1 00:00:06,040 --> 00:00:06,900 {\an8}ಈ ಹಿಂದೆ 2 00:00:07,100 --> 00:00:10,800 {\an8}ನಾನು, ಮೊರೇನ್ ಸೆಡಾಯ್, ಒಪ್ಪಿ ಗೌರವಿಸುವುದಾಗಿ ಸಿಯೋನ್ ಸಾಂಚೆಗೆ ಪ್ರಮಾಣ ಮಾಡುವೆ. 3 00:00:13,130 --> 00:00:15,330 ಆವಾಹಕಿ ಮಹಿಳೆಯನ್ನು ಒನ್ ಪವರಿನಿಂದ ದೂರ ಮಾಡಿದಾಗ, 4 00:00:15,530 --> 00:00:18,040 ನಿನ್ನ ದೇಹ ಮತ್ತೆಂದೂ ನಿನ್ನದೆಂಬಂತೆ ಅನಿಸುವುದಿಲ್ಲ. 5 00:00:18,240 --> 00:00:19,960 ನನ್ನನ್ನು ನಂಬಲು ನಿನಗೆ ಯಾವ ಕಾರಣ ಕೊಟ್ಟಿಲ್ಲ. 6 00:00:20,160 --> 00:00:22,790 ನಿನಗೆ ಕನಸಿನ ವರವನ್ನು ಕೊಡುವೆ. 7 00:00:22,990 --> 00:00:24,090 ಎಗ್ವೀನ್? ಅವಳು ಎಲ್ಲಿ ಇದ್ದಾಳೆ? 8 00:00:24,280 --> 00:00:25,670 ಇಷಮೆಲ್ ಬಳಿ ಇದ್ದಾಳೆ. 9 00:00:25,870 --> 00:00:28,810 ಈ ಸೆರೆಮನೆಯ ಹೊರಗೆ ನಿನಗೆ ಏನೂ ಇಲ್ಲ, ಎಗ್ವೀನ್. 10 00:00:29,360 --> 00:00:31,130 ನಿಮ್ಮ ಗೆಳತಿಯನ್ನು ನೀವು ಕಾಪಾಡಬೇಕೆಂದರೆ, 11 00:00:31,330 --> 00:00:33,150 ಇದನ್ನು ಹೇಗೆ ತೆರೆಯಬೇಕೆಂದು ನಾವು ಆಲೋಚಿಸಬೇಕು. 12 00:00:34,490 --> 00:00:35,860 ಅದನ್ನು ಮಹಿಳೆಯ ಮೇಲೆ ಹಾಕಬೇಕು. 13 00:00:36,860 --> 00:00:38,120 ಅದನ್ನು ಮುರಿಯಲಾಗದು. 14 00:00:38,870 --> 00:00:39,830 ನನ್ನ ಹೆಸರು ಅವಿಯೆಂದಾ. 15 00:00:40,280 --> 00:00:41,480 ನಾವೀಗಲೇ ಹೊರಡಬೇಕು. 16 00:00:41,680 --> 00:00:42,770 ಪೆರಿನ್ ಅಯ್ಬರಾ. 17 00:00:42,970 --> 00:00:43,940 ನಿನಗೆ ನಾಟ್ಯ ಇಷ್ಟವೇ? 18 00:00:44,140 --> 00:00:45,770 ಜಿ'ತೋಹ್ ಅಯಿಲ್ ಆಚಾರ. 19 00:00:45,970 --> 00:00:47,570 ನೀನು ನನ್ನ ಜೀವ ಉಳಿಸಿದೆ. 20 00:00:47,770 --> 00:00:49,570 - ಮತ್ತೆ, ಈಗೆಲ್ಲಿಗೆ ಹೋಗೋಣ? - ಫಾಮ್. 21 00:00:49,770 --> 00:00:50,610 ಮ್ಯಾಟ್? 22 00:00:50,810 --> 00:00:51,610 ಇಷಮೆಲ್. 23 00:00:51,810 --> 00:00:52,910 ಎಗ್ವೀನನ್ನು ಫಾಮಲ್ಲಿರಿಸಿದ್ದಾನೆ. 24 00:00:53,110 --> 00:00:53,990 ಹಾಗಾಗಿ, ಹೋಗೋಣ. 25 00:00:54,190 --> 00:00:55,160 ನೀನು ರಾಂಡನ್ನು ಕೊಲ್ಲುವೆ. 26 00:00:55,360 --> 00:00:56,340 ನಾನದನ್ನು ನೋಡಿದೆ. 27 00:00:57,380 --> 00:00:59,140 ಕ್ಷಮಿಸು. ನೀನು ಹೋಗಲು ಬಿಡಲಾರೆ. 28 00:00:59,680 --> 00:01:01,540 ಅಮಿರ್ಲಿನ್ ಸೀಟ್ ಬಂದಿದ್ದಾರೆ... ಕೈರ್ಹಿನ್ನಿನಲ್ಲಿ, 29 00:01:01,740 --> 00:01:03,720 ಮತ್ತು ನಿನ್ನನ್ನು ಕಾಣಬೇಕು ಅಂತಿದ್ದಾರೆ. 30 00:01:08,850 --> 00:01:14,820 {\an8}20 ವರ್ಷಗಳ ಹಿಂದೆ 31 00:01:15,190 --> 00:01:18,770 - ಅವರು ನನ್ನನ್ನು ಇಷ್ಟಪಡುತ್ತಾರಾ? - ನೀನು ಅವರನ್ನು ಇಷ್ಟಪಡುತ್ತೀಯೋ ಇಲ್ಲವೋ. 32 00:01:18,960 --> 00:01:20,680 - ಹೌದಾ? - ನನ್ನ ತಂದೆ ಬುದ್ದಿವಂತ, ಕರುಣಾಮಯಿ, 33 00:01:20,880 --> 00:01:22,980 ಆದರೆ ಆತ ಅನ್ಯಮನಸ್ಕ ಮತ್ತು ಅಸ್ಪಷ್ಟ ವ್ಯಕ್ತಿ. 34 00:01:23,180 --> 00:01:25,200 ನನ್ನ ಸಹೋದರಿ ಕೂಡ, ಅವಳು ಹೇಗೆಂದರೆ-- 35 00:01:28,250 --> 00:01:30,360 ನಿನಗೆ ಇಷ್ಟವಿಲ್ಲದಿದ್ದರೆ ಕೈರ್ಹಿನ್ನಿಗೆ ಹೋಗಬೇಕಿಲ್ಲ. 36 00:01:30,560 --> 00:01:32,740 ಏನಂದ್ರೆ, ಯುದ್ಧಕ್ಕೂ ಮುಂಚೆಯಿಂದ ನಾನು ಅವರನ್ನು ನೋಡಿಲ್ಲ 37 00:01:32,940 --> 00:01:34,760 - ಮತ್ತು ಈಗ ಅದು ಮುಗಿದು-- - ಇಲ್ಲ. ಅದಲ್ಲ. 38 00:01:36,260 --> 00:01:37,870 ಮತ್ತಿನ್ನೇನು? 39 00:01:38,070 --> 00:01:39,090 ಅದೇನೆಂದರೆ… 40 00:01:40,470 --> 00:01:41,600 ಅದೇನೆಂದರೆ… 41 00:01:42,720 --> 00:01:44,370 ಯುದ್ಧದೊಂದಿಗೆ, 42 00:01:44,570 --> 00:01:48,670 ಈ ಗೋಡೆಗಳ ಆಚೆ ಯಾವುದೇ ಭವಿಷ್ಯವನ್ನು ಊಹಿಸುವುದು ತುಂಬಾ ಕಷ್ಟವಾಗಿದೆ. 43 00:01:48,870 --> 00:01:51,090 ಮತ್ತು, ನಮ್ಮ ಬಗ್ಗೆ ನಾನು ಯೋಚಿಸಿದಾಗ, 44 00:01:51,290 --> 00:01:52,800 ನಾವು ಮುಂದೆಲ್ಲಿರಬಹುದು ಅಂತ, 45 00:01:53,000 --> 00:01:54,300 ಅದು ಈ ಟವರಿನಲ್ಲಲ್ಲ, 46 00:01:54,500 --> 00:01:55,930 ಈ ದಿರಿಸು ಮತ್ತು ಉಂಗುರದೊಂದಿಗಲ್ಲ. 47 00:01:56,130 --> 00:01:57,240 ಮತ್ತಿನ್ನೆಲ್ಲಿ? 48 00:01:58,490 --> 00:02:01,430 ಅದು… ಒಂದು ಬಿದಿರಿನ ಗುಡಿಸಲಿನಲ್ಲಿ, 49 00:02:01,630 --> 00:02:04,330 ನದಿಯ ಬದಿ, ನಾನು ಮತ್ತು ನನ್ನ ತಂದೆ ಇದ್ದಂತೆ. 50 00:02:05,200 --> 00:02:06,540 ನಾನು ನಿನ್ನ ಗಯ್ಯಾಳಿ ಹೆಂಡತಿಯೇ? 51 00:02:07,120 --> 00:02:09,480 ನೀನಂತೂ ಸರಿಯಾದ ಗಯ್ಯಾಳಿ ಹೆಂಡತಿಯಾಗುವೆ. 52 00:02:09,680 --> 00:02:11,570 ಎಂದಾದರೂ ಬಲೆ ಬೀಸಿದ್ದೀಯಾ, ಲೇಡಿ ದಾಮೊದ್ರೆಡ್? 53 00:02:11,770 --> 00:02:12,540 ಬೀಸಿರಬಹುದೇನೋ. 54 00:02:13,380 --> 00:02:15,530 ಆದರೆ ನಾವು ಇಲ್ಲಿ ಎಂದೆಂದಿಗೂ ಇರುವುದಿಲ್ಲ. 55 00:02:15,730 --> 00:02:17,280 ನಾವು ನಮ್ಮ ಸಮಯವನ್ನು ಕಳೆದು, 56 00:02:17,480 --> 00:02:21,180 ಅಂಡೊರಿನ ಮಗಳು-ವಾರಸುದಾರಳು ಅಥವಾ ಅಲ್ಟಾರಾದ ಅರಸನಿಗೆ ಸಲಹೆ ನೀಡಿ, ಆನಂತರ ನಾವು… 57 00:02:21,970 --> 00:02:23,830 ಆನಂತರ ನಾವು ನಿವೃತ್ತಿ ಪಡೆಯೋಣ. 58 00:02:24,030 --> 00:02:24,970 ನಿಜವಾಗಲೂ ಅಂತೀಯಾ? 59 00:02:25,970 --> 00:02:26,810 ಹೌದು. 60 00:02:27,730 --> 00:02:29,350 ಆದರೆ ನನ್ನ ಗಯ್ಯಾಳಿ ಹೆಂಡತಿ ನೀನು. 61 00:02:53,880 --> 00:02:56,170 ಗಿಟಾರಾ ಸೆಡಾಯ್, ಅಮಿರ್ಲಿನ್ನಿನಿಂದ ಸುದ್ದಿ ತಂದಿದ್ದೇವೆ. 62 00:02:57,090 --> 00:02:58,200 ಯುದ್ಧ ಮುಗಿದಿದೆ. 63 00:02:58,400 --> 00:02:59,630 ಅಯಿಲ್ ಹಿಂದೆ ಸರಿಯುತ್ತಿದ್ದಾರೆ. 64 00:03:09,270 --> 00:03:10,520 ಏನಾಯ್ತು? ಏನಾಗುತ್ತಿದೆ? 65 00:03:13,900 --> 00:03:15,360 ನಿಮಗೇನಾದರೂ ಕಾಣಿಸುತ್ತಿದೆಯೇ? 66 00:03:16,820 --> 00:03:17,900 ಡ್ರ್ಯಾಗನ್. 67 00:03:19,360 --> 00:03:20,860 ಡ್ರ್ಯಾಗನ್ ಮತ್ತೆ ಹುಟ್ಟಿದ್ದಾನೆ. 68 00:03:23,700 --> 00:03:24,870 ನನಗೆ ಅನುಭವವಾಗುತ್ತಿದೆ. 69 00:03:28,200 --> 00:03:29,410 ಭವಿಷ್ಯವಾಣಿಯೇ? 70 00:03:29,950 --> 00:03:31,290 ಈಗ ನಡೆಯುತ್ತಿದೆ. 71 00:03:32,830 --> 00:03:34,790 ಆ ಮಗು ಹಿಮದ ಮೇಲೆ ಮಲಗಿದೆ, 72 00:03:35,710 --> 00:03:37,490 ಮತ್ತು ಗುಡುಗಿನಂತೆ ಅಳುತ್ತಿದೆ. 73 00:03:37,690 --> 00:03:39,960 ಸೂರ್ಯನಂತೆ ಸುಡುತ್ತಿದೆ! 74 00:03:43,340 --> 00:03:45,090 ಯಾರಿಗೂ ಹೇಳಬೇಡಿ, ಸಹೋದರಿಯರೇ. 75 00:03:46,350 --> 00:03:48,430 ಡ್ರ್ಯಾಗನ್ ರೀಬಾರ್ನನ್ನು ಪತ್ತೆ ಮಾಡಿ… 76 00:03:49,720 --> 00:03:52,180 ಮತ್ತು ಅನುಸರಿಸಲು ಜಗತ್ತನ್ನು ಅನುವು ಮಾಡಿ. 77 00:03:55,600 --> 00:03:57,190 ಗಿಟಾರಾ? 78 00:04:26,140 --> 00:04:31,390 ದ ವೀಲ್ ಆಫ್ ಟೈಮ್ 79 00:05:02,130 --> 00:05:03,300 ತಾಯಿ. 80 00:05:04,970 --> 00:05:06,090 ಹೊರಡು, ಮಗಳೇ. 81 00:05:07,430 --> 00:05:09,010 ಈಕೆಯಿಂದ ನನಗೆ ಆಪತ್ತಿಲ್ಲ. 82 00:05:11,680 --> 00:05:13,720 ನಾನು ಹೊರಗಡೆಯೇ ಇರುತ್ತೇನೆ, ತಾಯಿ. 83 00:05:27,700 --> 00:05:29,070 ನೀನು ಯಾಕೆ ನನಗೆ ಹೇಳಲಿಲ್ಲ? 84 00:05:33,490 --> 00:05:35,950 ನಿನ್ನ ಆವಾಹನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದೇಕೆ ಹೇಳಲಿಲ್ಲ? 85 00:05:38,170 --> 00:05:40,110 ಆರು ತಿಂಗಳುಗಳಷ್ಟು ಪತ್ರಗಳು, ಮೊರೇನ್, 86 00:05:40,310 --> 00:05:42,590 ಇದರ ಬಗ್ಗೆ ಮಾತ್ರ ಒಂದು ಮಾತೂ ಇಲ್ಲ… 87 00:05:44,170 --> 00:05:45,550 ಈ ಉಲ್ಲಂಘನೆಯ ಬಗ್ಗೆ. 