1 00:00:06,006 --> 00:00:08,884 {\an8}ಈ ಹಿಂದೆ 2 00:00:08,884 --> 00:00:09,844 {\an8}ಅವರು ಸಿದ್ಧವಾಗಿದ್ದಾರಾ? 3 00:00:11,095 --> 00:00:12,513 ಅವರು ಸಿದ್ಧವಾಗಿರಲೇಬೇಕು, ಅಲ್ಲವೇ? 4 00:00:13,180 --> 00:00:14,598 ಈ ದಾರಿಯಲ್ಲಿ ಒಟ್ಟಿಗೆ ನಡೆದಿದ್ದೇವೆ. 5 00:00:14,598 --> 00:00:16,392 ನಾವೆಂದಿಗೂ ಈ ದಾರಿಯಲ್ಲಿ ಒಟ್ಟಿಗೆ ನಡೆದಿಲ್ಲ. 6 00:00:16,392 --> 00:00:19,145 ನಿನ್ನನ್ನು ನಂಬಿದ್ದಕ್ಕಾಗಿ ನನ್ನನ್ನು ನಿನಗಾಗಿ ಅರ್ಪಿಸಿದೆ. 7 00:00:19,145 --> 00:00:20,062 ನೀನು ನಿರಾಸೆ ಮಾಡಿದೆ. 8 00:00:20,062 --> 00:00:22,022 ಅಲನಾ ನಿನ್ನನ್ನು ಟವರಿಗೆ ಕರೆದೊಯ್ಯುತ್ತಾಳೆ. 9 00:00:22,773 --> 00:00:24,442 ನನ್ನಿಂದ ನಿನಗೆ ಏನು ಆಗಬೇಕು? 10 00:00:25,443 --> 00:00:26,777 ನಿನಗೆ ತೊಂದರೆ ಕೊಡುವುದಿಲ್ಲ. 11 00:00:29,155 --> 00:00:30,156 ನೀನು ಮಾಡಲಾರೆ. 12 00:00:30,573 --> 00:00:31,907 ಲೋಗೈನ್ ಅಬ್ಲಾರ್. 13 00:00:32,491 --> 00:00:34,910 ಆವಾಹನೆಗೆ ಯತ್ನಿಸುವ ಮಿಕ್ಕೆಲ್ಲಾ 14 00:00:34,910 --> 00:00:37,621 ಪುರುಷರಿಗೆ ನೀನೊಂದು ನಿದರ್ಶನವಾಗಬೇಕು. 15 00:00:39,039 --> 00:00:40,082 ಅಲ್ಲಿದ್ದಾಳೆ. 16 00:00:40,082 --> 00:00:41,292 ಆರ್ಚಸ್ ಬಗ್ಗೆ ಕೇಳಿರುವೆಯಾ? 17 00:00:41,292 --> 00:00:43,836 ನವಶಿಷ್ಯೆಯರು ಸ್ವೀಕೃತರಾಗಲು ಒಳಗೊಳ್ಳುವ ಪರೀಕ್ಷೆಯೇ? 18 00:00:43,836 --> 00:00:44,754 ಆಕೆ ಸಿದ್ಧಳಾಗಿರುವಳೇ? 19 00:00:45,796 --> 00:00:48,591 ತಾನು ಹಿಂದೆ ಆಗಿದ್ದನ್ನು ತೊರೆಯಲು ಸಿದ್ಧಳಾಗಿದ್ದಾಳೆ. 20 00:00:48,591 --> 00:00:51,343 ಅವಳು ಆರ್ಚಸ್ ಒಳಗೆ ಸಾಯಬಹುದು. ಮುಂಚೆ ತುಂಬಾ ಜನ ಸತ್ತಿದ್ದಾರೆ. 21 00:00:52,261 --> 00:00:53,804 ಆಕೆಯ ಭಯವೇನೆಂದು ಆಕೆಗೆ ಗೊತ್ತೇ? 22 00:00:56,390 --> 00:00:57,933 ಆಕೆ ಅವುಗಳನ್ನು ಎಂದಿಗೂ ಎದುರಿಸಿಲ್ಲ... 23 00:00:57,933 --> 00:00:59,101 ನೈನೀವ್! 24 00:00:59,727 --> 00:01:01,353 ...ಆದರೆ ಈಗ ತಯಾರಿದ್ದಾಳೆ. 25 00:01:01,353 --> 00:01:03,397 ಕಾಲವು ಯಾವ ಹೆಣ್ಣಿಗೂ ಕಾಯುವುದಿಲ್ಲ. 26 00:01:12,573 --> 00:01:13,783 ಅವು ಏನು? 27 00:01:15,701 --> 00:01:16,911 ಟೆರ್'ಆಂಗ್ರಿಯಲ್. 28 00:01:19,038 --> 00:01:20,289 ಅವು ಏನು ಮಾಡುತ್ತವೆ? 29 00:01:20,289 --> 00:01:21,874 ಎಷ್ಟನ್ನೋ, ಮಗು. 30 00:01:22,750 --> 00:01:24,794 ಅವು ಬ್ರೇಕಿಂಗಿಗೂ ಮುಂಚೆ ಇದ್ದಂಥವು, 31 00:01:25,836 --> 00:01:29,173 ಮಹಿಳೆಯರು ಸ್ವತಃ ಒನ್ ಪವರಿಂದ ವಸ್ತುಗಳನ್ನು ಸೃಷ್ಟಿಸಬಹುದಾದಂತಹ 32 00:01:29,173 --> 00:01:30,841 ಕಾಲದಲ್ಲಿ ತಯಾರಾದಂಥವು. 33 00:01:31,884 --> 00:01:36,680 ಕೆಲ ಟೆರ್'ಆಂಗ್ರಿಯಲ್ಗಳಿಂದ ಅಯಿಸ್ ಸೆಡಾಯ್ ಕೆಲಸ ಮಾಡಿಸಿಕೊಳ್ಳುತ್ತಾರೆ, ಹೀಗೆ. 34 00:01:36,680 --> 00:01:40,059 ಮಿಕ್ಕವರು ಆವಾಹನೆ ಮಾಡಬಲ್ಲ ಮಹಿಳೆಯ ಸಮಕ್ಷಮದಲ್ಲಿ ತಮ್ಮ ಕೆಲಸ ಮಾಡುತ್ತಾರೆ. 35 00:01:40,059 --> 00:01:41,644 ಅವುಗಳನ್ನು ಯಾಕೆ ಮಾಡಿದರು ಗೊತ್ತಿಲ್ಲ. 36 00:01:41,644 --> 00:01:44,688 ಎಷ್ಟನ್ನೋ ತಡೆಯಲು ಬಹಳ ಬೆಲೆ ತೆತ್ತಿದ್ದೇವೆ. 37 00:01:44,688 --> 00:01:48,526 ಎಷ್ಟೋ ಅಯಿಸ್ ಸೆಡಾಯ್ ಅದನ್ನು ಕಲಿಯುತ್ತಾ ಸತ್ತುಹೋಗಿದ್ದಾರೆ ಅಥವಾ ದಣಿದಿದ್ದಾರೆ. 38 00:01:48,526 --> 00:01:50,861 ಮತ್ತು ನಾನು ಅವರ ಮೂಲಕ ಸಾಗಿ ಹೋಗಬೇಕೇ? 39 00:01:50,861 --> 00:01:52,780 ಇದೇನು ಮಾಡುತ್ತದೆ ಎಂದು ನಮಗೆ ಗೊತ್ತು. 40 00:01:52,780 --> 00:01:55,533 ನಿನ್ನ ಮಹಾಭೀತಿಯ ಮುಂದೆ ನಿನ್ನನ್ನು ಮುಖಾಮುಖಿ ತರುತ್ತದೆ, 41 00:01:55,533 --> 00:01:58,494 ಮತ್ತು ಆ ಭೀತಿ ಏನೆಂದು ಅರಿಯುವುದು ನಿನಗೆ ಬಿಟ್ಟಿದ್ದು. 42 00:01:58,494 --> 00:02:00,955 ಮತ್ತು ನೀನು ಆಶಿಸುವುದಕ್ಕಿಂತ ಹೆಚ್ಚು ಹೇಳಬೇಕಿಲ್ಲ. 43 00:02:02,289 --> 00:02:06,210 ಮತ್ತೆ, ಏನು? ನಾನು ಒಂದು ಆರ್ಚ್ ಮೂಲಕ ಒಳಹೋಗಿ ಹೊರಬರಬೇಕೇನು? 44 00:02:06,210 --> 00:02:07,837 ಮೂರು ಸಲ ಮಾಡಿದರೆ ಮುಗಿಯಿತೇನು? 45 00:02:07,837 --> 00:02:11,715 ಅದನ್ನೇ ನೀನು ಪ್ರಮುಖವಾಗಿ ನೋಡುವೆ ಎಂದರೆ, ಹೌದು. 46 00:02:13,050 --> 00:02:14,885 ಯಾವುದೇ ಮಹಿಳೆ ಈ ಕೋಣೆಗೆ ಬರದ ಹೊರತು 47 00:02:14,885 --> 00:02:18,013 ಕೇಳದ ಎರಡು ವಿಚಾರಗಳನ್ನು ನಿನಗೆ ಹೇಳಲಿದ್ದೇವೆ. 48 00:02:18,013 --> 00:02:20,224 ಮೊದಲನೆಯದು, ನೀನು ಶುರು ಮಾಡಿದಾಗ, 49 00:02:20,224 --> 00:02:22,643 ಕೊನೆಯವರೆಗೂ ಮುಂದುವರಿಸಬೇಕು. 50 00:02:22,643 --> 00:02:24,228 ಮುಂದುವರೆಯಲು ನಿರಾಕರಿಸಿದರೆ, 51 00:02:24,228 --> 00:02:26,480 ನಿನಗೆ ವರ್ಷಕ್ಕೆ ಸಾಕಾಗುವಷ್ಟು ಬೆಳ್ಳಿ ಕೊಟ್ಟು 52 00:02:26,480 --> 00:02:28,941 ನಿನ್ನನ್ನು ಟವರಿನಿಂದ ಹೊರಹಾಕಲಾಗುತ್ತದೆ, 53 00:02:28,941 --> 00:02:31,151 ಆದರೆ ನಿನ್ನನ್ನು ಮತ್ತೆ ಎಂದಿಗೂ ಸ್ವೀಕರಿಸುವುದಿಲ್ಲ. 54 00:02:31,151 --> 00:02:36,156 ಎರಡನೆಯದಾಗಿ, ಅರಸುವುದು, ಶ್ರಮಿಸುವುದು ಎಂದರೆ ಅಪಾಯವನ್ನು ಅರಿಯುವುದು, 55 00:02:36,156 --> 00:02:38,075 ಮತ್ತು ನೀನಿಲ್ಲಿ ಅಪಾಯವನ್ನು ಅರಿಯುವೆ. 56 00:02:38,993 --> 00:02:41,161 ಕೆಲ ಹೆಂಗಸರು ಒಳಹೊಕ್ಕು ಮರಳಿ ಬಂದೇ ಇಲ್ಲ. 57 00:02:43,956 --> 00:02:45,875 ಇದೇ ನಿನ್ನ ಕಡೆಯ ಅವಕಾಶ, ಮಗು. 58 00:02:47,209 --> 00:02:49,253 ನೀನು ವಾಪಸ್ ಹೊರಡಬಹುದು, ಈಗಲೇ, 59 00:02:49,253 --> 00:02:51,881 ಮತ್ತು ನಿನಗೆ ವಿರುದ್ಧವಾಗಿ ಒಂದು ಗುರುತು ಮಾತ್ರ ಉಳಿಯುತ್ತದೆ. 60 00:02:51,881 --> 00:02:54,550 ಇನ್ನೆರಡು ಬಾರಿ ನಿನಗಿಲ್ಲಿ ಬರಲು ಅನುಮತಿಸಲಾಗುತ್ತದೆ, 61 00:02:54,550 --> 00:02:58,304 ಮತ್ತು ಮೂರನೆಯ ಬಾರಿ ನಿರಾಕರಿಸಿದ ನಂತರ ಮಾತ್ರವೇ ನಿನ್ನನ್ನು ಟವರಿನಿಂದ ಹೊರಹಾಕಲಾಗುತ್ತದೆ. 62 00:02:59,889 --> 00:03:02,516 ನಾನೇ ಸ್ವತಃ ಮೊದಲ ಬಾರಿ ಇಲ್ಲಿ ಬಂದಾಗ ಮಾಡಲಾಗಲಿಲ್ಲ. 63 00:03:02,516 --> 00:03:05,895 ನೀನು ಇದನ್ನು ಬೇರೆ ಯಾರಿಗಾದರೂ ಮಾಡುತ್ತಿದ್ದರೆ, ಸೋಲುವೆ. 64 00:03:05,895 --> 00:03:07,479 ಇದನ್ನು ನಿನಗಾಗಿ ಮಾಡು, 65 00:03:07,980 --> 00:03:09,315 ಅಥವಾ ಮಾಡಲೇಬೇಡ. 66 00:03:16,238 --> 00:03:17,364 ನಾನು ಸಿದ್ಧಳಿದ್ದೇನೆ. 67 00:03:18,407 --> 00:03:19,408 ನಿನ್ನ ಉಡುಪು. 68 00:03:46,435 --> 00:03:48,145 ನಿನಗೇನೇ ಕಾಯುತ್ತಿದ್ದರೂ, 69 00:03:49,146 --> 00:03:51,690 ನಿನ್ನ ಚತುರತೆಯಿಂದ ಮಾತ್ರ ಅದನ್ನು ಎದುರಿಸಬಲ್ಲೆ. 70 00:03:52,358 --> 00:03:56,737 ಆರ್ಚಸ್ ಒಳಗಡೆ ನಿನಗೆ ಒನ್ ಪವರ್ ಸಹ ಲಭ್ಯವಿರುವುದಿಲ್ಲ. 71 00:04:11,335 --> 00:04:14,213 ಮರಳುವ ದಾರಿ ಬರುತ್ತದೆ ಆದರೆ ಒಮ್ಮೆ ಮಾತ್ರ. 72 00:05:19,236 --> 00:05:20,446 ಇಲ್ಲಿರುವೆ ನೋಡು. 73 00:05:21,822 --> 00:05:22,656 ಅಪ್ಪ. 74 00:05:24,116 --> 00:05:25,325 ಅವು ನಿನಗೆಲ್ಲಿ ಸಿಕ್ಕವು? 75 00:05:28,996 --> 00:05:29,997 ಗೊತ್ತಿಲ್ಲ. 76 00:05:29,997 --> 00:05:31,999 ನಾನಿಲ್ಲಿಗೆ ಹೇಗೆ ಬಂದೆನೆಂದು ನೆನಪಾಗುತ್ತಿಲ್ಲ. 77 00:05:39,548 --> 00:05:41,633 ನೀನು ಜಾಗೃತಳಾಗಿರಬೇಕು, ಮಗಳೇ. 78 00:05:42,468 --> 00:05:44,094 ಗಿಡಗಳು ಅಪಾಯಕಾರಿಯಾಗಿರಬಹುದು. 79 00:05:45,179 --> 00:05:46,972 ಹಾಗೆ. ಈಗ ಸರಿಹೋಯಿತು. 80 00:05:48,057 --> 00:05:48,932 ಮರೆಯಬೇಡ, 81 00:05:48,932 --> 00:05:50,726 ಕ್ರಿಮ್ಸನ್ ಮುಳ್ಳುಗಳು ವಿಷಕಾರಿ. 82 00:05:50,726 --> 00:05:52,478 ಕೆಂಪು ಅಂದರೆ ಸಾವು ಅಂತ ನೆನಪಿಡು. 83 00:05:56,565 --> 00:05:57,441 ಏನದು? 84 00:06:10,037 --> 00:06:10,871 ಅಪ್ಪ! 85 00:06:21,965 --> 00:06:22,925 ಇಲ್ಲ! 86 00:06:23,634 --> 00:06:24,510 ಇಲ್ಲ! 87 00:06:26,303 --> 00:06:27,513 ಇಲ್ಲ! 88 00:06:51,662 --> 00:06:53,205 -ಅಮ್ಮ! -ನೈನೀವ್! 89 00:06:53,205 --> 00:06:55,415 -ನಿನಗೆ ಪೆಟ್ಟಾಗಿದೆ. -ಎಲ್ನೋರ್. ಓಡು! 90 00:07:05,551 --> 00:07:06,468 ಬನ್ನಿ. 91 00:07:07,052 --> 00:07:08,220 ಕೆಳಮಹಡಿ. 