1 00:00:06,048 --> 00:00:08,551 ಏನೋ ಬರುತ್ತಿದೆ, ಮತ್ತು ನಾವದಕ್ಕೆ ತಯಾರಾಗಿಲ್ಲ. 2 00:00:08,634 --> 00:00:10,511 ಎಗ್ವೀನ್ ಎಷ್ಟೋ ಮಂದಿಗಿಂತ ಬಲಶಾಲಿ, 3 00:00:10,594 --> 00:00:13,514 ಆದರೆ ನಿನ್ನಲ್ಲಿ ಆ ಶಕ್ತಿಯ ಹತ್ತು ಪಟ್ಟು ಇದೆ, ನೈನೀವ್. 4 00:00:13,597 --> 00:00:15,641 ಯಾವುದೇ ಗಂಡಸು ಅದನ್ನು ನಿನ್ನಿಂದ ಎಂದಿಗೂ 5 00:00:15,725 --> 00:00:18,644 ಕಸಿಯಲಾರದಷ್ಟು ಶಕ್ತಿಶಾಲಿ ನೀನಾಗುವುದನ್ನು ನಾನು ನೋಡಬೇಕು. 6 00:00:18,728 --> 00:00:20,938 ಆ ಕಠಾರಿಯನ್ನು ನಾನು ಆರು ತಿಂಗಳಿಂದ ಮುಟ್ಟಿಲ್ಲ. 7 00:00:21,021 --> 00:00:22,356 ನಾನು ನಿನಗೆ ಅಪಾಯ ಅಲ್ಲ. 8 00:00:22,440 --> 00:00:23,941 ಅಮಾಯಕತೆ ನಿನಗೆ ಸರಿಹೊಂದದು. 9 00:00:24,024 --> 00:00:26,026 ನೀನು ನಾರ್ತ್ ಹಾರ್ಬರಲ್ಲಿ ಭೇಟಿಯಾಗುವವನು ಗೊತ್ತು. 10 00:00:26,110 --> 00:00:28,696 ಹೊರಟುಹೋಗು, ಇಲ್ಲಾ ಅವನ ವಿಳಾಸ ರೆಡ್ ಸಹೋದರಿಯರಿಗೆ ಕೊಡುವೆ. 11 00:00:28,779 --> 00:00:32,158 ಲಾರ್ಡ್ ಇಂಗ್ಟರ್ ನೇಮಿಸಿದ ಈ ಹೊಸ ಮೂಸುಗನ ಬಗ್ಗೆ ತುಂಬಾ ಕಡಿಮೆ ತಿಳಿದಿರುವೆ. 12 00:00:32,908 --> 00:00:34,827 ನನ್ನೊಳಗೆ ಕ್ರೋಧ ತುಂಬಿದೆ. 13 00:00:34,910 --> 00:00:37,329 ಹಳೆಯ ಗಡಿಯಾರ ಸಿಕ್ಕಿದಾಗ ಅದರ ಮೇಲೆ ಕವನ ಬರೆದಿತ್ತಂತೆ. 14 00:00:37,413 --> 00:00:38,622 ರಕ್ತದಲ್ಲಿ. 15 00:00:38,706 --> 00:00:40,124 ಬಂಧವು ಎಲ್ಲವನ್ನೂ ಸುಲಭಗೊಳಿಸಿತ್ತು. 16 00:00:40,207 --> 00:00:42,585 ಅದು ಸ್ನೇಹಿತನಂತೆ, ನಾವು ಮಾತನಾಡದಿರಲು ಅದೇ ಮಾತನಾಡುವುದು. 17 00:00:42,668 --> 00:00:43,753 ಮತ್ತು ಈಗ ಮೌನ. 18 00:00:47,965 --> 00:00:49,842 ನೀನು ನನಗೆ ಏನನ್ನು ಹೇಳುತ್ತಿಲ್ಲ? 19 00:00:49,925 --> 00:00:51,510 ಈಗ ಏನನ್ನು ನೋಡುವೆ? 20 00:00:51,594 --> 00:00:52,887 ಐ ಆಫ್ ದಿ ವರ್ಲ್ಡ್? 21 00:00:52,970 --> 00:00:54,013 ಕಾಣದಿದ್ದರೆ ಚೆನ್ನಾಗಿರೋದು. 22 00:00:54,096 --> 00:00:57,183 ಅದು ನಿಜವೇ, ಅಲ್ವಾ? ಆವಾಹನೆ ಮಾಡಬಲ್ಲ ಪುರುಷರ ಬಗ್ಗೆ ಅವರು ಹೇಳುವುದು. 23 00:00:57,266 --> 00:01:00,186 ಅವರಿಗೆ ಹುಚ್ಚು ಹಿಡಿದು, ತಾವು ಪ್ರೀತಿಸಿದ ಎಲ್ಲರನ್ನೂ ಕೊಲ್ಲುತ್ತಾರೆಂದು? 24 00:01:00,269 --> 00:01:01,187 ಹೌದು. 25 00:01:01,270 --> 00:01:02,271 ಇಲ್ಲಿ ಸತ್ತೆನೆಂದು ಹೇಳು. 26 00:01:03,230 --> 00:01:04,607 ನಾನು ಮರಳಲಿಲ್ಲ ಎಂದು ತಿಳಿಸು. 27 00:01:15,785 --> 00:01:16,869 ನೈನೀವ್! 28 00:01:18,496 --> 00:01:19,872 -ಇಲ್ಲ! -ಮ್ಯಾಟ್! 29 00:01:20,873 --> 00:01:21,874 ಇಲ್ಲ! 30 00:01:32,134 --> 00:01:33,093 ರಾಂಡ್. 31 00:01:34,178 --> 00:01:35,137 ರಾಂಡ್? 32 00:01:37,181 --> 00:01:38,390 ಮತ್ತೊಂದು ದುಃಸ್ವಪ್ನವೇ? 33 00:01:41,310 --> 00:01:43,729 ನೀನು ಅವರೆಲ್ಲರನ್ನೂ ಕೊಲ್ಲುವೆ. 34 00:02:00,663 --> 00:02:02,748 ಇಲ್ಲ. ನಾನು ಕೆಲಸಕ್ಕೆ ಮರಳಬೇಕು. 35 00:02:03,958 --> 00:02:06,836 ನೀನಿನ್ನೂ ಈ ತಿಂಗಳ ಕೋಣೆಯ ಬಾಡಿಗೆಯನ್ನು ನನಗೆ ಕೊಡಬೇಕು. 36 00:02:07,294 --> 00:02:10,256 ತಡ ಮಾಡಬೇಡ, ಇಲ್ಲದಿದ್ದರೆ ಬಡ್ಡಿ ವಿಧಿಸುತ್ತೇನೆ. 37 00:02:13,467 --> 00:02:14,552 ತಡ ಮಾಡಲ್ಲ. 38 00:02:17,346 --> 00:02:19,265 ನಿನ್ನ ಬೆಲೆಗಳು ನನಗೆ ತುಂಬಾ ಹೆಚ್ಚು. 39 00:02:22,059 --> 00:02:25,437 ಇಷ್ಟೆಲ್ಲಾ ರಾತ್ರಿಗಳು ಜೊತೆಗಿದ್ದರೂ, ಯಾವಾಗಲೂ ಇನ್ನೂ ಅದೇ ಅಂತ್ಯ. 40 00:02:40,953 --> 00:02:42,162 ರಾಂಡ್... 41 00:02:42,621 --> 00:02:44,415 ನೀನು ಅವರೆಲ್ಲರನ್ನೂ ಕೊಲ್ಲುವೆ. 42 00:03:06,562 --> 00:03:07,479 ಹೇ, ಗೆಳೆಯ. 43 00:03:15,821 --> 00:03:18,699 ಫೋರ್ ಗೇಟ್, ಕೈರ್ ಹಿನ್ 44 00:04:06,789 --> 00:04:08,832 ನೀನು ಅವರೆಲ್ಲರನ್ನೂ ಕೊಲ್ಲುವೆ. 45 00:04:12,670 --> 00:04:14,213 ನನ್ನ ಮಾತು ಕೇಳಿಸಿತೇ? 46 00:04:14,922 --> 00:04:17,632 ನೀನು ನನ್ನವನು, ರಾಂಡ್ ಅಲ್'ಥೋರ್. 47 00:04:19,677 --> 00:04:25,099 ದ ವೀಲ್ ಆಫ್ ಟೈಮ್ 48 00:04:48,664 --> 00:04:49,665 ಲಾನ್. 49 00:04:52,835 --> 00:04:56,130 -ನಿನಗೆ ಹೆಚ್ಚಿನ ಹೀಲಿಂಗ್ ಬೇಡವೆಂದು ಖಾತ್ರಿಯೇ? -ಚೆನ್ನಾಗಿದ್ದೇನೆ. 50 00:04:56,213 --> 00:04:57,631 ನಿನಗೆ ಸ್ವಲ್ಪ ನೀರು ತರುವೆ. 51 00:04:58,757 --> 00:04:59,800 ನಿನ್ನ ಅದೃಷ್ಟ. 52 00:05:01,260 --> 00:05:03,303 ನನ್ನ ಸಹೋದರಿ ಮತ್ತು ನಾನು ನಿನ್ನ ಜೊತೆ ಬರುತ್ತೇವೆ. 53 00:05:08,183 --> 00:05:11,228 ಮೊದಲು ನೀನು ವೈಟ್ ಟವರಿಗೆ ತೆರಳುವೆ ಎಂದುಕೊಳ್ಳುವೆ? 54 00:05:11,311 --> 00:05:13,188 ಟವರಿನಿಂದ ನನ್ನನ್ನು ಬಹಿಷ್ಕರಿಸಲಾಗಿದೆ. 55 00:05:14,148 --> 00:05:15,107 ನನಗೆ ಗೊತ್ತು. 56 00:05:45,596 --> 00:05:46,597 ಇರು. 57 00:05:48,223 --> 00:05:51,852 ಸೂರ್ಯಾಸ್ತಕ್ಕೂ ಮುನ್ನ ನಾನು ಬಂದರನ್ನು ತಲುಪಬೇಕೆಂದರೆ ನಾವೀಗಲೇ ಹೊರಡಬೇಕು. 58 00:05:52,853 --> 00:05:54,772 ಈಗಾಗಲೇ ಹೆಚ್ಚು ಸಮಯ ಕಳೆದುಕೊಂಡಿದ್ದೇನೆ. 59 00:05:56,106 --> 00:05:57,775 ನಿಖರವಾಗಿ ನಾವೆಲ್ಲಿಗೆ ಹೊರಟಿದ್ದೇವೆ? 60 00:05:58,358 --> 00:05:59,485 ವೈಟ್ ಟವರಿಗೆ. 61 00:06:00,235 --> 00:06:02,571 -ಆಗಲ್ಲ-- -ನನ್ನ ಕುದುರೆಯನ್ನು ತಯಾರಿರಿಸಲು ತೋಮಸಿಗೆ ಹೇಳು. 62 00:06:02,654 --> 00:06:04,865 ಹೀಲಿಂಗಿಂದ ನೀನಿನ್ನೂ ಬಲಹೀನನಾಗಿರುವೆ… 63 00:06:06,408 --> 00:06:08,494 ಮತ್ತು ನಾನು ಜಾರಿ ಬೀಳುವುದು ನನಗೆ ಬೇಕಿಲ್ಲ. 64 00:06:25,594 --> 00:06:27,763 ಆ ದರಿದ್ರ ಮುಂಡೆಮಗ ಕುದುರೆ ಏರಲು 65 00:06:27,846 --> 00:06:31,642 ನಿರಾಕರಿಸಿದರೆ ನಾವು ಖಂಡಿತ ಅವರನ್ನು ಹಿಡಿಯಲಾಗುವುದಿಲ್ಲ. 66 00:06:31,725 --> 00:06:33,811 ಕುದುರೆಯ ಮೇಲೆ ಕುಳಿತು ಪತ್ತೆ ಮಾಡುವುದು ಸುಲಭವಲ್ಲ. 67 00:06:33,894 --> 00:06:37,397 ಅವನು ಸುಮ್ಮನೆ ಗಾಳಿಯನ್ನು ಮೂಸುತ್ತಿದ್ದಾನೆ. ಅದು ಸರಿಯಾದ ಪತ್ತೆದಾರಿಕೆ ಅಲ್ಲ. 68 00:06:37,481 --> 00:06:40,359 -ಅವನಿಂದ ಫೈನ್ ಜಾಡನ್ನಂತೂ ಅನುಸರಿಸುತ್ತಿದ್ದೇವೆ. -ಮೌನ. 69 00:06:55,415 --> 00:06:56,834 ಇಲ್ಲಿ ದಾಟಿದ್ದಾರೆ. 70 00:06:59,503 --> 00:07:01,338 ಏನೋ ಸರಿ ಅನಿಸುತ್ತಿಲ್ಲ. 71 00:07:04,800 --> 00:07:05,926 ಸುತ್ತಲೂ ಹೋಗೋಣ. 72 00:07:06,468 --> 00:07:08,512 ನಮಗೊಂದು ನದಿ ದಾಟು ಎಲ್ಲಿ ಸಿಕ್ಕಿದರೂ ಸರಿ. 73 00:07:08,595 --> 00:07:10,472 ಬಿಲ್ಡರ್, ನೀನು ಕುದುರೆಗಳ ಜೊತೆ ಇರು. 74 00:07:10,556 --> 00:07:12,099 -ನಿಮ್ಮಿಷ್ಟ. -ವೋ. 75 00:07:20,983 --> 00:07:22,484 ಬೇರೆಯಾಗಿ, ಪ್ರದೇಶದಲ್ಲಿ ಹುಡುಕಿ. 76 00:07:23,026 --> 00:07:24,987 ಇದೊಂದು ಡಾರ್ಕ್ ಫ್ರೆಂಡ್ ಅಡಗುತಾಣ ಇರಬಹುದು. 77 00:07:55,558 --> 00:07:57,477 ಆ ಮನೆಯಲ್ಲಿ ಒಬ್ಬ ಹೆಂಗಸಿದ್ದಾಳೆ. 78 00:08:22,419 --> 00:08:24,421 ಕ್ಷಮಿಸಿ, ನಮಗೆ ಚಿಂತೆಯಾಗಿತ್ತು ನೀವು-- 79 00:09:03,168 --> 00:09:04,962 ಅದು ನಡೆದದ್ದು ಇಲ್ಲೇ. 80 00:09:06,755 --> 00:09:08,590 -ಬೆಳಕೇ-- -ಪೆರಿನ್? ಆರಾಮ ಇರುವೆಯಾ? 81 00:09:13,220 --> 00:09:14,805 ಇಲ್ಲಿ ಯಾರೂ ಇಲ್ಲ. 82 00:09:14,888 --> 00:09:15,889 ಹೋಗೋಣ. 83 00:09:20,227 --> 00:09:24,773 ಸತ್ಯ ಮತ್ತು ಸ್ವಪ್ನದರ್ಶನದ ನಡುವಿನ ವ್ಯತ್ಯಾಸ ತಿಳಿಯುವುದು ಉಪಕಾರಿ. 84 00:09:26,984 --> 00:09:28,402 ನೀನಷ್ಟು ಸುಲಭವಾಗಿ ಕಳೆದುಹೋಗಲಾರೆ. 85 00:09:32,906 --> 00:09:34,825 ನೀನು ನನಗೇನೇ ಮಾಡುತ್ತಿದ್ದರೂ, 86 00:09:34,908 --> 00:09:36,285 ಅದರಲ್ಲಿ ನನಗೇನೂ ಬೇಕಿಲ್ಲ. 87 00:09:38,328 --> 00:09:39,663 ಅದು ಆ ರೀತಿ ನಡೆಯಲ್ಲ. 88 00:09:45,210 --> 00:09:48,005 ಫೈನ್ ಮತ್ತು ಅವನ ಸ್ನೇಹಿತರು ಆತುರದಲ್ಲಿ ಹೊರಟಂತೆ ಕಾಣುತ್ತದೆ. 89 00:09:48,088 --> 00:09:50,841 ನಾವು ಅವರ ಬೆನ್ನ ಹಿಂದೆ ಬಿದ್ದಿರುವುದು ಅವರಿಗೆ ಗೊತ್ತಾಗಿರಬಹುದು. 