88 00:05:46,510 --> 00:05:47,970 ಲಾನ್ ಇನ್ನೇನು ಹೇಳಿದ ನಿನಗೆ? 89 00:05:49,550 --> 00:05:53,080 ಅವನ ಅನುಮತಿ ಇಲ್ಲದೆ, ಅವನ ಬಂಧವನ್ನು ಅಲನಾ ಪಡೆಯಲು... 90 00:05:53,280 --> 00:05:54,770 ನೀನು ಅನುಮತಿಸಿದೆ ಅಂತ. 91 00:05:57,020 --> 00:05:58,230 ಅವಳಿಗೆ ಹೇಳಿದನೆಂದು ಗೊತ್ತೇ? 92 00:05:59,480 --> 00:06:00,900 ನೀನು ಡ್ರ್ಯಾಗನ್ನ ಪತ್ತೆ ಮಾಡಿದ್ದು. 93 00:06:05,980 --> 00:06:07,570 ನೀನಿಲ್ಲೇಕೆ ಇರುವೆ, ಸಿಯೋನ್? 94 00:06:14,280 --> 00:06:16,750 ಈ ಹೊರೆಯನ್ನು 20 ವರ್ಷಗಳು ನಿನಗೆ ಹೊರಲು ಬಿಟ್ಟಿದ್ದೇನೆ, ಪ್ರಿಯೆ. 95 00:06:18,540 --> 00:06:20,170 ಅದಕ್ಕಾಗಿ ನೀನೆಲ್ಲವನ್ನೂ ತ್ಯಾಗ ಮಾಡಿರುವೆ. 96 00:06:22,540 --> 00:06:24,750 ಇನ್ನು ಮುಂದೆ, ನಾನೂ ಹೊರೆಯನ್ನು ಹಂಚಿಕೊಳ್ಳುತ್ತೇನೆ. 97 00:06:30,970 --> 00:06:33,350 ರಾಂಡ್ ಅಲ್'ಥೋರನನ್ನು ಭೇಟಿಯಾಗುವ ಸಮಯ ಬಂದಿದೆ. 98 00:06:41,060 --> 00:06:43,560 - ಅಂಗಿ ಒಳಕ್ಕೆ ಸಿಕ್ಕಿಸಿಕೋ. - ಅಮಿರ್ಲಿನ್ ಸೀಟಿಗೆ ಏನು ಬೇಕಂತೆ? 99 00:06:45,520 --> 00:06:46,780 ಇದು ವಿಚಾರಣೆಯೇ? 100 00:06:47,820 --> 00:06:50,650 ಡ್ರ್ಯಾಗನ್ ಎಂದು ಹೇಳಿಕೊಂಡ ಕಡೆಯ ವ್ಯಕ್ತಿಗೆ ಏನು ಮಾಡಿದಳೆಂದು ನೋಡಿದೆ. 101 00:06:51,320 --> 00:06:53,410 ಐ ಆಫ್ ದ ವರ್ಲ್ಡಿಂದ ಅದಕ್ಕೇ ಓಡಿ ಬಂದೆಯಾ? 102 00:06:54,410 --> 00:06:57,100 - ಇಲ್ಲಿ ಅವಿತುಕೊಂಡೆಯಾ? - ನಾನು ಪ್ರೀತಿಸಿದವರನ್ನು ರಕ್ಷಿಸಲು ಹೊರಟೆ. 103 00:06:57,300 --> 00:06:58,620 ಅಷ್ಟು ಸ್ವಾರ್ಥಿ ಆಗಬೇಡ. 104 00:06:59,660 --> 00:07:01,620 ಈ ಜಗತ್ತು ಮತ್ತು ಇಲ್ಲಿರುವ ಪ್ರತಿಯೊಬ್ಬರನ್ನೂ 105 00:07:02,790 --> 00:07:04,040 ರಕ್ಷಿಸಲು ನೀನು ಹುಟ್ಟಿರುವೆ, 106 00:07:05,290 --> 00:07:06,920 ಕೇವಲ ನೀನು ಪ್ರೀತಿಸುವವರನ್ನಷ್ಟೇ ಅಲ್ಲ. 107 00:07:09,630 --> 00:07:11,030 ನನ್ನ ಮಾತು ಕೇಳು. 108 00:07:11,230 --> 00:07:12,800 ಅಮಿರ್ಲಿನ್ ಒಬ್ಬ ಚತುರ ಮಹಿಳೆ. 109 00:07:13,760 --> 00:07:14,870 ಆಕೆ ಒಳ್ಳೆಯ ಹೆಂಗಸು. 110 00:07:15,070 --> 00:07:17,350 ಮತ್ತು ಆಕೆ ನಿನಗಿಂತ ಕೆಳಮಟ್ಟದಿಂದ ಬಂದವಳು. 111 00:07:20,520 --> 00:07:22,560 ನೀನಿದನ್ನು ಮಾಡುತ್ತಿರುವುದು ಮೊರೇನಿಗೆ ಗೊತ್ತೇ? 112 00:07:28,110 --> 00:07:31,570 ಪುರುಷನಾಗಿರಲು, ಎಲ್ಲಕ್ಕಿಂತ ಮಿಗಿಲಾಗಿ, ಒಂದು ನಿಯಮವಿದೆ. 113 00:07:33,240 --> 00:07:34,390 ಏನೇ ಬಂದರೂ, 114 00:07:34,590 --> 00:07:35,990 ನಿಂತು ಎದುರಿಸಬೇಕು. 115 00:07:42,250 --> 00:07:43,290 ಇದನ್ನು ಹಾಕಿಕೋ. 116 00:07:43,870 --> 00:07:44,710 ನಿನ್ನ ಕತ್ತಿ ಕೊಡು. 117 00:07:48,670 --> 00:07:50,050 ರೆಕ್ಕೆಯನ್ನು ಅದ್ದುವ ಕೊಕ್ಕರೆ. 118 00:07:51,720 --> 00:07:53,220 ಕತ್ತಿವರಸೆ ಕಲಿಯುತ್ತಿದ್ದೀಯ. 119 00:07:53,760 --> 00:07:55,180 ಒಂದೆರಡು ವಿಚಾರಗಳನ್ನು ಕಲಿತಿದ್ದೇನೆ. 120 00:07:58,010 --> 00:07:59,060 ಕತ್ತಿಯನ್ನು ಇಟ್ಟುಕೋ. 121 00:08:00,140 --> 00:08:03,140 ಅಮಿರ್ಲಿನ್ನಿಗೆ ನಿನ್ನ ಭಯವಿದ್ದರೆ, ಅದು ಕತ್ತಿಗಾಗಿ ಆಗಿರಲ್ಲ. 122 00:08:16,450 --> 00:08:18,680 ಕತ್ತಿವರಸೆಯ ಒಂದು ರೂಪವನ್ನು ಬಳಸಬೇಕಾಗಿ ಬಂದರೆ, 123 00:08:18,880 --> 00:08:20,350 ಹಜಾರ ದಾಟಿದ ಬೆಕ್ಕನ್ನು ಬಳಸು. 124 00:08:20,550 --> 00:08:21,940 ಬೆನ್ನನ್ನು ನೇರವಾಗಿರಿಸು, 125 00:08:22,140 --> 00:08:23,060 ಮಾಂಸಖಂಡಗಳು ಸಡಿಲವಾಗಿರಲಿ, 126 00:08:23,260 --> 00:08:25,540 ನಿನ್ನ ತಲೆಗೆ ದಾರ ಕಟ್ಟಿದಂತೆ ನೇತಾಡುತ್ತಿರಬೇಕು. 127 00:08:26,710 --> 00:08:27,580 ಹೋಗು. 128 00:08:28,500 --> 00:08:29,630 ಅಮಿರ್ಲಿನ್ ಕಾಯುತ್ತಿದ್ದಾರೆ. 129 00:09:00,740 --> 00:09:03,540 ನೀವು ನನ್ನನ್ನು ಕರೆದಂತೆಯೇ, ನಾನು ಬಂದಿರುವೆ, ತಾಯಿ. 130 00:09:04,290 --> 00:09:05,460 ತಯಾರಾಗಿ ನಿಂತಿದ್ದೇನೆ. 131 00:09:08,000 --> 00:09:09,250 ಈಗ ಹೌದಾ, ಹುಡುಗ? 132 00:09:12,960 --> 00:09:15,510 ಲಾನ್ ನಿನ್ನನ್ನು ತಯಾರು ಮಾಡಿದ್ದಾನೆಂದು ಕಾಣುತ್ತದೆ. 133 00:09:17,180 --> 00:09:18,680 ಇನ್ನೇನು ಹೇಳಿದ ನಿನಗೆ? 134 00:09:21,390 --> 00:09:23,350 ನೀವು ಕಂಡಂತೆ ನಿಮ್ಮ ನಿಜ ಸ್ವರೂಪ ಇಲ್ಲ ಅಂತ. 135 00:09:24,060 --> 00:09:25,770 ಎಷ್ಟೋ ಜನರು ಹಾಗಲ್ಲ. 136 00:09:26,810 --> 00:09:30,610 ಈ ಜಗತ್ತಿನಲ್ಲಿ, ನಮ್ಮ ಸತ್ಯಗಳನ್ನು ಕಾಪಾಡಿಕೊಳ್ಳುವುದೇ ಬುದ್ಧಿವಂತಿಕೆ. 137 00:09:31,150 --> 00:09:33,280 ಆದರೆ ನಾವಲ್ಲ, 138 00:09:33,900 --> 00:09:34,900 ಇಂದಲ್ಲ. 139 00:09:36,950 --> 00:09:38,700 ನಿನಗಾಗಿ ನನ್ನಲ್ಲಿ ಪ್ರಶ್ನೆಗಳಿವೆ. 140 00:09:43,290 --> 00:09:44,370 ಸತ್ಯವಾಗಿ ಉತ್ತರಿಸು. 141 00:09:46,040 --> 00:09:47,000 ಆಮೇಲೇನು? 142 00:10:36,920 --> 00:10:38,380 ಫಾಮಿಗೆ ಸ್ವಾಗತ. 143 00:10:47,470 --> 00:10:48,560 ಯಾರು ನೀನು? 144 00:10:49,230 --> 00:10:50,500 ನಾನಿಲ್ಲಿಗೆ ಹೇಗೆ ಬಂದೆ? 145 00:10:50,700 --> 00:10:52,850 ಅದೇ ನನ್ನ ಪುಟ್ಟ ರಹಸ್ಯ. 146 00:10:53,400 --> 00:10:56,180 ಕ್ಷಮಿಸು, ಬೆಳಕಿನ ಹೆಸರಲ್ಲಿ ನೀನು ಯಾರು? 147 00:10:56,370 --> 00:11:00,700 ನಾನು ಸುಳ್ಳು ಹೇಳಲ್ಲ. ನೀನು ಇನ್ನೂ ಹೆಚ್ಚು ಪ್ರಭಾವಶಾಲಿ ಅಂದುಕೊಂಡಿದ್ದೆ. 148 00:11:01,950 --> 00:11:04,390 ಆದರೂ, ಉಪಕಾರ ಮಾಡಲು ಸಂತೋಷಿಸುವೆ. 149 00:11:04,590 --> 00:11:06,020 ಇದು ಕನಸೇ? 150 00:11:06,220 --> 00:11:08,250 ಇಲ್ಲ. ನೀನು ಸಂಪೂರ್ಣ ಎಚ್ಚರದಿಂದಿರುವೆ. 151 00:11:47,950 --> 00:11:51,770 ಈ ಫಾಮಿನವರು ನಡೆದುಕೊಳ್ಳುವುದನ್ನು ನೋಡಿದರೆ, ಜೀವನಪೂರ್ತಿ ತಾವು ಶಾಂಚಾನರು ಅಂದುಕೊಂಡಿದ್ದಾರೆ, 152 00:11:51,970 --> 00:11:54,610 ಕೆಲವೇ ತಿಂಗಳ ಹಿಂದೆ ಅವರ ನಗರ ವಶವಾಯಿತು ಎಂಬ ಪರಿವೆಯೇ ಇಲ್ಲ. 153 00:11:54,810 --> 00:11:55,900 ಅವರು ಯಾಕೆ ವಾಪಸ್ ಹೋರಾಡಲ್ಲ? 154 00:11:56,100 --> 00:11:57,250 ಹೇಗೆ? 155 00:12:00,010 --> 00:12:01,240 ಅದರ ವಿರುದ್ಧ? 156 00:12:01,440 --> 00:12:03,700 ಬಾ, ಆ ಸೈನಿಕರು ಅರಮನೆಗೆ ಹೊರಟಿದ್ದಾರೆ. 157 00:12:03,900 --> 00:12:05,700 - ಅಲ್ಲಿಗೆ ಹೋಗಿ, ಎಗ್ವೀನಳನ್ನು ಹುಡುಕಿ-- - ಇಲ್ಲ. 158 00:12:05,900 --> 00:12:07,370 ನಿನ್ನ ರೀತಿ ಪ್ರಯತ್ನಿಸಿದ್ದೇವೆ. 159 00:12:07,570 --> 00:12:10,420 ನಿನ್ನ ಸ್ನೇಹಿತ ಪೆರಿನ್ ಜೊತೆ ಒಬ್ಬ ಒಗಿರ್ ಪ್ರಯಾಣಿಸುತ್ತಿದ್ದಾನಲ್ಲವೇ? 160 00:12:10,620 --> 00:12:13,100 ಈ ಬಾರಿ ನೀನು ನನ್ನ ಮಾತು ಕೇಳಿ ನಾನು ಹೇಳಿದಂತೆಯೇ ನಡೆದುಕೋ. 161 00:12:19,860 --> 00:12:23,760 ದಮಾನೆಯ ಸ್ಥಾನ ನೀಡುವುದು ನಿಮ್ಮ ಸಾಧನೆಗಳನ್ನು ಗುರುತಿಸಿ 162 00:12:23,960 --> 00:12:26,990 ನಮ್ಮ ರಾಜ್ಯದಲ್ಲಿ ನಿಮ್ಮ ಭವಿಷ್ಯದ ಮೇಲೆ ಹೂಡಿಕೆ ಮಾಡುವುದೆರಡೂ ಆಗಿದೆ. 163 00:12:28,240 --> 00:12:29,980 ನೀವೆಲ್ಲರೂ ತುಂಬಾ ಹೆಮ್ಮೆ ಪಡಬೇಕು. 164 00:12:30,180 --> 00:12:33,770 ಕೈಬಳೆಯನ್ನು ತೊಡಲು ಕೆಲವು ಮಹಿಳೆಯರಷ್ಟೇ ಅರ್ಹರು. 165 00:12:33,970 --> 00:12:36,820 ತಮ್ಮ ದಮಾನೆಯೊಂದಿಗೆ ನಿಜವಾದ ಬಂಧ ಏರ್ಪಡಿಸುವವರು ಇನ್ನೂ ಕಡಿಮೆ. 166 00:12:37,020 --> 00:12:39,920 ನಿಮ್ಮ ದಮಾನೆಯಿಂದ ಯಾರಾದರೂ ಪ್ರತಿಭಟನೆ ಎದುರಿಸಿದ್ದೀರಾ? 167 00:12:41,340 --> 00:12:42,510 ಅದು ಸಾಮಾನ್ಯ. 168 00:12:44,340 --> 00:12:48,040 ಇಂದು, ನಿಮ್ಮ ದಮಾನೆಯ ಬಲಪರೀಕ್ಷೆ ಮಾಡಲಿದ್ದೀರಿ. 