1 00:00:06,132 --> 00:00:07,258 ನೈನೀವ್ ಎಲ್ಲಿ? 2 00:00:07,383 --> 00:00:09,301 ಆರ್ಚಸ್ ಒಳಗಡೆ ಹೋದವಳು ಹೊರಗೆ ಬರಲೇ ಇಲ್ಲ. 3 00:00:09,677 --> 00:00:12,304 ಅಮ್ಮ? ಏನದು? 4 00:00:13,848 --> 00:00:15,057 ಬಾ. ನಾವು ಹೊರಡಬೇಕು. 5 00:00:20,229 --> 00:00:24,692 ಒಬ್ಬ ವಾರ್ಡರ್ ತನ್ನ ಅಯಿಸ್ ಸೆಡಾಯಿಯನ್ನು ಕಳೆದುಕೊಂಡಾಗ, ಅವಳ ಸಾವನ್ನು ನುಂಗಿದಂತಿರುತ್ತದೆ. 6 00:00:24,775 --> 00:00:26,902 -ನಾನೀಗಲೂ ನಿನ್ನ ವಾರ್ಡರ್. -ಇಲ್ಲ, ನೀನು ನಿರಾಸೆ ಮಾಡಿದೆ. 7 00:00:27,611 --> 00:00:29,405 ಅಲನಾ ನಿನ್ನನ್ನು ಟವರಿಗೆ ಕರೆದೊಯ್ಯುತ್ತಾಳೆ. 8 00:00:30,489 --> 00:00:33,242 ನಿನ್ನನ್ನು ನಾನು ನೋಡಿದಾಗ ಏನೆಂದು ನಿನಗೆ ನಿಜವಾಗಲೂ ತಿಳಿಯಬೇಕಿಲ್ಲವೇ? 9 00:00:33,325 --> 00:00:34,910 ಖಂಡಿತ ಬೇಡ. 10 00:00:34,994 --> 00:00:37,204 -ಮ್ಯಾಟ್, ನನ್ನೊಂದಿಗೆ ಬರುತ್ತಿದ್ದಾನೆ. -ದಾರಿ ಗೊತ್ತಾ? 11 00:00:38,080 --> 00:00:39,248 ನನಗೆ ನಿರಾಸೆ ಮಾಡಬೇಡ. 12 00:00:39,331 --> 00:00:43,085 ಲೇಡಿ ಅನ್ವೇರ್. ಆಕೆ ನಿನ್ನನ್ನೇಕೆ ಮಾತನಾಡಿಸಿದಳು ಎಂದು ನಿನಗೆ ಅರ್ಥವಾಗಲಿಲ್ಲವೇ? 13 00:00:43,169 --> 00:00:45,045 ನನಗೆ ಸಹಾಯ ಮಾಡಲು ನಿನ್ನ ಕಾರಣ ಏನು? 14 00:00:45,129 --> 00:00:46,338 ನೆನಪಿಸಿಕೊಳ್ಳಲು ನನಗೆ ನೆರವಾಗು… 15 00:00:47,381 --> 00:00:48,674 ನಿನಗೆ ಮರೆಯಲು ನಾನು ನೆರವಾಗುವೆ. 16 00:00:50,801 --> 00:00:52,052 ಹೋಗೋಣ. 17 00:00:52,136 --> 00:00:53,888 ಓಡು. ಎಲ್ಲಿ ಎಂದು ಅವನು ತೋರಿಸುತ್ತಾನೆ. 18 00:00:54,597 --> 00:00:58,017 ಗಡಿಯಾರದ ಮೇಲೆ ಕವನ ಬರೆದಿತ್ತಂತೆ. ಹಳೆಯ ಭಾಷೆಯಲ್ಲಿ ಬರೆದಿದ್ದರಂತೆ. 19 00:00:58,100 --> 00:01:01,812 ನಾವು ಡಾರ್ಕ್ ಒನ್ನನ್ನು ಸೋಲಿಸಲಿಲ್ಲ, ಆತನ ಬಲಶಾಲಿ ಸೇನಾಧಿಪತಿಯನ್ನು ಬಿಡುಗಡೆಗೊಳಿಸಿದೆವು. 20 00:01:01,896 --> 00:01:03,898 ಇಷಮೆಲ್ ಫಾರ್ಸೇಕನ್ರನ್ನು ಎಚ್ಚರಿಸುತ್ತಿರಬಹುದು. 21 00:02:45,958 --> 00:02:48,543 ರಕ್ತವೇ ರಕ್ತವನ್ನು ಸೇವಿಸುತ್ತದೆ. 22 00:02:52,464 --> 00:02:54,925 ರಕ್ತವೇ ರಕ್ತವನ್ನು ಕೋರುತ್ತದೆ. 23 00:02:56,385 --> 00:02:59,930 ರಕ್ತ ಇದೆ, ರಕ್ತ ಇತ್ತು… 24 00:03:03,475 --> 00:03:07,146 ಮತ್ತು ರಕ್ತ ಎಂದೆಂದಿಗೂ ಇರುತ್ತದೆ. 25 00:03:14,028 --> 00:03:18,699 ದಿ ವೀಲ್ ಆಫ್ ಟೈಮ್ 26 00:04:26,684 --> 00:04:28,227 ಒಡತಿ, ಯಾರೋ... 27 00:04:29,269 --> 00:04:30,938 ಯಾರೋ ಬಾಗಿಲ ಬಳಿ ಬಂದಿದ್ದಾರೆ. 28 00:04:31,021 --> 00:04:32,606 ಭೇಟಿಗಾರರಿಗೆ ಇದು ಮುಂಚೆಯೇ. 29 00:04:34,775 --> 00:04:36,026 ಯಾರು? 30 00:04:36,110 --> 00:04:37,611 ಅದು... 31 00:04:39,947 --> 00:04:42,908 ಅವರು ನಿಮ್ಮ ಅಕ್ಕ. 32 00:04:51,375 --> 00:04:53,752 ಹೌದು, ನನ್ನೊಡತಿ, ನನ್ನ… 33 00:04:53,836 --> 00:04:56,046 ನೀವು ಹೀಗೆ ಒಳಗೆ ಬನ್ನಿ. 34 00:05:10,185 --> 00:05:11,854 ಚೆನ್ನಾಗಿ ಕಾಣುತ್ತೀಯ, ತಂಗಿ. 35 00:05:11,937 --> 00:05:12,938 ನೀನೂ ಸಹ. 36 00:05:15,190 --> 00:05:18,277 -ದಯವಿಟ್ಟು ಕೂರು. ನಮಗೆ ಗೊತ್ತಿರಲಿಲ್ಲ-- -ಚಹಾಗಾಗಿ ನಿನಗೆ ತೊಂದರೆ ಕೊಡಲ್ಲ. 37 00:05:18,360 --> 00:05:21,989 ಕುದುರೆಯನ್ನು ಲಾಯದಲ್ಲಿ ಕಟ್ಟಿ ಬಂದೆ, ನನ್ನ ಹಳೆಯ ಕೋಣೆ ತೆರೆದಿದ್ದರೆ ಬಳಸುವೆ. 38 00:05:22,072 --> 00:05:24,199 ಆದರೆ ಇಲ್ಲಿ ನಗರದಲ್ಲಿ ಯಾರಿಗೂ ಗೊತ್ತಾಗದಂತೆ ಇರಬಯಸುವೆ. 39 00:05:24,283 --> 00:05:25,701 ಖಂಡಿತ, ನಾವು-- 40 00:05:25,784 --> 00:05:29,121 ಜೋನಸ್! ಕೆಳಮಹಡಿಯಿಂದ ಒಂದು ಗೆಲ್ಡನಿನ್ ಕೆಂಪನ್ನು ತಾ. 41 00:05:29,204 --> 00:05:30,039 ಅಪ್ಪಣೆ, ನನ್ನೊಡತಿ. 42 00:05:30,122 --> 00:05:33,417 -ಮತ್ತು ನನಗೆ ಇಲ್ಲಿಂದ ಉಡುಪು ತರಿಸು-- -ದಶಕಗಳೇ ಕಳೆದಿವೆ, ಮೊರೇನ್! 43 00:05:33,500 --> 00:05:34,543 ಕೂರು! 44 00:05:40,883 --> 00:05:41,842 ಸ್ವಲ್ಪ ಚಹಾ ಕುಡಿ. 45 00:05:43,761 --> 00:05:44,720 ಊಟ ಮಾಡುವೆ. 46 00:05:46,055 --> 00:05:48,015 ಈ ಬೆಳಿಗ್ಗೆ ನಾನು ಯಾರನ್ನೋ ಭೇಟಿಯಾಗುವುದಿದೆ. 47 00:06:01,737 --> 00:06:05,908 ನನ್ನ ವಸತಿಗೃಹವನ್ನು ನೀನು ಕಟ್ಟಿಕೊಟ್ಟರೆ, ನಿನ್ನ ವಸತಿ ಮತ್ತು ಕೋಣೆಗೆ ಹಣ ಪಡೆಯಲಾರೆ. 48 00:06:05,991 --> 00:06:07,284 ಇದು ಸಣ್ಣ ಸಹಾಯವಷ್ಟೇ. 49 00:06:08,911 --> 00:06:11,205 -ದಯವಿಟ್ಟು ಕ್ಷಮಿಸು. -ಅದು ನಿನ್ನ ತಪ್ಪಲ್ಲ. 50 00:06:12,164 --> 00:06:14,291 ಮಲಗುವ ಮುಂಚೆ ನಾನು ಮೇಣದಬತ್ತಿಗಳನ್ನು ಆರಿಸಲಿಲ್ಲ. 51 00:06:16,752 --> 00:06:17,961 ಅದರಿಂದ ಒಳ್ಳೆಯದೇ ಆಯ್ತೇನೋ. 52 00:06:19,088 --> 00:06:23,008 ಈ ಮಹಡಿಯನ್ನು ಮರುನಿರ್ಮಿಸಲು ಕೆಲವರಿಗೊಪ್ಪಿಸಿದೆ, ಆದರೆ ಅದಕ್ಕೆ ವಾರವೇ ಹಿಡಿಯಬಹುದು. 53 00:06:23,092 --> 00:06:26,970 ಅದರ ಅರ್ಥ, ಎಷ್ಟೋ ಕಾಲದ ಬಳಿಕ ಮೊದಲ ಸಲ ನನಗೆ ಹೊರಹೋಗಲು ಅವಕಾಶ ದೊರೆತಿದೆ. 54 00:06:27,054 --> 00:06:28,263 ಎಲ್ಲಿಗೆ? 55 00:06:28,347 --> 00:06:30,933 ಕಿನ್ಸ್ಲೇಯರ್'ಸ್ ಡ್ಯಾಗರ್ ಬಳಿ ನನ್ನ ಕುಟುಂಬದ ಗುಡಿಸಲಿದೆ. 56 00:06:31,475 --> 00:06:33,393 ಚಿಕ್ಕವಳಿದ್ದಾಗ ಯಾವಾಗಲೂ ಅಲ್ಲಿಗೆ ಹೋಗುತ್ತಿದ್ದೆ, 57 00:06:34,311 --> 00:06:36,605 ಆದರೆ ನಾನು ವಸತಿಗೃಹ ಪಡೆದ ನಂತರ… 58 00:06:40,400 --> 00:06:41,985 ನೀನೂ ಬರುವೆಯಾ? 59 00:06:42,903 --> 00:06:44,071 ಸೆಲೀನ್, ನನ್ನಿಂದಾಗದು. 60 00:06:45,614 --> 00:06:46,907 ಕ್ಷಮಿಸು. 61 00:06:46,990 --> 00:06:50,077 ಅದನ್ನು ಇನ್ನೊಂದು ಬಾರಿ ಹೇಳಿದರೆ ಅದಕ್ಕೆ ಅರ್ಥವೇ ಇಲ್ಲದಂತಾಗುತ್ತದೆ. 62 00:06:50,159 --> 00:06:52,579 ಸದ್ಯಕ್ಕೆ ನಾನು ಒಳ್ಳೆಯ ಸಹವಾಸ ಅಲ್ಲ. 63 00:06:52,663 --> 00:06:53,664 ಯಾರಿಗೇ ಆದರೂ. 64 00:06:55,082 --> 00:06:58,001 ಸರಿ, ಬೆಂಕಿ ಮಿಕ್ಕ ಬಾಡಿಗೆದಾರರನ್ನು ಓಡಿಸಿತು. 65 00:06:58,085 --> 00:07:00,087 ಇಡೀ ಜಾಗವೇ ನಿನಗಿರುತ್ತದೆ. 66 00:07:02,005 --> 00:07:04,633 ಅಂದರೆ, ನಿನಗೆ ನಿಜಕ್ಕೂ ಒಂಟಿಯಾಗಿರಬೇಕೆನಿಸಿದರೆ. 67 00:07:26,321 --> 00:07:27,322 ಅಮ್ಮ! 68 00:07:27,906 --> 00:07:29,366 ಏನದು? 69 00:07:29,616 --> 00:07:31,368 ಬಾ, ಚಿನ್ನ. ನಾವು ಹೊರಡಬೇಕು. 70 00:07:31,451 --> 00:07:32,494 ನನಗೆ ಭಯವಾಗುತ್ತಿದೆ. 71 00:08:00,272 --> 00:08:01,940 ನಿನಗಾಗಿ ಜೇನಿನ ರೊಟ್ಟಿಗಳನ್ನು ಉಳಿಸಿದೆ. 72 00:08:03,400 --> 00:08:04,359 ಧನ್ಯವಾದ. 73 00:08:05,152 --> 00:08:06,778 ನೀನು ಹೇಗಿರುವೆ? 74 00:08:08,989 --> 00:08:10,073 ನಾನು ನಿದ್ದೆ ಮಾಡಲಿಲ್ಲ. 75 00:08:10,157 --> 00:08:12,075 ನಾನೂ ಮಾಡೆನು, ಅಂದುಕೊಳ್ಳುವೆ. 76 00:08:14,161 --> 00:08:15,621 ಹೇಗನಿಸುತ್ತದೆ? 77 00:08:17,206 --> 00:08:18,290 ನಾನು ಹೊರಡಬೇಕು. 78 00:08:19,582 --> 00:08:21,585 ಖಂಡಿತ. ನಾನು ನಿನ್ನನ್ನು ಇರಿಸಿಕೊಳ್ಳುವುದಿಲ್ಲ. 79 00:08:25,464 --> 00:08:27,549 ನಿನಗೇನಾದರೂ ಬೇಕಾದರೆ ನಾನಿಲ್ಲಿರುವೆ. 80 00:08:33,889 --> 00:08:35,849 ನೀನು ಮರಳಿ ಬಂದಿದ್ದು ತುಂಬಾ ಒಳ್ಳೆಯದಾಯಿತು. 