90 00:09:51,633 --> 00:09:53,302 ಅವನನ್ನು ಏನೇ ಭೀತನಾಗಿಸಿದ್ದರೂ, 91 00:09:53,927 --> 00:09:55,262 ಅದು ನಾವಲ್ಲ. 92 00:09:56,054 --> 00:09:57,931 ನೀವು ನೋಡುವುದೇನೋ ಇದೆ. 93 00:10:01,351 --> 00:10:04,479 ಅವರು ಇದನ್ನು ಮಾಡಿದಾಗ ಆತ ಬದುಕಿದ್ದ. ಕನಿಷ್ಠ ಅವರು ಆರಂಭಿಸಿದಾಗಲಂತೂ. 94 00:10:11,069 --> 00:10:14,156 ಫೇಡಿಗೆ ಹೀಗೆ ಏನು ಮಾಡಬಹುದು? 95 00:10:15,866 --> 00:10:17,075 ಗೊತ್ತಿಲ್ಲ. 96 00:10:17,784 --> 00:10:19,453 ಪಡನ್ ಫೈನ್ ಇರಬಹುದೇ? 97 00:10:25,500 --> 00:10:26,710 ಕುದುರೆಗಳ ಬಳಿ ಮರಳೋಣ. 98 00:10:27,919 --> 00:10:30,505 ನದಿಯ ಪಕ್ಕದ ಆ ಹಳ್ಳಿಯಲ್ಲಿ ಈ ರಾತ್ರಿ ತಂಗೋಣ. 99 00:10:40,182 --> 00:10:41,099 ಐಎಲವನು! 100 00:10:41,641 --> 00:10:43,769 ನನ್ನ ಕತ್ತಿ, ಎಲ್ಲಿದೆ? 101 00:10:43,852 --> 00:10:45,145 ಬೇಗ! ಯಾರಾದರೂ! 102 00:10:45,228 --> 00:10:47,356 ಅಯಿಲರು ಗೋಡೆಯನ್ನು ಭೇದಿಸಿದ್ದಾರೆ! 103 00:10:48,273 --> 00:10:50,359 -ನಾನೇ, ಎರ್ರೋಲ್. -ನಿನಗೆ ನನ್ನ ಹೆಸರು ಹೇಗೆ ಗೊತ್ತು? 104 00:10:50,901 --> 00:10:52,903 ಭಟರನ್ನು ದಾಟಿ ಒಳಗೆ ಹೇಗೆ ಬಂದೆ? 105 00:10:52,986 --> 00:10:55,364 ಭಟರೇ ನನ್ನನ್ನು ಒಳಗೆ ಬಿಟ್ಟರು, ಎಂದಿನಂತೆ. 106 00:10:56,948 --> 00:10:59,326 ಐಎಲ್ ವಾರ್ ಮುಗಿದಿದೆ, ಮಿತ್ರ. 107 00:10:59,409 --> 00:11:00,452 ಇಪ್ಪತ್ತು ವರ್ಷಗಳಾಗಿವೆ. 108 00:11:02,245 --> 00:11:03,747 ನಡೆದಾಟಕ್ಕೆ ಹೋಗೋಣವೇ? 109 00:11:04,831 --> 00:11:07,000 ನಾವು ಹಿಂದೆ ಭೇಟಿಯಾಗಿದ್ದೇವೆಯೇ? 110 00:11:07,626 --> 00:11:08,752 ಹೌದು. 111 00:11:08,835 --> 00:11:11,004 ಇದು ಯಾವುದೋ ಕುತಂತ್ರ ಅಲ್ಲ ತಾನೇ? 112 00:11:11,088 --> 00:11:12,214 ಇಲ್ಲ. 113 00:11:12,297 --> 00:11:13,673 ಕನಸಿನಲ್ಲೂ ಹಾಗಂದುಕೊಳ್ಳಲಾರೆ. 114 00:11:23,558 --> 00:11:25,352 ಈ ದಿನವನ್ನು ನೋಡುತ್ತೇನೆಂದುಕೊಳ್ಳಲಿಲ್ಲ. 115 00:11:27,270 --> 00:11:28,647 ಅಯಿಲರು ನಮ್ಮೊಂದಿಗೆ. 116 00:11:30,107 --> 00:11:32,901 ಇಡೀ ಜಾಗದಲ್ಲಿ ಯಾರಿಗೂ ಯಾವ ಕಾಳಜಿಯೂ ಇಲ್ಲ. 117 00:11:35,862 --> 00:11:37,614 ನನ್ನನ್ನು ನಡೆದಾಡಲು ಕರೆದೊಯ್ಯಲು ಬಂದಿದ್ದಾನೆ. 118 00:11:38,657 --> 00:11:40,575 ಪ್ರತಿ ದಿನ ಹೊಸದಾಗಿ ಶುರು ಮಾಡಲು ಸಿಗುತ್ತದೆ. 119 00:11:44,955 --> 00:11:46,206 ಯಾವಾಗಲೂ ನಿಭಾಯಿಸುತ್ತೇವೆ. 120 00:11:49,126 --> 00:11:49,960 ಅಲ್ಲವೇ? 121 00:12:03,765 --> 00:12:05,517 ದುಷ್ಟ ಹೋರಾಟಗಾರರು, ನಿಮ್ಮ ಜನ. 122 00:12:06,852 --> 00:12:11,481 ಒಬ್ಬನು ಇಡೀ ಪಡೆಯನ್ನೇ ಒಂಟಿಯಾಗಿ ಕತ್ತರಿಸಿ ಹಾಕಿದ್ದನ್ನು ನಾನು ನೋಡಿದೆ. 123 00:12:13,442 --> 00:12:15,485 -ಮತ್ತು ನಿಮ್ಮ ಮಹಿಳೆಯರು… -ಇನ್ನೂ ಭಯ೦ಕರರೇ? 124 00:12:16,111 --> 00:12:17,612 ಇನ್ನೂ ಭಯ೦ಕರರು. 125 00:12:17,696 --> 00:12:19,448 ನೀವು ಬದುಕಿದ್ದೇ ನನಗೆ ಆಶ್ಚರ್ಯ. 126 00:12:20,157 --> 00:12:21,867 ನನ್ನನ್ನು ಪರೀಕ್ಷಿಸಬೇಡವೋ, ಹುಡುಗ. 127 00:12:22,826 --> 00:12:25,620 ಒಮ್ಮೆ ಕತ್ತಿಪಟುವಾದರೆ, ಎಂದೆಂದಿಗೂ ಕತ್ತಿಪಟುವೇ. 128 00:12:26,955 --> 00:12:30,292 ನನ್ನ ಬೆಳ್ಳಕ್ಕಿ-ಗುರುತಿನ ಕತ್ತಿಯನ್ನು ನಾನು ತಪ್ಪಾದ ಜಾಗದಲ್ಲಿಟ್ಟಿದ್ದರೂ ಸಹ. 129 00:12:31,001 --> 00:12:33,628 ಮತ್ತೆ ಯಾವಾಗಲಾದರೂ ನನ್ನ ಕತ್ತಿಯನ್ನು ಒಳತರಲು ಪ್ರಯತ್ನಿಸುವೆ. 130 00:12:34,671 --> 00:12:37,340 ನೀವು ನನಗೆ ಇನ್ನೊಂದಷ್ಟು ಸಮರಕಲೆ ತಿಳಿಸಿಕೊಡಬಹುದಲ್ಲವೇ? 131 00:12:39,259 --> 00:12:40,385 ನಿನಗಿಷ್ಟವಾದದ್ದು ಆರಿಸಿಕೋ. 132 00:12:42,971 --> 00:12:44,514 ಮೇಘ ಛೇದನ, 133 00:12:45,223 --> 00:12:46,516 ಆ್ಯಡರ್ ಚುಂಬನ-- 134 00:12:52,522 --> 00:12:55,233 -ಪರ್ವಕಾಲದಂತೆಯೇ, ಅಲ್ವಾ, ಮುದುಕನೇ? -ಹೋಗು ಇಲ್ಲಿಂದ. 135 00:12:55,317 --> 00:12:58,195 ಬಿಡು, ಅವನನ್ನು ರೇಗಿಸುವುದು ತುಂಬಾ ಸುಲಭ. 136 00:12:58,278 --> 00:13:00,280 ಯಾವಾಗಲೂ ಒಳ್ಳೆ ಮಜಾ ಇರುತ್ತೆ. 137 00:13:00,363 --> 00:13:02,949 ಇಷ್ಟರಲ್ಲೇ ನೀನು ತಪ್ಪಾದ ವ್ಯಕ್ತಿಯನ್ನು ರೇಗಿಸುತ್ತೀಯ. 138 00:13:03,033 --> 00:13:04,034 ಯಾರು? ನಿನ್ನನ್ನೇ? 139 00:13:04,826 --> 00:13:07,370 ನೀನು ಪ್ರತಿ ದಿನ, ಇಡೀ ದಿನ ಮುದುಕನ ಕಕ್ಕಸು ಎತ್ತುತ್ತಿರುತ್ತೀಯ. 140 00:13:07,454 --> 00:13:11,833 ಕನಿಷ್ಠ ಇಲ್ಲಿನ ತೋಟದಲ್ಲಾದರೂ ನಾನು ಕೆಲವು ಜನಪ್ರಿಯ ನಿವಾಸಿಗಳನ್ನು ಕಾಣಬಹುದು. 141 00:13:13,585 --> 00:13:14,628 ಮತ್ತು ಬಿಸಿಲು. 142 00:13:23,803 --> 00:13:24,679 ಹೇ. 143 00:13:25,805 --> 00:13:26,681 ಹೇ. 144 00:13:28,683 --> 00:13:29,726 ಆ ಬೋಳಿಮಗ. 145 00:13:31,728 --> 00:13:33,230 ಅವನು ನಮಗೆ ಗೊತ್ತಿಲ್ಲದೆ ಬಂದ. 146 00:13:35,482 --> 00:13:37,901 ಮುಂದಿನ ಬಾರಿ ಅವನಿಗಾಗಿ ತಯಾರಿರೋಣ. 147 00:13:38,401 --> 00:13:40,195 ಮೊದಲು ಅವನಿಗೆ ಯಾವುದರಿಂದ ಹೊಡೆಯುವಿರಿ? 148 00:13:44,324 --> 00:13:45,951 ರೇಷ್ಮೆಯ ಸೀಳುವುದು 149 00:13:47,202 --> 00:13:48,620 ಅವನನ್ನು ಕೆಡವಲು. 150 00:13:50,038 --> 00:13:52,415 ನಂತರ ಜವೆ ಗೋಧಿಯ ಕೊಯ್ಲು, 151 00:13:52,499 --> 00:13:54,501 ತನ್ನನ್ನು ಅವನು ಸರಿಪಡಿಸಿಕೊಳ್ಳುವುದರೊಳಗೆ. 152 00:13:55,168 --> 00:13:56,795 ನೇರವಾಗಿ ಹೃದಯಕ್ಕೆ. 153 00:13:58,755 --> 00:14:00,840 ನೀನೇನೂ ಕಡಿಮೆ ಇಲ್ಲ, ಮುದುಕಪ್ಪ. 154 00:14:12,018 --> 00:14:12,978 ನೈನೀವ್ ಎಲ್ಲಿ? 155 00:14:13,061 --> 00:14:15,814 ಲಿಯಾಂಡ್ರಿನ್ ಸೆಡಾಯ್ ಖುದ್ದಾಗಿ ಬಂದು ಅವಳನ್ನು ಕರೆದೊಯ್ದರು. 156 00:14:15,897 --> 00:14:16,940 ಎಲ್ಲಿಗೆ ಕರೆದೊಯ್ದರು? 157 00:14:28,326 --> 00:14:29,494 ಮೂಳೆಮುರಿತದ ಜ್ವರ. 158 00:14:30,704 --> 00:14:32,872 ನಿಮ್ಮ ಕ್ಷಮೆ ಕೋರುವೆ, ಅಯಿಸ್ ಸೆಡಾಯ್. ನೋಡುವಿರಾ? 159 00:14:32,956 --> 00:14:35,792 ಮುಂದುವರಿಸು, ಮಗು. ನಾವು ಗಮನಿಸುತ್ತೇವೆ ಅಷ್ಟೇ. 160 00:14:36,251 --> 00:14:37,335 ಕ್ರಿಮ್ಸನ್ ಮುಳ್ಳಿನ ಬೇರು. 161 00:14:37,961 --> 00:14:40,130 -ನೀವು ಮಾಡಲ್ಲವಲ್ಲ-- -ಅವಳು ಖಂಡಿತ ಮಾಡಲ್ಲ. 162 00:14:40,672 --> 00:14:44,884 ನಿನ್ನ ಸ್ವಂತ ಊರಿನಲ್ಲಿ ಮೂಳೆಮುರಿತದ ಜ್ವರ ಅಂದರೆ ಸಾವೇ, ಆದರೆ ಇಲ್ಲಿ ಸುಲಭವಾಗಿ ಗುಣಪಡಿಸಬಹುದು. 163 00:14:45,510 --> 00:14:48,513 ಕ್ರಿಮ್ಸನ್ ಮುಳ್ಳನ್ನು ನೀರಿಗೆ ಹಾಕುತ್ತೇವೆ. ನೋವನ್ನು ಕಡಿಮೆ ಮಾಡುತ್ತದೆ. 164 00:14:48,597 --> 00:14:50,599 ಆದರೆ ಹೀಲಿಂಗ್ ಆಗಲೂ ಆರಾಮದಾಯಕವಲ್ಲ. 165 00:14:51,349 --> 00:14:53,143 ನಾನಿದನ್ನು ಮಾಡುವಾಗ ಆಕೆಯ ಕೈ ಹಿಡಿಯುವಿರಾ? 166 00:15:37,520 --> 00:15:38,938 ಅದ್ಭುತವಾಗಿತ್ತು. 167 00:15:41,024 --> 00:15:42,484 ತುಂಬಾ ಅಭ್ಯಾಸ ಮಾಡಬೇಕಾಯಿತು. 168 00:15:50,659 --> 00:15:51,701 ಬಾ. 169 00:15:55,330 --> 00:15:58,833 ಆ ಯುವತಿಯಂತೆ ನೀನು ಅಕ್ಸೆಪ್ಟೆಡ್ ಆದಾಗ, 170 00:15:58,917 --> 00:16:02,462 ಪ್ರತಿಯೋರ್ವ ಆಜಾರಿಂದ ಅವರ ವಿಶೇಷತೆ, ಕರ್ತವ್ಯಗಳ ಬಗ್ಗೆ ನೀನು ಕಲಿಯುವೆ. 171 00:16:02,545 --> 00:16:04,756 ಬ್ರೌನ್ಗಳ ಜೊತೆ ನಮ್ಮ ಮಹಾ ಗ್ರಂಥಾಲಯವನ್ನು ಅನ್ವೇಷಿಸುವುದು, 172 00:16:04,839 --> 00:16:08,134 ರಾಜ್ಯಕಾರ್ಯ ಮತ್ತು ರಾಜತಾಂತ್ರಿಕತೆಯನ್ನು ಗ್ರೇಗಳಿಂದ ಕಲಿಯುವುದು, 173 00:16:08,218 --> 00:16:11,596 ಮತ್ತು ನೀನಿಲ್ಲಿಗೆ ಬಂದಾಗ, ಯೆಲ್ಲೋ ಸಹೋದರಿಯರು ಆ ಹೀಲಿಂಗನ್ನು ನಿನಗೆ ಕಲಿಸುತ್ತಾರೆ, 174 00:16:11,680 --> 00:16:15,642 ನಿನಗೆದುರಾಗುವ ರೋಗ ಸೂಚಕ ಮತ್ತು ರೋಗಕ್ಕೆ ಉತ್ತರ ಅದು. 175 00:16:15,725 --> 00:16:19,896 ಆದರೆ ನನ್ನ ಆಜಾ? ಮೂಲದಲ್ಲಿ ಕಾಯಿಲೆ ಹುಟ್ಟುವುದನ್ನೇ ನಾವು ತಡೆಯುತ್ತೇವೆ. 