169 00:12:48,240 --> 00:12:53,060 ಆಕೆಗೆ ಲಭ್ಯವಿರುವ ಹಸಿ ಶಕ್ತಿಯನ್ನು ನೀವು ಹೇಗೆ ಬಳಸಬಹುದೆಂದು ಅರ್ಥ ಮಾಡಿಕೊಳ್ಳಿ. 170 00:12:54,640 --> 00:12:55,940 ಪ್ರಾರಂಭಿಸೋಣ. 171 00:13:01,690 --> 00:13:03,180 ನಾವು ಜೊತೆಯಾಗಿ ಕೆಲಸ ಮಾಡೋಣ, 172 00:13:03,380 --> 00:13:06,780 ಆದರೆ ಇಂದು ನೀನು ನನ್ನನ್ನು ಅವಮಾನಿಸಿದರೆ, ಪಶ್ಚಾತ್ತಾಪ ಪಡುತ್ತೀಯ. 173 00:13:15,210 --> 00:13:18,730 ವೆರಿನ್, ಕೈರ್ಹಿನ್ನಿನ ಆಸ್ಥಾನ ಗ್ರಂಥಾಲಯ ಅತ್ಯಮೋಘವಾಗಿದೆ. 174 00:13:18,930 --> 00:13:21,210 ಅವರ ಬಳಿ ಇರುವ ಪುಸ್ತಕಗಳನ್ನು ನೀವು ಊಹಿಸಲೂ ಸಾಧ್ಯವಿಲ್ಲ. 175 00:13:29,340 --> 00:13:31,560 ಹೇಳಿ ಮತ್ತೆ, ಅದೇನು ದೊಡ್ಡ ರಹಸ್ಯ? 176 00:13:32,680 --> 00:13:35,140 ನಗರದ ಒಗಿರ್ ನಕ್ಷೆ ನಿಮಗೆ ಯಾಕೆ ಬೇಕು? 177 00:13:42,230 --> 00:13:43,930 ನನಗೆ ವೆರಿನ್ ಸೆಡಾಯ್ ಮೇಲೆ ನಂಬಿಕೆಯಿಲ್ಲ. 178 00:13:44,130 --> 00:13:45,400 ಲಾನ್ ನಂಬಿದರೂ ಸಹ. 179 00:13:48,150 --> 00:13:49,010 ತೋಮಸನನ್ನು ಅನುಸರಿಸುವೆ. 180 00:13:49,210 --> 00:13:51,240 ಇಲ್ಲ. ನಮಗೆ ನಮ್ಮ ಕೆಲಸ ಇದೆ. 181 00:13:52,660 --> 00:13:54,270 ನಾವು ಮೂವರಿದ್ದೇವೆ. 182 00:13:54,470 --> 00:13:58,670 ಈ ನಗರದಲ್ಲಿ ಒಬ್ಬ ಫಾರ್ಸೇಕನ್ ಇದ್ದರೆ ನಾವು ಪ್ರತ್ಯೇಕವಾಗುವುದು ಬೇಡ. 183 00:14:05,670 --> 00:14:07,010 ಒಬ್ಬರಿಗಿಬ್ಬರು. 184 00:14:18,390 --> 00:14:20,310 ನನಗೆ ಲಿಯಾಂಡ್ರಿನ್ ಬಗ್ಗೆ ಹೆಚ್ಚಿನ ಚಿಂತೆ. 185 00:14:23,020 --> 00:14:24,320 ಅವಳೆಲ್ಲಿಗೆ ಹೋದಳು? 186 00:14:28,780 --> 00:14:30,930 ಖಂಡಿತವಾಗಲೂ ನನಗೆ ಸ್ವಲ್ಪ ಚಿಂತೆಯಾಗಿದೆ. 187 00:14:31,130 --> 00:14:34,140 ಖಂಡಿತ, ತಕ್ಷಣವೇ ಮರಳಲು ರಾಣಿ ಗಾಲ್ಡ್ರಿಯನ್ ಅವರಿಗೆ ಸುದ್ದಿ ಕಳುಹಿಸಿದ್ದೇನೆ. 188 00:14:34,340 --> 00:14:35,310 ಈ ಕಡೆ. 189 00:14:35,510 --> 00:14:37,160 ಈ ಕಡೆ ಬನ್ನಿ. 190 00:14:40,710 --> 00:14:41,710 ಅಯಿಸ್ ಸೆಡಾಯ್. 191 00:14:42,250 --> 00:14:45,380 ದಾಮೊದ್ರೆಡ್ ಮನೆಗೆ ನಿಮ್ಮನ್ನು ಸ್ವಾಗತಿಸುವುದು ನನ್ನ ಭಾಗ್ಯ. 192 00:15:06,980 --> 00:15:08,720 ಇದರಿಂದ ನಿನಗೇನು ಲಾಭವೋ ಗೊತ್ತಿಲ್ಲ. 193 00:15:08,920 --> 00:15:10,760 ನನ್ನ ಪ್ರಕಾರ, ನಾವು ಕಳೆದುಕೊಂಡಿರುವ ಎಲ್ಲವೂ. 194 00:15:10,960 --> 00:15:13,370 ಹೊರಡು. ನಿನಗೆ ಹೇಳಲು ನನ್ನಲ್ಲಿ ಏನೂ ಇಲ್ಲ. 195 00:15:18,540 --> 00:15:19,910 ನಿನಗಾಗಿ ನನ್ನದೊಂದು ಪ್ರಶ್ನೆ ಇದೆ. 196 00:15:24,790 --> 00:15:28,130 ಇದನ್ನು ಕೇಳಿದ್ದಕ್ಕೆ ಒಂದು ದಿನ ನೀನು ನನ್ನನ್ನು ಕ್ಷಮಿಸಬೇಕು. 197 00:15:30,260 --> 00:15:33,090 ಇಷಮೆಲ್ ನಿನ್ನ ಆವಾಹನೆಯ ಸಂಪರ್ಕವನ್ನು ಕಡಿದ ನಂತರ, 198 00:15:34,840 --> 00:15:36,180 ಇಷ್ಟೆಲ್ಲಾ ತಿಂಗಳುಗಳಲ್ಲಿ, 199 00:15:38,430 --> 00:15:39,770 ಅದನ್ನು ಕೊನೆಗೊಳಿಸುವಂತೆ 200 00:15:40,890 --> 00:15:42,560 ನೀನು ಯೋಚಿಸಿದ ಘಳಿಗೆ ಯಾವುದಾದರೂ ಇದೆಯೇ? 201 00:15:45,400 --> 00:15:46,440 ಆತ್ಮಹತ್ಯೆ ಮಾಡಿಕೊಳ್ಳುವುದೇ? 202 00:15:48,820 --> 00:15:50,240 ನಾನು ಟವರ್ ದಾಖಲೆಗಳನ್ನು ಓದುತ್ತೇನೆ. 203 00:15:51,780 --> 00:15:56,810 ಇತಿಹಾಸದಲ್ಲಿ ಅದನ್ನು ಮಾಡದವರಿಂದ ಸಂಪರ್ಕ ಕಡಿಸಿಕೊಂಡ ಇಬ್ಬರು ಮಹಿಳೆಯರಷ್ಟೇ ಇದ್ದಾರೆ. 204 00:15:57,010 --> 00:15:59,370 - ಹಲವರು ಒಂದು ವರ್ಷದೊಳಗೇ ಮಾಡಿದರು. - ನಾನು ಮಾಡಲಿಲ್ಲ. 205 00:15:59,870 --> 00:16:01,370 ಒಂದೇ ಒಂದು ಕ್ಷಣವೂ ಇಲ್ಲ. 206 00:16:01,910 --> 00:16:04,400 ಯಾಕೆಂದರೆ ರಾಂಡನ್ನು ಕಾಪಾಡುವುದು, ಅವನಿಗೆ ಮಾರ್ಗದರ್ಶನ ಕೊಡುವುದು 207 00:16:04,600 --> 00:16:06,150 ಮಾತ್ರವಷ್ಟೇ ಮುಖ್ಯ. 208 00:16:06,350 --> 00:16:08,880 ನನಗಿಂತ, ನಿನಗಿಂತ, ಎಲ್ಲಕ್ಕಿಂತ ಮಿಗಿಲಾಗಿ. 209 00:16:11,010 --> 00:16:12,130 ಹಾಗೆಯೇ ಅಂದುಕೊಂಡೆ. 210 00:16:13,260 --> 00:16:15,700 ಮತ್ತು ನೀನು ಸಿಯೋನ್ ಜೊತೆ ಮಾಡುತ್ತಿರುವ ಈ ಕೆಲಸದಿಂದ 211 00:16:15,900 --> 00:16:17,750 ಲಾಸ್ಟ್ ಬ್ಯಾಟಲ್, ಈ ಜಗತ್ತಿನ ವಿಧಿ, 212 00:16:17,950 --> 00:16:19,680 ಎಲ್ಲವೂ ಅಪಾಯಕ್ಕೊಳಗಾಗುತ್ತವೆ. 213 00:16:21,060 --> 00:16:23,390 ಆಕೆ ನನಗೆ ಹೇಳದಿರುವುದು ಏನು? 214 00:16:28,650 --> 00:16:32,150 ನೀನು ಒಮ್ಮೆಯಾದರೂ ಯಾರನ್ನಾದರೂ ನಂಬಬೇಕಾಗುತ್ತದೆ, ಮೊರೇನ್. 215 00:16:35,490 --> 00:16:37,070 ಇದನ್ನು ನೀನೊಬ್ಬಳೇ ಮಾಡಲಾರೆ. 216 00:16:38,910 --> 00:16:39,830 ನಿನ್ನಿಂದಾಗದು. 217 00:16:41,830 --> 00:16:43,620 ಮತ್ತು ಅದು ನಾನಾಗಿರದಿದ್ದರೆ, 218 00:16:45,000 --> 00:16:47,790 ಕನಿಷ್ಠ ಪಕ್ಷ ಆಕೆಯಾದರೂ ಆಗಿರಬಹುದೆಂದು ಅಂದುಕೊಂಡೆ. 219 00:16:51,710 --> 00:16:53,450 ನೀನು ಜಾಗ್ರತೆಯಿಂದಿರುವೆ ಎನ್ನುವೆ. 220 00:16:53,650 --> 00:16:55,490 ಎಷ್ಟು ಬಾರಿ ಆವಾಹನೆ ಮಾಡಿರುವೆ? 221 00:16:55,690 --> 00:16:56,550 ಹೆಚ್ಚೇನಿಲ್ಲ. 222 00:16:57,430 --> 00:16:58,640 ಮಾಡಬೇಕಂತ ಮಾಡಿಲ್ಲ. 223 00:17:01,600 --> 00:17:03,250 ಸೂರ್ಯನಿಂದ ಮುಂಜಾನೆ ಹುಟ್ಟುವಂತೆ, 224 00:17:03,450 --> 00:17:05,750 ನೀನು ಆವಾಹನೆ ಮಾಡುವುದನ್ನು ಮುಂದುವರಿಸಬೇಕು. 225 00:17:05,950 --> 00:17:07,590 ನಿನಗೆ ಬೇರೆ ದಾರಿ ಇಲ್ಲ. 226 00:17:07,790 --> 00:17:11,380 ನೀನದನ್ನು ನಿಯಂತ್ರಿಸುವುದನ್ನು ಕಲಿಯದಿದ್ದರೆ, ಹುಚ್ಚನಾಗುವಷ್ಟು ಕಾಲವೂ ಬದುಕುವುದಿಲ್ಲ. 227 00:17:11,580 --> 00:17:12,940 ಇದೆಂತಹ ಆಯ್ಕೆ? 228 00:17:13,570 --> 00:17:16,240 ಸಾಯುವುದು, ಹುಚ್ಚನಾಗುವುದು, ಅಥವಾ ಪ್ರೀತಿಸುವವರನ್ನು ಕೊಲ್ಲುವುದು? 229 00:17:16,950 --> 00:17:19,270 ಚಕ್ರದಲ್ಲಿನ ಕಡ್ಡಿಯಾಗಿರೋದು ನನಗೆ ಸಾಕಾಗಿಹೋಗಿದೆ ಅಂತಾದರೆ? 230 00:17:19,470 --> 00:17:20,910 ನೀನು ಕಡ್ಡಿಯಲ್ಲವೋ, ಹುಡುಗ. 231 00:17:22,740 --> 00:17:25,710 ಚಕ್ರವನ್ನೇ ತಿರುಗಿಸುವ 232 00:17:26,750 --> 00:17:28,880 ನೀರು ನೀನು, 233 00:17:29,710 --> 00:17:32,960 ಅದನ್ನು ನುಚ್ಚುನೂರೂ ಮಾಡಬಲ್ಲವನು. 234 00:17:34,960 --> 00:17:37,620 ಡ್ರ್ಯಾಗನ್ ರೀಬಾರ್ನ್ ಸಿಕ್ಕರೆ ಅಮಿರ್ಲಿನ್ ಏನು ಮಾಡಬೇಕೆಂದು 235 00:17:37,820 --> 00:17:39,890 ಟವರ್ ಕಾನೂನು ಹೇಳುತ್ತೆ ಗೊತ್ತಾ? 236 00:17:41,510 --> 00:17:42,540 ಸಂಪರ್ಕ ಕಡಿತಗೊಳಿಸುವುದೇ? 237 00:17:42,740 --> 00:17:44,310 "ಸಂಪರ್ಕ ಕಡಿತಗೊಳಿಸುವುದೇ?" ಇಲ್ಲ! 238 00:17:46,230 --> 00:17:49,400 ಒನ್ ಪವರ್ ಇಲ್ಲದೆ ಡಾರ್ಕ್ ಒನ್ ವಿರುದ್ಧ ಹೇಗೆ ಹೋರಾಡುವೆ? 239 00:17:50,400 --> 00:17:53,110 ನನ್ನ ಕೆಲವು ರೆಡ್ ಪುತ್ರಿಯರಿಗೆ ಅದೇ ಬೇಕೆಂದುಕೊಳ್ಳುವೆ… 240 00:17:53,860 --> 00:17:55,740 ಆದರೆ ನಾವು ನಿನ್ನನ್ನು ಬಂಧಿಸಬೇಕಾಗುತ್ತದೆ, 241 00:17:56,610 --> 00:17:57,760 ನಿನ್ನ ಸುತ್ತ ತಡೆ ನಿರ್ಮಿಸಿ, 242 00:17:57,960 --> 00:18:01,030 ನಮಗೆ ಏನು ಬೇಕು ಮತ್ತು ಯಾವಾಗ ಬೇಕು ಅಂದಾಗ ಮಾತ್ರ ಆವಾಹನೆ ಮಾಡಿಸಬೇಕಾಗುತ್ತದೆ. 243 00:18:02,160 --> 00:18:04,440 ಮತ್ತು ನಾವು ಲಾಸ್ಟ್ ಬ್ಯಾಟಲ್ನಲ್ಲಿ ಹೋರಾಡಲು ಹೋಗುವಾಗ, 244 00:18:04,640 --> 00:18:09,540 ನಮ್ಮ ಬತ್ತಳಿಕೆಯಲ್ಲಿರುವ ಮಹತ್ವಪೂರ್ಣ ಶಸ್ತ್ರಾಸ್ತ್ರ ನೀನೇ ಆಗಿರುವೆ. 245 00:18:11,790 --> 00:18:12,960 ಆದರೆ ನಮ್ಮ ಸೇನಾಧಿಪತಿ ಅಲ್ಲ. 246 00:18:17,920 --> 00:18:19,410 ಇದು ಮಾತುಕತೆ ಅಲ್ಲ. 247 00:18:19,610 --> 00:18:21,120 ನೀವಾಗಲೇ ನಿರ್ಧಾರ ಮಾಡಿದ್ದೀರಿ. 