --> 00:18:22,750 ಈ ಬಗ್ಗೆ ಫ್ರಾನ್ಸ್ ನನ್ನು ಕೇಳಿದಿರಾ? 292 00:18:22,950 --> 00:18:24,580 - ಅದು ಸಾಧ್ಯವಿಲ್ಲ. - ಯಾಕೆ? 293 00:18:24,780 --> 00:18:26,470 ಅವನನ್ನು ಹೆಲಿಕಾಪ್ಟರ್ ನಿಂದ ಎಸೆದಿದ್ದಾರೆ. 294 00:18:30,730 --> 00:18:31,860 ಓಹ್, ದೇವರೇ. 295 00:18:35,020 --> 00:18:37,070 ಜಾರ್ಜ್ ಮತ್ತು ಮ್ಯಾನುಯೆಲ್ ಕೂಡ ಸತ್ತಿದ್ದಾರೆಯೇ? 296 00:18:38,280 --> 00:18:39,970 ನಮಗಿನ್ನೂ ತಿಳಿದಿಲ್ಲ. 297 00:18:40,170 --> 00:18:43,640 ಅವರು ಜೀವಂತವಾಗಿದ್ದರೆ, ನಾವು ಅವರನ್ನು ಹುಡುಕುತ್ತೇವೆ, ಆದರೆ ನಮಗೆ ನಿನ್ನ ಸಹಾಯ ಬೇಕು. 298 00:18:43,840 --> 00:18:47,450 ಹೇಳಲು ಇನ್ನೇನಾದರೂ ಇದೆಯೇ ಎಂದು ನೆನಪಿಸಿಕೋ. 299 00:18:50,370 --> 00:18:51,460 ಗೊತ್ತಿಲ್ಲ. 300 00:18:53,000 --> 00:18:56,590 ಕಳೆದ ಬಾರಿ ನಾನು ಜಾರ್ಜ್ ನನ್ನು ನೋಡಿದಾಗ, ಅವನು ಅಲ್ಲಿಯೇ ಆ ಸ್ಟೂಲ್ ಮೇಲೆ ಕುಳಿತಿದ್ದ. 301 00:18:58,760 --> 00:19:01,450 ಅವನಿಗೆ ಕರೆ ಬಂತು. ಮುಖ್ಯವಾದದ್ದಿರಬೇಕು. 302 00:19:01,650 --> 00:19:02,790 ಅವನು ಏನಾದರೂ ಹೇಳಿದನೇ? 303 00:19:02,990 --> 00:19:06,710 ಅವನು ಒಂದೆರಡು ಸಂಖ್ಯೆಗಳನ್ನು ಮತ್ತೆ ಮತ್ತೆ ಹೇಳಿದನು, ಆಶ್ಚರ್ಯದಿಂದ 304 00:19:06,910 --> 00:19:09,420 ಅಥವಾ ಚಿಂತೆಯಿಂದಲೂ ಇರಬಹುದು. 305 00:19:09,620 --> 00:19:11,960 ಅವನು ಹೊರಗೆ ಹೋಗುವುದಾಗಿ ಹೇಳಿದ, ಆಮೇಲೆ ಹಿಂತಿರುಗಿ ಬರಲೇ ಇಲ್ಲ. 306 00:19:12,160 --> 00:19:14,420 - ನಿನಗೆ ಸಂಖ್ಯೆಗಳು ನೆನಪಿದೆಯೇ? - ಹೌದು. 307 00:19:14,620 --> 00:19:15,520 ಅವನು ಹೇಳಿದ್ದು, 308 00:19:16,400 --> 00:19:19,800 "650, ತಲಾ 100 ಸಾವಿರದಲ್ಲಿ." ಅವನು ಏನು ಹೇಳುತ್ತಿದ್ದಾನೆಂದು ತಿಳಿಯಲಿಲ್ಲ. 309 00:19:20,000 --> 00:19:22,100 - ಖಚಿತವೇ? - ಖಂಡಿತ. 310 00:19:22,300 --> 00:19:25,250 ಅವನು ಹೇಳಿದ್ದು, "650, 100 ಸಾವಿರದಲ್ಲಿ." 311 00:19:25,450 --> 00:19:28,750 ನನ್ನ ಕೆನ್ನೆಗೆ ಮುತ್ತಿಟ್ಟು, ಆ ಬಾಗಿಲಿನಿಂದ ಹೊರಟು ಹೋದನು. 312 00:19:32,000 --> 00:19:34,630 ಪ್ರೀತಿಪಾತ್ರರ ಕೊನೆಯ ಪದಗಳು ಯಾವಾಗಲೂ ನೆನೆಪಿರುತ್ತವೆ. 313 00:19:45,010 --> 00:19:47,640 ನಮ್ಮ ಬಳಿ ಸಂಖ್ಯೆಗಳಿವೆ. ನಮ್ಮಲ್ಲಿ ನ್ಯೂ ಯಾರ್ಕ್ ಫಲಕಗಳಿವೆ. 314 00:19:48,100 --> 00:19:50,960 ಬಹುಶಃ ಇದು 110 ರ ಮೇಲಿನ ದ್ವೇಷವಲ್ಲ. 315 00:19:51,160 --> 00:19:53,840 ನಮ್ಮಲ್ಲಿ ನಾಲ್ವರೂ ಈಗಾಗಲೇ ಸತ್ತಂತಿದೆ. 316 00:19:54,040 --> 00:19:55,920 ಫ್ರಾನ್ಸ್ ವಾರಗಳ ಹಿಂದೆ ಇಲ್ಲಿಗೆ ಬಂದಿದ್ದ ಎಂದಳು ಮಿಲೆನಾ. 317 00:19:56,120 --> 00:19:58,340 ನಮಗೆ ಅಪಾಯವಿದೆಯೆಂದು ಅವರಿಗನ್ನಿಸಿದ್ದರೆ, 318 00:19:58,540 --> 00:20:00,840 ಅವರು ಆಗಲೇ ಕರೆ ಮಾಡುತ್ತಿದ್ದರು. ವಾರಗಳ ನಂತರ ಅಲ್ಲ. 319 00:20:01,040 --> 00:20:04,010 650, 100 ಸಾವಿರದಲ್ಲಿ. ನಾವು ಮಾತಾಡುತ್ತಿರುವುದು 650 ಲಕ್ಷ ಡಾಲರ್ ಬಗ್ಗೆ. 320 00:20:04,210 --> 00:20:05,520 ಅಂದರೆ, ಬಹಳಷ್ಟು ಕಪ್ಪು ಚಿಪ್ ಗಳು. 321 00:20:05,720 --> 00:20:07,730 ಹೆಚ್ಚಿನ ಸ್ಥಳಗಳಲ್ಲಿ. ಇಲ್ಲಲ್ಲ. 322 00:20:07,930 --> 00:20:10,480 ಅಟ್ಲಾಂಟಿಕ್ ಸಿಟಿ ಕ್ಯಾಸಿನೊಗಳು ಎಷ್ಟು ಗಳಿಸುತ್ತವೆ? 323 00:20:10,680 --> 00:20:13,900 ಒಟ್ಟು ಗೇಮಿಂಗ್ ಆದಾಯ ವರ್ಷಕ್ಕೆ ನೂರಿನ್ನೂರು ಕೋಟಿ ಇರಬೇಕು. 324 00:20:14,100 --> 00:20:17,670 650 ಲಕ್ಷ, ಸ್ವಲ್ಪ ಸ್ವಲ್ಪವಾಗಿ ಎಗರಿಸಿದರೆ, 325 00:20:17,870 --> 00:20:19,280 ಸ್ವಲ್ಪ ಸಮಯ ಯಾರ ಗಮನಕ್ಕೂ ಬಾರದು. 326 00:20:19,480 --> 00:20:22,990 ಹೆಚ್ಚು ಸಮಯ ನಡೆಯುವುದಿಲ್ಲ. ಕ್ಯಾಸಿನೊದ ಲೆಕ್ಕಪರಿಶೋಧಕರು ಹದ್ದುಗಣ್ಣಿಟ್ಟಿರುತ್ತಾರೆ. 327 00:20:23,190 --> 00:20:25,740 ಕ್ಯಾಲ್ಕುಲೇಟರ್ ಸಿಬ್ಬಂದಿ ಹಿಡಿಯುವಷ್ಟು ಸಮಯ 328 00:20:25,940 --> 00:20:27,700 ಇದನ್ನು ಕಳ್ಳರು ಬಚ್ಚಿಡಲು ಸಾಧ್ಯವೇ? 329 00:20:27,900 --> 00:20:30,290 ಸ್ಯಾಂಚೆಜ್ ಮತ್ತು ಒರೊಜ್ಕೊ ಕ್ಯಾಸಿನೊ ಭದ್ರತೆ ನೀಡುತ್ತಾರೆ. 330 00:20:30,490 --> 00:20:31,920 ಬಹುಶಃ ಅಲ್ಲಿಂದಲೇ ಪ್ರಾರಂಭವಾಗಿರಬೇಕು. 331 00:20:32,120 --> 00:20:34,540 ಅವರು ದೊಡ್ಡ ವಿಷಯ ಕಂಡುಹಿಡಿದಿರಬೇಕು. ಸಹಾಯದ ಅಗತ್ಯವಿತ್ತೇನೋ. 332 00:20:34,740 --> 00:20:37,610 ಆದ್ದರಿಂದ ಅವರು ಫ್ರಾನ್ಸ್, ಬಹುಶಃ ಸ್ವಾನ್ ನನ್ನು ತಲುಪಿರಬೇಕು. 333 00:20:39,070 --> 00:20:40,760 ಇದು ಗೇಮಿಂಗ್ ವಿಷಯವೇ ಇರಬೇಕು. 334 00:20:40,960 --> 00:20:44,800 ನಾನು ಎಲ್ಲೀ, ನಿಮ್ಮ ಸರ್ವರ್. ನಿಮಗೆ ಏನು ತರಲಿ? 335 00:20:45,000 --> 00:20:46,530 ಕ್ಯಾಸಿನೊದ ಭದ್ರತಾ ನಿರ್ದೇಶಕರು. 