176 00:16:21,398 --> 00:16:23,775 ಆವಾಹನೆ ಮಾಡಬಲ್ಲ ಪುರುಷರು ಕಾಯಿಲೆ ಅಲ್ಲ. 177 00:16:26,361 --> 00:16:28,113 ನಾನು ಕೂಡ ಸಣ್ಣ ಹಳ್ಳಿಯಲ್ಲಿ ಬೆಳೆದೆ. 178 00:16:28,196 --> 00:16:31,991 ನಾನಿಲ್ಲಿಗೆ ಬಂದಾಗ, ಒಬ್ಬ ಹುಡುಗಿಯ ಜೀವ ಉಳಿಸುವುದು, ಅದೆಷ್ಟೇ ಮಹತ್ವದ್ದಾಗಿದ್ದರೂ, 179 00:16:32,075 --> 00:16:34,786 ನಾನು ನಿಜವಾಗಿ ಮಾಡಬಹುದಾದುದರ ಮುಂದೆ ಕಳೆಗುಂದುವುದು 180 00:16:34,869 --> 00:16:37,872 ಎಂದು ಅರ್ಥೈಸಿಕೊಳ್ಳಲು ನನಗೆ ಬಹಳ ಸಮಯವೇ ಹಿಡಿಯಿತು. 181 00:16:37,956 --> 00:16:40,750 ಒನ್ ಪವರನ್ನು ಬಳಸುವುದು ವಯಸ್ಸಾಗುವ ಕ್ರಿಯೆಯನ್ನು ನಿಧಾನಿಸುತ್ತದೆ, 182 00:16:40,834 --> 00:16:43,336 ಅಯಿಸ್ ಸೆಡಾಯಿಗಳು ನೂರಾರು ವರ್ಷ ಬದುಕುವಂತೆ ಮಾಡುತ್ತದೆ. 183 00:16:43,420 --> 00:16:45,004 ಪ್ರತಿಕ್ರಿಯಿಸುವುದಕ್ಕಿಂತ ಹೆಚ್ಚೇ 184 00:16:45,088 --> 00:16:47,632 ಮಾಡಬಹುದು, ನಾವು ಇತಿಹಾಸದ ಪಥವನ್ನೇ ಬದಲಾಯಿಸಬಹುದು. 185 00:16:48,258 --> 00:16:52,095 ನಾನು ಭೇಟಿಯೂ ಆಗದ ಲೆಕ್ಕವಿಲ್ಲದಷ್ಟು ಹುಡುಗಿಯರನ್ನು 186 00:16:52,178 --> 00:16:54,681 ಅಸಲು ರಕ್ಷಿಸಲ್ಪಡುವುದೇ ಬೇಕಾಗುವುದಿಲ್ಲ. 187 00:16:58,017 --> 00:17:01,980 ನಿನ್ನ ಅಧ್ಯಯನದ ಜವಾಬ್ದಾರಿಯನ್ನು ನನಗೆ ವಹಿಸಲು ನವಶಿಷ್ಯೆಯರ ಒಡತಿಯನ್ನು ಕೋರಿರುವೆ. 188 00:17:03,064 --> 00:17:04,983 ತರಬೇತಿಯಲ್ಲಿರುವವರಿಗೆ ನೀವು ಹೇಳಿಕೊಡಬಾರದಲ್ಲ. 189 00:17:05,733 --> 00:17:08,236 ಆರ್ಚಸ್ ಬಗ್ಗೆ ಕೇಳಿರುವೆಯಾ? 190 00:17:10,864 --> 00:17:13,282 ನವಶಿಷ್ಯೆಯರು ಸ್ವೀಕೃತರಾಗಲು ಒಳಗೊಳ್ಳುವ ಪರೀಕ್ಷೆ. 191 00:17:13,366 --> 00:17:16,744 ನೀನು ತಯಾರಿರುವೆಯಾ ಎಂದು ನನ್ನ ಸಹೋದರಿಯರು ಕೇಳಿದರೆ, ಹೌದೆಂದು ಹೇಳು. 192 00:17:18,496 --> 00:17:19,955 ನಂತರ ನಮ್ಮ ಕೆಲಸ ಶುರುವಾಗಬಹುದು. 193 00:17:21,082 --> 00:17:22,916 ಸ್ವೀಕೃತರಿಗೆ ನಾನು ಪಾಠ ಮಾಡಬಹುದು. 194 00:17:24,252 --> 00:17:25,627 ಸಿಹಿರೊಟ್ಟಿ, ಅಯಿಸ್ ಸೆಡಾಯ್? 195 00:17:30,091 --> 00:17:31,342 ಧನ್ಯವಾದ. 196 00:17:53,072 --> 00:17:54,741 ಕನಿಷ್ಠ ಬಾಗಿಲನ್ನಾದರೂ ತಟ್ಟು. 197 00:17:55,158 --> 00:17:56,493 ನಾನು ನಗ್ನನಾಗಿರಬಹುದು. 198 00:17:56,576 --> 00:17:59,078 ಹೌದು, ಅದನ್ನು ಯೋಚಿಸಿದರೇನೇ ನನ್ನ ಹೃದಯ ಕುಣಿಯುತ್ತೆ. 199 00:18:03,917 --> 00:18:04,918 ಅವು ನನಗೇನು? 200 00:18:05,877 --> 00:18:08,129 ಸಿಹಿರೊಟ್ಟಿ. ನನಗೆ ಉದಾರತೆಯ ಭಾವನೆ ಮೂಡುತ್ತಿದೆ. 201 00:18:08,213 --> 00:18:09,422 ವಿಷ ಬೆರೆಸಲಾಗಿದೆಯಾ? 202 00:18:09,506 --> 00:18:12,717 ನಿನ್ನನ್ನು ಕೊಲ್ಲಬೇಕೆಂದರೆ, ಹುಡುಗ, ವಿಧವಿಧವಾದ ವಿಧಾನಗಳನ್ನು ಯೋಚಿಸಬಲ್ಲೆ. 203 00:18:27,482 --> 00:18:29,442 ಮತ್ತೆ ನನ್ನಿಂದ ನಿನಗೆ ಏನು ಆಗಬೇಕು? 204 00:18:29,526 --> 00:18:33,112 ಶಡಾರ್ ಲೋಗೋಥಿನ ಕಠಾರಿಯ ಪರಿಣಾಮಗಳು ನಿನ್ನ ದೇಹವನ್ನು ಬಿಟ್ಟು 205 00:18:33,196 --> 00:18:35,281 ಹೊರಟಿವೆಯೇ ಎಂದು ಗಮನಿಸುತ್ತಿದ್ದೇವೆ ಅಷ್ಟೇ. 206 00:18:36,491 --> 00:18:38,868 ಅದಕ್ಕಾಗಿ ಬಾಗಿಲನ್ನು ಮುಚ್ಚಿ ಬಂದೆಯಾ? 207 00:18:38,952 --> 00:18:40,745 ಸಿಹಿರೊಟ್ಟಿಗಳನ್ನು ಆನಂದಿಸು, ಮ್ಯಾಟ್. 208 00:19:46,519 --> 00:19:47,729 ಸರಿ, ಒಡತಿ. 209 00:19:53,151 --> 00:19:55,695 ಅವುಗಳನ್ನು ಇಲ್ಲಿಯೇ ಇಡು. ತುಂಬಾ ಧನ್ಯವಾದಗಳು. 210 00:19:57,739 --> 00:19:59,991 ನನ್ನ ಬಾಗಿಲಿಗೆ ಅಡ್ಡ ಇರದಂತೆ ನೋಡಿಕೊಳ್ಳುವೆಯಾ? 211 00:20:00,074 --> 00:20:01,576 ನೀನು ಕೂಡ ನವಶಿಷ್ಯೆಯಾ? 212 00:20:01,659 --> 00:20:04,746 ಟವರಿನ ಬೇರೆ ವಿಭಾಗದಲ್ಲಿ ನನ್ನನ್ನು ಇರಿಸುತ್ತಾರೆಂದು ಅಂದುಕೊಳ್ಳಲು ಆರಂಭಿಸಿದ್ದೆ. 213 00:20:04,829 --> 00:20:06,789 ನಾನು ಬಂದಾಗಿನಿಂದ ಇನ್ನೊಂದು ಜೀವವನ್ನೇ ನೋಡಿರಲಿಲ್ಲ. 214 00:20:06,873 --> 00:20:08,416 ಇಲ್ಲಿನ ದಿನಚರಿ ಬೇಗನೆ ಶುರುವಾಗುತ್ತದೆ. 215 00:20:08,499 --> 00:20:11,127 ಮತ್ತು, ಹೌದು, ನಾನು ನವಶಿಷ್ಯೆಯೇ, ಆದರೆ ನೀನು ದಯವಿಟ್ಟು-- 216 00:20:11,210 --> 00:20:13,087 ನಿನ್ನ ಕೋಣೆಗೆ ಏನು ಮಾಡಿರುವೆ ಎಂದು ತೋರಿಸುವೆಯಾ? 217 00:20:13,171 --> 00:20:15,131 ಇಷ್ಟು ಚಿಕ್ಕ ಜಾಗದಲ್ಲಿ, ಅದು ಅಸಾಧ್ಯ. 218 00:20:15,214 --> 00:20:17,216 ಇದಕ್ಕಿಂತ ದೊಡ್ಡ ಅಲಮಾರಿಗಳನ್ನೇ ನಾನು ನೋಡಿದ್ದೇನೆ. 219 00:20:19,928 --> 00:20:21,721 ಮತ್ತೆ ನೀನು ಕೂಡ ಹೊಸದಾಗಿ ಬಂದಿರುವೆಯಾ? 220 00:20:22,096 --> 00:20:24,766 ಇಂದು ನಾನೊಬ್ಬಳೇ ಶುರು ಮಾಡುತ್ತಿಲ್ಲ ಎಂದು ನೆಮ್ಮದಿಯಾಗುತ್ತಿದೆ. 221 00:20:24,849 --> 00:20:28,853 ನಾವು ಬರುವ ಮುನ್ನ ಇವುಗಳನ್ನು ಚೆನ್ನಾಗಿ ಶುಚಿ ಮಾಡುತ್ತಾರೆ ಅಂದುಕೊಂಡಿದ್ದೆ. 222 00:20:28,937 --> 00:20:30,605 ನನ್ನದರಲ್ಲೂ ತುಂಬಾನೇ ಕಸ ಇತ್ತು. 223 00:20:34,400 --> 00:20:35,276 ಇಲ್ಲ. 224 00:20:35,944 --> 00:20:36,945 ಗೊತ್ತಾಯ್ತು. 225 00:20:37,028 --> 00:20:38,446 ನೀನು ಈಗಷ್ಟೇ ಬಂದಿಲ್ಲ. 226 00:20:39,614 --> 00:20:40,573 ಇಲ್ಲ. 227 00:20:44,827 --> 00:20:46,746 ಈ ಹೊಲಿಗೆ ತುಂಬಾ ಚೆನ್ನಾಗಿದೆ. 228 00:20:47,622 --> 00:20:49,791 ಪಶ್ಚಿಮ ಅಂಡೊರ್ ಕಡೆಯದ್ದು, ಅಲ್ಲವೇ? 229 00:20:50,083 --> 00:20:51,250 ಟೂ ರಿವರ್ಸ್? 230 00:20:56,798 --> 00:20:58,424 ಯಾಕೆ ಹಾಗೆ ನಗುತ್ತಿರುವೆ? 231 00:20:58,508 --> 00:21:00,843 ಏನಂದ್ರೆ, ನನಗೆ ತುಂಬಾ ಆನಂದವಾಗುತ್ತಿದೆ. 232 00:21:01,386 --> 00:21:03,513 ಮಿಕ್ಕ ನವಶಿಷ್ಯೆಯರ ಜೊತೆ ಇರಲು ನನ್ನನ್ನು ಟವರ್ 233 00:21:03,596 --> 00:21:04,847 ಬಿಡುತ್ತದೆ ಎಂದುಕೊಂಡಿರಲಿಲ್ಲ. 234 00:21:04,931 --> 00:21:06,474 ಯಾಕೆ ಇರಲಾಗುತ್ತಿರಲಿಲ್ಲ ಅಂತ? 235 00:21:07,600 --> 00:21:10,395 ಗೊತ್ತಲ್ಲ, ಮಗಳು-ವಾರಸುದಾರಳ ವಿಚಾರ. 236 00:21:15,817 --> 00:21:17,193 ನಾನು ಎಲೈನ್ ಟ್ರಕಾಂಡ್. 237 00:21:19,487 --> 00:21:22,198 ಅಂಡೊರಿನ ಮಗಳು-ವಾರಸುದಾರಳು? 238 00:21:24,617 --> 00:21:25,827 ನೀನು ನನ್ನ… 239 00:21:27,203 --> 00:21:28,079 ಪ್ರಜೆ. 240 00:21:30,873 --> 00:21:32,625 ನಾನು ಎಗ್ವೀನ್ ಅಲ್'ವೀರ್. 241 00:21:32,709 --> 00:21:34,335 ನಿನ್ನ ಭೇಟಿ ಸಂತೋಷವಾಯಿತು, ಎಗ್ವೀನ್. 242 00:21:35,420 --> 00:21:39,007 ಗೊತ್ತಾ, ಇತಿಹಾಸದಲ್ಲಿನ ಕೆಲವು ಅದ್ಭುತ ಜೋಡಿಗಳು 243 00:21:39,090 --> 00:21:42,468 ಅಕ್ಕಪಕ್ಕದ ಕೋಣೆಗಳ ನವಶಿಷ್ಯೆಯರ ಮಧ್ಯೆ ಆಗಿರುವಂಥವು. 244 00:21:42,552 --> 00:21:46,014 ಕಾಡ್ ಸ್ವಯ್ನ್ ಮೆಲೈಧ್ರಿನ್ ಮತ್ತು ಎಲೆನ ಕತಬ್ ಹೀಗೇ ಭೇಟಿಯಾದದ್ದು. 245 00:21:46,848 --> 00:21:49,434 ಭವಿಷ್ಯದಲ್ಲಿ ನಮಗೇನಿದೆ ಎಂದು ನೀನು ಊಹಿಸುವುದಿಲ್ಲವೇನು? 246 00:21:58,067 --> 00:21:59,777 ಅರಿನ್ವಾರ್ ನಿಮ್ಮ ಜೊತೆ ಬರಲಿಲ್ಲವೇ? 247 00:22:03,156 --> 00:22:05,491 ಕೆಲವನ್ನು ಸಹೋದರಿಯರ ನಡುವೆ ಇರಲು ಬಿಡುವುದೇ ಒಳ್ಳೆಯದು. 248 00:22:10,913 --> 00:22:13,791 ಲಿಯಾಂಡ್ರಿನ್ ಹೇಳುತ್ತಿರುವುದು ತುಂಬಾನೇ ಅಪಾಯಕರ. 249 00:22:13,875 --> 00:22:16,377 ಕಳೆದ ವಾರ ಅವಳನ್ನು ನವಶಿಷ್ಯೆಯರ ಬಳಿಯೂ ಬಿಡುತ್ತಿರಲಿಲ್ಲ. 250 00:22:16,461 --> 00:22:19,005 ಈಗ ಅವಳಿಗೆ ನೈನೀವ್ ಆರ್ಚಸ್ ಮೂಲಕ ಸಾಗಬೇಕಂತೇನು? 251 00:22:19,088 --> 00:22:21,007 ಈ ಟವರ್ ಹಿಂದೆಂದೂ ನೋಡಿರದ ಅತ್ಯಂತ ಶಕ್ತಿಶಾಲಿ 252 00:22:21,090 --> 00:22:23,801 -ಆವಾಹಕಿ ನೈನೀವ್-- -"ಸಾವಿರ ವರ್ಷಗಳಲ್ಲೇ." ಹೌದು. 253 00:22:23,885 --> 00:22:25,553 ಎಲ್ಲರೂ ಅದನ್ನು ಹೇಳುತ್ತಿರುತ್ತಾರೆ. 254 00:22:25,636 --> 00:22:29,724 ಅವಳಿಗೆ ಕೋಪ ಅಥವಾ ಭಯ ಬರದ ಹೊರತು ಸೋರ್ಸನ್ನು ಅಪ್ಪಿಕೊಳ್ಳಲಾರಳು. 255 00:22:29,807 --> 00:22:32,518 -ಆಗಲೂ ಹೇಳಿಕೊಳ್ಳುವಷ್ಟಿಲ್ಲ. -ಅವಳು ಆರ್ಚಸ್ ಒಳಗೆ ಸಾಯಬಹುದು. 256 00:22:32,602 --> 00:22:33,770 ಮುಂಚೆ ತುಂಬಾ ಜನ ಸತ್ತಿದ್ದಾರೆ. 