1 00:00:06,006 --> 00:00:06,882 ಈ ಹಿಂದೆ 2 00:00:06,966 --> 00:00:10,636 ದ ವೇಸ್. ಪ್ರಾಚೀನ ದಾರಿಗಳು. ಒಂದು ತಪ್ಪು ಹೆಜ್ಜೆ ಇಟ್ಟರೆ ಶೂನ್ಯದೊಳಗೆ ಬೀಳುತ್ತೇವೆ. 3 00:00:11,137 --> 00:00:12,638 ಆ ಇಬ್ಬರನ್ನು ನನ್ನ ಬಳಿಗೆ ಕರೆತನ್ನಿ. 4 00:00:12,722 --> 00:00:14,682 -ಸ್ವಾಮಿ, ದಯವಿಟ್ಟು... -ಚೈಲ್ಡ್ ವಳ್ದ ಎನ್ನು. 5 00:00:14,765 --> 00:00:16,142 ಇಲ್ಲ! 6 00:00:18,227 --> 00:00:19,937 ಯಾರು ಅವರು? ಅವರಿಗೆ ಏನು ಬೇಕು? 7 00:00:21,272 --> 00:00:25,276 ಪ್ರಮಾಣವಚನ ಸ್ವೀಕರಿಸದವರಿಗೆ ಪ್ರಮಾಣವಚನದ ಸ್ವೀಕಾರ ಮಾಡಿಸಲಾಗುತ್ತದೆ. 8 00:00:26,527 --> 00:00:29,530 ಪೆರಿನ್ ಮತ್ತು ಲೋಯಿಲ್ರ ಸೆರೆಯಾಗಿದೆ. ಅವರನ್ನು ಬಿಡುಗಡೆಗೊಳಿಸಲು ಫಾಮಿಗೆ ಹೊರಟೆ. 9 00:00:29,613 --> 00:00:31,657 -ಲಿಯಾಂಡ್ರಿನ್ ಸೆಡಾಯ್! -ಇದಕ್ಕಾಗಿ ಕ್ಷಮಿಸು. 10 00:00:33,284 --> 00:00:35,327 -ನಾವು ಏನು? -ತೋಳಸೋದರ ಎನ್ನುತ್ತಾರೆ ನಮ್ಮನ್ನು. 11 00:00:36,328 --> 00:00:37,163 ಹೋಗೋಣ. 12 00:00:37,246 --> 00:00:39,915 -ನೀನೆಂದರೆ ಅವನಿಗೆ ಇಷ್ಟ. -ಹಾಪರ್. ಅದೇ ಅವನ ಹೆಸರು. 13 00:00:39,999 --> 00:00:41,542 ನನಗೆ ನಿಷ್ಠೆಯ ಪ್ರಮಾಣವಚನ ಬೇಕು. 14 00:00:41,625 --> 00:00:43,377 ನೀನು ಸುಮ್ಮನೆ ನನ್ನನ್ನು ನಂಬಬೇಕಷ್ಟೇ. 15 00:00:43,461 --> 00:00:46,672 ಗಂಡಸರಿಗೆ ಹುಚ್ಚು ಹಿಡಿದಾಗ, ಅವರು ಪ್ರೀತಿಸುವವರನ್ನು ಮೊದಲು ಕೊಲ್ಲುತ್ತಾರಂತೆ. 16 00:00:46,756 --> 00:00:47,965 ನನ್ನನ್ನು ಪ್ರೀತಿಸುವೆಯಾ? 17 00:00:50,009 --> 00:00:50,926 ನೀನವಳನ್ನು ಕೊಂದೆ. 18 00:00:51,010 --> 00:00:54,263 ನಾನು ಕೊಂದಿಲ್ಲ. ಏಕೆಂದರೆ ಆಕೆ ಲಾನ್ಫಿಯರ್, ತಿರಸ್ಕೃತರಲ್ಲಿ ಅತ್ಯಂತ ಅಪಾಯಕಾರಿ. 19 00:00:54,346 --> 00:00:55,222 ಬೇಗ! 20 00:02:02,498 --> 00:02:03,958 ಹೈ ಲಾರ್ಡ್ ಟುರಾಕ್, 21 00:02:04,041 --> 00:02:06,043 ಹೆಲೇನೆಯ ರಾಜಸೇನಾಧಿಪತಿ-- 22 00:02:06,126 --> 00:02:09,380 ಲೇಡಿ ಸುರೋತ್ ಹೈ ಲಾರ್ಡ್ ಮುಂದೆ ತಾವೇ ಮಾತನಾಡಲಿದ್ದಾರೆ. 23 00:02:12,132 --> 00:02:15,302 ಹೈ ಲಾರ್ಡ್ ಆಜ್ಞೆಯಂತೆ ಆಗಲಿ. 24 00:02:15,386 --> 00:02:17,304 ನೀನು ಆಜ್ಞೆಯನ್ನು ಪಾಲಿಸಲಿಲ್ಲ. 25 00:02:17,388 --> 00:02:20,015 ಅಪ್ಪಣೆ ಇಲ್ಲದೆ ಒಂದು ಹಳ್ಳಿಯ ಮೇಲೆ ಆಕ್ರಮಣವೆಸಗಿದೆ. 26 00:02:20,099 --> 00:02:23,727 ಆದರೆ ಒಬ್ಬ ಒಗಿರ್ ಆಳು, ಒಬ್ಬ ಶೈನಾರನ್ ದೊರೆ, ಮತ್ತು ಹೆಚ್ಚು ಮಂದಿಯನ್ನು ತಂದೆ-- 27 00:02:23,811 --> 00:02:26,021 ನಿನ್ನ ದೊರೆ ಸೇನಾಧಿಪತಿಯನ್ನು ಮೀರಿ ಯಾವ ಅಧಿಕಾರದಿಂದ 28 00:02:26,105 --> 00:02:27,565 ನಿರ್ಧಾರ ಕೈಗೊಂಡೆ? 29 00:02:29,567 --> 00:02:31,610 ಬಹುಶಃ ನನ್ನ ದೊರೆ ತಪ್ಪು ಮಾಡಿರಬಹುದು. 30 00:02:35,030 --> 00:02:36,781 ನಾನು ತಪ್ಪು ಮಾಡಲ್ಲ. 31 00:02:37,700 --> 00:02:39,326 ನಾನು ಬೆಳಕಿನ ಮಾರ್ಗದರ್ಶನ ಪಡೆಯುವವನು. 32 00:02:40,327 --> 00:02:41,829 ನಮಗೊಂದು ಧ್ಯೇಯವಿದೆ. 33 00:02:42,454 --> 00:02:47,793 ಶ್ಯಾಡೋ ವಿರುದ್ಧ ಹೋರಾಡಲು ಮಹಾರಾಣಿಯ ಅಡಿಯಲ್ಲಿ ಜಗತ್ತಿನ ಎಲ್ಲಾ ಜನರನ್ನು ಒಂದುಗೂಡಿಸಲು. 34 00:02:47,877 --> 00:02:51,171 ಸದ್ಯ ನಮ್ಮ ಕೈಗೆಟುಕದಷ್ಟು ದೂರದಲ್ಲಿರುವ 35 00:02:51,255 --> 00:02:54,966 ಹಳ್ಳಿಯ ಮೇಲೆ ದಾಳಿ ಮಾಡಿ ನೀನು ಅಜಾಗರೂಕತೆಯಿಂದ ಹಾಳು ಮಾಡಿದ ಧ್ಯೇಯ. 36 00:02:55,050 --> 00:02:57,386 ನಾವು ಹಿಡಿದಿಡಲಾಗದ ಹಳ್ಳಿ. 37 00:02:58,512 --> 00:03:01,390 ದೊರೆಗಳು ನನ್ನನ್ನು ಕ್ಷಮಿಸಬೇಕು. 38 00:03:02,975 --> 00:03:06,896 ಲೇಡಿ ಸುರೋತ್, ನೀನು ಮತ್ತೊಮ್ಮೆ ಯೋಗ್ಯಳಾಗುವವರೆಗೂ 39 00:03:06,979 --> 00:03:09,356 ಈ ನ್ಯಾಯಸ್ಥಾನದ ಮಂಡಳಿಯಿಂದ ನಿನ್ನನ್ನು ಬಹಿಷ್ಕರಿಸಲಾಗಿದೆ. 40 00:03:09,732 --> 00:03:10,566 ಮಂಡಿಯೂರು. 41 00:03:16,322 --> 00:03:17,281 ಮಂಡಿಯೂರು. 42 00:03:45,100 --> 00:03:46,560 ಆಕೆಯನ್ನು ತನ್ನ ಕೋಣೆಗೆ ಕರೆದೊಯ್ಯಿರಿ. 43 00:04:05,746 --> 00:04:08,248 ನನ್ನ ದೊರೆಯೇ, ಇನ್ನೊಂದು ವಿಚಾರ. 44 00:04:08,874 --> 00:04:10,542 ನಾವು ಆಕ್ರಮಿಸಿದ ಹಳ್ಳಿಯಿಂದ ಒಂದು ಉಡುಗೊರೆ. 45 00:04:11,043 --> 00:04:13,212 ನೀವು ಪುರಾತನ ವಸ್ತುಗಳ ಸಂಗ್ರಹಗಾರರೆಂದು ನಾನು ಬಲ್ಲೆ. 46 00:04:29,979 --> 00:04:32,731 ಹೈ ಲಾರ್ಡ್ ಟುರಾಕ್, ನಾನು ನಿಮಗೆ ಕೊಡುವೆ-- 47 00:04:32,815 --> 00:04:35,609 ವಲೀರಿನ ಕಹಳೆ. 48 00:05:15,691 --> 00:05:16,650 ಇದರೊಂದಿಗೆ, 49 00:05:18,235 --> 00:05:20,112 ಇಡೀ ಜಗತ್ತೇ ನಮ್ಮದಾಗುವುದು. 50 00:05:31,749 --> 00:05:36,253 ದ ವೀಲ್ ಆಫ್ ಟೈಮ್ 51 00:05:53,395 --> 00:05:55,272 ಯಾಕೆ ಓಡುತ್ತಿದ್ದೇವೆ? ನೀನು ಅವಳನ್ನು ಕೊಂದೆ! 52 00:05:55,355 --> 00:05:58,192 ಆ ಗಾಯದಿಂದ ಅವಳು ನಿಧಾನಿಸುವುದಿಲ್ಲ. ಬೇಗ! 53 00:06:38,899 --> 00:06:39,942 ಮುಂಡೆ! 54 00:07:10,305 --> 00:07:12,641 ನನಗೆ ಅರ್ಥವಾಗುತ್ತಿಲ್ಲ. ಅವಳು ಫಾರ್ಸೇಕನ್ನಾದರೆ, ಹೇಗೆ-- 55 00:07:12,724 --> 00:07:15,060 ಈ ರಾತ್ರಿ ನಾವು ಬದುಕುಳಿದರೆ, ಎಲ್ಲವನ್ನೂ ವಿವರಿಸುವೆ. 56 00:07:17,437 --> 00:07:18,272 ಅಲ್ಲಿ. 57 00:07:30,409 --> 00:07:31,326 ಮೊದಲು ಪಾವತಿ. 58 00:07:31,410 --> 00:07:33,120 ಅಮಿರ್ಲಿನ್ ಸೀಟ್ ಮತ್ತು ವೈಟ್ ಟವರ್ 59 00:07:33,203 --> 00:07:35,330 ಪರವಾಗಿ ನಿನ್ನ ವೇಗದ ಕುದುರೆಗಳನ್ನು ಪಡೆಯುತ್ತಿದ್ದೇನೆ. 60 00:07:35,414 --> 00:07:37,957 -ಕುದುರೆಗಳನ್ನು ಪಡೆಯಲು ಬಿಡಲ್ಲ. -ನೀನೂ ನಮ್ಮೊಂದಿಗೆ ಬರುವೆ. 61 00:07:38,041 --> 00:07:39,918 ಇನ್ನೆರಡು ನಿಮಿಷಗಳಲ್ಲಿ ತಡಿ ಕಟ್ಟದಿದ್ದರೆ, 62 00:07:40,002 --> 00:07:44,006 ನಿನ್ನ ಮಿಕ್ಕ ಆಯಸ್ಸು ಇರುವವರೆಗೂ ಈ ರಾತ್ರಿಯನ್ನು ಪರಿತಪಿಸುವಂತೆ ಮಾಡುವೆ. 63 00:07:48,427 --> 00:07:50,262 ವೈಟ್ ಟವರೇ? ನಾವು ವಾಪಸ್ ಹೊರಡುತ್ತೀವಾ… 64 00:07:51,722 --> 00:07:54,141 -ಹೇ, ಏನು ಮಾಡುತ್ತಿರುವೆ? -ನಾಲ್ಕು ಕುದುರೆಗಳಿವೆ. 65 00:07:54,224 --> 00:07:56,143 ನಮ್ಮನ್ನು ಹಿಂಬಾಲಿಸಲು ಆಕೆಗೆ ದಾರಿ ಮಾಡಿಕೊಡಲಾರೆ. 66 00:08:32,304 --> 00:08:33,179 ಬುದ್ಧಿವಂತೆ. 67 00:08:40,729 --> 00:08:42,188 ಶುಭ ಸಂಜೆ, ನನ್ನವ್ವ. 68 00:08:42,272 --> 00:08:43,398 ಸಹಾಯ ಬೇಕಾ? 69 00:08:44,483 --> 00:08:46,568 ಹೌದು, ನಿಜವಾಗಿ. 70 00:08:47,653 --> 00:08:48,862 ನೀವು ಕೇಳಿದ್ದು ಒಳ್ಳೆಯದಾಯಿತು. 71 00:08:50,197 --> 00:08:51,531 ಈ ರಸ್ತೆ ಎಲ್ಲಿಗೆ ಸಾಗುತ್ತದೆ? 72 00:08:51,615 --> 00:08:54,534 ಯಾಕೆ, ಟಾರ್ ವಲೋನಿಗೆ. 73 00:08:56,119 --> 00:08:57,663 ಖಂಡಿತ ಅಲ್ಲಿಗೇನೇ. 74 00:08:58,789 --> 00:08:59,873 ನಿಮಗೇನು ಆಯಿತು-- 75 00:09:05,003 --> 00:09:06,046 ಕುದುರೆ. 76 00:09:06,129 --> 00:09:09,174 ಕುದುರೆಗಿಂತ ನಿಧಾನವಾದದ್ದು ಏನಾದರೂ ಇದೆಯೇ? 77 00:09:28,110 --> 00:09:30,946 ನನ್ನ ಕಣ್ಣುಗಳು, ಅವು ನಿನ್ನಂತೆ ಬದಲಾಗುತ್ತವೇನು, ಶಾಶ್ವತವಾಗಿ? 78 00:09:31,029 --> 00:09:31,989 ಕಾಲಾನುಕ್ರಮದಲ್ಲಿ. 79 00:09:33,240 --> 00:09:34,408 ಬೇಗ, ಅದೃಷ್ಟ ಇದ್ದರೆ. 80 00:09:35,659 --> 00:09:37,911 ಎತ್ತರದ ಹುಲ್ಲಿನ ಮಧ್ಯೆ ಮನುಷ್ಯರ ಕಣ್ಣು ಜಿಂಕೆ ಕಾಣಲಾಗದು. 81 00:09:37,995 --> 00:09:40,497 ರಾತ್ರಿ ಹೊತ್ತು ಕಡಿಬಂಡೆಗಳು ಕಾಣಲ್ಲ. ನಿಷ್ಪ್ರಯೋಜಕ. 82 00:09:40,580 --> 00:09:42,499 ನಾವು ಪಡೆದು ಹುಟ್ಟಿರುವ ಎಲ್ಲದರಂತೆಯೇ. 83 00:09:43,250 --> 00:09:45,168 ನಿನಗೆ ಆಗಾಗ ನಾಗರಿಕತೆಯ ನೆನಪು ಕಾಡಬಹುದು. 84 00:09:46,670 --> 00:09:47,838 ಬಿಯರ್ ನೆನಪು ಕಾಡುತ್ತೆ. 85 00:09:48,922 --> 00:09:50,382 ಒಬ್ಬರೇ ಕುಡಿಯುವುದು ಆನಂದ ಕೊಡಲ್ಲ. 86 00:09:51,591 --> 00:09:52,801 ನಾನೆಂದಿಗೂ ಒಂಟಿಯಲ್ಲ. 87 00:09:54,803 --> 00:09:56,138 ಈಗ ನೀನೂ ಅಲ್ಲ. 88 00:10:10,277 --> 00:10:11,194 ಏನು? 89 00:10:16,867 --> 00:10:18,327 ಅದು ಅಟುವಾನ್ಸ್ ಮಿಲ್. 90 00:10:19,911 --> 00:10:22,456 ಆ ಸೈನಿಕರು ಬಂದಾಗ ನಾವು ಅಲ್ಲಿಯೇ ಇದ್ದದ್ದು. 