1 00:00:05,965 --> 00:00:06,799 ಈ ಹಿಂದೆ 2 00:00:06,882 --> 00:00:08,259 ಡಾರ್ಕ್ ಒನ್ ಎಚ್ಚರಗೊಳ್ಳುತ್ತಿದ್ದಾನೆ. 3 00:00:08,342 --> 00:00:10,636 ಅವನ ಪಿಸುಮಾತುಗಳು ಈಗಾಗಲೇ ನಮ್ಮ ಮನಸ್ಸುಗಳಲ್ಲಿವೆ. 4 00:00:12,054 --> 00:00:14,515 ಆದರೆ ಅವನನ್ನು ಎದುರಿಸುವವರು ಮಾತ್ರ ಒಬ್ಬರೇ. 5 00:00:15,683 --> 00:00:18,561 ಡ್ರ್ಯಾಗನ್ ಮತ್ತೆ ಹುಟ್ಟಿದ್ದಾರೆ. ನಿಮ್ಮಲ್ಲೊಬ್ಬರಾಗಿ. 6 00:00:18,644 --> 00:00:20,104 ನಿಮಗೆ ಪೂರ್ತಿ ತಲೆ ಕೆಟ್ಟಿದೆ. 7 00:00:20,187 --> 00:00:23,023 ಅಯಿಸ್ ಸೆಡಾಯ್ ಮತ್ತು ಆಕೆಯ ವಾರ್ಡರ್ ಮಧ್ಯೆಯ ಸಂಬಂಧದ ಬಗ್ಗೆ ಕೇಳಿದ್ದೇನೆ, 8 00:00:23,107 --> 00:00:24,525 ಅವಳ ಅನುಭವ ನಿಮಗಾಗುತ್ತೆ ಅಂತ. 9 00:00:24,984 --> 00:00:25,985 ಬೆಚ್ಚಗೆ ಇರಬಹುದಿತ್ತು. 10 00:00:27,611 --> 00:00:28,487 ಈಗ ಸರಿಯೇ? 11 00:00:28,571 --> 00:00:29,905 ಎಷ್ಟೋ. 12 00:00:29,989 --> 00:00:32,575 ನಿನಗೂ ಮುಂಚೆ, ನನಗೆ ಬದುಕಲು ಏನೂ ಇರಲಿಲ್ಲ. 13 00:00:32,658 --> 00:00:34,034 ಮತ್ತು ಸಾಯಲು ಏನೂ ಇರಲಿಲ್ಲ. 14 00:00:35,536 --> 00:00:37,037 ಈ ಶಕ್ತಿ. 15 00:00:37,121 --> 00:00:39,957 ಇದು ಮಹಿಳೆಯರಿಗಾಗಿ, ಮತ್ತು ಮಹಿಳೆಯರಿಗೆ ಮಾತ್ರ. 16 00:00:40,499 --> 00:00:41,917 ಅದನ್ನು ನೀನು ಮುಟ್ಟಿದಾಗ… 17 00:00:42,001 --> 00:00:43,169 ಅದು ಮೈಲಿಗೆಯಾಗುತ್ತದೆ. 18 00:00:44,628 --> 00:00:46,213 ಪುರುಷರು ಹುಚ್ಚರಾಗದೆ ಅದನ್ನು ಬಳಸದಿರುವಂತೆ 19 00:00:46,297 --> 00:00:48,674 ಒನ್ ಪವರನ್ನು ಡಾರ್ಕ್ ಒನ್ ಕೆಡಿಸಿದ. 20 00:00:50,468 --> 00:00:51,635 ನೀನವನನ್ನು ನೋಡಿಕೊಳ್ಳಬೇಕು. 21 00:00:51,719 --> 00:00:53,763 ಕಠಾರಿಯೊಂದಿಗಿನ ಸಂಪರ್ಕದಿಂದ ಅವನನ್ನು ಗುಣಪಡಿಸಿರುವೆ, 22 00:00:53,846 --> 00:00:57,308 ಆದರೆ ಆತನೊಳಗಿರುವ ಕಗ್ಗತ್ತಲನ್ನು ಅದು, ಅದರೊಳಗಿನದ್ದನ್ನು ಆತ, ಸೇವಿಸುತ್ತಿದ್ದರು. 23 00:00:57,391 --> 00:00:59,935 ಆತ ಮತ್ತೊಮ್ಮೆ ಅದನ್ನು ತಾಕಿದರೆ, ಶಾಶ್ವತವಾಗಿ ದೂರವಾಗುವನು. 24 00:01:00,895 --> 00:01:02,813 ನನಗೆ ಅವನ ಬಗ್ಗೆ ಚಿಂತೆಯಾಗಿದೆ. ಅವನ ಕಣ್ಣುಗಳು. 25 00:01:02,897 --> 00:01:05,649 ವಳ್ದ ಅವನನ್ನು ಹಿಂಸಿಸುವಾಗ, ಅವನ ಕಂಗಳು ಬಂಗಾರದಂತಾದವು. ತೋಳದಂತೆ. 