92 00:07:19,648 --> 00:07:21,275 ಈಗ ನೀನು ಧೈರ್ಯವಂತ ಹುಡುಗಿಯಾಗಿರಬೇಕು. 93 00:07:21,275 --> 00:07:24,361 ಏನೇ ನಡೆದರೂ, ನೀನು ನಿಶ್ಯಬ್ದವಾಗಿರಬೇಕು, ಮತ್ತು ಇಲ್ಲಿಯೇ ಇರಬೇಕು. 94 00:07:24,361 --> 00:07:25,529 ನಿನಗೆ ಸಹಾಯ ಮಾಡಬಲ್ಲೆ, ಅಪ್ಪ. 95 00:07:25,529 --> 00:07:28,157 ನಮ್ಮ ಮಕ್ಕಳು ನಮ್ಮನ್ನೆಂದಿಗೂ ಹಿಡಿದಿರುವಂತೆ... 96 00:07:28,157 --> 00:07:30,409 ...ನಾವು ಭೂಮಿಯ ಒಳಗೆ ಹೋಗುವೆವು... 97 00:07:30,409 --> 00:07:33,412 ಮತ್ತು ನಾವೆಂದಿಗೂ ಒಂಟಿಯಾಗಿರುವುದಿಲ್ಲ. 98 00:07:34,997 --> 00:07:36,039 ಬೀರಿಯನ್! 99 00:07:37,374 --> 00:07:38,208 ಇರು, ಅಪ್ಪ! 100 00:07:46,049 --> 00:07:48,594 ಮರಳುವ ದಾರಿ ಬರುತ್ತದೆ ಆದರೆ ಒಮ್ಮೆ ಮಾತ್ರ. 101 00:08:01,064 --> 00:08:01,899 ಅಮ್ಮ! 102 00:08:12,242 --> 00:08:13,202 ಬಾ ಇಲ್ಲಿ! 103 00:08:38,227 --> 00:08:40,270 ನೀನು ಮಾಡಿರುವ ಪಾಪಗಳು ಮತ್ತು ನಿನ್ನ ಮೇಲೆ 104 00:08:40,270 --> 00:08:42,439 ಮಾಡಿರುವ ಪಾಪಗಳಿಂದ ನೀನು ಈಗ ಶುದ್ಧಳಾಗಿರುವೆ. 105 00:08:42,981 --> 00:08:46,860 ಪರಿಶುದ್ಧ ಹೃದಯ ಮತ್ತು ಆತ್ಮದೊಂದಿಗೆ ನಮ್ಮ ಬಳಿ ಬಂದಿರುವೆ. 106 00:08:56,787 --> 00:08:57,996 ತುಂಬಾ ನೈಜವಾಗಿತ್ತು. 107 00:08:59,915 --> 00:09:00,874 ನೈಜವಾಗಿತ್ತೇ? 108 00:09:01,250 --> 00:09:02,292 ಯಾರಿಗೂ ಗೊತ್ತಿಲ್ಲ. 109 00:09:08,048 --> 00:09:11,301 ಕೆಲವರು ಒಳಗಡೆ ಪಡೆದ ನಿಜವಾದ ಗಾಯಗಳೊಂದಿಗೆ ಹೊರಬರುತ್ತಾರೆ. 110 00:09:12,135 --> 00:09:16,390 ಇನ್ನು ಕೆಲವರು ಮೂಳೆಯವರೆಗೆ ಕತ್ತರಿಸಿಕೊಂಡು ಒಂದು ಗೆರೆಯೂ ಇಲ್ಲದೆ ಹೊರಬರುತ್ತಾರೆ. 111 00:09:23,897 --> 00:09:26,275 ನಾನು ಅವರನ್ನು ರಕ್ಷಿಸಿದರೆ, ಏನನ್ನಾದರೂ ಬದಲಾಯಿಸಬಹುದೇ? 112 00:09:26,275 --> 00:09:28,568 ನೀನು ಶುರು ಮಾಡಿದಾಗ, ಕೊನೆಯವರೆಗೂ ಮುಂದುವರಿಸಬೇಕು. 113 00:09:39,162 --> 00:09:41,748 ಮರಳುವ ದಾರಿ ಬರುತ್ತದೆ ಆದರೆ ಒಮ್ಮೆ ಮಾತ್ರ. 114 00:10:23,957 --> 00:10:24,916 ನೈನೀವ್? 115 00:10:26,168 --> 00:10:27,294 ಟಾಮ್. 116 00:10:28,587 --> 00:10:31,006 ಏನಾಯ್ತು? ಇಲ್ಲೇನು ನಡೆಯುತ್ತಿದೆ? 117 00:10:31,006 --> 00:10:35,635 ಒಂದು ಜ್ವರ, ನೀನು ಹೊರಟಮೇಲೆ ಟೂ ರಿವರ್ಸ್ ಪೂರ್ತಿ ಆವರಿಸಿತು. 118 00:10:42,517 --> 00:10:44,019 ಈ ಗಿಡಮೂಲಿಕೆಗಳನ್ನು ಯಾರು ಕೊಟ್ಟರು? 119 00:10:44,478 --> 00:10:45,604 ವಿಸ್ಡಮ್. 120 00:10:47,981 --> 00:10:49,149 ನ್ಯಾಟ್ಟಿ ಕೌಥೊನ್. 121 00:10:50,567 --> 00:10:52,027 ಟಾಮ್ ನಿನ್ನನ್ನು ವಿಸ್ಡಮ್ ಅನ್ನೋದೇಕೆ? 122 00:10:52,027 --> 00:10:53,862 ನೀನು ಹೊರಟು ತುಂಬಾ ಕಾಲವಾಯಿತು. 123 00:10:53,862 --> 00:10:56,907 -ಈ ಮೂಲಿಕೆಗಳ ಬಗ್ಗೆ ನಿನಗೆ ಗೊತ್ತಿಲ್ಲ. -ನೀನು ನಮ್ಮನ್ನು ತ್ಯಜಿಸಿದೆ. 124 00:10:56,907 --> 00:11:00,035 ನಾನು ವಿಸ್ಡಮ್ ಆಗಿಲ್ಲದಿರಬಹುದು, ಆದರೆ ಉಳಿದುಕೊಂಡವಳು ನಾನೇ. 125 00:11:01,244 --> 00:11:02,662 ಇದು ನೋವಿಲ್ಲದ ಮರಣ. 126 00:11:03,663 --> 00:11:05,457 ಅಯಿಸ್ ಸೆಡಾಯ್ ಇದನ್ನು ಗುಣಪಡಿಸಬಲ್ಲರು. 127 00:11:05,457 --> 00:11:07,542 ಸಾವು ಬಿಟ್ಟು ಏನಾದರೂ ಗುಣಪಡಿಸಬಲ್ಲರು. ನೋಡಿರುವೆ. 128 00:11:07,542 --> 00:11:10,837 -ಅಮಿರ್ಲಿನ್ ಕಳಿಸುತ್ತಾರೆ-- -ತಿಂಗಳುಗಳ ಹಿಂದೆ ಅಮಿರ್ಲಿನ್ ಸೀಟಿಗೆ ಬರೆದೆವು. 129 00:11:10,837 --> 00:11:13,173 ನಾನು ನೋಡಿರುವ ಮೊದಲ ಸಹೋದರಿ ನೀನು. 130 00:11:14,132 --> 00:11:15,384 ಇನ್ನೊಂದು ದಾರಿ ಇರಬೇಕು. 131 00:11:15,384 --> 00:11:17,594 -ಆಗಲ್ಲ-- -ನನ್ನ ಬಗ್ಗೆ ನಿರ್ಧರಿಸಬೇಡ, ಹುಡುಗಿ. 132 00:11:17,594 --> 00:11:21,139 ನಿನ್ನ ಕೆಲಸ ನಮ್ಮನ್ನು ಕಾಪಾಡುವುದು, ಮತ್ತು ನೀನು ನಮ್ಮನ್ನು ಬಿಟ್ಟು ಹೋದೆ. 133 00:11:22,516 --> 00:11:24,559 ಅವರನ್ನು ಗುಣಪಡಿಸಲಾದರೆ, ಮಾಡು. 134 00:11:24,559 --> 00:11:26,603 ಇಲ್ಲವಾದರೆ, ನಿನ್ನ ಟವರಿಗೆ ಮರಳಿ ಹೋಗು. 135 00:11:27,938 --> 00:11:29,648 ಇನ್ನು ಇದು ನಿನ್ನ ತವರಲ್ಲ. 136 00:11:41,701 --> 00:11:43,453 ನೀನು ಸರಿಹೋಗಲಿರುವೆ. 137 00:12:12,774 --> 00:12:13,900 ಪರವಾಗಿಲ್ಲ. 138 00:12:14,484 --> 00:12:16,445 ನಿನ್ನ ಮುಖ ನೋಡಿದ್ದು ಸಂತೋಷವೇ. 139 00:12:16,695 --> 00:12:17,988 ನಿನ್ನ ನೆನೆಸಿಕೊಳ್ತಿದ್ದೆವು. 140 00:12:19,698 --> 00:12:20,699 ಕ್ಷಮಿಸಿ. 141 00:12:21,908 --> 00:12:23,160 ರಾಂಡ್ ಹೇಗಿದ್ದಾನೆ? 142 00:12:23,577 --> 00:12:24,744 ಸಂತೋಷವಾಗಿರುವನೇ? 143 00:12:28,790 --> 00:12:29,916 ಹೌದು. 144 00:12:29,916 --> 00:12:31,835 ಅವನನ್ನು ಸುರಕ್ಷಿತವಾಗಿರಿಸಿರೋಕೆ ಧನ್ಯವಾದ. 145 00:12:34,087 --> 00:12:37,257 ಮೂಲಿಕೆಗಳು ತಮ್ಮ ಕೆಲಸ ಮುಗಿಸುವವರೆಗೂ ನನ್ನೊಂದಿಗಿರುವೆಯಾ? 146 00:12:41,136 --> 00:12:44,347 ನಿನ್ನ ಮುಖ ನೋಡುವುದು ಎಷ್ಟೋ ನೆಮ್ಮದಿ ಎಂದು ಹೇಳಬಲ್ಲೆ. 147 00:12:46,099 --> 00:12:49,060 ಮರಳುವ ದಾರಿ ಬರುತ್ತದೆ ಆದರೆ ಒಮ್ಮೆ ಮಾತ್ರ. 148 00:12:53,607 --> 00:12:54,441 ನೈನೀವ್? 149 00:12:54,441 --> 00:12:56,151 ವಾಪಸ್ ಬರುತ್ತಿದ್ದೇನೆ, ಆಯ್ತಾ? 150 00:12:56,735 --> 00:12:59,446 -ದಯವಿಟ್ಟು ಹೋಗಬೇಡ. -ಮಾತು ಕೊಡುವೆ, ವಾಪಸ್ ಬರುತ್ತಿದ್ದೇನೆ. 151 00:12:59,446 --> 00:13:01,406 ನೈನೀವ್! ನೈನೀವ್! 152 00:13:02,324 --> 00:13:04,367 ನಿನ್ನ ಪಾಪಗಳನ್ನು ತೊಳೆಯಲಾಗಿದೆ 153 00:13:04,367 --> 00:13:05,994 -ಮತ್ತು ಪಾಪಗಳು-- -ಇಲ್ಲ. ಇಲ್ಲ! ಇಲ್ಲ! 154 00:13:05,994 --> 00:13:07,704 ನಾವು ಹೋಗಬೇಕು. ದಯವಿಟ್ಟು. 155 00:13:07,704 --> 00:13:10,582 ಟೂ ರಿವರ್ಸಿಗೆ, ಅಲ್ಲೊಂದು ಪ್ಲೇಗಿದೆ, ನಾವದನ್ನು ಸರಿಮಾಡಬಹುದು. 156 00:13:10,582 --> 00:13:13,126 ಪ್ರತಿ ಮಹಿಳೆಯ ಭಯವು ಆಕೆಯ ಸ್ವಂತದ್ದು. 157 00:13:13,126 --> 00:13:14,586 ಅವುಗಳ ಭಾರ ನಮ್ಮ ಮೇಲೆ ಹೊರಿಸಬೇಡ. 158 00:13:14,586 --> 00:13:16,505 ನೀನು ಮಾಡಿರುವ ಪಾಪಗಳು ಮತ್ತು ನಿನ್ನ ಮೇಲೆ 159 00:13:16,505 --> 00:13:18,590 -ಮಾಡಿರುವ ಪಾಪಗಳಿಂದ ನೀನು ಈಗ ಶುದ್ಧಳು. -ಇಲ್ಲ. 160 00:13:18,590 --> 00:13:21,468 -ನೀನು ನಮ್ಮಲ್ಲಿಗೆ ಬಂದಿರುವೆ-- -ನಾವು ಹೋಗಬೇಕು. ದಯವಿಟ್ಟು. 161 00:13:21,468 --> 00:13:24,137 ನೀನು ಶುರು ಮಾಡಿದಾಗ, ಕೊನೆಯವರೆಗೂ ಮುಂದುವರಿಸಬೇಕು. 162 00:13:28,975 --> 00:13:32,521 ಮರಳುವ ದಾರಿ ಬರುತ್ತದೆ ಆದರೆ ಒಮ್ಮೆ ಮಾತ್ರ. 163 00:14:18,483 --> 00:14:20,193 ...ಒಬ್ಬ ಅದ್ಭುತ ಮಹಿಳೆ, ವಿಸ್ಡಮ್. 164 00:14:21,903 --> 00:14:24,322 ಸೂರ್ಯೋದಯದಷ್ಟೇ ಸುಂದರ. 165 00:14:26,533 --> 00:14:28,493 ನೀನು ಯೋಧರಂತೆ ಧೀರೆ. 166 00:14:30,287 --> 00:14:31,830 ನೀನೊಬ್ಬ ಸಿಂಹಿಣಿ, ವಿಸ್ಡಮ್. 167 00:14:43,508 --> 00:14:44,509 ಏನಾಯ್ತು? 168 00:14:46,469 --> 00:14:48,179 ನಾನೇನು ಮಾಡಿದೆ ಎಂದು ನೆನಪಿಲ್ಲ. 169 00:14:52,684 --> 00:14:54,686 ನೀನು ಮಾಡಿರುವ ಪಾಪಗಳು ಮತ್ತು ನಿನ್ನ ಮೇಲೆ 170 00:14:55,437 --> 00:14:57,522 ಮಾಡಿರುವ ಪಾಪಗಳಿಂದ ನೀನು ಈಗ ಶುದ್ಧಳು. 171 00:15:00,358 --> 00:15:01,985 ನನಗೇಕೆ ನೆನಪಾಗುತ್ತಿಲ್ಲ? 172 00:15:07,991 --> 00:15:09,159 ಪರವಾಗಿಲ್ಲ. 173 00:15:09,159 --> 00:15:10,702 ಈ ರಕ್ತ ನಿನ್ನದಲ್ಲ. 174 00:15:17,083 --> 00:15:20,503 -ಲಾನ್! -ಕೆಲವೊಮ್ಮೆ ನೆನಪಾಗದಿರುವುದೇ ಉತ್ತಮ. 175 00:15:20,503 --> 00:15:21,713 ಒಳ್ಳೆ ಕೆಲಸ, ಮಗು. 176 00:15:21,713 --> 00:15:25,216 ಪರಿಶುದ್ಧ ಹೃದಯ ಮತ್ತು ಆತ್ಮದೊಂದಿಗೆ ನಮ್ಮ ಬಳಿ ಬಂದಿರುವೆ. 177 00:15:26,134 --> 00:15:30,263 ನೀನು ನೈನೀವ್ ಅಲ್'ಮಯಿರಾ, ವೈಟ್ ಟವರಿನ ಸ್ವೀಕೃತಳು. 178 00:15:31,181 --> 00:15:32,974 ಈಗ ನೀನು ನಮ್ಮೊಂದಿಗೆ ಬಂಧಗೊಂಡಿರುವೆ. 179 00:15:34,351 --> 00:15:35,185 ಇಲ್ಲ. 180 00:15:36,478 --> 00:15:37,604 ಇಲ್ಲ! 181 00:15:39,439 --> 00:15:41,399 ಕೊನೆಯ ಆರ್ಚ್ ಒಳಗೆ ನಾನೇನು ಮಾಡಿದೆ? 