91 00:10:23,206 --> 00:10:26,001 ನಾವು ಬಂಡಿಯನ್ನು ಹಿಂಬಾಲಿಸದೆ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದೇವೆ. 92 00:10:26,084 --> 00:10:28,086 -ನೀನು ಸುಳ್ಳು ಹೇಳಿದೆ. -ಸಾಯುವುದಕ್ಕಿಂತ ಲೇಸು. 93 00:10:28,795 --> 00:10:30,255 -ಗುಲಾಮನಾಗೋದಕ್ಕಿಂತ. -ನನ್ನ ಗೆಳೆಯರಂತೆ? 94 00:10:30,339 --> 00:10:31,715 ಅವರು ನಿನ್ನ ಗುಂಪಲ್ಲ. 95 00:10:31,798 --> 00:10:34,551 ಟೂ ರಿವರ್ಸಿನ ಮನುಷ್ಯರೂ ಅಲ್ಲ. 96 00:10:37,888 --> 00:10:39,222 ನಿನ್ನ ಪತ್ನಿಯೂ ಅಲ್ಲ. 97 00:10:42,059 --> 00:10:45,437 ಇಲ್ಲ, ನನ್ನ ಗುಂಪಿನ ಬಗ್ಗೆ ನಿನಗೇನೂ ಗೊತ್ತಿಲ್ಲ! 98 00:11:08,543 --> 00:11:10,045 ನನ್ನ ಮಿತ್ರರನ್ನು ಹುಡುಕಲು ಹೋಗುವೆ. 99 00:11:12,005 --> 00:11:13,298 ಅವರು ಯಾರ ಬಳಿಯಾದರೂ ಇರಲಿ. 100 00:11:14,508 --> 00:11:16,551 ನೀನೇನಾಗಿರುವೆ, ಅದರಿಂದ ಓಡಲಾರೆ, ಹುಡುಗ. 101 00:12:04,099 --> 00:12:06,726 ಅವಳಿಗೆ ನಿಜ ಗೊತ್ತಾಗುವಷ್ಟರಲ್ಲಿ ಒಂದೆರಡು ದಿನಗಳಾಗಬಹುದು. 102 00:12:08,186 --> 00:12:09,229 ನಮ್ಮ ಅದೃಷ್ಟವಿದ್ದರೆ. 103 00:12:13,150 --> 00:12:14,109 ನಂಗೊತ್ತಿತ್ತು. 104 00:12:14,693 --> 00:12:16,445 ನೀನು ವಾಪಸ್ ಬರುವೆ ಎಂದು ನನಗೆ ಗೊತ್ತಿತ್ತು. 105 00:12:17,863 --> 00:12:18,947 ನನಗೆ ನಿಜ ಹೇಳು. 106 00:12:19,573 --> 00:12:20,490 ಎಲ್ಲವನ್ನೂ. 107 00:12:25,412 --> 00:12:28,206 ಐ ಆಫ್ ದಿ ವರ್ಲ್ಡಲ್ಲಿ ನೀನು ಡಾರ್ಕ್ ಒನ್ನನ್ನು ಸೋಲಿಸುವುದಿಲ್ಲ. 108 00:12:30,208 --> 00:12:32,210 ಅವನ ಅತಿ ಬಲಶಾಲಿ ಸೇನಾಪತಿಯನ್ನು ಬಿಡುಗಡೆಗೊಳಿಸಿದೆ. 109 00:12:33,253 --> 00:12:36,631 ಇಷಮೆಲ್, ಫಾರ್ಸೇಕನ್ನರ ನಾಯಕ. 110 00:12:40,635 --> 00:12:42,512 ಆದರೆ ಫಾರ್ಸೇಕನ್, ಅವರು ಸಿಲುಕಿದ್ದರು-- 111 00:12:42,596 --> 00:12:43,513 ನಿನ್ನಿಂದ. 112 00:12:43,889 --> 00:12:45,432 ನಿನ್ನ ಹಿಂದಿನ ಜನ್ಮದಲ್ಲಿ. 113 00:12:45,515 --> 00:12:48,268 ಈಗ ಇಷಮೆಲ್ ಸ್ವತಂತ್ರನಾಗಿ, ಲಾನ್ಫಿಯರಳನ್ನು ಬಿಡುಗಡೆಗೊಳಿಸಿದ್ದಾನೆ. 114 00:12:49,978 --> 00:12:51,146 ಮತ್ತು ಮಿಕ್ಕವರು? 115 00:12:51,855 --> 00:12:53,315 ಆತ ಅವರೆಲ್ಲರನ್ನೂ ಬಿಡುಗಡೆಗೊಳಿಸಿದರೆ, 116 00:12:54,608 --> 00:12:57,277 ಅಂತಿಮ ಯುದ್ಧ ಗೆಲ್ಲುವ ಯಾವುದೇ ಸಾಧ್ಯತೆ ನಮಗಿರುವುದಿಲ್ಲ. 117 00:13:27,557 --> 00:13:28,642 ಏನು? 118 00:13:45,242 --> 00:13:48,203 ನಿನಗೆ ಹೇಳಿದೆ, ನಾವು ಆ ಊರಿಗೆ ಮರಳುತ್ತಿಲ್ಲ. 119 00:13:49,162 --> 00:13:52,165 ಲೋಯಿಲ್ ಮತ್ತು ಇಂಗ್ಟರರನ್ನು ಎಲ್ಲಿಗೆ ಕರೆದೊಯ್ದರೆಂದು ಪತ್ತೆಮಾಡಬೇಕು. 120 00:13:52,249 --> 00:13:53,083 ಮತ್ತು... 121 00:14:02,133 --> 00:14:03,134 ಉನೋ. 122 00:14:08,306 --> 00:14:09,891 ಅವರು ಅವನನ್ನು ಹೂಳಲೂ ಇಲ್ಲ. 123 00:14:22,070 --> 00:14:23,530 ನನಗಾಗಿ ಇಲ್ಲಿ ಕಾಯುವೆಯಾ? 124 00:15:14,205 --> 00:15:16,708 ಅದು ಜೋರಾಗಿ ಕೇಳಿಸುತ್ತೆ, ವೆಟ್ಲ್ಯಾಂಡರ್. 125 00:15:19,044 --> 00:15:20,545 ಅವರು ನಿನ್ನನ್ನು ಕೇಳುವುದು ಬೇಡ. 126 00:15:28,803 --> 00:15:30,347 ನಾನು ಹತ್ತಿರ ಹೋಗುವುದಿಲ್ಲ. 127 00:15:33,933 --> 00:15:35,226 ಅವಳ ಪಂಜರವನ್ನು ಮುಟ್ಟಿದ 128 00:15:35,310 --> 00:15:37,479 ಕೊನೆಯ ವ್ಯಕ್ತಿಯ ಕೈ ಮುರಿದು ಹರಿದುಹೋಯಿತು. 129 00:15:39,314 --> 00:15:40,523 ಅಯಿಲರನ್ನು ನಂಬಲಾಗದು. 130 00:15:45,070 --> 00:15:46,321 ನಿನಗಾಗಿ ಸ್ವಲ್ಪ ನೀರು. 131 00:15:50,742 --> 00:15:51,910 ಅವಳೇನು ಮಾಡಿದಳು? 132 00:15:52,369 --> 00:15:54,120 ಶಾಂಚಾನ್ ಅವಳನ್ನು ಬಂಧಿಸಿದರೇ? 133 00:15:55,997 --> 00:15:57,374 ನೀನು ಆಗಂತುಕರನ್ನು ಭೇಟಿಯಾಗಿರುವೆ. 134 00:16:02,587 --> 00:16:03,588 ನಿಷೇಧಾಜ್ಞೆ ಇದೆ. 135 00:16:04,798 --> 00:16:06,758 ನೀನು ರಾತ್ರಿ ಉಳಿದುಕೊಳ್ಳಬೇಕಾಗಬಹುದು. 136 00:16:06,841 --> 00:16:10,804 ಬಾ, ಈ ಊರಿನಲ್ಲಿ ವಸತಿಗೃಹ ಎನಿಸಿಕೊಳ್ಳುವಂಥ 137 00:16:10,887 --> 00:16:12,180 ಜಾಗವನ್ನು ತೋರಿಸುವೆ. 138 00:16:26,820 --> 00:16:29,030 ಅಟುವಾನ್ಸ್ ಮಿಲ್ಲಿಗೆ ಹೆಚ್ಚಿನ ಮಂದಿ ಭೇಟಿ ಕೊಡಲ್ಲ. 139 00:16:30,073 --> 00:16:31,282 ಸುಮ್ಮನೆ ಸಾಗುತ್ತಿದ್ದೆ. 140 00:16:32,867 --> 00:16:34,327 ಟೂ ರಿವರ್ಸಿನ ಕೆಲಸದಂತೆ ಕಾಣುತ್ತದೆ. 141 00:16:35,995 --> 00:16:38,540 ಮೌಂಟನ್ಸ್ ಆಫ್ ಮಿಸ್ಟಿನ ತಪ್ಪಾದ ದಿಕ್ಕಿನಲ್ಲಿರುವೆ. 142 00:16:41,418 --> 00:16:43,378 ಈ ಹಿಂದೆ ಅದೇನನ್ನು ಹೇಳಿದೆ? 143 00:16:43,461 --> 00:16:44,629 ಆಗಂತುಕರ ಬಗ್ಗೆ? 144 00:16:49,134 --> 00:16:50,593 ಪರಿಚಾರಕನೇ, ಇನ್ನೊಂದು ಸುತ್ತು. 145 00:16:56,599 --> 00:16:57,934 ಅವಳೇನು ಮಾಡಿದಳು? 146 00:16:58,351 --> 00:17:00,019 ಆ ಅಯಿಲ್ ಮಹಿಳೆ. 147 00:17:00,103 --> 00:17:03,815 ತಪ್ಪಾದ ಸಮಯದಲ್ಲಿ ತಪ್ಪಾದ ಊರಿಗೆ ನುಗ್ಗಿದಳು. 148 00:17:05,650 --> 00:17:07,484 ಅವಳಿಗೆ ನೆರವಾಗಲು ಯತ್ನಿಸಬೇಡ, ಟೂ ರಿವರ್ಸ್. 149 00:17:08,737 --> 00:17:09,863 ಅವಳೀಗ ಅದನ್ನು ಮೀರಿದ್ದಾಳೆ. 150 00:17:11,156 --> 00:17:12,281 ನಾನು ಹೇಳಿದ್ದು ಅರ್ಥವಾಯಿತೇ? 151 00:17:15,910 --> 00:17:18,079 ಇಲ್ಲಿ, ಲೇಡಿ. ಲೇಡಿ, ಬಾ ಇಲ್ಲಿ. 152 00:17:19,705 --> 00:17:21,499 ಕ್ಷಮಿಸಿ, ಸ್ವಾಮಿ. ಅವಳೆಂದೂ ಹೀಗಿದ್ದಿಲ್ಲ. 153 00:17:23,001 --> 00:17:25,837 ಕ್ವೆಶ್ಚನರ್ಗಳು ಬರುವುದರೊಳಗೆ ಅವಳನ್ನು ಕಟ್ಟಿಹಾಕು. 154 00:17:29,591 --> 00:17:31,676 ಏನಂದ್ರೆ, ನಾನೀಗ ಆ ಕೋಣೆಯನ್ನು ನೋಡುವೆ, ದಯವಿಟ್ಟು. 155 00:17:33,928 --> 00:17:37,474 ಪರಿಚಾರಕನೇ, ನಮ್ಮ ಹೊಸ ಮಿತ್ರನಿಗೆ ಕೋಣೆಯ ವ್ಯವಸ್ಥೆ ಮಾಡು. 156 00:17:37,557 --> 00:17:39,517 ಹಾಂ, ಖಂಡಿತ, ಚೈಲ್ಡ್ ಬೋರ್ನ್ಹಾಲ್ಡ್. 157 00:17:40,435 --> 00:17:41,269 ಧನ್ಯವಾದ. 158 00:17:42,228 --> 00:17:43,605 ಲೇಡಿ, ಬಾ. 159 00:17:46,191 --> 00:17:48,526 ನೀನು ಮರಳುವ ದಾರಿ ಸಿಗುವಂತಾಗಲಿ, ಟೂ ರಿವರ್ಸ್. 160 00:17:53,698 --> 00:17:56,367 ಈ ಹಿಂದಿನ ಮಾಲೀಕರು, ಶ್ರೀಮತಿ ಅಮೂಡೀಗೇನಾಯಿತು? 161 00:17:56,951 --> 00:18:00,288 ತನ್ನ ಮೊಮ್ಮಗಳನ್ನು ಕಸಿದ ಬಂಡಿಯನ್ನು ಹಿಂಬಾಲಿಸಿದಳು. 162 00:18:00,371 --> 00:18:01,539 ಮತ್ತೆ ವೈಟ್ಕ್ಲೋಕ್ಸ್? 163 00:18:02,332 --> 00:18:05,126 ಶಾಂಚಾನರನ್ನು ಎರಡು ದಿನಗಳ ಹಿಂದೆ ಹೊರದಬ್ಬಿದರು. 164 00:18:06,252 --> 00:18:09,839 ಆದರೆ ನಿಜವಾಗಿ, ನಾವು ಹಿಂದೆಯೇ ಚೆನ್ನಾಗಿದ್ದೆವು. 165 00:18:09,923 --> 00:18:14,219 ಅವರ ಪ್ರಮಾಣವಚನ ಸ್ವೀಕರಿಸಿದ ನಂತರ, ಸುಮ್ಮನೆ ಬಿಟ್ಟುಬಿಡುತ್ತಾರೆ. 166 00:18:14,969 --> 00:18:16,888 ಆದರೆ ಕ್ವೆಶ್ಚನರ್ಗಳು… 167 00:18:16,971 --> 00:18:19,641 ಅವಳಿಗೆ ಏನೂ ಬೇಡವಂತೆ, ಚೈಲ್ಡ್ ಬೋರ್ನ್ಹಾಲ್ಡ್. 168 00:18:29,692 --> 00:18:32,111 ಅವಳ ಈಟಿಗಳನ್ನು ಕಸಿಯಲು 11 ಮತ್ತು ಅವಳನ್ನು ಬಂಧಿಸಲು ನಿಮ್ಮ 169 00:18:32,195 --> 00:18:33,655 ಇನ್ನೈದು ಕ್ವೆಶ್ಚನರ್ಗಳು ಬೇಕಾದರು. 170 00:18:33,738 --> 00:18:35,073 ಅವಳು ನಿಮ್ಮ ಪ್ರಶ್ನೆಗಳಿಗೆ 171 00:18:35,156 --> 00:18:38,701 ಮಣಿಯುವ ಮುನ್ನ, ಅದರ ಎರಡರಷ್ಟು ಮಂದಿಯನ್ನು… ಕೊಂದು ಹೋಗುತ್ತಾಳೆ. 172 00:18:38,785 --> 00:18:41,746 ಈ ಆಗಂತುಕರು ಸಮುದ್ರದಿಂದ ದಾಳಿ ಮಾಡುವ ವೇಳೆಯೇ 173 00:18:41,830 --> 00:18:43,414 ಸ್ಪೈನಿನ ಪಶ್ಚಿಮಕ್ಕೆ 174 00:18:43,498 --> 00:18:46,835 ಇಷ್ಟು ದೂರದಲ್ಲಿ ನಮಗೊಬ್ಬ ಅಯಿಲ್ ಸಿಗುವುದು ಕಾಕತಾಳೀಯ ಎನಿಸುವುದಿಲ್ಲವೇ? 175 00:18:47,585 --> 00:18:51,005 ನಾನು ಹೆಚ್ಚು ಪ್ರಶ್ನೆಗಳನ್ನು ಕೇಳಿದಷ್ಟೂ ಹೆಚ್ಚು ಉತ್ತರಗಳು ಸಿಗುತ್ತವೆ. 176 00:18:52,048 --> 00:18:54,217 ಆಗಂತುಕರು ನೆಲೆ ಸ್ಥಾಪಿಸಿದ್ದಾರೆ, 177 00:18:55,093 --> 00:18:56,344 ಫಾಮಿನಲ್ಲಿ. 178 00:18:56,427 --> 00:18:59,681 ಅಲ್ಲೇ ನಾವು ಅವರನ್ನು ಸಮುದ್ರಕ್ಕೆ ಹಿಮ್ಮೆಟ್ಟಿಸಬೇಕು. 