26 00:01:06,108 --> 00:01:08,235 -ನಾನು ಅಯಿಸ್ ಸೆಡಾಯ್ ಅಲ್ಲ. -ನೀನಾಗಬಲ್ಲೆ. 27 00:01:08,319 --> 00:01:10,237 ನೀನು ಗಾಳಿಯನ್ನು ಕೇಳುವುದಿಲ್ಲ, ಎಗ್ವೀನ್. 28 00:01:10,321 --> 00:01:12,573 ಗಾಳಿಯೇ ನಿನ್ನನ್ನು ಕೇಳುತ್ತದೆ. 29 00:01:13,991 --> 00:01:17,536 ಸಾವಿರ ವರ್ಷಗಳಲ್ಲೇ ನಾವು ನೋಡಿರದಂತಹ ಅತ್ಯಂತ ಶಕ್ತಿಯುತ ಆವಾಹಕಿ. 30 00:01:18,078 --> 00:01:19,872 ನೀನು ಹೇಳಿದಷ್ಟು ನಾನು ಶಕ್ತಿವಂತಳಾಗಿದ್ದರೆ, 31 00:01:19,955 --> 00:01:23,459 ಬಹುಶಃ ನೀನೇ, ಅಯಿಸ್ ಸೆಡಾಯ್, ನನ್ನನ್ನು ಕಡೆಗಣಿಸಬಾರದು. 32 00:01:23,542 --> 00:01:25,377 ಚಕ್ರವೇ ನಿನ್ನನ್ನು ಇದಕ್ಕೆ ಕರೆಯುತ್ತಿದೆ, 33 00:01:25,461 --> 00:01:27,045 ಅದು ನಿನ್ನಿಂದ ಆಗಲಿ ಅಥವಾ ಆಗದಿರಲಿ. 34 00:01:27,129 --> 00:01:29,173 ಲಾಸ್ಟ್ ಬ್ಯಾಟಲ್ ಬರುತ್ತಿದೆ. 35 00:01:36,305 --> 00:01:37,264 ಏನದು? 36 00:01:37,348 --> 00:01:39,058 ವಲೀರಿನ ಕಹಳೆ. 37 00:01:39,140 --> 00:01:40,726 ಲಾಸ್ಟ್ ಬ್ಯಾಟಲಿನಲ್ಲಿ ಊದಬೇಕಿರುವುದು. 38 00:01:42,061 --> 00:01:44,104 ನಮ್ಮ ಗೋಡೆಗಳ ಒಳಗೆ ಡಾರ್ಕ್ ಫ್ರೆಂಡ್ಸ್ ಇದ್ದಾರೆ. 39 00:01:44,188 --> 00:01:47,066 ತಾನಿನ್ನೂ ಬಲಹೀನನಾಗಿರುವಾಗಲೇ ಡಾರ್ಕ್ ಒನ್ನನ್ನು ನಾವು ತಡೆಯದಿದ್ದರೆ, 40 00:01:47,149 --> 00:01:49,610 ಇಡೀ ಪ್ರಪಂಚವೇ ಅಂಧಕಾರದಲ್ಲಿ ಮುಳುಗುವುದು. 41 00:01:49,693 --> 00:01:51,445 -ಮ್ಯಾಟ್! -ಬಾ. ಬೇಗ! 42 00:01:51,529 --> 00:01:52,363 -ನಡಿ! -ಮ್ಯಾಟ್! 43 00:01:52,446 --> 00:01:54,365 ವೈಟ್ ಟವರಿಗೆ ನಾನೊಂದು ಸಂದೇಶ ಕಳುಹಿಸಬೇಕು. 44 00:01:54,448 --> 00:01:56,325 ಅವರು ಹುಡುಕಬೇಕಾದ ವ್ಯಕ್ತಿ ಇದ್ದಾನೆ. 45 00:01:56,408 --> 00:01:57,493 ಮ್ಯಾಟ್ ಕೌಥೊನ್. 46 00:01:57,576 --> 00:01:59,703 ಈ ಸಂದೇಶವನ್ನು ನಾನು ಯಾರಿಗೆ ಕಳುಹಿಸಬೇಕು? 47 00:01:59,787 --> 00:02:00,955 ರೆಡ್ ಅಜಾಗೆ. 48 00:02:01,038 --> 00:02:02,623 ಮೊರೇನ್ ನಮ್ಮ ಬಂಧವ ಮುಚ್ಚಿಟ್ಟಳು. 49 00:02:03,457 --> 00:02:04,291 ರಾಂಡ್. 50 00:02:05,793 --> 00:02:08,044 ನಿನ್ನ ವಿಧಿಯಿಂದ ತಪ್ಪಿಸಿಕೊಳ್ಳಲಾರೆ. 51 00:02:08,127 --> 00:02:10,047 ನೀನೇ ಡ್ರ್ಯಾಗನ್ ರೀಬಾರ್ನ್. 