336 00:20:48,240 --> 00:20:49,080 ದಯವಿಟ್ಟು, ಈಗಲೇ. 337 00:20:51,040 --> 00:20:52,850 ನೀವು 110ಥ್ ನವರು. 338 00:20:53,050 --> 00:20:54,110 ನಮ್ಮಲ್ಲಿ ಉಳಿದವರು. 339 00:20:54,310 --> 00:20:57,360 ಸ್ಯಾಂಚೆಜ್ ಮತ್ತು ಒರೊಜ್ಕೊ ಯಾವಾಗಲೂ ನಿಮ್ಮ ಬಗ್ಗೆ ಮಾತನಾಡುತ್ತಾರೆ. 340 00:20:57,560 --> 00:20:58,360 ಕುಳಿತುಕೊಳ್ಳಿ. 341 00:20:58,560 --> 00:20:59,970 ಚೆನ್ನಾಗಿ ಅವರ ಪರಿಚಯವಿತ್ತೇ? 342 00:21:00,170 --> 00:21:04,050 ಹೌದು. ಬೋರ್ಡ್ ವಾಕ್ ನ ಎಲ್ಲಾ ಕ್ಯಾಸಿನೊಗಳಿಗೆ ಅವರು ಹಿನ್ನೆಲೆ ಪರಿಶೀಲನೆ ಮಾಡುತ್ತಿದ್ದರು. 343 00:21:04,970 --> 00:21:07,680 ಒಂದು ನಿಮಿಷ. "ಪರಿಚಯವಿತ್ತೇ" ಎಂದು ಕೇಳಿದಿರಿ. 344 00:21:08,140 --> 00:21:09,580 ಭೂತಕಾಲದಲ್ಲಿ. 345 00:21:09,780 --> 00:21:11,510 ಅವರು ಸತ್ತಿರಬಹುದು ಎಂದು ನಮ್ಮ ಎನಿಸಿಕೆ. 346 00:21:12,270 --> 00:21:13,470 ಛೇ. 347 00:21:15,020 --> 00:21:20,980 ನಾನು ಕಳೆದ ತಿಂಗಳು ವೈಟ್ ಹೌಸ್ ಸಬ್ಸ್ ಗೆ ಮಧ್ಯಾಹ್ನದ ಊಟಕ್ಕೆ ಹೋದಾಗ ಅವರನ್ನು ನೋಡಿದ್ದೆ. 348 00:21:21,730 --> 00:21:24,490 - ನನ್ನಿಂದ ಏನು ಸಹಾಯ ಬೇಕು? - ಈ ಸಂಖ್ಯೆಗಳಿಗೆ ಏನಾದರೂ ಅರ್ಥವಿದೆಯೇ? 349 00:21:25,110 --> 00:21:26,220 ನೇರವಾಗಿ ಏನೂ ಇಲ್ಲ. 350 00:21:26,420 --> 00:21:28,990 "650 ರಲ್ಲಿ ತಲಾ 100 ಸಾವಿರ" ಇದರಲ್ಲಿ? 351 00:21:29,570 --> 00:21:32,120 ಇಲ್ಲ. ಇದೆಲ್ಲಾ ಏನು? 352 00:21:33,290 --> 00:21:35,270 ಸ್ಯಾಂಚೆಜ್ ಮತ್ತು ಒರೊಜ್ಕೊ 353 00:21:35,470 --> 00:21:38,210 650 ಲಕ್ಷ ಡಾಲರ್ ನ ಜೂಜಿನ ಹಗರಣದ ತನಿಖೆ ನಡೆಸುತ್ತಿರಬಹುದು. 354 00:21:38,420 --> 00:21:39,420 ಸರಿ. 355 00:21:40,630 --> 00:21:45,990 ನಿಮ್ಮ "650" ಮೋಸದ ಸ್ಲಾಟ್ ಯಂತ್ರಗಳು ಅಥವಾ ಪೋಕರ್ ನ ಸ್ಥಿರ ಕೈಗಳಾಗಿರಬಹುದು, 356 00:21:46,190 --> 00:21:50,500 ಆದರೆ ಪ್ರತಿ ಕೈಗೆ 100 ಸಾವಿರವೆಂದರೆ, ಅದು ತುಂಬಾ ಅಪಾಯ. 357 00:21:50,690 --> 00:21:54,290 ಮತ್ತು ನಮ್ಮ ಲೆಕ್ಕಗಳು ನಿಖರವಾಗಿವೆ ಎಂದು ನಿಮಗೆ ಹೇಳಬಲ್ಲೆ. 358 00:21:54,490 --> 00:21:56,040 ಒಂದು ಪೈಸೆಯೂ ಹೆಚ್ಚುಕಮ್ಮಿಯಾಗಿಲ್ಲ. 359 00:21:56,240 --> 00:21:57,690 ನಿಮ್ಮ ಪ್ರತಿಸ್ಪರ್ಧಿಗಳು? 360 00:21:58,560 --> 00:22:00,170 ನಾನು ಅವರನ್ನು ಕೇಳಬಹುದು, 361 00:22:00,370 --> 00:22:03,680 ಸ್ಯಾಂಚೆಜ್ ಮತ್ತು ಒರೊಜ್ಕೊ ಏನು ಮಾಡುತ್ತಿದ್ದರೆಂದು ತಿಳಿದಿದೆಯೇ ಎಂದು. 362 00:22:03,870 --> 00:22:07,030 - ಅದು ನಿಮಗೆ ಸಹಾಯ ಮಾಡಬಹುದು. - ಹಾಗೇ ಈ ಹೆಸರುಗಳನ್ನೊಮ್ಮೆ ನೋಡಿ. 363 00:22:07,230 --> 00:22:09,570 ಪಟ್ಟಣದಲ್ಲಿ ಅವರ ಹೆಸರಲ್ಲಿ ಹೋಟೆಲ್ ಬುಕ್ ಆಗಿದ್ದರೆ ತಿಳಿಸಿ. 364 00:22:13,370 --> 00:22:17,620 ಇದಕ್ಕೆ ಕೆಲವು ಗಂಟೆಗಳು ಬೇಕು. ನೀವು ಎಲ್ಲಿ ಉಳಿದುಕೊಂಡಿದ್ದೀರಿ? 365 00:22:18,710 --> 00:22:19,790 ಇನ್ನೂ ಗೊತ್ತಿಲ್ಲ. 366 00:22:21,250 --> 00:22:22,820 ಸರಿ, ಹಾಗಾದರೆ, ದಯವಿಟ್ಟು ನನಗೆ ಅವಕಾಶ ನೀಡಿ. 367 00:22:23,020 --> 00:22:24,110 ಅಗತ್ಯವಿಲ್ಲ. 368 00:22:24,310 --> 00:22:26,800 ಇಲ್ಲ. ಸ್ಯಾಂಚೆಜ್ ಮತ್ತು ಒರೊಜ್ಕೊರ ಸ್ನೇಹಿತರು ನೀವು. 369 00:22:28,170 --> 00:22:31,200 ನಮ್ಮ ಬಳಿ ಒಂದೇ ಒಂದು ಸ್ವೀಟ್ ಇದೆ. 370 00:22:31,400 --> 00:22:32,930 ನಿಮಗದು ಸಾಕಾಗಬಹುದು. 371 00:22:33,930 --> 00:22:35,710 ಬನ್ನಿ, ತೋರಿಸುತ್ತೇನೆ. 372 00:22:35,910 --> 00:22:38,180 - ನಾವು ಚಿಕ್ಕ ಹೋಟೆಲ್ ನೋಡಿಕೊಳ್ಳುತ್ತೇವೆ. - ರೀಚರ್, 373 00:22:38,940 --> 00:22:42,420 ಯಾರಾದರೂ ನಿನಗೆ ಸ್ವೀಟ್ ನೀಡಲು ಮುಂದಾದಾಗ, ಸುಮ್ಮನೆ ಒಪ್ಪಿಕೋ. 374 00:22:42,620 --> 00:22:44,970 ನಿನಗೆ ಮಲಗಲು ಉದ್ಯಾನವನದ ಬೆಂಚ್ ಕಳಿಸುವಂತೆ ಹೇಳುತ್ತೇವೆ. 375 00:22:45,170 --> 00:22:46,320 ನಿನಗೆ ಮನೆಯಂತೆ ಅನಿಸುವುದು. 376 00:23:00,870 --> 00:23:02,880 ರೀಚರ್, ಬೇರೆ ಹೋಟೆಲ್ಗೆ ಏಕೆ ಹೋಗಬೇಕಿತ್ತು ನಿನಗೆ? 377 00:23:05,630 --> 00:23:08,050 ಇಲ್ಲಿ ಸ್ಪಾ ಇರಬಹುದು. 378 00:23:08,250 --> 00:23:09,840 ನಾನು ಸೌನಾಗೆ ಹೋಗುತ್ತೇನೆ! 379 00:23:10,050 --> 00:23:11,760 ಸಮುದ್ರದ ನೋಟ ಮೊದಲು ನನಗೆ. 380 00:23:42,120 --> 00:23:44,860 ಓ'ಡೊನೆಲ್ ಮತ್ತು ನೀಗ್ಲೇಗೆ ಬಾರ್ ಸಿಕ್ಕಿತು. 381 00:23:45,060 --> 00:23:46,130 ಅದರ ತುಂಬಾ ಬಾಟಲಿಗಳಿವೆ. 382 00:23:46,960 --> 00:23:48,590 ಹೆಚ್ಚು ಕಾಲ ಇರಲ್ಲ. ಅನ್ಪ್ಯಾಕ್ ಮಾಡಿದೆಯಾ? 383 00:23:52,430 --> 00:23:53,260 ಹೌದು. 