81 00:08:37,392 --> 00:08:38,393 ಈಗ ಪರವಾಗಿಲ್ಲ. 82 00:08:39,686 --> 00:08:40,854 ಅದು ನಿಜವಾಗಿರಲಿಲ್ಲ. 83 00:08:42,272 --> 00:08:43,899 ಅದರಲ್ಲಿ ಯಾವುದೂ ನಿಜವಲ್ಲ. 84 00:09:23,021 --> 00:09:24,940 -ಇನ್ನೊಂದು ಕತ್ತಿಯ ಪಾಠ. -ದಯವಿಟ್ಟು. 85 00:09:25,023 --> 00:09:28,610 ನಾನೇನೋ ಹೇಳಿಕೊಡುವೆ, ಆದರೆ ನೀವು ಐಹ್ವೊನನ್ನು ಒಪ್ಪಿಸಬೇಕು. 86 00:09:28,694 --> 00:09:31,989 -ದಯವಿಟ್ಟು, ದಯವಿಟ್ಟು. -ದಯವಿಟ್ಟು, ದಯವಿಟ್ಟು, ದಯವಿಟ್ಟು. 87 00:09:32,072 --> 00:09:33,865 ನನ್ನ ಊಟದ ಬಳಿಕ. 88 00:09:39,121 --> 00:09:40,497 ನಿನಗೆ ಹೇಳಿದೆನಲ್ವಾ? 89 00:09:45,252 --> 00:09:48,839 ಯಾರಾದರೂ ಉಪ್ಪಿನ ಬಗ್ಗೆ ಏನಾದರೂ ಮಾತನಾಡಿದರೆ, ನಿಮಗೆ ಬೆಂಕಿ ಹಚ್ಚಿಬಿಡುವೆ. 90 00:09:50,674 --> 00:09:53,302 -ನನಗೆ ಬೇಡ, ಧನ್ಯವಾದ. -ಬೆಂಕಿಯ ಬಗ್ಗೆ ಹೇಳಿದ್ದು ಕೇಳಿದೆಯಲ್ಲ? 91 00:09:53,385 --> 00:09:56,805 -ಬೆಳಗಿನ ಉಪಹಾರದಿಂದ ನನ್ನ ಹೊಟ್ಟೆ ತುಂಬಿದೆ. -ಅದನ್ನು ತಿಂದು ಕನಿಷ್ಠ ಎರಡು ಗಂಟೆಗಳಾದವು. 92 00:09:58,932 --> 00:10:00,559 ನೀವಿಬ್ರೂ ಯಾಕೆ ನಗುತ್ತಿದ್ದೀರಿ? 93 00:10:00,642 --> 00:10:03,437 ನೀನೊಬ್ಬ ಹೊಸ ಗಂಡಸನ್ನು ಮನೆಗೆ ಕರೆತಂದು ತುಂಬಾ ಕಾಲವಾಗಿತ್ತಲ್ವಾ? 94 00:10:03,979 --> 00:10:06,481 ವಯಸ್ಸಾಗುತ್ತಾ ನೀನು ನಿಧಾನಿಸುತ್ತಿದ್ದೆ ಎಂದುಕೊಂಡಿದ್ದೆವು. 95 00:10:07,899 --> 00:10:09,609 ಮೂರನೆಯವರು ಈಗ ಎಲ್ಲಿ ಹೋಗುತ್ತಾರೆ? 96 00:10:27,044 --> 00:10:28,545 ಐಹ್ವೊನ್ ಮತ್ತು ಮಾಕ್ಸಿಂ ನಿರತರೇ? 97 00:10:31,173 --> 00:10:33,759 ನಾನು ದೂರ ಹೋದಾಗ ಅವರಲ್ಲೊಬ್ಬರು ಯಾವಾಗಲೂ ನನ್ನನ್ನು ವಿಚಾರಿಸುತ್ತಾರೆ. 98 00:10:33,842 --> 00:10:35,385 ಸಾಮಾನ್ಯವಾಗಿ ಹೇಗೆ ನಡೆಯುತ್ತೆ? 99 00:10:36,762 --> 00:10:38,180 ತಮಾಷೆ ಮಾಡುತ್ತಾ ಪ್ರಾರಂಭಿಸುತ್ತಾರೆ. 100 00:10:39,556 --> 00:10:40,807 ಮಾಕ್ಸಿಂ, ನನ್ನ ವಯಸ್ಸಿನ ಮೇಲೆ. 101 00:10:41,808 --> 00:10:43,060 ಐಹ್ವೊನ್, ನನ್ನ ಕೂದಲ ಮೇಲೆ. 102 00:10:44,853 --> 00:10:47,647 ಆಮೇಲೆ ಒಂದು ಬೆಚ್ಚನೆಯ ನೆನಪು, 103 00:10:48,940 --> 00:10:50,317 ಬದುಕಲು ಯೋಗ್ಯವಾದಂಥದ್ದು. 104 00:10:51,068 --> 00:10:53,320 -ಆ ಸಂದರ್ಭದಲ್ಲಿ-- -ಅದನ್ನೆಲ್ಲ ಬಿಟ್ಟು ಮುಂದೆ ಹೋಗೋಣ. 105 00:10:55,280 --> 00:10:57,366 ನೀನು ಆತ್ಮಹತ್ಯೆ ಮಾಡಿಕೊಳ್ಳಲ್ಲ ಅನ್ಸುತ್ತೆ. 106 00:10:58,992 --> 00:11:01,661 ನಿಮ್ಮ ಬಂಧವನ್ನು ನಿನ್ನಿಂದ ತೆಗೆಯಲಿಲ್ಲ. ಅವಳು ಅದನ್ನು ಕಸಿದಳು. 107 00:11:03,914 --> 00:11:06,541 ಮತ್ತೆ, ಈಗೇನು ಮಾಡುವುದೆಂದು ನಿರ್ಧರಿಸಿರುವೆಯಾ? 108 00:11:07,542 --> 00:11:09,503 ನನ್ನ ಸ್ವಾಗತ ಸವೆದು ಹೋಯಿತೇ? 109 00:11:09,586 --> 00:11:12,798 ನಾವು ಮೂವರೂ, ನಾಳೆ ಟವರಿಗೆ ವಾಪಸ್ ಆಗುತ್ತಿದ್ದೇವೆ. 110 00:11:13,465 --> 00:11:14,591 ನಮ್ಮೊಂದಿಗೆ ಬರುವೆಯಾ? 111 00:11:17,427 --> 00:11:18,428 ಗೊತ್ತಿಲ್ಲ. 112 00:11:23,141 --> 00:11:25,477 ನೈನೀವ್ ಆರ್ಚಸ್ ಒಳಗೆ ಹೋಗುತ್ತಿದ್ದಾಳೆ. 113 00:11:27,687 --> 00:11:30,899 ಕಾಡ್ಸ್ವಯ್ನ್ ಸೆಡಾಯ್ ನಂತರ ಅಷ್ಟು ವೇಗವಾಗಿ ಬೇರೆ ಯಾರೂ ಮಾಡಿಲ್ಲ. 114 00:11:30,982 --> 00:11:35,612 ಆಕೆ ತನಗಾಗಿ ಒಬ್ಬ ವಾರ್ಡರ್ ಹುಡುಕಲು ಹೆಚ್ಚು ಸಮಯ ಬೇಕಾಗುವುದಿಲ್ಲ. 115 00:11:40,617 --> 00:11:43,495 ನನ್ನ ಸೋಲುಗಳು ಮರುಕಳಿಸುವುದು ನನಗೆ ಬೇಕಿಲ್ಲ. 116 00:11:47,624 --> 00:11:49,751 ನೀನು ಮೊರೇನಳನ್ನು ಮೊದಲೇ ತಿಳಿದಿರಬೇಕಿತ್ತು. 117 00:11:53,255 --> 00:11:54,381 ಯಾವುದಕ್ಕೆ ಮೊದಲು? 118 00:11:56,550 --> 00:11:57,926 ಅವಳಿಗೆ ಏನೋ ಆಯಿತು, 119 00:11:58,718 --> 00:12:00,178 ಸುಮಾರು 20 ವರ್ಷಗಳ ಹಿಂದೆ, 120 00:12:01,346 --> 00:12:03,807 ನಿನ್ನೊಂದಿಗೆ ಬಂಧವೇರ್ಪಟ್ಟ ಒಂದೆರಡು ವರ್ಷಗಳಿಗೆ ಮುನ್ನ. 121 00:12:05,684 --> 00:12:08,979 ಒಂದು ದಿನ, ಅವಳು ಸುಮ್ಮನೆ ಬದಲಾಗಿಹೋಗಿದ್ದಳು. 122 00:12:10,063 --> 00:12:12,357 ನೀರು ಹಿಮವಾಗಿ ಮಾರ್ಪಡುವಂತೆ, 123 00:12:12,441 --> 00:12:15,986 ಅದು ಮುಂಚೆ ಹೇಗೆ ನೀರಾಗಿತ್ತೆಂದು ನಾವದನ್ನು ನೋಡಿ ಆಶ್ಚರ್ಯಪಡುವಂತೆ. 124 00:12:19,072 --> 00:12:20,282 ಆಗ ಅವಳು ಸಂತೋಷವಾಗಿದ್ದಳೇ? 125 00:12:21,366 --> 00:12:22,659 ಗೊತ್ತಿಲ್ಲ. 126 00:12:23,368 --> 00:12:25,287 ಎಂದಾದರೂ ಸಂತೋಷವಾಗಿದ್ದಳಾ ಎಂದು ನನಗೆ ಗೊತ್ತೇ ಇಲ್ಲ. 127 00:13:37,776 --> 00:13:39,986 ಮತ್ತೆ ಆ ಕೆಂಗೂದಲಿನ ಹುಡುಗ, ದಿನವೂ ಬರುವನೇ? 128 00:13:40,070 --> 00:13:41,446 -ರಾಂಡ್? -ಅವನೇ. 129 00:13:42,906 --> 00:13:44,533 ರಾಂಡ್ ಇಂದು ಕೆಲಸಕ್ಕೆ ಬಂದಿಲ್ಲ. 130 00:13:45,867 --> 00:13:47,577 ಅವನೆಲ್ಲಿರುವನೆಂದು ನಿಮಗೆ ಗೊತ್ತಿಲ್ಲವೇ? 131 00:13:49,037 --> 00:13:51,081 ಅವನಿಗೇನಾದರೂ ತೊಂದರೆಯೇ, ನನ್ನೊಡತಿ? 132 00:13:52,790 --> 00:13:54,876 ನಿಮ್ಮ ಕೈದಿಯೊಂದಿಗೆ ಸ್ವಲ್ಪ ನನಗೊಬ್ಬಳಿಗೇ ಸಮಯ ಬೇಕು. 133 00:13:56,378 --> 00:13:57,462 ಯಾರೆಂದು ನಿಮಗೆ ಗೊತ್ತು. 134 00:14:18,149 --> 00:14:20,110 ನಿನ್ನನ್ನು ನಿಂತಲ್ಲಿಯೇ ಕೊಂದುಹಾಕಬೇಕು. 135 00:14:20,193 --> 00:14:21,528 ಅದನ್ನೊಮ್ಮೆ ಪ್ರಯತ್ನಿಸಿರುವೆ. 136 00:14:25,574 --> 00:14:27,200 ಮತ್ತೆ, ಹೇಗೆ ನೋಡಿಕೊಳ್ಳುತ್ತಿದ್ದಾರೆ? 137 00:14:28,285 --> 00:14:30,203 ರೆಕ್ಕೆ ಇಲ್ಲದ ಚಿಟ್ಟೆಯಂತೆ. 138 00:14:30,287 --> 00:14:31,913 ಮತ್ತು ನಿನ್ನ ಮನಸ್ಸು? 139 00:14:36,418 --> 00:14:39,379 ವೈಟ್ ಟವರಿನ ಸೆರೆಮನೆಯಲ್ಲದೆ ನಾನಿಲ್ಲಿರುವುದಕ್ಕೆ ನೀನೇ ಕಾರಣ. 140 00:14:39,462 --> 00:14:41,548 ನನ್ನ ಯೆಲ್ಲೋ ಸಹೋದರಿಯರು ನಿನ್ನ ಅಧ್ಯಯನ ಮಾಡಬೇಕೆಂದರು. 141 00:14:41,631 --> 00:14:44,593 ಬ್ರೌನರು ಸಹ. ನೀನು ಅವೆರಡನ್ನೂ ಆನಂದಿಸುವುದು ಅನುಮಾನವೇ. 142 00:14:44,676 --> 00:14:48,013 ನನ್ನ ಆನಂದ ನಿನಗೆ ಅಷ್ಟು ಮುಖ್ಯ ಎಂಬುದೂ ಅನುಮಾನವೇ. 143 00:14:49,931 --> 00:14:51,641 ಅವನಿಗೆ ತರಬೇತಿ ಕೊಡಲಾರಂಭಿಸಿರುವೆಯಾ? 144 00:14:54,060 --> 00:14:55,270 ರಾಂಡ್ ಅಲ್'ಥೋರ್. 145 00:14:57,564 --> 00:14:59,274 ಅವನನ್ನು ಇಲ್ಲಿಗೂ ಕಳುಹಿಸಿದೆಯಾ? 146 00:15:01,610 --> 00:15:02,944 ಅವನೆಲ್ಲಿ ಇರುತ್ತಾನೆ? 147 00:15:12,162 --> 00:15:13,955 ನೀನು ನನ್ನಿಂದ ಎಲ್ಲವನ್ನೂ ಕಸಿದೆ. 148 00:15:15,999 --> 00:15:17,000 ಎಲ್ಲವನ್ನೂ. 149 00:15:18,960 --> 00:15:22,380 ಒಂದು ಸೀಸೆ ದ್ರಾಕ್ಷಾರಸಕ್ಕಾಗಿ ನಿನ್ನ ತಾಳಕ್ಕೆ ತಕ್ಕಂತೆ ಕುಣಿಯುತ್ತೇನೆ ಅಂದುಕೊಂಡೆಯಾ? 150 00:15:23,715 --> 00:15:24,549 ಇಲ್ಲ. 151 00:15:24,966 --> 00:15:26,843 ನಿನಗೆ ನಿಜವಾಗಿಯೂ ಏನು ಬೇಕೆಂದು ನನಗೆ ಗೊತ್ತಿದೆ. 152 00:15:27,427 --> 00:15:30,805 ಒನ್ ಪವರಿನ ಸಂಪರ್ಕ ಕಳೆದುಕೊಂಡವರು 153 00:15:32,641 --> 00:15:34,059 ಅತ್ಯಂತ ಆಸೆ ಪಡುವ ವಸ್ತು. 154 00:15:42,776 --> 00:15:46,154 ನೀನು ನನಗೆ ನೆರವಾದರೆ, ನಾನು ನಿನಗೆ ನೆರವಾಗುವೆ. 