52 00:02:10,130 --> 00:02:13,300 ಅವನು ಇಲ್ಲೇ ಮಧ್ಯದಲ್ಲಿ ಇದ್ದ. 53 00:02:13,384 --> 00:02:14,552 ಎಗ್ವೀನ್? 54 00:02:15,594 --> 00:02:17,638 ನಾನು ಅನುಭವಿಸಿದೆ, ಆ ಹುಚ್ಚನ್ನು. 55 00:02:17,721 --> 00:02:18,764 ನಾನಿಲ್ಲಿ ಸತ್ತೆನೆಂದು ಹೇಳು. 56 00:02:18,848 --> 00:02:20,641 ನಾನು ಮರಳಲಿಲ್ಲ ಎಂದು ಅವರಿಗೆ ತಿಳಿಸು. 57 00:02:20,724 --> 00:02:21,559 ರಾಂಡ್ ಎಲ್ಲಿ? 58 00:02:21,642 --> 00:02:22,768 ಅವನು ಹೋದ. 59 00:02:24,645 --> 00:02:26,105 ಬಂಧವನ್ನು ಬಿಚ್ಚಿಡು. 60 00:02:27,565 --> 00:02:29,066 ನಾನು ಸೋರ್ಸನ್ನು ಮುಟ್ಟಲಾರೆ. 61 00:02:31,068 --> 00:02:32,069 ಇದು ಕ್ಯೂಂಡಿಲರ್. 62 00:02:32,152 --> 00:02:34,196 ಹೃದಯದ ಕಲ್ಲಿನ ಮೇಲೆ ಗೀಚಲಾಗದು ಅಂದುಕೊಂಡಿದ್ದೆ. 63 00:02:35,239 --> 00:02:37,031 ಒನ್ ಪವರ್ ಸಹ ಅದನ್ನು ಒಡೆಯಲಾಗದು ಅಂತ. 64 00:02:37,658 --> 00:02:38,534 ನಾನೂ ಅಷ್ಟೇ. 65 00:02:38,617 --> 00:02:39,660 ಅದರ ಅರ್ಥ ಏನು? 66 00:02:39,743 --> 00:02:41,203 ಇದು ಲಾಸ್ಟ್ ಬ್ಯಾಟಲ್ ಆಗಿರಲಿಲ್ಲ ಅಂತ. 67 00:02:43,204 --> 00:02:44,874 ಇದು ಮೊದಲನೆಯದು ಅಂತ ನನ್ನ ಭಯ. 68 00:04:00,199 --> 00:04:03,160 ಜಗತ್ತಿನಲ್ಲಿ ಈಗ ಒಬ್ಬ ಅಸ್ತಿತ್ವದಲ್ಲಿದ್ದಾನೆ. 69 00:04:03,702 --> 00:04:08,415 ಹಿಂದೆ ಇದ್ದವನು ಮತ್ತು ಮುಂದೆ ಆಗುವನು, ಆದರೆ ಇನ್ನೂ ಡ್ರ್ಯಾಗನ್ ಆಗದವನು. 70 00:04:09,375 --> 00:04:10,876 ರಾಂಡ್ ಅಲ್'ಥೋರ್. 71 00:04:11,502 --> 00:04:15,255 ಐ ಆಫ್ ದಿ ವರ್ಲ್ಡಲ್ಲಿ ನನ್ನನ್ನು ಬಿಡುಗಡೆಗೊಳಿಸಿ ತಾನು ಅವಿತುಕೊಳ್ಳಬಹುದು ಅಂದುಕೊಂಡಿದ್ದಾನೆ. 72 00:04:16,048 --> 00:04:17,298 ಅವನಿಂದಾಗದು. 73 00:04:17,382 --> 00:04:18,759 ನಾವು ಅವನನ್ನು ಕೊಲ್ಲಬೇಕೇ? 74 00:04:18,841 --> 00:04:21,011 ಬಹುಶಃ ನಾನು ಅವನನ್ನು ಬಳಸಿಕೊಳ್ಳಬಹುದು. 75 00:04:22,471 --> 00:04:24,223 ಈಗಲೋ ಆಗಲೋ, ಹಾಗೆಯೇ ಆಗುತ್ತೆ. 76 00:04:25,057 --> 00:04:26,684 ಈ ಯುಗ ಅಥವಾ ಮತ್ತೊಂದು ಯುಗದಲ್ಲಿ. 77 00:04:26,767 --> 00:04:27,643 ಅಮ್ಮ! 78 00:04:28,936 --> 00:04:29,770 ಇಲ್ನೋಡು. 79 00:04:31,230 --> 00:04:33,190 ನಾವೊಂದು ಸಭೆಯ ನಡುವೆ ಇದ್ದೇವೆ. 80 00:04:33,983 --> 00:04:35,484 ತುಂಬಾ ಮುಖ್ಯವಾದದ್ದು, ನಿಜವಾಗಲೂ. 