248 00:18:21,320 --> 00:18:22,970 ನನ್ನನ್ನು ಭೇಟಿಯಾಗುವ ಮುನ್ನವೇ ಮಾಡಿದ್ದೀರಿ. 249 00:18:28,730 --> 00:18:30,350 ನಾನು ನಿಮ್ಮ ಬಂಧನದಲ್ಲಿರುವುದಿಲ್ಲ. 250 00:18:38,950 --> 00:18:42,820 ಆರು ತಿಂಗಳು ನೀನೇನೆಂದು ಅರಿತುಕೊಂಡಿರುವೆ, 251 00:18:43,740 --> 00:18:45,120 ಆದರೂ ನೀನೇನನ್ನೂ ಕಲಿತಿಲ್ಲ. 252 00:18:46,370 --> 00:18:48,770 ಆರು ತಿಂಗಳು, ಹಾಂ? 253 00:18:48,970 --> 00:18:50,580 ಅವಳು ನಿನಗೇನನ್ನೂ ಹೇಳಿಕೊಡಲಿಲ್ಲ. 254 00:18:51,290 --> 00:18:54,670 ನಿನ್ನನ್ನು ಗಾಳದ ಮೀನಿನಂತೆ ಪಳಗಿಸಲು ಒಬ್ಬ ಅಯಿಸ್ ಸೆಡಾಯ್ ಸಾಕು. 255 00:19:00,130 --> 00:19:02,840 ನೀನು ಹೆಣ್ಣಾಗಿದ್ದಿದ್ದರೆ ಎಷ್ಟೋ ಚೆಂದ ಇರುತ್ತಿತ್ತು. 256 00:19:17,860 --> 00:19:19,930 ಭಲೇ. ಬಲಶಾಲಿಯೇ. 257 00:19:20,130 --> 00:19:21,700 ಅಲೆಯು ನಮ್ಮನ್ನಿನ್ನೇನು ಮುಟ್ಟಲಿತ್ತು. 258 00:19:23,410 --> 00:19:24,320 ರೆನ್ನಾ, 259 00:19:24,950 --> 00:19:26,940 ನಿನ್ನ ದಮಾನೆಗೇನು ಹೆಸರು ಕೊಟ್ಟಿರುವೆ? 260 00:19:27,130 --> 00:19:30,160 ಅವಳ ಹೆಸರನ್ನೇ ಇರಿಸಿಕೊಳ್ಳಲು ಬಿಟ್ಟೆ. ಎಗ್ವೀನ್. 261 00:19:32,620 --> 00:19:34,630 ಈ ಎಗ್ವೀನ್ ಏನು ಮಾಡಬಲ್ಲಳೋ ನೋಡೋಣ. 262 00:19:43,590 --> 00:19:45,470 ನೀನು ಆಕೆಯ ಬೆಳಕನ್ನು ಕಂಡೆಯಲ್ಲವೇ? 263 00:19:46,600 --> 00:19:48,080 ನೀನು ಅವಳಿಗಿಂತ ಹೆಚ್ಚು ಹೊಳೆಯಬೇಕು. 264 00:19:48,280 --> 00:19:49,500 ನೀನು ಹೊಳೆಯುವುದು ಫಾಮಿನ 265 00:19:49,700 --> 00:19:52,190 ಪ್ರತಿಯೊಬ್ಬ ಸುಲ್'ದಾಮಿಗೆ ಕಾಣುವಷ್ಟು ಪ್ರಖರವಾಗಿರಬೇಕು… 266 00:19:54,480 --> 00:19:55,980 ಮತ್ತು ನೀನು ನನ್ನವಳೆಂದು ತಿಳಿದಿರು. 267 00:20:06,160 --> 00:20:07,450 ಈ ನೇಯ್ಗೆಯು ಸರಳವಾಗಿದೆ. 268 00:20:08,410 --> 00:20:09,870 ಗಾಳಿಯ ಸ್ಫೋಟ. 269 00:20:10,660 --> 00:20:12,750 ಇದು ನಿನ್ನ ಶಕ್ತಿಯ ಮಿತಿಯನ್ನು ನಮಗೆ ತೋರಿಸುತ್ತದೆ. 270 00:20:14,750 --> 00:20:15,790 ಚಿಂತಿಸಬೇಡ. 271 00:20:16,920 --> 00:20:19,300 ಇದಕ್ಕಾಗಿ ನಿನ್ನಿಂದ ನನಗೆ ಏನೂ ಬೇಕಾಗಿಲ್ಲ. 272 00:20:31,060 --> 00:20:33,980 ಒಳ್ಳೆಯದು. ಎಗ್ವೀನ್, ಇದು ತುಂಬಾ ಒಳ್ಳೆಯದು. 273 00:20:40,400 --> 00:20:41,400 ಎಗ್ವೀನ್? 274 00:21:23,780 --> 00:21:26,450 - ಆವನ ಮೂಗನ್ನು ನೋಡು. - ಅವನ ಕೂದಲನ್ನು ನೋಡು. 275 00:21:33,910 --> 00:21:35,250 ವಿಸ್ಡಮ್ ಅಲ್'ಮಯಿರಾ! 276 00:21:36,790 --> 00:21:37,790 ನೈನೀವ್. 277 00:21:39,040 --> 00:21:40,110 ಇದು ನೀನೇ. 278 00:21:40,310 --> 00:21:41,150 ನೀನು ಹೇಗೆ-- 279 00:21:41,350 --> 00:21:43,360 - ಪೆರಿನ್ ಎಲ್ಲಿ? ಆರಾಮವಾಗಿದ್ದಾನಾ? - ಅವನು ತಪ್ಪಿಸಿಕೊಂಡ. 280 00:21:43,560 --> 00:21:44,670 ಬೆಳಕಿನ ದಯೆ. 281 00:21:46,670 --> 00:21:48,220 ಎಲೈನ್ ಟ್ರಕಾಂಡ್! 282 00:21:49,220 --> 00:21:51,120 - ಅಂಡೊರಿನ ಮಗಳು-ವಾರಸುದಾರಳು. - ಮೇಲೇಳು. 283 00:21:51,320 --> 00:21:52,540 ಅವಳನ್ನು ಹುರಿದುಂಬಿಸಬೇಡ. 284 00:21:52,740 --> 00:21:55,960 ನಾನು ಲೋಯಿಲ್, ಹಲಾನನ ಮಗನಾದ ಆರೆಂಟನ ಮಗ. 285 00:21:56,160 --> 00:21:58,940 ನಿನ್ನ ಹೆಸರು ಅವನ ಕಿವಿಯ ತುಂಬಾ ಇದೆ. ಎದ್ದೇಳು, ನಮ್ಮಲ್ಲಿ ಸಮಯವಿಲ್ಲ. 286 00:21:59,520 --> 00:22:01,310 ಎಗ್ವೀನನ್ನು ನೋಡಿರುವೆಯಾ, ಬಿಲ್ಡರ್? 287 00:22:01,900 --> 00:22:03,110 ಅದು ರಾಕ್ಷಸತನ. 288 00:22:03,860 --> 00:22:05,760 ಕೆನೆಲ್ಸ್ ಎಂಬ ಜಾಗದಲ್ಲಿ ಅವಳನ್ನು 289 00:22:05,960 --> 00:22:07,550 ಪ್ರಾಣಿಯಂತೆ ಬಂಧಿಯಾಗಿರಿಸಿದ್ದಾರೆ. 290 00:22:07,750 --> 00:22:08,510 ಅದೆಲ್ಲಿದೆ? 291 00:22:08,710 --> 00:22:10,970 ಹಳೆಯ ಸೆರೆಮನೆ, ಅರಮನೆಯ ಹೊರಗಡೆ. 292 00:22:11,170 --> 00:22:12,430 ನಾವಲ್ಲಿಗೆ ಹೋಗಬೇಕು. ಈಗಲೇ. 293 00:22:12,630 --> 00:22:13,730 ಒಳಗೆ ಹೋಗಲಾಗದು. 294 00:22:13,930 --> 00:22:16,290 ಅದರ ಸುತ್ತ ನೂರು ಅಡಿಗಳ ಒಳಗೆ ಸುಲ್'ದಾಮರಿಗೆ ಮಾತ್ರ ಪ್ರವೇಶ. 295 00:22:18,580 --> 00:22:20,360 ಸುಲ್'ದಾಮ್ ಅಲ್ಲದವರನ್ನು ಮೃತ್ಯುಗಾವಲಿನವರು 296 00:22:20,560 --> 00:22:22,000 - ತಡೆಯುವರು. - ಅಲ್ಲಿ ನೋಡು! 297 00:22:24,170 --> 00:22:25,110 ಧನ್ಯವಾದ, ಬಿಲ್ಡರ್. 298 00:22:25,310 --> 00:22:27,300 ನಾವು ಮಾತನಾಡುವುದನ್ನು ಯಾರಾದರೂ ನೋಡುವ ಮುನ್ನ ಹೊರಡು. 299 00:22:27,880 --> 00:22:28,970 ನಿನ್ನೂ ತಪ್ಪಿಸುತ್ತೇವೆ. 300 00:22:29,970 --> 00:22:30,970 ಆಣೆ ಮಾಡುವೆ. 301 00:22:40,140 --> 00:22:41,900 ಮತ್ತೆ, ನಮಗೆ ಬೇಕಾದ ಎಲ್ಲವೂ ಇದೆ. 302 00:22:56,080 --> 00:23:00,870 ಮತ್ತೆ, ನೀನಿಲ್ಲಿಗೆ ಬಂದು, ಏನನ್ನೂ ಹೇಳದೆ, ಸುಮ್ಮನೆ ಜೀಬಿಕೊಂಡಿರುತ್ತೀಯಾ? 303 00:23:02,790 --> 00:23:03,840 ಸರಿ ಬಿಡು. ಆಯಿತು. 304 00:23:04,170 --> 00:23:05,880 ನಿನಗೆ ನಿದ್ದೆ ಮಾಡಲು ತೊಂದರೆ ಆಗುತ್ತಾ? 305 00:23:07,420 --> 00:23:08,380 ಏನು? 306 00:23:09,010 --> 00:23:09,880 ನನಗಾಗುತ್ತೆ. 307 00:23:11,340 --> 00:23:14,430 ನಾನಲ್ಲಿ ಮಲಗಿದ್ದು, ಜಗತ್ತಿನ ಎಲ್ಲಾ ಜನರ ಬಗ್ಗೆ ಚಿಂತಿಸುತ್ತಿರುತ್ತೇನೆ. 308 00:23:15,850 --> 00:23:17,180 ಎಲ್ಲರೂ ನರಳುತ್ತಿರುವಂತೆ. 309 00:23:19,520 --> 00:23:22,480 ಒಂದು ಪದವನ್ನು ಕೂಗಿದ ಮಾತ್ರಕ್ಕೆ ಇಡೀ ಲೋಕಗಳ ಸರ್ವನಾಶ, 310 00:23:23,270 --> 00:23:24,360 ಕಠಾರಿಯ ಒಂದು ಇರಿತದಿಂದ. 311 00:23:29,360 --> 00:23:30,360 ಎಷ್ಟೆಲ್ಲಾ ನೋವು. 312 00:23:33,950 --> 00:23:36,870 ಇದು ಲೈಂಗಿಕತೆಗೆ ಸಂಬಂಧಿಸಿದ್ದಾ, ಅಥವಾ ಕೊಲೆಗೆ ಸಂಬಂಧಿಸಿದ್ದಾ? 313 00:23:37,910 --> 00:23:40,830 ಇದೇನೇ ಆದರೂ, ನೀನು ಮಾತನ್ನು ಮುಗಿಸಿದರೆ ಸಾಕು. 314 00:23:49,090 --> 00:23:50,670 ಅವೆರಡೂ ಅಲ್ಲ, ಅಸಲಿಗೆ. 315 00:23:53,010 --> 00:23:54,550 ನಿನಗಾಗಿ ಒಂದು ಉಡುಗೊರೆ ತಂದಿರುವೆ. 316 00:23:56,510 --> 00:23:59,390 ನನ್ನ ಕಾಲದ ನಂತರ ಮಾನವ ಜನಾಂಗವು ಎಷ್ಟನ್ನೋ ಮರೆತುಬಿಟ್ಟಿದೆ, 317 00:24:00,220 --> 00:24:02,230 ಆದರೆ ಅದೆಲ್ಲವೂ ತಂತ್ರಜ್ಞಾನವಲ್ಲ. 318 00:24:05,150 --> 00:24:07,900 ಈ ಚಹಾ ನಿನಗೆ ವಿಚಾರಗಳನ್ನು ತೋರಿಸುತ್ತದೆ. 319 00:24:12,900 --> 00:24:14,910 ನಿನ್ನ ಹಿಂದಿನ ಜನ್ಮಗಳಿಗೆ ಇಣುಕು ನೋಟ ಕೊಡುತ್ತದೆ. 320 00:24:15,660 --> 00:24:17,490 ನೀನಾಗಿದ್ದಂತಹ ಎಲ್ಲಾ ವ್ಯಕ್ತಿಗಳನ್ನೂ. 321 00:24:18,450 --> 00:24:20,410 ನಿನ್ನ ಸಾವಿರ ಅವತಾರಗಳು. 322 00:24:21,080 --> 00:24:22,370 ಮತ್ತು ಅದೆಲ್ಲದರ ಮೂಲಕ, 323 00:24:23,460 --> 00:24:24,500 ನಿಜವಾದದ್ದು. 324 00:24:25,830 --> 00:24:26,710 ನಿನ್ನ ಆತ್ಮ. 325 00:24:28,670 --> 00:24:31,460 ಹದಿನೈದು ನಿಮಿಷಗಳು, ನಂತರ ನಿನಗಾಗಿ ಒಂದು ಲೋಟ ಸುರಿ. 326 00:24:31,880 --> 00:24:32,920 ಒಂದೇ ಒಂದು. 327 00:24:36,430 --> 00:24:39,010 ನೀನು ನನಗೆ ಏನೇ ಕೊಟ್ಟರೂ ಸ್ವೀಕರಿಸುವೆ ಎಂದೇಕೆ ತಿಳಿಯುವೆ? 328 00:24:40,510 --> 00:24:44,250 ನೀನು ನಿಜವಾಗಿ ಯಾರೆಂದು ಅರಿಯಲು ನೀನು ಯಾವಾಗಲೂ ಆಸಕ್ತನಾಗಿರುವೆ, ಮ್ಯಾಟ್. 329 00:24:44,450 --> 00:24:46,560 ಇದು? ಇದು ನಿನಗೆ ತೋರಿಸುತ್ತೆ. 330 00:24:47,770 --> 00:24:49,050 ನಾನು ಮೊದಲ ಬಾರಿ ಇದನ್ನು 331 00:24:49,250 --> 00:24:51,650 ಸೇವಿಸಿದಾಗಲೇ ಇಡೀ ರಾತ್ರಿ ಮೊದಲ ಬಾರಿ ನಿದ್ದೆ ಮಾಡಿದ್ದು. 