155 00:15:48,114 --> 00:15:49,366 ಅವನೆಲ್ಲಿರುತ್ತಾನೆ? 156 00:15:51,117 --> 00:15:52,827 ಅವನೊಂದು ವಸತಿಗೃಹದಲ್ಲಿ ಇರುತ್ತಿದ್ದಾನೆ. 157 00:15:54,829 --> 00:15:56,706 ಫೋರ್ಗೇಟಲ್ಲಿ, ದಿ ಕ್ರೆಸೆಂಟಲ್ಲಿ. 158 00:15:57,457 --> 00:15:58,290 ಆಮೇಲೆ? 159 00:16:01,127 --> 00:16:03,755 ಆ ಹುಡುಗನಲ್ಲಿ ನನ್ನಲ್ಲಿದ್ದಷ್ಟು ಶಕ್ತಿ ಇದೆ, 160 00:16:05,465 --> 00:16:06,675 ಆದರೆ ಅವನಿಗೆ ಅದರ ಭಯವಿದೆ, 161 00:16:08,218 --> 00:16:10,387 ಅದನ್ನವನು ದ್ವೇಷಿಸುವುದರಿಂದ ನಿಯಂತ್ರಿಸಲು ಆಗುತ್ತಿಲ್ಲ. 162 00:16:12,972 --> 00:16:15,725 ಆವಾಹನೆ ಮಾಡುವುದರ ಬಗ್ಗೆ ಅವನಿಗೆ ನೀನು ಎಲ್ಲವನ್ನೂ ತಿಳಿಸಿಕೊಡಬೇಕು, 163 00:16:16,142 --> 00:16:17,227 ಎಲ್ಲವನ್ನೂ. 164 00:16:17,977 --> 00:16:19,771 ಅದಕ್ಕೆ ಎಷ್ಟೇ ಸಮಯ ಹಿಡಿದರೂ. 165 00:16:19,854 --> 00:16:22,524 ಮತ್ತು, ಕೊನೆಯಲ್ಲಿ, ಅವನ ಪ್ರಗತಿಯಿಂದ ನಾನು ಸಂತುಷ್ಟಳಾದರೆ… 166 00:16:28,279 --> 00:16:29,781 ಈ ಚಾಕುವನ್ನು ನಿನಗೆ ಕೊಡುವೆ. 167 00:16:43,002 --> 00:16:45,839 ಆಕೆ ಮರಳಿ ಬಂದಾಗಿನಿಂದ ನಮ್ಮ ಬಗ್ಗೆ ಏನೋ ಬೇರೆಯಂತಿದೆ. 168 00:16:46,506 --> 00:16:48,216 ಈಗ ಆಕೆ ಸ್ವೀಕೃತಳು. 169 00:16:48,675 --> 00:16:49,509 ಅದಲ್ಲ. 170 00:16:51,428 --> 00:16:53,096 ಸ್ವಲ್ಪ ಅದೂ ಇರಬಹುದು. 171 00:16:53,805 --> 00:16:55,724 ಆದರೆ ನಾನೆಷ್ಟೇ ಸಹಾಯ ಮಾಡಬೇಕೆಂದುಕೊಂಡರೂ, 172 00:16:55,807 --> 00:16:58,393 ಸರಿಯಾದದ್ದನ್ನು ಹೇಳಲಾಗುತ್ತಿಲ್ಲ ಅಥವಾ ಮಾಡಲಾಗುತ್ತಿಲ್ಲ. 173 00:16:58,476 --> 00:16:59,561 ಹಾಗಿದ್ದರೆ ಪ್ರಯತ್ನ ಬಿಡು. 174 00:17:00,353 --> 00:17:02,564 ಆಕೆಗೆ ಅಲ್ಲೇನಾಯಿತೆಂದು ಕೂಡ ನಿನಗೆ ತಿಳಿದಿಲ್ಲ. 175 00:17:02,647 --> 00:17:04,482 ಅದನ್ನು ಸರಿ ಮಾಡಬೇಕು ಎಂದೇಕೆ ಅಂದುಕೊಳ್ಳುವೆ? 176 00:17:05,650 --> 00:17:07,026 ಯಾಕೆಂದರೆ ನಾನು ಆಕೆಯ ಗೆಳತಿ. 177 00:17:07,109 --> 00:17:09,695 ಆಕೆ ಕಳೆದ ವರ್ಷ ನನಗಾಗಿ ಇದ್ದಳು, ನಾನು ಎಲ್ಲಕ್ಕಿಂತ... 178 00:17:11,614 --> 00:17:13,491 ಹೆಚ್ಚಾಗಿ ಪ್ರೀತಿಸುತ್ತಿದ್ದವರನ್ನು ಕಳಕೊಂಡಾಗ. 179 00:17:14,242 --> 00:17:17,704 ಆಕೆ ನನಗೆ ಆಸರೆಯಾಗಿದ್ದರಿಂದ ಮಾತ್ರವೇ ನಾನು ಅದರಿಂದ ಹೊರಬರಲು ಸಾಧ್ಯವಾಯಿತು, 180 00:17:17,787 --> 00:17:19,455 ಆಕೆಗೆ ನೋವಿದ್ದರೂ ಸಹ. 181 00:17:20,498 --> 00:17:21,750 ಮತ್ತು ನಾನು… 182 00:17:23,084 --> 00:17:24,877 ನಾನು ಆಕೆಗೂ ಹಾಗೆಯೇ ಇರಬೇಕು. 183 00:17:28,590 --> 00:17:30,008 ನಾನು ಹಿಂದೆ ಇದ್ದಂತೆ. 184 00:17:30,759 --> 00:17:34,262 ಆದರೆ ನಾನು ಇಲ್ಲಿಗೆ ಬಂದಾಗಿನಿಂದ, ಈ ಟವರಿಗೆ, ನನ್ನ ಮೌಲ್ಯ… 185 00:17:35,472 --> 00:17:37,015 ಕಿರಿದಾಗುತ್ತಿರುವಂತೆ ಭಾಸವಾಗುತ್ತಿದೆ. 186 00:17:52,781 --> 00:17:53,740 ಸಹೋದರಿ. 187 00:18:06,961 --> 00:18:09,047 ನೀನು ನೈನೀವ್ ಅಲ್'ಮಯಿರಾ, ಅಲ್ಲವೇ? 188 00:18:09,130 --> 00:18:11,049 ಮಾಕ್ಸಿಂ ಮತ್ತು ಐಹ್ವೊನರಿಗಾಗಿ ಹುಡುಕುತ್ತಿರುವೆ. 189 00:18:12,008 --> 00:18:15,970 ಅವರು ಅಲನಾ ಸೆಡಾಯ್ ಜೊತೆ ಹೊರಹೋಗಿದ್ದಾರೆ, ನಿನ್ನೊಂದಿಗೆ ನಾನು ಅಭ್ಯಾಸ ಮಾಡುವೆ, ಬೇಕಾದರೆ? 190 00:18:17,764 --> 00:18:19,891 ಆರ್ಚಸ್ ಒಳಗೆ ಆವಾಹನೆ ಮಾಡಿದೆಯಾ? 191 00:18:21,726 --> 00:18:24,771 ಅಜಾಗಳೆಲ್ಲಾ ನಿನ್ನ ಹಿಂದೆ ಬಿದ್ದಿಲ್ಲದಿರುವುದು ನನಗೆ ಆಶ್ಚರ್ಯ ಮೂಡಿಸುತ್ತಿದೆ. 192 00:18:25,814 --> 00:18:29,526 ಅಂದರೆ, ಆಯ್ಕೆ ಮಾಡಲು ನಿನಗೆ ವರ್ಷಗಳ ಸಮಯ ಇದೆ. ಅದು ರೆಡ್ ಆಗದಿದ್ದರೆ ಮಾತ್ರ ಸಾಕು. 193 00:18:58,763 --> 00:19:00,265 ಪಶ್ಚಿಮದ ತೀರದ ಮೇಲೆ ದಾಳಿ ಆಗುತ್ತಿದೆ 194 00:19:00,348 --> 00:19:02,976 ಮತ್ತು ಅದನ್ನೆದುರಿಸಲು ನೀನು ಯಾವ ಸಹೋದರಿಯರನ್ನೂ ಕಳುಹಿಸುತ್ತಿಲ್ಲವೇ? 195 00:19:03,059 --> 00:19:06,521 ಪಶ್ಚಿಮದಲ್ಲಿ ಯಾವಾಗಲೂ ದಾಳಿಯಾಗುತ್ತಿರುತ್ತದೆ, ಸಾಮಾನ್ಯವಾಗಿ ತಮ್ಮಿಂದಲೇ. 196 00:19:08,022 --> 00:19:10,149 ಮತ್ತು ಟವರ್ ಅದರ ತನಿಖೆ ನಡೆಸಲು ಸಹೋದರಿಯರನ್ನು ಕಳುಹಿಸಿದೆ. 197 00:19:11,025 --> 00:19:12,861 ಕೊನೆಯದಾಗಿ ಅವರು ವರದಿ ಯಾವಾಗ ಕಳುಹಿಸಿದರು? 198 00:19:19,868 --> 00:19:21,244 ಅಮಿರ್ಲಿನ್ನಿಗೆ ತಿಳಿದಿದೆಯೇ? 199 00:19:21,327 --> 00:19:22,620 ಖಂಡಿತ. 200 00:19:25,206 --> 00:19:27,125 ನೀನು ಆಕೆಯೊಂದಿಗೆ ಕೊನೆಯದಾಗಿ ಯಾವಾಗ ಮಾತನಾಡಿದೆ? 201 00:19:32,630 --> 00:19:35,925 ಅಮಿರ್ಲಿನ್ ಅನುಪಸ್ಥಿತಿಯಲ್ಲಿ ಟವರನ್ನು ಆಳುವುದು ಕೀಪರ್, 202 00:19:36,593 --> 00:19:41,055 ಹಾಗಾಗಿ ಪ್ರತಿ ಬಾರಿ ನಾನು ಬಾಯಿ ತೆರೆದಾಗ ಅಮಿರ್ಲಿನ್ ಜೊತೆ ಮಾತನಾಡುವೆ. 203 00:19:49,981 --> 00:19:51,733 ಗೊತ್ತಲ್ಲ, ಆಕೆ ವಿಫಲವಾದಾಗ, 204 00:19:54,027 --> 00:19:55,403 ಆಕೆಯೊಂದಿಗೆ ನೀನೂ ವಿಫಲಗೊಳ್ಳುವೆ. 205 00:20:20,929 --> 00:20:24,849 ನೋಡು, ಇಷ್ಟು ಗಂಟೆಗಳು ಕಳೆದರೂ ಬಂಡಿಯ ಸುಳಿವೇ ಸಿಕ್ಕಿಲ್ಲ. 206 00:20:26,142 --> 00:20:28,144 ನಾನು ನನ್ನ ಮಿತ್ರರನ್ನು ಹುಡುಕಬೇಕು. 207 00:20:28,978 --> 00:20:31,147 ನಾವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೇವೆಯೇ? 208 00:20:31,230 --> 00:20:32,357 ತೋಳಗಳು ದಾರಿ ತಪ್ಪಲ್ಲ. 209 00:20:32,440 --> 00:20:34,359 ಅವುಗಳನ್ನು ಮುನ್ನಡೆಸುತ್ತಿರುವುದು ನೀನು, ಅವಲ್ಲ. 210 00:20:35,485 --> 00:20:36,361 ನನ್ನನ್ನು ನೋಡು, ಹುಡುಗ. 211 00:20:41,741 --> 00:20:43,076 ನಾನು ಅವುಗಳಲ್ಲೊಬ್ಬ. 212 00:20:44,535 --> 00:20:45,411 ನೀನೂ ಸಹ. 213 00:20:50,583 --> 00:20:51,793 ನಾವು ಏನು? 214 00:20:51,876 --> 00:20:53,836 ತೋಳಸೋದರ ಎನ್ನುತ್ತಾರೆ ನಮ್ಮನ್ನು. 215 00:20:55,546 --> 00:20:56,714 ಅದರ ಅರ್ಥವೇನು? 216 00:20:56,798 --> 00:20:58,216 ಅದರ ಹೆಸರೇನೋ ಅದೇ. 217 00:21:00,301 --> 00:21:02,261 ಅವರೆಲ್ಲರೂ ತೋಳಸೋದರರೇ? 218 00:21:02,345 --> 00:21:04,806 -ನಾನೇನಾದರೂ ಬದಲಾಗುವೆನೇ-- -ಹುಚ್ಚನಂತೆ ಮಾತನಾಡಬೇಡ. 219 00:21:05,431 --> 00:21:06,516 ನನ್ನ ಹೇಗೆ ಪತ್ತೆ ಮಾಡಿದೆ? 220 00:21:19,070 --> 00:21:20,196 ಅದು ನಮ್ಮ ಭಾಷೆ. 221 00:21:22,865 --> 00:21:26,828 ನಮ್ಮ ಒಬ್ಬ ಪತ್ತೆದಾರ ಜಿಂಕೆಯನ್ನು ಕಂಡ, ಅದರಡೆಗೆ ಕಳುಹಿಸಲು ನಮಗೆ ಆ ದೃಶ್ಯವನ್ನು ಕಳಿಸಿದ್ದಾನೆ. 222 00:21:26,911 --> 00:21:28,079 ಅದು ಹೇಗೆ ಕಾರ್ಯನಿರ್ವಹಿಸುತ್ತೆ? 223 00:21:28,162 --> 00:21:29,247 ಅಂತಃಪ್ರಜ್ಞೆ 224 00:21:29,330 --> 00:21:31,416 ಅವುಗಳ ಅರ್ಥ ನಿನಗೆ ತಿಳಿಯುತ್ತೆ. ಅವನ್ನು ಕಳಿಸುವುದು. 225 00:21:31,499 --> 00:21:34,585 ಆ ಯೋಧರು ನಮಗಾಗಿ ಬರುತ್ತಿದ್ದಾರೆಂದು ತೋಳಗಳು ನಿನಗೆ ಎಚ್ಚರಿಸಿದವೇ? 226 00:21:36,004 --> 00:21:38,631 ಅದಕ್ಕಾಗಿ ನೀನು ಹಳ್ಳಿಯಲ್ಲಿ ಉಳಿದುಕೊಳ್ಳಲಿಲ್ಲವೇ? 227 00:21:38,715 --> 00:21:40,216 ನೀನು ನಮ್ಮನ್ನು ಎಚ್ಚರಿಸಬಹುದಿತ್ತು. 228 00:21:40,675 --> 00:21:41,968 ನೀನು ನೆರವಾಗಬಹುದಿತ್ತು. 229 00:21:43,136 --> 00:21:44,470 ನಿನ್ನನ್ನು ಬಂಧಿಸಲಾಗಿದೆಯೇ? 