81 00:04:39,405 --> 00:04:42,491 ನಾನು ಊಹಿಸುವೆ. ಹೊರಗಡೆ ಏನಾದರೂ ಇದೆಯೇ? 82 00:04:44,493 --> 00:04:45,995 ರಾಕ್ಷಸ ಇರಬಹುದೇ? 83 00:04:50,082 --> 00:04:51,000 ಬಾ. 84 00:04:55,337 --> 00:04:57,965 ಬಹಳ ಮಂದಿ ನನ್ನನ್ನು ಕೂಡ ರಾಕ್ಷಸ ಎನ್ನುತ್ತಾರೆ, ಗೊತ್ತಾ, 85 00:04:59,383 --> 00:05:02,177 ಜೊತೆಗೆ ಹಿಡಿಸದ ಹೆಸರುಗಳ ಮರುಕಳಿಸುವ ಒಂದು ಪಟ್ಟಿಯೇ ಇದೆ. 86 00:05:03,053 --> 00:05:04,596 ಫಾದರ್ ಆಫ್ ಲೈಸ್. 87 00:05:04,930 --> 00:05:06,140 ಬಿಟ್ರೇಯರ್ ಆಫ್ ಹೋಪ್. 88 00:05:06,640 --> 00:05:07,641 ಫಾರ್ಸೇಕನ್. 89 00:05:08,851 --> 00:05:12,521 ನನ್ನನ್ನು ಮತ್ತು ಇತರ ಆಯ್ಕೆಗೊಂಡವರನ್ನು ಕೆಟ್ಟ ನಾಮಗಳಿಂದ ಏಕೆ ಕರೆಯುತ್ತಾರೆ ಗೊತ್ತೇ? 90 00:05:12,604 --> 00:05:13,772 ಇಲ್ಲ. 91 00:05:13,856 --> 00:05:16,150 ನನ್ನ ನಿಜ ಸ್ವರೂಪದಂತೆ ಅವರು ನನ್ನನ್ನು ಕರೆದರೆ, 92 00:05:16,233 --> 00:05:17,484 ಯಾರಿಗೂ ಭಯ ಇರುವುದಿಲ್ಲ. 93 00:05:27,119 --> 00:05:29,955 ಏನೇ ಆದರೂ, ನೀನು ರಾಕ್ಷಸನಲ್ಲ ಎಂದು ಹೇಗೆ ಸಾಬೀತುಪಡಿಸುವುದು? 94 00:05:30,581 --> 00:05:34,251 ನಿನ್ನ ಕೆಲಸಗಳು ಒಳ್ಳೆಯವೇ ಅಥವಾ ಕೆಟ್ಟವೇ ಎಂದು ಹೇಗೆ ಸಾಬೀತುಪಡಿಸುವುದು? 95 00:05:35,044 --> 00:05:36,211 ಸರಿಯೇ ಅಥವಾ ತಪ್ಪೇ? 96 00:05:38,422 --> 00:05:39,840 ಈ ಜೀವಿಯನ್ನು ನೋಡು. 97 00:05:41,133 --> 00:05:42,092 ಅರ್ಧ ಮಾನವ, 98 00:05:43,010 --> 00:05:44,261 ಅರ್ಧ ಮೃಗ. 99 00:05:45,220 --> 00:05:47,598 ಮಧ್ಯದಲ್ಲಿರುವುದು ತುಂಬಾನೇ ಕಷ್ಟ. 100 00:05:51,935 --> 00:05:53,395 ಆದರೆ ಅವನು ದುಷ್ಟನಲ್ಲದಿದ್ದರೆ? 101 00:05:54,438 --> 00:05:55,814 ಅವನ ತಪ್ಪೇ ಇಲ್ಲದಿದ್ದರೆ? 102 00:05:57,483 --> 00:05:59,693 ಅವನು ಕೇವಲ… ಹಸಿದಿರುವವನಾದರೆ? 103 00:06:04,573 --> 00:06:05,574 ನನ್ನನ್ನು ನೋಡು. 104 00:06:07,701 --> 00:06:09,620 ನಾನು ನಿನಗೆ ರಾಕ್ಷಸನಂತೆ ಕಾಣುವೆನಾ? 105 00:06:12,748 --> 00:06:13,624 ಇಲ್ಲ. 106 00:06:16,877 --> 00:06:18,295 ನೀನು ನನಗೆ ಇಷ್ಟ ಅಂತ ಗೊತ್ತಿತ್ತು. 107 00:06:26,970 --> 00:06:27,888 ನೋಡಿದೆಯಾ? 