182 00:15:42,108 --> 00:15:43,443 ನನ್ನಿಂದ ಏನು ಮಾಡಿಸಿದಿರಿ? 183 00:15:43,443 --> 00:15:46,029 ನಿನ್ನ ಭಯಗಳು ನಿನ್ನ ಸ್ವಂತದ್ದು, ಮಗು. 184 00:15:47,072 --> 00:15:48,114 ನಾನು ನಿಮ್ಮಂತಲ್ಲ. 185 00:15:49,866 --> 00:15:53,119 ಈ ಪರೀಕ್ಷೆಯು ನಾನು ಪ್ರೀತಿಸುವವರನ್ನು ಮರೆಯುವುದರ ಬಗ್ಗೆ ಆದರೆ, 186 00:15:53,119 --> 00:15:55,830 ಅವರು ತಮ್ಮನ್ನು ನೋಡಿಕೊಳ್ಳಲು ನನ್ನನ್ನು ನಂಬುವವರಾದರೆ, 187 00:15:55,830 --> 00:15:58,249 ಅಯಿಸ್ ಸೆಡಾಯ್ ಎಂದರೆ ಎಲ್ಲಕ್ಕಿಂತ ಮತ್ತು ಎಲ್ಲರಿಗಿಂತ 188 00:15:58,249 --> 00:16:01,753 ಮಿಗಿಲಾಗಿ ಟವರನ್ನು ನಂಬುವುದಾದರೆ, ನನಗೆ ಬೇಡ. ಎಂದಿಗೂ ಬೇಡ. 189 00:16:01,753 --> 00:16:02,962 ನೈನೀವ್. 190 00:16:03,797 --> 00:16:06,216 ನಿನ್ನ ಉಂಗುರ ಇಟ್ಕೋ. ನಾನು ನಿನ್ನ ಸೋದರಿಯಲ್ಲ. 191 00:16:09,219 --> 00:16:13,181 ನೀನು ಈ ಕೋಣೆಯಿಂದ ಹೊರಟರೆ, ಮತ್ತೆ ಎಂದಿಗೂ ನಿನಗೆ ಇಲ್ಲಿಗೆ ಪ್ರವೇಶವಿಲ್ಲ. 192 00:16:26,945 --> 00:16:28,321 ನೀನು ಹೊರಡಲಾಗದು. 193 00:16:30,490 --> 00:16:31,741 ನನಗೆ ನೀನು ಬೇಕು. 194 00:16:33,410 --> 00:16:34,703 ನಿನಗೆ ಬೇಕಿಲ್ಲ. 195 00:16:38,665 --> 00:16:40,458 ನಾನಿಲ್ಲಿ ನಿನಗಾಗಿ ಬಂದೆ, ಎಗ್ವೀನ್. 196 00:16:41,334 --> 00:16:42,252 ನಿನ್ನನ್ನು ರಕ್ಷಿಸಲು. 197 00:16:42,836 --> 00:16:45,505 ನಿಜ ಏನೆಂದರೆ ನಿನಗೆ ನನ್ನ ರಕ್ಷಣೆ ಬೇಕಾಗಿಲ್ಲ. 198 00:16:46,673 --> 00:16:47,966 ಅದು ನನಗೀಗ ಕಾಣುತ್ತಿದೆ. 199 00:16:50,927 --> 00:16:53,430 ಕೊನೆಗೂ ನಾನು ಇಲ್ಲಿ ಏನೋ ಒಂದು ಕಲಿತಂತಾಯ್ತು. 200 00:16:58,309 --> 00:17:01,146 ಓಲ್ಡ್ ಟಂಗಲ್ಲಿ "ಅಯಿಸ್ ಸೆಡಾಯ್" ಎಂದರೇನು ಗೊತ್ತೇ? 201 00:17:03,815 --> 00:17:05,483 "ಎಲ್ಲರ ಸೇವಕರು." 202 00:17:06,109 --> 00:17:09,112 ಆ ಬಿರುದಿಗೆ ತಕ್ಕಂಥ ಸೂಕ್ತ ಮಹಿಳೆ ನೀನಾಗುವೆ. 203 00:17:10,155 --> 00:17:13,700 ನಾನಿಲ್ಲಿ ಕಳೆದ ತಿಂಗಳುಗಳ ಬಗ್ಗೆ ನನಗೆ ಹೆಮ್ಮೆ ಉಂಟುಮಾಡುವ ಅಯಿಸ್ ಸೆಡಾಯಿಯಾಗಿ. 204 00:17:17,746 --> 00:17:19,706 ನಿನ್ನನ್ನು ತುಂಬಾ ನೆನೆಯುವೆ. 205 00:18:01,247 --> 00:18:02,665 ಇಲ್ಲೇನು ಮಾಡುತ್ತಿರುವೆ? 206 00:18:03,458 --> 00:18:06,294 ನೀನು ಆರ್ಚಸ್ ಮೂಲಕ ಹೋಗುತ್ತಿರುವೆ ಎಂದು ಅಲನಾ ಹೇಳಿದಳು. 207 00:18:06,294 --> 00:18:08,004 ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಬಂದೆ. 208 00:18:09,881 --> 00:18:11,424 ನನ್ನಿಂದ ಆಗಲಿಲ್ಲ. 209 00:18:13,468 --> 00:18:14,719 ಎಲ್ಲಿಗೆ ಹೋಗುವೆ? 210 00:18:16,262 --> 00:18:19,265 ಮನೆಗೆ, ಟೂ ರಿವರ್ಸಿಗೆ. 211 00:18:20,308 --> 00:18:23,102 ನನಗೆ ಅಲ್ಲೇನು ಉಳಿದಿದೆ ಗೊತ್ತಿಲ್ಲ, ಆದರೆ ನಾನು ಇಲ್ಲಿಗೆ ಸೇರಲ್ಲ. 212 00:18:23,812 --> 00:18:25,146 ನಾನು ನಿನ್ನೊಂದಿಗೆ ಬರಬಲ್ಲೆ. 213 00:18:27,524 --> 00:18:28,650 ನೀನು ನಂಜೊತೆ ಇರುವುದಾದರೆ. 214 00:18:31,653 --> 00:18:34,614 ಮತ್ತೆ ಮೊರೇನ್? ಬಂಧ? 215 00:18:40,870 --> 00:18:42,539 ಖಂಡಿತ ನಿನ್ನ ಜೊತೆ ಇರುವೆ. 216 00:18:52,507 --> 00:18:55,468 ಮರಳುವ ದಾರಿ ಬರುತ್ತದೆ ಆದರೆ ಒಮ್ಮೆ ಮಾತ್ರ. 217 00:18:59,138 --> 00:19:00,223 ಆರಾಮವಾಗಿದ್ದೀಯಾ? 218 00:19:02,433 --> 00:19:04,102 ನನಗೇನೋ ಕೇಳಿಸಿತು ಅನಿಸಿತು. 219 00:19:06,396 --> 00:19:07,480 ನೈನೀವ್? 220 00:19:12,569 --> 00:19:13,403 ಏನಾಯ್ತು? 221 00:19:16,698 --> 00:19:17,782 ನನಗೆ ಗೊತ್ತಿಲ್ಲ. ನಾನು... 222 00:19:19,075 --> 00:19:21,202 ಅದೊಂಥರಾ ವಿಚಿತ್ರ ಭಾವನೆ. ಒಂಥರಾ ಹೀಗೆ... 223 00:19:22,036 --> 00:19:23,538 ಇದೆಲ್ಲಾ ಕನಸಾದಂತೆ. 224 00:19:55,028 --> 00:19:57,530 ನೈನೀವ್ ಅಲ್'ಮಯಿರಾ ತನ್ನ ಆಯ್ಕೆ ಮಾಡಿದ್ದಾಳೆ. 225 00:20:06,414 --> 00:20:07,582 ಅಲನಾ ಸರಿ ಹೇಳಿದ್ದಳು. 226 00:20:08,791 --> 00:20:09,834 ಇವಳು ಸಿದ್ಧಳಿರಲಿಲ್ಲ. 227 00:20:09,834 --> 00:20:12,170 ಹಿಂದೆ ಆರ್ಚಸ್ಗೆ ಮಹಿಳೆಯರನ್ನು ಕಳೆದುಕೊಂಡಿದ್ದೇವೆ. 228 00:20:13,129 --> 00:20:15,673 ಕೆಲವರಿಗೆ ಈ ಉಂಗುರ ತೊಡುವ ಯೋಗ್ಯತೆ ಇಲ್ಲ ಅಷ್ಟೇ. 229 00:20:15,673 --> 00:20:17,884 ಇಲ್ಲ, ಆಕೆ ನಿನ್ನನ್ನು ನಂಬಿದಳು, 230 00:20:17,884 --> 00:20:19,218 ನಮ್ಮನ್ನು ನಂಬಿದಳು, 231 00:20:19,218 --> 00:20:21,095 ಮತ್ತು ನಾವು ಅವಳನ್ನು ಸಾವಿಗೆ ದೂಡಿದೆವು. 232 00:20:21,679 --> 00:20:25,558 ನಿನ್ನ ಮನಸ್ಸಾಕ್ಷಿ ಇದನ್ನು ಎಂದಿಗೂ ಒಪ್ಪುವುದಿಲ್ಲ ಎಂದುಕೊಳ್ಳುವೆ. 233 00:20:27,185 --> 00:20:28,853 ನನ್ನದು ಒಪ್ಪಲ್ಲ ಎಂದು ಗೊತ್ತು. 234 00:20:40,782 --> 00:20:46,162 ದ ವೀಲ್ ಆಫ್ ಟೈಮ್ 235 00:20:57,799 --> 00:21:00,259 ಮಹಿಳೆಯರು ಎಡಕ್ಕೆ! ಪುರುಷರು ಬಲಕ್ಕೆ! 236 00:21:03,596 --> 00:21:05,640 ಯಾರು ಅವರು? ಅವರಿಗೆ ಏನು ಬೇಕು? 237 00:21:06,808 --> 00:21:10,061 ಈ ಜನರ ಬಗ್ಗೆ ನಾನು ಎಲ್ಲಿಯೂ ಓದಿಲ್ಲ ಅಥವಾ ಕೇಳಿಲ್ಲ. 238 00:21:53,771 --> 00:21:55,231 ಇಲ್ಲ! 239 00:22:12,582 --> 00:22:14,375 ಅಟುವನ್ಸ್ ಮಿಲ್ಲಿನ ಜನರೇ, 240 00:22:15,001 --> 00:22:17,170 ನಿಮ್ಮ ಇತಿಹಾಸವನ್ನು ನೀವು ಮರೆತಿದ್ದೀರಿ. 241 00:22:18,004 --> 00:22:20,673 ಕದ್ದ ನೆಲದ ಮೇಲೆ ಕಾಲೂರಿದ್ದೀರಿ. 242 00:22:21,424 --> 00:22:24,218 ಹಿಂದೆ ನಮ್ಮದಾಗಿದ್ದ ನೆಲ 243 00:22:24,218 --> 00:22:26,345 ಮತ್ತು ಮತ್ತೊಮ್ಮೆ ನಮ್ಮದಾಗಲಿದೆ. 244 00:22:39,984 --> 00:22:40,818 ಇಲ್ಲ! 245 00:22:43,571 --> 00:22:48,076 ಲುಥೈರ್ ಪೇಂಡ್ರಾಗನ ನೌಕಾಪಡೆ ಆರಿತ್ ಸಾಗರವನ್ನು ದಾಟಿದಾಗ, 246 00:22:48,076 --> 00:22:49,952 ಮರಳುವಿಕೆಯ ಪ್ರಮಾಣ ಮಾಡಲಾಯಿತು. 247 00:22:51,162 --> 00:22:54,123 ಇಂದು ಆ ದಿನ. 248 00:22:56,793 --> 00:22:57,794 ಇಲ್ಲ! 249 00:23:00,129 --> 00:23:02,173 ನಾವು ಏನಾದರೂ ಮಾಡಲೇಬೇಕು. 250 00:23:02,173 --> 00:23:04,967 ಈ ಹುಡುಗಿಯರನ್ನು ಅವರು ಕರೆದೊಯ್ಯಲು ಬಿಡಲಾಗದು. 251 00:23:04,967 --> 00:23:06,844 ನಮ್ಮಲ್ಲಿ ಅಷ್ಟು ಮಂದಿ ಮತ್ತು ಶಸ್ತ್ರಗಳಿಲ್ಲ. 252 00:23:07,345 --> 00:23:08,846 ಇಲ್ಲ, ಹಾಗಿಲ್ಲ. 253 00:23:10,807 --> 00:23:11,641 ನಿಶ್ಯಬ್ದ. 254 00:23:14,769 --> 00:23:19,023 ನೀವು ಪ್ರಮಾಣವಚನ ಸ್ವೀಕರಿಸಿ ಹೈ ಲೇಡಿ ಸುರೋತ್ ಮುಂದೆ ಬಾಗಿದಾಗ, 255 00:23:19,023 --> 00:23:22,360 ನಿಮ್ಮ ಮುತ್ತಾತಂದಿರ ಸಾಲಗಳನ್ನೂ ಮನ್ನಾ ಮಾಡಲಾಗುತ್ತದೆ. 256 00:23:22,360 --> 00:23:26,280 ಶಾಂಚಾನಿನ ಮರಳುವಿಕೆಯ ಸಂಪತ್ತಿನಲ್ಲಿ ಪಾಲು ಪಡೆಯುವಿರಿ, 257 00:23:26,280 --> 00:23:28,491 ಅಟುವನ್ಸ್ ಮಿಲ್ಲಿಂದ ಫಾಮ್, 258 00:23:28,491 --> 00:23:31,410 ಮತ್ತು ಸಮುದ್ರದ ಪಕ್ಕದ ನಮ್ಮ ಮಹಾ ಸಾಮ್ರಾಜ್ಯದವರೆಗೆ. 259 00:23:41,921 --> 00:23:43,005 ಉನೋ. 260 00:23:51,097 --> 00:23:53,850 ಮೊದಲು ಪ್ರಮಾಣವಚನ ಸ್ವೀಕರಿಸಿ, 261 00:23:53,850 --> 00:23:57,103 ಹೈ ಲೇಡಿ ಸುರೋತ್ ಮುಂದೆ ಮಂಡಿಯೂರಿ, 262 00:23:57,103 --> 00:23:58,980 ಸಿಂಹಾಸನಕ್ಕೆ ನಿಷ್ಠೆ ತೋರುವವರು ಯಾರು? 263 00:23:59,981 --> 00:24:01,065 ಈ ವ್ಯಕ್ತಿ. 264 00:24:04,569 --> 00:24:06,070 ಇಲ್ಲ. ನಿಲ್ಲಿ! ನಿಲ್ಲಿ! 265 00:24:08,781 --> 00:24:10,158 ಅವನಿಗೆ ಏನು ಮಾಡುತ್ತಿದ್ದೀರಿ? 266 00:24:10,825 --> 00:24:12,326 ನಿಲ್ಲಿ! ನಿಲ್ಲಿ. 267 00:24:22,253 --> 00:24:25,506 ದೃಷ್ಟಿ ಬೇರೆಡೆ ತಿರುಗಿಸಿ ಮಂಡಿಯೂರು. 268 00:24:26,465 --> 00:24:28,968 ನಿನಗಿದು ತುಂಬಾನೇ ಇಷ್ಟ, ಅಲ್ವಾ? 269 00:24:30,970 --> 00:24:34,807 ಮಂಡಿಯೂರಿ ಪ್ರಮಾಣವಚನ ಸ್ವೀಕರಿಸು. 270 00:24:43,733 --> 00:24:47,028 ನೀವು ಮತ್ತು ನಿಮ್ಮ ಪ್ರಮಾಣವಚನಗಳು ಹಾಳಾಗಿ ಹೋಗಲಿ. 271 00:24:56,746 --> 00:25:01,751 ಪ್ರಮಾಣವಚನ ಸ್ವೀಕರಿಸದವರಿಗೆ ಪ್ರಮಾಣವಚನದ ಸ್ವೀಕಾರ ಮಾಡಿಸಲಾಗುತ್ತದೆ. 