230 00:21:46,931 --> 00:21:48,016 ತಿನ್ನುವ ಸಮಯ. 231 00:22:02,572 --> 00:22:04,741 ಇಷ್ಟರಲ್ಲೇ ಬೇಯಿಸಿದ ಮಾಂಸದ ರುಚಿಯನ್ನು ನೀನು ಕಳೆದುಕೊಳ್ಳುವೆ. 232 00:22:09,954 --> 00:22:11,039 ನೀನೆಂದರೆ ಅವನಿಗೆ ಇಷ್ಟ. 233 00:22:16,544 --> 00:22:17,795 ಅವನ ಹೆಸರೇನು? 234 00:22:17,879 --> 00:22:19,464 ಅವನು ಸಿದ್ಧನಾದಾಗ ನಿನಗೆ ತೋರಿಸುತ್ತಾನೆ. 235 00:22:26,512 --> 00:22:28,723 ತುಂಬಾ ಕಾಲದಿಂದ ನಿನ್ನ ಮೇಲೆ ಕಣ್ಣಿರಿಸಿದ್ದೆವು. 236 00:22:31,851 --> 00:22:35,480 ವೈಟ್ಕ್ಲೋಕ್ಸಿಂದ ನಾವು ನಿನ್ನನ್ನು ಮತ್ತು ಆ ಹುಡುಗಿಯನ್ನು ರಕ್ಷಿಸಿದ್ದು ನಿಮ್ಮ ಪುಣ್ಯ. 237 00:22:37,982 --> 00:22:39,025 ಅದು ನೀವೇನಾ? 238 00:22:40,443 --> 00:22:41,277 ಹೇಗೆ? 239 00:22:41,360 --> 00:22:43,780 ನೀನು ತಿಂಗಳುಗಳಿಂದ ನಮಗೆ ದೃಶ್ಯಗಳನ್ನು ಕಳುಹಿಸುತ್ತಿರುವೆ. 240 00:22:48,534 --> 00:22:50,078 ಅವನೂ ತನ್ನ ಸಂಗಾತಿಯನ್ನು ಕಳೆದುಕೊಂಡ. 241 00:22:50,703 --> 00:22:52,538 ಈಗಲೂ ಅವಳಿಗಾಗಿ ಶೋಕಿಸುತ್ತಾನೆ. 242 00:23:02,006 --> 00:23:03,633 ನೀನು ಮಲಗಿದಾಗ ಅವಳು ನಮಗೆ ಕಾಣುತ್ತಾಳೆ. 243 00:23:13,559 --> 00:23:15,728 ನನ್ನ ಬಳಿಗೆ ಬರಲು ಏಕೆ ಇಷ್ಟು ಸಮಯ ತೆಗೆದುಕೊಂಡಿರಿ, 244 00:23:17,313 --> 00:23:19,607 ನನ್ನನ್ನು ನೀವು ತಿಂಗಳುಗಳಿಂದ ಹಿಂಬಾಲಿಸುತ್ತಿದ್ದರೆ? 245 00:23:20,483 --> 00:23:22,610 ಆವಾಹನೆ ಮಾಡಬಲ್ಲ ಮಹಿಳೆಯರ ಬಳಿ ನಾವು ಹೋಗುವುದಿಲ್ಲ. 246 00:23:23,069 --> 00:23:23,903 ಯಾಕೆ? 247 00:23:24,987 --> 00:23:27,865 ತಮಗೆ ಅರ್ಥವಾಗದ್ದನ್ನು ಅಯಿಸ್ ಸೆಡಾಯ್ ನಂಬುವುದಿಲ್ಲ. 248 00:23:29,200 --> 00:23:30,827 ಯಾವುದೇ ಮನುಷ್ಯರಾದರೂ ಹಾಗೇನೇ. 249 00:24:05,528 --> 00:24:06,362 ಹಾಪರ್. 250 00:24:08,156 --> 00:24:09,240 ಅದೇ ಅವನ ಹೆಸರು. 251 00:24:10,324 --> 00:24:11,450 ಬಹುತೇಕ ಹೇಳಿರುವೆ. 252 00:24:39,103 --> 00:24:42,190 ಅವರು ಆಗಲೇ ರಾತ್ರಿ ಅಡುಗೆ ಶುರು ಮಾಡಿದ್ದಾರೆ. ನೀರು ಸೇದಲು ನೆರವಾಗುವೆಯಾ? 253 00:24:47,987 --> 00:24:49,947 ರೊಟ್ಟಿ ತಯಾರಿಸಲು ಎಷ್ಟು ನೀರು ಬೇಕಾಗುತ್ತದೆ? 254 00:24:58,915 --> 00:25:01,334 ತುಂಬಾ ಚೆನ್ನಾಗಿ ನಿಭಾಯಿಸುತ್ತಿರುವೆ, ನಿನಗದು ಗೊತ್ತಲ್ಲವೇ? 255 00:25:02,585 --> 00:25:05,630 ಸಾಮಾನ್ಯವಾಗಿ ಬಂಧ ಮುರಿದ ಮೊದಲ ಕೆಲವು ವಾರಗಳು… 256 00:25:08,257 --> 00:25:09,133 ಅಂದರೆ… 257 00:25:10,635 --> 00:25:11,928 ನಾನು ನಿನಗೆ ಹೇಳಬೇಕಿಲ್ಲ. 258 00:25:13,554 --> 00:25:16,265 ಅದು ಇಲ್ಲದೆಯೇ ನನಗೆ ಅಭ್ಯಾಸ ಆಗಿ ಹೋಗಿದೆ. 259 00:25:19,936 --> 00:25:21,771 ಮೊರೇನ್ ಬಂಧವನ್ನು ಮುಚ್ಚಿಟ್ಟಿದ್ದಾಳೆ… 260 00:25:24,065 --> 00:25:25,566 ಕಳೆದ ಆರು ತಿಂಗಳುಗಳಿಂದ ಇರಬಹುದು. 261 00:25:26,192 --> 00:25:28,903 ಅಷ್ಟು ದೀರ್ಘಕಾಲ ಇರಬಲ್ಲ ವಾರ್ಡರ್ ನಾನೊಬ್ಬನೇ ಅಂದುಕೊಂಡಿದ್ದೆ. 262 00:25:32,281 --> 00:25:35,701 ಅಲನಾ ಮೊದಲು ನನ್ನೊಂದಿಗೆ ಬಂಧಗೊಂಡಾಗ, ಅದು ಎಲ್ಲರಿಗೂ ಬೇಸರ ತರಿಸಿತ್ತು. 263 00:25:36,953 --> 00:25:40,206 ನನಗೆ ತಲೆಯೊಳಗೆ ಹೊಕ್ಕಿ ನೋಡುವವರು ಬೇಕಿರಲಿಲ್ಲ, ಆಕೆಗೆ ಹಂಚಿಕೊಳ್ಳುವುದು ಬೇಕಿರಲಿಲ್ಲ. 264 00:25:41,123 --> 00:25:44,001 ಹಾಗಾಗಿ ನಾವು ಮೂವರೂ ಅದನ್ನು ಮಾತಾಡಿಕೊಂಡೆವು, 265 00:25:44,085 --> 00:25:47,838 ಮತ್ತು ಅವಳು ನನ್ನಿಂದ ಬಂಧವನ್ನು ಮುಚ್ಚಿಡುವಂತೆ ನಿರ್ಧರಿಸಿದೆವು, 266 00:25:47,922 --> 00:25:49,090 ಯುದ್ಧದಲ್ಲಿ ಬಿಟ್ಟು. 267 00:25:51,050 --> 00:25:52,009 ಮತ್ತು ಹಾಸಿಗೆಯಲ್ಲಿ. 268 00:25:55,346 --> 00:25:56,931 ಟವರಿಗೆ ಇದರ ಬಗ್ಗೆ ಗೊತ್ತೇನು? 269 00:26:01,811 --> 00:26:05,898 ಒಂದು ಸಂಸಾರದಂತೆಯೇ ಇರುವ ಇನ್ನೊಂದು ಸಂಸಾರ ನಿನಗೆ ಗೊತ್ತೇನು? 270 00:26:09,986 --> 00:26:13,281 ನೀನು ಮೊರೇನ್ ಬಳಿಗೆ ಹಿಂತಿರುಗಲಾರೆ ಎಂದು ಮಿಕ್ಕವರು ನಿನಗೆ ಹೇಳುವರೆಂದು ಗೊತ್ತು, 271 00:26:13,656 --> 00:26:16,909 ಆದರೆ ನೀನು ಹೋಗಬಹುದೆಂದು ನಾನೇ ನಿದರ್ಶನ, ನಿನಗೆ ಬೇಕಾದರೆ. 272 00:26:55,364 --> 00:26:57,325 ಕ್ರೆಸೆಂಟ್ ಇನ್ ಸುಟ್ಟುಹೋಗಿದೆ. 273 00:26:57,408 --> 00:26:58,534 ಯಾಕೆಂದು ಗೊತ್ತೇ? 274 00:26:58,617 --> 00:27:01,370 ಫೋರ್ಗೇಟಲ್ಲಿ ಎಲ್ಲಾ ಕಾಲದಲ್ಲೂ ಬೆಂಕಿ ಉರಿಯುತ್ತಿರುತ್ತದೆ, ಕಣಮ್ಮ. 275 00:27:01,454 --> 00:27:03,581 ಅಕ್ಕಪಕ್ಕದ ಕಟ್ಟಡಗಳಿಗೆ ತಗುಲದಿರುವುದೇ ಬೇಜಾರು. 276 00:27:04,832 --> 00:27:07,001 ಅಲ್ಲೊಬ್ಬ ಹುಡುಗ ಇರುತ್ತಿದ್ದ. 277 00:27:07,084 --> 00:27:08,002 ಕೆಂಪು ಕೂದಲು. 278 00:27:08,085 --> 00:27:11,047 ಅದು ಗಮನ ಸೆಳೆಯುವುದೆಂದು ನನಗೆ ಗೊತ್ತು, ಇಲ್ಲಂತೂ. 279 00:27:11,130 --> 00:27:13,924 ಈ ದ್ವಾರಗಳ ಮೂಲಕ ಅವನು ಕೆಲಸಕ್ಕೆ ಬರುವುದನ್ನು ನೀವು ಪ್ರತಿದಿನ ನೋಡಿರಬಹುದು. 280 00:27:14,008 --> 00:27:15,384 ಅವನ ಬಗ್ಗೆ ಏನು? 281 00:27:17,136 --> 00:27:18,429 ಅವನು ಈಗ ಎಲ್ಲಿದ್ದಾನೆಂದು ಗೊತ್ತೇ? 282 00:27:34,779 --> 00:27:35,905 ಇದು... 283 00:27:37,156 --> 00:27:38,199 ಅದ್ಭುತವಾಗಿದೆ. 284 00:27:42,286 --> 00:27:44,080 ಆ ಗುಡಿಸಲನ್ನು ನಿನ್ನ ಕುಟುಂಬದವರು ಕಟ್ಟಿದರೇ? 285 00:27:46,874 --> 00:27:48,042 ನಾನು ಸುಳ್ಳು ಹೇಳಿದೆ. 286 00:27:49,835 --> 00:27:51,796 ನಾನು ಚಿಕ್ಕವಳಿದ್ದಾಗ ಇಲ್ಲಿಗೆ ಬರುತ್ತಲೇ ಇರಲಿಲ್ಲ. 287 00:27:53,631 --> 00:27:55,049 ಒಬ್ಬ ವ್ಯಕ್ತಿಯೊಂದಿಗೆ ಬರುತ್ತಿದ್ದೆ. 288 00:27:56,425 --> 00:27:57,385 ನಿನಗೂ ಮುಂಚೆ. 289 00:27:57,468 --> 00:28:00,805 ನೀನೇನನ್ನೂ ವಿವರಿಸಬೇಕಾಗಿಲ್ಲ. ಗತಕಾಲದ್ದು ಬೇಡವೆಂದುಕೊಂಡಿದ್ದೇವೆ. 290 00:28:00,888 --> 00:28:03,307 ನಿನಗೇನೋ ಸುಲಭ, ಅದು ಇರುವಷ್ಟು ವಯಸ್ಸು ನಿನಗಾಗಿಲ್ಲ. 291 00:28:06,143 --> 00:28:07,395 ನಿನಗೆ ಆಶ್ಚರ್ಯವಾಗಬಹುದು. 292 00:28:14,610 --> 00:28:16,612 ನಾನು ಪ್ರೀತಿಸಿದ ಮೊದಲ ಪುರುಷ ಆತ. 293 00:28:18,572 --> 00:28:19,698 ಅವನೊಬ್ಬನೇ, ನಿಜವಾಗಿಯೂ. 294 00:28:21,742 --> 00:28:23,994 ಶಕ್ತಿವಂತ. ವಿಶ್ವಾಸಭರಿತ. 295 00:28:25,621 --> 00:28:26,705 ಮೊಂಡ, ನಿಜವಾಗಿಯೂ. 296 00:28:28,040 --> 00:28:30,668 ಎಲ್ಲವನ್ನೂ ಸರಿಪಡಿಸುವಂತಹ ಕಣ್ಣುಗಳಿದ್ದವನು. 297 00:28:32,378 --> 00:28:33,712 ತುಂಬಾ ನೀರಸವಾಗಿರುವಂತಿದೆ. 298 00:28:36,924 --> 00:28:39,093 ಎಷ್ಟಾಗುತ್ತೋ ಅಷ್ಟು ದೂರ ನಾವು ಹೋಗುತ್ತಿದ್ದೆವು. 299 00:28:39,218 --> 00:28:41,512 ನಾವು ಜೊತೆಯಾಗಿದ್ದಾಗ ಯಾವಾಗಲೂ ಚೆನ್ನಾಗಿರುತ್ತಿದ್ದೆವು, 300 00:28:41,595 --> 00:28:44,014 ಪ್ರಪಂಚದ ಯಾವುದೇ ಗೋಜಿಲ್ಲದೆ. 301 00:28:46,267 --> 00:28:48,477 ಮತ್ತೆಂದಿಗೂ ಕೆಳಗೆ ಬಾರದಂತೆ ತಮಾಷೆ ಮಾಡುತ್ತಿದ್ದೆವು. 302 00:28:50,062 --> 00:28:51,355 ಆದರೆ ಯಾವಾಗಲೂ ಬರುತ್ತಿದ್ದೆವು. 303 00:29:03,117 --> 00:29:04,827 ನಾನು ಇಂತಹ ಜಾಗದಲ್ಲೇ ಬೆಳೆದೆ. 