257 00:22:33,853 --> 00:22:35,605 ಸರಿ, ಇರಬಹುದು. 258 00:22:35,688 --> 00:22:37,023 ಅವಳ ಶಕ್ತಿಗೆ ಅದು ಅನುಮಾನವೇ. 259 00:22:37,106 --> 00:22:40,234 ಈ ಗಂಡಸರು ಮತ್ತು ಹೆಂಗಸರು ಈಗೇಕೆ ಹುಟ್ಟುತ್ತಿದ್ದಾರೆ ಗೊತ್ತಾ, ಸಹೋದರಿ? 260 00:22:40,318 --> 00:22:42,945 ನಾವು ನೋಡಿರುವುದಕ್ಕಿಂತ ಹೆಚ್ಚು ಶಕ್ತಿಯೊಂದಿಗೆ? 261 00:22:43,029 --> 00:22:47,366 ನೈನೀವ್ ಮಾತ್ರವಲ್ಲ, ಆದರೆ ಎಗ್ವೀನ್ ಮತ್ತು ಡಾಟರ್-ಹೇರ್ ಸಹ. 262 00:22:47,450 --> 00:22:50,411 ಮತ್ತು ಮಿಥ್ಯ ಡ್ರ್ಯಾಗನ್ಗಳು, ಲೋಗೈನ್, ಮಜ್ರಿಮ್ ಟಯಿಂ... 263 00:22:50,495 --> 00:22:53,164 ಪ್ಯಾಟರ್ನ್ ನಮಗೆ ಆಯುಧಗಳನ್ನು ಕೊಡುತ್ತಿದೆ. 264 00:22:53,247 --> 00:22:55,333 ಅವನ ವಿರುದ್ಧ ಹೋರಾಡಲು. 265 00:22:57,877 --> 00:22:59,879 ಲಾಸ್ಟ್ ಬ್ಯಾಟಲ್ ಹತ್ತಿರದಲ್ಲಿದೆ, ಸಹೋದರಿ. 266 00:23:05,760 --> 00:23:09,097 ಅದರೊಂದಿಗೆ ಹೋರಾಡಲು ನಮ್ಮೊಂದಿಗೆ ನೈನೀವ್ ಇರುವುದು ನಿನಗೆ ಬೇಡವೇ? 267 00:23:09,722 --> 00:23:11,849 ನೀವು ನವಶಿಷ್ಯೆಯರ ಒಡತಿ. 268 00:23:13,810 --> 00:23:15,728 ಈ ಹುಡುಗಿಯರಿಗೆ ನೀವೇ ಜವಾಬ್ದಾರರು. 269 00:23:18,981 --> 00:23:22,443 ಲಿಯಾಂಡ್ರಿನ್ ಪಂಗಡದವರು ಮತ ಹಾಕಲು ಕೋರಿದ್ದಾರೆ, ಅಲನಾ. 270 00:23:23,236 --> 00:23:25,822 ಆದರೆ, ದುರದೃಷ್ಟವಶಾತ್, ದಿ ಹಾಲಲ್ಲಿ, 271 00:23:26,697 --> 00:23:28,533 ಒಬ್ಬರಾಗಿ ಮಾತನಾಡಬೇಕು, ಮೂವರಾಗಲ್ಲ. 272 00:23:34,956 --> 00:23:37,875 ಅದು, ನೀನಿಲ್ಲಿ ಮಾತನಾಡಲು ಇರಬಯಸಿದರೆ ಮಾತ್ರ. 273 00:23:46,968 --> 00:23:48,427 ನೀನು ಇರುವೆಯಾ? 274 00:23:49,053 --> 00:23:49,971 ಇಲ್ಲ. 275 00:23:50,221 --> 00:23:51,347 ಮೊರೇನ್, 276 00:23:52,181 --> 00:23:53,599 ಅವಳಿಗೆ ನಾವು ಅವಶ್ಯಕ. 277 00:24:04,026 --> 00:24:06,571 -ಒಳ್ಳೆಯದು, ಸಹಾಯ ಮಾಡಲು ಬಂದೆಯಾ? -ಇಲ್ಲ. 278 00:24:07,238 --> 00:24:10,158 ನಾನು ಬರಬಹುದೆಂದು ಲಿಯಾಂಡ್ರಿನ್ ಹೇಳಿದಳು. ಆಕೆ-- 279 00:24:10,241 --> 00:24:13,244 ಲಿಯಾಂಡ್ರಿನ್ ಸೆಡಾಯ್ ಈಗಷ್ಟೇ ಹೊರಟರು. ಬೇಗ ಹೊರಟರೆ, ಆಕೆಯನ್ನು ತಲುಪಬಹುದು. 280 00:25:42,541 --> 00:25:44,585 ರಾತ್ರಿಯನ್ನು ಇಲ್ಲೇ ಕಳೆಯೋಣ. 281 00:25:44,669 --> 00:25:48,256 ಫೈನನ್ನು ಯಾರಾದರೂ ನೋಡಿದರಾ, ಅಥವಾ ಆ ಫೇಡನ್ನು ಯಾರು ಕೊಂದರೋ ತಿಳಿದುಕೊಳ್ಳಿ. 282 00:26:08,693 --> 00:26:10,569 ಬೆಳಕೇ, ಈ ವಾಸನೆ. 283 00:26:10,653 --> 00:26:12,613 ವಾಸನೆಗಿಂತ ರುಚಿ ಅದ್ಭುತ. 284 00:26:13,114 --> 00:26:14,448 ಒಳಗೆ ಹೋಗು. 285 00:26:14,532 --> 00:26:16,409 ಮೊದಲ ತಟ್ಟೆ ನಮ್ಮಿಂದಲೇ. 286 00:26:18,494 --> 00:26:19,954 ಹೋಗು, ಹೋಗು, ಹೋಗು. ಒಳಗೆ ಹೋಗು. 287 00:26:30,798 --> 00:26:34,343 ನಮಗೆ ಕುಡಿಯಲು ಬೇಕು, ಯಾವುದೋ ಕೊಳೆತ ದರಿದ್ರ ಮೀನಲ್ಲ! 288 00:26:35,136 --> 00:26:37,179 ನನಗೆ ಸಿಂಹ ಮೀನೆಂದರೆ ಇಷ್ಟ. 289 00:26:37,263 --> 00:26:40,349 ಹುದುಗುವಿಕೆಯಲ್ಲಿರುವ ಆಳದ ರುಚಿಯಿಂದಲೇ 290 00:26:40,433 --> 00:26:42,018 ಅದರ ಸ್ವಾದ ಹೆಚ್ಚು. 291 00:26:42,643 --> 00:26:44,603 ನನಗೆ ಆಶ್ಚರ್ಯವೇನಿಲ್ಲ ಬಿಡು. 292 00:26:44,687 --> 00:26:45,855 ನೀನು ಬರುತ್ತಿಲ್ಲವೇ? 293 00:26:46,897 --> 00:26:48,899 ನಾನು ನಕ್ಷತ್ರಗಳ ಅಡಿ ಮಲಗಲು ಇಷ್ಟಪಡುವೆ. 294 00:26:50,276 --> 00:26:51,360 ನಿನ್ನಿಷ್ಟ. 295 00:26:52,528 --> 00:26:54,238 ಅವರು ನಿನ್ನ ಗುಂಪಲ್ಲ, ತಿಳಿದುಕೋ. 296 00:26:55,364 --> 00:26:56,907 ಶೈನಾರನ್ನರು. 297 00:27:05,583 --> 00:27:08,961 ಟವರ್ ಇಲ್ಲಿಂದ ಕಾಣುವುದು ಅದ್ಭುತ, ಅಲ್ಲವೇ? 298 00:27:14,342 --> 00:27:17,386 ನಮ್ಮ ಹಿಸ್ಟ್ರಿ ಆಫ್ ದಿ ವರ್ಲ್ಡ್ ಸಿನ್ಸ್ ದಿ ಬ್ರೇಕಿಂಗ್ ಪೂರ್ತಿಯಾಗುವವರೆಗೂ 299 00:27:17,470 --> 00:27:21,265 ಅಲ್ಲಿಗೆ ಮರಳಬಾರದೆಂದು ಅಡೆಲಿಯಸ್ ಮತ್ತು ನಾನು ನಿರ್ಧರಿಸಿದ್ದೇವೆ. 300 00:27:21,349 --> 00:27:22,683 ಆದರೂ ನೀನಿಲ್ಲಿರುವೆ. 301 00:27:23,601 --> 00:27:26,562 ಇತಿಹಾಸವೇ ನಡೆಯುತ್ತಿರುವಾಗ ಅದನ್ನು ಬರೆಯಬೇಕಿಲ್ಲ. 302 00:27:27,688 --> 00:27:30,775 ಒಬ್ಬ ಅಯಿಸ್ ಸೆಡಾಯಿಯನ್ನು ಅರಸುತ್ತಿರುವ ಮೂರು ಫೇಡ್ಗಳು. 303 00:27:30,858 --> 00:27:33,069 ಡಾರ್ಕ್ ಒನ್ ಕಣ್ಣು ನಿನ್ನ ಮೇಲೆ ಬಿದ್ದಿದೆ, ಸಹೋದರಿ. 304 00:27:33,152 --> 00:27:35,071 ನಾವು ಯಾಕೆಂದು ಕೇಳುತ್ತೇವೆಂದು ಅನಿಸಲಿಲ್ಲವೇ? 305 00:27:38,616 --> 00:27:42,411 ಕಳೆದ ಶರತ್ಕಾಲದಂದು ನೀನು ಟಾರ್ ವಲೋನಿಗೆ ಕರೆತಂದ ಹುಡುಗನಿರಬಹುದೇ? 306 00:27:44,413 --> 00:27:45,373 ಡ್ರ್ಯಾಗನ್. 307 00:27:55,341 --> 00:27:56,384 ಬೇರೆ ಯಾರಿಗೆ ಗೊತ್ತು? 308 00:27:59,970 --> 00:28:00,930 ಅಡೆಲಿಯಸ್? 309 00:28:02,390 --> 00:28:03,432 ತೋಮಸ್? 310 00:28:04,141 --> 00:28:05,601 ಬಹುತೇಕ ಹೇಳಿರುವೆ. 311 00:28:12,858 --> 00:28:13,776 ಒಳ್ಳೆಯದು. 312 00:28:14,944 --> 00:28:17,321 ವಿಜಯದೆಡೆಗೆ ಮುನ್ನಡೆಸಲು ಡ್ರ್ಯಾಗನ್ಗಾಗಿ ನೀನೆಷ್ಟು ದೂರ 313 00:28:17,405 --> 00:28:19,365 ಹೋಗುವೆ ಎಂದು ನಾನು ತಿಳಿದುಕೊಳ್ಳಬೇಕಿತ್ತು. 314 00:28:23,536 --> 00:28:27,039 ನಮ್ಮ ಸಹೋದರಿಯರು ಡ್ರ್ಯಾಗನ್ನನ್ನು ಬಂಧಿಸಿ, ಅವನ ರೆಕ್ಕೆಗಳನ್ನು ಕತ್ತರಿಸಬೇಕಂತಿದ್ದಾರೆ. 315 00:28:27,873 --> 00:28:30,501 ಅವನು ಮತ್ತೊಮ್ಮೆ ಜಗತ್ತನ್ನು ಒಡೆಯಬಹುದೆಂಬ ಅವರ ಭಯ 316 00:28:30,584 --> 00:28:32,461 ಸತ್ಯವನ್ನು ಕಾಣಗೊಡುತ್ತಿಲ್ಲ… 317 00:28:33,629 --> 00:28:37,258 ಏನೆಂದರೆ, ಇಷ್ಟೆಲ್ಲಾ ವರ್ಷಗಳ ನಂತರವೂ, ನಮ್ಮ ಜಗತ್ತು ಇನ್ನೂ ಒಡೆದಿದೆ, 318 00:28:38,384 --> 00:28:41,137 ಮತ್ತು ಅದನ್ನು ಮತ್ತೊಮ್ಮೆ ನಾವು ಒಂದು ಮಾಡಬೇಕು. 319 00:28:41,220 --> 00:28:45,099 ಆದರೆ, ಒಮ್ಮೆ ಒಡೆದಿರುವುದನ್ನು ಮತ್ತೆ ಎಂದಿಗೂ ಸರಿಪಡಿಸಲಾಗದು. 320 00:28:48,477 --> 00:28:50,688 ನನಗೆ ನಿಷ್ಠೆಯ ಪ್ರಮಾಣವಚನ ಬೇಕು, ಸಹೋದರಿ. 321 00:28:51,981 --> 00:28:53,357 ಏನನ್ನು ಹೇಳುವಂಥ ಪ್ರಮಾಣವಚನ? 322 00:28:54,567 --> 00:28:56,402 ನಾನು ನಿನಗೆಂದಿಗೂ ಮೋಸ ಬಗೆಯದಂತೆಯೇ? 323 00:28:56,485 --> 00:28:58,404 ನಾನು ಅವನಿಗೆಂದಿಗೂ ಮೋಸ ಬಗೆಯದಂತೆಯೇ? 324 00:28:58,487 --> 00:29:01,574 ಭವಿಷ್ಯ ಏನು ತರುತ್ತದೆ ಎಂದು ನಮ್ಮಿಬ್ಬರಿಗೂ ಗೊತ್ತಿಲ್ಲ. 325 00:29:02,533 --> 00:29:05,578 ಆ ವಿಚಾರಗಳಲ್ಲಿ ಯಾವುದಾದರೂ ಒಂದು ದಿನ ಅವಶ್ಯಕವಾಗಬಹುದು. 326 00:29:06,871 --> 00:29:10,833 ಮತ್ತು ಪ್ರಮಾಣವಚನಗಳನ್ನು ಸಹ ತಿರುಚಬಲ್ಲ ವಿಧಾನಗಳಿವೆ. 327 00:29:13,586 --> 00:29:17,673 ಸದ್ಯಕ್ಕೆ, ನೀನು ಸುಮ್ಮನೆ ನನ್ನನ್ನು ನಂಬಬೇಕಷ್ಟೇ. 328 00:29:17,756 --> 00:29:18,841 ಮತ್ತು ನಾನು, ನಿನ್ನನ್ನು. 329 00:29:20,759 --> 00:29:23,721 ಟವರಿನಲ್ಲಿ ಉಪಯೋಗಕ್ಕೆ ಬರುವ ಕೆಲವು ಪುಸ್ತಕಗಳಿವೆ. 330 00:29:23,804 --> 00:29:26,849 ಟೊಮನ್ ಹೆಡ್ ಬಗ್ಗೆ ಮಾತನಾಡುವ ಭವಿಷ್ಯವಾಣಿಗಳು, 331 00:29:26,932 --> 00:29:28,309 ಆಕಾಶದಲ್ಲಿನ ಯುದ್ಧಗಳ ಬಗ್ಗೆ, 332 00:29:28,392 --> 00:29:31,979 ಅಗ್ನಿಯ ಕತ್ತಿ ಮತ್ತು ಅದನ್ನು ಬೀಸುವ ಮೊಹರಿರುವ ಕೈ ಬಗ್ಗೆ. 333 00:29:33,272 --> 00:29:34,356 ಅವುಗಳನ್ನು ಪತ್ತೆ ಹಚ್ಚುವೆ. 334 00:29:37,902 --> 00:29:38,777 ಬಾ. 335 00:29:39,487 --> 00:29:41,780 ಬೆಂಕಿಯ ಬಳಿ ಮರಳು, ನಮ್ಮ ಬಳಿ ಕೂರು, ಹಾಂ? 336 00:30:35,167 --> 00:30:37,461 ನಿಮ್ಮಂಥ ಗಬ್ಬುನಾತ ಹೊಡೆಯುವವರನ್ನು ಅವರು ಮೂಸೋದು ಬೇಡ. 337 00:30:37,545 --> 00:30:38,379 ದ್ರಾಕ್ಷಾರಸ ತಾ. 338 00:31:21,630 --> 00:31:22,506 ಅವನನ್ನು ಕೊಲ್ಲು. 339 00:31:27,136 --> 00:31:29,930 ಇಲ್ಲ. ಇಲ್ಲ. ಇಲ್ಲ! 340 00:31:31,390 --> 00:31:34,852 ನೀನು ಅವರೆಲ್ಲರನ್ನೂ ಕೊಲ್ಲುವೆ. 