272 00:25:03,669 --> 00:25:06,255 ಪಾಲಿಸಲು, ಕಾಯಲು, ಮತ್ತು ಸೇವೆ ಮಾಡಲು. 273 00:25:22,230 --> 00:25:23,064 ಇಲ್ಲ! 274 00:25:47,630 --> 00:25:52,385 ಎಲ್ಲರೂ ತಲೆಬಾಗಲೇಬೇಕು. 275 00:26:03,062 --> 00:26:05,648 ನಮ್ಮ ಪ್ರಾಣಕ್ಕಿಂತ ಮಾನ ದೊಡ್ಡದೇನಲ್ಲ. 276 00:26:15,658 --> 00:26:16,867 ಪೆರಿನ್. 277 00:26:19,078 --> 00:26:19,912 ಪೆರಿನ್. 278 00:26:24,625 --> 00:26:30,589 ಪಾಲಿಸಲು, ಕಾಯಲು, ಮತ್ತು ಸೇವೆ ಮಾಡಲು ಆಣೆ ಮಾಡುವೆ. 279 00:26:31,507 --> 00:26:36,220 ಪಾಲಿಸಲು, ಕಾಯಲು, ಮತ್ತು ಸೇವೆ ಮಾಡಲು ಆಣೆ ಮಾಡುವೆ. 280 00:27:13,758 --> 00:27:15,593 ನಿನ್ನ ಬೇರುಗಳಲ್ಲಿ ನನಗೆ ಕೆಂಪು ಕಾಣುತ್ತಿದೆ. 281 00:27:18,012 --> 00:27:21,807 ನಿನ್ನ ಕೂದಲನ್ನು ಚಿಕ್ಕದಾಗಿ ಕತ್ತರಿಸಬಹುದು, ಆದರೆ ನಿನ್ನ ನಿಜ ಸ್ವರೂಪವನ್ನು ಮರೆಮಾಚಲಾಗದು. 282 00:27:25,936 --> 00:27:27,855 ಮತ್ತೆ, ಇನ್ನೊಬ್ಬ ಹುಡುಗ ಯಾವಾಗ ಮರಳುವನು? 283 00:27:28,647 --> 00:27:30,566 ನಿನಗೆ ಹೇಳಿದೆ, ಒಂದು ಅವಘಡವಾಯಿತು. 284 00:27:30,566 --> 00:27:32,651 ಈಗಿನಿಂದ ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ. 285 00:27:32,651 --> 00:27:33,986 ನಿನ್ನ ಅದೃಷ್ಟ. 286 00:27:34,779 --> 00:27:37,948 ಗೊತ್ತಾ, ಹಿಂದಿನ ಹುಡುಗ ಈ ಹುಳಿ ತೋಕೆ ಗೋಧಿಯ ರುಚಿ ಮರೆಮಾಚಲು ಊಟದ ಜೊತೆ 287 00:27:37,948 --> 00:27:40,117 ಕೆಂಪು ದ್ರಾಕ್ಷಾರಸ ತಂದುಕೊಡುತ್ತಿದ್ದ. 288 00:27:40,117 --> 00:27:42,161 ನಾವು ನಿನಗೆ ಇದನ್ನು ಮಾತ್ರ ಕೊಡಬಲ್ಲೆವು. 289 00:27:42,161 --> 00:27:43,537 ಇದು ನಿನ್ನ ಸುರಕ್ಷತೆಗಾಗಿಯೇ. 290 00:27:48,626 --> 00:27:50,544 ಇನ್ನೆಷ್ಟು ಕಾಲ ಕಾಯುವೆ ನೀನು? 291 00:27:52,588 --> 00:27:53,672 ಏನಂದೆ? 292 00:27:53,672 --> 00:27:57,468 ನೀನು ನನ್ನಲ್ಲಿ ಕೇಳಬೇಕಾಗಿರುವುದನ್ನು ಕೇಳುವ ಮೊದಲು. 293 00:27:58,677 --> 00:27:59,512 ಕೆಲ ದಿನಗಳೇ? 294 00:28:02,098 --> 00:28:03,099 ಕೆಲ ವಾರಗಳೇ? 295 00:28:03,099 --> 00:28:06,519 ಇಲ್ಲಿಯವರೆಗೂ ಬರಲು ನಿನಗೆ ತಿಂಗಳುಗಳೇ ಹಿಡಿದಿರಬೇಕು. 296 00:28:08,312 --> 00:28:10,106 ನಿನ್ನ ತಾಳ್ಮೆ ನನಗಿಂತಲೂ ಹೆಚ್ಚು. 297 00:28:10,106 --> 00:28:13,275 -ನೀನೇನು ಹೇಳುತ್ತಿರುವೆ ಗೊತ್ತಿಲ್ಲ. -ನನಗೆ ಸುಳ್ಳು ಹೇಳಬೇಡವೋ, ಹುಡುಗ. 298 00:28:19,115 --> 00:28:21,992 ಟಾರ್ ವಲೋನಿನಿಂದ ನನಗೆ ನಿನ್ನ ನೆನಪಿದೆ. 299 00:28:22,952 --> 00:28:25,037 ಆ ಮಹಿಳೆಯರು ನನ್ನನ್ನು ಬೀದಿಯಲ್ಲಿ 300 00:28:25,037 --> 00:28:27,873 ಮೃಗದಂತೆ ಮೆರವಣಿಗೆ ಮಾಡಿದಾಗ ನೀನು ನೋಡುತ್ತಿದ್ದೆ. 301 00:28:28,874 --> 00:28:31,210 -ನಿನಗೆ ಗೊಂದಲವಿರಬಹುದು. -ಇಲ್ಲ, ಇಲ್ಲ. 302 00:28:31,210 --> 00:28:35,464 ನನಗೆ ಕಾಣುತ್ತೆ. ಇನ್ನೊಬ್ಬ ಗಂಡಸು ಆವಾಹನೆ ಮಾಡಲಾದಾಗ, ಒಂದು ಹೊಳಪಿರುತ್ತದೆ. 303 00:28:35,464 --> 00:28:36,590 ಮತ್ತು ನಿನ್ನದು... 304 00:28:37,383 --> 00:28:40,136 ನಿನ್ನದು ನಾನೆಂದೂ ನೋಡಿರದಷ್ಟು ಪ್ರಖರವಾಗಿತ್ತು. 305 00:28:40,970 --> 00:28:44,765 ಗೋಡೆ ಮೇಲೆ ಕುಳಿತಿದ್ದ ನಿನ್ನನ್ನು ತಲೆ ಮೇಲೆತ್ತಿ ನಾನು ನೋಡಿದ್ದನ್ನು ಮರೆಯುವುದೇ ಇಲ್ಲ. 306 00:28:45,766 --> 00:28:48,060 ನೀನು ಜಗತ್ತನ್ನೇ ಅಲ್ಲಾಡಿಸುವೆ ಎಂದು ಗೊತ್ತಿತ್ತು. 307 00:28:48,060 --> 00:28:51,105 ನಾನು ಬಂಧಿಯಾಗಿದ್ದರೂ, ನಗದೇ ಇರಲಾಗಲಿಲ್ಲ. 308 00:28:53,524 --> 00:28:54,775 ಮತ್ತು ಈಗ ನೀನಿಲ್ಲಿರುವೆ, 309 00:28:54,775 --> 00:28:59,071 ಇಷ್ಟೆಲ್ಲಾ ತಿಂಗಳುಗಳ ನಂತರ, ಇಷ್ಟೆಲ್ಲಾ ಮೈಲಿಗಳ ಆಚೆ. 310 00:29:01,449 --> 00:29:02,533 ಹಾಗಾಗಿ ನನ್ನನ್ನು ಕೇಳು... 311 00:29:07,288 --> 00:29:08,706 ನೀನಿಲ್ಲಿ ಯಾತಕ್ಕೆ ಬಂದೆ ಎಂದು. 312 00:29:32,688 --> 00:29:33,898 ಅದನ್ನು ಹೇಗೆ ನಿಯಂತ್ರಿಸಬೇಕು 313 00:29:35,816 --> 00:29:37,276 ಎಂದು ನಾನು ತಿಳಿಯಬೇಕು. 314 00:29:45,117 --> 00:29:46,285 ಇದರಲ್ಲಿ ತಮಾಷೆ ಏನಿದೆ? 315 00:29:49,872 --> 00:29:51,707 ಗೆಲ್ಡನಿನ ಕೆಂಪು. 316 00:29:53,709 --> 00:29:55,920 ಆಮೇಲೆ ನಿನಗೆ ತಿಳಿಯಬೇಕಾಗಿರುವುದನ್ನು ತೋರಿಸುವೆ. 317 00:29:55,920 --> 00:29:57,046 ನಿಜವಾಗಲೂ? 318 00:29:57,963 --> 00:29:59,798 ಮನೆಯ ರುಚಿ ನೋಡಿ ತುಂಬಾ ಕಾಲವಾಗಿದೆ. 319 00:29:59,798 --> 00:30:02,426 ಗೆಲ್ಡನಿನಿಂದ ಸಾವಿರಾರು ಮೈಲಿ ದೂರ ಇದ್ದೇವೆ. 320 00:30:02,426 --> 00:30:04,803 ಅಂತಹ ದ್ರಾಕ್ಷಾರಸದ ಸೀಸೆ ನನಗೆಲ್ಲಿ ಸಿಗಬೇಕು? 321 00:30:04,803 --> 00:30:09,391 ಇಲ್ಲಿಗೆ ಬರುವುದು ಹೇಗೆ ಎಂದು ನೀನೇ ಕಂಡುಕೊಂಡೆ, ಇದನ್ನು ಕೂಡ ನೀನೇ ಕಂಡುಕೊಳ್ಳುವೆ. 322 00:30:11,477 --> 00:30:13,479 ಅಲೆಯ ಮೇಲೊಂದು ಅಲೆ, 323 00:30:13,479 --> 00:30:16,857 ಸಾವಿರಾರು ನೋಡುಗರ ಕೇಕೆ ಉಕ್ಕುವುದು, 324 00:30:16,857 --> 00:30:20,694 ಇಲ್ಲಿಯನ್ನಿನ ಛಾವಣಿಗಳು ಮತ್ತು ಸೌಧಗಳ ಮೇಲೆ ಹರಿಯುವುದು, 325 00:30:20,694 --> 00:30:23,155 ಪವಿತ್ರ ಅನ್ವೇಷಣೆಯಿಂದ ಹೃದಯ ಮತ್ತು ಕಣ್ಣುಗಳು 326 00:30:24,240 --> 00:30:26,575 ಬೆಳಗುವ ಸಾವಿರಾರು ಸವಾರರ 327 00:30:26,575 --> 00:30:30,329 ಕಿವಿಗಳ ಸುತ್ತ ಕೇಳದೆ ಒಡೆದು ಅಪ್ಪಳಿಸುವುದು. 328 00:30:30,329 --> 00:30:33,457 ಕಹಳೆಗಾಗಿನ ಮಹಾ ಬೇಟೆ ಮುನ್ನಡೆಯುತ್ತದೆ, 329 00:30:34,124 --> 00:30:38,921 ಬೆಳಕಿಗಾಗಿ ಯುದ್ಧ ಮಾಡಲು ಯುಗಗಳ ವೀರರನ್ನು ತಮ್ಮ ಸಮಾಧಿಗಳಿಂದ ಎಬ್ಬಿಸಿ 330 00:30:38,921 --> 00:30:43,300 ಕರೆಸುವ ವಲೀರಿನ ಕಹಳೆಯನ್ನು ಅರಸಲು ಮುನ್ನಡೆಯುತ್ತದೆ. 331 00:30:44,802 --> 00:30:47,221 ಕಳೆದ ಬೇಟೆ ವಿಫಲವಾಗಿ ನಾಲ್ಕು... 332 00:30:47,221 --> 00:30:49,181 -ಏನು ನಡೆಯುತ್ತಿದೆ? - ...ಶತಮಾನಗಳ ನಂತರ... 333 00:30:49,181 --> 00:30:52,434 ನಾಳೆ ಆ ದುರಾದೃಷ್ಟವಂತರು ಕಹಳೆಗಾಗಿನ ಬೇಟೆಗೆ ಹೊರಡಲಿದ್ದಾರೆ. 334 00:30:52,434 --> 00:30:54,061 ಕಹಳೆ? ಯಾವ ಕಹಳೆ? 335 00:30:54,687 --> 00:30:56,105 ವಲೀರಿನ ಕಹಳೆ. 336 00:30:56,855 --> 00:30:59,233 ನೀನು ನಿಜವಾಗಲೂ ಕುರುಬನಾಗಿದ್ದೆ ತಾನೇ? 337 00:30:59,733 --> 00:31:03,320 ಕೆಲ ನೂರು ವರ್ಷಗಳ ನಂತರ, ಪ್ರತಿ ಬಾರಿ ಇಲ್ಲಿಯನ್ನಲ್ಲಿ ಕಹಳೆಗಾಗಿನ ಬೇಟೆಗೆ ಕರೆಯುವರು. 338 00:31:03,320 --> 00:31:06,448 ದಂತಕಥೆಯ ಪ್ರಕಾರ ಅದನ್ನು ಪಡೆದವರು ಸತ್ತವರ ಸೇನೆಯನ್ನೇ ಎಬ್ಬಿಸಬಲ್ಲರು. 339 00:31:06,448 --> 00:31:08,742 ಕಹಳೆಯನ್ನು ಕೈರ್ಹಿನ್ನಿಗೆ ತರುವ ಯಾವುದೇ ಮಹಿಳೆಗಾಗಲಿ 340 00:31:08,742 --> 00:31:11,579 ಪುರುಷನಿಗಾಗಲಿ ಮಹಾರಾಣಿಯವರು ತಮ್ಮ ಅರ್ಧ ಆಸ್ತಿ ಘೋಷಿಸಿದ್ದಾರೆ, 341 00:31:11,579 --> 00:31:14,290 ಅದಕ್ಕೆ ಮುಂಚೆ ತರುವವರು ಕುಡಿದು ಸಾಯದಿದ್ದರೆ. 342 00:31:17,459 --> 00:31:20,254 -ಏನಾದರೂ ವಿಶೇಷವಾದದ್ದನ್ನು ಹುಡುಕುತ್ತಿರುವೆಯಾ? -ಹೌದು. 343 00:31:21,046 --> 00:31:22,506 ಗೆಲ್ಡನಿನ ಕೆಂಪು. 344 00:31:23,507 --> 00:31:26,302 ಫೋರ್ ಗೇಟಿನಲ್ಲಿ ಅಂಥ ಸೀಸೆ ಹುಡುಕುವುದರಲ್ಲಿ ನಿನಗೆ ಶುಭವಾಗಲಿ. 345 00:31:26,302 --> 00:31:28,262 ಅಂಥ ದ್ರಾಕ್ಷಾರಸ ನನಗೆಲ್ಲಿ ಸಿಗುತ್ತದೆ? 346 00:31:29,597 --> 00:31:32,433 ಒಮ್ಮಿಂದೊಮ್ಮೆಲೆ ಈ ಸೀಸದ ಬಗ್ಗೆ ನಿನಗೇನು ಇಷ್ಟು ಆಸಕ್ತಿ? 347 00:31:33,183 --> 00:31:36,270 ಸ್ವಲ್ಪ ಗೂಢತೆ ಇದ್ದಾಗ ನಿನಗೆ ಅದು ಇಷ್ಟವಾಗಬಹುದು ಅಂದುಕೊಂಡೆ. 348 00:31:39,315 --> 00:31:41,900 ನಾನು ವಾಪಸ್ ಬರುವೆ. ಮೊದಲ ಲೋಟ ಬೇಟೆಗಾರರಿಗೆ ಉಚಿತ, 349 00:31:41,900 --> 00:31:44,862 ಆದರೆ ತಮ್ಮ ಸಹಚರರಿಗೆ ಅವರು ಕೊಡಿಸುವಾಗ ಎರಡರಷ್ಟು ಬೆಲೆ ಹೇಳು. 350 00:31:44,862 --> 00:31:46,030 ಬಾ ಮತ್ತೆ. 351 00:31:47,698 --> 00:31:49,158 ನಾವೆಲ್ಲಿಗೆ ಹೊರಟಿದ್ದೇವೆ? 352 00:31:49,158 --> 00:31:50,784 ನಿನಗೆ ಉತ್ತಮವಾದ ಮೇಲಂಗಿ ಹುಡುಕಲು. 353 00:31:55,831 --> 00:31:57,833 ಬಾ, ನಾವು ತಡವಾಗಲಿದ್ದೇವೆ. 