384 00:24:01,810 --> 00:24:05,510 "ಕುಟುಂಬ ಸ್ನೇಹಿ" ಎಂದು ಜಾಹೀರಾತು ನೀಡದ ಹೋಟೆಲಿನಲ್ಲಿ ಎಷ್ಟೋ ವರ್ಷ ನಾನು ಹೋಗಿಲ್ಲ. 385 00:24:05,700 --> 00:24:08,680 ನನಗೆ ಡೇವಿಡ್ ಓ'ಡೊನೆಲ್ ತಂದೆಯಾದನೆಂದು ನಂಬಲಾಗುತ್ತಿಲ್ಲ. 386 00:24:08,870 --> 00:24:10,280 ಅದೂ ಉದ್ದೇಶಪೂರ್ವಕವಾಗಿ. 387 00:24:11,110 --> 00:24:14,600 ಯಾರೋ ಹೊಗಳಿದ್ದು ನನಗೆ ನೆನಪಿದೆ, ನಿನ್ನನ್ನು "ಡ್ಯಾಡಿ" ಎಂದು ಕರೆಯುವವರು ನಿನ್ನೊಂದಿಗೆ 388 00:24:14,800 --> 00:24:16,100 ಮಲಗಿದ ಮಹಿಳೆಯರು ಮಾತ್ರ ಎಂದು. 389 00:24:16,300 --> 00:24:18,850 ನಾನು ಈಗಲೂ ನನ್ನನ್ನು "ಡ್ಯಾಡಿ" ಎಂದು ಕರೆಯುವವರೊಂದಿಗೇ ಮಲಗುವುದು. 390 00:24:19,050 --> 00:24:21,330 ಹೊರಗೆ ಗುಡುಗುತ್ತಿದ್ದರೆ ಮೂವರೂ ಜೊತೆಯಲ್ಲಿ ಮಲಗುತ್ತಾರೆ. 391 00:24:22,000 --> 00:24:24,150 ನಿನಗೆ ಬೇಗನೇ ಗೊತ್ತಾಗುತ್ತೆ, ಡಿಕ್ಸನ್. 392 00:24:24,350 --> 00:24:26,000 - ನೀನು ಗರ್ಭಿಣಿಯೇ? - ಏನು? 393 00:24:26,380 --> 00:24:27,570 ಇಲ್ಲ. ಛೇ, ಇಲ್ಲ. 394 00:24:27,770 --> 00:24:30,450 ಅವಳ ನಿಶ್ಚಿತಾರ್ಥವಾಗಿದೆ. ನಿನಗೆ ತಿಳಿದಿರಲಿಲ್ಲವೇ? 395 00:24:30,650 --> 00:24:32,760 ಕೊನೆಗೂ ಯಾರೋ ನಮ್ಮ ಹುಡುಗಿಯನ್ನು ಬುಟ್ಟಿಗೆ ಹಾಕಿಕೊಂಡರು. 396 00:24:33,630 --> 00:24:34,800 ಇಲ್ಲ. 397 00:24:35,010 --> 00:24:37,330 ನಾನು ಮಾಡಿಕೊಳ್ಳಲಿಲ್ಲ. 398 00:24:37,530 --> 00:24:41,430 ನೀವು ದಿನಾಂಕವನ್ನು ಪಟ್ಟಿಯಿಂದ ತೆಗೆದುಹಾಕಿ. 399 00:24:41,680 --> 00:24:43,480 ಅಯ್ಯೋ. ನಿಜವಾಗಿಯೂ? 400 00:24:44,850 --> 00:24:48,510 ನಾನೇನೆಂದು ನಿಮಗೆ ಗೊತ್ತು. ಸಂಖ್ಯೆಗಳ ಹುಡುಗಿ, ಜೀವನದಲ್ಲಿ ಏನಾದರೂ ಮಾಡಬೇಕೆಂದಿದ್ದವಳು. 401 00:24:48,710 --> 00:24:52,490 ಒಂದು ನಿರ್ದಿಷ್ಟ ವಯಸ್ಸಿನಲ್ಲಿ, ನಿರ್ದಿಷ್ಟ ವರ್ಷದಲ್ಲಿ ಮದುವೆಯಾಗಲು ಬಯಸಿದ್ದೆ. 402 00:24:53,030 --> 00:24:55,930 ನಂತರ, ಒಂದು ದಿನ, ನಾನು ಅವನ ಫೋನ್ ನಲ್ಲಿ ಸಂದೇಶಗಳನ್ನು ನೋಡಿದೆ. 403 00:24:56,130 --> 00:24:58,350 "ಹೇ, ಚಿನ್ನ. ನಿನ್ನನ್ನು ನೋಡಲು ಶುಕ್ರವಾರದವರೆಗೆ ಕಾಯಲಾರೆ. 404 00:24:58,550 --> 00:25:00,480 - ಮಿಸ್ ಮಾಡಿಕೊಳ್ಳುತ್ತಿದ್ದೇನೆ," ಎಂದು. - ಓಹ್! 405 00:25:00,680 --> 00:25:01,980 ಡಿಕ್ಸನ್ ಗೆ ಮೋಸ ಮಾಡುವುದೇ? 406 00:25:02,180 --> 00:25:03,520 ಮಾಡಲಿಲ್ಲ. 407 00:25:03,720 --> 00:25:06,830 ಸಂದೇಶಗಳು ಅವನನ್ನು ಭೇಟಿಯಾಗಲು ಬಂದ ಅವನ ತಂಗಿಯ ಮಗಳಿಂದ ಬಂದಿದ್ದು. 408 00:25:07,210 --> 00:25:11,880 ಆದರೆ ಅವನು ಮೋಸ ಮಾಡುತ್ತಿದ್ದಾನೆ ಎಂದು ಅನಿಸಿದಾಗ, 409 00:25:12,670 --> 00:25:14,130 ನನಗೆ... 410 00:25:15,680 --> 00:25:16,840 ನನಗೆ ಸಮಾಧಾನವಾಗಿತ್ತು. 411 00:25:17,590 --> 00:25:19,750 ಅಂದರೆ, ಅವನು ಸಭ್ಯ ವ್ಯಕ್ತಿಯೇ. ನಾನು... 412 00:25:19,950 --> 00:25:21,580 ನೀವು ಯಾರೊಂದಿಗಾದರೂ ಜೀವನ ಕಳೆಯಬೇಕೆಂದರೆ, 413 00:25:21,780 --> 00:25:24,670 ನಿಮಗೆ ಅವರೊಂದಿಗೆ ಆರಾಮದ ಭಾವನೆಯಿರಬೇಕಲ್ಲವೇ? 414 00:25:24,870 --> 00:25:26,210 ಉತ್ಸಾಹವಿರಬೇಕೆಂದು ಬಯಸುವುದಿಲ್ಲವೇ, 415 00:25:26,410 --> 00:25:30,480 ಅವರನ್ನು ನೋಡಿದಾಗ ಕಚಗುಳಿಯಾಗಬೇಕಲ್ಲವೇ? 416 00:25:32,440 --> 00:25:36,550 ಒಂದು ಕ್ಷಣ, ನಾನು ಆರಾಮವಾಗಿ, ತಪ್ಪಿತಸ್ಥ ಭಾವನೆಯಿಲ್ಲದೆ ಈ ಗೊಂದಲದಿಂದ ಹೊರಬರುವೆ ಎಣಿಸಿದೆ. 417 00:25:36,750 --> 00:25:38,680 ಆದರೆ ಬದಲಾಗಿ, ನಾನು ಅದರಿಂದ ಹೊರಬಂದಾಗ... 418 00:25:38,880 --> 00:25:41,200 ಸಾಕಷ್ಟು ಗೊಂದಲ ಮತ್ತು ತಪ್ಪಿತಸ್ಥ ಭಾವನೆಯಿತ್ತು. 419 00:25:41,950 --> 00:25:42,980 ಸದ್ಯ. 420 00:25:43,180 --> 00:25:44,750 ನಿನಗೆ ಒಳ್ಳೆಯದೇ. 421 00:25:44,950 --> 00:25:46,540 ಕಾರ್ಲಾ ಡಿಕ್ಸನ್ ಒಂದೆಡೆ ನೆಲೆಸಬಾರದು. 422 00:25:47,210 --> 00:25:48,370 ಥ್ಯಾಂಕ್ ಯು. 423 00:25:48,790 --> 00:25:50,820 ಅದಕ್ಕಾಗಿಯೇ ನಾನು ರಹಸ್ಯ ಕೆಲಸವನ್ನು ತೆಗೆದುಕೊಂಡೆ. 424 00:25:51,020 --> 00:25:53,030 ಎಲ್ಲದರಿಂದ ಸ್ವಲ್ಪ ಸಮಯ ದೂರವಿರಲು. 425 00:25:53,230 --> 00:25:56,780 ರಹಸ್ಯ ಕೆಲಸ ಮತ್ತು ವಿಧಿವಿಜ್ಞಾನ ಲೆಕ್ಕಪರಿಶೋಧನೆಗೂ ಏನು ಸಂಬಂಧ? 426 00:25:56,980 --> 00:26:01,040 ಟೆಕ್ಸಾಸ್ ನ ಈ ಕಂಪನಿಯಲ್ಲಿ ಸಿಇಒ ಲಕ್ಷಾಂತರ ಜನರನ್ನು ವಂಚಿಸುತ್ತಿದ್ದ 427 00:26:01,240 --> 00:26:04,580 ಎಲ್ಲರೂ ಮಾಡುತ್ತಿದ್ದ ಮೋಸ ಆಚೆ ಬಂದಾಗ ಈ ವ್ಯಕ್ತಿಯ ಮೇಲೆ ದೂರು ಹೊರಿಸುತ್ತಿದ್ದರು, 428 00:26:04,780 --> 00:26:08,480 ಸಂಖ್ಯೆಗಳ ಕೆಲಸವಾದ್ದರಿಂದ ಕುತೂಹಲ ಹುಟ್ಟಿತು. 429 00:26:08,770 --> 00:26:09,840 ಓಹೋ. 430 00:26:10,040 --> 00:26:11,130 ನಿನ್ನ ಬಗ್ಗೆ ಹೇಳು, ನೀಗ್ಲೇ. 