304 00:29:07,204 --> 00:29:10,416 ನನ್ನ ಮಿತ್ರರು, ನಗರಗಳು ಮತ್ತು ಪ್ರವಾಸಗಳ ಕನಸನ್ನು ಕಾಣುತ್ತಿದ್ದರು, 305 00:29:12,084 --> 00:29:13,127 ಆದರೆ ನಾನಲ್ಲ. 306 00:29:16,005 --> 00:29:16,922 ಇಲ್ಲಿ ಮೇಲೆ, 307 00:29:18,591 --> 00:29:20,843 ಪ್ರಪಂಚವು ಇನ್ನೂ ಒಂದಾಗಿರುವಂತೆಯೇ ಕಾಣುತ್ತದೆ. 308 00:29:24,096 --> 00:29:26,098 ಅದು ಮುರಿದಿಲ್ಲವೆಂದು ನಾನು ನಂಬುವಂತಿದೆ. 309 00:29:27,057 --> 00:29:29,059 ನೀನಲ್ಲಿಗೆ ಮರಳಿ ಹೋಗಬೇಕೇನು? 310 00:29:29,143 --> 00:29:31,353 ಚಕ್ರವು ಯಾರಿಗೂ ಅಗತ್ಯಕ್ಕಿಂತ ಹೆಚ್ಚು ಕೊಡುವುದಿಲ್ಲ. 311 00:29:35,191 --> 00:29:36,317 ನನಗಂತೂ ಇಲ್ಲವೇ ಇಲ್ಲ. 312 00:29:39,612 --> 00:29:42,615 ನಿನಗೆ ಬೇಕಾಗಿರುವುದನ್ನು ಯಾರೂ ಅಥವಾ ಯಾವುದೂ ಎಂದಿಗೂ ಕೊಡುವುದಿಲ್ಲ. 313 00:29:45,493 --> 00:29:46,994 ನಿನಗೆ ಏನಾದರೂ ಬೇಕಾದರೆ, 314 00:29:47,411 --> 00:29:48,871 ನೀನು ಅದನ್ನು ಪಡೆಯಬೇಕು. 315 00:30:14,688 --> 00:30:15,648 ಸರಿ, ಮತ್ತೆ. 316 00:30:15,731 --> 00:30:16,941 ಹೇ, ಮಿತ್ರ. ಮತ್ತೊಮ್ಮೆ ಇದೇ. 317 00:30:17,900 --> 00:30:19,818 ಇದಕ್ಕೆ ದುಡ್ಡು ಹೇಗೆ ಕೊಡುವೆ? ಅದು ನನ್ನ ಬಳಿ ಇದೆ. 318 00:30:19,902 --> 00:30:21,445 ಇಲ್ಲ, ರಾತ್ರಿಯೆಲ್ಲಾ ಗೆಲ್ಲಲಾಗದು. 319 00:30:22,154 --> 00:30:24,073 ಭವಿಷ್ಯ ನೋಡಲಾಗದವನು ಹೇಳುತ್ತಿದ್ದಾನೆ. 320 00:30:24,156 --> 00:30:27,243 ಇಲ್ಲ, ಜನರ ಭವಿಷ್ಯವನ್ನು ಮಾತ್ರ ನೋಡಬಲ್ಲೆ ಎಂದು ನೀನು ಹೇಳಿದೆ. 321 00:30:30,120 --> 00:30:33,707 ಸರಿ, ಮತ್ತೆ, ಹಣ ನಿನ್ನ ಬಳಿ ಇರುವುದರಿಂದ, ಮತ್ತು ನಾವು ದಿನವೆಲ್ಲಾ 322 00:30:33,791 --> 00:30:35,334 ಪ್ರಯಾಣ ಮಾಡಿರುವುದರಿಂದ, 323 00:30:35,417 --> 00:30:36,877 ನೀನೇ ನಮಗೆ ಕೋಣೆ ಕೊಡಿಸಬಾರದೇಕೆ? 324 00:30:38,128 --> 00:30:40,130 ನಾನು ದಣಿದಿರುವೆ. ಕದಲಲಾರೆ. 325 00:30:40,214 --> 00:30:41,465 ಅದನ್ನು ಮುಂಚೆ ಕೇಳಿರುವೆ. 326 00:30:41,549 --> 00:30:47,054 ನಾನು ನಮಗೆ ಇನ್ನೊಂದು ಸುತ್ತು ಕೊಡಿಸಿ ಕೋಣೆಗಳನ್ನು ಕೊಡಿಸುವೆ, ಬಹುವಚನ. 327 00:30:54,728 --> 00:30:57,690 -ನೀನು ಅಷ್ಟೆಲ್ಲಾ ಕುಡಿದಿಲ್ಲ. -ಇನ್ನೆರಡು ಗಂಟೆಗಳಲ್ಲಿ ಕುಡಿಯಲಿದ್ದಾನೆ. 328 00:30:58,190 --> 00:31:00,025 ಅವನಿಗೆ ಸ್ವಲ್ಪ ಸಹಾಯ ಬೇಕಷ್ಟೇ. 329 00:31:02,403 --> 00:31:03,571 ನಿಮಗೆ ಕೋಣೆ ಬೇಕಾಗುವುದೇ? 330 00:31:03,654 --> 00:31:06,991 ಅಟ್ಟದ ಮೇಲೆ. ಅಲ್ಲಿ ನಾನು ಯಾರನ್ನೋ ಭೇಟಿಯಾಗುವುದಿದೆ. 331 00:31:07,074 --> 00:31:08,659 ಅವರು ಬಂದಿದ್ದಾರಾ? 332 00:31:08,742 --> 00:31:10,911 ಇಲ್ಲ, ಇನ್ನೂ ಇಲ್ಲ. ಯಾರನ್ನು ಭೇಟಿಯಾಗುತ್ತಿರುವೆ? 333 00:31:11,954 --> 00:31:13,080 ನನಗೆ ಪೂರ್ತಿಯಾಗಿ ಖಚಿತವಿಲ್ಲ. 334 00:31:14,123 --> 00:31:17,167 ಆದರೆ ಅವರಿಲ್ಲಿಗೆ ಬಂದಾಗ ಮೇಲಕ್ಕೆ ಕಳುಹಿಸು. ಅವರು ಅದೇ ಕೋಣೆಯನ್ನು ಕೇಳುತ್ತಾರೆ. 335 00:31:30,639 --> 00:31:34,268 ಬಹುತೇಕ ಅಯಿಸ್ ಸೆಡಾಯ್ ಈ ಕೋಣೆಯೊಳಗೆ ಮತ್ತೆ ಕಾಲಿಡುವುದೇ ಇಲ್ಲ. 336 00:31:40,482 --> 00:31:42,109 ಅದರಲ್ಲಿ ಯಾವುದಾದರೂ ನಿಜವೇ? 337 00:31:51,285 --> 00:31:52,244 ನೋವು. 338 00:31:55,247 --> 00:31:56,915 ಆದರೆ ಅದೂ ಕಳೆದುಹೋಗುವುದು… 339 00:31:57,833 --> 00:31:58,917 ಕಾಲ ಕಳೆದಂತೆ. 340 00:32:04,089 --> 00:32:05,966 ಒಳಗೆ ಯಾರನ್ನು ಕಳೆದುಕೊಂಡೆ? 341 00:32:14,016 --> 00:32:15,059 ನನ್ನ ಮಗಳು. 342 00:32:17,728 --> 00:32:18,646 ಕ್ಷಮಿಸು. 343 00:32:19,438 --> 00:32:22,775 ನಾನು ಅವಳನ್ನು ಮತ್ತು ಅಲ್ಲಿ ನಡೆದಿದ್ದೆಲ್ಲವನ್ನೂ ಮರೆತುಬಿಡಬೇಕು. 344 00:32:23,776 --> 00:32:25,277 ನಾನಲ್ಲಿ ವರ್ಷಗಳ ಕಾಲ ಇದ್ದೆ. 345 00:32:27,738 --> 00:32:30,324 ಮತ್ತು ಅದು ಕಳೆದುಹೋಗುತ್ತಿದೆ, ಆದರೂ ಅದು ನನಗೆ ನೆನಪಿದೆ. 346 00:32:32,117 --> 00:32:33,077 ನಾನು... 347 00:32:37,164 --> 00:32:42,586 ನಾನು ನನ್ನ ಮಗನನ್ನು 80 ವರ್ಷಗಳಿಂದ ರಹಸ್ಯವಾಗಿರಿಸಿರಬಹುದೇ? ತೊಂಬತ್ತು? 348 00:32:44,463 --> 00:32:47,174 ಅದು ಅವನ ಸುರಕ್ಷತೆಗಾಗಿಯೇ ಎಂದು ನನಗೆ ನಾನು ಹೇಳಿಕೊಂಡೆ. 349 00:32:47,925 --> 00:32:51,595 ನನ್ನನ್ನು ತಲುಪಲು ನನ್ನ ವೈರಿಗಳು ಅವನಿಗೆ ತೊಂದರೆ ಕೊಡುವುದನ್ನು ತಪ್ಪಿಸಲು. 350 00:32:55,140 --> 00:32:59,186 ತ್ರೀ ಓಥ್ಸ್ ಪ್ರಕಾರ ಬೇರೆಯವರ ಬಳಿ ಮಾತ್ರ ನಾವು ನಿಜ ಮಾತನಾಡಬೇಕು, ನಮ್ಮೊಂದಿಗಲ್ಲ. 351 00:33:00,145 --> 00:33:01,730 ನಾನವನನ್ನು ಎಲ್ಲಿಯಾದರೂ ಬಚ್ಚಿಡಬಹುದಿತ್ತು. 352 00:33:02,564 --> 00:33:05,984 ಸುರಕ್ಷಿತವಾಗಿರುವ ಸಾವಿರಾರು ಬೇರೆ ಜಾಗಗಳಲ್ಲಿ, ಆದರೆ ಅವನನ್ನು ಟಾರ್ ವಲೋನಿನಲ್ಲೇ ಇರಿಸಿದೆ. 353 00:33:06,068 --> 00:33:07,444 ಅವನನ್ನು ಇಲ್ಲಿ ನನಗಾಗಿ ಇರಿಸಿದೆ. 354 00:33:08,529 --> 00:33:09,863 ಏಕೆಂದರೆ ನನಗೆ ಭಯವಾಗಿತ್ತು. 355 00:33:12,783 --> 00:33:15,369 ಪ್ರಪಂಚದಲ್ಲಿ ಕೇವಲ ನನ್ನದು ಮಾತ್ರ ಆಗಿರುವ ಒಂದೇ ವಸ್ತುವನ್ನು 356 00:33:15,452 --> 00:33:17,121 ನಾನು ಕಳೆದುಕೊಳ್ಳಲು ಸಿದ್ಧಳಿರಲಿಲ್ಲ. 357 00:33:22,000 --> 00:33:27,923 ಆವಾಹನೆ ಮಾಡಬಲ್ಲ ಪುರುಷರನ್ನು ಹುಚ್ಚಿನ ಕಾರಣಕ್ಕಾಗಿ ಡಾರ್ಕ್ ಶಪಿಸಿದ್ದಾನೆ. 358 00:33:30,634 --> 00:33:33,846 ಏಕೆಂದರೆ ಕ್ರಮೇಣ ಅವರು ತುಂಬಾ ಪ್ರೀತಿಸುವವರನ್ನು ಕೊಂದುಬಿಡುತ್ತಾರೆ. 359 00:33:33,929 --> 00:33:38,058 ನಿಜವೇನೆಂದರೆ ನಾವು ಅಯಿಸ್ ಸೆಡಾಯಿಗಳೂ ಶಾಪಗ್ರಸ್ತರೇ. 360 00:33:40,561 --> 00:33:43,564 ಒನ್ ಪವರ್ ನಮ್ಮ ವಯಸ್ಸಾಗುವಿಕೆಯನ್ನು ನಿಧಾನಿಸುತ್ತದೆ, 361 00:33:43,647 --> 00:33:48,694 ಮತ್ತು ನಾವು ಪ್ರೀತಿಸುವವರು ನಮ್ಮ ಮುಂದೆಯೇ ಸಾಯುವುದನ್ನು ನಾವು ನೋಡಬೇಕಾಗುತ್ತದೆ, 362 00:33:49,570 --> 00:33:50,821 ಅದನ್ನು ತಡೆಯಲು ಅಸಹಾಯಕರಾಗಿ. 363 00:33:56,118 --> 00:33:58,912 ನವಶಿಷ್ಯೆಯರಿಗೆ ನೀನು ಪಾಠ ಮಾಡಲು ಏಕೆ ಬಿಡುವುದಿಲ್ಲವೆಂದು ತಿಳಿಯಿತು. 364 00:34:04,668 --> 00:34:10,174 ನೋವು ಮತ್ತು ನಷ್ಟದಿಂದ ಕುಗ್ಗದೆ ಈ ಪ್ರಪಂಚವನ್ನು ನಾವು ಹೇಗೆ ಆಳುತ್ತೇವೆ ಎಂದು ನಿನಗೆ ತಿಳಿಯಬೇಕೇ? 365 00:34:12,592 --> 00:34:15,679 ನಿನಗೆ ಸೇರಿದ ಈ ಜಗತ್ತಿನ ಚೂರನ್ನು ಕಂಡುಕೊಂಡು 366 00:34:15,763 --> 00:34:18,556 ಅದನ್ನು ಜೋಪಾನವಾಗಿಟ್ಟುಕೊಳ್ಳಬೇಕು. 367 00:34:20,559 --> 00:34:21,601 ಆಮೇಲೆ... 368 00:34:24,646 --> 00:34:26,940 ಕೊನೆಗೂ ಅದು ಹೋದಾಗ, ನಿನಗೆ ಇನ್ನೊಂದು ಸಿಗುತ್ತದೆ. 369 00:34:29,693 --> 00:34:32,487 ನಿನಗೆ ಇನ್ನೊಂದು ಸಿಕ್ಕಿದೆಯೇ? 370 00:34:39,995 --> 00:34:43,581 ನಾನೀಗ ನಿನಗೊಂದು ಹೇಳುವೆ, ಆದರೆ ನೀನು ದುಡುಕುವುದಿಲ್ಲವೆಂದು 371 00:34:45,292 --> 00:34:46,960 ನನಗೆ ಮಾತು ಕೊಡಬೇಕು. 372 00:34:51,715 --> 00:34:56,512 ಪಶ್ಚಿಮದಲ್ಲಿ ಆಗುತ್ತಿರುವ ಒಂದು ದಾಳಿಯ ಬಗ್ಗೆ ಟವರಿಗೆ ಗೊತ್ತಾಗಿದೆ. 373 00:34:56,594 --> 00:34:57,763 ಇಲ್ಯಾರಿಗೂ ಅದರ ಕಾಳಜಿ ಇಲ್ಲ. 374 00:34:59,097 --> 00:35:01,850 ಅದರಲ್ಲೂ ಹೆಚ್ಚಿನ ಖೈದಿಗಳಿಲ್ಲ ಎಂದು ನಮ್ಮ ಗೂಢಚಾರರು ವರದಿ ಮಾಡಿದಾಗಿನಿಂದ. 375 00:35:01,934 --> 00:35:03,560 ಆದರೆ ಒಂದು ವರದಿಯಲ್ಲಿ, 376 00:35:04,645 --> 00:35:06,396 ಅವರು ಏನೋ ವಿಲಕ್ಷಣವಾದದ್ದನ್ನು ಹಿಡಿದರು. 