341 00:31:54,330 --> 00:31:55,414 ಸೆಲೇನ್... 342 00:31:59,335 --> 00:32:02,504 ಕೇಳು, ನನಗನಿಸುತ್ತಿಲ್ಲ ಇಂದಿನ ರಾತ್ರಿ… 343 00:32:09,011 --> 00:32:10,220 ನಾನು ಒಂಟಿಯಾಗಿರಬೇಕು. 344 00:32:18,687 --> 00:32:20,814 ಇದೇ ಜನರಲ್ಲಿರುವ ವೈಚಿತ್ರ್ಯ. 345 00:32:23,692 --> 00:32:26,111 ಏನಾದರೂ ಕೆಟ್ಟದು ನಡೆದಾಗ, ನಮಗೆ ಒಂಟಿಯಾಗಿರಬೇಕು. 346 00:32:27,488 --> 00:32:28,739 ಆದರೆ ನಿಜವೇನೆಂದರೆ, 347 00:32:30,199 --> 00:32:32,576 ಆಗಲೇ ನಮಗೆ ಒಬ್ಬರಿಗೊಬ್ಬರ ಸಾಂಗತ್ಯ ಬೇಕಾಗುವುದು. 348 00:32:35,079 --> 00:32:36,789 ನಾವು ಜೊತೆಯಾಗಿ ಒಂಟಿಯಾಗಿರೋಣ. 349 00:32:44,171 --> 00:32:45,047 ಇಲ್ಲ. 350 00:32:45,547 --> 00:32:46,465 ಇಲ್ಲ. 351 00:33:01,105 --> 00:33:02,981 ಮತ್ತು ತೋಟಗಳು ನಗರಕ್ಕೆ ಎಡೆಮಾಡಿಕೊಡುತ್ತವೆ, 352 00:33:03,065 --> 00:33:05,693 ಆದರೆ ಅನುಮತಿ ಇಲ್ಲದೆ ನಾವು ಟವರ್ ಹೊರಗೆ ಹೋಗುವ ಹಾಗಿಲ್ಲ. 353 00:33:05,776 --> 00:33:08,070 ಟಾರ್ ವಲೋನಿನಲ್ಲಿ ಕೆಲವು ಗಂಟೆಗಳನ್ನಷ್ಟೇ ಕಳೆದಿದ್ದೇನೆ. 354 00:33:08,153 --> 00:33:09,738 -ಡಾಟರ್-ಹೇರ್. -ಫರಿನ ಸೆಡಾಯ್. 355 00:33:11,699 --> 00:33:14,952 ನಾನು ನಿನಗೆ ಟವರ್ ಸುತ್ತ ತೋರಿಸುವುದು ನಿನಗೆ ನಿಜಕ್ಕೂ ಬೇಕಿರಲಿಲ್ಲ, ಅಲ್ಲವೇ? 356 00:33:15,035 --> 00:33:17,579 ಅಂದರೆ, ಇಲ್ಲ. ಒಬ್ಬ ಹುಡುಗಿಯಾಗಿ ಇಲ್ಲಿ ಆರು ಬೇಸಿಗೆಗಳನ್ನು 357 00:33:17,663 --> 00:33:19,873 ಕಳೆದರೆ ನಿನಗೂ ಈ ಜಾಗ ಚಿರಪರಿಚಿತವಾಗುತ್ತದೆ. 358 00:33:19,957 --> 00:33:22,793 ನಿನ್ನನ್ನು ಅರ್ಥೈಸಿಕೊಳ್ಳುವ ಅವಕಾಶ ನಾನು ಕಳೆದುಕೊಳ್ಳಲಿಚ್ಛಿಸಲಿಲ್ಲ. 359 00:33:22,876 --> 00:33:23,919 ನನ್ನ ಕೋಣೆಗೆ ಕಳಿಸು. 360 00:33:24,002 --> 00:33:26,130 ಶೆರಿಯಂ ಸೆಡಾಯ್, ನಾನು-- 361 00:33:26,213 --> 00:33:29,299 ನವಶಿಷ್ಯೆಯರ ವಸತಿಗೆ ಈ ಅಸಂಬದ್ಧದೊಂದಿಗೆ ನಿನ್ನ ದಾಸಿಯರನ್ನು ಒಳಬಿಟ್ಟವರು ಯಾರು? 362 00:33:30,217 --> 00:33:31,051 ನಾನು... 363 00:33:31,135 --> 00:33:34,179 ಕೇಮ್ಲಿನ್ನಿನ ಸಿಂಹಾಸನಕ್ಕೆ ಮುಂದಿನ ವಾರಸುದಾರಳು ನೀನೇ ಆಗಿರಬಹುದು, ಮಗು, 364 00:33:34,263 --> 00:33:38,142 ಆದರೆ ಇಲ್ಲಿ ನೀನು ಕೇವಲ ನವಶಿಷ್ಯೆ ಅಷ್ಟೇ, ಮಿಕ್ಕವರಂತೆ. 365 00:33:39,101 --> 00:33:41,228 ಆ ಹೆಂಗಸಿನ ಹೆಸರನ್ನು ಹೇಳು. ಈಗಲೇ. 366 00:33:42,730 --> 00:33:44,898 ನನ್ನ ತಾಯಿಗೆ ಉಪಕಾರವನ್ನಾಗಿ ಮಾತ್ರ ಮಾಡಿದಳು. 367 00:33:46,108 --> 00:33:47,151 ಆಕೆಯ ಹೆಸರು? 368 00:33:49,403 --> 00:33:52,656 ಆಕೆ ಮಾಡಿದ್ದಕ್ಕೆ ಶಿಕ್ಷೆ ವಿಧಿಸುವುದಾದರೆ, ಅದನ್ನು ನಾನೇ ಪಡೆಯುವೆ. 369 00:33:52,740 --> 00:33:56,827 ಹಾಗಿದ್ದರೆ ಮುಂದಿನ ಮೂರು ತಿಂಗಳು ನೀನು ಪ್ರತಿ ಬೆಳಿಗ್ಗೆ ನನ್ನ ಕಚೇರಿಯಲ್ಲಿರಬೇಕು, 370 00:33:57,244 --> 00:33:59,121 ನಿನ್ನ ಭುಜಗಳು ಬೆತ್ತದೇಟುಗಳನ್ನು ಅನುಭವಿಸಬೇಕು. 371 00:33:59,204 --> 00:34:00,706 ಖಂಡಿತವಾಗಿ, ಶೆರಿಯಂ ಸೆಡಾಯ್. 372 00:34:01,498 --> 00:34:03,167 ಉಪಹಾರಕ್ಕೆ ಮುನ್ನವೇ ನಂತರವೇ? 373 00:34:05,836 --> 00:34:06,670 ಮುನ್ನ. 374 00:34:06,754 --> 00:34:07,838 ನಿಮ್ಮಿಚ್ಛೆ. 375 00:34:08,464 --> 00:34:11,550 ಮತ್ತು ನೀನು. ನೈನೀವ್ ಅಲ್'ಮಯಿರಾ ಎಲ್ಲಿಗೆ ಹೊರಟುಹೋದಳು? 376 00:34:13,135 --> 00:34:15,721 ಕ್ಷಮಿಸಿ, ನನಗೆ ಗೊತ್ತಿಲ್ಲ, ಶೆರಿಯಂ ಸೆಡಾಯ್. 377 00:34:16,513 --> 00:34:19,725 ಅವಳು ಬಂದ ಕೂಡಲೇ ನನ್ನ ಅಧ್ಯಯನ ಕೋಣೆಗೆ ಬರಲು ಹೇಳು. 378 00:34:20,141 --> 00:34:21,185 ಖಂಡಿತವಾಗಿ. 379 00:34:23,395 --> 00:34:24,938 ನೀನಿದ್ದನ್ನು ನೋಡಿದ್ದಕ್ಕೆ ಕ್ಷಮಿಸು. 380 00:34:25,563 --> 00:34:27,775 ಕನಿಷ್ಠ ನಿನಗಾದರೂ ಗಮನ ಕೊಡುತ್ತಾರೆ. 381 00:34:27,858 --> 00:34:30,110 ನನ್ನೊಂದಿಗೆ ಅಯಿಸ್ ಸೆಡಾಯ್ ಮಾತನಾಡುವುದು ಕೇವಲ 382 00:34:30,194 --> 00:34:31,904 ನನ್ನ ಗೆಳತಿ ಎಲ್ಲಿ ಎಂದು ಕೇಳಲು. 383 00:34:37,159 --> 00:34:38,202 ನಿನ್ನ ಕೋಣೆ. 384 00:34:39,077 --> 00:34:41,955 ಅಂದರೆ, ಶುಭ್ರಗೊಳಿಸಲು ನೀನೇ ಹೇಳಿದೆ. 385 00:35:22,955 --> 00:35:23,956 ನನ್ನ ಚಿನ್ನ. 386 00:35:25,374 --> 00:35:26,708 ನನ್ನ ಬಂಗಾರ. 387 00:35:26,792 --> 00:35:28,293 ನೀನು ಎಚ್ಚರಗೊಂಡಿರುವೆ. 388 00:35:28,377 --> 00:35:29,795 ಇಲ್ಲಿ, ನಾನಿಲ್ಲಿದ್ದೇನೆ ಈಗ. 389 00:35:30,420 --> 00:35:31,547 ನಾನಿಲ್ಲಿದ್ದೇನೆ. 390 00:35:43,350 --> 00:35:46,979 ಈಗ, ನೀನು ಪ್ರಯತ್ನಿಸಿ ಇದನ್ನು ಸ್ವಲ್ಪ ಕುಡಿಯಬೇಕು. 391 00:35:47,604 --> 00:35:49,606 ಇದು ನೋವನ್ನು ಕಡಿಮೆಗೊಳಿಸುತ್ತದೆ. 392 00:35:56,196 --> 00:35:57,364 ಹಾಗೆ, ಹಾಗೆ. 393 00:35:57,447 --> 00:35:58,365 ಹಾಂ. 394 00:36:01,076 --> 00:36:02,578 ಈಗ ಪರವಾಗಿಲ್ಲ, ಈಗ ಪರವಾಗಿಲ್ಲ. 395 00:36:07,291 --> 00:36:08,750 ಇಲ್ಲೇನು ಮಾಡುತ್ತಿರುವೆ? 396 00:36:08,834 --> 00:36:10,127 ಕ್ರಿಮ್ಸನ್ ಮುಳ್ಳು, ನಾನು... 397 00:36:10,210 --> 00:36:12,254 ನೀನು ಆತನನ್ನು ಕೊಲ್ಲುತ್ತಿರುವೆ ಅಂದುಕೊಂಡೆ. 398 00:36:12,337 --> 00:36:13,755 ಆತ ಆವಾಹಕ ಅಂದುಕೊಂಡೆ-- 399 00:36:13,839 --> 00:36:17,217 ನಾವಿಬ್ಬರೂ ಪರಿತಪಿಸುವಂಥದ್ದು ನಾನೇನಾದರೂ ಮಾಡುವ ಮುನ್ನ ಇಲ್ಲಿಂದ ಹೊರಟುಹೋಗು. 400 00:36:19,011 --> 00:36:19,970 ಆತ ನೋವಿನಲ್ಲಿರುವನು. 401 00:36:20,846 --> 00:36:22,514 ನನಗದು ಗೊತ್ತಿಲ್ಲ ಅಂದುಕೊಂಡೆಯಾ? 402 00:36:23,473 --> 00:36:24,766 ನಾನು ಆತನನ್ನು ಗುಣಪಡಿಸಲಾರೆ. 403 00:36:27,144 --> 00:36:28,020 ಆತನ ಕೈ… 404 00:36:29,187 --> 00:36:30,188 ಸೆಳೆತವಾಗುತ್ತಿದೆ. 405 00:36:34,443 --> 00:36:36,403 ಅಂದರೆ ನೋವು ಆತನ ಹೃದಯದಲ್ಲಿಯೂ ಇದೆ. 406 00:36:36,486 --> 00:36:38,530 ಕ್ರಿಮ್ಸನ್ ಮುಳ್ಳು ಅದಕ್ಕೆ ಸಹಾಯವಾಗದು. 407 00:36:39,656 --> 00:36:42,784 ನೀನು ಹೋದಾಗಲೂ ಆದ ನೋವನ್ನನುಭವಿಸುತ್ತಿರುತ್ತಾನೆ. ಉರಿಯೂತವನ್ನು ಕಡಿಮೆ ಮಾಡಲು 408 00:36:42,868 --> 00:36:45,537 -ಅರಿಶಿನದ ಹಾಲು ಬೇಕು-- -ತೊಲಗಾಚೆ! 409 00:36:45,621 --> 00:36:47,497 ನಾನು ನಿನ್ನನ್ನು ಕೊಲ್ಲುವ ಮುನ್ನ, ತೊಲಗಾಚೆ! 410 00:36:49,291 --> 00:36:51,543 ತೊಲಗಾಚೆ, ಮೂರ್ಖ ಹೆಣ್ಣೇ! 411 00:36:53,545 --> 00:36:54,922 ತೊಲಗಾಚೆ, ತೊಲಗಾಚೆ! 412 00:36:58,759 --> 00:37:00,677 ಅಯ್ಯೋ. ನನ್ನನ್ನು ಕ್ಷಮಿಸು. 413 00:37:01,011 --> 00:37:02,054 ಅಯ್ಯೋ, ದೇವರೇ. 414 00:37:03,513 --> 00:37:04,556 ನನ್ನನ್ನು ಕ್ಷಮಿಸು. 415 00:37:05,390 --> 00:37:06,475 ನನ್ನನ್ನು ಕ್ಷಮಿಸು. 416 00:37:07,392 --> 00:37:09,478 ನಿನಗೆ ನೋವಾಗುತ್ತದೆಯೆಂದು ಅಂದುಕೊಳ್ಳಲಿಲ್ಲ. 417 00:37:09,561 --> 00:37:12,189 ನಿನ್ನನ್ನಿಲ್ಲಿ ನೋವಿನಲ್ಲಿ ಬಿಡಲು ಅಂದುಕೊಳ್ಳಲಿಲ್ಲ. 418 00:37:13,273 --> 00:37:14,232 ನನ್ನನ್ನು ಕ್ಷಮಿಸು. 419 00:37:14,316 --> 00:37:17,861 ನನ್ನನ್ನು ಕ್ಷಮಿಸು, ಪುಟ್ಟ, ನನ್ನ ಮುದ್ದು ಮಗನೇ. 420 00:37:18,695 --> 00:37:19,821 ನನ್ನನ್ನು ಕ್ಷಮಿಸು. 421 00:37:51,228 --> 00:37:52,187 ಛೆ. 422 00:38:01,571 --> 00:38:02,823 ಬರಲಿ. 423 00:38:09,121 --> 00:38:10,247 ಇನ್ನೊಂದು ಬಂದೀಖಾನೆ. 424 00:38:11,957 --> 00:38:13,291 ಛೆ. 425 00:38:16,378 --> 00:38:17,254 ಏನು… 426 00:38:18,171 --> 00:38:21,258 ಮತ್ತೆ, ನನ್ನ ಗೋಡೆ ಕೊರೆಯುತ್ತಿರುವ ಹೆಗ್ಗಣ ನೀನೇ. 427 00:38:21,341 --> 00:38:23,677 ಕೆಂಚಿಗೆ ಉರಿಸುವಂಥ ಕೆಲಸ ನೀನೇನು ಮಾಡಿದೆ? 428 00:38:23,760 --> 00:38:24,720 ಏನೂ ಇಲ್ಲ. 429 00:38:24,803 --> 00:38:25,887 ಲೈಂಗಿಕ ವಿಚಾರವೇ? 430 00:38:25,971 --> 00:38:29,766 ಹಾಂ, ಅವಳನ್ನು ನೋಡಿದರೆ ಪ್ರಾಬಲ್ಯ ಸಾಧಿಸುವಂತೆ ಕಾಣುತ್ತಾಳೆ. ಆ ಕೆನ್ನೆಯ ಮೂಳೆಗಳು. 