431 00:26:11,330 --> 00:26:13,970 ಪ್ರತಿ ಬಾರಿ ಲಿಂಕ್ಡ್ಇನ್ ಪರಿಶೀಲಿಸಿದಾಗ, ನೀನು ಬಡ್ತಿ ಪಡೆದಿರುತ್ತೀ. 432 00:26:14,170 --> 00:26:15,550 ನನಗಿದು ಮೋಜು. 433 00:26:15,750 --> 00:26:17,990 ದೊಡ್ಡ ಪ್ರಕರಣಗಳು, ತಂಡದ ಮುಂದಾಳತ್ವ. 434 00:26:18,190 --> 00:26:20,720 ದೊಡ್ಡ ಸಾಫ್ಟ್ವೇರ್ ಕಂಪನಿಯನ್ನು ಕ್ಲೈಂಟ್ ಆಗಿಸಲು ನೋಡುತ್ತಿರುವೆ. 435 00:26:20,920 --> 00:26:23,690 ನನ್ನಿಂದ ಸಾಧ್ಯವಾದರೆ, ದೊಡ್ಡ ಕಾಂಟ್ರ್ಯಾಕ್ಟ್ ಸಿಗುತ್ತದೆ. 436 00:26:23,880 --> 00:26:24,810 ಹಣದ ಸುರಿಮಳೆ. 437 00:26:25,010 --> 00:26:28,190 ಬೇರೆ ಆಯ್ಕೆ ಇಲ್ಲ. ನನ್ನ ತಂದೆಗೆ ದಿನದ 24 ಗಂಟೆ ಆರೈಕೆಯ ಅಗತ್ಯವಿದೆ. 438 00:26:28,390 --> 00:26:30,980 ನನ್ನ ಹತ್ತಿರದಲ್ಲೇ ಬಾಡಿಗೆಗೆ ಇರಬೇಕು, ಆದರೆ ಅದಕ್ಕೆ ಬಂಡವಾಳ ಬೇಕು. 439 00:26:31,180 --> 00:26:32,860 ಬಾಡಿಗೆ ಏಕೆ? ಮನೆ ಖರೀದಿಸು ಹೂಡಿಕೆಯಂತೆ. 440 00:26:33,060 --> 00:26:36,820 ಇಲ್ಲ, ಒಂದು ವಿಲ್ಲಾ ಖರೀದಿಸು. ಸಹಕಾರಿ ಸಂಘಗಳು ದಿವಾಳಿಯಾಗುತ್ತಿವೆ. 441 00:26:37,020 --> 00:26:37,920 ಹೌದು. 442 00:26:39,630 --> 00:26:42,850 ದೊಡ್ಡಣ್ಣ, ನಿನ್ನ ಬಗ್ಗೆ ಹೇಳು. ತುಂಬಾ ಶಾಂತವಾಗಿರುವೆ. 443 00:26:44,810 --> 00:26:48,930 ಸ್ವಂತ ಮನೆ ಇರುವುದು ಹಾವುಗಳನ್ನು ಸಾಕಿದಂತೆ ಅಥವಾ ಬಾಲ್ ರೂಮ್ ನೃತ್ಯ ಸ್ಪರ್ಧೆಗಳಂತೆ. 444 00:26:49,600 --> 00:26:51,750 ಅದೇ ನಿನಗಿಷ್ಟವಿದ್ದರೆ ಸರಿ. 445 00:26:51,950 --> 00:26:55,020 - ನನಗೆ ಇಷ್ಟವಿಲ್ಲ. - ಸ್ಥಿರವಾದ ಕೆಲಸ ಇಷ್ಟವೇ? 446 00:26:55,480 --> 00:26:57,640 ಕಾರ್ಪೊರೇಟ್ ಜಗತ್ತು ಸೈನ್ಯಕ್ಕಿಂತ ಬೇರೆ ಏನಲ್ಲ. 447 00:26:57,840 --> 00:27:00,510 ಅದು ಯಾವಾಗಲೂ ಪಂಜರದಂತನಿಸುತ್ತಿತ್ತು. 448 00:27:00,710 --> 00:27:02,950 ಆದರೆ ಬೇರೆ ಏನೂ ತಿಳಿದಿರಲಿಲ್ಲ. 449 00:27:03,150 --> 00:27:05,600 ಒಮ್ಮೆ ಬಾರ್ ನಲ್ಲಿದ್ದೆ, ಯಾರೋ ಹೌಲಿನ್' ವುಲ್ಫ್ ಹಾಕಿದರು, 450 00:27:05,800 --> 00:27:08,610 ರಾತ್ರಿಯಲ್ಲಿ ಹಾದುಹೋಗುವ ರೈಲುಗಳ ಬಗ್ಗೆ ಹಾಡುತ್ತಾ. 451 00:27:08,800 --> 00:27:10,570 ಅದು ನಿಜವಾದ ಸ್ವಾತಂತ್ರ್ಯ ಎನಿಸಿತು. 452 00:27:10,760 --> 00:27:14,900 ಬಿಟ್ಟರೆ ರೈಲುಗಳ ಮೇಲೆ ಹೀರೋನಂತೆ ಜಿಗಿಯುತ್ತೀ. 453 00:27:15,100 --> 00:27:16,000 ಕೆಲವೊಮ್ಮೆ. 454 00:27:17,050 --> 00:27:18,800 ಹೆಚ್ಚಾಗಿ, ಬಸ್ ಅಥವಾ ಉಚಿತ ಲಿಫ್ಟ್. 455 00:27:19,340 --> 00:27:22,760 ಎಂತಹ ಹುಚ್ಚರಿರಬೇಕು ನಿನಗೆ ಲಿಫ್ಟ್ ನೀಡುವವರು? 456 00:27:23,510 --> 00:27:25,660 - ಆಸಕ್ತಿದಾಯಕರಾಗಿರುತ್ತೆ. - ಊಟ ಎಲ್ಲಿ ಮಾಡುವುದು ನೀನು? 457 00:27:25,860 --> 00:27:27,560 ರಸ್ತೆ ಬದಿಯ ವ್ಯಾಪಾರಿಗಳಿಂದ ಕದಿಯುತ್ತೇನೆ. 458 00:27:28,060 --> 00:27:30,350 - ನಿಜವಾಗಿಯೂ. - ಡೈನರ್ಸ್ ನಲ್ಲಿ. 459 00:27:31,140 --> 00:27:34,260 ಕೆಲವೊಮ್ಮೆ ನನಗೆ ಲಿಫ್ಟ್ ಕೊಡುವವರು ಊಟ ಸಹ ಕೊಡಿಸುತ್ತಾರೆ. 460 00:27:34,460 --> 00:27:37,630 - ಕೆಲವೊಮ್ಮೆ ನಾನು ಅವರಿಗೆ ಕೊಡಿಸುತ್ತೇನೆ. - ಮಲಗುವುದು ಎಲ್ಲಿ? 461 00:27:37,830 --> 00:27:39,240 ಅಗ್ಗದ ಮೋಟೆಲ್ ಗಳು, ಹೆಚ್ಚಾಗಿ. 462 00:27:40,320 --> 00:27:41,660 ಸಿಗಲಿಲ್ಲವೆಂದರೆ? 463 00:27:41,860 --> 00:27:44,390 ಒಂದು ರಾತ್ರಿಗೆ ಸಮುದ್ರ ತೀರದ ಖಾಲಿ ದೋಣಿಗಳು ಒಳ್ಳೆಯದು. 464 00:27:44,590 --> 00:27:46,080 ನಿಲ್ಲಿಸಲಾದ ಟ್ರಕ್ ಗಳ ಬೆಡ್ ಗಳು. 465 00:27:47,080 --> 00:27:50,060 ಒಮ್ಮೆ ಹಾಗೇ ಸಿಕ್ಕಿದ ಹ್ಯಾಮಕ್ಕಿನಲ್ಲಿ ಒಳ್ಳೆಯ ನಿದ್ದೆ ತೆಗೆದಿದ್ದೆ. 466 00:27:50,260 --> 00:27:53,070 - ಸ್ಪ್ರಿಂಕ್ಲರ್ ಗಳು ಆನ್ ಆಗುವವರೆಗೂ. - ದೇವರೇ. 467 00:27:53,270 --> 00:27:56,210 - ಕೋಲು ಮತ್ತು ಚೀಲ ಇದ್ದರೆ ಸಾಕು ನಿನಗೆ. - ತುಂಬಾ ಜಾಸ್ತಿಯಾಯಿತು. 468 00:27:59,210 --> 00:28:00,840 ಇನ್ನೂ ಪ್ರಶ್ನೆಗಳಿವೆಯೇ? 469 00:28:01,040 --> 00:28:02,760 ಹೌದು. ಒಂದು ಮಾತ್ರ. 470 00:28:04,470 --> 00:28:05,800 ಎಂದಿಗೂ ಒಂಟಿ ಎನಿಸುವುದಿಲ್ಲವೇ? 471 00:28:26,320 --> 00:28:28,330 ಬಫೆ ಊಟ 472 00:28:29,870 --> 00:28:32,270 ಯಾರೋ ಬಫೆಯನ್ನು ವೈಯಕ್ತಿಕ ಸವಾಲಾಗಿ ಸ್ವೀಕರಿಸಿದಂತಿದೆ. 473 00:28:32,470 --> 00:28:34,960 ಡೋರೀನ್, ನಾನು ಈಗಷ್ಟೇ ಶುರು ಮಾಡುತ್ತಿದ್ದೇನೆ. 474 00:28:36,540 --> 00:28:40,570 ಊಟವು ಇಷ್ಟವಾಗಿದ್ದರೆ, ನೆಪ್ಚೂನ್ ನ ಉಪಾಹಾರ ಬಫೆ ಪ್ರಯತ್ನಿಸಿ. 475 00:28:40,770 --> 00:28:42,880 ಪ್ರತಿದಿನ, ಬೆಳಿಗ್ಗೆ 6:00 ಕ್ಕೆ ಪ್ರಾರಂಭವಾಗುತ್ತದೆ. 476 00:28:43,760 --> 00:28:44,800 ಧನ್ಯವಾದಗಳು. 