108 00:06:28,680 --> 00:06:29,598 ಪರವಾಗಿಲ್ಲ. 109 00:06:31,100 --> 00:06:32,643 ಮಾಡು, ನೀನು ಪ್ರಯತ್ನಿಸು. 110 00:06:55,207 --> 00:07:00,295 ದ ವೀಲ್ ಆಫ್ ಟೈಮ್ 111 00:10:46,229 --> 00:10:47,397 ತಡವಾಗಿ ಬಂದಿರುವೆ. 112 00:10:47,898 --> 00:10:51,026 ವೆರಿನ್, ನೀನು ಅಷ್ಟು ಜೋರಾಗಿ ಮಾತನಾಡಬೇಕಾ? 113 00:10:51,109 --> 00:10:52,235 ನಿನಗಿನ್ನೂ ಮತ್ತು ಇಳಿದಿಲ್ವಾ? 114 00:10:52,861 --> 00:10:55,405 ನಾನು ಸಂಪೂರ್ಣ ಸಹಜವಾದ ದನಿಯಲ್ಲೇ ಮಾತನಾಡುತ್ತಿರುವೆ. 115 00:10:55,489 --> 00:10:57,741 ಸ್ವಲ್ಪ ಎಡಕ್ಕೆ ಜರುಗುವೆಯಾ? 116 00:10:58,241 --> 00:10:59,117 ಸರಿಯಾಗಿದೆ. 117 00:11:01,745 --> 00:11:03,038 ಲಾನ್! 118 00:11:03,705 --> 00:11:05,999 ನೋಡು, ಇಂದು ಎಷ್ಟು ಬೆಚ್ಚಗಿದೆ. 119 00:11:06,083 --> 00:11:10,587 ಅಷ್ಟು ಭಾರದ ಉಣ್ಣೆಯ ಉಡುಪುಗಳನ್ನು ಧರಿಸಿ ಕತ್ತಿ ಬೀಸುವುದು ನಿನಗೆ ಸಹಿಸಲಸಾಧ್ಯವಿರಬಹುದು. 120 00:11:11,963 --> 00:11:13,006 ಒಬ್ಬ ಸವಾರ ಬರುತ್ತಿದ್ದಾನೆ. 121 00:11:13,590 --> 00:11:16,093 ಅವಳ ಇನ್ನೊಬ್ಬ ಭೇಟಿಗಾರನೇ, ಹಾಂ? 122 00:11:16,176 --> 00:11:17,052 ಇರಬಹುದು. 123 00:11:18,053 --> 00:11:19,096 ಅದು 20. 124 00:11:20,138 --> 00:11:23,767 ಈಗಲೂ ಅವರು ಯಾರು, ಮತ್ತು ಏನು ಸುದ್ದಿ ತಂದಿರುವರು ಎಂದು ಮೊರೇನ್ ಹೇಳಿಲ್ಲವೇ? 125 00:11:23,850 --> 00:11:24,893 ನನ್ನೆಡೆ ನೋಡಬೇಡಿ. 126 00:11:25,560 --> 00:11:27,938 ನಿಮಗೆ ಹೇಳುವುದಕ್ಕಿಂತ ಹೆಚ್ಚಾಗಿ ನನಗೆ ಏನನ್ನೂ ಹೇಳುವುದಿಲ್ಲ. 127 00:11:40,784 --> 00:11:41,910 ಇನ್ನೊಬ್ಬ ಭೇಟಿಗಾರ. 128 00:11:41,993 --> 00:11:43,078 ನಿನಗಾಗಿ ಬಂದಿರುವನು. 129 00:11:43,161 --> 00:11:44,121 ಒಳಗೆ ಕಳುಹಿಸು. 130 00:11:46,540 --> 00:11:48,083 ಇವನು ಇಲ್ಲಿಯನಿನವನು. 131 00:11:49,000 --> 00:11:50,085 ಒಳಗೆ ಕಳುಹಿಸು. 132 00:12:00,137 --> 00:12:01,221 ಮೊರೇನ್ ಸೆಡಾಯ್. 133 00:12:02,514 --> 00:12:03,348 ಬನ್ನಿ. 134 00:12:04,224 --> 00:12:05,058 ಕೂರಿ. 135 00:12:05,142 --> 00:12:07,727 ನನ್ನ ಗ್ರಾಹಕರಾದವರು ನನ್ನ ಬಳಿಯೇ ಬರುತ್ತಾರೆ, 136 00:12:07,811 --> 00:12:09,146 ನಾನು ಅವರ ಬಳಿ ಹೋಗುವುದಲ್ಲ. 137 00:12:09,229 --> 00:12:11,231 ಅದರಲ್ಲೂ ಒಳ್ಳೆಯ ಬಂದರಿನಿಂದ ಇಷ್ಟು ದೂರದಲ್ಲಿ. 