377 00:35:09,441 --> 00:35:12,653 ಶೈನಾರನ್ ಸೈನಿಕರ ಒಂದು ಗುಂಪು, ತವರಿನಿಂದ ತುಂಬಾ ದೂರ, 378 00:35:16,031 --> 00:35:17,491 ಒಬ್ಬ ಒಗಿರ್ ಮತ್ತು ಟೂ ರಿವರ್ಸಿನ 379 00:35:18,408 --> 00:35:20,452 ಒಬ್ಬ ಕಮ್ಮಾರನೊಂದಿಗೆ ಪ್ರಯಾಣಿಸುತ್ತಿದ್ದವರು. 380 00:35:50,566 --> 00:35:52,776 ಈ ಸಲ ಹತ್ತು ನಿಮಿಷ ಇದ್ದ. 381 00:35:54,152 --> 00:35:55,904 ಅವನನ್ನು ಸುಧಾರಿಸುತ್ತಿದ್ದೇವೆಂದುಕೊಳ್ಳುವೆ. 382 00:35:56,947 --> 00:35:59,783 ಇಷ್ಟರಲ್ಲೇ ಅವನು ನಮ್ಮಂತೆ ಹಿರಿಯ ಮತ್ತು ಜ್ಞಾನಿಯಾಗುತ್ತಾನೆ. 383 00:36:02,286 --> 00:36:03,161 ಹಿರಿಯ, ಹೌದು. 384 00:36:05,038 --> 00:36:06,832 ಅವನ ಜ್ಞಾನ ಇನ್ನೂ ಸುಧಾರಿಸಬೇಕಷ್ಟೇ. 385 00:36:19,595 --> 00:36:21,054 ಅವಳು ಹೇಳಿದ ಒಂದು ಮಾತು. 386 00:36:23,348 --> 00:36:26,226 ಅದನ್ನು ಪದೇ ಪದೇ ಹೇಳಿಕೊಳ್ಳುತ್ತಿರುತ್ತೀಯ. 387 00:36:28,353 --> 00:36:30,272 "ಅವಳ ಒಂದು ಕಡಿತಕ್ಕೆ ಸಾವಿರ." 388 00:36:38,447 --> 00:36:41,158 ನಮ್ಮ ತಲೆಗಳಲ್ಲಿ ಯಾವಾಗಲೂ ಮಾತುಕತೆ ನಡೆಯುತ್ತಲೇ ಇರುವುದರಿಂದ 389 00:36:42,701 --> 00:36:48,206 ಮೌನಿಗಳು ಮೌನವಾಗಿರುತ್ತೇವೆಂದು ಜನರಿಗೆ ಅರ್ಥವಾಗುವುದೇ ಇಲ್ಲ. 390 00:36:56,882 --> 00:36:59,468 ಅವಳು ಹೇಳಿದಳು, ಇಷ್ಟೆಲ್ಲಾ ವರ್ಷಗಳಲ್ಲಿ ಆಕೆ ನನ್ನನ್ನು… 391 00:37:02,387 --> 00:37:04,181 ಎಂದಿಗೂ ಸಮಾನವಾಗಿ ನೋಡಲೇ ಇಲ್ಲವಂತೆ. 392 00:37:09,227 --> 00:37:10,812 ಖಂಡಿತ ಇಲ್ಲ. 393 00:37:10,896 --> 00:37:14,274 ನಾವು ಅವರ ಸಮಾನರಲ್ಲ, ಲಾನ್. ನಾವು ಹಾಗಾಗಬಾರದು. 394 00:37:14,358 --> 00:37:17,736 ಒಬ್ಬ ಅಯಿಸ್ ಸೆಡಾಯ್ ಸಿಡಿಲನ್ನೇ ತರಿಸಬಲ್ಲಳು, 395 00:37:17,819 --> 00:37:19,071 ಬೆಟ್ಟಗಳನ್ನು ಎಬ್ಬಿಸಬಲ್ಲಳು. 396 00:37:19,905 --> 00:37:23,367 ಮಿಕ್ಕ ಜಗತ್ತು ಕೇವಲ ಅವರ ಶಕ್ತಿಯನ್ನು ಮಾತ್ರ ನೋಡಬಲ್ಲದು. 397 00:37:23,450 --> 00:37:24,785 ನಮಗೆ ಅವರ ಬಲಹೀನತೆ ಕಾಣುತ್ತದೆ. 398 00:37:25,994 --> 00:37:28,372 ಅವರು ದೇವತೆಯರಲ್ಲ ಎಂದು ನಾವು ಅವರಿಗೆ ನೆನಪಿಸುತ್ತೇವೆ. 399 00:37:29,331 --> 00:37:32,834 ಅಲನಾಗೆ ಆ ಜ್ಞಾಪನೆ ಬೇಕಿಲ್ಲ ಎಂದುಕೊಳ್ಳುವೆ. 400 00:37:33,752 --> 00:37:36,046 ಹಾಂ, ನಮಗೂ ಅವಳಿಗೆ ಬೇಕಿರುವುದೇ ಬೇಕೆಂದು ತಿಳಿದಿರುವಳು. 401 00:37:37,214 --> 00:37:38,131 ಮತ್ತು ಏನದು? 402 00:37:40,384 --> 00:37:42,678 ಕತ್ತಲಿನ ಮೇಲೆ ಬೆಳಕಿನ ವಿಜಯ. 403 00:37:44,513 --> 00:37:45,889 ಆನಂತರ ಪಾಯಸ. 404 00:37:53,146 --> 00:37:54,898 ಮತ್ತೆ ಮೊರೇನ್ ಬಗ್ಗೆ ಏನು? 405 00:37:55,315 --> 00:37:56,650 ಆಕೆಗೇನು ಬೇಕು? 406 00:38:03,740 --> 00:38:05,033 ಸಮಸ್ಯೆ ಅದೇ ಇರಬಹುದು. 407 00:38:06,868 --> 00:38:08,328 ಇನ್ನು ನನಗೆ ಗೊತ್ತಿಲ್ಲ ಅನ್ಸುತ್ತೆ. 408 00:39:12,100 --> 00:39:15,062 ಕೇಳದೆ ಬಂದಿದ್ದಕ್ಕೆ ಕ್ಷಮಿಸು, ನಿನ್ನಿಂದ ತಪ್ಪಿಸಿಕೊಳ್ಳಲು ಇಚ್ಛಿಸಲಿಲ್ಲ. 409 00:39:15,896 --> 00:39:17,064 ದಯವಿಟ್ಟು ಕೂರು. 410 00:39:17,147 --> 00:39:20,442 ಅನ್ವೇರ್, ದೀರ್ಘವಾದ ದಿನ ಕಳೆದಿರುವೆ, ನಾನು-- 411 00:39:20,525 --> 00:39:22,652 ತನ್ನ ಅರ್ಧ ಜೀವನ ಅಕ್ಕನನ್ನೇ ಆದರ್ಶವಾಗಿ 412 00:39:22,736 --> 00:39:25,864 ತೆಗೆದುಕೊಂಡವಳನ್ನು ಮಾತನಾಡಲು ಒಬ್ಬ ಮಹಿಳೆ ಹೀಗೆ ಮಾಡಬೇಕಾಗಿ ಬರಬಾರದು. 413 00:39:27,407 --> 00:39:29,659 ನಾನು ಹೊರಟಿದ್ದಕ್ಕೆ ನಿನ್ನಲ್ಲಿ ಕ್ಷಮೆ ಕೇಳಬೇಕೆಂದರೆ, 414 00:39:30,452 --> 00:39:31,369 ನಾನು ಕೇಳಲ್ಲ. 415 00:39:32,412 --> 00:39:33,789 ಅಯಿಸ್ ಸೆಡಾಯ್ ಸುಳ್ಳು ಹೇಳಬಾರದು. 416 00:39:33,872 --> 00:39:34,998 ಇಲ್ಲ, ಇಲ್ಲ, ಖಂಡಿತ ಇಲ್ಲ. 417 00:39:35,624 --> 00:39:38,710 ನಾನು ಆವಾಹನೆ ಮಾಡುವುದಾಗಿದ್ದರೆ, ನಾನು ಮಾಡದಿರುವುದನ್ನು ನೀನು ಮಾಡಲಿಲ್ಲ. 418 00:39:38,794 --> 00:39:40,670 ನಾನು ಪ್ರಯತ್ನಿಸಿದ್ದು ಬೆಳಕಿಗೆ ಗೊತ್ತು, 419 00:39:41,505 --> 00:39:43,882 ನಮ್ಮ ಕುಟುಂಬದ ಭವಿಷ್ಯ ಕರಾಳವಾಗಿ ಕಂಡ ರಾತ್ರಿಗಳಂದು. 420 00:39:44,633 --> 00:39:46,259 ಚಿಕ್ಕಪ್ಪ ನಮಗೆ ಮೋಸ ಬಗೆದ ನಂತರ. 421 00:39:46,885 --> 00:39:48,178 ನೀನು ಹೊರಟ ನಂತರ. 422 00:39:48,762 --> 00:39:53,892 ಆದರೆ ಒಂದು ದಿನ ನೀನು ಮರಳಿ ಅದನ್ನೆಲ್ಲಾ ಸರಿ ಮಾಡುವೆ ಎಂದು ಅಪ್ಪ ನಂಬಿದ್ದರು. 423 00:39:55,018 --> 00:39:57,270 ನೀನು ಆತನ ಹೊಳೆಯುವ ತಾರೆಯಾಗಿದ್ದೆ. 424 00:39:58,063 --> 00:40:01,691 ಆದರೆ ನೀನು ನಮ್ಮ ಆಕಾಶ ಬಿಟ್ಟು ಹೊರಟು, ಎಂದಿಗೂ ಮರಳದ ಉಲ್ಕೆಯಾಗಿ ಹೋದೆ. 425 00:40:02,234 --> 00:40:03,110 ನಾನು... 426 00:40:06,238 --> 00:40:09,616 -ನಾನು ಮರಳುತ್ತಿದ್ದೆ ಆದರೆ-- -ಸುಳ್ಳು ಸಮಜಾಯಿಷಿ ಸಾಕು. 427 00:40:09,699 --> 00:40:11,910 ನಿನಗೆ ನಿನ್ನ ಕೆಲಸವಿತ್ತು, ನನಗೆ ನನ್ನದಿತ್ತು. 428 00:40:11,993 --> 00:40:15,580 ಕಡಿಮೆ ಮೌಲ್ಯದ್ದೇ, ಖಂಡಿತ, ಆದರೆ ಬೇಡಿಕೆಗೇನೂ ಕಡಿಮೆ ಇರಲಿಲ್ಲ. 429 00:40:16,331 --> 00:40:18,416 ಯಾರಾದರೂ ನಿನ್ನ ಕಣ್ಣಿನಲ್ಲಿ ಉಗಿದಾಗ ಹೇಗೆ ನಗಬೇಕೆಂದು 430 00:40:18,500 --> 00:40:20,752 ಟವರಿನಲ್ಲಿ ನಿನಗೆ ಒಂದು ವೇಳೆ ತಿಳಿಸಿಕೊಟ್ಟಿಲ್ಲದಿದ್ದರೆ? 431 00:40:21,294 --> 00:40:24,881 ಅಥವಾ ಔತಣದಲ್ಲಿ ಮಿಕ್ಕ ಆಹಾರಕ್ಕಾಗಿ ನೆರೆಮನೆಯ ಕೆಲಸದಾಕೆಯನ್ನು ಹೇಗೆ ಬೇಡಲೆಂದು? 432 00:40:24,965 --> 00:40:28,677 ಆದರೆ ನಾನು ನನ್ನ ಕೆಲಸ ನೋಡಿಕೊಂಡೆ, ನೀನು ನಿನ್ನದನ್ನು ನೋಡಿಕೊಂಡಂತೆ. 433 00:40:29,636 --> 00:40:32,973 ಈಗ ನನ್ನ ಮಗ ರಾಣಿಯನ್ನು ಮದುವೆಯಾಗಲಿದ್ದಾನೆ, 434 00:40:33,056 --> 00:40:36,852 ಮತ್ತು ಇನ್ನೆಂದೂ ಯಾರೂ ದಾಮೊದ್ರೆಡ್ ಮನೆತನದ ಮೇಲೆ ಉಗಿಯುವುದಿಲ್ಲ. 435 00:40:40,897 --> 00:40:42,566 ಚೆನ್ನಾಗಿ ನಿಭಾಯಿಸಿರುವೆ, ತಂಗಿ. 436 00:40:43,441 --> 00:40:45,819 ನಿನಗಿದ್ದ ಸಂಪನ್ಮೂಲಗಳಲ್ಲಿ ನಾನು ಮಾಡುವುದಕ್ಕಿಂತ ಚೆನ್ನಾಗಿ. 437 00:40:47,821 --> 00:40:48,947 ಧನ್ಯವಾದ, ಮೊರೇನ್. 438 00:40:49,865 --> 00:40:52,576 ಆದರೂ ಹೇಗೋ, ಕೊನೆಗೂ, ನೀನು ಯೋಚಿಸುವುದು ನನಗೆ ಬೇಕಿಲ್ಲ. 439 00:40:53,243 --> 00:40:55,370 ನಾನು ನಿನ್ನ ಒಪ್ಪಿಗೆಗಾಗಿ ಇಲ್ಲಿಲ್ಲ. 440 00:40:55,453 --> 00:41:00,375 ನನ್ನ ಇಡೀ ಜೀವನ ನಾನು ನಿರ್ಮಿಸಿರುವುದನ್ನು ನೀನು ಹಾಳುಗೆಡವದಿರಲು ನಾನು ಇಲ್ಲಿರುವೆ. 441 00:41:05,088 --> 00:41:06,464 ಇದು ನಿನ್ನ ಮನೆಯಲ್ಲ, 442 00:41:06,548 --> 00:41:07,924 ಇದು ನಿನ್ನ ಪಟ್ಟಣವಲ್ಲ, 443 00:41:08,800 --> 00:41:11,178 ಮತ್ತು ಇನ್ನು ಮುಂದೆ ನಾನು ನಿನ್ನ ತಂಗಿ ಅಲ್ಲ. 444 00:41:12,721 --> 00:41:14,931 ನೀನಿಲ್ಲಿ ಇರಿಸಿದ್ದ ಎಲ್ಲಾ ಕಣ್ಣುಗಳು ಮತ್ತು ಕಿವಿಗಳೇ? 445 00:41:16,057 --> 00:41:17,475 ಅವರೀಗ ನನ್ನವರು. 446 00:41:18,518 --> 00:41:20,854 ಚಿಕಿತ್ಸಾಲಯದ ಮುಖ್ಯಸ್ಥೆ, ಸೆಲೆಸ್ಟಿನ್? 447 00:41:20,937 --> 00:41:24,065 ದ್ವಾರದ ಬಳಿ ನೀನು ಹೊಗಳಿದ ಭಟ, ಸ್ಯಾಂಡೇರ್? 