477 00:29:11,660 --> 00:29:13,810 ನನ್ನೊಂದಿಗೆ ಬೇರಾರೋ ನಿದ್ದೆ ಬಿಟ್ಟಂತಿದೆ. 478 00:29:14,010 --> 00:29:15,440 ಸಂಖ್ಯೆ ನನಗೆ ವಿಶ್ರಾಂತಿ ನೀಡುತ್ತದೆ. 479 00:29:15,640 --> 00:29:18,820 ಗಣಿತವನ್ನೇ ಮಾಡುವುದಾದರೆ, ಸ್ವಲ್ಪ ಹಣ ಗಳಿಸಬಾರದೇಕೆ? ನಾನಿರುತ್ತೇನೆ. 480 00:29:19,020 --> 00:29:21,610 ನಿಮ್ಮ ಎರಡು ಕೈಗಳಲ್ಲಿ ನೀವು ಹತ್ತು ಮತ್ತು ಎಂಟು ತೋರಿಸುತ್ತಿದ್ದೀರಿ. 481 00:29:21,810 --> 00:29:27,030 ಅದು ಸರಿ. ನಾನು ಅಪಾಯಕಾರಿ ಆಟ ಆಡಿದರೆ ದೊಡ್ಡ ಮೊತ್ತ ಗಳಿಸಬಹುದು, 482 00:29:27,230 --> 00:29:29,290 ನಾನು ಕಾದರೆ ಖಂಡಿತ ಗೆಲ್ಲುವೆ. 483 00:29:29,490 --> 00:29:31,760 ಏಕೆಂದರೆ ಮುಂದಿನ ಕಾರ್ಡ್ ನಿಮ್ಮನ್ನು ಸೋಲಿಸಲಿದೆ. 484 00:29:32,100 --> 00:29:34,750 "ಕಾಡುಹಂದಿ ದಪ್ಪ ಆಗುತ್ತೆ, ಸಾಕುಹಂದಿ ಕೊಲ್ಲಲ್ಪಡುತ್ತೆ" 485 00:29:34,950 --> 00:29:35,980 ಅವಳು ಸಾಕುಹಂದಿ ಅಲ್ಲ. 486 00:29:37,190 --> 00:29:38,590 ನಾನು ಸಾಕುಹಂದಿ ಅಲ್ಲ. ಕಾಯುತ್ತೇನೆ. 487 00:29:38,790 --> 00:29:40,090 ನಿನ್ನಿಷ್ಟ. 488 00:29:40,290 --> 00:29:41,360 ಹದಿನೈದು. 489 00:29:42,270 --> 00:29:43,780 ತುಂಬಾ ಜಾಸ್ತಿ. 490 00:29:44,110 --> 00:29:45,890 ಅಭಿನಂದನೆಗಳು, ಮೇಡಂ. 491 00:29:46,090 --> 00:29:47,430 ಇದು ನಿಮ್ಮ ಅದೃಷ್ಟದ ರಾತ್ರಿ. 492 00:29:47,630 --> 00:29:50,180 ನಮ್ಮ ಜೊತೆ ಸಂಗೀತ ಕಚೇರಿಯಲ್ಲಿ ಪಾಲ್ಗೊಳ್ಳುವಿರೇ? 493 00:29:50,380 --> 00:29:52,020 - ಧನ್ಯವಾದಗಳು. - 80ರ ದಶಕದ ಮಹಿಳೆಯರು. 494 00:29:52,220 --> 00:29:55,100 ಡೆಬ್ಬಿ ಗಿಬ್ಸನ್, ಟಿಫಾನಿ ಮತ್ತು ಟೇಲರ್ ಡೇನ್ ರ ಅತಿದೊಡ್ಡ ಹಿಟ್ ಗಳು. 495 00:29:55,300 --> 00:29:56,860 ಈಗ ಹೋದರೆ ಎರಡನೇ ಭಾಗವನ್ನು ನೋಡಬಹುದು. 496 00:29:57,060 --> 00:29:58,370 ಆದರೆ ನನಗಿಲ್ಲಿ ಮಜಾ ಬರುತ್ತಿದೆ. 497 00:29:59,580 --> 00:30:01,240 ನೀವು ಕಾರ್ಡ್ ಎಣಿಸುತ್ತಿರುವುದು ಗೊತ್ತು. 498 00:30:01,440 --> 00:30:03,500 ಅದನ್ನು ಮನಸ್ಸಿನಲ್ಲಿಯೇ ಮಾಡಿದರೆ ಅದು ಕಾನೂನುಬಾಹಿರವಲ್ಲ. 499 00:30:04,090 --> 00:30:07,660 ಆದರೆ ನಿಮ್ಮ ಭದ್ರತಾ ಮುಖ್ಯಸ್ಥರು ನಮಗೆ ಇರಲು ಒಳ್ಳೆಯ ಕೋಣೆಯನ್ನು ಕೊಟ್ಟಿರುವರು, 500 00:30:07,860 --> 00:30:09,720 ಆದ್ದರಿಂದ ನಾನು ನಿಮಗೆ ತೊಂದರೆ ಕೊಡುವುದಿಲ್ಲ. 501 00:30:09,920 --> 00:30:13,350 ಇವುಗಳನ್ನು ಕ್ಯಾಷಿಯರ್ ಕಿಟಕಿಗೆ ಕೊಂಡೊಯ್ಯಲು ಸಹಾಯ ಮಾಡುವೆಯಾ? 502 00:30:14,600 --> 00:30:17,540 ಈ ಟಿಕೆಟ್ ಅನ್ನು ಮೆಂಬರ್ಸ್ ಓನ್ಲಿ ಜಾಕೆಟ್ ತೊಟ್ಟ ವ್ಯಕ್ತಿಗೆ ನೀಡಿ. 503 00:30:17,740 --> 00:30:20,100 ಅವನು 80 ರ ದಶಕದ ಮಹಿಳೆಯರನ್ನು ಆನಂದಿಸುತ್ತಾನೆ ಅನಿಸುತ್ತೆ. 504 00:30:45,590 --> 00:30:47,070 ಬಂದದ್ದಕ್ಕೆ ಧನ್ಯವಾದಗಳು. 505 00:30:47,270 --> 00:30:50,370 ತಡರಾತ್ರಿಯ ನಡಿಗೆ ಯಾವಾಗಲೂ ನನ್ನ ಚಿಂತೆ ದೂರ ಮಾಡುತ್ತದೆ, 506 00:30:50,570 --> 00:30:55,460 ನೀಗ್ಲೇಯಿಂದ ಫ್ರಾನ್ಸ್ ಬಗ್ಗೆ ತಿಳಿದ ನಂತರದಿಂದ ಮನಸ್ಸು ಅಷ್ಟು ಸರಿ ಇಲ್ಲ. 507 00:30:55,660 --> 00:30:56,560 ಹೂಂ. 508 00:30:57,060 --> 00:31:00,770 ಕ್ಯಾಸಿನೊದ ಅಷ್ಟೂ ಹಣವನ್ನು ಜೇಬಲ್ಲಿಟ್ಟುಕೊಂಡು ನಿನಗೆ ನಡೆಯಲಾಗುತ್ತಿರುವುದೇ ಆಶ್ಚರ್ಯ. 509 00:31:02,150 --> 00:31:05,470 ವಿಧಿವಿಜ್ಞಾನ ಲೆಕ್ಕಪರಿಶೋಧಕರು ತಮ್ಮ ತೆರಿಗೆಗಳಲ್ಲಿ ಇದನ್ನು ಘೋಷಿಸುವರೇ? 510 00:31:05,670 --> 00:31:07,110 ಆ ವಂಚಕರಿಗೆ ಘೋಷಿಸುವುದೇ? 511 00:31:07,310 --> 00:31:11,140 ಯಾರಿಗಾದರೂ ನಾನು ಲೆಕ್ಕಪರಿಶೋಧನೆ ಮಾಡುವುದೆಂದರೆ... ನನ್ನ ಕನಸಿನ ಕೆಲಸವಿದ್ದಂತೆ. 512 00:31:11,340 --> 00:31:13,220 ಈಗಿರುವ ಕೆಲಸ ನಿನಗೆ ಮೋಜು ನೀಡುತ್ತಿಲ್ಲವೇ? 513 00:31:13,420 --> 00:31:16,520 ಇಲ್ಲ, ಕೋಟ್ಯಾಧಿಪತಿಗಳಿಂದ ಕದಿಯುವ ಲಕ್ಷಾಧಿಪತಿಗಳ ಬಂಡವಾಳ ಬಯಲುಮಾಡುತ್ತಿರುವೆ. 514 00:31:16,720 --> 00:31:20,230 ಸರ್ಕಾರದ ಭ್ರಷ್ಟಾಚಾರವನ್ನು ಬೆನ್ನಟ್ಟುವುದು ನನಗಿಷ್ಟ. 515 00:31:20,430 --> 00:31:22,360 ನೀನು ಸರಕಾರಕ್ಕೆ ಮುಂಚೆ ಕೆಲಸ ಮಾಡುತ್ತಿದ್ದೆಯಲ್ಲವೇ? 516 00:31:22,560 --> 00:31:25,240 - 600 ಡಾಲರ್ ಗಳ ಟಾಯ್ಲೆಟ್ ಸೀಟುಗಳು. - ಅದೇ. 517 00:31:25,440 --> 00:31:30,620 ತೆರಿಗೆ ಹಣವನ್ನು ಸರಿಯಾಗಿ ಬಳಸಿದ್ದರೆ, ರಸ್ತೆ ಮತ್ತು ಸೇತುವೆ ಮತ್ತು ಶಾಲೆಗಳನ್ನು 518 00:31:30,820 --> 00:31:33,660 ಸರಿಪಡಿಸಬಹುಡಿತ್ತು, ಅಗತ್ಯವಿರುವ ಜನರಿಗೆ ಸಹಾಯ ಮಾಡಬಹುದಿತ್ತು. 519 00:31:33,860 --> 00:31:35,600 ವ್ಯತ್ಯಾಸವನ್ನು ತರಬಹುದಿತ್ತು. 520 00:31:35,800 --> 00:31:36,960 ನೀನದನ್ನು ಮಾಡಬೇಕು. 521 00:31:37,160 --> 00:31:38,000 ಹೂಂ. 