179 00:19:00,390 --> 00:19:01,516 ಯಾರಲ್ಲಿ? 180 00:19:04,143 --> 00:19:05,854 ಚಿಂತಿಸಬೇಡಿ, ವಳ್ದ. 181 00:19:05,937 --> 00:19:06,896 ಇಲ್ಲಿ ತೋಳಗಳಿಲ್ಲ. 182 00:19:08,314 --> 00:19:11,067 ಹಾಲು ಕುಡಿಯುವ ಮಗು ಭಾರವಾಗಿದೆ. 183 00:19:11,526 --> 00:19:14,737 ನಿನ್ನಪ್ಪನ ಹೆಸರು ನಿನ್ನನ್ನು ಕಾಪಾಡದ ದಿನ ಬರುತ್ತದೆ, 184 00:19:15,697 --> 00:19:16,948 ಡೇಯ್ನ್ ಬೋರ್ನ್ಹಾಲ್ಡ್. 185 00:19:49,063 --> 00:19:50,023 ಅವರೆಲ್ಲಿ? 186 00:19:51,441 --> 00:19:52,525 ಯಾರು? 187 00:19:53,359 --> 00:19:55,486 ನಿನ್ನೊಂದಿಗೆ ಪ್ರಯಾಣಿಸುತ್ತಿದ್ದ ಹೆಂಗಸು ಮತ್ತು ಗಂಡಸು. 188 00:19:55,570 --> 00:19:59,032 ಆದಷ್ಟು ಬೇಗ ಟವರಿಗೆ ಕುದುರೆಗಳನ್ನು ಓಡಿಸಿಕೊಂಡು ಹೋಗಲು ನನಗೆ ಹೇಳಿದರು, 189 00:19:59,115 --> 00:20:00,700 ಅದು ಅವರಿಗೆ ಒಳ್ಳೆಯದಲ್ಲದಿದ್ದರೂ. 190 00:20:00,783 --> 00:20:03,494 ಅಷ್ಟು ಪ್ರಯಾಣ ಮಾಡುವುದು, ವಿಶ್ರಾಂತಿ ಇಲ್ಲದೆ, ಆದರೂ-- 191 00:20:03,578 --> 00:20:04,537 ಮಾತು ನಿಲ್ಲಿಸು. 192 00:20:05,872 --> 00:20:06,915 ಅದು ಯಾರ ಉಪಾಯವಾಗಿತ್ತು? 193 00:20:07,624 --> 00:20:09,918 ಈ ಸಣ್ಣ ಉಪಾಯ? 194 00:20:10,001 --> 00:20:11,377 ಅಯಿಸ್ ಸೆಡಾಯಿದು. 195 00:20:11,461 --> 00:20:14,088 ಆ ಯುವಕ, ಯಾವುದೋ ಭ್ರಾಂತಿಯಲ್ಲಿದ್ದಂತಿದ್ದ, 196 00:20:14,172 --> 00:20:16,215 -ಕೇವಲ ಹಿಂಬಾಲಿಸಿಕೊಂಡು-- -ಖಂಡಿತವಾಗಿ. 197 00:20:17,050 --> 00:20:18,426 ಅವನದಿನ್ನೂ ಎಳೆ ವಯಸ್ಸು. 198 00:20:19,385 --> 00:20:20,637 ಅದನ್ನು ನಾನು ನೆನಪಿಡಬೇಕು. 199 00:20:25,975 --> 00:20:29,562 ಅವಳು ನಾನು ಊಹಿಸಿದ್ದಕ್ಕಿಂತ ಹೆಚ್ಚು ನಿರ್ದಯಿ, ನಿನ್ನನ್ನು ಗಾಳದಂತೆ ಬಳಸುತ್ತಿದ್ದಳು. 200 00:20:31,022 --> 00:20:34,442 ಸರಿ, ಎಷ್ಟೇ ಆದರೂ, ಅವರೂ ಮಲಗಲೇಬೇಕು, ಅಲ್ಲವೇ? 201 00:20:35,902 --> 00:20:37,445 ಆಗ ಅವರನ್ನು ಹಿಡಿಯುವೆ. 202 00:20:39,238 --> 00:20:42,867 ಒಳ್ಳೆಯದು, ನನ್ನವ್ವ. ನೀವು ಅವರನ್ನು ಹುಡುಕುತ್ತಿದ್ದಿರೆಂದು ನಾನು ಯಾರಿಗೂ ಹೇಳಲ್ಲ. 203 00:20:42,951 --> 00:20:44,202 ನೀನು ಹೇಳಲ್ಲ ಅಂತ ನಂಗೊತ್ತು. 204 00:21:34,669 --> 00:21:36,462 ನೀನು ವಾಪಸಾದೆ, ವೆರಿನ್! 205 00:21:36,546 --> 00:21:38,339 ಎಷ್ಟು ಕಾಲವಾಗಿತ್ತು? ಯಾಕೆ? 206 00:21:38,423 --> 00:21:41,801 ಒಳ ಉದ್ದೇಶವಿಲ್ಲದೆ ನಿವೃತ್ತರು ಕಾಣಿಸಿಕೊಳ್ಳಬಾರದೇನು? 207 00:21:42,385 --> 00:21:43,594 ಖಂಡಿತ ಇಲ್ಲ. 208 00:21:45,138 --> 00:21:46,180 ನಯೋಮಿ. 209 00:21:48,975 --> 00:21:52,020 ನಮ್ಮ ಗ್ರೇಟ್ ಲೈಬ್ರರಿಯಿಂದ ಜ್ಞಾನವನ್ನು ಅರಸಿ ಬಂದಿರುವೆ, 210 00:21:52,103 --> 00:21:55,314 ಮತ್ತು ಬ್ರೌನ್ ಆಜಾದ ನನ್ನ ಸಹೋದರಿಯರ ಸಂಗಾತಕ್ಕಾಗಿ. 211 00:21:55,398 --> 00:21:57,942 ದೇವರೇ, ನಿನ್ನನ್ನು ಕಂಡು ಸಂತೋಷವಾಯಿತು. 212 00:21:59,193 --> 00:22:00,111 ಇದನ್ನು ತೆರೆಯಲೇ? 213 00:22:00,194 --> 00:22:02,655 ಹಾಂ! ಅದು ಅಡೆಲಿಯಸ್ನದ್ದು ಪ್ರೀತಿಯಿಂದ. 214 00:22:06,409 --> 00:22:07,493 ಕೊಡಿಲ್ಲಿ. 215 00:22:13,541 --> 00:22:15,918 ಒಡೆದ ನಂತರ ವಿಶ್ವದ ಇತಿಹಾಸ ಹೇಗೆ ನಡೆಯುತ್ತಿದೆ? 216 00:22:16,002 --> 00:22:17,336 ಪ್ರಗತಿ ಕಾಣುತ್ತಿರುವಿರೇ? 217 00:22:17,420 --> 00:22:19,088 ಮತ್ತು ಟಿಫನ್'ಸ್ ವೆಲ್! 218 00:22:19,172 --> 00:22:22,050 ನಾವು ಬರಬೇಕು ಅಂದುಕೊಳ್ಳುತ್ತಿದ್ದೆವು, ಆದರೆ ಓದುವುದು ಬಹಳಷ್ಟು ಇದೆ. 219 00:22:22,133 --> 00:22:25,094 ನೀನೆಲ್ಲಿದ್ದೆ, ಎಲ್ಲಿಗೆ ಹೋಗುತ್ತಿರುವೆ, ಎಲ್ಲವನ್ನೂ ಹೇಳು. 220 00:22:25,178 --> 00:22:27,013 ಹೌದು, ಹೌದು. ಸಮಯ ಬಂದಾಗ, ಯಸಿಕ್ಕಾ. 221 00:22:27,096 --> 00:22:29,807 ಅವಳ ಮತ್ತಿನ ಪಾನೀಯಕ್ಕೆ ಬದಲಾಗಿ ಗಾಳಿಸುದ್ದಿಗಳಿಲ್ಲದೆ 222 00:22:29,891 --> 00:22:31,726 ಬರಬೇಡವೆಂದು ಅಡೆಲಿಯಸ್ ಹೇಳಿದ್ದಾಳೆ. 223 00:22:33,269 --> 00:22:38,983 ಮತ್ತೆ, ಕೆಲ ಹೊಸ ಶಕ್ತಿವಂತ ನವಶಿಷ್ಯೆಯರು ಬಂದಿದ್ದಾರೆಂದು ಕೇಳ್ಪಟ್ಟೆ? 224 00:23:05,093 --> 00:23:06,636 ನಿನ್ನನ್ನೀಗ ರಕ್ಷಿಸಿ ಬಂಧಿಸಲಾಗಿದೆ. 225 00:23:08,805 --> 00:23:10,723 ಏನನ್ನೂ ಪ್ರಯತ್ನಿಸಬೇಡವೆಂದು ಹೇಳುವೆ, ಆದರೆ... 226 00:23:20,566 --> 00:23:22,944 ಒನ್ ಪವರಿನೊಂದಿಗೆ ನಮ್ಮ ಮೇಲೆ ಹೇಗೆ ದಾಳಿ ಮಾಡಿದೆ? 227 00:23:24,695 --> 00:23:26,030 ನೀನು ತ್ರೀ ಓತ್ಸ್ ಮುರಿದೆ. 228 00:23:26,697 --> 00:23:28,407 ಅದಕ್ಕಿಂತ ಹೆಚ್ಚಾಗಿ ಎಷ್ಟನ್ನೋ ಮುರಿದಿರುವೆ. 229 00:23:38,918 --> 00:23:42,547 ಅಯಿಸ್ ಸೆಡಾಯ್ ತ್ರೀ ಓತ್ಸ್ ಏಕೆ ಸ್ವೀಕರಿಸುತ್ತಾರೆ ಗೊತ್ತೇ? 230 00:23:45,633 --> 00:23:47,343 ಸಾವಿರ ವರ್ಷಗಳ ಹಿಂದೆ, 231 00:23:48,469 --> 00:23:52,682 ಒಬ್ಬ ಮಹಾ ರಾಜ ಓತ್ಸ್ ಜೊತೆ ಬಂಧವಾಗದಿದ್ದರೆ ಟವರನ್ನು ಸುಡುವ ಬೆದರಿಕೆ ಒಡ್ಡಿದ. 232 00:23:55,434 --> 00:23:58,104 ಆತನನ್ನು ನಮ್ಮ ಮಾನವೀಯತೆ ಹೆದರಿಸಿದಷ್ಟು ನಮ್ಮ ಶಕ್ತಿ ಹೆದರಿಸಲಾಗಲಿಲ್ಲ. 233 00:23:59,230 --> 00:24:02,441 ಅದಕ್ಕೇ ವೈಟ್ ಟವರಿನಲ್ಲಿ ಇಷ್ಟೆಲ್ಲಾ ನಿಯಮಗಳು, ಆಚರಣೆಗಳು, ಔಪಚಾರಿಕತೆಗಳು ಇರುವುದು. 234 00:24:02,525 --> 00:24:05,528 ನಾವು ಅಮಾನವೀಯವಾಗಿ, ಊಹಿಸಲು ಸಾಧ್ಯವಾಗಿ ಕಂಡುಬಂದರೆ, 235 00:24:06,612 --> 00:24:07,697 ಅಲೆಗಳಂತೆ, 236 00:24:08,781 --> 00:24:10,783 ಗಂಡಸರು ನಮಗೆ ಸರಿಸಮಾನರಾಗುವುದಿಲ್ಲ. 237 00:24:12,160 --> 00:24:13,703 ನಮಗೆ ಅವಮಾನ ಮಾಡುವರು. 238 00:24:18,040 --> 00:24:20,668 ರೆಡ್ ಆಜಾಗಾಗಿ ನೀನು ನನ್ನನ್ನು ನೇಮಿಸಿಕೊಳ್ಳುತ್ತಿರಲಿಲ್ಲ, ಅಲ್ಲವೇ? 239 00:24:23,087 --> 00:24:25,047 ಅವನಿಗಾಗಿ ನೇಮಿಸಿಕೊಳ್ಳುತ್ತಿದ್ದೆ. 240 00:24:26,465 --> 00:24:28,634 ಮುಂದೆ ಬರುವುದು ನಿನಗೆ ಸುಲಭವಾಗಲಿದೆ. 241 00:24:28,718 --> 00:24:30,553 ಡಾರ್ಕನ್ನು ಸೇರುವ ಮುನ್ನ ಸಾಯುವೆ. 242 00:24:31,512 --> 00:24:34,182 ನೀನೇನೇ ಮಾಡಿದರೂ, ಹೇಳಿದರೂ, ಅಥವಾ ಎಲ್ಲೇ ಕೊಂಡೊಯ್ದರೂ. 243 00:24:34,974 --> 00:24:36,475 ಪ್ರತಿ ಮಹಿಳೆಗೂ ತನ್ನ ಬೆಲೆಯಿರುತ್ತೆ. 244 00:24:39,604 --> 00:24:41,689 ಆಕೆ ಇನ್ನು ಹೊರಲಾಗದ ಭಾರ, ಅಥವಾ... 245 00:24:43,232 --> 00:24:44,734 ಭವಿಷ್ಯಕ್ಕೊಂದು ಭರವಸೆ... 246 00:24:47,278 --> 00:24:48,696 ಈ ಜಗತ್ತಿನಲ್ಲಿ ಅಸಾಧ್ಯವಾದದ್ದು. 247 00:24:51,532 --> 00:24:52,950 ನಿನ್ನ ಮಗ ಸಾಯುತ್ತಿದ್ದಾನೆ, 248 00:24:54,410 --> 00:24:56,078 ನಿನ್ನ ಸಹೋದರಿಯರಿಗೆ ಮೋಸ ಬಗೆದಿರುವೆ, 249 00:24:57,413 --> 00:24:58,789 ಮತ್ತು ನೀನು ಕತ್ತಲಲ್ಲಿ ಕುಳಿತು 250 00:24:58,873 --> 00:25:01,459 ನೀನು ಅಪಹರಿಸಿರುವ ಮಹಿಳೆಯ ಮುಂದೆ ಸಮುಜಾಯಿಷಿ ಕೊಡುತ್ತಿರುವೆ. 251 00:25:03,461 --> 00:25:05,379 ನಿನ್ನ ಬೆಲೆ ಇದಕ್ಕೆ ಸರಿಸಮವೇನು? 252 00:25:19,268 --> 00:25:21,229 ಅಲ್ವಿನ್, ನಮ್ಮನ್ನು ಬಿಡು, ದಯವಿಟ್ಟು. 253 00:25:34,283 --> 00:25:35,576 ವೈಯಾರ ಮುಗಿಯಿತಾ? 254 00:25:38,412 --> 00:25:41,874 ಆ ಗಲೀಜು ಮೀನುಗಾರರ ಹಳ್ಳಿಗೆ ಹೋಗಬೇಕೆಂದವನು ನೀನು. 255 00:25:42,917 --> 00:25:43,960 ಯಾತಕ್ಕೆ? 256 00:25:45,336 --> 00:25:46,504 ಒಗಿರನೇ? 257 00:25:47,255 --> 00:25:48,381 ಅಥವಾ ನಿನ್ನ ಸಾಕು ತೋಳವೇ? 258 00:25:49,257 --> 00:25:51,092 ನನ್ನ ಆಸೆಗಳು ನನ್ನವೇ. 259 00:25:51,175 --> 00:25:52,551 ಅದರ ಬೆಲೆ ತೆರುತ್ತಿರುವವಳು ನಾನು. 260 00:25:55,596 --> 00:25:58,432 ನಾವು ಟುರಾಕನ್ನು ಸುಮ್ಮನೆ ಕೊಂದು ಮುಗಿಸಬೇಕು. 261 00:25:58,516 --> 00:26:01,477 ಮತ್ತು ಸಾಮ್ರಾಜ್ಯವನ್ನು ಅಂತರ್ಯುದ್ಧದಲ್ಲಿ ಮುಳುಗಿಸಬೇಕೇ? 262 00:26:03,521 --> 00:26:05,690 ಕೋಪ ತಡೆದುಕೊಳ್ಳಲಾರದ ನಿನ್ನ 263 00:26:05,773 --> 00:26:08,693 ಅಸಮರ್ಥತೆಯ ನಂತರ ನಿನ್ನ ದಡ್ಡತನವೇ ಮುಂದಿನದು ಅನ್ಸುತ್ತೆ. 264 00:26:13,197 --> 00:26:16,409 ನಿನ್ನ ಯುದ್ಧಕ್ಕೆ ನಿನಗೆ ಬೇಕಿರುವುದು ನನ್ನ ಸೇನೆ. 