354 00:31:57,833 --> 00:32:00,878 ತಲೆಭಾರ ಕಡಿಮೆ ಮಾಡುವ ನೇಯ್ಗೆ ಮಾಡಲಾರೆಯಾ? 355 00:32:00,878 --> 00:32:03,756 ನೀನು ವಸತಿಯ ಮಾಲೀಕನ ಮಗಳೆಂದುಕೊಂಡಿದ್ದೆ. 356 00:32:03,756 --> 00:32:06,050 ಘಾಟು ಹೆಂಡ ನಿನಗೆ ಹೊಸತಿಲ್ಲದಿರಬಹುದು. 357 00:32:08,010 --> 00:32:09,303 ನೈ, ನಾನೇ. 358 00:32:12,014 --> 00:32:13,098 ನೈನೀವ್? 359 00:32:18,729 --> 00:32:19,980 ಎಗ್ವೀನ್. 360 00:32:20,606 --> 00:32:23,484 ನೀನು ಹೀಗೆ ತಿಳಿದುಕೊಳ್ಳುವುದು ನನಗೆ ಬೇಕಿರಲಿಲ್ಲ. 361 00:32:23,484 --> 00:32:24,860 ನನ್ನನ್ನು ಕ್ಷಮಿಸು. 362 00:32:25,444 --> 00:32:27,529 ಏನು ನಡೆಯುತ್ತಿದೆ? ಎಲ್ಲಿ... 363 00:32:27,529 --> 00:32:28,822 ನೈನೀವ್ ಎಲ್ಲಿ? 364 00:32:28,822 --> 00:32:31,575 ಇಂದು ಬೆಳಿಗ್ಗೆ ಅವಳನ್ನು ಸ್ವೀಕೃತಳಾಗಲು ಕರೆಯಲಾಗಿತ್ತು. 365 00:32:32,159 --> 00:32:35,287 ಆರ್ಚಸ್ ಒಳಗಡೆ ಹೋದವಳು ಹೊರಗೆ ಬರಲೇ ಇಲ್ಲ. 366 00:32:37,706 --> 00:32:39,416 ಇಲ್ಲ, ಈಗಷ್ಟೇ ಅವಳನ್ನು ನೋಡಿದೆ. ಅವಳು... 367 00:32:42,378 --> 00:32:44,797 ನಾವು ಅದರೊಳಗೆ ಹೋಗಿ ಅವಳನ್ನು ಹೊರತರಬೇಕು! 368 00:32:44,797 --> 00:32:46,548 ಆರ್ಚಸ್ ಹಾಗೆ ನಡೆಯುವುದಿಲ್ಲ. 369 00:32:47,424 --> 00:32:49,051 ನಾವು ಏನನ್ನಾದರೂ ಮಾಡಬೇಕು. 370 00:32:51,637 --> 00:32:52,930 ಹೀಗಾಗಲಾರದು. 371 00:32:54,765 --> 00:32:59,520 ನಾನು ನೇರವಾಗಿ ಮಾತನಾಡುವೆ, ಕ್ರೂರತೆಯಿಂದಲ್ಲ, ಆದರೆ ನಿನ್ನ ಮೇಲಿನ ಗೌರವದಿಂದ. 372 00:33:01,146 --> 00:33:02,898 ನೈನೀವ್ ಸತ್ತುಹೋಗಿದ್ದಾಳೆ. 373 00:33:03,315 --> 00:33:04,858 ಅವಳು ಮರಳಿ ಬರುತ್ತಿಲ್ಲ. 374 00:33:06,151 --> 00:33:09,822 ಎಲ್ಲರಿಗಿಂತ ಹೆಚ್ಚಾಗಿ ಈ ನಷ್ಟ ನಿನ್ನನ್ನೇ ಬಾಧಿಸಬಹುದು, 375 00:33:09,822 --> 00:33:11,782 ಆದರೆ ನಿನ್ನ ದುಃಖ ನಿನ್ನ ಸ್ವಂತದ್ದು. 376 00:33:11,782 --> 00:33:15,619 ಅದನ್ನು ಎದುರಿಸು, ಮತ್ತು ಕಾಲಂತರದಲ್ಲಿ, ನೀನು ಬಲಿಷ್ಠಳಾಗುವೆ, 377 00:33:15,619 --> 00:33:18,080 ಕಲ್ಲನ್ನು ಮುಟ್ಟಿದ ಮರದ ಬೇರುಗಳಂತೆ. 378 00:33:18,956 --> 00:33:21,959 ತಾನಾಗಿಯೇ ನಿಲ್ಲುವಂತೆ ಒಬ್ಬ ಅಯಿಸ್ ಸೆಡಾಯ್ ದಾರಿ ಹುಡುಕಬೇಕು. 379 00:33:30,300 --> 00:33:31,802 ನಿನಗೆ ಬೇಕಾದಷ್ಟು ಸಮಯ ತೆಗೆದುಕೋ, 380 00:33:33,429 --> 00:33:35,222 ಆದರೆ ನೋವು ಕಳೆಯುತ್ತದೆಂದು ತಿಳಿದಿರು. 381 00:33:41,562 --> 00:33:43,564 ಎಗ್ವೀನ್, ನನ್ನನ್ನು ಕ್ಷಮಿಸು. 382 00:33:43,564 --> 00:33:46,525 ನೈನೀವ್ ನನಗೆ ಪರಿಚಯವಿಲ್ಲ, ನೀನವಳನ್ನು ಪ್ರೀತಿಸುತ್ತಿದ್ದದ್ದು ಗೊತ್ತು. 383 00:33:47,860 --> 00:33:50,654 ಆಕೆ ತನ್ನ ವಿಧಿಯನ್ನು ಧೈರ್ಯವಾಗಿ ಎದುರಿಸಿರುತ್ತಾಳೆಂದು ಗೊತ್ತು. 384 00:33:53,282 --> 00:33:54,116 ಹೋಗು ಆಚೆ. 385 00:33:55,367 --> 00:33:56,285 ಹೋಗು ಆಚೆ. 386 00:33:56,869 --> 00:33:58,245 -ಎಗ್ವೀನ್-- -ದಯವಿಟ್ಟು. 387 00:33:58,245 --> 00:34:00,372 -ಎಗ್ವೀನ್, ನಿನಗೇನೇ ಅನಿಸುತ್ತಿದ್ದರೂ-- -ಹೋಗು ಆಚೆ! 388 00:34:00,372 --> 00:34:03,584 ನೀನ್ಯಾರೆಂದೂ ಗೊತ್ತಿಲ್ಲ! ನೀನಿಲ್ಲಿರುವುದು ಬೇಕಿಲ್ಲ. ಸುಮ್ಮನೆ ಹೋಗಾಚೆ! 389 00:34:08,881 --> 00:34:09,965 ನೈನೀವ್. 390 00:34:46,043 --> 00:34:48,462 ಈಗ ನಾನು ಮಲಗುವುದನ್ನು ನೋಡುತ್ತಿರುವೆಯಾ? 391 00:34:49,463 --> 00:34:52,299 "ನಿನ್ನನ್ನು ಕೊಲ್ಲಲು ಬಂದಿರುವೆ" ಎಂಬ ನೋಟವೇ 392 00:34:52,299 --> 00:34:55,552 ಅಥವಾ "ಬೆಳಕೇ, ನೀನೆಂಥ ಸುಂದರ ಎಂದು ನಾನು ಗಮನಿಸಿಯೇ ಇಲ್ಲ" ಎಂಬುದೇ? 393 00:34:55,552 --> 00:34:57,429 ಬೆಳಿಗ್ಗೆ ಒಬ್ಬ ಸಹೋದರಿಯನ್ನು ಕಳೆದುಕೊಂಡೆವು. 394 00:34:59,264 --> 00:35:01,099 ಅಗಾಧ ಶಕ್ತಿ ಇದ್ದಂತಹ ಮಹಿಳೆ. 395 00:35:03,685 --> 00:35:05,395 ನಾನು ಗೌರವ ಕೊಡುತ್ತಿದ್ದವಳು. 396 00:35:05,395 --> 00:35:06,730 ಖುಷಿಯ ವಿಚಾರ ಏನೆಂದರೆ, 397 00:35:06,730 --> 00:35:11,193 ಖಂಡಿತವಾಗಲೂ ಆಕೆಗೆ ತುಂಬಾ, ತುಂಬಾ ವಯಸ್ಸಾಗಿದ್ದಿರಬಹುದು. 398 00:35:11,193 --> 00:35:13,153 ಬಾಗಿಲು ತೆರೆದಿದೆ. ನೀನು ಹೊರಡಬಹುದು. 399 00:35:17,324 --> 00:35:18,534 ಯಾವ ಆಟ ಆಡುತ್ತಿರುವೆ? 400 00:35:18,534 --> 00:35:22,746 ನಿನ್ನನ್ನಿಲ್ಲಿಗೆ ನಾನು ಕರೆತಂದಾಗಿನಿಂದ ನೀನು ಹೇಳಿರುವುದು, ಮೊರೇನ್ ನಿನ್ನ ಹಿಂದೆ ಬಿಟ್ಟಳು, 401 00:35:22,746 --> 00:35:25,040 ನಿನ್ನ ಸ್ನೇಹಿತರನ್ನು ನೀನು ತ್ಯಜಿಸುತ್ತಲೇ ಇರಲಿಲ್ಲ ಅಂತ. 402 00:35:25,040 --> 00:35:28,043 ಆದರೆ, ಎಗ್ವೀನ್ ಈ ಟವರಿನಲ್ಲಿಯೇ ಇದ್ದಾಳೆ. 403 00:35:29,086 --> 00:35:31,588 ಮತ್ತು ಆಕೆಗೆ ಹಿಂದೆಂದಿಗಿಂತಲೂ ಈಗ ಅವಶ್ಯಕವಾಗಿರುವುದು, 404 00:35:32,506 --> 00:35:33,382 ಒಬ್ಬ ಗೆಳೆಯ. 405 00:35:33,382 --> 00:35:36,969 ಈ ಕೋಣೆಯ ಆಚೆ ನನಗಾಗಿ ಸಹೋದರಿಯರು ಕಾದು ಕುಳಿತಿಲ್ಲ ಎಂದು ಹೇಗೆ ಹೇಳಬಲ್ಲೆ? 406 00:35:36,969 --> 00:35:39,680 ಹೊರಡು, ಇರು, ಅದರಿಂದ ನನಗೇನೂ ಆಗದು. 407 00:35:41,431 --> 00:35:42,516 ಇದು ಇಲ್ಲಿಗೆ ಮುಗಿಯಿತು. 408 00:35:44,935 --> 00:35:48,564 ಐದು ತಿಂಗಳುಗಳ ಕಾಲ ಈ ಪ್ರಶ್ನೆಗಳು ಮತ್ತು ಆಟಗಳ ನಂತರ ನಿನಗೀಗ ಮುಗಿಯಿತೇ? 409 00:35:48,564 --> 00:35:49,898 ಇದು ಅಸಂಬದ್ಧ. 410 00:35:50,983 --> 00:35:55,362 ಈ ಟವರಿನಲ್ಲಿ ಒಬ್ಬ ಮಹಿಳೆ ಎದುರಿಸಬಹುದಾದ ಮಹಾ ಸವಾಲಿಗೆ ತಯಾರಾಗಿಲ್ಲದಿದ್ದುದರಿಂದ 411 00:35:55,362 --> 00:35:58,448 ಒಬ್ಬ ಸಹೋದರಿ ಮರಣಿಸಿದಳು. ಅವಳಿಗೆ ನನ್ನ ಸಹಾಯ ಬೇಕಿತ್ತು. 412 00:35:59,575 --> 00:36:02,619 ಆದರೆ ಕಳೆದ ಐದು ತಿಂಗಳುಗಳಿಂದ ನಾನು ಇಲ್ಲಿರುವೆ, 413 00:36:02,619 --> 00:36:05,581 ಮೊರೇನಳ ಪುಟಾಣಿ ರಹಸ್ಯದೊಂದಿಗೆ ನನ್ನ ಸಮಯವನ್ನು ಪೋಲು ಮಾಡುತ್ತಿರುವೆ. 414 00:36:05,581 --> 00:36:08,041 ಮೊರೇನ್ ನಿನ್ನಲ್ಲಿ ಏನಾದರೂ ನೋಡಿರಬಹುದು, 415 00:36:08,041 --> 00:36:10,961 ಬೆಳಕು, ಕತ್ತಲು, ಪ್ರಾಮುಖ್ಯತೆ, 416 00:36:12,629 --> 00:36:14,089 ಆದರೆ ನನಗೇನೂ ಕಾಣಿಸುತ್ತಿಲ್ಲ. 417 00:36:15,757 --> 00:36:17,092 ನೀನು ಅಪಾಯಕಾರಿಯಲ್ಲ. 418 00:36:18,260 --> 00:36:19,845 ನಿನ್ನ ನೈತಿಕ ವೈಫಲ್ಯಗಳನ್ನು 419 00:36:19,845 --> 00:36:23,682 ಕಪಟತನ ಮತ್ತು ಚತುರತೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವ ಕೃತ್ರಿಮ ಹೇಡಿ ನೀನು. 420 00:36:25,225 --> 00:36:29,396 ಸ್ವಾನುಕಂಪದಲ್ಲಿ ಮುಳುಗಿದ್ದು, ತನ್ನನ್ನು ಬಿಟ್ಟುಹೋದ ಸ್ನೇಹಿತರನ್ನು ದೂಷಿಸುವ 421 00:36:29,396 --> 00:36:31,773 ಮೂರ್ಖ, ಹತಾಶ ಹುಡುಗ ನೀನು. 422 00:36:35,444 --> 00:36:37,321 ನಾನು ನಿನ್ನನ್ನು ಬಲ್ಲೆ, ಮ್ಯಾಟ್ ಕೌಥೊನ್, 423 00:36:38,572 --> 00:36:40,532 ನಿನ್ನನ್ನು ನೀನು ಚೆನ್ನಾಗಿ ಅರಿತಿಲ್ಲದಿದ್ದರೂ. 424 00:36:42,743 --> 00:36:44,161 ನೀನೇ ಅವರನ್ನು ಬಿಟ್ಟೆ. 425 00:36:45,996 --> 00:36:47,414 ಮತ್ತು ನೀನು ಮತ್ತೊಮ್ಮೆ ಮಾಡುವೆ. 426 00:36:50,000 --> 00:36:53,086 ಹಾಗಾಗಿ ಹೋಗು, ಎಗ್ವೀನಳನ್ನು ಹುಡುಕು, ಅವಳು ನಿನ್ನನ್ನು ನೋಡುವುದಾದರೆ. 427 00:36:54,338 --> 00:36:55,589 ಇಲ್ಲದಿದ್ದರೆ ಮನೆಗೆ ಓಡು, 428 00:36:55,589 --> 00:36:57,466 ಅಥವಾ ಬ್ಲೈಟ್ ಒಳಗೆ ಉಪವಾಸ ಇರು. 429 00:36:57,466 --> 00:36:59,092 ನನಗದು ಬೇಕಾಗಿಲ್ಲ 430 00:36:59,760 --> 00:37:01,261 ಯಾಕೆಂದರೆ ನೀನು ಬೇಕಾಗಿಲ್ಲ. 431 00:37:03,555 --> 00:37:06,016 ನಿನ್ನ ಸಹವಾಸದ ದಾರಿದ್ರ್ಯವಂತೂ ನನಗೆ ಬೇಡ. 432 00:37:06,934 --> 00:37:09,311 ಈಗಾಗಲೇ ಅದರಿಂದ ತುಂಬಾ ಜನ ಪ್ರಾಣ ಕಳೆದುಕೊಂಡಿದ್ದಾರೆ. 433 00:37:43,303 --> 00:37:44,930 ಗೌರವ ಸಲ್ಲಿಸಲು ಬಂದಿರುವೆಯಾ? 434 00:37:46,723 --> 00:37:47,808 ನೀನೇ ಇದನ್ನು ಮಾಡಿದ್ದು. 435 00:37:50,102 --> 00:37:52,980 ನಾವು ಟವರಿಗೆ ಬಂದಾಗಿನಿಂದ ನಿನ್ನ ಕಣ್ಣು ನೈನೀವ್ ಮೇಲಿತ್ತು. 436 00:37:54,815 --> 00:37:56,441 ಅವಳು ಸಾಯುವುದು ನಿನಗೆ ಬೇಕಿತ್ತು. 