332 00:24:57,200 --> 00:24:58,660 ಹದಿನೈದು ನಿಮಿಷಗಳು. ಹೆಚ್ಚಿಗೆ ಬೇಡ. 333 00:25:31,820 --> 00:25:33,230 ಮರಳಿನೊಳಗೆ ಯಾರೋ ಇದ್ದಾರೆ. 334 00:25:34,570 --> 00:25:35,350 ಒಬ್ಬ ಮಹಿಳೆ. 335 00:25:35,540 --> 00:25:37,470 ವೆಟ್ಲ್ಯಾಂಡರ್ ಆಗಿ ನಿನಗೆ ಚೆನ್ನಾಗಿ ಕಾಣಿಸುತ್ತದೆ. 336 00:25:37,670 --> 00:25:39,910 ನಿಮ್ಮಲ್ಲಿ ಎಷ್ಟೋ ಮಂದಿಗೆ ಏನೂ ಗೊತ್ತಾಗುವುದಿಲ್ಲ. 337 00:25:57,300 --> 00:25:58,720 ಜೋಲಿಯೆನ್ ಬಳಿ ಕರೆದೊಯ್ಯಿ. 338 00:26:37,880 --> 00:26:39,700 ಅವಳ ಗಾಯಗಳು ತೀರಾ ಆಳವಾಗಿದ್ದವು. 339 00:26:39,900 --> 00:26:41,470 ಸೋಂಕು ಹತ್ತಿತು. 340 00:26:42,180 --> 00:26:44,390 ಈ ಸ್ಥಳವು ಮನೆಯಂತೆ ಅನಿಸಿತು. 341 00:26:46,020 --> 00:26:48,130 ನಾವು ಮತ್ತೆ ಕನಸು ಕಾಣುವುದರೊಳಗೆ 342 00:26:48,330 --> 00:26:50,020 ಎಚ್ಚರಗೊಳ್ಳಬೇಕಾದ ಕನಸೇ ಜೀವನ. 343 00:27:07,410 --> 00:27:08,370 ಏನು ಮಾಡುತ್ತಿದ್ದೀರಿ? 344 00:27:34,270 --> 00:27:35,110 ಬೇಡ. 345 00:29:03,280 --> 00:29:04,650 ಇದೇನು ದರಿದ್ರವೋ. 346 00:29:36,230 --> 00:29:37,270 ಕಪಟಿ. 347 00:29:38,690 --> 00:29:39,460 ಅಮ್ಮ? 348 00:29:39,660 --> 00:29:41,820 ಅವನಂತೆಯೇ ಕಪಟಿ. 349 00:29:44,190 --> 00:29:45,820 - ಅವನಂತೆಯೇ. - ಅಮ್ಮ! 350 00:29:47,320 --> 00:29:49,470 ನೀನು ಎಂದಿಗೂ ಏನೂ ಆಗಿರಲಿಲ್ಲ. 351 00:29:49,670 --> 00:29:52,240 ನೀನು ಎಂದಿಗೂ ಕೊಳೆತಿರುವೆ. 352 00:29:57,160 --> 00:29:59,000 ಅವನಂತೆಯೇ. 353 00:29:59,750 --> 00:30:03,420 ಥೇಟ್ ಅವನಂತೆಯೇ. ಅವನಂತೆಯೇ. 354 00:30:05,260 --> 00:30:06,740 ಅವಳಂತೆಯೇ. 355 00:30:06,940 --> 00:30:07,950 - ನಿಲ್ಲಿಸು! - ಅವನಂತೆಯೇ. 356 00:30:08,150 --> 00:30:09,970 - ನಿಲ್ಲಿಸು! - ಅವನಂತೆಯೇ. 357 00:30:10,640 --> 00:30:12,160 - ನಿಲ್ಲಿಸು! - ಅವನಂತೆಯೇ. 358 00:30:12,360 --> 00:30:14,390 ಇಲ್ಲ! ನಿಲ್ಲಿಸು! 359 00:30:14,930 --> 00:30:17,060 ನಿಲ್ಲಿಸು! ನಿಲ್ಲಿಸು! ನಿಲ್ಲಿಸು! 360 00:30:20,020 --> 00:30:21,940 ನಿಲ್ಲಿಸು! ನಿಲ್ಲಿಸು! ನಿಲ್ಲಿಸು! 361 00:30:22,860 --> 00:30:23,690 ನಿಲ್ಲಿಸು! 362 00:30:24,690 --> 00:30:25,650 ನಿಲ್ಲಿಸು. 363 00:30:25,990 --> 00:30:27,030 ನಿಲ್ಲಿಸು. 364 00:30:33,870 --> 00:30:35,490 ಅವನಂತೆಯೇ. 365 00:30:45,000 --> 00:30:46,510 ಅವರನ್ನು ಒಳಗೆ ಬಿಡು. 366 00:30:53,300 --> 00:30:55,180 ಅವನನ್ನು ಬಿಡು, ಸಿಯೋನ್. 367 00:30:55,850 --> 00:30:56,680 ಈಗಲೇ. 368 00:30:59,140 --> 00:31:00,190 ಇಲ್ಲ. 369 00:31:01,650 --> 00:31:03,230 ನಮ್ಮ ರೀತಿ ಪ್ರಯತ್ನಿಸಿದೆವು, ಮೊರೇನ್, 370 00:31:04,270 --> 00:31:06,070 ಬಹುತೇಕ ಎಲ್ಲವನ್ನೂ ಕಳೆದುಕೊಂಡೆವು. 371 00:31:07,820 --> 00:31:10,950 ಟವರಿನ ಕಾನೂನುಗಳು 3,000 ವರ್ಷಗಳಿಂದ ಅಸ್ತಿತ್ವದಲ್ಲಿವೆ. 372 00:31:11,700 --> 00:31:13,430 ಈಗಲಾದರೂ ನಾವು ಅವನ್ನು ಒಪ್ಪಬೇಕು. 373 00:31:13,630 --> 00:31:16,060 - ನಮ್ಮ ಒಪ್ಪಂದ ಇದಲ್ಲ-- - ರೆಡ್ಗಳು ಅವನನ್ನು ಬಂಧಿಸುತ್ತಾರೆ. 374 00:31:16,260 --> 00:31:17,730 ಸೀಟಲ್ಲಿ ನಾನಿರುವಾಗಂತೂ ಅಲ್ಲ. 375 00:31:17,930 --> 00:31:19,830 ಟವರಿನ ತುಂಬಾ ನಿನ್ನ ವೈರಿಗಳೇ ಇದ್ದಾರೆ. 376 00:31:20,410 --> 00:31:22,000 ನಿನ್ನ ಶಕ್ತಿಯ ಬಗ್ಗೆ ಅಷ್ಟು ಖಚಿತವೇ? 377 00:31:23,330 --> 00:31:24,650 ನಮ್ಮೆಲ್ಲರಿಗೂ ಒಂದೊಂದು ಕೆಲಸವಿತ್ತು. 378 00:31:24,850 --> 00:31:26,360 ನಾನು ಡ್ರ್ಯಾಗನ್ ರೀಬಾರ್ನನ್ನು ಹುಡುಕಲು, 379 00:31:26,560 --> 00:31:29,210 ಅವನನ್ನು ಬೆಂಬಲಿಸಲು ನೀನು ಟವರನ್ನು ಸಜ್ಜುಗೊಳಿಸಬೇಕಿತ್ತು. 380 00:31:30,170 --> 00:31:31,880 ಅಥವಾ ಆ ದಿನವನ್ನೇ ಮರೆತುಬಿಟ್ಟೆಯಾ? 381 00:31:34,050 --> 00:31:35,850 ಖಂಡಿತ ನಾನು ಮರೆತಿಲ್ಲ. 382 00:31:36,720 --> 00:31:38,290 ಆದರೆ ನೀನು ಅವನೊಂದಿಗೆ ಇರಬೇಕಿತ್ತು, 383 00:31:38,490 --> 00:31:41,210 ಅವನಿಗೆ ಹುಚ್ಚು ಹಿಡಿಯಲಾರಂಭಿಸಿದರೆ ಅವನನ್ನು ರಕ್ಷಿಸಲು ತಯಾರಿರಬೇಕಿತ್ತು. 384 00:31:41,410 --> 00:31:42,480 ಆದರೂ ನೀನಿಲ್ಲಿರುವೆ… 385 00:31:42,940 --> 00:31:44,020 ಕಡಿತಕ್ಕೊಳಗಾಗಿ. 386 00:31:44,520 --> 00:31:46,020 ನೀನವನನ್ನು ನಿಯಂತ್ರಿಸಲಾರೆ. 387 00:31:46,650 --> 00:31:47,860 ನೀನವನನ್ನು ಮಾರ್ಗದರ್ಶಿಸಲಾರೆ. 388 00:31:48,570 --> 00:31:50,010 ಯಾರಾದರೂ ಫಾರ್ಸೇಕನ್ ಕೈಗೆ 389 00:31:50,210 --> 00:31:52,910 ಅವನು ಸಿಕ್ಕರೆ ಏನಾಗಬಹುದೆಂದು ಊಹಿಸಬಲ್ಲೆಯಾ, ಮೊರೇನ್? 390 00:31:54,370 --> 00:31:57,580 ನಿನಗೆ ಅವನು ಸಿಕ್ಕಾಗ ಇದ್ದಂತೆಯೇ ಈಗಲೂ ಅವನು ತಯಾರಿಲ್ಲ. 391 00:32:02,410 --> 00:32:05,790 ಜಗತ್ತಿನ ವಿಧಿಯನ್ನು ನೀನು ತನ್ನ ಪಾಡಿಗೆ ಬಿಟ್ಟುಬಿಟ್ಟೆ… 392 00:32:07,290 --> 00:32:08,500 ನಿನ್ನ ಜಂಬಕ್ಕಾಗಿ. 393 00:32:14,090 --> 00:32:17,410 ನಾಳೆ, ರಾಣಿ ಗಾಲ್ಡ್ರಿಯನ್ ಹಿಂತಿರುಗಿದಾಗ, 394 00:32:17,610 --> 00:32:20,810 ಇವನನ್ನು ಡ್ರ್ಯಾಗನ್ ಎಂದು ಘೋಷಿಸೋಣ, 395 00:32:21,480 --> 00:32:22,810 ಇಲ್ಲಿ ಕೈರ್ಹಿನ್ನಿನಲ್ಲಿ. 396 00:32:25,900 --> 00:32:30,980 ಇವನು ನಮ್ಮ ನಿಯಂತ್ರಣದಲ್ಲಿದ್ದಾನೆಂದು ತೋರಿಸಲು ನಮ್ಮ ಜೊತೆ 14 ಸಹೋದರಿಯರು ಇರುವಂತೆ. 397 00:32:32,150 --> 00:32:34,450 ಬರಲಿರುವುದಕ್ಕಾಗಿ ಅವನನ್ನು ಸಜ್ಜುಗೊಳಿಸಿ. 398 00:32:37,160 --> 00:32:38,620 ನನಗೇನಾಗುತ್ತಿದೆ? 399 00:32:39,910 --> 00:32:42,040 ಒನ್ ಪವರಿನಿಂದ ನಿನ್ನನ್ನು ರಕ್ಷಿಸಲಾಗುತ್ತಿದೆ. 400 00:32:46,210 --> 00:32:46,980 ಇದರ ಅನುಭವ-- 401 00:32:47,180 --> 00:32:50,570 ನೀನು ಹಿಂದೆ ಆಗಿದ್ದದ್ದು ಮತ್ತು ಮುಂದೆ ಆಗುವಂಥದ್ದು ಎಲ್ಲವನ್ನೂ ಕಳೆದುಕೊಂಡಿರುವೆಯಾ? 402 00:32:50,770 --> 00:32:52,280 ಚಿಂತಿಸಬೇಡ, ಅದು ತಾತ್ಕಾಲಿಕ. 403 00:32:52,480 --> 00:32:54,450 ರಕ್ಷಾಕವಚವನ್ನು ಅಲ್ಲೇ ಇರಿಸಲು ಆಕೆ ಆವಾಹನೆ ಮಾಡಬೇಕು, 404 00:32:54,650 --> 00:32:56,640 ಅದನ್ನು ತೆಗೆದಾಗ, ನಿನಗೆ ಸಹಜ ಅನುಭವವಾಗುತ್ತದೆ. 405 00:33:03,060 --> 00:33:04,600 ಸಿಯೋನ್ ನೀನು ಹೊರಡುತ್ತಿದ್ದೆ ಎಂದಳು. 406 00:33:05,640 --> 00:33:07,060 ಎಲ್ಲಿಗೆ ಹೊರಡಲಿದ್ದೆ? 407 00:33:09,230 --> 00:33:10,070 ಫಾಮ್. 408 00:33:10,860 --> 00:33:13,490 ಎಗ್ವೀನ್ ಅಲ್ಲಿದ್ದಾಳೆ. ಇಷಮೆಲ್ ಬಳಿ. 409 00:33:18,490 --> 00:33:20,530 ಲಾನ್ಫಿಯರ್ ಇದನ್ನು ಕನಸಿನ ಲೋಕದಲ್ಲಿ ತೋರಿಸಿದಳಾ? 410 00:33:21,370 --> 00:33:23,870 ನನಗೆ ಗೊತ್ತು. ಅವರಿಗೆ ನಾನಲ್ಲಿಗೆ ಹೋಗಬೇಕು. 411 00:33:26,370 --> 00:33:28,040 ಬೇರೆಲ್ಲಾ ಜಾಗಗಳನ್ನು ಬಿಟ್ಟು ಫಾಮ್ ಯಾಕೆ? 412 00:33:30,210 --> 00:33:32,710 ಡ್ರ್ಯಾಗನ್ ತನ್ನನ್ನು ತಾನು ಘೋಷಿಸಿಕೊಳ್ಳುವುದು ಅಲ್ಲೇ. 413 00:33:35,550 --> 00:33:38,220 "ಬಾನಿಗೆ ಬೆಂಕಿಯ ಚಪ್ಪರವಾಗಿ." 414 00:33:38,840 --> 00:33:40,680 ನಾನು ಯಾರೆಂದು ಅವರೆಲ್ಲರಿಗೂ ತಿಳಿಯಬೇಕು… 415 00:33:41,930 --> 00:33:43,350 ಅವರು ನನ್ನನ್ನು ಕೊಲ್ಲುವ ಮುನ್ನ. 416 00:33:46,560 --> 00:33:48,150 ಆದರೆ ಫಾಮಿನಲ್ಲಿ ನಾನವರಿಗೆ ಬೇಕಾದರೆ, 417 00:33:50,020 --> 00:33:55,650 ಆಗ ನಾನು ಅಮಿರ್ಲಿನ್ ಸೀಟಿನ ಬಂಧಿಯಾಗಿರುವುದು ಅವರಿಗೆ ಖಂಡಿತ ಬೇಕಿರುವುದಿಲ್ಲ. 418 00:34:03,950 --> 00:34:05,900 ನೀನು ಮೊರೇನಿಗೆ ಕಾಯುತ್ತಿದ್ದರೆ, ಅದು-- 419 00:34:06,100 --> 00:34:09,290 ನಾನು ಮೊರೇನ್ ಸೆಡಾಯಿಗಾಗಿ ಇಲ್ಲಿಲ್ಲ, ಮತ್ತು ನನಗೆ ಕಾಯುವುದು ಸಾಕಾಗಿದೆ. 