138 00:12:11,314 --> 00:12:12,691 ಆದರೂ, ಇಲ್ಲಿಗೆ ಬಂದಿದ್ದೀರಿ. 139 00:12:12,774 --> 00:12:14,776 ನನಗೆ ಹೆಚ್ಚಿನ ಆಯ್ಕೆ ಇರಲಿಲ್ಲ, ಅಲ್ಲವೇ? 140 00:12:14,860 --> 00:12:17,237 ಎಲ್ಲರಿಗೂ ಆಯ್ಕೆ ಇದೆ, ಗುರು ಡೊಮನ್. 141 00:12:18,321 --> 00:12:20,407 ಮತ್ತು ಪ್ರತಿ ಆಯ್ಕೆಗೂ ಪರಿಣಾಮ ಇರುತ್ತೆ. 142 00:12:22,200 --> 00:12:23,034 ಬಾಗಿಲು. 143 00:12:29,458 --> 00:12:34,546 ಈಗ, ನಿಮ್ಮ ಪೀಠಿಕೆ ಮುಗಿದಿದ್ದರೆ, ಕೆಲಸದ ಮೇಲೆ ಗಮನ ಹರಿಸೋಣ. 144 00:13:33,021 --> 00:13:33,939 ಎಗ್ವೀನ್. 145 00:14:28,785 --> 00:14:29,744 ನಗಬೇಡ. 146 00:14:33,665 --> 00:14:35,917 ಅಮಿರ್ಲಿನ್ ಮರಳಿ ಬಂದರೇ? ಆಕೆಯೊಂದಿಗೆ ಮಾತನಾಡಿದೆಯಾ? 147 00:14:37,544 --> 00:14:38,378 ಇಲ್ಲ. 148 00:14:39,754 --> 00:14:43,508 ನಾವು ಇಲ್ಲಿಗೆ ಮೊದಲ ಬಾರಿ ಬಂದಾಗ, ಚಕ್ರವೇ ನಮ್ಮನ್ನು ಕರೆಸಿಕೊಂಡಿತು ಎಂದು ಹೇಳಿದಳು, 149 00:14:43,592 --> 00:14:46,553 ಬುಕ್ ಆಫ್ ನೋವಿಸೆಸ್ ಸಹಿ ಮಾಡಿದ ನಂತರ ನಾವು ಮಾಡಿರುವುದು ಶುಚಿಗೊಳಿಸುವುದು. 150 00:14:46,636 --> 00:14:49,180 ನವಶಿಷ್ಯೆ ಆಗಿರುವುದು ಒಂದು ರೀತಿಯ ವಿಧಿವಿಧಾನ. 151 00:14:49,264 --> 00:14:52,350 ಪ್ರತಿಯೊಬ್ಬ ಅಯಿಸ್ ಸೆಡಾಯ್ ಸಹ ಮಾಡಿದ್ದಾರೆ, ಅಮಿರ್ಲಿನ್ ಸಹ. 152 00:14:53,893 --> 00:14:55,645 ಅದು ವ್ಯಕ್ತಿತ್ವವನ್ನು ನಿರ್ಮಿಸುತ್ತದೆ. 153 00:14:56,938 --> 00:14:58,106 ನನ್ನಲ್ಲಿ ಬೇಕಾದಷ್ಟಿದೆ. 154 00:14:59,316 --> 00:15:00,609 ಮೇಜನ್ನು ಶುಭ್ರಗೊಳಿಸಿ. 155 00:15:06,072 --> 00:15:07,198 ಬಾಲ್ದಿ ಅಲ್ಲೇ ಇಡು. 156 00:15:09,367 --> 00:15:11,911 ಒನ್ ಪವರಿನ ಐದು ಎಳೆಗಳೆಂದರೆ ಯಾವುವು? 157 00:15:13,330 --> 00:15:16,291 ಏರ್, ಅರ್ಥ್, ಫೈರ್, 158 00:15:17,500 --> 00:15:19,419 ಸ್ಪಿರಿಟ್, ಮತ್ತು ವಾಟರ್. 159 00:15:19,502 --> 00:15:20,420 ಒಳ್ಳೆಯದು. 160 00:15:20,503 --> 00:15:22,005 ಈ ಎಳೆಗಳನ್ನು ನೀವು ಮುಟ್ಟಿದಾಗ, 161 00:15:22,088 --> 00:15:25,008 ಜಗತ್ತಿನ ಅಂಶಗಳನ್ನೇ ನೀವು ತಾಕುವಿರಿ. 