265 00:26:16,993 --> 00:26:19,412 ನನ್ನ ಹಡಗುಗಳು. ನನ್ನ ಹಗ್ಗಗಳು. 266 00:26:21,414 --> 00:26:25,584 ನೀನು ಚೋಸನ್ ಇರಬಹುದು, ಆದರೆ ನೀನು ದಿ ಬ್ಲಡ್ಡಿನವನಲ್ಲ. 267 00:26:25,668 --> 00:26:27,753 ನೀನಿಲ್ಲಿ ನನ್ನ ಆಮಂತ್ರಣದ ಮೇರೆಗೆ ಇರುವೆ. 268 00:26:29,630 --> 00:26:34,844 ಡಾರ್ಕಿಗೆ ನೀನು ಯಾಕೆ ಪ್ರಮಾಣವಚನ ಸ್ವೀಕರಿಸಿದೆ ಎಂದು ನನಗ್ಗೊತ್ತು. 269 00:26:42,977 --> 00:26:44,687 ಆಗಾಗ ನನ್ನನ್ನು ಮರೆಯುವೆ, ನನ್ನೊಡೆಯ. 270 00:26:52,737 --> 00:26:54,280 ಟಾರ್ಮೊನ್ ಗಾಯ್'ಡೊನ್, 271 00:26:55,698 --> 00:27:00,328 ಅಂತಿಮ ಯುದ್ಧ, ಅದನ್ನು ಇಲ್ಲೇ ಫಾಮಿನಲ್ಲೇ ಗೆಲ್ಲಲಾಗುತ್ತದೆ, 272 00:27:00,411 --> 00:27:02,788 ಈ ನಗರದ ಮೇಲಿನ ಆಕಾಶದ ಮೇಲೆ ಬರೆಯಲಾಗಿದೆ. 273 00:27:02,872 --> 00:27:04,582 ಡ್ರ್ಯಾಗನ್ ನಮ್ಮೊಂದಿಗೆ ಸೇರುತ್ತಾನೆ. 274 00:27:09,086 --> 00:27:10,963 ನಿನಗೂ ಒಂದು ಉಡುಗೊರೆ ತಂದಿರುವೆ. 275 00:27:11,964 --> 00:27:13,341 ಅದು ಇಷ್ಟರಲ್ಲೇ ಇಲ್ಲಿರುತ್ತದೆ. 276 00:27:57,927 --> 00:27:59,053 ತಡಿ. 277 00:28:16,362 --> 00:28:17,279 ಆರಾಮವಾಗಿದ್ದೀಯಾ? 278 00:28:18,280 --> 00:28:19,782 ನಡೆಯಲು ಆಗುತ್ತಾ ನಿನಗೆ? 279 00:28:21,992 --> 00:28:23,786 ನೋಡು, ನಾವು ಹೊರಡಬೇಕು. 280 00:28:23,869 --> 00:28:26,330 ನಾನು ನಿನ್ನನ್ನು ಹೊರಬೇಕಾದರೆ ಹೆಚ್ಚು ದೂರ ಹೋಗಲಾಗದು. 281 00:28:28,165 --> 00:28:31,919 ಒಬ್ಬ ವೆಟ್ಲ್ಯಾಂಡರ್ ನನ್ನನ್ನು ಬಂಧಿಸುವನು, ಇನ್ನೊಬ್ಬ ಬಿಡುಗಡೆಗೊಳಿಸುವನು. 282 00:28:33,462 --> 00:28:34,672 ನನಗೇಕೆ ಸಹಾಯ ಮಾಡುವೆ? 283 00:28:38,259 --> 00:28:39,802 ಜನರು ಬಂಧಿತರಾಗಿರಬಾರದು. 284 00:28:54,817 --> 00:28:56,152 ನನ್ನ ಹೆಸರು ಅವಿಯೆಂದಾ, 285 00:28:56,986 --> 00:28:59,447 ಟಾರ್ದಾದ್ ಅಯಿಲಿನ ನೈನ್ ವ್ಯಾಲೀಸ್ ಪಂಗಡದವಳು, 286 00:28:59,989 --> 00:29:01,198 ಫಾರ್ ದರೈಸ್ ಮಾಯವಳು. 287 00:29:02,283 --> 00:29:03,617 ನನ್ನ ನೀರು ನಿನ್ನದು. 288 00:29:06,704 --> 00:29:08,706 ನಾನು ಪೆರಿನ್ ಅಯ್ಬರಾ. 289 00:29:11,667 --> 00:29:13,461 ನೋಡು, ನಾವೀಗಲೇ ಹೊರಡಬೇಕು. 290 00:29:23,262 --> 00:29:25,264 ಅವಳಿಗೆ ಸಹಾಯ ಮಾಡಬೇಡವೆಂದು ಹೇಳಿದೆ. 291 00:29:26,682 --> 00:29:27,850 ನಮಗೆ ಘರ್ಷಣೆ ಬೇಕಿಲ್ಲ. 292 00:29:28,476 --> 00:29:30,853 -ನಮ್ಮ ಪಾಡಿಗೆ ಹೋಗುತ್ತೇವಷ್ಟೇ. -ಕ್ಷಮಿಸಿ. 293 00:29:32,146 --> 00:29:34,106 ಎಲ್ಲರೂ ಒಮ್ಮೆಲೇ ದಾಳಿ ಮಾಡಿ, ನನ್ನ ಸೂಚನೆಯೊಂದಿಗೆ. 294 00:29:34,190 --> 00:29:36,275 ಒಬ್ಬೊಬ್ಬರಾಗಿ ಹೋದರೆ ನಿಮ್ಮನ್ನು ಮುಗಿಸುತ್ತಾಳೆ. 295 00:29:56,545 --> 00:29:57,880 ಪೆರಿನ್ ಅಯ್ಬರಾ, 296 00:29:59,965 --> 00:30:01,217 ನಿನಗೆ ನಾಟ್ಯ ಇಷ್ಟವೇ? 297 00:30:24,698 --> 00:30:25,783 ಹಿಡಿಯಿರಿ ಅವಳನ್ನು! 298 00:30:28,911 --> 00:30:30,287 ಇನ್ನೊಬ್ಬನ ಹಿಡಿಯಿರಿ. 299 00:31:28,971 --> 00:31:29,972 ತಡಿ! 300 00:31:36,770 --> 00:31:37,896 ಅವನು ನಿನಗೆ ನೀರನ್ನು ಕೊಟ್ಟ. 301 00:31:39,148 --> 00:31:41,108 ನಮಗೆ ನೆರವಾದ, ನೆನಪಿದೆಯಾ? 302 00:31:43,527 --> 00:31:44,361 ಏನು ನೀನು? 303 00:31:46,989 --> 00:31:47,823 ಅವನನ್ನು ಬಿಡು. 304 00:31:50,659 --> 00:31:51,577 ಈಗಲೇ. 305 00:31:54,371 --> 00:31:56,123 ಮಿಕ್ಕವರು ನಮ್ಮ ಹಿಂದೆ ಬೀಳುತ್ತಾರೆ. 306 00:31:56,206 --> 00:31:57,082 ನಾವು ಬೇಗ ಹೊರಡಬೇಕು. 307 00:32:04,715 --> 00:32:06,050 ನಾವಿಲ್ಲಿರೋದು ಅವಳಿಗೆ ತಿಳಿಯುತ್ತೆ. 308 00:32:06,800 --> 00:32:09,511 ನಮಗೆ ಆಹಾರ, ಬಟ್ಟೆ, ಮತ್ತು ವೇಗದ ಕುದುರೆಗಳು ಬೇಕು. 309 00:32:09,595 --> 00:32:12,181 ನಾವು ಕೆಲ ದಿನ ಪ್ರಯಾಣ ಮಾಡಿ, ನಮ್ಮ ಮಧ್ಯೆ ಅಂತರ ಮೂಡಿಸಬಹುದು. 310 00:32:12,264 --> 00:32:13,599 ಕ್ರಮೇಣ ನಮಗೆ ನಿದ್ದೆ ಬೇಕಾಗುತ್ತದೆ. 311 00:32:13,682 --> 00:32:16,644 ಇಲ್ಲ, ಅದರಷ್ಟು ಅಪಾಯಕಾರಿ ಕ್ರಿಯೆ ಯಾವುದೂ ಇಲ್ಲ. 312 00:32:16,727 --> 00:32:18,187 ಯಾವುದರ ಬಗ್ಗೆ ಹೇಳುತ್ತಿರುವೆ? 313 00:32:18,270 --> 00:32:21,482 ಫಾರ್ಸೇಕನ್ನರ ನಡುವೆ ಲಾನ್ಫಿಯರ್ ಎರಡು ವಿಚಾರದಲ್ಲಿ ಜನಪ್ರಿಯಳು, 314 00:32:21,565 --> 00:32:24,610 ಅವಳ ಸಹಜ ಕ್ರೌರ್ಯ ಮತ್ತು ಟೆಲ್'ಅರಾನ್'ರಿಯೋಡ್ ಪಾಂಡಿತ್ಯದಿಂದ. 315 00:32:24,693 --> 00:32:25,986 ಟೆಲ್'ಅರಾನ್... ಅಂದ್ರೆ? 316 00:32:26,820 --> 00:32:30,574 ಕನಸುಗಳ ಲೋಕ. ಇಲ್ಲಿಯಂತೆಯೇ ಅಲ್ಲಿಯೂ ಕೂಡ ಆಕೆ ನಿನಗೆ ಹಾನಿಯೆಸಗಬಲ್ಲಳು. 317 00:32:30,658 --> 00:32:33,494 ನೀನು ಮಲಗಿದೊಡನೆಯೇ, ನಿನ್ನನ್ನು ಆಕ್ರಮಿಸುವಳು. 318 00:32:34,787 --> 00:32:37,623 ಒನ್ ಪವರಿನಿಂದ ನೀನು ನಮ್ಮನ್ನು ಎಚ್ಚರವಾಗಿರಿಸಬಲ್ಲೆ, ಅಲ್ವಾ? 319 00:32:41,001 --> 00:32:42,252 ಇಲ್ಲ. 320 00:32:51,887 --> 00:32:54,306 -ನನ್ನವ್ವ, ನಿಮಗೆ ಪೆಟ್ಟಾಗಿದೆ. -ನನ್ನ ತಂಗಿಯೆಲ್ಲಿ? 321 00:32:54,390 --> 00:32:56,183 ಆಕೆ ಅಡುಗೆ ಮನೆಯಲ್ಲಿದ್ದಾರೆ, ಆದರೆ… 322 00:32:57,059 --> 00:32:58,644 ನಿಮ್ಮ ಸಂಬಂಧಿ ಆಕೆಯೊಂದಿಗಿದ್ದಾರೆ! 323 00:32:58,727 --> 00:32:59,561 ಸಂಬಂಧಿ? 324 00:33:01,438 --> 00:33:02,898 ಸದ್ಯ. ಬಂದೆಯಲ್ಲ. 325 00:33:04,358 --> 00:33:05,776 ಒಬ್ಬ ಸ್ನೇಹಿತನನ್ನು ಕರೆತಂದಿರುವೆ. 326 00:33:06,318 --> 00:33:07,653 ಮೊರೇನ್ ದೊಡ್ಡಮ್ಮ! 327 00:33:08,862 --> 00:33:12,241 ನೀವಿಲ್ಲಿ ಬಂದಿದ್ದೀರೆಂದು ಅಮ್ಮ ಹೇಳಿದಾಗ ನನಗೆ ನಂಬಲಾಗಲಿಲ್ಲ. 328 00:33:12,324 --> 00:33:14,702 ಇಪ್ಪತ್ತು ವರ್ಷಗಳೇ ಆದವು. 329 00:33:14,785 --> 00:33:18,163 ಕಳೆದ ಬಾರಿ ನಿನ್ನನ್ನು ನೋಡಿದಾಗ ನೀನು ಈ ಮೇಜಿನಷ್ಟೇ ಉದ್ದ ಇದ್ದೆ. 330 00:33:18,706 --> 00:33:19,748 ನೀವು... 331 00:33:20,666 --> 00:33:22,876 ಅಂದರೆ, ನೀವು ಈಗಲೂ ಹಾಗೆಯೇ ಕಾಣುತ್ತೀರಿ. 332 00:33:22,960 --> 00:33:24,545 ಸ್ವಲ್ಪ ಹಾಳಾಗಿರಬಹುದಷ್ಟೇ. 333 00:33:25,254 --> 00:33:28,340 ರಾಜ ವಿವಾಹದ ರುಚಿ ನಿರ್ಧಾರ ಸಂದರ್ಭದಲ್ಲಿ ನೀನು ಮರಳಲಿಲ್ಲ ಎಂದುಕೊಳ್ಳುವೆ? 334 00:33:28,424 --> 00:33:30,676 ಬಿಡಮ್ಮ, ರಾಸ್ಪ್ಬೆರಿ ಮತ್ತು ತಿಂಬಲ್ಬೆರಿಗಳ ರುಚಿಯ 335 00:33:30,759 --> 00:33:34,304 ವ್ಯತ್ಯಾಸ ನೋಡುವುದಕ್ಕಿಂತ ಆಕೆಗೆ ಇನ್ನೂ ಪ್ರಮುಖ ಕೆಲಸಗಳಿರಬಹುದು. 336 00:33:35,264 --> 00:33:37,057 ನೀವು ನನ್ನ ದೊಡ್ಡಮ್ಮನ ವಾರ್ಡರ್ ಇರಬೇಕು. 337 00:33:38,434 --> 00:33:39,601 ನಾನು ವಾರ್ಡರ್ ಅಲ್ಲ. 338 00:33:39,685 --> 00:33:40,561 ಈತ... 339 00:33:42,604 --> 00:33:43,522 ರಾಂಡ್. 340 00:33:45,482 --> 00:33:46,567 ಸಂತೋಷ, ರಾಂಡ್. 341 00:33:47,317 --> 00:33:50,946 -ನಾನು ಬರ್ತಾನೆಸ್ ದಾಮೊದ್ರೆಡ್. ಮತ್ತು ಈಕೆ-- -ನಮ್ಮ ಪರಿಚಯವಾಗಿದೆ. 342 00:33:54,616 --> 00:33:56,744 ನಮಗೆ ಕುದುರೆಗಳು ಬೇಕು, ಎರಡು. 343 00:33:56,827 --> 00:33:58,203 ಕೋರ್ಸರ್ಗಳು, ನಿಮ್ಮಲ್ಲಿದ್ದರೆ. 344 00:33:58,287 --> 00:34:00,122 ಅವುಗಳನ್ನು ಮನೆಗೆ ಕರೆಸುವೆ. 345 00:34:00,205 --> 00:34:03,625 ನಮ್ಮಲ್ಲಿ ಅತ್ಯುತ್ತಮವಾದ ಒಂದಿಡೀ ಲಾಯ ಇದೆ. ಮಹಾರಾಣಿಯ ಉಡುಗೊರೆ. 346 00:34:03,709 --> 00:34:05,502 ಮತ್ತು ನೀವು ಮದುವೆಗೆ ಬರಲೇಬೇಕು. 347 00:34:05,586 --> 00:34:06,962 ಇನ್ನು ಕೆಲವೇ ವಾರಗಳಿವೆ. 348 00:34:08,088 --> 00:34:11,091 ನಾನು ರಾಣಿ ಗಾಲ್ಡ್ರಿಯನ್ನಳನ್ನು ಮದುವೆಯಾಗುತ್ತಿದ್ದೇನೆಂದು ನಂಬಲಾಗುತ್ತಾ? 349 00:34:11,175 --> 00:34:12,760 ಅದರಿಂದ ನಾನು ನಿಮ್ಮ ರಾಜನಾಗುವೆ, 350 00:34:12,842 --> 00:34:15,387 ಆದ್ದರಿಂದ ನಾನು ಪೂರ್ಣ ಅಧೀನತೆಯನ್ನು ನಿರೀಕ್ಷಿಸುತ್ತೇನೆ. 351 00:34:17,514 --> 00:34:18,891 ತುಂಬಾ ಖುಷಿಯ ಜೋಡಿ, ಅಂದುಕೊಳ್ಳುವೆ. 352 00:34:18,974 --> 00:34:21,685 ದಾಮೊದ್ರೆಡ್ ಹೆಸರಿಗೆ ತುಂಬಾನೇ ಮರ್ಯಾದೆ ಇದೆ. 353 00:34:22,728 --> 00:34:24,813 ಅದೇ ಸಾಕಷ್ಟು ಸಂತೋಷ. 354 00:34:26,190 --> 00:34:30,444 ಸರಿ, ನಾನು ಮೇಲೆ ಹೋಗಿ ಸ್ನಾನ ಮಾಡುವೆ. 