522 00:31:38,200 --> 00:31:42,190 ನಾನು ಲಾಭರಹಿತ ಬೇಹುಗಾರರ ಗುಂಪು ಪ್ರಾರಂಭಿಸಲು ನೋಡಿದೆ, 523 00:31:43,020 --> 00:31:44,980 ಆದರೆ ಆರಂಭಿಕ ವೆಚ್ಚಗಳು ತುಂಬಾ ಹೆಚ್ಚು. 524 00:31:46,190 --> 00:31:48,110 ಮೊದಲ ಹೆಜ್ಜೆ ಯಾವಾಗಲೂ ಕಠಿಣವಾಗಿರುತ್ತೆ. 525 00:31:50,150 --> 00:31:51,110 ಹೌದು. 526 00:31:52,950 --> 00:31:57,100 ಅದಕ್ಕಾಗಿಯೇ, ಹಿಂದಿನ ದಿನಗಳಲ್ಲಿ, ನೀನು ನಾನು ಎಂದಿಗೂ ಒಟ್ಟಾಗಲಿಲ್ಲವೇ? 527 00:31:57,300 --> 00:31:58,990 ಮೊದಲ ಹೆಜ್ಜೆಗಳು ಕಠಿಣವಾಗಿದ್ದವೇ? 528 00:32:01,830 --> 00:32:04,420 ಹೋಟೆಲ್ ಕೋಣೆಯಲ್ಲಿ ಎಷ್ಟು ಕುಡಿದೆ? 529 00:32:04,620 --> 00:32:06,500 ಆ ಪ್ರಶ್ನೆಯನ್ನು ಕೇಳಲು ಸಾಕಾಗುವಷ್ಟು. 530 00:32:07,500 --> 00:32:10,130 ನಾನು ಯಾವುದೇ ಸುಳಿವುಗಳನ್ನು ಕೊಡಲಿಲ್ಲ ಎಂದೇನೂ ಅಲ್ಲ. 531 00:32:12,630 --> 00:32:14,410 ನಾನು ನಿನ್ನ ಬಾಸ್ ಆಗಿದ್ದೆ. 532 00:32:14,610 --> 00:32:16,300 ಅದು ಸರಿಯಾಗುತ್ತಿರಲಿಲ್ಲ. 533 00:32:22,390 --> 00:32:25,770 ಆ ಉತ್ತರಕ್ಕಾಗಿ ನಾನು ವರ್ಷಗಟ್ಟಲೆ ಕಾಯುತ್ತಿದ್ದೆ ನೀನು ಅದೇ ರೀಚರ್. 534 00:32:26,810 --> 00:32:29,400 ನೇರ, ಪ್ರಾಮಾಣಿಕ ಮತ್ತು ತರ್ಕಬದ್ಧ. 535 00:32:33,530 --> 00:32:35,660 ಮತ್ತೊಂದು ಪ್ರಶ್ನೆ ಕೇಳಬಹುದೇ? 536 00:32:37,700 --> 00:32:40,410 ನಮ್ಮನ್ನು ಹಿಂಬಾಲಿಸುತ್ತಿರುವ ಇಬ್ಬರನ್ನು ಏನು ಮಾಡಬೇಕೆಂದಿರುವೆ? 537 00:32:41,910 --> 00:32:44,730 - ಅವರನ್ನು ಯಾವಾಗ ಗಮನಿಸಿದೆ? - ನಾವು ಕ್ಯಾಸಿನೊದಿಂದ ಹೊರಟಾಗ. 538 00:32:44,930 --> 00:32:47,940 ನಾವು ನಗದು ಪಡೆಯುತ್ತಿರುವುದನ್ನು ಗಮನಿಸಿ ನಮ್ಮನ್ನು ಲೂಟಿ ಮಾಡಲಿರುವರೆಂದುಕೊಂಡೆ. 539 00:32:48,140 --> 00:32:49,490 ನಾನು ಅದನ್ನೇ ಅಂದುಕೊಂಡೆ. 540 00:32:49,690 --> 00:32:50,910 ಅಲ್ಲಿ ನಿಂತಿರುವ ಕಾರನ್ನು ನೋಡಿದೆಯಾ 541 00:32:51,100 --> 00:32:53,320 - ನ್ಯೂಯಾರ್ಕ್ ಡೀಲರ್ ಟ್ಯಾಗ್ ನೊಂದಿಗೆ? - ಹೂಂ? 542 00:32:53,520 --> 00:32:56,450 ಹೈವೇಯಲ್ಲಿ ನಾವು ಪಟ್ಟಣಕ್ಕೆ ಬಂದಾಗ ಅದು ನಮ್ಮ ಹಿಂದೆಯೇ ಇತ್ತು. 543 00:32:56,650 --> 00:32:59,910 ನಾವು ಅದನ್ನು ಹಾದು ಹೋಗುವಾಗ, ಬಂದೂಕು ಹಿಡಿದ ವ್ಯಕ್ತಿ ಹೊರಗೆ ಬರುತ್ತಾನೆ. 544 00:33:00,110 --> 00:33:03,210 ನಾವು ಓಡಲು ತಿರುಗಿದಾಗ, ಹಿಂದಿರುವ ಹುಡುಗರು ಹತ್ತಿರ ಬಂದಿರುತ್ತಾರೆ. 545 00:33:03,410 --> 00:33:04,790 ಏನು ಮಾಡುವುದು? 546 00:33:04,990 --> 00:33:06,750 ನಾವು ಆ ಕಾರನ್ನು ಹಾದು ಹೋಗುವುದಿಲ್ಲ. 547 00:33:06,950 --> 00:33:08,650 ನಾನು "ಹೋಗು" ಅಂದಾಗ ಬೇಲಿಯ ಮೇಲಿನಿಂದ... 548 00:33:09,480 --> 00:33:10,320 ಹೋಗು! 549 00:33:10,690 --> 00:33:11,530 ಛೇ! 550 00:33:19,780 --> 00:33:20,950 ಹೋಗು! ಹೋಗು! 551 00:33:24,040 --> 00:33:27,480 ಸರಿ. ಆ ಪೋಲೀಸನನ್ನು ಹೊಡೆದಿದ್ದಕ್ಕಾಗಿ ನಿನ್ನ ಮೇಲೆ ವಾರಂಟ್ ಹೊರಬಂದಿರಬಹುದು. 552 00:33:27,680 --> 00:33:31,030 ವಸತಿ ಪ್ರದೇಶದಲ್ಲಿ ಗುಂಡು ಹಾರಿಸಿದರೆ, ಪೊಲೀಸರನ್ನು ಕರೆಯಲಾಗುವುದು, ಜೈಲಿಗೆ ಹೋಗುವೆ. 553 00:33:31,230 --> 00:33:32,550 ಬಂದೂಕುಗಳಿಲ್ಲದೆ ಇದನ್ನು ನಿಪಟಾಯಿಸೋಣ. 554 00:33:33,760 --> 00:33:35,920 ಅವರೂ ಅದೇ ಆಲೋಚನೆಯಲ್ಲಿರುವಂತಿದೆ. 555 00:33:37,380 --> 00:33:38,970 ನಿನಗೆ ಸಹಾಯ ಬೇಕೇ? 556 00:33:39,170 --> 00:33:40,100 ಪರವಾಗಿಲ್ಲ. 557 00:36:32,980 --> 00:36:35,940 ನಾವು ಮಕ್ಕಳಾಗಿದ್ದಾಗ, ಅದರಲ್ಲಿ ಕೇವಲ ನಮ್ಮ ಹೆಸರು ಬರೆಯುತ್ತಿದ್ದೆವು. 558 00:36:39,190 --> 00:36:41,650 ಇವನು ಕ್ಯಾಸಿನೊದ ಮೆಂಬರ್ಸ್ ಓನ್ಲಿ ಜಾಕೆಟ್ ವ್ಯಕ್ತಿ. 559 00:36:43,070 --> 00:36:46,560 ಛೇ. ಇವರು ನಮ್ಮ ಹಿಂದೆ ಬಂದಿದ್ದರೆ, ನೀಗ್ಲೇ, ಓ'ಡೊನೆಲ್ ಹಿಂದೆಯೂ ಹೋಗಿರಬಹುದು. 560 00:36:46,760 --> 00:36:50,640 ಇಲ್ಲ. ನಮ್ಮ ಮೇಲೆ ಹಲ್ಲೆ ಮಾಡಲು, ನಾವು ಬೋರ್ಡ್ ವಾಕ್ ನಿಂದ ಇಳಿಯುವವರೆಗೂ ಕಾದರು. 561 00:36:50,840 --> 00:36:53,540 ಅವರು ಕ್ಯಾಮೆರಾಗಳಿರುವ ಜನನಿಬಿಡ ಹೋಟೆಲ್ ಗೆ ಹೋಗುವುದಿಲ್ಲ. 562 00:36:54,540 --> 00:36:55,620 ಐಡಿ ಇಲ್ಲ. 563 00:36:56,420 --> 00:36:58,170 ಈ ಬೇವರ್ಸಿಯ ಕಾರಿನಲ್ಲಿ ಹುಡುಕೋಣ. 564 00:37:12,020 --> 00:37:13,930 ಚೆನ್ನಾಗಿಯೇ ತಯಾರಿ ಮಾಡಿರುವಂತಿದೆ. 565 00:37:18,230 --> 00:37:19,110 ಫೋನ್. 566 00:37:26,610 --> 00:37:27,600 ಕೆಲಸ ಮುಗಿಯಿತೇ? 567 00:37:27,800 --> 00:37:29,370 ನೀನು ನಿರೀಕ್ಷಿಸಿದ ರೀತಿಯಲ್ಲಿ ಅಲ್ಲ. 568 00:37:35,000 --> 00:37:37,110 ನೀನು ತಪ್ಪು ವ್ಯಕ್ತಿಯ ವಿರುದ್ಧ ಹೋರಾಡುತ್ತಿರುವೆ. 