448 00:41:25,442 --> 00:41:28,987 ವಸತಿಗೃಹದ ಆ ಕೆಂಪು ಕೂದಲಿನ ಹುಡುಗ ಎಲ್ಲಿ ಹೋದನೆಂದು ನೀನು ತಿಳಿಯಬೇಕಿದ್ದರೆ, 449 00:41:30,614 --> 00:41:34,284 ಚಹಾದ ಮಧ್ಯೆ ನೀನು ನನ್ನನ್ನು ವಿನಮ್ರವಾಗಿ ಕೋರಿಕೊಳ್ಳಬೇಕು. 450 00:41:54,137 --> 00:41:55,889 ಒಂದು ರೀತಿ ನಿನಗದು ಚೆನ್ನಾಗಿರಬೇಕು, 451 00:41:56,932 --> 00:41:59,142 ಮುಂದೆ ನೀನೇನಾಗುವೆ ಎಂದು ತಿಳಿದಿರುವುದು. 452 00:41:59,226 --> 00:42:01,186 ಗೊತ್ತಾ, ನಾನು ಯೋಚಿಸುವ ಒಂದೇ ವಿಷಯ ನಮ್ಮ ವಿಧಿಯನ್ನು 453 00:42:01,269 --> 00:42:03,563 ನಾವೇ ಆರಿಸಿಕೊಳ್ಳುವುದಿದ್ದರೆ ಹೇಗಿರುತ್ತೆ ಎಂದು. 454 00:42:06,066 --> 00:42:07,234 ಬದಲಾಯಿಸಿಕೊಳ್ಳೋಣವೇ? 455 00:42:09,152 --> 00:42:09,986 ಬೇಡ. 456 00:42:14,616 --> 00:42:16,326 ನಿನಗಾಗಿ ಎಲ್ಲೆಲ್ಲೂ ಹುಡುಕಿದೆ. 457 00:42:16,952 --> 00:42:17,994 ನಮಗೊಂದು ಕ್ಷಣ ಕೊಡು. 458 00:42:18,870 --> 00:42:20,163 ಇದು ನನ್ನ ಕೋಣೆ. 459 00:42:25,460 --> 00:42:27,629 ಮತ್ತೆ ನಾನು ನನ್ನ ಲೋಟವನ್ನು ತೊಳೆಯಬೇಕು. 460 00:42:29,756 --> 00:42:32,384 ನಾನು ನಿನ್ನನ್ನೇ ಹುಡುಕಿಕೊಂಡು ಬರಲಿದ್ದೆ-- 461 00:42:32,467 --> 00:42:34,552 ಪೆರಿನ್ ಮತ್ತು ಲೋಯಿಲ್ರನ್ನು ಸೆರೆಹಿಡಿಯಲಾಗಿದೆ. 462 00:42:34,636 --> 00:42:36,471 ಅವರನ್ನು ಬಿಡುಗಡೆಗೊಳಿಸಲು ಫಾಮಿಗೆ ಹೊರಟಿರುವೆ. 463 00:42:36,554 --> 00:42:38,932 ಫಾಮ್? ಅದು ಜಗತ್ತಿನ ಇನ್ನೊಂದು ಬದಿಯಲ್ಲಿದೆ. 464 00:42:39,015 --> 00:42:41,101 ನಾನು ಹೊರಡುತ್ತಿದ್ದೇನೆಂದು ನಿನಗೆ ಹೇಳಲು ಬಂದೆ. 465 00:42:41,685 --> 00:42:42,852 ನೀನು ಬರಬೇಕಿಲ್ಲ. 466 00:42:42,936 --> 00:42:45,563 ನಾನೊಬ್ಬ ಸ್ವೀಕೃತಳು, ಟವರಿನಿಂದ ನಾನು ಯಾವಾಗ ಬೇಕಾದರೂ ಹೊರಡಬಹುದು, 467 00:42:45,647 --> 00:42:47,607 ಅವರಿಗೆ ನೀನು ಸಿಕ್ಕಿದರೆ, ನಿನ್ನ ಹೊರಹಾಕುತ್ತಾರೆ. 468 00:42:47,691 --> 00:42:49,401 ನನಗೆ ಅದರ ಚಿಂತೆ ಇದೆ ಅಂದುಕೊಂಡೆಯಾ? 469 00:42:50,110 --> 00:42:53,154 ನಮ್ಮ ಮಿತ್ರರು ತೊಂದರೆಯಲ್ಲಿದ್ದರೆ, ನಾನಿಲ್ಲಿರುವೆ ಎಂದು ಏಕೆ ಅಂದುಕೊಳ್ಳುವೆ? 470 00:43:01,079 --> 00:43:02,914 ನಿನಗೆ ಅರ್ಥವೇ ಆಗುತ್ತಿಲ್ಲ, ಅಲ್ವಾ? 471 00:43:03,581 --> 00:43:05,375 ನಾನೇಕೆ ಇಷ್ಟು ಪ್ರಯತ್ನಪಟ್ಟಿರುವೆ ಎಂದು? 472 00:43:06,293 --> 00:43:08,628 ಐ ಆಫ್ ದಿ ವರ್ಲ್ಡಲ್ಲಿ ನಾನು ಸಿದ್ಧಳಾಗಿದ್ದಿದ್ದರೆ, 473 00:43:09,796 --> 00:43:11,548 ರಾಂಡ್ ಜೊತೆಗೂಡಿ ನಾನು ಹೋರಾಡುತ್ತಿದ್ದೆ, 474 00:43:13,174 --> 00:43:14,968 ಆಗ ಬಹುಶಃ ಆತ ವಾಪಸಾದರೂ ಆಗುತ್ತಿದ್ದ. 475 00:43:18,763 --> 00:43:21,933 ಇನ್ನೆಂದೂ ನಾನು ನಿಮ್ಮಲ್ಲಿ ಯಾರನ್ನೂ ವಿಫಲಗೊಳಿಸುವುದಿಲ್ಲ. 476 00:43:24,728 --> 00:43:26,104 ಹೊರಕ್ಕೆ ಸುರಕ್ಷಿತ ದಾರಿ ಬಲ್ಲೆ. 477 00:43:37,741 --> 00:43:39,826 ಪೆರಿನ್ ಮತ್ತು ಲೋಯಿಲ್ ಕ್ಷೇಮವಾಗಿದ್ದಾರಾ? 478 00:43:39,909 --> 00:43:41,036 ಗೊತ್ತಿಲ್ಲ. 479 00:43:41,119 --> 00:43:42,203 ಅವರನ್ನು ಸೆರೆಹಿಡಿದವರು ಯಾರು? 480 00:43:42,996 --> 00:43:44,998 ಪಶ್ಚಿಮದ ದಾಳಿಕೋರರು ಎಂದಷ್ಟೇ ಕೇಳ್ಪಟ್ಟೆ. 481 00:43:47,709 --> 00:43:49,586 ಫಾಮಿಗೆ ದೀರ್ಘ ಪ್ರಯಾಣವಿದೆ. 482 00:43:49,669 --> 00:43:51,838 ಉಪಾಯ ಯೋಚಿಸಲು ನಮಗೆ ಸಮಯ ಸಿಗುತ್ತದೆ. 483 00:43:57,260 --> 00:44:01,222 ನಿಮ್ಮನ್ನು ಹಿಂಬಾಲಿಸುತ್ತಿರುವೆ. ಟವರಿನಿಂದ ಯಾಕೆ ಹೊರನುಸುಳುತ್ತಿದ್ದೀರಿ ಎಂದು ತಿಳಿಯಲು. 484 00:44:01,306 --> 00:44:03,558 ಈಗಲೇ ಮರಳಿ ನಿನ್ನ ಬಾಯಿ ಮುಚ್ಚಿಕೊಂಡಿರು, ಇಲ್ಲವಾದಲ್ಲಿ… 485 00:44:03,641 --> 00:44:04,476 ಇಲ್ಲವಾದರೆ ಏನು? 486 00:44:05,101 --> 00:44:08,021 ಎಗ್ವೀನ್ ನನಗೆ ತೊಂದರೆ ಮಾಡಲ್ಲ, ಮತ್ತು ನೀನು ಸೋರ್ಸನ್ನು ಅಪ್ಪಿಕೊಳ್ಳಲಾರೆ. 487 00:44:10,982 --> 00:44:12,442 ಲಿಯಾಂಡ್ರಿನ್ ಸೆಡಾಯ್! 488 00:44:16,821 --> 00:44:19,407 ನಾನೇ ಅವರನ್ನಿಲ್ಲಿ ಕರೆತಂದೆ. ಅವರದೇನೂ ತಪ್ಪಿಲ್ಲ. 489 00:44:19,491 --> 00:44:20,533 ತಪ್ಪು ನನ್ನದೇ. 490 00:44:23,745 --> 00:44:25,497 ನೀನೊಂದು ತೊಡಕು. 491 00:44:29,250 --> 00:44:30,710 ಇದಕ್ಕಾಗಿ ನನ್ನನ್ನು ಕ್ಷಮಿಸು. 492 00:44:52,690 --> 00:44:54,192 -ಹಾಸಿಗೆಯಲ್ಲಿ ಏನು ಮಾಡ್ತಿರುವೆ? -ಏಳು. 493 00:44:54,275 --> 00:44:55,568 -ಹಾಸಿಗೆಯಿಂದ ಏಳು! -ಬಾ, ಮತ್ತೆ! 494 00:44:55,652 --> 00:44:57,445 -ಕೆಲಸದ ಸಮಯ. -ಗಿರಾಕಿಗಳು ಕಾಯುತ್ತಿದ್ದಾರೆ! 495 00:44:57,529 --> 00:44:58,947 ಇದು ನಡೆಯುತ್ತಿಲ್ಲ. 496 00:44:59,030 --> 00:45:00,073 ಚಿಕ್ಕಮ್ಮ! 497 00:45:01,449 --> 00:45:03,451 ಯಾರೂ ತಮ್ಮ ವಿಧಿಯಿಂದ ತಪ್ಪಿಸಿಕೊಳ್ಳಲಾರರು. 498 00:45:03,535 --> 00:45:05,703 ಎಲ್ಲರಿಗಿಂತ ಚೆನ್ನಾಗಿ ಅದನ್ನು ನೀನು ಬಲ್ಲೆ. 499 00:45:10,166 --> 00:45:12,127 ಜೊತೆಯಾಗಿ ನಾವು ಸಂತೋಷವಾಗಿರುತ್ತೇವೆಯೇ? 500 00:45:17,132 --> 00:45:18,800 ನಾನು ದೊಡ್ಡವನಾದಾಗ ಏನಾಗುವೆ? 501 00:45:22,011 --> 00:45:22,887 ಇಲ್ಲ! 502 00:45:28,351 --> 00:45:29,686 ನಿನ್ನ ಕಣ್ಣುಗಳನ್ನು ತೆರೆ. 503 00:45:36,151 --> 00:45:37,444 ನಿನಗೇನು ಕಾಣುವುದು? 504 00:45:42,407 --> 00:45:44,159 ಅದ್ಭುತವಾಗಿದೆ, ಅಲ್ಲವೇ? 505 00:45:44,242 --> 00:45:45,326 ಏನನ್ನೂ ನೋಡದಿರುವುದು. 506 00:45:46,369 --> 00:45:48,121 ಇನ್ನೆಂದೂ ಜಾತ್ರೆಯ ಆಕರ್ಷಣೆಯಾಗಿಲ್ಲದಿರುವುದು. 507 00:45:48,204 --> 00:45:49,164 ಯಾರು ನೀನು? 508 00:45:50,123 --> 00:45:52,542 ಈ ಯುಗದಲ್ಲಿ ನನಗೆ ಬಹಳಷ್ಟು ನಾಮಗಳಿವೆ. 509 00:45:52,625 --> 00:45:53,918 ಸುಳ್ಳುಗಳ ತಂದೆ. 510 00:45:54,002 --> 00:45:55,628 ನಂಬಿಕೆ ದ್ರೋಹಿ. 511 00:45:56,129 --> 00:45:57,213 ತಿರಸ್ಕೃತ. 512 00:45:58,673 --> 00:45:59,924 ಇಲ್ಲ. 513 00:46:00,008 --> 00:46:01,801 ಇಲ್ಲ, ಹೀಗೆಂದು ಲಿಯಾಂಡ್ರಿನ್ ಹೇಳಲಿಲ್ಲ-- 514 00:46:01,885 --> 00:46:05,138 ನಿನ್ನ ದೃಷ್ಟಿಯನ್ನು ಕಸಿದುಕೊಳ್ಳಲು ಆಕೆ ಮಾತು ಕೊಟ್ಟಳು. 515 00:46:05,221 --> 00:46:08,141 ಒಬ್ಬ ಅಯಿಸ್ ಸೆಡಾಯ್ ಅದನ್ನು ಮಾಡಬಲ್ಲಳೆಂದು ನಿಜವಾಗಿಯೂ ನಿನಗನಿಸುತ್ತಾ? 516 00:46:10,560 --> 00:46:14,522 ಕೆಲವಕ್ಕೆ, ಕತ್ತಲೆಯೇ ಸೂಕ್ತ ಆಧಾರ. 517 00:46:14,606 --> 00:46:15,690 ನನ್ನ ಸಮ್ಮತಿ ಇಲ್ಲ. ನಾನು-- 518 00:46:19,903 --> 00:46:21,488 ನೀನು ತೊಂದರೆ ಕೊಡಲು ನಾನು ನೆರವಾಗಲ್ಲ. 519 00:46:22,530 --> 00:46:23,615 ನೆರವಾಗುವೆ. 520 00:46:26,701 --> 00:46:27,994 ಮ್ಯಾಟಿಗೆ ತೊಂದರೆ ಮಾಡಲು ಬಿಡೆನು. 521 00:46:29,454 --> 00:46:30,497 ನೀನು ಬಿಡಬಹುದು. 522 00:46:32,874 --> 00:46:37,086 ಮುಂದೆ ಅವನನ್ನೆಲ್ಲಿಗೆ ಕರೆದೊಯ್ಯಬೇಕೆಂದು ತಿಳಿಯಲು ನೀನಿಲ್ಲಿಗೆ ಬಂದೆ. 523 00:46:39,297 --> 00:46:41,299 ನಿನ್ನ ಶಾಪವನ್ನು ನಾನು ವಾಪಸ್ ಪಡೆಯಬೇಕಾ? 524 00:46:42,258 --> 00:46:43,676 ಅವನನ್ನು ಕೈರ್ಹಿನ್ನಿಗೆ ಕರೆತಾ. 