355 00:34:30,527 --> 00:34:32,487 ಅದೇ ಸಮಯದಲ್ಲಿ ನಾವು ಹೊರಡುವ ಮುನ್ನ 356 00:34:32,571 --> 00:34:34,907 ರಾಂಡಿಗೆ ಊಟ ಮತ್ತು ತೊಡಲು ಬಟ್ಟೆಯ ವ್ಯವಸ್ಥೆ ಮಾಡಬಹುದೇ? 357 00:34:34,989 --> 00:34:36,074 ಹೌದು, ಖಂಡಿತವಾಗಿ. 358 00:34:36,158 --> 00:34:38,702 ಆತನಿಗೆ ಸರಿಹೊಂದುವಂಥದ್ದು ನನ್ನ ಸಂಗ್ರಹದಿಂದ ಕೊಡುವೆ. 359 00:34:39,286 --> 00:34:40,411 ಧನ್ಯವಾದ. 360 00:34:43,415 --> 00:34:44,875 ಅದು ರಕ್ತವೇ? 361 00:34:45,417 --> 00:34:48,212 ನಿನ್ನನ್ನು ಕಂಡು ತುಂಬಾ ಸಂತೋಷವಾಯಿತು, ಮಗನೇ. 362 00:34:48,295 --> 00:34:49,129 ಅಥವಾ... 363 00:34:50,422 --> 00:34:51,882 ನನ್ನೊಡೆಯ ಎಂದು ಹೇಳಬೇಕೇನೋ. 364 00:35:14,655 --> 00:35:17,616 ಆ ಬೆತ್ತದ ಮೇಲೆ ಧೂಳಿರುವುದು ಕಂಡು ಸಂತೋಷವಾಯಿತು, ಸೋದರಿ. 365 00:35:17,699 --> 00:35:22,412 ನಿಜ ಹೇಳಬೇಕೆಂದರೆ, ಸೆರೇಯ್ ಸೆಡಾಯಿಯ ಭಾರಿ ಏಟಿನ ಶಿಕ್ಷೆಯನ್ನು ನನ್ನ ಬೆನ್ನು ಇನ್ನೂ ಮರೆತಿಲ್ಲ, 366 00:35:22,496 --> 00:35:24,164 ಶತಮಾನಗಳೇ ಕಳೆದಿದ್ದರೂ. 367 00:35:24,248 --> 00:35:27,167 ಅರೆ, ವೆರಿನ್ ಸೆಡಾಯ್. 368 00:35:27,251 --> 00:35:29,378 ನೀವು ಭೇಟಿ ಕೊಡುವುದು ನನಗೆ ಗೊತ್ತಿರಲಿಲ್ಲ. 369 00:35:29,461 --> 00:35:31,046 ನನಗಾಗಿ ನೀವು ಎದ್ದು ನಿಲ್ಲಬೇಕಾಗಿಲ್ಲ. 370 00:35:31,129 --> 00:35:33,090 ನನಗೆ ಈ ಔಪಚಾರಿಕತೆಗಳೆಲ್ಲಾ ಹಿಡಿಸಲ್ಲ. 371 00:35:33,173 --> 00:35:34,716 ನನಗೆ ವಯಸ್ಸಾದಂತೆ ಭಾಸವಾಗಿಸುತ್ತಿರುವಿರಿ. 372 00:35:35,259 --> 00:35:37,678 ನಿಮಗೆ ಹೇಗೆ ನೆರವಾಗಲಿ, ಸೋದರಿ? 373 00:35:37,761 --> 00:35:40,973 ನಿಮ್ಮ ಆರೈಕೆಯಲ್ಲಿರುವ ಇಬ್ಬರು ಹುಡುಗಿಯರೊಂದಿಗೆ ಮಾತನಾಡಬೇಕು ಅಂದುಕೊಂಡೆ. 374 00:35:41,682 --> 00:35:45,060 ಎಗ್ವೀನ್ ಅಲ್'ವೀರ್ ಮತ್ತು ನೈನೀವ್ ಅಲ್'ಮಯಿರಾ. 375 00:35:45,769 --> 00:35:47,980 ಇವರೆಲ್ಲಿ ಸಿಗುತ್ತಾರೆಂದು ಗೊತ್ತೇ? 376 00:35:48,939 --> 00:35:50,983 ಅವರು ತಮ್ಮ ಕೆಲಸಗಳಲ್ಲಿ ನಿರತರಾಗಿರಬಹುದು. 377 00:35:51,900 --> 00:35:53,151 ನಿಜವಾಗಿ, ಅವರು ನಿರತರಾಗಿಲ್ಲ. 378 00:35:53,777 --> 00:35:56,572 ಅವರು ತಮ್ಮ ತರಗತಿಯಲ್ಲೂ ಇಲ್ಲ, ಕೋಣೆಗಳಲ್ಲೂ ಇಲ್ಲ. 379 00:35:56,655 --> 00:36:01,493 ಮತ್ತು ಅಂಡೊರಿನ ಮಗಳು-ವಾರಸುದಾರಳು ಸಹ ಎಲ್ಲಿಯೂ ಕಾಣುತ್ತಿಲ್ಲ. 380 00:36:03,078 --> 00:36:05,455 ಅವರು ಟವರಿನ ಆವರಣವನ್ನು ಬಿಟ್ಟು ಹೋಗಿರಬಹುದೇ? 381 00:36:06,331 --> 00:36:07,249 ಮಗಳು-ವಾರಸುದಾರಳೇ? 382 00:36:07,332 --> 00:36:09,251 ಒಮ್ಮೆ ನೋಡಿದರೆ ಒಳ್ಳೆಯದು, ಅಲ್ಲವೇ? 383 00:36:15,424 --> 00:36:17,968 ಅಯ್ಯೋ, ದೇವರೇ, ಹೌದು. ಇಲ್ಲಿದೆ. 384 00:36:18,051 --> 00:36:20,679 ಕೇಮ್ಲಿನ್ನಿನಲ್ಲಿರುವ ಎಲೈನ್ ಮನೆಗೆ ಭೇಟಿ. 385 00:36:20,762 --> 00:36:23,181 ಮೂವರೂ ಆ ದಿನದಂದೇ ಸಹಿ ಮಾಡಿ ಹೋಗಿದ್ದಾರೆ. 386 00:36:24,433 --> 00:36:26,143 ಅದನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು. 387 00:36:27,436 --> 00:36:28,312 ಹೌದು. 388 00:36:29,313 --> 00:36:30,188 ನಾನು... 389 00:36:31,899 --> 00:36:34,234 ನಿಜವಾಗಿ, ಅದನ್ನು ಹೇಗೆ ಮರೆತೆ ಎಂಬುದೇ ಗೊತ್ತಿಲ್ಲ. 390 00:36:34,318 --> 00:36:36,028 ತುಂಬಾ ಅಸಹಜ. 391 00:36:36,862 --> 00:36:37,821 ಅದು ನಿಜವೇ. 392 00:36:39,072 --> 00:36:43,327 ಆದರೆ ಈ ಮೂವರ ಜೊತೆ ರಾಣಿ ಮೊರ್ಗೇಸಳ ಸೈನಿಕರು ಹೋದಂತಿದ್ದಾರೆ, 393 00:36:43,410 --> 00:36:45,662 ಹಾಗಾಗಿ ಎಲ್ಲವೂ ಸರಿ ಇರುತ್ತದೆ 394 00:36:45,746 --> 00:36:48,206 ಮತ್ತು ಇಷ್ಟರಲ್ಲೇ ನಾವು ಕೇಮ್ಲಿನ್ನಿನಿಂದ ಸುದ್ದಿ ಕೇಳುವೆವು. 395 00:36:48,290 --> 00:36:49,541 ಹೌದು, ಖಂಡಿತವಾಗಿ. 396 00:36:50,500 --> 00:36:53,503 ಹೌದು, ನನ್ನಲ್ಲಿ ನಿಮಗಾಗಿ ಇನ್ನೊಂದು ಪ್ರಶ್ನೆ ಇದೆ. 397 00:36:53,587 --> 00:36:57,925 ಒಂದು ಪುಸ್ತಕವನ್ನು ಕೇಳಲು ಗ್ರಂಥಾಲಯದಲ್ಲಿದ್ದೆ, ಮೆಡಿಟೇಷನ್ಸ್ ಆನ್ ದಿ ಕಿಂಡಲಿಂಗ್ ಫ್ಲೇಮ್. 398 00:36:58,008 --> 00:37:01,345 ಹೌದು, ಅದನ್ನು ಮರಳಿಸಬೇಕು ಅಂದುಕೊಳ್ಳುತ್ತಿದ್ದೆ. 399 00:37:01,428 --> 00:37:03,472 ಅದು ನನ್ನ ಕೋಣೆಯಲ್ಲಿದೆ. ನಿಮಗೆ ಬೇಕೇನು? 400 00:37:03,555 --> 00:37:07,768 ಅಮಿರ್ಲಿನ್ ಟೆಟ್ಸುವಾನ್ ಬಗ್ಗೆಯ ಒಂದು ಸಣ್ಣ ಬರಹಕ್ಕಾಗಿ ಅಷ್ಟೇ. ತರಲಾದರೆ… 401 00:37:53,981 --> 00:37:57,150 ಈಗಲೇ, ನನ್ನ ಅಚ್ಚಳಿಯದ ನೆನಪಿನ ಶಕ್ತಿಯು ಕೆಲಸಕ್ಕೆ ಬರುವುದು. 402 00:37:57,234 --> 00:38:01,071 ಎಪ್ಪತ್ತೆರಡನೆಯ ಪುಟದಲ್ಲಿ ಆ ಮೂವರು ಹುಡುಗಿಯರು ಹೊರಟಿರುವ ಉಲ್ಲೇಖವಿದೆ, 403 00:38:01,154 --> 00:38:05,701 ಎಲೈನಳ ಸೋದರ ಗಾವಿನ್ನನ ನಾಮಕರಣದ ಸಂದರ್ಭಕ್ಕಾಗಿ. 404 00:38:05,784 --> 00:38:07,536 ಆಸಕ್ತಿಕರ ವಿಚಾರ ಏನೆಂದರೆ 405 00:38:07,619 --> 00:38:10,080 ಬರಹದ ಮೇಲೆ ಒಂದು ಸಣ್ಣ ನಡುಕವಿದೆ. 406 00:38:10,455 --> 00:38:11,373 ತೋರಿಸಿ. 407 00:38:19,172 --> 00:38:21,216 ನೋಡಿ, ಇದು ಶೆರಿಯಂರ ಸಹಜ ಬರವಣಿಗೆ. 408 00:38:23,635 --> 00:38:26,722 ಆದರೆ ಇಲ್ಲಿ, ಆಕೆಯ ಕೈ ನಿಧಾನವಾಗಿ ಚಲಿಸಿದಂತೆ ಭಾಸವಾಗುತ್ತದೆ. 409 00:38:27,639 --> 00:38:29,808 ಅಥವಾ ಯಾರಾದರೂ ಆಕೆಯ ಬರವಣಿಗೆಯನ್ನು ನಕಲು ಮಾಡಿರಬಹುದೇ? 410 00:38:29,891 --> 00:38:32,686 ಇಲ್ಲ. ಬರೆದಿರುವುದನ್ನು ಶೆರಿಯಂ ನೆನೆಸಿಕೊಂಡಳು. 411 00:38:42,279 --> 00:38:44,114 ಒತ್ತಾಯದ ನೇಯ್ಗೆಯನ್ನು ಬಳಸಿದರೆ 412 00:38:45,866 --> 00:38:49,077 ಈ ರೀತಿ ಕಾಣಬಹುದೆಂದು ನಿಮಗನಿಸುತ್ತಾ? 413 00:38:50,454 --> 00:38:51,496 ಒತ್ತಾಯವೇ? 414 00:38:53,623 --> 00:38:55,417 ಅದು ತ್ರೀ ಓತ್ಸನ್ನು ಮುರಿಯಬಹುದು. 415 00:38:57,252 --> 00:39:00,380 ಟವರಿನಲ್ಲಿ ಯಾರೋ ಡಾರ್ಕ್ ಅನುಯಾಯಿಗಳಿರಬಹುದೆಂದು ಕಾಣುತ್ತದೆ. ಅದು... 416 00:39:03,633 --> 00:39:05,218 ಬ್ಲಾಕ್ ಆಜಾ ನಿಜವಾಗಿಯೂ ಇದೆ. 417 00:39:08,430 --> 00:39:10,682 ಕಳೆದ ಕೆಲವು ದಿನಗಳಲ್ಲಿ ಯಾವುದೇ ಕಾರಣಕ್ಕಾಗಿ 418 00:39:10,766 --> 00:39:12,893 ಟವರಿನಿಂದ ಹೊರಟ ಪ್ರತಿ ಅಯಿಸ್ ಸೆಡಾಯಿಯ 419 00:39:12,976 --> 00:39:14,478 ಹೆಸರನ್ನು ನಾವು ಹುಡುಕಬೇಕು. 420 00:40:16,123 --> 00:40:17,999 ನಿನಗಾಗಿ ಗಂಟೆಗಳ ಹಿಂದೆಯೇ ಕಾದಿದ್ದೆವು. 421 00:40:18,875 --> 00:40:20,502 ದಿ ವೇಸ್ ಊಹಿಸಲಸಾಧ್ಯವಾದದ್ದು. 422 00:40:21,419 --> 00:40:24,047 ನಮ್ಮ ಒಡೆಯನೇ ನನ್ನನ್ನು ಭೇಟಿಯಾಗುತ್ತಾರೆ ಅಂದುಕೊಂಡಿದ್ದೆ. 423 00:40:24,131 --> 00:40:28,260 ನಮ್ಮ ಒಡೆಯನಿಗೆ ತನ್ನ ಸಾಕು ನಾಯಿಯೊಂದಿಗೆ ಆಟವಾಡುವುದಕ್ಕಿಂತ ಪ್ರಮುಖ ಕೆಲಸಗಳಿರುತ್ತವೆ. 424 00:40:30,637 --> 00:40:33,306 ನೀವು ಈ ಮಹಿಳೆಯರಿಗೆ ಮಾಡುವುದು ಮಹಾಪಾಪ. 425 00:40:35,142 --> 00:40:38,728 ಬಹುಶಃ ಒನ್ ಪವರಿಗೆ ಸೂಕ್ತ ಮರ್ಯಾದೆ ಕೊಡುವುದನ್ನು ಶಾಂಚಾನ್ ಕಲಿಯಬೇಕಿದೆ. 426 00:40:38,812 --> 00:40:39,855 ಅದಕ್ಕೆ ವಿರುದ್ಧವಾಗಿ, 427 00:40:39,938 --> 00:40:42,649 ಒನ್ ಪವರಿಗೆ ನಾವೆಷ್ಟು ಮರ್ಯಾದೆ ಕೊಡುತ್ತೇವೆಂದರೆ, 428 00:40:42,732 --> 00:40:45,068 ಕೇವಲ ಹುಟ್ಟಿನ ಕಾರಣದಿಂದ ಅದನ್ನು ಯಾರೂ 429 00:40:45,152 --> 00:40:46,778 ಬಳಸಬಾರದೆಂದು ನಾವು ನಂಬುತ್ತೇವೆ. 430 00:40:46,862 --> 00:40:49,447 ನಮ್ಮ ಸುಲ್'ದಮ್ ವರ್ಷಾನುಗಟ್ಟಲೆ ತರಬೇತಿ ಪಡೆದು 431 00:40:49,531 --> 00:40:51,074 ತಮ್ಮ ಮೌಲ್ಯ ಸಾಬೀತುಪಡಿಸುತ್ತಾರೆ. 432 00:40:51,158 --> 00:40:53,160 ತಮ್ಮ ಹಕ್ಕನ್ನು ಸಂಪಾದಿಸುತ್ತಾರೆ. 433 00:40:53,243 --> 00:40:56,413 ಅಯಿಸ್ ಸೆಡಾಯಿಗಳಂತಲ್ಲದೆ. 434 00:40:57,998 --> 00:41:02,294 ನಮ್ಮ ಒಡೆಯನ ಅವಶ್ಯಕತೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತವೆ, ತಿಳಿದುಕೋ. 435 00:41:03,086 --> 00:41:07,132 ಮತ್ತು ಎಲ್ಲಾ ಮರಾತ್'ದಮಾನೇಗಳನ್ನು ಕ್ರಮೇಣ ಬಂಧಿಸಲಾಗುತ್ತದೆ. 436 00:41:08,633 --> 00:41:10,093 ನಿನ್ನ ಮುದ್ದಿನ ಕುತ್ತಿಗೆಗೆ 437 00:41:10,177 --> 00:41:14,097 ಕೊರಳಪಟ್ಟಿಯನ್ನು ತೊಡಿಸುವವಳು ನಾನೇ ಆಗಬಹುದು. 