431 00:38:29,850 --> 00:38:31,393 ಅದೃಷ್ಟವಶಾತ್, ಅವಳು ನನಗೆ ಹಿಡಿಸಲ್ಲ. 432 00:38:31,476 --> 00:38:33,061 ಆಕೆಗೆ ಗಂಡಸರು ಸತ್ತರೇನೇ ಇಷ್ಟ. 433 00:38:34,438 --> 00:38:36,982 ನೀನ್ಯಾರು? ಮತ್ತು ನಿನ್ನನ್ನಿಲ್ಲೇಕೆ ಬಂಧಿಸಿದ್ದಾರೆ? 434 00:38:37,816 --> 00:38:39,609 ನಿನ್ನ ಬಳಿ ಅವು ಹೆಚ್ಚು ಇವೆಯೇ? 435 00:38:52,080 --> 00:38:53,081 ನಾನು ಮಿನ್. 436 00:38:53,707 --> 00:38:54,833 ಮ್ಯಾಟ್ ಕೌಥೊನ್. 437 00:39:03,425 --> 00:39:07,262 ಇಲ್ಲ, ಇಲ್ಲ, ಇಲ್ಲ, ಇಲ್ಲ, ಇಲ್ಲ, ಅವನನ್ನು ಕಡಿಮೆ ಅಂದಾಜು ಮಾಡಬೇಡ. 438 00:39:07,345 --> 00:39:10,557 ತೋಮಸ್, ಆ ಕಾಲದಲ್ಲಿ ಅದ್ಭುತವಾಗಿದ್ದ. 439 00:39:11,641 --> 00:39:15,187 ಆದರೆ ನಮ್ಮ ಪ್ರೀತಿಯ ಮುದ್ದು ವೆರಿನ್ಳನ್ನು ಆಯ್ಕೆ ಮಾಡಿದ. 440 00:39:17,647 --> 00:39:20,150 ಅಲ್ಲಿಗೆ ಅವನ ಲೈಂಗಿಕ ಜೀವನ ಮುಗಿಯಿತು. 441 00:39:26,323 --> 00:39:27,741 ಮತ್ತೆ ನಿಮ್ಮಿಬ್ಬರ ಕಥೆ ಏನು? 442 00:39:28,658 --> 00:39:31,411 ನೀವು ಹೇಗೆ ಭೇಟಿಯಾದಿರಿ ಎಂಬ ಕಥೆಯನ್ನೇ ಹೇಳಿಲ್ಲ? 443 00:39:37,084 --> 00:39:38,627 ಸಹೋದರಿ, ತಡವಾಗಿದೆ, ನಾವು-- 444 00:39:41,797 --> 00:39:44,883 ಬಾರ್ಡರ್ ಲ್ಯಾಂಡ್ಸಲ್ಲಿ ತಾನೇ? 445 00:39:44,966 --> 00:39:49,763 ಮರುಭೂಮಿಯಲ್ಲಿ ಕಪ್ಪು ಕುದುರೆಯ ಮೇಲೆ ಕತ್ತಿಯನ್ನು ಹೊರಗೆ ಹಿಡಿದು, ಗಾಳಿಗೆ ಕೂದಲು ಬೀಸುತ್ತಾ 446 00:39:49,846 --> 00:39:52,349 ಅರಸುತ್ತಿರುವಾಗ ನೀನವನನ್ನು ನೋಡಿರಬಹುದು-- 447 00:39:52,432 --> 00:39:53,975 ಚಾಚಿನ್ ಹೊರಗಡೆ. 448 00:39:58,980 --> 00:40:01,566 ದಾರಿಯಲ್ಲಿ ದಿನವೆಲ್ಲಾ ಅವನನ್ನು ಹಿಂಬಾಲಿಸುತ್ತಿದ್ದೆ. 449 00:40:02,984 --> 00:40:05,320 ನನ್ನೆಡೆ ಕಿರುನೋಟಗಳನ್ನು ಬೀರುತ್ತಿದ್ದ. 450 00:40:05,403 --> 00:40:07,197 ಆತ ಡಾರ್ಕ್ ಫ್ರೆಂಡ್ ಇರಬಹುದು ಅಂದುಕೊಂಡೆ. 451 00:40:07,280 --> 00:40:11,118 ನನ್ನ ಕಾರ್ನೆರಾ ನನ್ನನ್ನು ಕೊಲ್ಲಲು ಕಳುಹಿಸಿದ ಕೊಲೆಗಡುಕಿ ಅಂದುಕೊಂಡಿದ್ದೆ. 452 00:40:11,201 --> 00:40:12,202 ಕಾರ್ನೆರಾ? 453 00:40:12,285 --> 00:40:15,664 ಮಲ್ಕಿರಲ್ಲಿ, ಹಿರಿಯ ಮಹಿಳೆಯರು ಕಿರಿಯ ಪುರುಷರ ಶೀಲ ತೆಗೆದುಕೊಂಡು 454 00:40:15,747 --> 00:40:18,083 ಅವರಿಗೆ ಪ್ರೀತಿಯ ವಿಧಾನಗಳನ್ನು ತಿಳಿಸಿಕೊಡುತ್ತಾರೆ. 455 00:40:19,167 --> 00:40:21,419 ಇದು ಆಸಕ್ತಿದಾಯಕವಾಗುತ್ತಿದೆ. 456 00:40:21,503 --> 00:40:24,005 ಈತನನ್ನು ಕೊಳದ ಬಳಿ ಕಂಡೆ, ಧ್ಯಾನ ಮಾಡುತ್ತಾ. 457 00:40:24,506 --> 00:40:28,051 ಅವನ ಮುಖ ಶಾಂತವಾಗಿತ್ತು, ಆದರೆ ಅದರೊಳಗೆ ಕ್ರೋಧ ಉಕ್ಕುತ್ತಿತ್ತು. 458 00:40:28,135 --> 00:40:29,511 ಧ್ಯಾನ ನನಗೆ ಎಂದಿಗೂ ಸುಲಭವಲ್ಲ. 459 00:40:29,594 --> 00:40:31,680 ಅದರಲ್ಲೂ ಅಯಿಸ್ ಸೆಡಾಯಿಯನ್ನು ಕೊಲ್ಲಲು ಯೋಚಿಸಿದಾಗ. 460 00:40:31,763 --> 00:40:35,892 ನೀನು ಅಯಿಸ್ ಸೆಡಾಯ್ ಎಂದು ನಾನು ನಂಬಿರಲಿಲ್ಲ. ಅವರು ಮುದುಕಿಯರು, ಭಾವನಾರಹಿತರು ಮತ್ತು... 461 00:40:37,227 --> 00:40:38,520 ಸಿಡಿಮಿಡಿಗೊಳ್ಳುವರೆಂದು ಕೇಳಿದ್ದೆ. 462 00:40:40,313 --> 00:40:42,774 ತನ್ನ ಕತ್ತಿಯನ್ನು ಬಿಟ್ಟು ಪಕ್ಕದ ಕಲ್ಲಿನ ಮೇಲೆ ಕುಳಿತಿದ್ದ. 463 00:40:43,567 --> 00:40:45,944 ಆದರೆ ನನ್ನ ಕೈ ಒರೆಯನ್ನು ಮುಟ್ಟಿದ ತಕ್ಷಣವೇ, 464 00:40:46,027 --> 00:40:50,490 ಆತ ಹತ್ತು ಗಜಗಳನ್ನು ದಾಟಿ, ನನ್ನ ಕತ್ತಿನ ಹಿಂದೆ ಹಿಡಿದು, 465 00:40:51,783 --> 00:40:53,201 ನನ್ನನ್ನು ನೀರಿಗೆಸೆದಿದ್ದ. 466 00:40:56,121 --> 00:40:58,456 ಮೊರೇನ್ ಸೆಡಾಯಿಯನ್ನು ಕೊಳದೊಳಗೆ ಎಸೆದೆಯಾ? 467 00:40:58,540 --> 00:41:01,293 ಒಬ್ಬ ವ್ಯಕ್ತಿಯನ್ನು ತನ್ನ ಕತ್ತಿಯಿಂದ ದೂರ ಮಾಡುವುದು ದಡ್ಡತನ. 468 00:41:04,504 --> 00:41:06,339 ಮತ್ತು ಆಗ ನಿನಗೆ ಗೊತ್ತಾಯಿತೇನು? 469 00:41:07,924 --> 00:41:11,219 ಯಾವುದೇ ಹಳೆಯ ವಾರ್ಡರ್ ನಿನ್ನನ್ನು ಟ್ರಾಲಕ್ಗಳಿಂದ ಕಾಪಾಡಬಲ್ಲ. 470 00:41:12,345 --> 00:41:15,974 ಆದರೆ ಸರಿಯಾದವನು, ನಿನ್ನನ್ನು ನಿನ್ನಿಂದಲೇ ಕಾಪಾಡಬಲ್ಲನು. 471 00:41:27,402 --> 00:41:28,653 ಮತ್ತೆ... 472 00:41:30,488 --> 00:41:33,116 -ನೀನು ತೂರಲು ಆಗುವುದೇ? -ಹಾಂ, ಸ್ವಲ್ಪ ಇರು… 473 00:41:35,368 --> 00:41:36,578 ದ್ರಾಕ್ಷಾರಸದ ಸೀಸೆ! 474 00:41:36,661 --> 00:41:39,289 ಸಾಧಾರಣವಾಗಿ ವಾರಕ್ಕೊಂದನ್ನು ನನಗೆ ಕೊಡುತ್ತಾರೆ. 475 00:41:39,372 --> 00:41:41,541 ಆದರೆ ಯಾರೊಂದಿಗಾದರೂ ನಾನು ಕುಡಿದು ಬಹಳ ಕಾಲವಾಯಿತು. 476 00:41:41,625 --> 00:41:44,836 -ಕ್ಷಮಿಸು, ನಿನಗೆ ನನ್ನ ಮೇಲೆ ಆಸಕ್ತಿಯೇ? -ಅಯ್ಯೋ ಬಿಡು. ಜರುಗು. 477 00:41:44,920 --> 00:41:46,630 ಜರುಗು, ಜರುಗು, ಜರುಗು. ನಡಿ. 478 00:41:56,389 --> 00:41:57,599 ಮನೆ ಇದ್ದಂತಿದೆ. 479 00:42:06,942 --> 00:42:10,028 ಅವರೊಂದು ಬಣ್ಣವನ್ನು ಆರಿಸಿಕೊಂಡು ಅದರಲ್ಲೇ ನಡೆಸುತ್ತಾರೆ, ಅಲ್ಲವೇ? 480 00:42:12,030 --> 00:42:14,658 ಮತ್ತೆ, ನೀನಿಲ್ಲೇಕೆ ಬಂದಿರುವೆ ಎಂದು ನನಗೆ ಹೇಳುವೆಯಾ? 481 00:42:17,827 --> 00:42:19,579 ಸಾಮಾನ್ಯವಾಗಿ ಟಾರ್ ವಲೋನಿಂದ ದೂರ ಇರುತ್ತೇನೆ. 482 00:42:19,663 --> 00:42:23,083 ನಾನಿದ್ದ ನದಿಯ ದೋಣಿ ಚಂಡಮಾರುತದಲ್ಲಿ ದಿಕ್ಕು ಬದಲಾಯಿಸಿತು, ಹಾಗಾಗಿ ನಾನಂದುಕೊಂಡೆ, 483 00:42:23,166 --> 00:42:25,627 "ಯಾಕಾಗಬಾರದು? ದೊಡ್ಡ ನಗರದಲ್ಲಿ ಬೇಕಾದಷ್ಟು ಹೆಂಡದ ಕೆಲಸ." 484 00:42:25,710 --> 00:42:29,881 ನನ್ನ ಅದೃಷ್ಟವೆಂಬಂತೆ, ಕುಡಿಯಲು ಇಷ್ಟಪಡುವ ಒಬ್ಬ ರೆಡ್ ನನ್ನನ್ನು ಗುರುತು ಹಿಡಿದು, 485 00:42:30,340 --> 00:42:31,758 ನಾನಿಲ್ಲಿ ಬಂದು ಬಿದ್ದೆ. 486 00:42:31,841 --> 00:42:33,468 ಆದರೆ ಅವರಿಗೆ ನೀನ್ಯಾಕೆ ಬೇಕು? 487 00:42:40,600 --> 00:42:41,518 ನನಗೆ ಕೆಲವು ಕಾಣುತ್ತವೆ. 488 00:42:41,601 --> 00:42:44,354 ನಾನಿದನ್ನು ಕುಡಿಯುತ್ತಲಿದ್ದರೆ, ನನಗೂ ಕೆಲವೊಂದು ಕಾಣುತ್ತವೆ. 489 00:42:47,023 --> 00:42:48,316 ಅವು ಎಂಥವು? 490 00:42:49,276 --> 00:42:50,568 ಪ್ಯಾಟರ್ನಿನ ಕಿರುನೋಟಗಳು. 491 00:42:50,652 --> 00:42:51,736 ಭವಿಷ್ಯದಂತೆಯೇ? 492 00:42:54,489 --> 00:42:57,909 ನಾನಂದುಕೊಂಡಿದ್ದಕ್ಕಿಂತ ಅದು ಕಡಿಮೆ ಆಸಕ್ತಿಕರವೇ, ನಿಜವಾಗಿ. 493 00:42:57,993 --> 00:43:03,081 ಕನಿಷ್ಠ ಒಂದು ಕೊಲೆ ಅಥವಾ ಒಬ್ಬ ಅಯಿಸ್ ಸೆಡಾಯ್ ಜೊತೆ ರಹಸ್ಯ ಸಂಬಂಧ ಅಂದುಕೊಂಡಿದ್ದೆ. 494 00:43:03,164 --> 00:43:05,709 ಏನು, ಭವಿಷ್ಯ ನೋಡುವುದು ನಿನಗೆ ಆಸಕ್ತಿಕರವಲ್ಲವೇನು? 495 00:43:08,378 --> 00:43:11,256 ನಿನ್ನನ್ನು ನಾನು ನೋಡಿದಾಗ ಏನೆಂದು ನಿನಗೆ ನಿಜವಾಗಲೂ ತಿಳಿಯಬೇಕಿಲ್ಲವೇ? 496 00:43:11,339 --> 00:43:13,508 ನಾನಿಲ್ಲಿಂದ ಹೊರಹೋಗುವುದು ಹೇಗೆಂದು ಇಲ್ಲದಿದ್ದರೆ… 497 00:43:16,469 --> 00:43:18,179 ಖಂಡಿತ ಬೇಡ. 498 00:43:18,263 --> 00:43:23,101 ಇಲ್ಲ, ನನ್ನಡೆ ಬರುತ್ತಿರುವ ಅನಾಹುತವನ್ನು ನಾನು ತಿಳಿಯದಿರುವುದೇ ಉತ್ತಮ. 499 00:43:32,527 --> 00:43:33,528 ವಾಪಸ್ ಹೋಗುವೆ. 500 00:43:34,821 --> 00:43:37,198 ಸಾಮಾನ್ಯವಾಗಿ ನಾವು ಮಲಗಿರುವಾಗ ಗಮನಿಸುತ್ತಾರೆ. 501 00:43:38,074 --> 00:43:41,619 ಹಾಂ, ಮತ್ತೊಮ್ಮೆ ಬರುವೆಯಾ? 502 00:43:43,204 --> 00:43:45,248 ನನ್ನ ಸಾಮಾಜಿಕ ದಿನಚರಿಯನ್ನು ನೋಡುವೆ, ಹೆಗ್ಗಣ, 503 00:43:45,332 --> 00:43:47,876 ಆದರೆ ಅದರಲ್ಲಿ ಏನೂ ಬರೆದಿಲ್ಲದಂತೆ ಕಾಣುತ್ತದೆ. 504 00:44:08,730 --> 00:44:10,106 ಮಿನ್, ಆರಾಮವಾಗಿರುವೆಯಾ? 505 00:44:19,282 --> 00:44:20,784 ನಿನಗೆ ತೊಂದರೆ ಕೊಡುವುದು ನನಗಿಷ್ಟವಿಲ್ಲ. 506 00:44:23,536 --> 00:44:24,579 ನೀನು ಮಾಡಲಾರೆ. 507 00:44:37,759 --> 00:44:38,635 ನಿಂಗೊತ್ತಾ, 508 00:44:40,512 --> 00:44:42,764 ಒಮ್ಮೆ ನಾನು ಪ್ರೀತಿಸುವ ಒಬ್ಬರಿದ್ದರು. 509 00:44:45,683 --> 00:44:48,311 ಆತ ಬಿಟ್ಟು ಹೋದಾಗ, ನನ್ನ ಹೃದಯ ಒಡೆಯಿತು. 