420 00:34:14,590 --> 00:34:15,510 ನಮ್ಮನ್ನು ಬಿಡಮ್ಮ. 421 00:34:17,010 --> 00:34:17,840 ದಯವಿಟ್ಟು. 422 00:34:18,430 --> 00:34:19,830 ನಮ್ಮೊಂದಿಗೆ ಅತಿಥಿ ಇದ್ದಾರೆ. 423 00:34:20,030 --> 00:34:21,220 ಇದು ರಾಜ ವ್ಯವಹಾರ. 424 00:34:23,930 --> 00:34:25,270 ಈಗಲೇ ಮಹಡಿಯ ಮೇಲೆ ಹೋಗು. 425 00:34:39,200 --> 00:34:40,910 ಅವಳು ಆ ವಯಸ್ಸಿನಲ್ಲಿ ನನಗೆ ನೆನಪಿದ್ದಾಳೆ. 426 00:34:41,490 --> 00:34:43,350 ನೀನು ಅವಳನ್ನೇ ಹೋಲುವೆ, ಗೊತ್ತಾ? 427 00:34:43,550 --> 00:34:46,370 ನೀನಿಲ್ಲೇಕಿರುವೆ, ಅಯಿಸ್ ಸೆಡಾಯ್? 428 00:34:46,950 --> 00:34:48,210 ಒಂದು ಆದೇಶ ತಲುಪಿಸಲು. 429 00:34:52,540 --> 00:34:54,590 ನಮ್ಮ ಒಡೆಯ ನನ್ನನ್ನು ಏನು ಕೇಳಿದರು? 430 00:34:57,800 --> 00:35:00,470 ಅವಳನ್ನು ಆಟದಿಂದ ತೊಲಗಿಸಲು. 431 00:35:02,800 --> 00:35:03,830 ಆಕೆ ನನ್ನ ಚಿಕ್ಕಮ್ಮ. 432 00:35:04,030 --> 00:35:06,520 ಅದಕ್ಕಾಗಿಯೇ. ಇದನ್ನು ಆಕೆಯೂ ಊಹಿಸಲು ಸಾಧ್ಯವಿಲ್ಲ. 433 00:35:10,440 --> 00:35:11,270 ಇಂದೇ ಮಾಡು. 434 00:35:12,690 --> 00:35:14,770 ಅವಳನ್ನು ಅರಮನೆಯ ಸೆರೆಮನೆಯಲ್ಲಿ ಬಂಧಿಸಲಾಗಿದೆ. 435 00:35:20,450 --> 00:35:22,450 ನಿನ್ನ ತಾಯಿಗೆ ಏನಾದರೂ ಅನುಮಾನ ಬಂದರೆ, 436 00:35:23,370 --> 00:35:24,700 ಅವಳ ಸಂಗತಿಯನ್ನೂ ನೋಡ್ಕೋ. 437 00:35:44,010 --> 00:35:45,140 ಮೌನ. 438 00:35:46,470 --> 00:35:47,470 ಈಗ ಮೌನವಾಗು. 439 00:35:48,810 --> 00:35:49,980 ಮೌನವಾಗು. 440 00:35:52,190 --> 00:35:53,100 ಅವಳಂತೆಯೇ. 441 00:35:54,610 --> 00:35:55,730 ಅವನಂತೆಯೇ. 442 00:35:56,900 --> 00:35:58,530 ನಿನಗೀಗ ಕಾಣಿಸುತ್ತಿದೆಯಲ್ಲವೇ? 443 00:36:00,690 --> 00:36:02,990 ನಾವು ಈ ಜೀವನಗಳನ್ನು ಬದುಕುತ್ತಿರುತ್ತೇವೆ, 444 00:36:04,160 --> 00:36:05,910 ಮತ್ತೆ ಮತ್ತೆ ಪ್ರಯತ್ನಿಸುತ್ತಿರುತ್ತೇವೆ, 445 00:36:06,950 --> 00:36:08,080 ಆದರೆ ಯಾತಕ್ಕಾಗಿ? 446 00:36:08,790 --> 00:36:11,960 ಚಕ್ರವು ತಿರುಗುತ್ತದೆ, ಮತ್ತು ಜನರು ನರಳುತ್ತಾರೆ. 447 00:36:13,460 --> 00:36:14,880 ಇದು ಸರಳ ಸತ್ಯ. 448 00:36:17,500 --> 00:36:19,590 ಮತ್ತು ಸಾವಿನ ಸ್ವಾತಂತ್ರ್ಯ ಇದ್ದಾಗಲೂ, 449 00:36:21,130 --> 00:36:22,380 ನಾವು ಸುಮ್ಮನೆ ಮರಳುತ್ತೇವೆ, 450 00:36:23,510 --> 00:36:24,720 ಮತ್ತೆ... 451 00:36:25,680 --> 00:36:26,640 ಮತ್ತೆ. 452 00:36:30,390 --> 00:36:31,640 ಮತ್ತು ನನಗೆ ಬೇಕಿರುವುದು… 453 00:36:34,480 --> 00:36:37,190 ಒಂದು ದಿನ ಸುಮ್ಮನೆ ನನ್ನ ಕಣ್ಣುಗಳನ್ನು ಮುಚ್ಚಿ 454 00:36:39,190 --> 00:36:41,780 ಮತ್ತೆಂದಿಗೂ ಅವುಗಳನ್ನು ತೆರೆಯಲಾಗದಂತಿರುವುದು. 455 00:36:49,200 --> 00:36:50,080 ಹೇಗೆ? 456 00:37:14,890 --> 00:37:17,060 ನೀನು ನಗರದಿಂದಲೂ ಆಚೆ ಹೋಗಲಾಗಲಿಲ್ಲ. 457 00:37:31,660 --> 00:37:33,270 ನನಗೆ ನಿನ್ನ ಸಹಾಯ ಬೇಕು. 458 00:37:33,470 --> 00:37:36,330 ಸೂರ್ಯನ ಅರಮನೆಯ ಸೆರೆಮನೆಯಲ್ಲಿದ್ದೇನೆ. ಅಮಿರ್ಲಿನ್ ಬಂಧನದಲ್ಲಿ. 459 00:37:36,920 --> 00:37:38,000 ಗೊತ್ತು. 460 00:37:43,630 --> 00:37:44,840 ನನ್ನನ್ನು ಹೊರಗೆ ತಪ್ಪಿಸಬಲ್ಲೆಯಾ? 461 00:37:46,720 --> 00:37:48,140 ಮೊರೇನ್ ನಿನ್ನೊಂದಿಗಿಲ್ಲವೇ? 462 00:37:51,180 --> 00:37:53,470 ಖಂಡಿತವಾಗಿ, ಆಕೆ ಏನಾದರೂ ಮಾಡಬಲ್ಲಳು. 463 00:37:55,270 --> 00:37:57,890 ಮಾಡಬಲ್ಲಳೇನೋ. ನನಗೆ ನಿನ್ನ ಅವಶ್ಯಕತೆ ಬೇಡವೇನೋ. 464 00:37:59,560 --> 00:38:01,760 ನೀನು ನನ್ನನ್ನು ಬಳಸಿಕೊಳ್ಳಲು ನೋಡಿದಾಗ ನನಗೆ ಇಷ್ಟವೇ. 465 00:38:01,960 --> 00:38:03,730 ನನ್ನನ್ನು ತಪ್ಪಿಸಬಲ್ಲೆಯಾ, ಇಲ್ವಾ, ಲಾನ್ಫಿಯರ್? 466 00:38:47,990 --> 00:38:49,030 ಅಲ್ಲಿಂದ. 467 00:38:56,410 --> 00:38:57,410 ಏನಂದ? 468 00:38:58,460 --> 00:39:00,870 ಇರುಳಿನ ಮಗಳು ನಮ್ಮ ಜಗತ್ತಿನಲ್ಲಿ ನಡೆಯುತ್ತಿರುವಳಾ? 469 00:39:04,210 --> 00:39:05,170 ಫಾರ್ಸೇಕನ್. 470 00:39:07,010 --> 00:39:08,050 ಡ್ರ್ಯಾಗನ್ ರೀಬಾರ್ನ್. 471 00:39:10,130 --> 00:39:11,800 ತೋಟದ ನೆನಪಾಗುತ್ತೆ, ಅಲನಾ. 472 00:39:14,470 --> 00:39:15,930 ನಿನ್ನ ಸೋದರಸಂಬಂಧಿಗಳ ನೆನಪೂ ಸಹ. 473 00:39:17,520 --> 00:39:18,960 ಬಾ ಈಗ, 474 00:39:19,160 --> 00:39:21,550 ಲಾಸ್ಟ್ ಬ್ಯಾಟಲನ್ನು ಬೆಕ್ಕಿನ ಮರಿಗಳ ಸೇನೆಯ ವಿರುದ್ಧ 475 00:39:21,740 --> 00:39:23,770 ಹೋರಾಡುತ್ತೇವೆ ಅಂದುಕೊಂಡಿದ್ದೆಯಾ? 476 00:39:35,120 --> 00:39:40,120 ನಿನ್ನೊಂದಿಗೆ ಒಂದು ಪಂದ್ಯ ಆಡಬಲ್ಲೆ, ಆದರೆ ಕಲ್ಲುಗಳು ಮಹಾಪುರುಷರು ಆಡುವ ಆಟ. 477 00:39:41,710 --> 00:39:45,710 ಆಕೆ ತನ್ನ ಮಾತನ್ನು ಉಳಿಸಿಕೊಳ್ಳಲು ನಾನಿನ್ನೂ ಕಾಯುತ್ತಿದ್ದೇನೆ ಎಂದು ನಿನ್ನ ಯಜಮಾನಿಗೆ ಹೇಳು. 478 00:39:47,500 --> 00:39:50,820 ಇಲ್ಲದಿದ್ದರೆ ಈಗಲೇ ನಿನ್ನ ಕತ್ತಿಯಿಂದ ನನ್ನನ್ನು ಕೊಂದುಬಿಡು, 479 00:39:51,020 --> 00:39:52,300 ಅವಳಿಗೆ ಯಾಕೆ ಸುಮ್ಮನೆ ತೊಂದರೆ? 480 00:39:57,850 --> 00:39:59,180 ಅದಕ್ಕಿಂತ ಮಿಗಿಲಾಗಿ ಮಾಡಬಲ್ಲೆ. 481 00:40:06,230 --> 00:40:07,770 ಗಂಡು ನೇಯ್ಗೆಗಳನ್ನು ನೀನು ನೋಡಬಲ್ಲೆ. 482 00:40:09,320 --> 00:40:11,700 ಮೊರೇನಳನ್ನು ನೋಡಿದಾಗ ನಿನಗೇನು ಕಾಣುತ್ತದೆ? 483 00:40:13,240 --> 00:40:14,280 ಒಬ್ಬ ಹತಾಶ, 484 00:40:16,160 --> 00:40:17,870 ಒಂಟಿ ಹೆಂಗಸು, 485 00:40:18,580 --> 00:40:24,000 ತನಗೂ ಅರ್ಥವಾಗದ ಕಾರ್ಯವೊಂದಕ್ಕೆ ತನ್ನ ಜೀವವನ್ನೇ ಪಣಕ್ಕಿಟ್ಟಿದ್ದಾಳೆ. 486 00:40:27,340 --> 00:40:29,570 ಅರ್ಧ ವರ್ಷ ಹುಚ್ಚಾಸ್ಪತ್ರೆಯಲ್ಲಿದ್ದರೂ ಹುಚ್ಚನಾಗಿರುವೆಯಾ? 487 00:40:29,770 --> 00:40:35,640 ನೀನು ಬಂಧಿಸಲು ನೆರವಾದವನಿಂದ ನೇರವಾದ ಉತ್ತರ ಬಯಸುವುದು ಹುಚ್ಚು. 488 00:40:40,520 --> 00:40:41,770 ಅವಳ ಮೇಲೆ ನೇಯ್ಗೆಗಳಿವೆ. 489 00:40:48,980 --> 00:40:50,110 ಒಬ್ಬ ಪುರುಷನಿಂದ. 490 00:40:52,320 --> 00:40:54,610 ಸಾವಿರಾರು ಎಳೆಗಳು, 491 00:40:56,160 --> 00:40:59,200 ಜೊತೆಯಾಗಿ ಎಳೆಯಲ್ಪಟ್ಟು ಒಗ್ಗೂಡಿಸಲಾಗಿವೆ, 492 00:41:00,040 --> 00:41:01,950 ಆದರೆ ಅವುಗಳೊಳಗೆ ಏನೂ ಆವಾಹನೆಯಾಗುತ್ತಿಲ್ಲ. 493 00:41:03,750 --> 00:41:04,770 ಅದು ಹೇಗೆ ಸಾಧ್ಯ? 494 00:41:04,970 --> 00:41:06,960 ಗೊತ್ತಿಲ್ಲ. ಅದೊಂಥರ... 495 00:41:11,670 --> 00:41:12,630 ಬೆಂಕಿ ಹತ್ತಿದೆ. 496 00:41:13,380 --> 00:41:14,260 ಫೋರ್ ಗೇಟಿನಲ್ಲಿ. 497 00:41:18,090 --> 00:41:19,510 ಕೀಲಿಕೈ? 498 00:41:23,680 --> 00:41:26,100 ಕೆರೀನ್ ಮತ್ತು ಸ್ಟೆಪಿನ್ನರಿಗೆ ನೀನು ಮಾಡಿದ್ದು ಮರೆತಿಲ್ಲ. 499 00:41:26,600 --> 00:41:28,050 ಅವರು ನಿನ್ನನ್ನು ವೈಟ್ ಟವರಿಗೆ 500 00:41:28,250 --> 00:41:30,220 ಮರಳಿ ಕರೆದೊಯ್ಯುವಾಗ ನಿನಗೆ ಈ ಕೀಲಿಕೈ ಸಿಗುತ್ತದೆ. 501 00:41:30,420 --> 00:41:33,610 ಆವಾಹಕ ಪುರುಷನ ಅಧ್ಯಯನಕ್ಕಾಗಿ ಇಬ್ಬರು ಬ್ರೌನ್ ಸಹೋದರಿಯರು ಕಾತುರದಿಂದಿದ್ದಾರೆ. 502 00:41:35,570 --> 00:41:36,610 ಹೋಗಿ! 503 00:41:50,380 --> 00:41:53,420 ಮೂರು ಸಾವಿರ ವರ್ಷಗಳ ನಂತರ ಮತ್ತೆ ಇಲ್ಲಿಗೆ ಮರಳಿದ್ದೇವೆ. 