437 00:38:00,821 --> 00:38:02,572 ನಿನಗೆ ದುಃಖಿಸಲು ಬಿಡುವೆ. 438 00:38:05,242 --> 00:38:06,743 ನನ್ನಿಂದ ಸುಮ್ಮನೆ ದೂರ ಹೋಗಬೇಡ. 439 00:38:07,494 --> 00:38:08,829 ನಿನ್ನ ಜೊತೆ ಇನ್ನೂ ಮುಗಿದಿಲ್ಲ! 440 00:38:15,961 --> 00:38:17,337 ನಿನ್ನ ಗೆಳತಿಗೆ ವರದಾನವಿತ್ತು. 441 00:38:18,630 --> 00:38:19,756 ಸಹಜ ಶಕ್ತಿ. 442 00:38:21,133 --> 00:38:23,635 ಆದರೆ ಬುದ್ಧಿವಂತೆ ಆಗಿರಬೇಕಾಗಿದ್ದು ನೀನು. 443 00:38:24,177 --> 00:38:26,138 ತನ್ನ ಸ್ಥಾನವನ್ನು ಅರಿತಿದ್ದ ಹುಡುಗಿ. 444 00:38:28,306 --> 00:38:32,936 ಮಿತಿಮೀರುವುದು ಎಷ್ಟು ಅಪಾಯಕಾರಿ ಎಂದು ತಿಳಿದಿದ್ದ ಹುಡುಗಿ. 445 00:38:36,773 --> 00:38:41,403 ನಾವು ಅಯಿಸ್ ಸೆಡಾಯ್ ಕೇವಲ ಸತ್ಯ ಮಾತನಾಡುತ್ತೇವೆ, ಹಾಗಾಗಿ ನನ್ನ ಮಾತು ಕೇಳಿ ಅದು ಸತ್ಯ ಎಂದು ಅರಿ. 446 00:38:42,154 --> 00:38:44,031 ನೈನೀವ್ ಸಾಯಲು ನಾನು ಕಳುಹಿಸಲಿಲ್ಲ. 447 00:38:44,031 --> 00:38:47,242 ಅವಳ ಮೇಲೆ ನಂಬಿಕೆ ಇದ್ದು ಅವಳನ್ನು ಆರ್ಚಸ್ಗೆ ಕಳುಹಿಸಿದೆ. 448 00:38:49,995 --> 00:38:51,413 ಆದರೆ ಅವಳು ನನಗೆ ನಿರಾಸೆ ಮೂಡಿಸಿದಳು. 449 00:38:54,875 --> 00:38:58,503 ಯಾವಾಗಲೂ ಶಕ್ತಿವಂತ ಮಹಿಳೆಯರೇ ಇತಿಹಾಸ ಬರೆಯುವವರಾಗುವುದಿಲ್ಲ. 450 00:39:00,380 --> 00:39:01,923 ಬದುಕುಳಿದವರು ಬರೆಯುವರು. 451 00:39:04,259 --> 00:39:06,720 ನಿನ್ನ ಸ್ಥಾನವನ್ನು ನೀನು ಅರಿತರೆ, ನೀನು ಕೂಡ ಇರಬಹುದು. 452 00:39:11,683 --> 00:39:14,311 ನನ್ನ ಸಾಮರ್ಥ್ಯ ನಿನಗಿನ್ನೂ ಗೊತ್ತಿಲ್ಲ. 453 00:39:43,673 --> 00:39:46,176 ನಿನ್ನನ್ನು ಹೀಗೆ ನೋಡಿಕೊಂಡೇ ನನಗೆ ಅಭ್ಯಾಸವಾಗಿಬಿಡಬಹುದು. 454 00:39:46,176 --> 00:39:47,385 ಜನ ನೋಡುತ್ತಿದ್ದಾರೆ. 455 00:39:48,011 --> 00:39:50,055 ಆ ಊಟಕ್ಕೆ ನಾವು ಹೋಗಿರಲಿಲ್ಲ ಎಂದು ಅವರಿಗೆ ಗೊತ್ತು. 456 00:39:50,055 --> 00:39:53,225 ಖಂಡಿತ, ಆದರೆ ಅದರಿಂದ ಅವರ ಕುತೂಹಲ ಹೆಚ್ಚಾಗುತ್ತದೆ ಅಷ್ಟೇ. 457 00:39:53,809 --> 00:39:54,768 ಇದನ್ನು ನೋಡು. 458 00:39:56,019 --> 00:39:59,064 ಲೇಡಿ ಢುಲೈನ್ ಮುಂದಿನ ವಾರ ನಮ್ಮನ್ನು ಊಟಕ್ಕೆ ಆಮಂತ್ರಿಸಿದ್ದಾರೆ. 459 00:39:59,523 --> 00:40:01,024 ನಮ್ಮಂಥ ಹೊರನಾಡಿನ ಗಣ್ಯರನ್ನು 460 00:40:01,024 --> 00:40:04,111 ಒಬ್ಬರ ವಿರುದ್ಧ ಒಬ್ಬರನ್ನು ಬಳಸಬಹುದೇ ಎಂದು ಯೋಚಿಸುತ್ತಿದ್ದಾರೆ. 461 00:40:05,737 --> 00:40:07,405 ಮತ್ತೆ ಗೆಲ್ಡನಿನ ಕೆಂಪು? 462 00:40:22,379 --> 00:40:25,465 ಲೇಡಿ ಢುಲೈನ್ ಆಮಂತ್ರಿಸಿದ್ದಾಳೆಂದರೆ ಹುಷಾರಾಗಿರು. 463 00:40:26,550 --> 00:40:29,678 ನೀನು ಹೇಗೇ ಉತ್ತರಿಸಿದರೂ, ಅದಕ್ಕೆ ಬೆಲೆ ತೆರಲೇಬೇಕಾಗುತ್ತದೆ. 464 00:40:32,264 --> 00:40:36,685 ಮತ್ತೆ, ಏನಂತೀಯಾ? ಹೌದಾ, ಇಲ್ಲವಾ? 465 00:40:44,568 --> 00:40:45,527 ಎರಡೂ ಅಲ್ಲ. 466 00:40:46,111 --> 00:40:50,031 ಪರವಾಗಿಲ್ಲವೇ, ಈಗ ಮನೆಗಳು ನಿಜವಾಗಿ ಮಾತನಾಡಿಕೊಳ್ಳುತ್ತವೆ. 467 00:40:55,829 --> 00:40:58,331 ಹೊರನಾಡಿನ ದೊರೆಯೋ ಅಲ್ಲವೋ, 468 00:40:58,331 --> 00:41:02,127 ನೀನು ಫೋರ್ ಗೇಟಲ್ಲಿ ಇರುತ್ತಿರುವೆ ಎಂದು ನನಗೆ ಏನೋ ಹೇಳುತ್ತಿದೆ, 469 00:41:02,127 --> 00:41:03,253 ಹೌದಲ್ಲವೇ? 470 00:41:05,422 --> 00:41:08,466 ಇದು ತುಂಬಾ ಕ್ರೌರ್ಯ ಎನಿಸಬಹುದು, ಆ ಬಡ ಜನರು ಹಸಿದುಕೊಂಡಿರುವಾಗ 471 00:41:08,466 --> 00:41:10,427 ನಾವು ಹೀಗೆ ಆಚರಿಸುವುದು. 472 00:41:11,303 --> 00:41:14,973 ಅವರ ಒಂದೇ ಕನಸು, ಕಹಳೆಗಾಗಿನ ಯಾವುದೋ ಅರ್ಥವಿಲ್ಲದ ಬೇಟೆ. 473 00:41:14,973 --> 00:41:16,892 ಮಹಾರಾಣಿಯವರ ಬಹುಮಾನದಿಂದ ಆ ಅಪಾಯಕ್ಕೆ ಮೌಲ್ಯ. 474 00:41:17,475 --> 00:41:19,769 ಅಯ್ಯೋ, ಹುಡುಗ. ಯಾವುದೇ ಬಹುಮಾನವಿಲ್ಲ. 475 00:41:20,187 --> 00:41:22,731 ನನಗೆ ಗೊತ್ತಿರುವಂತೆ, ಯಾವುದೇ ಕಹಳೆಯೂ ಇದ್ದಂಗಿಲ್ಲ. 476 00:41:22,731 --> 00:41:24,232 ಮಹಾರಾಣಿಗೆ ಅದರ ಚಿಂತೆ ಇಲ್ಲ. 477 00:41:24,774 --> 00:41:26,401 ಆಕೆಗೆ ತನ್ನ ನಗರ ಬೇಕಷ್ಟೇ. 478 00:41:27,861 --> 00:41:29,446 ಐಲ್ ಯುದ್ಧದ ನಂತರ, 479 00:41:29,446 --> 00:41:32,908 ಹಳ್ಳಿಗಳಲ್ಲಿ ಬದುಕಿದ್ದ ರೈತರು ಮತ್ತು ಕೃಷಿಕರು 480 00:41:32,908 --> 00:41:34,743 ಸುರಕ್ಷತೆಗಾಗಿ ನಗರಕ್ಕೆ ಬಂದರು. 481 00:41:34,743 --> 00:41:38,580 ಮತ್ತು ಈಗ, ಫೋರ್ ಗೇಟ್ ತುಂಬಿಹೋಗಿದೆ. 482 00:41:39,289 --> 00:41:42,542 ಆದರೆ ಜನರನ್ನು ಅವರ ಮನೆಗಳಿಂದ ಒದ್ದು ಕಳುಹಿಸಲು ಆಗುವುದಿಲ್ಲ. 483 00:41:43,293 --> 00:41:44,419 ಅವರು ಪ್ರತಿಭಟಿಸುತ್ತಾರೆ. 484 00:41:45,212 --> 00:41:47,297 ಹೊರಡಲು ಅವರಿಗೊಂದು ಕಾರಣ ಕೊಡಬೇಕು. 485 00:41:48,381 --> 00:41:51,968 ಬಹಳಷ್ಟು ಮಂದಿ ಕಾಣಿಸಿಕೊಳ್ಳುವಿಕೆಯಿಂದ ಅಥವಾ ಬ್ಲೈಟಲ್ಲಿ ಮರೆಯಾಗಿ ಹೋಗುತ್ತಾರೆ. 486 00:41:53,261 --> 00:41:57,390 ಅದೆಲ್ಲ ಅವರಿಗೆ ಬೇಕಾಗಿಲ್ಲ, ಸ್ವಲ್ಪ ಬೆಳ್ಳಿ ಉಳಿಸಿಕೊಂಡರೆ ಸಾಕು. 487 00:41:58,808 --> 00:42:01,519 ಶ್ರೀಮಂತರಿಗೆ ಒಂದು ಬಡ ಹೊಟ್ಟೆಯ ಹೊರೆ ಕಡಿಮೆಯಾಗುತ್ತದೆ. 488 00:42:02,938 --> 00:42:04,689 ಇದು ಅದ್ಭುತ ಪರಿಹಾರ, ನಿಜವಾಗಿಯೂ. 489 00:42:05,774 --> 00:42:07,609 ಅಡಚಣೆಗಾಗಿ ಕ್ಷಮಿಸಿ, ಲೇಡಿ... 490 00:42:08,068 --> 00:42:09,236 ಅನ್ವೇರ್. 491 00:42:10,111 --> 00:42:12,364 ನಮ್ಮ ಪರಿಚಯ ಆಗಿಲ್ಲ ಅಂತ ಅನ್ಸುತ್ತೆ. 492 00:42:12,364 --> 00:42:15,283 ಇಲ್ಲ, ಆಗಿಲ್ಲ ಅಂದುಕೊಳ್ಳುವೆ. 493 00:42:20,872 --> 00:42:22,249 ನನಗೇನು ಸಿಕ್ಕಿತು ನೋಡು. 494 00:42:26,294 --> 00:42:28,463 ಈಗ, ಇದು ಯಾರಿಗೆಂದು ನನಗೆ ಹೇಳುವೆಯಾ? 495 00:42:31,174 --> 00:42:32,509 ಏನಾಯ್ತು? 496 00:42:32,509 --> 00:42:34,594 ಕಹಳೆಗಾಗಿನ ಬೇಟೆ ನಿಜವಲ್ಲ. 497 00:42:36,304 --> 00:42:37,681 ಯಾವುದೇ ಬಹುಮಾನವಿಲ್ಲ. 498 00:42:38,807 --> 00:42:41,101 ಫೋರ್ ಗೇಟ್ ಶುದ್ಧೀಕರಿಸಲು ಇದೊಂದು ಕುತಂತ್ರವಷ್ಟೇ. 499 00:42:45,397 --> 00:42:46,940 ಖಂಡಿತ ಅದು ನಿಜವಲ್ಲ. 500 00:42:46,940 --> 00:42:50,068 ಪ್ರಪಂಚದಲ್ಲೇ ಅತ್ಯಂತ ರಾಜಕೀಯ ನಗರ ಇದು. 501 00:42:50,068 --> 00:42:53,780 ಪ್ರತಿಯೊಬ್ಬರೂ ಹೇಳುವ ಅಥವಾ ಮಾಡುವ ಪ್ರತಿಯೊಂದು ವಿಚಾರವೂ ಯಾವುದೋ ಆಟದ ಕುತಂತ್ರವಷ್ಟೇ. 502 00:42:53,780 --> 00:42:55,031 ಲೇಡಿ ಅನ್ವೇರ್ ಸಹ. 503 00:42:56,241 --> 00:42:58,702 ಆಕೆ ನಿನ್ನನ್ನೇಕೆ ಮಾತನಾಡಿಸಿದಳು ಎಂದು ನಿನಗೆ ಅರ್ಥವಾಗಲಿಲ್ಲವೇ? 504 00:43:00,245 --> 00:43:01,329 ಮತ್ತೆ ನೀನು? 505 00:43:02,914 --> 00:43:05,125 ನನಗೆ ಸಹಾಯ ಮಾಡಲು ನಿನ್ನ ಕಾರಣ ಏನು? 506 00:43:07,002 --> 00:43:09,838 ನಿನಗೆ ಉತ್ತರ ಗೊತ್ತಿರುವ ಪ್ರಶ್ನೆಗಳನ್ನು ಕೇಳಬೇಡ. 507 00:43:10,255 --> 00:43:12,841 ಕ್ಷಮಿಸು. ನಾನು ನಿನ್ನ ಸಹಾಯ ಕೇಳಬಾರದಿತ್ತು. 508 00:43:12,841 --> 00:43:13,800 ನಾನು ಹೋಗಬೇಕು. 509 00:43:13,800 --> 00:43:16,761 -ಇರು. ಆನಂದಿಸುತ್ತಿದ್ದೇವೆ. -ಕ್ಷಮಿಸು. 510 00:43:16,761 --> 00:43:18,763 ಸುಮ್ಮನೆ ನನ್ನನ್ನಿಲ್ಲಿ ಬಿಟ್ಟು ಹೋಗುವೆಯಾ? 511 00:43:19,389 --> 00:43:21,474 ನೀನು ಪಟಾಕಿಗಳ ನೋಟ ಕಳೆದುಕೊಳ್ಳುವೆ. 512 00:43:39,993 --> 00:43:41,369 ಇಷ್ಟು ಬೇಗ ವಾಪಸಾದೆಯಾ? 513 00:43:43,621 --> 00:43:45,165 ನೀನು ಹತಾಶನಾಗಿರಬೇಕು. 514 00:43:53,214 --> 00:43:55,550 ಬಹಳಷ್ಟು ದಿನದಿಂದ ಮನದಲ್ಲಿ ಒತ್ತಿಟ್ಟುಕೊಂಡಿರುವೆ. 515 00:43:56,176 --> 00:43:57,218 ಹೌದು. 516 00:43:58,845 --> 00:44:00,347 ಆದರೆ ಅದು ದೂರ ಹೋಗಲ್ಲ. 517 00:44:05,018 --> 00:44:06,102 ಆ ತುರಿಕೆ. 518 00:44:07,354 --> 00:44:08,772 ಅದನ್ನು ಮುಟ್ಟಬೇಕಾದ ಒತ್ತಡ. 519 00:44:08,772 --> 00:44:10,231 ಅದನ್ನು ಹೇಗೆ ತಡೆಯುವುದು? 520 00:44:13,526 --> 00:44:14,486 ಅದು ಆಗದು. 521 00:44:17,030 --> 00:44:18,531 ಅದೇ ರಹಸ್ಯ. 522 00:44:19,991 --> 00:44:22,619 ನಿನಗಾಗಲೇ ಗೊತ್ತಿದ್ದ ಪ್ರಶ್ನೆಗೆ ಉತ್ತರ. 523 00:44:24,746 --> 00:44:26,664 ಅದನ್ನು ಹಿಡಿದಿಟ್ಟುಕೊಳ್ಳಲಾಗದು. 