162 00:15:25,091 --> 00:15:26,384 ಇಂದಿನ ಅಂತ್ಯದ ಒಳಗೆ, 163 00:15:26,468 --> 00:15:29,804 ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಲೋಟಗಳಿಂದ ನೀರು ಕುಡಿಯುವಿರಿ. 164 00:15:31,973 --> 00:15:36,978 ಈ ನೇಯ್ಗೆಯನ್ನು ಕರಗತ ಮಾಡಿಕೊಳ್ಳುವರು ಮಾಡಿಕೊಳ್ಳದವರಿಗಿಂತ ಹೆಚ್ಚು ಆನಂದಿಸುವಿರಿ. 165 00:15:38,396 --> 00:15:39,606 ಈಗ, ನೋಡಿ. 166 00:15:40,815 --> 00:15:43,485 ನಿಮ್ಮ ಬಲಗೈಯಿಂದ ಭೂಮಿಯ ಎಳೆಗಳನ್ನು ಎಳೆಯಿರಿ, 167 00:15:43,568 --> 00:15:47,030 ಸ್ವತಃ ಈ ಟವರಿನ ಕಲ್ಲುಗಳಿಂದಲೇ. 168 00:15:47,113 --> 00:15:48,490 ಮತ್ತು ನಿಮ್ಮ ಎಡಗೈಯಿಂದ, 169 00:15:48,573 --> 00:15:51,868 ಗಾಳಿಯಲ್ಲಿನ ನೀರಿನಂಶ ಅಥವಾ ನಿಮ್ಮ ಮುಂದಿರುವ ಲೋಟದೊಳಗಿನ 170 00:15:51,951 --> 00:15:54,037 ನೀರಿನಿಂದ ನೀರಿನ ಎಳೆಗಳನ್ನು ಎಳೆಯಿರಿ. 171 00:15:54,579 --> 00:15:57,957 ಈಗ, ಅವುಗಳನ್ನು ಒಟ್ಟಾಗಿ ಬೆಸೆಯಿರಿ. 172 00:16:03,672 --> 00:16:05,256 ಈಗ, ನಿಮ್ಮ ಲೋಟವನ್ನು ಎತ್ತಿಕೊಳ್ಳಿ. 173 00:16:06,466 --> 00:16:08,093 ನಿಮ್ಮ ನೇಯ್ಗೆಯ ಮೂಲಕ ಸುರಿಯಿರಿ. 174 00:16:25,276 --> 00:16:26,319 ನಿಮ್ಮ ಸರತಿ. 175 00:16:27,987 --> 00:16:29,739 ನೀರನ್ನು ಪರಿಪೂರ್ಣವಾಗಿ ಶುದ್ಧಗೊಳಿಸಲು 176 00:16:29,823 --> 00:16:31,950 ನೀವು ಬಹಳ ಸಲ ಪ್ರಯತ್ನಿಸಬೇಕಾಗಬಹುದು, 177 00:16:34,536 --> 00:16:36,371 ಆದರೆ ನೀವು ಸುಧಾರಿಸುವಿರಿ. 178 00:16:39,290 --> 00:16:43,044 ನಿನ್ನಲ್ಲಿ ಎರಡು ಸಮರ್ಥ ಕೈಗಳಿವೆ. ಅವನ್ನು ಬಳಸಿದರೆ ಸುಲಭವಾಗಬಹುದು. 179 00:16:43,128 --> 00:16:44,838 ನಾನಿಲ್ಲಿ ಸುಲಭಕ್ಕಾಗಿ ಬರಲಿಲ್ಲ. 180 00:16:49,259 --> 00:16:50,969 ನಿನ್ನ ಕಣ್ಣುಗಳೇಕೆ ತೆರೆದಿವೆ? 181 00:16:51,052 --> 00:16:53,513 ನೀನು ಸೋರ್ಸನ್ನು ಕೂಡ ಅಂಗೀಕರಿಸಿಲ್ಲ. 182 00:16:54,097 --> 00:16:56,516 ನೀವು ನನ್ನೆಡೆ ಬಗ್ಗಿ ನೋಡುವಾಗ ನನಗೆ ಗೊತ್ತಾಗಲೆಂದು. 183 00:16:59,602 --> 00:17:03,314 ನಿನ್ನ ಸುಪ್ತಪಟಲದಲ್ಲಿ ಹೂವಿನ ಮೊಗ್ಗನ್ನು ಊಹಿಸಿಕೋ. 184 00:17:05,108 --> 00:17:06,358 ಅದು ಗುಲಾಬಿ ರಂಗಿನದು. 185 00:17:09,069 --> 00:17:11,448 -ಅದು ಪೂರಕವಾಗಿದೆ, ತಯಾರಾಗಿ-- -ಅದು ಕೆಲಸ ಮಾಡುತ್ತಿಲ್ಲ. 186 00:17:11,531 --> 00:17:13,742 -ಮತ್ತೊಮ್ಮೆ ಪ್ರಯತ್ನಿಸು. -ಮತ್ತೊಮ್ಮೆ ಪ್ರಯತ್ನಿಸಿದೆ. 