504 00:42:28,500 --> 00:42:31,250 ಮತ್ತೆ, ಈಗ ನೀನು ಆರಾಮವಾಗಿದ್ದೀಯಾ? 505 00:42:32,170 --> 00:42:33,340 ಮತ್ತೆ ಸ್ನೇಹಿತರೇ? 506 00:42:34,130 --> 00:42:36,970 ನಾನು ಜೋಲಿಯನ್ನಿಗೆ ನನ್ನ ತೋಹ್ ಪೂರೈಸಿ ಜಿಯನ್ನು ಮರುಗಳಿಸಿಕೊಂಡೆ. 507 00:42:38,010 --> 00:42:39,580 ತೋಹ್ ಅಂದರೆ... 508 00:42:39,780 --> 00:42:40,910 ಬಾಧ್ಯತೆಯೇ? 509 00:42:41,110 --> 00:42:42,330 ನೀನಂದಂತೆ ಋಣ ತೀರಿಸುವುದೇ? 510 00:42:42,530 --> 00:42:44,560 ನನಗೆ ನೆನಪು ಮಾಡುವುದು ಅವಮಾನಕರ, 511 00:42:45,640 --> 00:42:46,670 ಆದರೂ ಹೌದು. 512 00:42:46,870 --> 00:42:48,340 ಜೋಲಿಯನ್ ಬೆನ್ನಿಗೆ ಕತ್ತಿ ಇರಿಯಲ್ಪಟ್ಟು 513 00:42:48,530 --> 00:42:51,260 ಅವಳು ಸತ್ತಾಗ ನನ್ನ ಆತ್ಮರಕ್ಷಣೆ ಮಾಡಿಕೊಳ್ಳುತ್ತಿದ್ದೆ. 514 00:42:51,450 --> 00:42:53,150 ಅವಳು ಸತ್ತಿದ್ದು ನನ್ನ ತಪ್ಪೇ. 515 00:42:54,070 --> 00:42:55,360 ಅದೇ ನನ್ನ ತೋಹ್ ಆಗಿತ್ತು. 516 00:42:57,860 --> 00:43:00,910 ಈ ಉಂಗುರದ ಅರ್ಥ, ನಿನ್ನ ಯಜಮಾನಿ ಒಬ್ಬ ವೆಟ್ಲ್ಯಾಂಡರ್ ಮಹಿಳೆಯೇ? 517 00:43:02,570 --> 00:43:03,600 ಒಂದು ರೀತಿಯಲ್ಲಿ. 518 00:43:03,800 --> 00:43:05,950 ಮತ್ತೆ ನೀನು ಬೇರೆ ಯಾರೊಂದಿಗೂ ಮಲಗಲಾರೆಯಾ? 519 00:43:07,370 --> 00:43:08,870 ಬೆಯ್ನಿಗೆ ನಿರಾಶೆಯಾಗಲಿದೆ. 520 00:43:09,960 --> 00:43:11,540 ಚಿಯಾಡ್ ತಲೆ ಕೆಡಿಸಿಕೊಳ್ಳುವುದಿಲ್ಲ. 521 00:43:29,180 --> 00:43:31,900 ಇದೆಲ್ಲಾ… ನೀರು… ಹೇಗೆ? 522 00:43:39,030 --> 00:43:39,860 ಫಾಮ್. 523 00:43:50,330 --> 00:43:52,750 ನಾವಿದನ್ನು ತೊಟ್ಟರೆ ಏನಾಗಬಹುದು ಅನ್ಸುತ್ತೆ ನಿನಗೆ? 524 00:43:53,250 --> 00:43:54,460 ಗೊತ್ತಿಲ್ಲ. 525 00:43:55,040 --> 00:43:56,380 ನೋವಾಗುತ್ತೆ ಅನ್ಸುತ್ತೆ. 526 00:43:59,920 --> 00:44:00,760 ಬರುತ್ತಿದ್ದಾಳೆ. 527 00:44:07,220 --> 00:44:08,600 ಚೆನ್ನಾಗಿ ಹೊಂದುತ್ತೆ, ಅಲ್ಲವೇ? 528 00:44:35,750 --> 00:44:37,290 ತೋಳ್ವಸ್ತ್ರವನ್ನು ಮೇಲೆಳೆದುಕೋ. 529 00:45:19,500 --> 00:45:23,840 ನೀನು… ನನ್ನನ್ನೇಕೆ ವಿರೋಧಿಸುವೆ ಎಂದು ನಾನು ಅರಿತುಕೊಂಡೆ. 530 00:45:25,380 --> 00:45:28,930 ಯಾಕೆಂದರೆ ನಾವಿಲ್ಲೇಕ್ಕಿದ್ದೇವೆ ಎಂದು ನಿನಗೆ ಯಾರೂ ಹೇಳಿಲ್ಲ. 531 00:45:31,310 --> 00:45:34,140 ಶಾಂಚಾನ್ ಅರಸಿಗೆ ಒಂದು ಗುರಿಯಿದೆ, 532 00:45:35,230 --> 00:45:36,350 ಮತ್ತು ಅದೊಂದೇ. 533 00:45:42,570 --> 00:45:46,360 ಈ ಭೂಮಿ ಮೇಲಿರುವ ಪ್ರತಿ ವ್ಯಕ್ತಿಯನ್ನೂ ಬೆಳಕಿನಡಿಯಲ್ಲಿ ಒಂದುಗೂಡಿಸುವುದು. 534 00:45:51,990 --> 00:45:53,450 ಲಾಸ್ಟ್ ಬ್ಯಾಟಲ್ ಬರುತ್ತಿದೆ, 535 00:45:55,910 --> 00:45:59,040 ನಾವು ಜೊತೆಯಾಗಿ ನಿಂತರೆ ಮಾತ್ರ ಅದನ್ನು ಎದುರಿಸಬಲ್ಲೆವು. 536 00:45:59,750 --> 00:46:00,590 ನಾವೆಲ್ಲರೂ. 537 00:46:04,920 --> 00:46:07,220 ನೀನು ಮತ್ತು ನಾನು ಒಳಗೊಂಡು. 538 00:46:18,980 --> 00:46:19,810 ರೆನ್ನಾ? 539 00:46:20,860 --> 00:46:22,360 ಹಾಂ, ಎಗ್ವೀನ್? 540 00:46:27,030 --> 00:46:28,240 ನಿನ್ನನ್ನು ಕೊಂದುಹಾಕುವೆ. 541 00:46:50,720 --> 00:46:52,330 ನನ್ನ ಚಿಕ್ಕಮ್ಮ ಒಬ್ಬಳೇ ಇರುವುದು ಖಚಿತವೇ? 542 00:46:52,530 --> 00:46:54,140 ನೀವು ಕೇಳಿದಂತೆಯೇ, ನನ್ನ ದೊರೆ. 543 00:46:54,760 --> 00:46:56,830 ಚಹಾಗೆ ಮತ್ತು ಪದಾರ್ಥವನ್ನು ಬೆರೆಸಲಾಗಿದೆ. 544 00:46:57,030 --> 00:46:58,600 ಈಗಾಗಲೇ ನಿದ್ರಿಸುತ್ತಿರುತ್ತಾಳೆ. 545 00:47:00,060 --> 00:47:01,190 ಒಳ್ಳೆಯದು. 546 00:47:02,560 --> 00:47:04,650 ಇದನ್ನು ನಾನು ತೆರೆಯಬೇಕೇ, ನನ್ನೊಡೆಯ? 547 00:47:20,790 --> 00:47:22,330 ಹೀಗೆ ಮಾಡುತ್ತೀಯಾ ಅಂದುಕೊಂಡಿರಲಿಲ್ಲ. 548 00:47:22,880 --> 00:47:23,710 ಅಮ್ಮ... 549 00:47:24,460 --> 00:47:26,990 ಇಲ್ಲ, ಇಲ್ಲ! ಇಲ್ಲ! ಇಲ್ಲ. 550 00:47:27,190 --> 00:47:27,990 ಯಾಕೆ? 551 00:47:28,190 --> 00:47:29,990 ಬೆಳಕಿನ ಹೆಸರಲ್ಲಿ, ಯಾಕೆ? 552 00:47:30,190 --> 00:47:32,640 ನಮಗಾಗಿ ಮಾಡಿದೆ. ನಿನಗಾಗಿ ಮಾಡಿದೆ, ಅಮ್ಮ. 553 00:47:33,550 --> 00:47:34,970 ನಮ್ಮ ಮನೆತನದ ಹೆಸರಿಗಾಗಿ. 554 00:47:35,560 --> 00:47:40,020 ನಾವಿಷ್ಟು ಮೇಲಕ್ಕೆ, ಇಷ್ಟು ಬೇಗ ಯಾಕೆ ಬೆಳೆದಿದ್ದೇವೆ ಅಂದುಕೊಂಡೆ, ಅಮ್ಮ? 555 00:47:42,940 --> 00:47:44,270 ನಾನು ರಾಜನಾಗುವವನು. 556 00:47:44,980 --> 00:47:48,480 ಮತ್ತು ಅದಕ್ಕಾಗಿ… ನೀನು ಎಲ್ಲವನ್ನೂ ಬಿಟ್ಟುಕೊಡುವೆಯಾ? 557 00:47:49,900 --> 00:47:51,240 ಅವಳಿಗಾಗಿ? 558 00:47:52,030 --> 00:47:55,060 ಅಮ್ಮ, ಮೊರೇನಿಗೆ ನಿನ್ನ ಬಗ್ಗೆ ಚಿಂತೆ ಇಲ್ಲ. 559 00:47:55,260 --> 00:47:57,730 ಆಕೆ ಯಾರನ್ನೂ ನಂಬುವುದಿಲ್ಲ. ಆಕೆಗೆ ಯಾರ ಕಾಳಜಿಯೂ ಇಲ್ಲ. 560 00:47:57,930 --> 00:47:58,950 ಆಕೆ... 561 00:48:02,040 --> 00:48:03,580 ಆಕೆ ಈ ಜಾಗ ಬಿಟ್ಟು ಹೊರಡುತ್ತಾಳೆ, 562 00:48:04,920 --> 00:48:07,860 ಮತ್ತು ನಮ್ಮ ಬಗ್ಗೆ ಕಿಂಚಿತ್ತೂ ಆಲೋಚಿಸುವುದಿಲ್ಲ. 563 00:48:08,060 --> 00:48:09,010 ನಂಗೊತ್ತು. 564 00:48:11,340 --> 00:48:13,290 ಆದರೆ ನನ್ನ ಸೋದರಿ ಬೇರೆಲ್ಲರಿಗಿಂತ ಚೆನ್ನಾಗಿ 565 00:48:13,480 --> 00:48:16,050 ಎರಡು ವಿಚಾರಗಳನ್ನು ಅರ್ಥ ಮಾಡಿಕೊಂಡಿದ್ದಾಳೆ. 566 00:48:18,220 --> 00:48:20,810 ಸರಿ ಮತ್ತು ತಪ್ಪಿನ ನಡುವಿನ ವ್ಯತ್ಯಾಸ, 567 00:48:21,930 --> 00:48:25,650 ಮತ್ತು ಕೆಲವೊಮ್ಮೆ ಸರಿಯಾದುದನ್ನು ಮಾಡಲು ಎಷ್ಟು ಕಷ್ಟ ಎಂಬುದನ್ನು. 568 00:48:28,780 --> 00:48:29,650 ಅಮ್ಮ... 569 00:48:30,740 --> 00:48:32,030 ಅಮ್ಮ, ದಯವಿಟ್ಟು. 570 00:48:34,910 --> 00:48:36,070 ಅಮ್ಮ, ದಯವಿಟ್ಟು. 571 00:48:38,910 --> 00:48:40,240 ನೀನು ರಾಣಿಗೆ ಹೇಳಬಾರದು. 572 00:48:41,790 --> 00:48:43,160 ನೀನು ಯಾರಿಗೂ ಹೇಳಬಾರದು. 573 00:48:44,370 --> 00:48:45,750 ಈಗಾಗಲೇ ಹೇಳಿದ್ದೇನೆ. 574 00:48:46,420 --> 00:48:48,290 ಇಲ್ಲ, ಇಲ್ಲ. ಅಮ್ಮ... 575 00:48:48,840 --> 00:48:50,530 ಅಮ್ಮ-- ಅಮ್ಮ! 576 00:48:50,730 --> 00:48:52,030 ಇಲ್ಲ! ಅಮ್ಮ! 577 00:48:52,230 --> 00:48:53,220 ಅಮ್ಮ! 578 00:48:56,510 --> 00:48:57,470 ನಗರವು ಉರಿಯುತ್ತಿದೆ. 579 00:49:01,520 --> 00:49:04,090 ಕೈರ್ಹಿನ್ನನ್ನು ಕಾಪಾಡಲು ಅಮಿರ್ಲಿನ್ನಿಗೆ ನಿನ್ನ ಶಕ್ತಿಯ ಅಗತ್ಯವಿದೆ. 580 00:49:04,290 --> 00:49:05,650 ನಾನು ಆ ಹುಡುಗನಿಗೆ ಕಾವಲಿರಬೇಕಿದೆ. 581 00:49:07,310 --> 00:49:09,880 ಇದು ಒಂದು ಆದೇಶ, ಲಿಯಾನ ಸೆಡಾಯ್. 582 00:49:10,080 --> 00:49:11,190 ಅವನ ರಕ್ಷಾಕವಚ ಪಡೆಯುವೆ. 583 00:49:28,750 --> 00:49:30,500 ಅವಳನ್ನು ಹತ್ತಿರ ಬರಗೊಡಬೇಡ. 584 00:49:36,380 --> 00:49:38,970 ನೀನು ಮಾತನಾಡುವುದರಲ್ಲಿ ಬಹಳ ಜಾಣೆ, ಸಹೋದರಿ. 585 00:49:49,730 --> 00:49:51,150 ಡ್ರ್ಯಾಗನ್ ರೀಬಾರ್ನ್. 586 00:49:53,280 --> 00:49:56,490 ಕೈರ್ಹಿನ್ನಿನಲ್ಲಿ ನೀನು ತುಂಬಾ ಸಮಯ ಕಳೆದಿರುವೆ, ಅಲ್ವಾ? 587 00:50:00,240 --> 00:50:02,100 ಈ ನಗರದಲ್ಲೊಂದು ವೇಗೇಟ್ ಅಡಗಿದೆ. 588 00:50:02,300 --> 00:50:04,400 - ಅದು ವದಂತಿ ಅಷ್ಟೇ. - ಸ್ವಲ್ಪ ಸತ್ಯದೊಂದಿಗೆ. 589 00:50:04,600 --> 00:50:07,610 ಒಳ ನಗರದ ಮಧ್ಯದಲ್ಲಿ ಹಿಂದೊಮ್ಮೆ ಒಗಿರ್ ವಸತಿ ಇತ್ತು, 590 00:50:07,810 --> 00:50:10,940 ಆದರೆ ಕೈರ್ಹಿನ್ನಿನ ಕುಟುಂಬಗಳು ಅದರ ಮೇಲೆಯೇ ಮನೆಗಳನ್ನು ನಿರ್ಮಿಸಿಕೊಂಡವು. 