524 00:44:26,664 --> 00:44:29,667 ಕ್ರಮೇಣ, ಅದೇ ನಿನ್ನಿಂದ ಹೊರಗೆ ಉಕ್ಕುತ್ತದೆ. 525 00:44:34,214 --> 00:44:35,423 ಯಾವಾಗಲೂ. 526 00:44:40,887 --> 00:44:41,971 ನೀನೊಬ್ಬ ಹುಚ್ಚ. 527 00:44:44,557 --> 00:44:46,976 ಹುಚ್ಚುತನ ಎಂಬುದಿಲ್ಲ, ಹುಡುಗ. 528 00:44:46,976 --> 00:44:50,313 ತಮ್ಮ ಕ್ರೌರ್ಯವನ್ನು ಸಮರ್ಥಿಸಿಕೊಳ್ಳಲು ಅಯಿಸ್ ಸೆಡಾಯ್ ಆ ಸುಳ್ಳನ್ನು ಬಳಸುತ್ತಾರೆ. 529 00:44:51,022 --> 00:44:54,984 ನಮ್ಮನ್ನು ನಪುಂಸಕರನ್ನಾಗಿಸಲು ಪ್ರಪಂಚಕ್ಕೆ ಪುರುಷರ ವಿರುದ್ಧ ವಿಷವುಣಿಸಿದ್ದಾರೆ. 530 00:44:55,568 --> 00:44:59,739 ಆದರೆ ಕೇವಲ ಡ್ರ್ಯಾಗನ್ ಮಾತ್ರ ಡಾರ್ಕ್ ಒನ್ನನ್ನು ಸೋಲಿಸಬಲ್ಲ ಎಂದು ಅವರಿಗೆ ಗೊತ್ತು. 531 00:45:02,659 --> 00:45:04,035 ನೀನು ಡ್ರ್ಯಾಗನ್ ಅಲ್ಲ. 532 00:45:18,550 --> 00:45:19,467 ಅಲ್ಲವೇ? 533 00:45:22,554 --> 00:45:26,474 ಲೆವ್ಸ್ ಥೆರಿನ್ ಟೆಲಮೊನ್ ರಕ್ತ ನನ್ನ ನಾಡಿಗಳಲ್ಲಿ ಹರಿಯುತ್ತಿದೆ. 534 00:45:27,475 --> 00:45:28,977 ಅವನನ್ನು ಅನುಭವಿಸಬಲ್ಲೆ, 535 00:45:30,812 --> 00:45:33,189 ಅವನ ಪಿಸುಮಾತುಗಳನ್ನು ಕೇಳಬಲ್ಲೆ. 536 00:45:33,189 --> 00:45:34,983 ಇದು ತಪ್ಪು ಆಗಿದೆ. 537 00:45:36,401 --> 00:45:38,736 ನೀನು ನನ್ನನ್ನು ಇಲ್ಲಿಂದ ಹೊರಕ್ಕೆ ತಪ್ಪಿಸುವೆ, ನನಗೆ ಗೊತ್ತು. 538 00:45:40,363 --> 00:45:42,323 ನಾನೊಬ್ಬನೇ ನಿನಗೆ ತಿಳಿಸಿಕೊಡಬಲ್ಲೆ. 539 00:45:45,994 --> 00:45:47,454 ನೀನು ನನಗೆ ನೆರವಾಗಲಾರೆ. 540 00:45:50,999 --> 00:45:51,833 ನಿನಗೆ ಹುಷಾರಿಲ್ಲ. 541 00:45:56,754 --> 00:45:58,006 ಇರಬಹುದು. 542 00:45:58,006 --> 00:46:00,842 ಆದರೆ ನಾವಾಗಿರುವುದರಿಂದ ನಾವ್ಯಾರೂ ತಪ್ಪಿಸಿಕೊಳ್ಳಲಾರೆವು. 543 00:47:01,819 --> 00:47:02,654 ಹೇ. 544 00:47:03,279 --> 00:47:04,489 ಬಾ ಇಲ್ಲಿ. 545 00:47:08,409 --> 00:47:11,829 ನೋಡು, ನೀನು ನನ್ನನ್ನು ಮೋಹಿಸಲು ಪ್ರಯತ್ನಿಸುತ್ತಿದ್ದರೆ, ಅದಕ್ಕೆ ಉತ್ತರ ಈಗಲೂ-- 546 00:47:11,829 --> 00:47:13,540 ನಿನ್ನನ್ನು ಮೋಹಿಸಲು ಪ್ರಯತ್ನಿಸುತ್ತಿಲ್ಲ. 547 00:47:15,333 --> 00:47:16,334 ಆರಾಮವಾಗಿರುವೆಯಾ? 548 00:47:17,502 --> 00:47:20,338 -ಇಂದು ಯಾಕೋ ಅಳುಮುಖ ಹೊತ್ತಂತಿರುವೆ. -ಹೌದು. 549 00:47:20,338 --> 00:47:21,798 ಹೌದು, ಸುಮ್ಮನೆ ಬಾ ಇಲ್ಲಿ. 550 00:47:22,382 --> 00:47:23,341 ಸರಿ. 551 00:47:30,765 --> 00:47:31,683 ಮ್ಯಾಟ್? 552 00:47:32,100 --> 00:47:33,142 ಹಾಂ? 553 00:47:33,142 --> 00:47:34,394 ಬಾಗಿಲು ತೆರೆದಿದೆ. 554 00:47:36,187 --> 00:47:37,021 ಹೌದು. 555 00:47:37,021 --> 00:47:38,523 ಮತ್ತೆ, ಹೋಗೋಣ. 556 00:47:41,901 --> 00:47:42,777 ಎಲ್ಲಿಗೆ? 557 00:47:43,361 --> 00:47:44,279 ಎಲ್ಲಿಗಾದರೇನು? 558 00:47:46,155 --> 00:47:47,407 ಎಲ್ಲಿಗೆ ಹೋಗಬೇಕೋ ಗೊತ್ತಿಲ್ಲ. 559 00:47:48,533 --> 00:47:51,995 ಇಷ್ಟೆಲ್ಲಾ ತಿಂಗಳುಗಳು ನಾನಿಲ್ಲಿದ್ದೆ ಮತ್ತು ಈಗ ನಾನು ಹೊರಡಬಹುದಾಗಿದೆ, 560 00:47:51,995 --> 00:47:55,373 ಮತ್ತು, ಹಾಂ, ಎಲ್ಲಿಗೆ ಹೋಗಬೇಕೋ ನನಗೆ ಗೊತ್ತಿಲ್ಲ. 561 00:47:57,458 --> 00:48:00,378 ಈಗ ಮುಖ್ಯವಾಗಿರುವುದು ಆ ಬಾಗಿಲು ತೆರೆದಿದೆ ಮತ್ತು ಅದರ 562 00:48:00,378 --> 00:48:02,422 ಮೂಲಕ ಹೊರಡುವ ಸಮಯ ಬಂದಿದೆ ಎಂಬುದು. 563 00:48:04,465 --> 00:48:06,593 ಯಾಕಂದ್ರೆ ಖಂಡಿತ ನಾನು ನಿನಗೆ ಕಾಯುತ್ತಿಲ್ಲ. 564 00:48:35,788 --> 00:48:38,124 ನೀನು ಏಳುವುದೇ ಇಲ್ಲ ಎಂದು ನನಗೆ ಚಿಂತೆಯಾಗಿತ್ತು. 565 00:48:39,459 --> 00:48:40,376 ಯಾರು ನೀನು? 566 00:48:41,127 --> 00:48:43,588 ಮುಳ್ಳಿಗೂ ನಿನಗೂ ಮಧ್ಯೆ ನಿಂತಿರುವ ವ್ಯಕ್ತಿ ನಾನು. 567 00:48:45,173 --> 00:48:48,676 ನೀನು, ಗೆಳೆಯ, ಫಾಮಿಗೆ ಹೊರಟಿರುವ ಬಂಡಿಯ ಭಾಗವಾಗಿರುವೆ. 568 00:48:49,177 --> 00:48:51,638 ಲೇಡಿ ಸುರೋತಳ ಗೌರವಾನ್ವಿತ ಅತಿಥಿಯಾಗಿ, 569 00:48:51,638 --> 00:48:55,642 ಶಾಂಚಾನಿನಲ್ಲಿ ನಿನಗೆ ವಸತಿ ಮತ್ತು ಹೊಸ ಜೀವನವನ್ನು ಕಲ್ಪಿಸಲಾಗುತ್ತದೆ. 570 00:48:56,517 --> 00:48:59,937 ಆದರೆ, ನಮ್ಮ ನಡುವೆ, ಇದು ಯಾವುದೇ ಅಪೇಕ್ಷಿತ ಆಮಂತ್ರಣವಲ್ಲ. 571 00:49:01,189 --> 00:49:03,691 ಬಂದರಿನ ನಗರದಲ್ಲಿ ನಿನಗೆ ಯಾವ ಶುಭವೂ ಕಾಯುತ್ತಿಲ್ಲ. 572 00:49:06,944 --> 00:49:08,237 ನಿನಗೆ ದಾಹವಾಗಿರಬೇಕು. 573 00:49:15,828 --> 00:49:16,996 ಪರವಾಗಿಲ್ಲ. 574 00:49:17,830 --> 00:49:19,040 ಇದು ಕೇವಲ ನೀರಷ್ಟೇ. 575 00:49:32,720 --> 00:49:35,890 ನಿನ್ನಲ್ಲಿ ಏನೋ ಒಂದು ವಿಲಕ್ಷಣತೆ ಇದೆ, ಅಲ್ಲವೇ, ಪೆರಿನ್? 576 00:49:35,890 --> 00:49:38,976 ಆ ಕಣ್ಣುಗಳನ್ನು ನೋಡಿದಾಗಲೇ ನಾನು ಅರ್ಥಮಾಡಿಕೊಳ್ಳಬೇಕಿತ್ತು. 577 00:49:38,976 --> 00:49:40,937 ನೀನೇನು ಮಾತನಾಡುತ್ತಿರುವೆ? 578 00:49:40,937 --> 00:49:43,356 ನಿನ್ನೊಳಗೆ ಏನೋ ಇದೆ ಎಂಬುದು ನಿನಗೆ ಗೊತ್ತು. 579 00:49:44,107 --> 00:49:45,942 ರಕ್ತವನ್ನು ಬಯಸುವಂಥದ್ದು. 580 00:49:46,776 --> 00:49:49,445 ನಿನ್ನ ಕಣ್ಣುಗಳಿಗೆ ಬೆಂಕಿ ಹೊತ್ತಿಸುವಂಥದ್ದು. 581 00:49:51,114 --> 00:49:52,281 ತೋರಿಸು, ಪೆರಿನ್. 582 00:49:53,324 --> 00:49:55,576 ಆ ರಾಕ್ಷಸನನ್ನು ನಾನು ಭೇಟಿಯಾಗಬೇಕು. 583 00:49:56,786 --> 00:49:58,246 ಯಾರು ನೀನು? 584 00:49:59,038 --> 00:50:00,498 ನಾನ್ಯಾರೆಂದು ನಿನಗೆ ಗೊತ್ತಿದೆ. 585 00:50:05,962 --> 00:50:06,796 ನೀನು ಸತ್ತಿರುವೆ. 586 00:50:07,755 --> 00:50:08,840 ರಾಂಡ್ ನಿನ್ನನ್ನು ಕೊಂದ. 587 00:50:09,674 --> 00:50:11,968 ಮೊರೇನ್ ನಿನಗೆ ಹಾಗೆ ಹೇಳಿದಳೇನು? 588 00:50:17,724 --> 00:50:18,933 ಅವರಿಲ್ಲಿದ್ದಾರೆ. 589 00:50:18,933 --> 00:50:19,851 ನಿಲ್ಲಿ! 590 00:50:25,356 --> 00:50:26,190 ಬಿಡು ನನ್ನನ್ನು! 591 00:50:26,482 --> 00:50:27,358 ಕಾಪಾಡಿ! 592 00:50:40,872 --> 00:50:42,457 ನನ್ನಿಂದ ನಿನಗೇನು ಬೇಕು? 593 00:50:52,842 --> 00:50:56,304 ನೀನು ಹೆಚ್ಚು ತೋಳ ಆದಷ್ಟೂ, ಹೆಚ್ಚು ನನ್ನವನಾಗುವೆ. 594 00:50:59,223 --> 00:51:02,185 ನಾನು ನಿನ್ನ ಪ್ರಗತಿಯನ್ನು ಅತ್ಯಂತ ಆಸಕ್ತಿಯಿಂದ ವೀಕ್ಷಿಸುತ್ತಿರುತ್ತೇನೆ. 595 00:51:35,384 --> 00:51:36,219 ಹೋಗೋಣ. 596 00:51:47,688 --> 00:51:49,774 ಓಡು. ಎಲ್ಲಿ ಎಂದು ಅವನು ತೋರಿಸುತ್ತಾನೆ. 597 00:51:50,441 --> 00:51:52,151 ಮತ್ತೆ ಲೋಯಿಲ್ ಮತ್ತು ಮಿಕ್ಕವರು? 598 00:51:52,151 --> 00:51:54,821 ಪಂಜರದ ಹಿಂದಿನಿಂದ ನಿನ್ನ ಸ್ನೇಹಿತರಿಗೆ ನೀನು ನೆರವಾಗಲಾರೆ. 599 00:51:56,030 --> 00:51:56,864 ಓಡು! 600 00:52:05,915 --> 00:52:07,416 ಆ ದುರ್ಬಲ ಕುದುರೆಗಳನ್ನು ನೀನು ಕದ್ದೆಯಾ? 601 00:52:07,416 --> 00:52:09,293 "ಸ್ವತಂತ್ರಗೊಳಿಸಿದೆ" ಎಂದು ಹೇಳಬಹುದು. 602 00:52:09,293 --> 00:52:11,921 ಆ ಆಹಾರ ಪಡೆಯಲು ನೀನು ಒಂದಷ್ಟು ದಿನ ಕಷ್ಟಪಟ್ಟೆಯಾ? 603 00:52:11,921 --> 00:52:14,882 ನಾನೇನು ಹೇಳಲಿ? ಇಂದು ಗಾಳಿಯಲ್ಲಿ ಸ್ವಾತಂತ್ರ್ಯ ಬೀಸುತ್ತಿದೆ. 604 00:52:15,925 --> 00:52:17,093 ಆಕೆಯನ್ನು ಹಿಡಿ. 605 00:52:17,093 --> 00:52:19,178 ನಾನು ಇನ್ನೊಂದು ವಸ್ತು ತರಬೇಕು. 606 00:52:40,616 --> 00:52:41,742 ಅರೆ? 607 00:52:42,243 --> 00:52:43,452 ನನ್ನೊಂದಿಗೆ ಬರುತ್ತಿದ್ದಾನೆ. 608 00:52:44,412 --> 00:52:46,163 ಇದು ಬಹುತೇಕ ಅವನ ಉಪಾಯವೂ ಕೂಡ. 609 00:52:46,163 --> 00:52:48,082 ಅವನು ಊಹಿಸಬಹುದಾದವನಲ್ಲದೆ ಬೇರೇನೂ ಅಲ್ಲ. 610 00:52:50,668 --> 00:52:51,669 ನಿನಗೆ ದಾರಿ ಗೊತ್ತಿದೆಯಾ? 611 00:52:54,881 --> 00:52:55,715 ನೆನಪಿಡು, 612 00:52:58,009 --> 00:52:59,427 ನೀನು ಯಶಸ್ವಿಯಾದರೆ, 613 00:52:59,844 --> 00:53:03,055 ಮೊರೇನಿಗೆ ನಮ್ಮ ಮೇಲೆ ಸಾಧಿಸಲು ಮುಂದೆ ಏನೂ ಇರುವುದಿಲ್ಲ. 614 00:53:10,146 --> 00:53:11,230 ನನಗೆ ನಿರಾಸೆ ಮಾಡಬೇಡ. 615 00:53:30,541 --> 00:53:33,502 ಮತ್ತೊಮ್ಮೆ ನನ್ನನ್ನು ಹಾಗೆ ಬಿಟ್ಟು ಹೋದರೆ, ನಿನ್ನನ್ನು ಕೊಂದುಹಾಕುವೆ. 