569 00:37:37,310 --> 00:37:39,860 ಇದರ ಕೊನೆ ನಿನಗೆ ಚೆನ್ನಾಗಿರುವುದಿಲ್ಲ. 570 00:37:40,060 --> 00:37:42,210 ಹಾಗಾದರೆ ನೀನೇಕೆ ಭಯ ಪಡುತ್ತಿರುವೆ? 571 00:37:46,800 --> 00:37:50,050 - ನಾನವನ ಗಮನ ಸೆಳೆದಿದ್ದೇನೆ ಅನಿಸುತ್ತೆ. - ಸಂಖ್ಯೆಯನ್ನು ಪತ್ತೆಹಚ್ಚೋಣವೇ? 572 00:37:50,390 --> 00:37:54,350 ಇದು ಎಸೆಯುವಂತಹ ಫೋನ್. ಇನ್ನೊಂದು ಬದಿಯವನೂ ಅದನ್ನೇ ಬಳಸಿರುತ್ತಾನೆ. 573 00:37:54,550 --> 00:37:58,130 ಡೀಲರ್ ಟ್ಯಾಗ್ ಗಳು ನಕಲಿ, ವಿಐಎನ್ ಗಳನ್ನು ಕಿತ್ತುಹಾಕಲಾಗಿದೆ. 574 00:37:58,330 --> 00:38:00,340 ಅವುಗಳಲ್ಲಿ ಯಾವುದನ್ನೂ ಗುರುತಿಸಲು ಏನೂ ಇಲ್ಲ. 575 00:38:00,540 --> 00:38:01,730 ಈ ಹುಡುಗರು ಚಾಲೂ ಇದ್ದರು. 576 00:38:02,900 --> 00:38:04,390 ಒಬ್ಬನನ್ನು ಜೀವಂತವಾಗಿ ಬಿಡಬೇಕಿತ್ತು. 577 00:38:04,580 --> 00:38:07,260 ಹೂಂ. ಅವರು ನಮಗೆ ಅವಕಾಶವೇ ಕೊಡಲಿಲ್ಲ, ಅಲ್ಲವೇ? 578 00:38:07,460 --> 00:38:09,780 ಇರಬಹುದು. ಆದರೆ ಈಗ ಮುಂದುವರಿಯಲು ನಮ್ಮ ಬಳಿ ಏನೂ ಇಲ್ಲ. 579 00:38:11,490 --> 00:38:12,910 ಇಲ್ಲ. 580 00:38:14,660 --> 00:38:15,750 ಪಾರ್ಕಿಂಗ್ ಸ್ಥಳದ ಪಾಸ್. 581 00:38:16,910 --> 00:38:18,650 - "ನ್ಯೂ ಏಜ್ ಟೆಕ್ನಾಲಜೀಸ್". - ಹೂಂ. 582 00:38:18,850 --> 00:38:20,440 ನಿನ್ನೆ ಬೆಳಿಗ್ಗೆ ಮುದ್ರೆ ಒತ್ತಲಾಗಿದೆ. 583 00:38:20,640 --> 00:38:22,290 ಇದು ಒಳ್ಳೆಯ ಸುಳಿವು. 584 00:38:24,840 --> 00:38:26,840 ಆ ದೇಹಗಳನ್ನೇನು ಮಾಡೋಣ? 585 00:38:28,340 --> 00:38:29,550 ನನ್ನ ಬಳಿ ಒಂದು ಉಪಾಯ ಇದೆ. 586 00:38:43,150 --> 00:38:44,070 ನನಗೆ ಬಾಯಾರಿಕೆಯಾಗಿದೆ. 587 00:38:45,150 --> 00:38:46,150 ಬಿಯರ್ ಬೇಕೇ? 588 00:39:04,000 --> 00:39:05,210 ನ್ಯೂ ಏಜ್ ಬಗ್ಗೆ ಏನಾದರೂ? 589 00:39:05,880 --> 00:39:07,050 ಹೂಂ. 590 00:39:07,460 --> 00:39:10,160 ನ್ಯೂ ಏಜ್ ಒಂದು ಏರೋಸ್ಪೇಸ್ ಕಂಪನಿ. 591 00:39:10,360 --> 00:39:11,930 ಅಟ್ಲಾಂಟಿಕ್ ಸಿಟಿಗೆ ಏನಾದರೂ ಸಂಬಂಧ? 592 00:39:13,100 --> 00:39:16,310 ನನಗೆ ಗೊತ್ತಿರುವ ಮಟ್ಟಿಗೆ ಇಲ್ಲ. ಮುಖ್ಯ ಕಚೇರಿ ನ್ಯೂ ಯಾರ್ಕ್ ನಲ್ಲಿದೆ. 593 00:39:21,480 --> 00:39:26,180 ಸಿಡಿಗುಂಡುಗಳ ತುಂಡು ತಾಗಿದೆ ನನಗೆ, ಹೊಡೆದಾಡುವಾಗ ನಾನು ಗಮನಿಸಲೇ ಇಲ್ಲ. 594 00:39:26,370 --> 00:39:27,440 ಹೆಚ್ಚೇನೂ ಗಾಯ ಆಗಿಲ್ಲ. 595 00:39:28,570 --> 00:39:29,400 ಇಲ್ಲಿ... 596 00:39:37,370 --> 00:39:38,290 ಏನು ಮಾಡುತ್ತಿರುವೆ? 597 00:39:39,660 --> 00:39:42,330 ಆಲ್ಕೋಹಾಲ್ ನಿಂದ ಉರಿ ಆದಾಗ ನನ್ನ ತಾಯಿ ಇದನ್ನೇ ಮಾಡುತ್ತಿದ್ದರು. 598 00:39:44,250 --> 00:39:46,710 ನೀನು ಇದಕ್ಕೆ ಕೀಟಾಣುಗಳನ್ನು ಊದುತ್ತಿರಬಹುದು. 599 00:39:47,170 --> 00:39:50,010 ಇರಬಹುದು. ಆದರೆ ಇದು ಹಿತವಾಗಿರುತ್ತೆ. 600 00:39:54,010 --> 00:39:54,850 ಥ್ಯಾಂಕ್ಸ್. 601 00:39:58,140 --> 00:39:58,970 ಇರಲಿ. 602 00:40:09,110 --> 00:40:10,320 ಗೊತ್ತಾ, ರೀಚರ್, 603 00:40:11,150 --> 00:40:13,700 ಕೆಲವೊಮ್ಮೆ ಒಂಟಿಯಾಗಿರುವುದು ದೊಡ್ಡ ವಿಷಯವೇನಲ್ಲ. 604 00:40:15,570 --> 00:40:18,120 ನಿನ್ನ ಹಾಗೆ ಜೀವನ ನಡೆಸುತ್ತಿರುವವರಿಗಂತೂ ಇದು ಸಾಮಾನ್ಯವೇ. 605 00:40:20,330 --> 00:40:22,160 ಈ ರಾತ್ರಿ ನೀನು ಒಂಟಿಯಾಗಿರಬೇಕಾಗಿಲ್ಲ. 606 00:40:25,880 --> 00:40:27,960 ಈಗ ನೀನು ನನ್ನ ಬಾಸ್ ಕೂಡ ಅಲ್ಲ. 607 00:40:58,780 --> 00:41:04,750 {\an8}ಕೊಲೊರಾಡೊ, ಡೆನ್ವರ್ ನಿಂದ ಇಪ್ಪತ್ತು ಮೈಲಿ ದೂರದಲ್ಲಿ 608 00:41:29,980 --> 00:41:32,220 ಎಲ್ಲಾ 650 ಟ್ರಕ್ ನಲ್ಲಿ ಇರುತ್ತದೆ. 609 00:41:32,420 --> 00:41:35,680 ನಾನು ಇದರಲ್ಲಿ ಜೋಡಿಸಿದ ಜಿಪಿಎಸ್ ಲೊಕೇಟರ್ ಮೂಲಕ ಅದನ್ನು ಟ್ರ್ಯಾಕ್ ಮಾಡಬಹುದು. 610 00:41:35,880 --> 00:41:39,470 ದಾಳಿ ಮಾಡಲು ದಾರಿಯಲ್ಲಿ ಕನಿಷ್ಠ ಎರಡು ಉತ್ತಮ ಸ್ಥಳಗಳಿವೆ. 611 00:41:39,670 --> 00:41:40,530 ಅದ್ಭುತ. 612 00:41:41,370 --> 00:41:43,330 ಉಳಿದದ್ದನ್ನು ನನ್ನ ಜನರು ನೋಡಿಕೊಳ್ಳುತ್ತಾರೆ. 613 00:41:44,080 --> 00:41:46,020 ಮತ್ತು ಅಸ್ತ್ರಗಳು? 614 00:41:46,220 --> 00:41:48,530 ಒಪ್ಪಂದದಂತೆ ಅವೆಲ್ಲವನ್ನೂ ವಿದೇಶದಲ್ಲಿ ಬಳಸಲಾಗುವುದಲ್ಲವೇ? 615 00:41:48,730 --> 00:41:49,830 ಖಂಡಿತವಾಗಿಯೂ. 616 00:41:50,540 --> 00:41:53,260 ಮತ್ತು ಟ್ರಕ್ ಚಾಲಕನಿಗೆ ಏನೂ ಮಾಡುವುದಿಲ್ಲ, ಅಲ್ಲವೇ? 617 00:41:54,630 --> 00:41:55,470 ಖಂಡಿತವಾಗಿ. 618 00:41:56,720 --> 00:41:58,800 ನಾನು ಎಂದಿಗೂ ಯಾರಿಗೂ ಹಾನಿ ಮಾಡುವುದಿಲ್ಲ. 619 00:42:16,780 --> 00:42:19,600 - ಶುಭೋದಯ, ಡಿಕ್ಸನ್. - ಕಳೆದ ರಾತ್ರಿಯ ಬಗ್ಗೆ ನಿನ್ನೊಂದಿಗೆ ಮಾತಾಡಬೇಕು. 