510 00:44:49,813 --> 00:44:53,316 ನನ್ನ ಮೇಲೆ ಅಂತಹ ಪ್ರಭಾವ ಬೇರೆ ಯಾರಿಗೂ ಇರಲಾರದೆಂದು ನಾನು ಅಂದುಕೊಂಡಿದ್ದೆ, ಎಂದಿಗೂ ಸಹ. 511 00:44:58,196 --> 00:45:01,157 ನನ್ನ ಇಡೀ ಹೃದಯ ಈಗಲೂ ಅವನ ಬಳಿಯೇ ಇರುವಾಗ ನೋಯಲು ಇನ್ನೇನಿದೆ? 512 00:45:06,329 --> 00:45:08,498 ನಿನ್ನೊಂದಿಗಿರುವಾಗ, ನೀನು ಅವನೆಂದು ಅಂದುಕೊಳ್ಳಬಲ್ಲೆ. 513 00:45:08,581 --> 00:45:11,000 ಮತ್ತೊಮ್ಮೆ ನಾನು ಪರಿಪೂರ್ಣಳು ಎಂದುಕೊಳ್ಳಬಲ್ಲೆ. 514 00:45:15,547 --> 00:45:17,799 ಅದು ಎಂತಹ ವರ ಎಂದು ನೀನು ಊಹಿಸಲಾರೆ. 515 00:45:19,008 --> 00:45:22,345 ಬಹಳ ಕಾಲದಿಂದ ನನಗೆ ಸಿಕ್ಕಿರುವುದಕ್ಕಿಂತ ಅದು ಎಷ್ಟೋ ಹೆಚ್ಚು. 516 00:45:29,227 --> 00:45:32,564 ನೀನು ನನ್ನೊಂದಿಗಿರುವಾಗ ಯಾರ ಬಗ್ಗೆ ಯೋಚಿಸುವೆ? 517 00:45:39,446 --> 00:45:41,322 ನಾನು ಮರೆಯಬೇಕು ಎಂದುಕೊಳ್ಳುವವಳ ಬಗ್ಗೆ. 518 00:45:47,162 --> 00:45:52,000 ಮತ್ತೆ, ನಮ್ಮಿಬ್ಬರಿಗೂ ಇದು ಹೀಗೆಯೇ ಸೂಕ್ತ ಎಂದು ಅನಿಸುತ್ತದೆ. 519 00:45:55,086 --> 00:45:56,671 ನೀನು ನೆನಪಿಸಿಕೊಳ್ಳಲು ನನಗೆ ನೆರವಾಗು… 520 00:45:58,339 --> 00:45:59,841 ನಿನಗೆ ಮರೆಯಲು ನಾನು ನೆರವಾಗುವೆ. 521 00:46:13,480 --> 00:46:16,649 ಈಗ ನಿನಗೆ ತೋರಿಸುವೆ, ನನ್ನ ರಹಸ್ಯ ಆಯುಧವನ್ನು. 522 00:46:16,733 --> 00:46:20,361 ಸಣ್ಣ ಪ್ರಮಾಣದಲ್ಲಿ ಇದನ್ನು ತಯಾರಿಸುವಾಗ ರುಚಿ ಇನ್ನೂ ಉತ್ತಮ. 523 00:46:22,739 --> 00:46:26,701 ಒತ್ತಡವನ್ನು ಹೆಚ್ಚಿಸಿ ಹುದುಗುವಿಕೆಯನ್ನು ಶೀಘ್ರಗೊಳಿಸುವ ಗಾಳಿಯ ನೇಯ್ಗೆಗಳು, 524 00:46:26,784 --> 00:46:29,037 ಆ ರೀತಿಯಲ್ಲಿ ಅವುಗಳನ್ನು ಇನ್ನೂ ಚೆನ್ನಾಗಿ ನಿಭಾಯಿಸಬಹುದು. 525 00:46:30,038 --> 00:46:31,456 ತುಂಬಾ ಘಾಟಿನಿಂದ ಕೂಡಿದೆ. 526 00:46:31,539 --> 00:46:32,457 ಕ್ಷಮಿಸು. 527 00:46:32,540 --> 00:46:34,667 ಇದನ್ನು ನೀನೇ ಸ್ವತಃ ತಯಾರಿಸಿದ್ದೇ? 528 00:46:34,751 --> 00:46:36,377 ನನಗೆ ವಸ್ತುಗಳೊಂದಿಗೆ ಆಟವಾಡುವುದು ಇಷ್ಟ. 529 00:46:37,003 --> 00:46:41,049 ಜೊತೆಗೆ, ಯಾರಿಗಾದರೂ ಸ್ನೇಹಿತರಿಲ್ಲದಿರುವಾಗ ಮತ್ತು ಆನಂದಿಸುವುದನ್ನು ನಿಷೇಧಿಸಿರುವಾಗ, 530 00:46:41,716 --> 00:46:43,676 ಹೇಗೋ ಹಾಗೆ ಸಮಯವನ್ನು ಕಳೆಯಲೇಬೇಕು. 531 00:46:45,386 --> 00:46:46,846 ಸ್ನೇಹಿತರ ವಿಚಾರಕ್ಕೆ ಬಂದರೆ, 532 00:46:46,930 --> 00:46:50,934 ಆಗಲೇ ಶೆರಿಯಂ ಸೆಡಾಯ್ ನೈನೀವ್ ಅಲ್'ಮಯಿರಾ ಬಗ್ಗೆ ನಿನ್ನನ್ನು ಕೇಳುತ್ತಿದ್ದರಾ? 533 00:46:51,601 --> 00:46:52,727 ಆಕೆ ನಿನಗೆ ಗೊತ್ತೇನು? 534 00:46:54,562 --> 00:46:55,813 ನಿನಗೆ ಗೊತ್ತೆಂದು ಅಂದುಕೊಳ್ಳುವೆ. 535 00:46:58,107 --> 00:47:01,569 ಏನಂದ್ರೆ, ಅವಳು ತುಂಬಾ ಶಕ್ತಿಶಾಲಿ ಎಂದು ಜನ ಹೇಳುತ್ತಾರೆ. 536 00:47:05,532 --> 00:47:06,866 ಎಗ್ವೀನ್? ಇದ್ದೀಯಾ? 537 00:47:07,617 --> 00:47:09,327 ನಾವಿಲ್ಲಿಗೆ ಜೊತೆಯಾಗಿ ಬಂದೆವು. 538 00:47:09,410 --> 00:47:11,287 ಆಕೆ ನನ್ನ ಆಪ್ತ ಸ್ನೇಹಿತೆ. 539 00:47:11,371 --> 00:47:13,456 ಬೆಳಕೇ! ಎಷ್ಟು ಆಸಕ್ತಿಕರ… 540 00:47:13,540 --> 00:47:14,999 ಆಯಾಸಕರವೇ? 541 00:47:17,752 --> 00:47:18,920 ಇಲ್ಲ. 542 00:47:19,170 --> 00:47:20,421 ಇಲ್ಲ, ಇಲ್ಲ. ಅದು... 543 00:47:21,256 --> 00:47:22,632 ಅದು ಹಾಗಲ್ಲ. 544 00:47:23,967 --> 00:47:25,134 ಎಗ್ವೀನ್? 545 00:47:25,218 --> 00:47:28,054 ಅಂದರೆ, ನಿಖರವಾಗಿ, ಆಕೆ ಏನನ್ನೂ ಮಾಡುತ್ತಿಲ್ಲ. 546 00:47:28,930 --> 00:47:30,390 ಅದೇ ಸಮಸ್ಯೆ ಎಂದುಕೊಳ್ಳುವೆ. 547 00:47:31,099 --> 00:47:35,436 ನಾನು ಮಾಡುವುದೆಲ್ಲಾ ಓದುವುದು ಮತ್ತು ಕಷ್ಟಪಟ್ಟು ದುಡಿಯುವುದು, 548 00:47:35,520 --> 00:47:36,729 ನಿಯಮಗಳನ್ನು ಅನುಸರಿಸುವುದು, 549 00:47:36,813 --> 00:47:40,733 ಆದರೆ ಆಕೆ ತರಗತಿಗಳಿಗೆ ಗೈರಾಗಿ, ಇಲ್ಲಿ ಇರುವುದೂ ಸಹ ಇಷ್ಟವಿಲ್ಲ ಎನ್ನುತ್ತಾಳೆ. 550 00:47:41,776 --> 00:47:45,363 ಕಷ್ಟದ ವಿಚಾರ ಏನೆಂದರೆ, ಆಕೆ ಇಲ್ಲಿಗೆ ನನಗಾಗಿ ಬಂದಳೆಂದು ಹೇಳುತ್ತಾಳೆ. 551 00:47:46,281 --> 00:47:47,448 ನನ್ನನ್ನು ಕಾಪಾಡಲೆಂದು. 552 00:47:49,993 --> 00:47:51,494 ಆಕೆ ಎಂದಿಗೂ ಮಾಡಿರುವಂತೆ. 553 00:47:53,329 --> 00:47:54,872 ನನಗೆ ಬೇಕಿರಲಿ ಅಥವಾ ಬೇಡವಾಗಿರಲಿ. 554 00:47:56,749 --> 00:47:59,252 ಆದರೆ ನನಗೆ ನಿಜವಾಗಿ ಆಕೆ ಬೇಕಾದಾಗ ಎಲ್ಲಿದ್ದಾಳೆ? 555 00:48:02,755 --> 00:48:07,343 ವಾರ್ಡರ್ಗಳೊಂದಿಗೆ ಸಮರಾಭ್ಯಾಸ ನಡೆಸುವುದೋ ಅಥವಾ ಲಿಯಾಂಡ್ರಿನ್ನಳ ಶಿಷ್ಯೆ ಆಗುವವಳಿದ್ದಾಳೆ. 556 00:48:09,554 --> 00:48:11,055 ನನಗೆ ಹೇಗನಿಸುತ್ತದೆ ಎಂದರೆ, 557 00:48:11,723 --> 00:48:15,101 ನಾನು ಹೆಚ್ಚು ಪ್ರಯತ್ನಿಸಿದಷ್ಟೂ ಹಿಂದಕ್ಕೆ ಬೀಳುವಂತೆ. 558 00:48:17,103 --> 00:48:18,605 ಮತ್ತು ಆಕೆ ಕಡಿಮೆ ಪ್ರಯತ್ನಿಸಿದಷ್ಟೂ… 559 00:48:21,274 --> 00:48:22,692 ಆಕೆ ಹೆಚ್ಚು ಮುಂದೆ ಹೋಗುತ್ತಾಳೆ. 560 00:48:24,235 --> 00:48:25,236 ಎಗ್ವೀನ್. 561 00:48:26,904 --> 00:48:29,198 ನಾವಿಬ್ಬರು ಈಗಷ್ಟೇ ಪರಿಚಿತರಾಗುತ್ತಿದ್ದೇವೆಂದು ಗೊತ್ತು, 562 00:48:29,282 --> 00:48:31,367 ಹಾಗಾಗಿ ಈ ಮಾತನ್ನು ಹೇಳುವುದಕ್ಕೆ ನನ್ನನ್ನು ಕ್ಷಮಿಸು, 563 00:48:32,744 --> 00:48:33,703 ಮಾತ್ಸರ್ಯ, 564 00:48:35,955 --> 00:48:37,790 ನಿನಗೆ ಸರಿಹೊಂದದು. 565 00:48:40,585 --> 00:48:42,629 -ನನಗೆ ಮತ್ಸರವಿಲ್ಲ. -ಎಗ್ವೀನ್. 566 00:48:43,296 --> 00:48:47,342 ವಿಶ್ವದ ಅತ್ಯಂತ ಶಕ್ತಿಶಾಲಿ ದೇಶದ ಡಾಟರ್-ಹೇರ್ ನಾನು. 567 00:48:48,926 --> 00:48:50,845 ಮತ್ಸರ ಹೇಗಿರುತ್ತದೆ ಎಂದು ನಾನು ಬಲ್ಲೆ. 568 00:49:03,107 --> 00:49:05,193 ಎಗ್ವೀನ್, ನಿನಗೆ ಹೇಳಲು ನನ್ನ ಬಳಿ ಏನೂ ಇಲ್ಲ. 569 00:49:09,489 --> 00:49:11,741 ಲಿಯಾಂಡ್ರಿನ್ ಸೆಡಾಯ್. ಇದು ಮುಂಚೆ ನಡೆದುದರ ಬಗ್ಗೆ ಆದರೆ-- 570 00:49:11,824 --> 00:49:14,702 ನಿನಗೆ ಆಮಿಷ ಕೊಟ್ಟಿರುವುದನ್ನು ಹಿಂಪಡೆದುಕೊಳ್ಳಲಾಗುವುದಾದರೆ, ಪಡೆಯುವೆ, 571 00:49:14,786 --> 00:49:17,080 ಆದರೆ ಕಾರ್ಯಗತಗೊಳಿಸಿರುವೆ, ಹಾಗಾಗಿ ನಾವಿಲ್ಲಿದ್ದೇವೆ. 572 00:49:17,163 --> 00:49:18,164 ನನ್ನನ್ನು ಹಿಂಬಾಲಿಸು. 573 00:49:26,297 --> 00:49:28,132 ಎಲ್ಲಿಗೆ ಹೊರಟಿದ್ದೇವೆಂದು ತಿಳಿಸು. 574 00:49:40,645 --> 00:49:42,522 ನಿನ್ನೊಂದಿಗೆ ಯಾರನ್ನು ಕರೆತಂದಿರುವೆ, ಸಹೋದರಿ? 575 00:49:42,605 --> 00:49:45,608 ಸ್ವೀಕೃತಕ್ಕಾಗಿ ಬಂದಿರುವ ಅಭ್ಯರ್ಥಿಯನ್ನು, ಸಹೋದರಿ. 576 00:49:47,902 --> 00:49:50,363 ಆರ್ಚಸ್ ಎದುರಿಸಲು ಆಕೆ ಸಿದ್ಧಳಾಗಿರುವಳೇ? 577 00:49:50,446 --> 00:49:53,491 ತಾನು ಹಿಂದೆ ಆಗಿದ್ದನ್ನು ತೊರೆಯಲು ಸಿದ್ಧಳಾಗಿದ್ದಾಳೆ, 578 00:49:53,574 --> 00:49:54,450 ಮತ್ತು, ಒಂಟಿಯಾಗಿ, 579 00:49:54,534 --> 00:49:57,286 ತನ್ನ ಭಯದ ಮೂಲಕ ಸಾಗಿ, ಸ್ವೀಕೃತಗೊಳ್ಳಲು. 580 00:49:58,830 --> 00:50:00,540 ಆಕೆಯ ಭಯವೇನೆಂದು ಆಕೆಗೆ ಗೊತ್ತೇ? 581 00:50:01,165 --> 00:50:04,669 ಆಕೆ ಅವುಗಳನ್ನು ಎಂದಿಗೂ ಎದುರಿಸಿಲ್ಲ, ಆದರೆ ಈಗ ತಯಾರಿದ್ದಾಳೆ. 582 00:50:06,087 --> 00:50:09,132 ಹಾಗಿದ್ದಲ್ಲಿ ಆಕೆ ತನ್ನ ಭಯಗಳನ್ನು ಎದುರಿಸಲಿ. 583 00:50:09,716 --> 00:50:11,676 ಕಾಲವು ಯಾವ ಹೆಣ್ಣಿಗೂ ಕಾಯುವುದಿಲ್ಲ. 584 00:51:23,873 --> 00:51:26,292 ಫೇಡರು ಬರುವುದನ್ನು ನಾನು ಗ್ರಹಿಸಬೇಕಿತ್ತು. 585 00:51:28,544 --> 00:51:29,587 ಗ್ರಹಿಸಬೇಕಿತ್ತು. 586 00:51:30,797 --> 00:51:31,839 ನನ್ನನ್ನು ಕ್ಷಮಿಸು. 587 00:51:34,592 --> 00:51:37,303 ನೀನು ನನ್ನ ವಾರ್ಡರ್ ಆಗಬೇಕೆಂದು ನಾನು ಯಾವಾಗ ನಿರ್ಧರಿಸಿದೆ ಗೊತ್ತೇ? 588 00:51:38,554 --> 00:51:39,889 ಚಾಚಿನ್ ನಂತರ. 589 00:51:41,766 --> 00:51:44,602 ಟವರಿಗೆ ನಾವು ಮರಳುವಾಗ ಒಂದು ಹಳ್ಳಿಯ ಬಳಿ ನಿಂತೆವು, 590 00:51:44,685 --> 00:51:46,229 ಅದರ ಹೆಸರು ನನಗೆ ನೆನಪಿಲ್ಲ, 591 00:51:47,313 --> 00:51:51,025 ಆದರೆ ಮೂರು ಟ್ರಾಲಕ್ ತಲೆಗಳನ್ನು ಈಟಿಗಳ ಮೇಲೆ ಚುಚ್ಚಿ ಊರ ಹೊರಗೆ ಇಡಲಾಗಿತ್ತು. 