438 00:41:14,639 --> 00:41:16,433 ನಮ್ಮ ಒಡೆಯನ ಅವಶ್ಯಕತೆಗಳು ಬದಲಾಗುತ್ತವೆ. 439 00:41:18,643 --> 00:41:19,978 ನಿಮಗೆ ಅದನ್ನು ನೆನಪು ಮಾಡುವೆ, 440 00:41:21,646 --> 00:41:23,523 ನೀವು ನನ್ನ ಮುಂದೆ ಮಂಡಿಯೂರಿದ ದಿನದಂದು. 441 00:41:41,374 --> 00:41:43,084 ನೀನು ಅಷ್ಟು ಕಾಲ ಬದುಕಿದ್ದರೆ. 442 00:42:01,478 --> 00:42:02,604 ಅವರನ್ನು ಕರೆತನ್ನಿ. 443 00:42:05,690 --> 00:42:06,775 ಏನಾದರೂ ಮಾಡು! 444 00:42:07,984 --> 00:42:08,902 ನನ್ನಿಂದ ಆಗುತ್ತಿಲ್ಲ. 445 00:42:14,157 --> 00:42:15,450 ಓಡಿ. 446 00:42:40,809 --> 00:42:42,602 ತಡಿ. ಎಗ್ವೀನ್ ಎಲ್ಲಿ? 447 00:43:03,498 --> 00:43:07,127 ಒಬ್ಬ ಅಯ್ಬರಾ ಆಗಿ ನೀನು ಈಟಿಗಳನ್ನು ಕೆಟ್ಟದಾಗಿ ಕುಣಿಸಲ್ಲ. 448 00:43:11,006 --> 00:43:13,550 ನಿಮ್ಮ ಜನ ದಿ ವೇಸ್ಟ್ ಬಿಟ್ಟು ಹೋಗಲೇ ಇಲ್ಲ ಅಂದುಕೊಂಡೆ. 449 00:43:13,633 --> 00:43:15,135 ವೆಟ್ಲ್ಯಾಂಡರರು ಅದನ್ನು ವೇಸ್ಟ್ ಅಂತಾರೆ. 450 00:43:15,218 --> 00:43:17,220 ಅದು ತ್ರೀ-ಫೋಲ್ಡ್ ಲ್ಯಾಂಡ್. 451 00:43:17,304 --> 00:43:19,723 ನಮ್ಮನ್ನು ತಯಾರಿಸುವ ಕೆತ್ತುವ ಕಲ್ಲು, 452 00:43:19,806 --> 00:43:21,641 ನಮ್ಮ ಮೌಲ್ಯ ತೋರಿಸಲು ಪರೀಕ್ಷೆಯ ರಂಗ, 453 00:43:21,725 --> 00:43:24,269 ಮತ್ತು ಪಾಪಕ್ಕಾಗಿ ಶಿಕ್ಷೆ. 454 00:43:24,352 --> 00:43:25,895 ಯಾವ ಪಾಪ? 455 00:43:25,979 --> 00:43:28,648 ಯಾರಿಗೂ ನೆನಪಿಲ್ಲ. ತುಂಬಾ ಕಾಲವಾಯಿತು. 456 00:43:31,443 --> 00:43:32,694 ನೀನೇಕೆ ಹೊರಟೆ? 457 00:43:34,988 --> 00:43:36,823 ನಾನು ಕಾರ್'ಆ'ಕಾರ್ನಿಗೆ ಹುಡುಕುತ್ತಿದ್ದೇನೆ, 458 00:43:37,741 --> 00:43:40,493 ನಮ್ಮ ದೊರೆಗಳ ದೊರೆ. 459 00:43:42,662 --> 00:43:44,456 ಮತ್ತೆ, ಎಲ್ಲಿಗೆ ಹೋಗುತ್ತಿರುವೆ? 460 00:43:44,539 --> 00:43:46,708 ನೀನು ಹೋಗುವ ಕಡೆ, ವೆಟ್ಲ್ಯಾಂಡರ್. 461 00:43:46,791 --> 00:43:49,002 -ಆದರೆ ನೀನು ಹೇಳಿದ್ದು-- -ನನ್ನ ಬಳಿ ತೋಹ್ ಇದೆ. 462 00:43:51,004 --> 00:43:51,880 ತೋಹ್? 463 00:43:54,132 --> 00:43:55,884 ಜಿ'ತೋಹ್ ಅಯಿಲ್ ಆಚಾರ. 464 00:43:55,967 --> 00:43:57,218 ನೀನು ನನ್ನ ಜೀವ ಉಳಿಸಿದೆ. 465 00:43:58,094 --> 00:44:00,638 ನನ್ನ ನೀರು ನಿನ್ನದು. 466 00:44:03,850 --> 00:44:05,143 ನನಗೆ ಅದರ ಬಗ್ಗೆ ಗೊತ್ತಿಲ್ಲ. 467 00:44:05,226 --> 00:44:07,312 ಅದು ಪ್ರೇಮಿಯಲ್ಲ, ವೆಟ್ಲ್ಯಾಂಡರ್. 468 00:44:08,313 --> 00:44:10,940 ಆದರೂ ನನಗೆ ಅದಕ್ಕೆ ವಿರೋಧವಿಲ್ಲ. 469 00:44:23,078 --> 00:44:25,580 ಚಿಂತಿಸಬೇಡ, ಟೂ ರಿವರ್ಸಿನ ಪೆರಿನ್. 470 00:44:25,663 --> 00:44:27,999 ನಿನ್ನ ಮೇಲೆ ಕಾಮದಿಂದ ದಾಳಿ ಮಾಡೆನು. 471 00:44:30,168 --> 00:44:32,921 ಮತ್ತೆ, ಈಗೆಲ್ಲಿಗೆ ಹೋಗೋಣ? 472 00:44:35,215 --> 00:44:36,216 ಫಾಮ್. 473 00:45:24,222 --> 00:45:25,265 ಈ ನಗರ, 474 00:45:26,099 --> 00:45:27,767 ಇದು ಟೋಮನ್ ಹೆಡ್ ಮೇಲಿರುವ ಫಾಮ್. 475 00:45:28,685 --> 00:45:31,604 ನಾವು ವೈಟ್ ಟವರಿನ ಪಶ್ಚಿಮಕ್ಕೆ ಸಾವಿರಾರು ಮೈಲಿ ಆಚೆ ಇದ್ದೇವೆ, ನೈನೀವ್. 476 00:45:32,313 --> 00:45:33,231 ಫಾಮ್. 477 00:45:33,773 --> 00:45:36,776 ಪೆರಿನ್ ಮತ್ತು ಲೋಯಿಲ್ರನ್ನು ಅಲ್ಲಿಗೆ ಒಯ್ಯಲಾಗ್ತಿತ್ತೆಂದಳು ಲಿಯಾಂಡ್ರಿನ್. 478 00:45:41,739 --> 00:45:43,366 -ಬಾ, ನಾವು ಅವಳನ್ನು ಹುಡುಕಬೇಕು. -ತಡಿ. 479 00:45:46,536 --> 00:45:48,705 ಯಾರ ಗಮನವನ್ನೂ ನಮ್ಮತ್ತ ಸೆಳೆಯಬೇಡ. 480 00:45:49,080 --> 00:45:52,167 ನಮಗಾಗಿ ಹುಡುಕುತ್ತಿರುತ್ತಾರೆ. ನಾವು ಜಾಗ್ರತೆಯಿಂದಿರಬೇಕು. 481 00:46:01,050 --> 00:46:06,097 ಈ ಸೈನಿಕರು, ಫಾಮಿನವರೂ ಅಲ್ಲ ಟೋಮನ್ ಹೆಡ್ಡಿನವರೂ ಅಲ್ಲ. 482 00:46:06,764 --> 00:46:08,057 ಅವರು ವಿದೇಶಿಯರು. 483 00:46:08,141 --> 00:46:10,101 -ಆಕ್ರಮಣಕಾರರು. -ಅವರು ಎಲ್ಲಿಂದಾದರೂ ಬರಲಿ. 484 00:46:10,185 --> 00:46:11,728 ನನಗೆ ಬೇಕಿರುವುದು ಎಗ್ವೀನಳನ್ನು 485 00:46:11,811 --> 00:46:13,646 -ಹುಡುಕಿ ಇಲ್ಲಿಂದ ಹೋಗುವುದಷ್ಟೇ. -ಈ ಕಡೆ! 486 00:46:29,871 --> 00:46:31,998 ನಿಲ್ಲು. ನಿನ್ನಿಂದ ನಾವಿಬ್ಬರೂ ಸಾಯುತ್ತೇವೆ. 487 00:46:32,081 --> 00:46:33,666 ಮೊದಲು ನಾವು ಬಟ್ಟೆಗಳನ್ನು ಬದಲಾಯಿಸಬೇಕು. 488 00:46:33,750 --> 00:46:34,709 ನಮ್ಮ ಬಟ್ಟೆಗಳನ್ನೇ? 489 00:46:34,792 --> 00:46:35,960 ನಿನಗಿವು ಚೆನ್ನಾಗಿಲ್ಲವೇ? 490 00:46:36,044 --> 00:46:39,797 ವೇಗೇಟಿನಲ್ಲಿ ಸೈನಿಕರು ನಮಗಾಗಿ ಹುಡುಕುತ್ತಿದ್ದರು. ಈಗಲೂ ಹುಡುಕುತ್ತಿರುತ್ತಾರೆ. 491 00:46:39,881 --> 00:46:41,424 ಬಾ. ನನ್ನ ಹಿಂದೆ ಬಾ. 492 00:46:41,508 --> 00:46:44,427 ನನಗೆ ನಿನ್ನ ಆಜ್ಞೆ ಬೇಕಾಗಿಲ್ಲ, ರಾಜಕುಮಾರಿ. ನೀನು ಯಾರೆಂದೂ ಗೊತ್ತಿಲ್ಲ. 493 00:46:53,019 --> 00:46:54,145 ಸಹೋದರಿ. 494 00:46:55,104 --> 00:46:58,066 -ನೀನು ಮರಳಿರುವೆ. -ನಾನೊಬ್ಬಳೇ ಅಲ್ಲ ಅಂತ ಕಾಣುತ್ತೆ. 495 00:46:59,400 --> 00:47:02,987 ನಿಮ್ಮ ಅತ್ಯಂತ ದೀರ್ಘ ಮತ್ತು ಒಣ ಇತಿಹಾಸ ಆಗಲೇ ಮುಗಿಯಿತೇ? 496 00:47:03,655 --> 00:47:06,074 ನೀನು ಜುರೀನಿನಲ್ಲಿರುವೆ ಅಂದುಕೊಂಡಿದ್ದೆ, 497 00:47:06,157 --> 00:47:08,910 ಆವಾಹನೆ ಮಾಡುತ್ತಿದ್ದ ಅನುಮಾನದ ಮೇರೆಗೆ ಒಬ್ಬನನ್ನು ಹುಡುಕಿಕೊಂಡು. 498 00:47:08,993 --> 00:47:10,453 ಅದೃಷ್ಟವಶಾತ್, ಅದೇನಿರಲಿಲ್ಲ. 499 00:47:11,079 --> 00:47:15,375 ಆದರೆ ನಾನು ಸ್ವಲ್ಪ ಬಿಳಿಯ ಶತಾವರಿ ತಂದಿರುವೆ, 500 00:47:15,458 --> 00:47:16,793 ನಿಮಗೆ ಸ್ವಲ್ಪ ಬೇಕಿದ್ದರೆ. 501 00:47:16,876 --> 00:47:18,836 ಇದು ಆ ಹಳ್ಳಿಯ ವಿಶೇಷತೆ. ನೀವು ಕೇವಲ-- 502 00:47:18,920 --> 00:47:21,256 ಅಲ್ಲಷ್ಟೇ ಇವನ್ನು ಪಡೆಯಬಹುದು, ವರ್ಷದ ಈ ಕಾಲದಲ್ಲಿ ಮಾತ್ರ. 503 00:47:21,339 --> 00:47:22,173 ಹೌದು. 504 00:47:25,218 --> 00:47:28,137 ನಿನ್ನನ್ನು ಟವರಿಗೆ ಮರಳಿ ಕರೆತಂದದ್ದು ಏನಂತ ಹೇಳಿದೆ, ಸಹೋದರಿ? 505 00:47:28,221 --> 00:47:30,390 ಅದು ಬಿಳಿಯ ಶತಾವರಿ ಆಗಿರಲಿಕ್ಕಿಲ್ಲ, 506 00:47:30,473 --> 00:47:31,933 ನಿನಗೆ ಅದು ತಿನ್ನಲು ಇಷ್ಟ ಗೊತ್ತು. 507 00:47:32,016 --> 00:47:33,059 ಹೌದು. 508 00:47:33,142 --> 00:47:37,438 ಇಲ್ಲ, ನಮ್ಮ ಇಬ್ಬರು ನವಶಿಷ್ಯೆಯರನ್ನು ಭೇಟಿಯಾಗಬೇಕೆಂದಿರುವೆ. 509 00:47:37,522 --> 00:47:41,401 ತುಂಬಾ ಪ್ರಖರ ಶಕ್ತಿ ಇರುವಂಥ ಹುಡುಗಿಯರು, ನಾನು ಸರಿಯಾಗಿ ಕೇಳ್ಪಟ್ಟಿದ್ದರೆ. 510 00:47:41,484 --> 00:47:43,736 ಎಗ್ವೀನ್ ಅಲ್'ವೀರ್ ಮತ್ತು ನೈನೀವ್ ಅಲ್'ಮಯಿರಾ. 511 00:47:43,820 --> 00:47:46,155 ಹೌದು, ಅಸಾಮಾನ್ಯರು. 512 00:47:47,073 --> 00:47:48,366 ಅದರಲ್ಲೂ ಆ ವಿಸ್ಡಮ್. 513 00:47:49,200 --> 00:47:50,285 ಈಗಾಗಲೇ ಸ್ವೀಕೃತಳು. 514 00:47:51,244 --> 00:47:53,037 ದುರದೃಷ್ಟವಶಾತ್, ಅವರಿಲ್ಲಿಲ್ಲ. 515 00:47:53,121 --> 00:47:54,080 ಅದು ವಿಚಿತ್ರ. 516 00:47:55,164 --> 00:47:56,958 ನವಶಿಷ್ಯೆಯರನ್ನು ಅನುಮತಿಸಬಾರದು... 517 00:47:57,917 --> 00:48:01,588 ಅವರು ಕೇಮ್ಲಿನ್ನಿನಲ್ಲಿ ಒಂದು ನಾಮಕರಣ ಸಮಾರಂಭಕ್ಕೆ ಹೋಗಿದ್ದಾರೆ. 518 00:48:01,671 --> 00:48:03,214 ಕೇಮ್ಲಿನ್ನಿಗೆ ಹೋಗುತ್ತಿದ್ದ ರಾಜದೂತರ 519 00:48:03,298 --> 00:48:06,676 ಪಡೆಯ ಮೇಲೆ ಇಲ್ಲಿಂದ ದಕ್ಷಿಣದಲ್ಲಿ ದಾಳಿಯಾಯಿತು ಎಂದು ನಾನು ವಾಪಸ್ ಬರುವಾಗ ಕೇಳ್ಪಟ್ಟೆ. 520 00:48:07,051 --> 00:48:08,052 ಯಾರಿಂದ? 521 00:48:08,469 --> 00:48:12,599 ವಸತಿಗೃಹದಲ್ಲಿದ್ದ ಒಬ್ಬ ಸೈನಿಕ, ಡಕಾಯಿತರು ಅಥವಾ ವೈಟ್ಕ್ಲೋಕ್ಸ್ ಇರಬಹುದೆಂದ. 522 00:48:12,682 --> 00:48:14,392 ಆದರೆ ಹುಡುಗಿಯರು ಅವರೊಂದಿಗಿದ್ದಿದ್ದರೆ… 523 00:48:15,101 --> 00:48:17,103 ಬನ್ನಿ, ನಾವು ಈಗಲೇ ಕೀಪರ್ ಬಳಿ ಮಾತನಾಡಬೇಕು. 524 00:48:19,105 --> 00:48:21,316 ಆ ಹುಡುಗಿಯರ ಮೌಲ್ಯ ಚಿನ್ನಕ್ಕಿಂತಲೂ ಹೆಚ್ಚು. 