620 00:42:19,800 --> 00:42:21,930 ಏನಾಯಿತು ಎಂದು ಇಡೀ ಹೋಟೆಲ್ ಗೆ ಕೇಳಿತು. 621 00:42:22,130 --> 00:42:23,290 ದನಿ ಜೋರಾಗಿದೆ ಎಂದಿದ್ದೆ ನಾನು. 622 00:42:23,990 --> 00:42:26,900 ನಮ್ಮನ್ನು ನ್ಯೂ ಯಾರ್ಕ್ ನಿಂದ ಹಿಂಬಾಲಿಸಿದ ಕಾರಿನಲ್ಲಿ ಇದು ಸಿಕ್ಕಿತು. 623 00:42:27,100 --> 00:42:28,500 ಚಾಲಕನಿಗೆ ಏನಾಯಿತು? 624 00:42:29,170 --> 00:42:30,900 ಅವನು ಇನ್ನು ನಮ್ಮನ್ನು ಹಿಂಬಾಲಿಸುವುದಿಲ್ಲ. 625 00:42:31,100 --> 00:42:32,750 ಅವನ ಇಬ್ಬರು ಸ್ನೇಹಿತರೂ ಕೂಡ. 626 00:42:33,960 --> 00:42:34,800 ಛೇ. 627 00:42:38,430 --> 00:42:40,390 - ಯಾರು? - ರೈಟ್. 628 00:42:43,050 --> 00:42:43,890 ತೊಂದರೆಯಿಲ್ಲ. 629 00:42:44,890 --> 00:42:45,720 ಒಳಗೆ ಬನ್ನಿ. 630 00:42:48,440 --> 00:42:51,050 ಎಚ್ಚರಿಕೆಯಲ್ಲಿರುವಂತೆ ಕಾಣುತ್ತೀರಿ. 631 00:42:51,250 --> 00:42:53,880 ಪರಿಸ್ಥಿತಿ ಹಾಗೇ ಇದೆ. 632 00:42:54,080 --> 00:42:58,510 ಇನ್ನಷ್ಟು ಕೆಟ್ಟ ಸುದ್ದಿ ತಂದಿರುವೆ. ನಾನು ವಿಷಯಗಳನ್ನು ವಿಚಾರಿಸುತ್ತಿದ್ದಾಗ, 633 00:42:58,710 --> 00:43:03,310 ಅಟ್ಲಾಂಟಿಕ್ ಸಿಟಿ ಪಿಡಿ ಎರಡು ದೇಹಗಳನ್ನು ನ್ಯೂ ಯಾರ್ಕ್ನಲ್ಲಿ ಕಂಡುಹಿಡಿದುದಾಗಿ ಹೇಳಿದರು, 634 00:43:03,510 --> 00:43:05,710 ನಿಮ್ಮ ಸ್ನೇಹಿತ ಸಿಕ್ಕಿದ್ದ ಸ್ಥಳದ ಬಳಿ. 635 00:43:05,910 --> 00:43:09,210 ಸ್ವಲ್ಪ ಸಮಯ ಆಗಿರಬಹುದು, ದೇಹಗಳು ಕೊಳೆತಿವೆ. 636 00:43:09,870 --> 00:43:11,420 ಪೊಲೀಸ್ ವರದಿಯ ಪ್ರತಿ ಸಿಕ್ಕಿತು. 637 00:43:16,760 --> 00:43:18,670 ಅದರೊಂದಿಗೆ ಅವನನ್ನು ಗುರುತಿಸುವುದು ಸುಲಭ. 638 00:43:32,100 --> 00:43:34,050 ಅವರು ಸೈನ್ಯಕ್ಕೆ ಸೇರಿದಾಗ, ಅವನ ತಂಗಿ ಭಯಗೊಂಡಿದ್ದಳು 639 00:43:34,250 --> 00:43:36,400 ಎಂತಹ ಗಾಯಗಳೊಂದಿಗೆ ಸಾಯುತ್ತಾನೋ, 640 00:43:37,190 --> 00:43:39,110 ಏನಾಯಿತು ಎಂದು ಅವಳಿಗೆ ತಿಳಿಯದೇ ಹೋಗಬಹುದು. 641 00:43:39,610 --> 00:43:41,820 ಅವನ ಲೋಹದ ಐಡಿ ಕೂಡ ಸ್ಫೋಟಿಸಿರಬಹುದು ಎಂದಳು. 642 00:43:43,110 --> 00:43:47,080 ಅವಳಿಗೆ ಸಮಾಧಾನ ಮಾಡಲು, ತನ್ನ ಹೆಸರು ಮತ್ತು ಐಡಿಯನ್ನು ಹಚ್ಚೆ ಹಾಕಿಸಿಕೊಂಡಿದ್ದ. 643 00:43:48,080 --> 00:43:49,160 ಆಗ ತಮಾಷೆ ಅನಿಸಿತ್ತು. 644 00:43:50,580 --> 00:43:51,960 ಅವನು ತಲೆಕೆಡಿಸಿಕೊಳ್ಳಲಿಲ್ಲ. 645 00:43:52,160 --> 00:43:53,330 ತಂಗಿಯ ಮೇಲೆ ತುಂಬಾ ಪ್ರೀತಿ. 646 00:43:54,710 --> 00:43:56,170 ನಾನು ಅವಳಿಗೆ ಕರೆ ಮಾಡಬೇಕು. 647 00:43:57,460 --> 00:43:59,170 ನಾನು ಜಾರ್ಜ್ ಬಗ್ಗೆ ಮಿಲೇನಾಗೆ ಹೇಳುವೆ. 648 00:43:59,420 --> 00:44:01,550 ಅವರ ಗಾಯಗಳು ಫ್ರಾನ್ಸಿಯ ಗಾಯಗಳಂತೆಯೇ ಇದ್ದವು. 649 00:44:01,750 --> 00:44:04,590 ಅಂದರೆ ಅವನಿಗೂ ಚಿತ್ರಹಿಂಸೆ ನೀಡಿ ಹೆಲಿಕಾಪ್ಟರ್ ನಿಂದ ಹೊರಗೆಸೆದಿದ್ದಾರೆ. 650 00:44:06,640 --> 00:44:07,890 ಇನ್ನೊಂದು ವಿಷಯ, 651 00:44:09,520 --> 00:44:14,340 ನೀವು ನನಗೆ ನೀಡಿದ ಯಾವುದೇ ಹೆಸರುಗಳಲ್ಲಿ ಯಾರೂ ಯಾವುದೇ ಹೋಟೆಲ್ ಗಳಲ್ಲಿ ಉಳಿದಿಲ್ಲ. 652 00:44:14,540 --> 00:44:17,320 ಮತ್ತು ನಾನು ಇತರ ಕ್ಯಾಸಿನೊಗಳ ನನ್ನ ಸಹವರ್ತಿಗಳೊಂದಿಗೆ ಮಾತಾಡಿದೆ. 653 00:44:17,770 --> 00:44:22,120 ಒರೊಜ್ಕೊ ಮತ್ತು ಸ್ಯಾಂಚೆಜ್, ಅವರಲ್ಲಿ ಯಾರಿಗೂ ಕೆಲಸ ಮಾಡುತ್ತಿರಲಿಲ್ಲ. 654 00:44:22,320 --> 00:44:25,470 ನಾನು ಅವರಿಗೆ 650 ಲಕ್ಷ ಡಾಲರ್ ಜೂಜಿನ ಹಗರಣದ ಬಗ್ಗೆ ಹೇಳಿದಾಗ, 655 00:44:25,670 --> 00:44:28,310 ರಾತ್ರೋರಾತ್ರಿ ತಮ್ಮ ಲೆಕ್ಕಪರಿಶೋಧನೆ ಮಾಡಿದರು. ನಾನು ಕೂಡ ಮಾಡಿದೆ. 656 00:44:28,510 --> 00:44:32,710 ಎಲ್ಲಾ ನಷ್ಟಗಳೂ ಲೆಕ್ಕಕ್ಕೆ ಸಿಗುವಂತಿವೆ. 657 00:44:32,910 --> 00:44:34,980 ಯಾವ ಕ್ಯಾಸಿನೊಗಳಲ್ಲೂ ಕಳ್ಳತನವಾಗಿಲ್ಲ. 658 00:44:35,180 --> 00:44:36,530 ನೀವು ಚಿಂತಿಸಬೇಕಾಗಿಲ್ಲ. 659 00:44:36,730 --> 00:44:39,740 ಶವಗಳು ನ್ಯೂ ಯಾರ್ಕ್ ನಲ್ಲಿ ಪತ್ತೆ. ಹಿಂಬಾಲಿಸಿದ ಕಾರು ನ್ಯೂ ಯಾರ್ಕ್ ನದ್ದು. 660 00:44:39,940 --> 00:44:42,090 ನ್ಯೂ ಯಾರ್ಕ್ ನಕಲಿ ಟ್ಯಾಗ್ ಗಳು, ನ್ಯೂ ಯಾರ್ಕ್ ಪಾರ್ಕಿಂಗ್ ಪಾಸ್. 661 00:44:42,300 --> 00:44:44,050 ಇದು ನ್ಯೂ ಯಾರ್ಕ್ ನದ್ದೇ ಪ್ರಕರಣ. 662 00:44:51,430 --> 00:44:52,890 ನೀನು ಎಲ್ಲಿಗೆ ಹೋಗುತ್ತಿರುವೆ? 663 00:44:55,480 --> 00:44:57,020 ನಮಗೆ ಇನ್ನಷ್ಟು ಬಂದೂಕುಗಳು ಬೇಕು. 664 00:46:42,630 --> 00:46:44,570 ಉಪ ಶೀರ್ಷಿಕೆ ಅನುವಾದ: ಅನುರಾಧ 665 00:46:44,770 --> 00:46:46,710 ಸೃಜನಶೀಲ ಮೇಲ್ವಿಚಾರಕರು ವಿವೇಕ್