616 00:53:42,345 --> 00:53:43,429 ಇಲ್ಲ. 617 00:53:44,180 --> 00:53:46,807 ಇರಲಿ ಬಿಡು, ನನ್ನ ದೊರೆ. 618 00:53:53,606 --> 00:53:54,523 ಅಷ್ಟೇ. 619 00:53:56,067 --> 00:53:57,193 ತೋರಿಸು ನನಗೆ. 620 00:53:57,777 --> 00:53:58,903 ತೋರಿಸು ನನಗೆ. 621 00:54:09,664 --> 00:54:11,040 ಬಿಟ್ಟುಬಿಡು. 622 00:54:11,540 --> 00:54:13,167 ನೀನೆಂದರೆ ನನಗೆ ಭಯವಿಲ್ಲ. 623 00:54:44,407 --> 00:54:46,951 ರಾಂಡ್! ರಾಂಡ್! 624 00:55:10,057 --> 00:55:11,142 ಚೆನ್ನಾಗಿದ್ದೀಯಾ? 625 00:55:56,353 --> 00:55:58,022 ಪ್ರಯತ್ನಿಸಲು ನೀನೇ ಮೊದಲಿಗಳಲ್ಲ. 626 00:55:58,022 --> 00:56:01,275 ಮೂರು ಸಾವಿರ ವರ್ಷಗಳಲ್ಲಿ, ಕಳೆದು ಹೋದ ಸ್ನೇಹಿತರು ಅಥವಾ ಪ್ರೀತಿಸುವವರನ್ನು 627 00:56:01,275 --> 00:56:03,611 ಮರಳಿ ತರಲು ನೂರಾರು ಪ್ರಯತ್ನಗಳು ನಡೆದು ಹೋಗಿವೆ. 628 00:56:05,613 --> 00:56:06,864 ಅದೆಂದಿಗೂ ನಡೆಯದು. 629 00:56:09,492 --> 00:56:12,286 ಆರ್ಚಸ್ ತೆರೆಯಲು ಒಬ್ಬರಿಗಿಂತ ಹೆಚ್ಚು ಅಯಿಸ್ ಸೆಡಾಯಿಗಳು ಬೇಕು. 630 00:56:12,286 --> 00:56:14,080 ಹಾಗಾಗಿ ನೆರವಾಗು ಇಲ್ಲವೇ ಹೊರಡು. 631 00:56:14,080 --> 00:56:15,039 ಇಲ್ಲ. 632 00:56:18,417 --> 00:56:20,544 ನಿನಗೆ ನೀನು ಹಾನಿ ಮಾಡಿಕೊಳ್ಳಲಿರುವೆ. 633 00:56:21,045 --> 00:56:22,296 ನೀನು ಸಾಯಲೂಬಹುದು. 634 00:56:23,380 --> 00:56:26,842 ಉತ್ತಮ ಪರಿಣಾಮ ಏನೆಂದರೆ ಒಬ್ಬ ಸಹೋದರಿ ನಿನ್ನನ್ನು ನೋಡಿ ಇಲ್ಲಿಂದ ಹೊರಹಾಕಬಹುದು. 635 00:56:26,842 --> 00:56:29,553 -ಅದರ ಚಿಂತೆ ನನಗೀಗ ಇದೆ ಅಂದುಕೊಂಡೆಯಾ? -ಹೌದು. 636 00:56:29,553 --> 00:56:31,138 ಖಂಡಿತ ನಿನಗಿದೆ. 637 00:56:34,016 --> 00:56:36,477 ಟೂ ರಿವರ್ಸಲ್ಲಿ ಏನಾಯಿತು ಎಂದು ಕೇಳ್ಪಟ್ಟೆ. 638 00:56:37,561 --> 00:56:38,729 ಟ್ರಾಲಕ್ ದಾಳಿ. 639 00:56:40,815 --> 00:56:44,110 ಎಷ್ಟು ಜನರ ಸಾವು, ಯುವ ವಿಸ್ಡಮ್ ಒಳಗೊಂಡು. 640 00:56:46,695 --> 00:56:48,405 ಆದರೆ ಆಕೆ ಸಾಯಲಿಲ್ಲ, ಅಲ್ಲವೇ? 641 00:56:49,240 --> 00:56:53,410 ಆಕೆ ಬದುಕುಳಿದು, ನಿನ್ನನ್ನು ಪತ್ತೆ ಮಾಡಿ, ನಿನ್ನೊಂದಿಗೆ ಇಲ್ಲಿಗೆ ಪಯಣಿಸಿದಳು. 642 00:56:53,410 --> 00:56:57,832 ಗ್ರೇಟ್ ಸರ್ಪೆಂಟ್ ರಿಂಗ್ ಅವಳ ಬೆರಳ ಮೇಲೆ ಸುಲಭವಾಗಿ ಕೂರುವುದಿಲ್ಲ ಎಂಬುದು ಸ್ಪಷ್ಟವಾಗಿದೆ. 643 00:56:59,083 --> 00:57:00,626 ಆದರೂ ಆಕೆ ಬಂದಳು... 644 00:57:02,419 --> 00:57:03,254 ನಿನಗಾಗಿ. 645 00:57:05,506 --> 00:57:09,468 ಆಕೆ ಇಲ್ಲವೆಂದು ನಿನ್ನ ಜೀವನ, ನಿನ್ನ ಭವಿಷ್ಯವನ್ನು ಸುಮ್ಮನೆ ನೀನು ತ್ಯಜಿಸುವುದು 646 00:57:09,468 --> 00:57:11,637 ನೈನೀವಿಗೆ ನಿಜವಾಗಿಯೂ ಬೇಕೆಂದುಕೊಂಡೆಯಾ? 647 00:57:14,390 --> 00:57:17,143 ನನಗೆ ತಿಳಿದಿರುವ ಅತ್ಯಂತ ಬಲಿಷ್ಠ ವ್ಯಕ್ತಿ ಆಕೆ. 648 00:57:17,560 --> 00:57:19,103 ಅವಳು ಹೇಗೆ ಸೋತಿರಬಹುದು? 649 00:57:21,814 --> 00:57:24,191 ಆರ್ಚಸ್ ಒಳಗೆ ಏನು ನಡೆಯುತ್ತದೆ ಎಂದು ಯಾರಿಗೂ ಗೊತ್ತಿಲ್ಲ. 650 00:57:27,736 --> 00:57:29,029 ನಾನು ಅವಳನ್ನು ಬಿಡಲಾರೆ. 651 00:57:29,989 --> 00:57:31,532 ನಮಗಾಗಿ ಕಂಬಳಿಗಳನ್ನು ತರುವೆ. 652 00:57:32,867 --> 00:57:34,201 ನಾವು ರಾತ್ರಿ ಕಳೆಯೋಣ. 653 00:57:35,578 --> 00:57:39,081 ಬಹುಶಃ ಆಕೆ ಎದುರಿಸಿದ್ದು ಚಕ್ರದ ತಿರುವಿನಲ್ಲಿ ಆಕೆಗೆ ಒಳ್ಳೆಯದೇನನ್ನಾದರೂ ಕೊಟ್ಟಿರಬಹುದು. 654 00:58:02,104 --> 00:58:03,689 ಅಮ್ಮ, ನೋಡು! 655 00:58:03,814 --> 00:58:05,524 ಪೆರಿನ್ ನಿನಗೆ ಅದನ್ನು ಮಾಡಿಕೊಟ್ಟನೇ? 656 00:58:06,734 --> 00:58:09,195 ರಾಕ್ಷಸರೊಂದಿಗೆ ಹೋರಾಡಲು ಅವಳಿಗೆ ಏನಾದರೂ ಬೇಕಿತ್ತು. 657 00:58:09,195 --> 00:58:11,113 ತುಂಬಾ ಧೈರ್ಯಶಾಲಿ ಹುಡುಗಿ, ಅವಳ ಅಮ್ಮನಂತೆ. 658 00:58:11,113 --> 00:58:13,157 ಅದನ್ನು ಬಳಸುವುದು ನನಗೆ ಅಪ್ಪ ಹೇಳಿಕೊಡುತ್ತಾರೆ. 659 00:58:13,782 --> 00:58:15,034 ನೋಡೋಣ. 660 00:58:19,955 --> 00:58:21,081 ಅದು ಮ್ಯಾಟ್. 661 00:58:34,011 --> 00:58:35,512 ನನ್ನ ಒಡತಿ. 662 00:58:37,097 --> 00:58:39,225 ಕ್ಷಮಿಸಿ, ಟೂ ರಿವರ್ಸಲ್ಲಿ ಒಬ್ಬ ಕತ್ತಿಪಟು 663 00:58:39,225 --> 00:58:42,311 ಇದ್ದಾರೆ ಎಂದು ನನಗೆ ಗೊತ್ತೇ ಆಗಲಿಲ್ಲ. 664 00:58:42,311 --> 00:58:43,604 ಅದು ನಾನೇ. 665 00:58:44,313 --> 00:58:45,356 ಎಲ್ನೋರ್! 666 00:58:47,358 --> 00:58:49,109 ನೀನ್ಯಾವಾಗ ಇಷ್ಟೊಂದು ಬೆಳೆದೆ? 667 00:58:52,738 --> 00:58:54,365 ಮನೆಗೆ ಸ್ವಾಗತ, ಆಗಂತುಕನೇ. 668 00:59:03,082 --> 00:59:07,127 ಜೇನಿನ ರೊಟ್ಟಿ ಮಾಡಲು ನಿಮ್ಮಪ್ಪನಿಗೆ ಏನಾದರೂ ಸಹಾಯ ಬೇಕಾ ನೋಡೋಣವೇ? ಹಾಂ? ಬಾ. 669 00:59:07,127 --> 00:59:08,045 ಹೋಗು ಈಗ. 670 00:59:08,045 --> 00:59:09,255 ಜೇನಿನ ರೊಟ್ಟಿಗಳೇ? 671 00:59:09,255 --> 00:59:10,256 -ಆಯಿತು. -ಸರಿ. 672 00:59:10,256 --> 00:59:11,382 ಬನ್ನಿ ಮತ್ತೆ. 673 00:59:28,399 --> 00:59:30,401 ಎಗ್ವೀನಳಿಂದ ನನಗಿಂದು ಒಂದು ಪತ್ರ ಬಂದಿತು. 674 00:59:31,151 --> 00:59:33,362 ಆಕೆ ಮತ್ತು ಮಿಕ್ಕ ಗ್ರೀನರು ಉತ್ತರಕ್ಕೆ ಹೊರಟಿದ್ದಾರೆ. 675 00:59:33,988 --> 00:59:35,781 ಟ್ರಾಲಕ್ಗಳು ಸಲ್ಡೇಯ ಮೇಲೆ ದಾಳಿ ಮಾಡಿದ್ದಾರೆ. 676 00:59:37,866 --> 00:59:39,618 ಸಲ್ಡೇಯ ತುಂಬಾ ದೂರದಲ್ಲಿದೆ. 677 00:59:40,577 --> 00:59:41,704 ಅಷ್ಟೊಂದು ದೂರವೇನಿಲ್ಲ. 678 00:59:44,790 --> 00:59:46,792 ಎಗ್ವೀನ್ ಸೆಡಾಯ್ ಕೆಲ ಟ್ರಾಲಕ್ಗಳನ್ನೆದುರಿಸಬಲ್ಲಳು. 679 00:59:59,847 --> 01:00:01,515 ಟವರ್ ಬಿಟ್ಟು ಬಂದಿದ್ದನ್ನು ಪರಿತಪಿಸುವೆಯಾ? 680 01:00:08,314 --> 01:00:09,982 ನನಗೆ ಇನ್ನೊಂದು ಜೇನಿನ ರೊಟ್ಟಿ ಕೊಡುವಿರಾ? 681 01:00:10,566 --> 01:00:12,192 ನೀನು ಬೇಕಾದಷ್ಟು ತಿಂದಿರುವೆ. 682 01:00:12,192 --> 01:00:16,613 ಮ್ಯಾಟ್ ಮತ್ತು ಪೆರಿನ್ರನ್ನು ಅಪ್ಪಿಕೊಂಡು ಶುಭರಾತ್ರಿ ಹೇಳು, ಆಮೇಲೆ ನಾವು ಮಲಗೋಣವೇ? ಆಯ್ತಾ? 683 01:00:19,408 --> 01:00:20,451 ಅಮ್ಮ. 684 01:00:21,076 --> 01:00:22,328 ಕೆಳಮಹಡಿಗೆ. 685 01:00:22,328 --> 01:00:23,746 -ಈಗಲೇ. ಹೋಗಿ. -ಹಾಂ. 686 01:00:32,963 --> 01:00:35,716 ನೀನು ಧೈರ್ಯಶಾಲಿ ಹುಡುಗಿಯಾಗಿರಬೇಕು. ಇಲ್ಲೇ ನನಗಾಗಿ ಕಾದಿರು. 687 01:00:35,716 --> 01:00:36,967 ಹಾಗೆ ಮಾಡುವೆಯಾ? 688 01:01:07,164 --> 01:01:08,040 ಇಲ್ಲ. 689 01:01:13,170 --> 01:01:14,380 ಇಲ್ಲ! 690 01:01:50,290 --> 01:01:52,167 ಇಲ್ಲ, ಇಲ್ಲ, ಇಲ್ಲ, ಇಲ್ಲ. 691 01:01:52,418 --> 01:01:53,419 ಇಲ್ಲ. 692 01:01:54,753 --> 01:01:57,047 ನಿನಗೇನಾಗಿಲ್ಲ, ನಿನಗೇನಾಗಿಲ್ಲ. 693 01:02:13,355 --> 01:02:14,398 ಅಮ್ಮ? 694 01:02:21,655 --> 01:02:23,574 ಏನದು? 695 01:02:30,164 --> 01:02:32,207 ಮರಳುವ ದಾರಿ ಬರುತ್ತದೆ ಆದರೆ ಒಮ್ಮೆ ಮಾತ್ರ. 696 01:02:37,629 --> 01:02:39,339 ಬಾ, ಚಿನ್ನ. ನಾವು ಹೊರಡಬೇಕು. 697 01:02:39,882 --> 01:02:41,133 ನನಗೆ ಭಯವಾಗುತ್ತಿದೆ. 698 01:02:41,133 --> 01:02:43,886 ನಂಗೊತ್ತು, ಆದರೆ ನೀನು ನನ್ನನ್ನು ನಂಬಬೇಕು. 699 01:02:43,886 --> 01:02:45,304 ಅಮ್ಮನನ್ನು ನಂಬುವೆಯಾ? 700 01:02:45,304 --> 01:02:47,222 ಸರಿ. ಕಣ್ಣು ಮುಚ್ಚಿಕೋ. 701 01:02:47,681 --> 01:02:48,515 ನಾನಿಲ್ಲಿದ್ದೇನೆ. 702 01:02:49,099 --> 01:02:50,893 ಎಲ್ಲವೂ ಸರಿಹೋಗಲಿದೆ. 703 01:03:27,721 --> 01:03:29,097 ನಿನಗೇನಾಗಿಲ್ಲ. 704 01:03:29,097 --> 01:03:30,140 ನಾನಿಲ್ಲಿದ್ದೇನೆ. 705 01:03:31,266 --> 01:03:33,393 ಎಲ್ಲವೂ ಸರಿಹೋಗಲಿದೆ. 706 01:05:52,240 --> 01:05:54,242 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 707 01:05:54,242 --> 01:05:56,328 ಸೃಜನಶೀಲ ಮೇಲ್ವಿಚಾರಕರು ವಿವೇಕ್