525 00:48:22,525 --> 00:48:23,359 ಬೇಗ. 526 00:49:05,652 --> 00:49:08,321 ಕೆಳಗಡೆ ಕುದುರೆಗಳಿಗೆ ತಡಿ ಕಟ್ಟಲಾಗುತ್ತಿದೆ. 527 00:49:08,821 --> 00:49:10,323 ನೀನು ಮತ್ತು ಆ ಹುಡುಗ ಇಂಥ 528 00:49:10,406 --> 00:49:12,825 ಸ್ಥಿತಿಯಲ್ಲಿ ಹೇಗೆ ಸಿಲುಕಿದಿರಿ ಎಂದು ನಾನು ಕೇಳಿದರೆ? 529 00:49:18,706 --> 00:49:19,916 ತಿರುಗು. 530 00:49:25,505 --> 00:49:29,175 ನಿನಗೆ ಬೇಕಾದ ಉತ್ತರಗಳನ್ನು ರಾಂಡ್ನಿಂದ ಪಡೆಯಲು ನೀನು ಯತ್ನಿಸದಿರುವುದು ಆಶ್ಚರ್ಯವಾಗುತ್ತಿದೆ. 531 00:49:29,842 --> 00:49:32,470 ಬರ್ತಾನೆಸ್ ನನಗೆ ಸುಮ್ಮನೆ ಇರಲು ಸೂಚಿಸಿದ. 532 00:49:32,553 --> 00:49:34,347 ಹೌದು, ಅವನದು ಯಾವಾಗಲೂ ಸೌಮ್ಯ ಮನಸ್ಸೇ. 533 00:49:34,430 --> 00:49:35,515 ಹೌದು. 534 00:49:35,598 --> 00:49:39,268 ಹೇಗೋ ನನ್ನ ಮಗ ನಿನ್ನ ಮತ್ತು ನನ್ನಂತಲ್ಲದೆ ನಮ್ಮ ತಂದೆಯ ಗುಣಗಳನ್ನು ಪಡೆದ. 535 00:49:42,980 --> 00:49:46,192 ಆ ಹುಡುಗನ ಜೊತೆ ಏನು ನಡೆಯುತ್ತಿದೆ, ಅಥವಾ ನೀನಿಲ್ಲೇಕೆ ಬಂದಿರುವೆ ಎಂದು ನನಗೆ 536 00:49:46,275 --> 00:49:47,652 ಹೇಳುವುದಿಲ್ಲ ಎಂದು ಗೊತ್ತು. 537 00:49:48,569 --> 00:49:49,904 ಆದರೆ ನಿನ್ನನ್ನು ಬಲ್ಲೆ, ಮೊರೇನ್. 538 00:49:51,197 --> 00:49:54,450 ನಿನ್ನ ಇಡೀ ಜೀವನ, ನಿನಗೇನು ಮಾಡಬೇಕೆಂದು ಗೊತ್ತಿತ್ತು. 539 00:49:55,868 --> 00:49:57,620 ಆದರೂ ಈಗ, ನಾನು ನಿನ್ನನ್ನು ನೋಡಿದರೆ, 540 00:49:58,621 --> 00:50:02,458 ಮುಂದೇನು ಮಾಡಬೇಕೆಂದು ನಿನಗೇನೂ ಗೊತ್ತಿಲ್ಲ ಎಂದು ನನಗನಿಸುತ್ತದೆ, 541 00:50:03,251 --> 00:50:04,794 ಈ ಆಟಾಟೋಪ ಎಲ್ಲದರ ನಡುವಲ್ಲಿ. 542 00:50:16,764 --> 00:50:18,057 ರಾಂಡ್, ಅವನು... 543 00:50:22,520 --> 00:50:23,771 ಅವನಿಗೆ ರಕ್ಷಣೆ ಬೇಕು. 544 00:50:27,358 --> 00:50:30,653 ಅದನ್ನು ನಾನು ಕೊಡಬಲ್ಲೆನಾ ಗೊತ್ತಿಲ್ಲ, ಅದರಲ್ಲೂ ಅವನ ಹಿಂದೆ ಬಿದ್ದಿರುವವರಿಂದ. 545 00:50:31,946 --> 00:50:34,323 ಮತ್ತು ನಾನು ತಪ್ಪು ಆಯ್ಕೆ ಮಾಡಿದರೆ, 546 00:50:34,407 --> 00:50:36,951 ನೀನು, ಬರ್ತಾನೆಸ್, ಮತ್ತು ಈ ಇಡೀ ನಗರ 547 00:50:37,034 --> 00:50:38,619 ಈ ಕಾಳಗದ ನಡುವೆ ಸಿಲುಕಬೇಕಾಗಬಹುದು. 548 00:50:41,289 --> 00:50:42,457 ನೀನು ದೂರವೇ ಇರಬೇಕಿತ್ತು. 549 00:50:43,583 --> 00:50:44,500 ಗೊತ್ತು. 550 00:50:47,128 --> 00:50:47,962 ಗೊತ್ತು. 551 00:50:54,677 --> 00:50:55,928 ನಾನು ಚಿಕ್ಕವಳಿದ್ದಾಗ, 552 00:50:57,680 --> 00:51:00,892 ಒಂದು ಅತ್ಯುತ್ತಮ ಸಲಹೆಯನ್ನು ಪಡೆದೆ, 553 00:51:00,975 --> 00:51:04,645 ನನ್ನ ಬುದ್ಧಿವಂತ, ಹಿರಿಯ ಅಕ್ಕನಿಂದ. 554 00:51:05,855 --> 00:51:09,108 ನಿನಗೆ ಯಾವುದರಿಂದಾದರೂ ಬೇಸರ ಅಥವಾ ಭಯ ಉಂಟಾಗುತ್ತಿದ್ದರೆ, 555 00:51:10,109 --> 00:51:11,402 ನಿನ್ನನ್ನು ನೀನು 556 00:51:12,820 --> 00:51:15,531 ಒಂದು ಸರಳ ಪ್ರಶ್ನೆ ಕೇಳಿಕೊಳ್ಳಬೇಕು ಎಂದಿದ್ದಳು. 557 00:51:17,575 --> 00:51:18,493 "ಇದು ನಿಜವೇ?" 558 00:51:20,369 --> 00:51:23,539 ಇದು ನಿಜವೆಂದು ನಿನಗೆ ಯಾವುದೇ ಸಂದೇಹವಿಲ್ಲದೆ ಗೊತ್ತೇನು? 559 00:51:25,416 --> 00:51:29,253 ರಾಂಡ್ಗೆ ನಿನ್ನ ರಕ್ಷಣೆ ಬೇಕೆಂದು ನಿನಗೆ ಯಾವುದೇ ಸಂದೇಹವಿಲ್ಲದೆ ಗೊತ್ತೇನು? 560 00:51:43,643 --> 00:51:45,561 ಅದು ಅತ್ಯುತ್ತಮ ಸಲಹೆಯಾಗಿತ್ತು, ಅಲ್ಲವೇ? 561 00:51:47,063 --> 00:51:49,440 ಕಳೆದ 40 ವರ್ಷಗಳಿಂದ ನಾನದನ್ನು ಬಳಸುತ್ತಾ ಬಂದಿದ್ದೇನೆ. 562 00:51:59,700 --> 00:52:02,078 ನೀನು ಏನೇ ಅಪಾಯಗಳನ್ನು ಬಿಡುಗಡೆಗೊಳಿಸಿದ್ದರೂ, 563 00:52:03,037 --> 00:52:04,121 ಅಥವಾ ಪ್ರೋತ್ಸಾಹಿಸಿದ್ದರೂ, 564 00:52:05,832 --> 00:52:09,335 ನೀನು ಮರಳಿ ಬಂದಿರುವುದು ಬರ್ತಾನೆಸಿಗೆ ತಡೆಯಲಾರದಷ್ಟು ಸಂತೋಷವಾಗಿದೆ, 565 00:52:11,003 --> 00:52:12,713 ನೀನು ಇರಲಾಗದಿದ್ದರೂ ಸಹ. 566 00:52:12,797 --> 00:52:13,881 ಬಹುಶಃ ನಾನು ಇರಬಲ್ಲೆ. 567 00:52:35,403 --> 00:52:38,114 ನನ್ನ ಕನಸುಗಳಲ್ಲಿ ಮತ್ತೆ ಆಡುತ್ತಿರುವೆಯಾ ಲಾನ್ಫಿಯರ್? 568 00:52:46,747 --> 00:52:48,374 ನಿನಗೆ ಹೇಗೆ ಗೊತ್ತಾಯಿತು? 569 00:52:50,084 --> 00:52:52,128 ಸೂಕ್ಷ್ಮತೆ ಎಂದಿಗೂ ನಿನ್ನ ಶಕ್ತಿಯಾಗಿರಲಿಲ್ಲ. 570 00:52:55,381 --> 00:52:57,049 ಬೇರೊಬ್ಬರು ಮಲಗುವವರೆಗೂ 571 00:52:57,133 --> 00:52:59,969 ನಾನಿಲ್ಲಿ ಕಾದಿದ್ದು ಸ್ವಲ್ಪ ಸಮಯ ಕಳೆಯಬೇಕು. 572 00:53:00,803 --> 00:53:03,764 'ಪ್ರಪಂಚವನ್ನು ಒಡೆದರೆಂದು' ಜನ ನಮ್ಮನ್ನು ದೂಷಿಸುತ್ತಾರೆ 573 00:53:04,390 --> 00:53:06,350 ಆದರೆ ಬಿದ್ದ ಚೂರುಗಳನ್ನು ಎತ್ತಿಕೊಳ್ಳಲಿಲ್ಲ. 574 00:53:06,934 --> 00:53:08,477 ಮೂರು ಸಾವಿರ ವರ್ಷಗಳ ನಂತರ 575 00:53:09,687 --> 00:53:14,275 ಅವರು ಇನ್ನೂ ಕತ್ತಿಗಳು ಮತ್ತು ರಾಣಿಯರೊಂದಿಗೆ ಹೋರಾಡುತ್ತಿದ್ದಾರೆ. 576 00:53:16,444 --> 00:53:18,362 ಗತಕ್ಕಾಗಿ. 577 00:53:19,405 --> 00:53:20,698 ಭವಿಷ್ಯಕ್ಕಾಗಿ. 578 00:53:22,575 --> 00:53:24,327 ನಮ್ಮ ಮಹಾ ದೊರೆಯ ವಿಜಯದ ನಂತರ. 579 00:53:27,622 --> 00:53:32,460 ನಿನ್ನ ವಸತಿಗೃಹದ ಮಾಲೀಕತ್ವದ ನಾಟಕ ರಾಂಡಿಗೆ ಗೊತ್ತಾಯ್ತು ಅಂದುಕೊಳ್ಳುವೆ. 580 00:53:32,543 --> 00:53:33,920 ಅವನಿಗೆ ಹೇಗೆ ಹೇಳಿದೆ? 581 00:53:34,003 --> 00:53:35,129 ನಾನು ಹೇಳಲಿಲ್ಲ. 582 00:53:36,005 --> 00:53:37,006 ಮೊರೇನ್ ಹೇಳಿದಳು. 583 00:53:38,841 --> 00:53:41,302 ನೀನು ಅವಳನ್ನು ಏಕೆ ಬದುಕಲು ಬಿಟ್ಟೆ ಎಂಬುದೇ ಆಶ್ಚರ್ಯ. 584 00:53:42,803 --> 00:53:44,764 ಸತ್ತ ಅಯಿಸ್ ಸೆಡಾಯ್ ನಿಷ್ಪ್ರಯೋಜಕರು. 585 00:53:44,847 --> 00:53:47,058 ಮತ್ತೆ ಶಕ್ತಿ ಇಲ್ಲದವರು ಅಲ್ಲವೇನು? 586 00:53:47,141 --> 00:53:49,685 ಹತಾಶೆಯಿಂದ ಮನಸ್ಸು ಇನ್ನೂ ಹೆಚ್ಚು ಆಸಕ್ತಿಕರ… 587 00:53:51,103 --> 00:53:52,813 ಆಯ್ಕೆಗಳಿಗೆ ತೆರೆದುಕೊಳ್ಳುತ್ತದೆ. 588 00:53:52,897 --> 00:53:54,815 ನಿನಗಾದಂತೆಯೇ. 589 00:53:58,527 --> 00:54:00,363 ನಾನು ನಿನಗೆ ಮೋಸ ಮಾಡಬಹುದೆಂದು ಚಿಂತೆ ಇಲ್ಲವೇ? 590 00:54:05,826 --> 00:54:06,744 ಮಾಡುವೆಯಾ? 591 00:54:09,497 --> 00:54:10,456 ಖಂಡಿತವಾಗಿ. 592 00:54:20,007 --> 00:54:22,718 ಮಹಾ ದೊರೆ ಮೊದಲು ನನ್ನನ್ನೇಕೆ ಎಚ್ಚರಿಸಿದರೆಂದು ಗೊತ್ತೇನು? 593 00:54:23,010 --> 00:54:24,553 ನನ್ನ ಮಾತ್ರ ಏಕೆ ಮಾತನಾಡಿಸುತ್ತಾರೆಂದು? 594 00:54:26,597 --> 00:54:30,351 ಏಕೆಂದರೆ ಮೊಗೆಡೀನ್ ಹುಚ್ಚಿ, 595 00:54:30,434 --> 00:54:31,686 ಗ್ರಾಂಡಲ್ ಒಬ್ಬ ಮೂರ್ಖಳು, 596 00:54:31,769 --> 00:54:35,106 ಮತ್ತು ಒತ್ತಾಯದಡಿ ಇದ್ದರೂ ಹುಡುಗರಿಂದ ಯೋಜನೆ ಸಫಲವಾಗಲಿಲ್ಲವೆಂದೇ? 597 00:54:37,024 --> 00:54:40,403 ಯಾಕೆಂದರೆ ಒಂಟಿಯಾಗಿ, ಚೋಸನ್ಗಳೆಲ್ಲರ ಪೈಕಿ, 598 00:54:41,737 --> 00:54:43,572 ನನಗೆ ಡಾರ್ಕ್ ಮೇಲೆ ನಂಬಿಕೆ ಇದೆ. 599 00:54:44,699 --> 00:54:48,119 ಈ ಎಲ್ಲಾ ಯಾತನೆಯನ್ನು ತಡೆಯುವ ಒಂದೇ ಮಾರ್ಗವೆಂದರೆ 600 00:54:48,869 --> 00:54:50,705 ಚಕ್ರವನ್ನೇ ನಿಲ್ಲಿಸಿಬಿಡುವುದು. 601 00:54:52,289 --> 00:54:53,708 ಎಲ್ಲವನ್ನೂ ನಿಲ್ಲಿಸಿಬಿಡುವುದು. 602 00:54:56,002 --> 00:54:57,253 ನನ್ನನ್ನೇಕೆ ಬಿಡುಗಡೆಗೊಳಿಸಿದೆ? 603 00:55:01,048 --> 00:55:03,718 ಏಕೆಂದರೆ ನಿನಗೇನು ಬೇಕೆಂದು ನನಗೆ ಗೊತ್ತು. 604 00:55:07,596 --> 00:55:09,056 ನೀನು ಎಂದಿಗೂ ಕೋರುವಂಥದ್ದು. 605 00:55:11,308 --> 00:55:13,644 ಕನಸಿನ ಲೋಕದಲ್ಲಿ ನೀನು ಉತ್ತಮಗೊಳ್ಳುತ್ತಿರುವೆ. 606 00:55:13,728 --> 00:55:15,646 ನನ್ನ ಬಳಿ ಸಮಯವಲ್ಲದೆ ಬೇರೇನೂ ಇಲ್ಲ. 607 00:55:18,566 --> 00:55:22,028 ಪ್ರಸ್ತುತ ಡ್ರ್ಯಾಗನ್ ತನ್ನ ಪೂರ್ವವರ್ತಿಗೆ ಹೋಲಿಸಿದರೆ ಹೇಗಿದ್ದಾನೆ? 608 00:55:24,905 --> 00:55:27,074 ರಾಂಡ್ ಮೃದುವಾದವನು. 609 00:55:28,784 --> 00:55:32,413 ತನ್ನ ಜನ್ಮಸಿದ್ಧ ಹಕ್ಕಿನ ಬಗ್ಗೆ ಅವನಿಗೆ ಹೆಮ್ಮೆ ಇಲ್ಲ, ಸ್ವಂತ ಶಕ್ತಿಯನ್ನೇ ತಿರಸ್ಕರಿಸುವನು. 610 00:55:35,958 --> 00:55:37,460 ಮತ್ತೆ ಆ ಹುಡುಗಿಯರ ವಿಷಯ? 611 00:55:38,544 --> 00:55:41,797 ನಿನ್ನ ಪುಟ್ಟ ಅಯಿಸ್ ಸೆಡಾಯ್ ಅವರನ್ನು ದಾರಿಗೆ ತರುತ್ತಿದ್ದಾಳೆಯೇ? 