525 00:46:54,229 --> 00:46:55,605 ಕೈರ್ಹಿನ್ನಲ್ಲೇನಿದೆ? 526 00:48:10,888 --> 00:48:11,764 ರಾಂಡ್! 527 00:48:26,070 --> 00:48:27,363 ನನ್ನ ಹಿಂದೆಯೇ ಇರು. 528 00:48:48,593 --> 00:48:49,594 ಕ್ಷಮಿಸು. 529 00:48:50,511 --> 00:48:52,055 -ನೀನೇನು ಮಾಡಿದೆ? -ಕ್ಷಮಿಸು. 530 00:48:52,138 --> 00:48:53,389 ನೀನು ಈಗ ಏನು ಮಾಡಿದೆ? 531 00:48:54,057 --> 00:48:55,892 -ನಾನು ನಿನಗೆ ಹೇಳಬೇಕಿತ್ತು. -ನೀನು... 532 00:48:55,975 --> 00:48:58,478 -ಅದನ್ನು ತಡೆಯಬಹುದು ಅಂದುಕೊಂಡೆ. -ನೀನೀಗ ಆವಾಹನೆ ಮಾಡಿದೆಯಾ? 533 00:48:59,020 --> 00:49:00,438 ನಾನು ನಿನಗೆ ಹೇಳಬೇಕಿತ್ತು. 534 00:49:05,276 --> 00:49:06,569 ನನ್ನ ವಸತಿಗೃಹದಲ್ಲಿ ಬೆಂಕಿ… 535 00:49:06,653 --> 00:49:09,280 ಇಲ್ಲ, ಇಲ್ಲ. ಅದೊಂದು ಅವಘಡ. ಅದು ಅವಘಡ. 536 00:49:10,615 --> 00:49:11,866 ಯಾವ ರೀತಿಯ ಅವಘಡ? 537 00:49:11,949 --> 00:49:14,619 ನನಗೆ ಹುಚ್ಚು ಹಿಡಿದಿಲ್ಲ, ಆಯ್ತಾ? 538 00:49:14,702 --> 00:49:16,079 ನನಗೆ ಹುಚ್ಚು ಹಿಡಿದಿಲ್ಲ. 539 00:49:21,250 --> 00:49:22,502 ಅದು ನಿನಗೆ ಗೊತ್ತಿದೆ. 540 00:49:24,545 --> 00:49:26,089 ನೀನು ನನ್ನನ್ನು ಬಲ್ಲೆ. ಅಲ್ಲವೇ? 541 00:49:43,940 --> 00:49:44,982 ಅರ್ಥವಾಯಿತು. 542 00:49:51,572 --> 00:49:53,408 ನಾನೀಗ ಹೊರಡುವೆ. ಧನ್ಯವಾದ. 543 00:49:54,784 --> 00:49:56,786 ಎಲ್ಲದಕ್ಕೂ. ನನ್ನ ಆಸೆ ನಾವು… 544 00:50:01,374 --> 00:50:02,417 ಇರಲಿ ಬಿಡು. 545 00:50:05,378 --> 00:50:06,546 ಎಲ್ಲಿಗೆ ಹೋಗುವೆ? 546 00:50:10,341 --> 00:50:11,801 ಗಂಡಸರಿಗೆ ಹುಚ್ಚು ಹಿಡಿದಾಗ, 547 00:50:13,469 --> 00:50:15,930 ಅವರು ಪ್ರೀತಿಸುವವರನ್ನು ಮೊದಲು ಕೊಲ್ಲುತ್ತಾರಂತೆ… 548 00:50:21,561 --> 00:50:23,438 ಅದಕ್ಕೆ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಹೋಗುವೆ. 549 00:50:27,275 --> 00:50:28,818 ನನ್ನನ್ನು ಪ್ರೀತಿಸುವೆ ಅಂತಿದ್ದೀಯಾ? 550 00:50:37,285 --> 00:50:39,662 ನೀನು ಆವಾಹನೆ ಮಾಡಬಲ್ಲೆ ಎಂದು ನನಗೇಕೆ ಹೇಳಲಿಲ್ಲ? 551 00:50:43,416 --> 00:50:46,544 ನನ್ನನ್ನು ಪುರುಷನಾಗಿ ಕಂಡ ಮೊದಲ ಹೆಂಗಸು ನೀನು. 552 00:50:48,713 --> 00:50:51,299 ನೀನು ನನ್ನನ್ನು ರಾಕ್ಷಸನನ್ನಾಗಿ ನೋಡುವುದು ನನಗೆ ಬೇಕಿರಲಿಲ್ಲ. 553 00:51:00,892 --> 00:51:01,851 ನೀನದಲ್ಲ. 554 00:51:07,732 --> 00:51:10,777 ನೀನು ಮಾಡಿದ್ದು, ನಿನ್ನ ಸ್ವಭಾವದ ಒಂದು ಭಾಗವಷ್ಟೇ. 555 00:51:12,570 --> 00:51:13,905 ನೀನು ಅದನ್ನು ಮುಚ್ಚಿಡಬಾರದು. 556 00:51:18,201 --> 00:51:19,535 ನಾನೊಮ್ಮೆ ಹಾಗೆ ಮಾಡಿದೆ. 557 00:51:20,578 --> 00:51:24,582 ನನ್ನ ಆತ್ಮವನ್ನು ಕನ್ನಡಿಯಂತೆ ಮಾರ್ಪಡಿಸಿ, ಅವನು ನೋಡಬೇಕಾದುದನ್ನು ಮಾತ್ರ ಪ್ರತಿಬಿಂಬಿಸಿದೆ, 558 00:51:25,458 --> 00:51:27,293 ನನ್ನ ಮಿಕ್ಕ ಭಾಗವನ್ನು ಕತ್ತಲೆಗೆ ದೂಡಿದೆ. 559 00:51:30,379 --> 00:51:32,340 ಆದರೆ ಒಂದು ದಿನ, ಆತ ದೀರ್ಘವಾಗಿ ನೋಡಿದ, 560 00:51:32,840 --> 00:51:33,883 ತುಂಬಾ ಜಾಗ್ರತೆಯಿಂದ. 561 00:51:39,972 --> 00:51:42,850 ನಿನ್ನೆಲ್ಲವನ್ನೂ ಪ್ರೀತಿಸಲು ನೀನು ಯಾರಿಗಾದರೂ ಅವಕಾಶ ಕೊಡಬೇಕು. 562 00:51:44,268 --> 00:51:45,394 ಅವರು ಪ್ರೀತಿಸದಿರಬಹುದು, 563 00:51:47,021 --> 00:51:48,898 ಆದರೂ ನೀನವರಿಗೊಂದು ಅವಕಾಶ ಕೊಡಬೇಕು. 564 00:51:49,398 --> 00:51:51,567 ನಮ್ಮ ಬಳಿ ಎಷ್ಟು ಸಮಯವಿದೆ ಎಂದು ನನಗೆ ಗೊತ್ತಿಲ್ಲ… 565 00:51:53,444 --> 00:51:54,654 ಎಲ್ಲಿಯವರೆಗೆ ಎಂದರೆ ನಾನು-- 566 00:51:54,737 --> 00:51:56,489 ಎಲ್ಲರಂತೆಯೇ… 567 00:51:58,241 --> 00:51:59,325 ಎಂದಿಗೂ ಸಾಲದು. 568 00:52:15,299 --> 00:52:16,843 ಖಚಿತವಾಗಿ ನಿದ್ರಿಸುತ್ತಿದ್ದಾನೆಯೇ? 569 00:52:17,552 --> 00:52:18,469 ನಿನಗೇನು ತಿಳಿಯಿತು? 570 00:52:18,970 --> 00:52:20,888 ಹಳೆಯ ಭಾಷೆಯಲ್ಲಿ ಒಂದು ಭವಿಷ್ಯವಾಣಿ. 571 00:52:27,019 --> 00:52:29,397 ಅದು ಯಾರ ಬಗ್ಗೆ ಎಂದು ಲಾನಿಗೆ ತಿಳಿಯಬಾರದು. 572 00:52:29,480 --> 00:52:30,565 ಲಾನ್ಫಿಯರ್. 573 00:52:31,357 --> 00:52:32,525 ಫಾರ್ಸೇಕನ್. 574 00:52:33,651 --> 00:52:35,236 ಆಕೆಯ ಮುದ್ರೆ ಮುರಿದಿದೆ. 575 00:52:37,280 --> 00:52:38,614 ಮತ್ತೆ ನಮ್ಮ ಜಗತ್ತಿಗೆ ಬಂದಿದ್ದಾಳೆ. 576 00:52:42,410 --> 00:52:45,454 "ಇರುಳಿನ ಮಗಳು, ಮತ್ತೊಮ್ಮೆ ನಡೆಯುವಳು. 577 00:52:47,039 --> 00:52:49,584 ಅವಳಿನ್ನೂ ಕಾದಾಡಬೇಕಾದ ಪುರಾತನ ಯುದ್ಧ. 578 00:52:51,252 --> 00:52:53,254 ತನ್ನ ಹೊಸ ಪ್ರೇಮಿಯನ್ನು ಅರಸುವಳು, 579 00:52:53,337 --> 00:52:55,464 ಆತ ಅವಳ ಸೇವೆ ಮಾಡಿ ಸಾಯುವನು, 580 00:52:56,257 --> 00:52:58,050 ಆದರೂ ಸೇವೆ ಮಾಡುವನು." 581 00:52:59,719 --> 00:53:00,553 ಸೆಲೀನ್... 582 00:53:01,220 --> 00:53:03,306 "ಅವಳ ಬರುವುವಿಕೆಗೆ ಅಡ್ಡ ನಿಲ್ಲುವವರು ಯಾರು? 583 00:53:08,978 --> 00:53:11,147 ಶೈನಿಂಗ್ ವಾಲ್ಸ್ ಮಂಡಿಯೂರುವುದು. 584 00:53:13,608 --> 00:53:15,818 ರಕ್ತವೇ ರಕ್ತವನ್ನು ಸೇವಿಸುತ್ತದೆ. 585 00:53:17,945 --> 00:53:19,822 ರಕ್ತವೇ ರಕ್ತವನ್ನು ಕೋರುತ್ತದೆ..." 586 00:53:22,241 --> 00:53:25,620 ರಕ್ತ ಇದೆ, ರಕ್ತ ಇತ್ತು… 587 00:53:25,703 --> 00:53:27,830 ನಿನಗೊಂದು ವಿಷಯ ತಿಳಿಯುವುದಿದೆ, ರಾಂಡ್. 588 00:53:27,914 --> 00:53:30,416 ...ಮತ್ತು ರಕ್ತ ಎಂದೆಂದಿಗೂ ಇರುತ್ತದೆ. 589 00:53:32,585 --> 00:53:34,420 ನಾನೂ ಒಬ್ಬ ರಾಕ್ಷಸಿ. 590 00:53:44,931 --> 00:53:46,015 ಅಂದರೆ ಏನು ಅರ್ಥ? 591 00:53:56,192 --> 00:53:57,193 ಏನಾಗುತ್ತಿದೆ? 592 00:54:00,321 --> 00:54:01,238 ಏನಾಗುತ್ತಿದೆ? 593 00:54:16,796 --> 00:54:18,756 ಈಗ, ಬೇಗ, ನಮಗೆ ಹೆಚ್ಚು ಸಮಯವಿಲ್ಲ. 594 00:54:19,340 --> 00:54:20,466 ನೀನವಳನ್ನು ಕೊಂದೆ. 595 00:54:27,515 --> 00:54:28,557 ನೀನವಳನ್ನು ಕೊಂದೆ. 596 00:54:28,641 --> 00:54:29,767 ನಾನು ಕೊಂದಿಲ್ಲ. 597 00:54:29,850 --> 00:54:30,977 ನಾನು ಕೊಲ್ಲಲಾಗಲಿಲ್ಲ. 598 00:54:31,519 --> 00:54:33,270 ಏಕೆಂದರೆ ಆಕೆ ಲಾನ್ಫಿಯರ್, 599 00:54:33,354 --> 00:54:34,563 ಇರುಳಿನ ಮಗಳು, 600 00:54:35,439 --> 00:54:37,274 ಫಾರ್ಸೇಕನ್ರಲ್ಲಿ ಅತ್ಯಂತ ಅಪಾಯಕಾರಿ. 601 00:54:37,942 --> 00:54:40,987 ಅವಳ ಹೆಸರು ಸೆಲೀನ್. ಫೋರ್ಗೇಟಲ್ಲಿ ವಸತಿಗೃಹ ಹೊಂದಿದ್ದಾಳೆ. 602 00:54:41,070 --> 00:54:42,697 ಅವಳು ನಿನಗೆ ಸುಳ್ಳು ಹೇಳಿದ್ದಾಳೆ, 603 00:54:43,322 --> 00:54:44,532 ಅದನ್ನು ನಾನು ಮಾಡಲಾರೆ. 604 00:54:51,205 --> 00:54:52,915 ಈಗ ನಾವು ಓಡಬೇಕು. 605 00:54:54,583 --> 00:54:55,584 ಬೇಗ! 606 00:54:58,754 --> 00:54:59,714 ಬೇಗ! 607 00:57:22,231 --> 00:57:24,233 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 608 00:57:24,316 --> 00:57:26,318 ಸೃಜನಶೀಲ ಮೇಲ್ವಿಚಾರಕರು ವಿವೇಕ್