591 00:50:11,140 --> 00:50:11,960 ಇಲ್ಲಿ. 592 00:50:17,090 --> 00:50:18,540 ಅವನನ್ನು ಎಲ್ಲಿಗೆ ಕೊಂಡೊಯ್ಯುವೆ? 593 00:50:18,730 --> 00:50:20,140 ಫಾಮ್. ಟೊಮನ್ ಹೆಡ್. 594 00:50:21,050 --> 00:50:23,290 "ಟೊಮನ್'ಸ್ ಹೆಡ್ ಮೇಲೆ ತನ್ನನ್ನು ತಾನು ಘೋಷಿಸಿಕೊಳ್ಳುವನು, 595 00:50:23,490 --> 00:50:25,560 ಬಾನಿಗೆ ಬೆಂಕಿಯ ಚಪ್ಪರವಾಗಿ." 596 00:50:26,930 --> 00:50:29,560 ಡ್ರ್ಯಾಗನ್ ರೀಬಾರ್ನ್ ಆಗಿ ನೀನು ಅವನನ್ನು ಘೋಷಿಸಬೇಕೇ? 597 00:50:34,110 --> 00:50:35,260 ಚಕ್ರವು ನೇಯುತ್ತದೆ. 598 00:50:35,460 --> 00:50:37,890 ಒಳ್ಳೆ ಕೆಲಸ. ಅವನನ್ನು ವೇಗೇಟಿಗೆ ಇಲ್ಲಿಂದ ಕರೆದೊಯ್ಯುತ್ತೇವೆ. 599 00:50:38,090 --> 00:50:39,990 ಯಾರೂ ನಮ್ಮನ್ನು ಹಿಂಬಾಲಿಸದಂತೆ ನೋಡಿಕೊಳ್ಳಿ. 600 00:50:41,740 --> 00:50:43,740 ಇನ್ನು ಇದರಲ್ಲಿ ನೀನೊಬ್ಬಳೇ ಇಲ್ಲ, ಸಹೋದರಿ. 601 00:50:44,290 --> 00:50:47,000 ಆದರೆ ನೀವು ತ್ವರಿತವಾಗಿ ಹೊರಡಿ. ನಗರವು ಸುರಕ್ಷಿತವಾಗಿಲ್ಲ. 602 00:50:53,130 --> 00:50:55,170 ನೀನಿದಕ್ಕೆ ಯೋಗ್ಯ ಅಂದುಕೊಳ್ಳುವೆ, ಹುಡುಗ. 603 00:50:57,630 --> 00:50:59,180 ಬೆಳಕು ನಿಮ್ಮೊಂದಿಗಿರಲಿ. 604 00:51:00,470 --> 00:51:01,300 ಹೋಗೋಣ! 605 00:51:20,700 --> 00:51:22,200 ನನ್ನೊಂದಿಗೆ ಬಂಧಗೂಡಿ. 606 00:51:56,190 --> 00:51:57,230 ಇಲ್ಲಿದ್ದೇನೆ, ತಾಯಿ. 607 00:51:58,530 --> 00:51:59,740 ಹುಡುಗನ ರಕ್ಷಕರು ಯಾರು? 608 00:52:00,700 --> 00:52:03,320 ವೆರಿನ್ ಸೆಡಾಯ್. ನೀವು… ನೀವೇ ಕಳಿಸಿದಿರಿ. 609 00:52:06,120 --> 00:52:08,200 ನಿನ್ನ ಸಹೋದರಿಯರೊಂದಿಗೆ ಗಾಯಗೊಂಡವರಿಗೆ ಶಮನ ಮಾಡು. 610 00:52:09,000 --> 00:52:10,710 ಆ ಹುಡುಗ ಈ ನಗರ ಬಿಟ್ಟು ಹೋಗಬಾರದು. 611 00:52:17,210 --> 00:52:18,710 ಅದು ಇಲ್ಲೇ ಎಲ್ಲೋ ಇದೆ… 612 00:52:19,760 --> 00:52:20,760 ಅಲ್ಲಿ. 613 00:52:24,140 --> 00:52:25,370 ನೀನು ಅದರೊಳಗೆ ಆವಾಹನೆ ಮಾಡಬೇಕು. 614 00:52:25,570 --> 00:52:28,260 - ಅಗತ್ಯ ಬಿದ್ದರೆ ಬಲ ಪ್ರಯೋಗಿಸಿ ಚೂರು ಮಾಡು. - ಇಲ್ಲ, ಅವನು ಮಾಡಲ್ಲ. 615 00:52:29,060 --> 00:52:30,080 ಅದನ್ನು ನೀನು ತೆರೆಯುವೆ. 616 00:52:30,280 --> 00:52:31,390 ಸುಮ್ಮನೆ ಮಾಡು. 617 00:52:31,850 --> 00:52:32,730 ಮೊರೇನಳನ್ನು ನೋಡು. 618 00:52:33,940 --> 00:52:35,130 ಸೋರ್ಸ್ ಜೊತೆಗೆ. 619 00:52:35,330 --> 00:52:37,230 - ಲಾನ್. - ನಿನ್ನ ಕಣ್ಣುಗಳಷ್ಟೇ ಅಲ್ಲ. 620 00:52:37,980 --> 00:52:39,730 - ನಿನಗೇನು ಕಾಣುತ್ತದೆ? - ಬೇಡ. 621 00:52:58,000 --> 00:52:59,960 ಒಟ್ಟಾಗಿ ಕಟ್ಟಿರುವ ಗಂಟಿನಂತೆ ಕಾಣುತ್ತದೆ. 622 00:53:00,800 --> 00:53:03,220 ಅದು… ಅದು ಅಸಾಧ್ಯ. 623 00:53:04,010 --> 00:53:07,580 ದಂತಕಥೆಗಳ ಯುಗದಲ್ಲಿ ಫಾರ್ಸೇಕನ್ ಶಕ್ತಿಯ ಬಗ್ಗೆ ಒಂದು ಕಥೆ ಇದೆ, 624 00:53:07,780 --> 00:53:10,100 ಸಾವಿರಾರು ವರ್ಷಗಳಿಂದ ಕಳೆದು ಹೋಗಿರುವ ಒಂದು ಕೌಶಲ್ಯ, 625 00:53:10,810 --> 00:53:13,310 ನೇಯ್ಗೆಗಳನ್ನು ಕಟ್ಟಿಹಾಕಿ ಬಿಟ್ಟುಬಿಡುವುದಕ್ಕೆ. 626 00:53:15,310 --> 00:53:19,320 ನಿನಗಾಗುತ್ತಿದ್ದ ಅನುಭವ ನನಗರ್ಥವಾಗಲೇ ಇಲ್ಲ, ಮೊರೇನ್. 627 00:53:20,110 --> 00:53:21,800 ಇಷಮೆಲ್ ನಿನ್ನ ಸಂಪರ್ಕ ಕಡಿತಗೊಳಿಸಲಿಲ್ಲ. 628 00:53:22,000 --> 00:53:23,950 ಒಬ್ಬ ಫಾರ್ಸೇಕನ್ನಿಂದಲೂ ಅದು ಸಾಧ್ಯವಿಲ್ಲ. 629 00:53:24,400 --> 00:53:27,740 ಅವನು ಕಟ್ಟಿ ಬಿಟ್ಟಿರುವ ರಕ್ಷಾ ಕವಚ ಅದು. 630 00:53:29,240 --> 00:53:30,410 ಅಂದರೆ... 631 00:53:32,290 --> 00:53:33,480 ಅದನ್ನು ಕಳಚಬಹುದು. 632 00:53:33,680 --> 00:53:34,500 ಹೌದು. 633 00:53:36,330 --> 00:53:37,610 ನಾನೇನು ಮಾಡಬೇಕು? 634 00:53:37,810 --> 00:53:39,670 ಈ ಗಂಟನ್ನು ಬಿಡಿಸಲು ನಿನ್ನಲ್ಲಿ ಆ ಕೌಶಲ್ಯವಿಲ್ಲ. 635 00:53:40,090 --> 00:53:41,210 ಅದನ್ನು ಕತ್ತರಿಸಬೇಕು. 636 00:53:54,640 --> 00:53:55,890 ನಿನ್ನನ್ನು ನಂಬುತ್ತೇನೆ. 637 00:54:05,740 --> 00:54:06,610 ಮುಂದುವರೆ. 638 00:54:16,040 --> 00:54:17,210 ಅದರ ಮೂಲಕ ಕತ್ತರಿಸು. 639 00:54:26,130 --> 00:54:27,510 ನನಗೆ ಅನುಭವವಾಗುತ್ತಿದೆ. 640 00:54:28,430 --> 00:54:30,140 ನನಗೆ ಅನುಭವವಾಗುತ್ತಿದೆ. 641 00:54:33,560 --> 00:54:34,640 ಧನ್ಯವಾದ. 642 00:54:38,730 --> 00:54:39,600 ಧನ್ಯವಾದ. 643 00:54:40,440 --> 00:54:43,270 ನನ್ನ ಕರ್ತವ್ಯ ಪೂರೈಸಲು ಇಷ್ಟು ತಡ ಮಾಡಿದ್ದಕ್ಕಾಗಿ ಕ್ಷಮಿಸು. 644 00:55:33,870 --> 00:55:34,700 ನಿಲ್ಲು! 645 00:55:37,950 --> 00:55:39,500 ವೇಗೇಟ್ ಮುಚ್ಚು, ಮೊರೇನ್. 646 00:55:42,040 --> 00:55:42,880 ಈಗಲೇ. 647 00:55:44,960 --> 00:55:47,660 ಕಡಿತಗೊಂಡ ಬಗ್ಗೆ ನೀನು ನನಗೆ ಸುಳ್ಳು ಹೇಳಿದೆ. 648 00:55:47,860 --> 00:55:49,090 ಇಲ್ಲ. 649 00:55:50,420 --> 00:55:51,550 ನಾನು ಹೇಳಲಾರೆ. 650 00:55:51,840 --> 00:55:54,040 ನಿನ್ನೊಂದಿಗಿರುವಷ್ಟು ಸತ್ಯವಾಗಿ ಬೇರೆ ಯಾರೊಂದಿಗೂ ಇಲ್ಲ. 651 00:55:54,240 --> 00:55:55,750 ನಾವು ವಿಫಲರಾದೆವು, ಮೊರೇನ್. 652 00:55:55,950 --> 00:55:58,140 ಐ ಆಫ್ ದ ವರ್ಲ್ಡಲ್ಲಿ ನೀನು ವಿಫಲಗೊಂಡೆ. 653 00:55:59,480 --> 00:56:01,590 ಮತ್ತೆ ವಿಫಲಗೊಂಡರೆ ಭಾರಿ ನಷ್ಟವಾಗುತ್ತದೆ. 654 00:56:01,790 --> 00:56:02,810 ವೇಗೇಟ್ ಮುಚ್ಚಿಬಿಡು! 655 00:56:04,610 --> 00:56:05,880 ಇಲ್ಲ. 656 00:56:06,080 --> 00:56:07,360 ನಿನ್ನನ್ನು ಬಲವಂತಪಡಿಸಲು ಇಷ್ಟವಿಲ್ಲ. 657 00:56:08,190 --> 00:56:11,200 ಓಥ್ ರಾಡ್ ಮೇಲೆ ನನ್ನ ಆಜ್ಞೆ ಪಾಲಿಸುವುದಾಗಿ ನೀನು ಮಾತು ಕೊಟ್ಟೆ. 658 00:56:12,150 --> 00:56:16,160 ಮುರಿಯಲಾಗದ ಪ್ರಮಾಣವಚನ, ಒನ್ ಪವರಿನಿಂದ ಬಂಧಿಲ್ಪಟ್ಟದ್ದು. 659 00:56:17,280 --> 00:56:18,160 ಸಿಯೋನ್... 660 00:56:19,660 --> 00:56:20,790 ಅದನ್ನು ಮುಚ್ಚಿಬಿಡು! 661 00:56:23,750 --> 00:56:24,670 ಸಿಯೋನ್... 662 00:56:27,250 --> 00:56:28,530 ಮೊರೇನ್ ದಾಮೊದ್ರೆಡ್-- 663 00:56:28,730 --> 00:56:30,530 ನನ್ನನ್ನು ಪ್ರೀತಿಸಿದ್ದರೆ, ಇದನ್ನು ಮಾಡಬೇಡ. 664 00:56:30,730 --> 00:56:31,800 ನಿನಗೆ ನನ್ನ ಆಜ್ಞೆ… 665 00:56:33,550 --> 00:56:35,220 ವೇಗೇಟ್ ಮುಚ್ಚಿಬಿಡಲು! 666 00:57:38,030 --> 00:57:38,990 ಲಾನ್ಫಿಯರ್. 667 00:57:43,120 --> 00:57:44,870 ಅವಳು ತುಂಬಾ ಬಲಶಾಲಿ, ಸಿಯೋನ್. ಬೇಡ. 668 00:57:58,470 --> 00:57:59,430 ಬೇಡ. 669 00:58:00,140 --> 00:58:02,830 ಮುಂದಿನ ಸಲ ನಿಮ್ಮಿಬ್ಬರನ್ನು ಒಟ್ಟಿಗೆ ಕಂಡರೆ ಕೊಂದುಬಿಡುವೆ ಎಂದಿದ್ದೆ. 670 00:58:03,030 --> 00:58:05,520 ನೀನು ಆಕೆಯನ್ನು ಮುಟ್ಟಬಾರದು. ನನ್ನ ಸಹಾಯ ಬೇಕಿದ್ದಲ್ಲಿ. 671 00:58:08,100 --> 00:58:09,360 ಪ್ರತಿ ದಿನ, 672 00:58:10,310 --> 00:58:12,110 ನೀನು ಲ್ಯೂಸ್ ಥರಾನೇ ಆಗುತ್ತಿದ್ದೀಯ. 673 00:58:17,530 --> 00:58:22,120 ನಿಮ್ಮ ಅದೃಷ್ಟ, ಒಬ್ಬ ಕೆಟ್ಟ ಅಮಿರ್ಲಿನ್ ಸತ್ತಿರುವವರಿಗಿಂತಲೂ ಎಷ್ಟೋ ಪ್ರಯೋಜನಕಾರಿ. 674 00:58:55,110 --> 00:58:56,650 ಮೊರೇನ್, ದಯವಿಟ್ಟು... 675 00:58:59,950 --> 00:59:00,910 ಮೊರೇನ್. 676 01:01:26,180 --> 01:01:28,120 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 677 01:01:28,320 --> 01:01:30,260 ಸೃಜನಶೀಲ ಮೇಲ್ವಿಚಾರಕರು ವಿವೇಕ್