612 00:55:41,881 --> 00:55:43,507 ಈಗಷ್ಟೇ ಅವರನ್ನು ಪಡೆದಿರುವೆನು. 613 00:55:46,969 --> 00:55:50,389 ಆದರೆ ಒಬ್ಬಳಿಗೆ ಅಧಿಕಾರದಾಸೆ, ಇನ್ನೊಬ್ಬಳಿಗೆ ಅದರ ಭಯ. 614 00:55:50,848 --> 00:55:52,224 ಮತ್ತೆ ಹುಡುಗರು? 615 00:55:52,308 --> 00:55:54,393 ಅಂದರೆ, ಮ್ಯಾಟ್ ನನಗಾಗಿ ಹುಟ್ಟಿದವನು, 616 00:55:54,894 --> 00:55:57,730 ಮತ್ತು ಪೆರಿನ್ ಇಷ್ಟರಲ್ಲೇ ಮನುಷ್ಯನಿಗಿಂತ ಹೆಚ್ಚು ತೋಳವಾಗಲಿದ್ದಾನೆ. 617 00:56:06,906 --> 00:56:10,159 ತನ್ನ ಸ್ನೇಹಿತರನ್ನೆಲ್ಲಾ ಕಳೆದುಕೊಂಡ ಮೇಲೆ ರಾಂಡ್ ಏನು ಮಾಡಬಹುದು ಅನ್ಸುತ್ತೆ? 618 00:56:16,499 --> 00:56:17,541 ಹುಚ್ಚನಾಗುತ್ತಾನೆ. 619 00:56:24,173 --> 00:56:25,299 ನನ್ನೊಡೆಯ? 620 00:56:26,425 --> 00:56:27,635 ನಿನಗೆ ಹೊರಡುವ ಸಮಯವಾಯಿತು. 621 00:56:28,761 --> 00:56:29,762 ನನ್ನೊಡೆಯ. 622 00:56:32,389 --> 00:56:33,682 ಕ್ಷಮಿಸಿ, ನನ್ನೊಡೆಯ. 623 00:56:33,766 --> 00:56:36,435 ಹೈ ಲಾರ್ಡ್ ಟುರಾಕ್ ನಿಮ್ಮನ್ನು ಕಾಣಬೇಕೆಂದಿದ್ದಾರೆ. 624 00:56:40,106 --> 00:56:41,982 ನೀನು ದಿ ಬ್ಲಡ್ಡಿನವನಲ್ಲ. 625 00:56:42,066 --> 00:56:43,067 ಅಲ್ಲ. 626 00:56:44,401 --> 00:56:46,195 ನಮ್ಮ ನಾಡಿನವನೂ ಅಲ್ಲ. 627 00:56:46,278 --> 00:56:48,322 ನೀನು ಎಲ್ಲಿಂದ ಬಂದಿರುವೆ? 628 00:56:49,532 --> 00:56:52,576 ನಮ್ಮ ನೆಲದ ಮೇಲೆ ಇದುವರೆಗೂ ಯಾವ ವೆಸ್ಟ್ಲ್ಯಾಂಡರ್ ಕೂಡ ಕಾಲಿಟ್ಟಿಲ್ಲ. 629 00:56:53,452 --> 00:56:55,204 ನಾನು ಮನೆಯನ್ನು ಬಿಟ್ಟು ಬಂದು ಎಷ್ಟೋ ಕಾಲವಾಗಿ 630 00:56:55,996 --> 00:56:57,206 ಅದನ್ನು ಮರೆತೇ ಬಿಟ್ಟಿದ್ದೇನೆ. 631 00:56:57,289 --> 00:57:00,668 ಆದರೂ, ನೀನು ನಮ್ಮ ಸಮಾಜದಲ್ಲಿ ಬೇಗನೆ ಹೊಂದಿಕೊಂಡಿರುವೆ. 632 00:57:00,751 --> 00:57:04,296 ಸುರೋತಳ ನ್ಯಾಯಸ್ಥಾನದಲ್ಲಿ ಒಮ್ಮೆಲೇ ಪ್ರತ್ಯಕ್ಷವಾಗಿರುವೆ. 633 00:57:04,380 --> 00:57:06,298 ನಮ್ಮ ಪುರಾತನ ತಾಯ್ನಾಡಿಗೆ ಮರಳುವಿಕೆಯನ್ನು 634 00:57:06,382 --> 00:57:08,801 ಶುರು ಮಾಡಲು ಅನುವುಗೊಳಿಸಿದ 635 00:57:08,884 --> 00:57:13,222 ಶಕುನಗಳನ್ನು ಮೊದಲು ಕಂಡವನು ನೀನೇ ಅಲ್ಲವೇನು? 636 00:57:13,305 --> 00:57:16,892 ನನ್ನೊಡೆಯ, ಅಂಥ ವಿಚಾರಗಳನ್ನು ಕಾಣುವಷ್ಟು ದೊಡ್ಡವಲ್ಲ ನನ್ನ ಕಣ್ಣುಗಳು. 637 00:57:18,102 --> 00:57:21,438 ನಮ್ಮ ಮಹಾರಾಣಿ ಮಾತ್ರ ತನ್ನ ಕೋರ್ಟ್ ಆಫ್ ದಿ ನೈನ್ ಮೂನ್ಸಲ್ಲಿ 638 00:57:21,522 --> 00:57:24,233 ಶಕುನಗಳನ್ನು ಕಂಡು ಏನೆಂದು ಅರ್ಥೈಸಿಕೊಳ್ಳಬಲ್ಲರು. 639 00:57:28,279 --> 00:57:29,196 ಇದರಿಂದ... 640 00:57:30,781 --> 00:57:32,408 ನೀನು ನನ್ನ ಗಮನವನ್ನು ಸೆಳೆದಿರುವೆ. 641 00:57:35,995 --> 00:57:37,788 ನೀನು ನನ್ನಿಂದ ಒಂದನ್ನು ಕೇಳಬಹುದು. 642 00:57:40,583 --> 00:57:42,626 ಹೈ ಲೇಡಿ ಸುರೋತ್ ನಿಮಗಾಗಿ ಉಡುಗೊರೆ ಕಳಿಸಿದ್ದಾರೆ. 643 00:57:43,502 --> 00:57:45,921 ನೀವು ಒಳ್ಳೆ ನಂಬಿಕೆಯಿಂದ ಸ್ವೀಕರಿಸಿರೆಂದು ಕೋರುವೆ. 644 00:58:05,149 --> 00:58:06,317 ಎಲೈನ್? 645 00:58:19,830 --> 00:58:20,706 ಯಾರು ನೀವು? 646 00:58:20,789 --> 00:58:23,209 ರೈಮಾ, ಯೆಲ್ಲೋ ಆಜಾದವಳು. 647 00:58:28,964 --> 00:58:31,508 ನನ್ನ ವಾರ್ಡರ್ ನಿಮ್ಮನ್ನು ಸರಿಯಾದ ಸಮಯದಲ್ಲೇ ಕಂಡ. 648 00:58:31,592 --> 00:58:34,386 ಹೈ ಲೇಡಿ ಸುರೋತ್ ನಿಮ್ಮ ವರ್ಣನೆಗಳನ್ನು ಪ್ರಕಟಿಸಿದ್ದಾರೆ, 649 00:58:34,470 --> 00:58:36,847 ಈ ನಗರದಲ್ಲಿ ಪ್ರತಿಯೊಬ್ಬರೂ ನಿಮ್ಮನ್ನು ಹುಡುಕುತ್ತಿದ್ದಾರೆ. 650 00:58:38,098 --> 00:58:39,850 ಆವಾಹನೆ ಮಾಡಬಲ್ಲ ಮಹಿಳೆಯರಿಗೆ 651 00:58:39,934 --> 00:58:42,853 ಈ ಶಾಂಚಾನರು ಏನು ಮಾಡ್ತಾರೆಂದು ನಿಮಗೆ ಗೊತ್ತಿದೆಯೇ? 652 00:59:04,708 --> 00:59:06,669 ನಿಮಗೊಂದು ಉಡುಗೊರೆ ತಂದಿರುವೆ, ನನ್ನೊಡೆಯ. 653 00:59:12,591 --> 00:59:17,137 ವೈಟ್ ಟವರಿನಲ್ಲಿ ತರಬೇತಿ ಪಡೆಯುತ್ತಿದ್ದ ನವಶಿಷ್ಯೆ ಇವಳು. 654 00:59:17,221 --> 00:59:19,682 ನಾವು ಎಷ್ಟೋ ಸಮಯದಿಂದ ನೋಡಿರದ 655 00:59:19,765 --> 00:59:24,019 ಯಾವುದೇ ದಮಾನೇಗಿಂತ ಹೆಚ್ಚು ಶಕ್ತಿವಂತೆ ಇವಳು ಎಂದು ನನ್ನ ಸುಲ್'ದಮ್ ಹೇಳಿದ್ದಾರೆ. 656 00:59:27,898 --> 00:59:29,191 ಕೊರಳಪಟ್ಟಿ ಹಾಕಿ ಅವಳಿಗೆ. 657 00:59:29,275 --> 00:59:30,401 ಅವಳನ್ನು ಪಳಗಿಸಬೇಕಿದೆ. 658 01:00:09,648 --> 01:00:10,482 ಏನಾಯ್ತು? 659 01:00:10,566 --> 01:00:12,860 ನಿನಗೆ ಖಚಿತವಾಗಿ ನಿದ್ದೆ ಮಾಡುವುದು ಬೇಡವೇ? 660 01:00:13,861 --> 01:00:14,903 ಹೊರಡುವ ಸಮಯವೇನು? 661 01:00:15,404 --> 01:00:16,572 ಇಲ್ಲ, ನಿಜವಾಗಿ. 662 01:00:17,990 --> 01:00:18,991 ನಾವು ಇರಲಿದ್ದೇವೆ. 663 01:00:22,619 --> 01:00:24,997 -ನಾನು ಮಲಗಿದರೆ ಕಂಡುಹಿಡಿಯುತ್ತಾಳೆ ಎಂದೆ. -ಹೌದು. 664 01:00:26,165 --> 01:00:27,041 ಕಂಡುಹಿಡಿಯುತ್ತಾಳೆ. 665 01:00:29,001 --> 01:00:29,960 ನಿನಗದು ಬೇಕು. 666 01:00:30,044 --> 01:00:32,379 ಅವಳು ನಿನ್ನೊಂದಿಗೆ ಎರಡು, ಮೂರು ತಿಂಗಳಿದ್ದಳೇನು? 667 01:00:33,505 --> 01:00:36,216 ನಿನಗೆ ತೊಂದರೆ ಕೊಡುವವಳಿದ್ದರೆ, ಬೇಕಾದಷ್ಟು ಅವಕಾಶವಿತ್ತು. 668 01:00:37,009 --> 01:00:38,010 ಆದರೆ ಅವಳು ಮಾಡಿಲ್ಲ. 669 01:00:38,093 --> 01:00:39,928 -ಅವಳಿಗೇನು ಬೇಕು? -ನನಗೆ ಗೊತ್ತಿಲ್ಲ. 670 01:00:43,515 --> 01:00:46,435 ಕೆಲದಿನಗಳ ಹಿಂದೆ ಕೇಳಿದ್ದರೆ, ಅವಳಿಗೆ ನಾನು ಬೇಕು ಎಂದು ಹೇಳುತ್ತಿದ್ದೆ. 671 01:00:47,644 --> 01:00:48,645 ನನ್ನೊಂದಿಗೆ ಇರಬೇಕೆಂದು. 672 01:00:49,772 --> 01:00:51,607 ಒಡೆಯುವಿಕೆಯ ಮುಂಚಿನ ಕಥೆಗಳು ಅಸ್ಪಷ್ಟವಾಗಿವೆ, 673 01:00:52,191 --> 01:00:53,609 ಏಕೆಂದರೆ ಎಷ್ಟೊಂದು ಕಳೆದುಹೋಗಿವೆ, 674 01:00:53,692 --> 01:00:57,905 ಆದರೆ ಪ್ರತಿಯೊಂದೂ ಲಾನ್ಫಿಯರ್ ಡ್ರ್ಯಾಗನ್ ರೀಬಾರ್ನನ್ನು ಪ್ರೀತಿಸುತ್ತಿದ್ದಳು ಎನ್ನುತ್ತದೆ. 675 01:00:58,781 --> 01:01:00,157 ಆತ ಅವಳನ್ನು ಪ್ರೀತಿಸುತ್ತಿದ್ದನೆಂದು, 676 01:01:00,240 --> 01:01:01,575 ತನ್ನ ಪತ್ನಿಯ ಭೇಟಿಯ ಮುನ್ನ. 677 01:01:02,785 --> 01:01:04,119 ಆದರೆ ಅವಳೊಬ್ಬ ಡಾರ್ಕ್ಫ್ರೆಂಡ್. 678 01:01:04,203 --> 01:01:05,954 ಅವನು ಅವಳ ಮನಸ್ಸನ್ನು ಒಡೆದ ನಂತರವೇ. 679 01:01:07,414 --> 01:01:10,125 ಅವನನ್ನು ಮರಳಿ ಪಡೆಯಲು ಡಾರ್ಕ್ ಬಳಿ ಪ್ರಮಾಣವಚನ ಸ್ವೀಕರಿಸಿದಳು. 680 01:01:16,215 --> 01:01:18,967 ಆಮೇಲೇನು? ನಿನಗವಳು ಪಡೆದುಕೊಂಡೆ ಅಂದುಕೊಳ್ಳಬೇಕೇನು? 681 01:01:19,051 --> 01:01:21,136 ಫಾರ್ಸೇಕನ್ಳನ್ನು ಪ್ರೀತಿಸುವಂತೆ ನಾನು ನಟಿಸಬೇಕೇ? 682 01:01:21,220 --> 01:01:23,263 ಲಾನ್ಫಿಯರ್ ಇಷಮೆಲ್ ಜೊತೆ ಕಾರ್ಯನಿರ್ವಹಿಸುತ್ತಿದ್ದಾಳೆ. 683 01:01:23,347 --> 01:01:26,183 ಅವನಿಗೆ ಏನು ಬೇಕೆಂದು ತಿಳಿಯಲು ನಮಗೆ ಇದೊಂದೇ ಅವಕಾಶ ಇರಬಹುದು. 684 01:01:26,266 --> 01:01:29,144 -ಅವಳಿಗೆ ತಕ್ಷಣ ಗೊತ್ತಾಗಿಬಿಡುತ್ತದೆ. -ಇರಬಹುದು. ಅವಳಿಗೆ ಗೊತ್ತಾಗಬಹುದು. 685 01:01:30,979 --> 01:01:31,980 ನನಗ್ಗೊತ್ತಿಲ್ಲ. 686 01:01:35,484 --> 01:01:39,113 ಆದರೆ, ಅವಳೇನೇ ಆಗಿದ್ದರೂ, ನಮ್ಮಿಬ್ಬರ ಮಧ್ಯೆ ನಡೆದದ್ದು ಸುಳ್ಳು ಎಂದು ನನಗನಿಸುವುದಿಲ್ಲ. 687 01:01:41,865 --> 01:01:43,367 ಇದು ನಿನ್ನ ಆಯ್ಕೆ, ರಾಂಡ್. 688 01:01:45,661 --> 01:01:46,787 ಈ ಬಾರಿ ನಿಜವಾಗಿಯೂ ಹೇಳುವೆ. 689 01:01:58,590 --> 01:01:59,633 ನಾನಿಲ್ಲೇ ಇರುತ್ತೇನೆ. 690 01:02:03,595 --> 01:02:05,431 ಅವಳು ನಿನಗೆ ತೊಂದರೆ ಕೊಡುವಂತೆ ಭಾಸವಾದರೆ, 691 01:02:06,932 --> 01:02:07,933 ನಿನ್ನನ್ನು ಎಚ್ಚರಿಸುವೆ. 692 01:02:09,268 --> 01:02:11,854 ಮತ್ತೆ ನೀನು ನಿದ್ದೆ ಮಾಡಿದರೆ? ನಿನಗೂ ಸುಸ್ತಾಗಿದೆ. 693 01:02:11,937 --> 01:02:13,313 ನನಗೆ ಆ ಆಯ್ಕೆ ಇಲ್ಲ. 694 01:02:56,106 --> 01:02:57,316 ಕೊನೆಗೂ. 695 01:05:05,861 --> 01:05:07,863 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 696 01:05:07,946 --> 01:05:09,948 ಸೃಜನಶೀಲ ಮೇಲ್ವಿಚಾರಕರು ವಿವೇಕ್