592 00:51:53,069 --> 00:51:54,028 ಒಂದು ಎಚ್ಚರಿಕೆ. 593 00:51:57,031 --> 00:51:58,491 ಆದರೆ ನೀನು ವಿಚಲಿತನಾಗಲಿಲ್ಲ. 594 00:51:59,450 --> 00:52:01,369 ಬ್ಲೈಟಿನಲ್ಲಿ ಎಷ್ಟೋ ಎದುರಿಸಿದ್ದೆ. 595 00:52:01,452 --> 00:52:05,623 ಮತ್ತು ದಿ ಶ್ಯಾಡೋವನ್ನು ಏನೂ ಇಲ್ಲದೆ ಕೇವಲ ಕತ್ತಿಯಿಂದ ಎದುರಿಸಬೇಕಾದ 596 00:52:06,916 --> 00:52:08,543 ಧೈರ್ಯವನ್ನು ನಾನು ಊಹಿಸಲಾಗಲಿಲ್ಲ. 597 00:52:09,418 --> 00:52:10,670 ಆಗಲೇ ನನಗೆ ಗೊತ್ತಾಗಿತ್ತು. 598 00:52:12,338 --> 00:52:16,050 ಯಾಕೆಂದರೆ ನನಗೆ ಗೊತ್ತಿತ್ತು, ಸಮಯ ಬಂದಾಗ, ನೀನೇ ಸ್ವತಃ ಬದುಕಬಲ್ಲೆ ಎಂದು. 599 00:52:18,761 --> 00:52:20,137 ನೀನು ಟವರಿಗೆ ಹೋಗುವೆ. 600 00:52:21,222 --> 00:52:22,723 ಮತ್ತು ನಾನು ಒಂಟಿಯಾಗಿ ಮುಂದುವರಿಯುವೆ. 601 00:52:26,727 --> 00:52:27,895 ನಾನು ನಿನ್ನನ್ನು ಬಿಡುತ್ತಿಲ್ಲ. 602 00:52:27,979 --> 00:52:29,355 ನಾನು ತಪ್ಪು ತಿಳಿದಿದ್ದೆ, ಲಾನ್. 603 00:52:29,438 --> 00:52:31,148 ಎಲ್ಲದರ ಬಗ್ಗೆ ತಪ್ಪು ತಿಳಿದಿದ್ದೆ. 604 00:52:32,692 --> 00:52:35,903 ಲಾಸ್ಟ್ ಬ್ಯಾಟಲ್ ಬರುತ್ತಿದೆ, ಮತ್ತು ನಾವದನ್ನು ಈಗಾಗಲೇ ಸೋಲುತ್ತಿದ್ದೇವೆ. 605 00:52:37,029 --> 00:52:39,490 ಐ ಆಫ್ ದಿ ವರ್ಲ್ಡನ್ನು ಮುರಿದ ಕ್ಯೂಂಡಿಲರ್, 606 00:52:39,574 --> 00:52:42,326 ಇಷಮೆಲ್ನನ್ನು ಸೆರೆಯಾಗಿರಿಸಿದ್ದ ಬಂಧನ ಅದೇ ಆಗಿತ್ತು. 607 00:52:42,827 --> 00:52:43,786 ಇಷಮೆಲ್? 608 00:52:44,954 --> 00:52:45,997 ಫಾರ್ಸೇಕನ್? 609 00:52:46,080 --> 00:52:49,542 ನಾವು ಡಾರ್ಕ್ ಒನ್ನನ್ನು ಸೋಲಿಸಲಿಲ್ಲ, ಆತನ ಬಲಶಾಲಿ ಸೇನಾಧಿಪತಿಯನ್ನು ಬಿಡುಗಡೆಗೊಳಿಸಿದವು. 610 00:52:51,252 --> 00:52:55,756 ಫಾರ್ಸೇಕನ್ 3,000 ವರ್ಷ ವಯಸ್ಸಾದವರು, ಇದುವರೆಗೂ ಬದುಕಿರುವ ಅತ್ಯಂತ ಶಕ್ತಿಶಾಲಿ ಆವಾಹಕರು. 611 00:52:55,840 --> 00:52:58,092 ಇಷಮೆಲ್ ಮಿಕ್ಕವರನ್ನು ಎಚ್ಚರಿಸುತ್ತಿರಬಹುದು. 612 00:52:58,801 --> 00:53:00,720 ಅವರು ಒನ್ ಪವರ್ ಜೊತೆ ಮಾಡುವುದರ ಮುಂದೆ 613 00:53:00,803 --> 00:53:03,764 ಅಯಿಸ್ ಸೆಡಾಯ್ ತಮ್ಮ ತೋಳುಗಳಿಂದ ಪಕ್ಷಿಗಳನ್ನು ಹಾರಿಬಿಡುವ 614 00:53:03,848 --> 00:53:06,017 ಸಾಧಾರಣ ಜಾದೂಗಾರರಂತೆ ಕಾಣುತ್ತಾರೆ. 615 00:53:06,100 --> 00:53:09,312 ಅಂದರೆ, ಕೇವಲ ತನ್ನ ಮುಂಗೈಯಿಂದ ನನ್ನನ್ನು ಆತ ತಡೆದನು. 616 00:53:09,395 --> 00:53:12,899 ಆದರೆ ಯಾರನ್ನಾದರೂ ತಡೆಯಬೇಕೆಂದರೆ ಎಂಟು ಅಯಿಸ್ ಸೆಡಾಯ್ ಬೇಕು. ಒಬ್ಬನೇ, ಅವನಿಗಾಗಲಿಲ್ಲ-- 617 00:53:12,982 --> 00:53:15,526 ಅವರಿಗಿರುವ ಶಕ್ತಿಯ ಅಂದಾಜೇ ನಿನಗಿಲ್ಲ. 618 00:53:15,610 --> 00:53:16,611 ಹಾಗಿದ್ದರೆ ಹೇಳು ನನಗೆ. 619 00:53:17,862 --> 00:53:19,989 ನೀನು ಮತ್ತು ನಾನು ಈ ದಾರಿಯಲ್ಲಿ ಒಟ್ಟಿಗೆ ನಡೆದಿದ್ದೇವೆ. 620 00:53:20,072 --> 00:53:21,240 ಇದರ ಪ್ರತಿ ಹೆಜ್ಜೆಯಲ್ಲೂ. 621 00:53:22,783 --> 00:53:26,078 -ಪ್ರತಿ ಆಯ್ಕೆ, ತ್ಯಾಗ-- -ನಾವೆಂದಿಗೂ ಈ ದಾರಿಯಲ್ಲಿ ಒಟ್ಟಿಗೆ ನಡೆದಿಲ್ಲ. 622 00:53:26,662 --> 00:53:30,583 ನಿನಗೆ ಸತ್ಯದ ದರ್ಶನ ಎಂದಿಗೂ ಆಗಿಲ್ಲ ಯಾಕೆಂದರೆ ನಿನಗದನ್ನು ನಾನು ತೋರಿಸಿಲ್ಲ. 623 00:53:30,666 --> 00:53:32,293 ನೀನೇನು ಮಾಡುತ್ತಿರುವೆ ನನಗೆ ಗೊತ್ತು. 624 00:53:33,836 --> 00:53:35,004 ನೀನು ನನ್ನನ್ನು ದೂರ ತಳ್ಳಲಾರೆ. 625 00:53:37,006 --> 00:53:38,174 ರಾಂಡ್ ಬದುಕಿದ್ದಾನೆ. 626 00:53:43,596 --> 00:53:44,597 ಇಲ್ಲ. 627 00:53:46,098 --> 00:53:48,392 -ಆತ ಸತ್ತ ಎಂದು ನೀನು ಹೇಳಿದೆ. -ನೀನು ಅಂದುಕೊಂಡೆ. 628 00:53:48,976 --> 00:53:51,938 ಡ್ರ್ಯಾಗನ್ ರೀಬಾರ್ನನ್ನು ರಕ್ಷಿಸಲು ಏನು ಮಾಡಬೇಕೋ ಅದನ್ನು ನಾನು ಮಾಡಿದೆ, 629 00:53:52,021 --> 00:53:55,107 ಯಾಕೆಂದರೆ ನನ್ನ ನಿಷ್ಠೆ ಇರುವುದು ಆತನಿಗೆ, ಮತ್ತು ಆತನಿಗೆ ಮಾತ್ರವೇ. 630 00:54:00,529 --> 00:54:02,740 ನಿನ್ನನ್ನು ರಕ್ಷಿಸಲು ನಾನು ಪ್ರಮಾಣವಚನ ಸ್ವೀಕರಿಸಿದೆ. 631 00:54:04,492 --> 00:54:05,701 ನಿನಗಾಗಿ ಪ್ರಾಣ ಅರ್ಪಿಸಲು. 632 00:54:05,785 --> 00:54:08,037 ಬಂಧವಿಲ್ಲದೆ, ನೀನು ಅದನ್ನು ಪೂರೈಸಲಾರೆ. 633 00:54:08,120 --> 00:54:10,623 -ನಾನೀಗಲೂ ನಿನ್ನ ವಾರ್ಡರ್. -ಇಲ್ಲ, ನೀನು ನನಗೆ ನಿರಾಸೆ ಮಾಡಿದೆ. 634 00:54:10,706 --> 00:54:13,084 ವೆರಿನ್ ಮತ್ತು ಅಡೆಲಿಯಸ್ ಇಲ್ಲದಿದ್ದರೆ ನಾನು ಸಾಯುತ್ತಿದ್ದೆ. 635 00:54:17,254 --> 00:54:19,131 ನೀನು ಮತ್ತೊಮ್ಮೆ ಬಿಟ್ಟು ಹೋಗಲು ಬಿಡುವುದಿಲ್ಲ. 636 00:54:19,215 --> 00:54:20,174 ಗೊತ್ತು. 637 00:54:25,346 --> 00:54:27,056 ಅಲನಾ ನಿನ್ನನ್ನು ಟವರಿಗೆ ಕರೆದೊಯ್ಯುತ್ತಾಳೆ. 638 00:54:27,139 --> 00:54:30,184 ಬೇಕಾದರೆ ನಿನ್ನ ಬಂಧವನ್ನು ಆಕೆ ಬಲವಂತವಾಗಿ ಕಸಿಯುವಂತೆ ಮಾಡುವೆ. 639 00:54:31,227 --> 00:54:33,813 ನಿನ್ನನ್ನು ನಂಬಿದಕ್ಕಾಗಿ ನನ್ನನ್ನು ನಿನಗಾಗಿ ಅರ್ಪಿಸಿದೆ. 640 00:54:35,731 --> 00:54:39,193 ಯಾಕೆಂದರೆ ನಾವಿದರಲ್ಲಿ ಒಟ್ಟಿಗಿದ್ದೇವೆ ಎಂದು ನಾನಂದುಕೊಂಡಿದ್ದೆ. 641 00:54:39,276 --> 00:54:40,277 ಸಮಾನರಾಗಿ. 642 00:54:41,153 --> 00:54:43,280 ಆದರೆ ಅದು ಎಂದಿಗೂ ನಿಜವಾಗಿರಲಿಲ್ಲ, ಅಲ್ವಾ, ಮೊರೇನ್? 643 00:54:43,364 --> 00:54:45,241 ಒಬ್ಬ ಅಯಿಸ್ ಸೆಡಾಯ್ ಸುಳ್ಳು ಹೇಳಲಾರಳು, 644 00:54:46,826 --> 00:54:48,160 ಹಾಗಾಗಿ ನನಗೆ ನಿಜ ಹೇಳು. 645 00:54:52,957 --> 00:54:54,375 ನಾವು ಎಂದಿಗೂ ಸಮಾನರಾಗಿರಲಿಲ್ಲ. 646 00:55:01,424 --> 00:55:02,883 ಬೆಳಕು ನಿನ್ನನ್ನು ಕಾಪಾಡಲಿ… 647 00:55:05,553 --> 00:55:07,221 ಅಲ್'ಲಾನ್ ಮಂಡ್ರಗೊರನ್. 648 00:56:58,916 --> 00:56:59,834 ನನ್ನ ಮಗನೇ! 649 00:57:13,222 --> 00:57:14,265 ಎದೆಗುಂದಬೇಡಿ. 650 00:57:40,916 --> 00:57:42,168 ಲೋಯಿಲ್ ಎಲ್ಲಿ? 651 00:57:44,795 --> 00:57:45,754 ಲೋಯಿಲ್! 652 00:58:34,511 --> 00:58:35,846 ಶೈನಾರನ್ನರು, ನನ್ನೊಂದಿಗಿರಿ! 653 00:58:35,930 --> 00:58:37,014 ನನ್ನ ಬದಿಯಲ್ಲಿ! 654 00:58:44,605 --> 00:58:45,648 ಗುಂಪಾಗಿ ನಿಲ್ಲಿ! 655 00:59:13,801 --> 00:59:14,927 ರಕ್ಷಣೆ ಪಡೆಯಿರಿ! 656 00:59:52,214 --> 00:59:53,215 ನಡಿ! 657 00:59:55,509 --> 00:59:56,468 ಕದಲಬೇಡ! 658 00:59:59,763 --> 01:00:01,473 ಏನು ಮಾಡುತ್ತಿದ್ದೀಯ? ಮರಳು ಇಲ್ಲಿಗೆ. 659 01:00:37,176 --> 01:00:38,218 ಅವರು ಸಿದ್ಧವಾಗಿದ್ದಾರಾ? 660 01:00:46,226 --> 01:00:48,103 ಅವರು ಸಿದ್ಧವಾಗಿರಲೇಬೇಕು, ಅಲ್ಲವೇ? 661 01:01:10,459 --> 01:01:12,503 ರಾತ್ರಿ ಫೋರ್ ಗೇಟಲ್ಲಿ ಯನ್ನ್ ಮೇಲೆ ದಾಳಿ ಮಾಡಿದರು, 662 01:01:12,586 --> 01:01:14,338 ಹಾಗಾಗಿ ಆ ಸ್ಥಾನವನ್ನು ನೀನು ತುಂಬಬೇಕು. 663 01:01:14,421 --> 01:01:17,091 ನೀನು ಈಗಾಗಲೇ ಮಾಡುತ್ತಿರುವುದಕ್ಕಿಂತ ಅದು ಹೆಚ್ಚೇನೂ ಬೇರೆ ಆಗಿರುವುದಿಲ್ಲ. 664 01:01:17,174 --> 01:01:20,469 ನೀನು ನೋಡಿಕೊಳ್ಳುವವರಿಗೆ ಸಿರಿವಂತ ಕುಟುಂಬಗಳು ಅಥವಾ ವಿಶೇಷ ಸ್ನೇಹಿತರು ಇರುತ್ತಾರಷ್ಟೇ. 665 01:01:21,387 --> 01:01:23,013 ಮತ್ತು ನಿನಗೆ ಶುದ್ಧ ಗಾಳಿಯೂ ಸಿಗುತ್ತದೆ. 666 01:01:59,466 --> 01:02:02,386 ನಿನ್ನ ಎಂದಿನ ಕಾವಲುಗಾರನಿಗೆ ನಿನ್ನೆ ಒಂದು ಕೆಟ್ಟ ಅವಘಡವಾಯಿತು, 667 01:02:02,469 --> 01:02:05,347 ಹಾಗಾಗಿ ಮುಂದಿನ ಕೆಲ ತಿಂಗಳುಗಳ ಕಾಲ ನಾನೇ ನಿನ್ನನ್ನು ನೋಡಿಕೊಳ್ಳುವೆ. 668 01:02:12,688 --> 01:02:15,566 ನಮ್ಮಿಬ್ಬರ ನಡುವೆ ಬಹಳ ಸಾಮ್ಯತೆ ಇದೆ ಎಂದು ನನಗೆ ಅನಿಸುತ್ತಿದೆ. 669 01:04:27,531 --> 01:04:29,533 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 670 01:04:29,616 --> 01:04:31,618 ಸೃಜನಶೀಲ ಮೇಲ್ವಿಚಾರಕರು ವಿವೇಕ್