187 00:17:18,747 --> 00:17:22,125 ಫಾಲ್ ದಾರಾದಲ್ಲಿ ನೀವಿಬ್ಬರೂ ನಿಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಂಡಿರಿ. 188 00:17:22,208 --> 00:17:26,378 ಲೇಡಿ ಅಮಲಿಸಾ ನಿಮ್ಮ ಶಕ್ತಿಯನ್ನು ಬಳಸಿ ಒಂದಿಡೀ ಟ್ರಾಲಕ್ ಸೇನೆಯನ್ನು 189 00:17:26,463 --> 00:17:27,547 ನೆಲಸಮಗೊಳಿಸಿದಳು. 190 00:17:27,630 --> 00:17:30,216 ಆಕೆಯದನ್ನಲ್ಲ, ನಿಮ್ಮದು. 191 00:17:30,884 --> 00:17:32,635 ನೀವಾಗಿಯೇ ಅದನ್ನು ಮಾಡಲು ಕಲಿಯಲು 192 00:17:32,719 --> 00:17:35,513 ಬಹಳ ವರ್ಷಗಳ ಶ್ರಮ ಬೇಕಾಗುತ್ತದೆ, ಆದರೆ ನೀವು ಮಾಡಬಲ್ಲಿರಿ. 193 00:17:37,223 --> 00:17:38,975 ಯಾರಿಗೂ ಅಷ್ಟೆಲ್ಲಾ ಶಕ್ತಿ ಇರಬಾರದು. 194 00:17:39,058 --> 00:17:41,352 ನೀವು ಏನಾಗಿದ್ದೀರಿ ಎಂಬುದನ್ನು ಒಪ್ಪಿಕೊಳ್ಳಬಹುದು, 195 00:17:41,436 --> 00:17:42,520 ಅಥವಾ ಭೀತಿಗೊಳ್ಳಬಹುದು. 196 00:17:43,188 --> 00:17:46,316 ಎಗ್ವೀನ್ ಬಲಶಾಲಿ, ಎಷ್ಟೋ ಮಂದಿಗಿಂತ ಬಲಶಾಲಿ, 197 00:17:46,399 --> 00:17:47,525 ಆದರೆ ನೀನು, 198 00:17:47,609 --> 00:17:50,278 ನಿನ್ನಲ್ಲಿ ಆ ಶಕ್ತಿಯ ಹತ್ತು ಪಟ್ಟು ಇದೆ, ನೈನೀವ್. 199 00:17:50,361 --> 00:17:52,155 ಅದು ನಿನಗೆ ಬೇಕಿರಲಿ, ಬೇಡದಿರಲಿ. 200 00:17:53,281 --> 00:17:56,785 ಈ ಟವರಿಗೆ ಬಂದು ಐದು ತಿಂಗಳಾದರೂ ನೀನು ಆವಾಹನೆ ಮಾಡಿಲ್ಲ, 201 00:17:56,868 --> 00:17:57,994 ಒಮ್ಮೆಯೂ ಇಲ್ಲ. 202 00:17:59,204 --> 00:18:02,707 ನಿನ್ನನ್ನು ಅದೇನೇ ತಡೆ ಹಿಡಿದಿದ್ದರೂ, ಅದನ್ನು ಒಡೆಯುವ ಸಮಯ ಈಗ ಬಂದಿದೆ. 203 00:18:04,834 --> 00:18:07,962 ಲೋಟದಿಂದ ನೀರು ಕುಡಿಯದೆ ಇಂದು ಯಾರೂ ಹೋಗುವಂತಿಲ್ಲ. 204 00:18:09,297 --> 00:18:10,548 ಈಗ, ನಿನ್ನ ಕಣ್ಣುಗಳನ್ನು ಮುಚ್ಚು. 205 00:18:15,678 --> 00:18:16,930 ನಿನ್ನ ಕಣ್ಣುಗಳನ್ನು ಮುಚ್ಚು. 206 00:18:38,493 --> 00:18:40,495 ಅದು ಶುದ್ಧವಾಗಿರಬೇಕೆಂದು ನೀವು ಹೇಳಲಿಲ್ಲ. 207 00:18:49,295 --> 00:18:50,463 ಎಗ್ವೀನ್ ಅಲ್'ವೀರ್. 208 00:18:51,089 --> 00:18:52,382 ಅವಳು ಹೇಗೆ ನಿಭಾಯಿಸುತ್ತಿದ್ದಾಳೆ? 209 00:18:52,465 --> 00:18:55,552 ಅವಳು ಸ್ವಲ್ಪ… ನಿರಾಳಗೊಳ್ಳಬೇಕು. 210 00:18:56,261 --> 00:18:58,221 ನೈನೀವ್ ಅಲ್'ಮಯಿರಾ, ಆದರೆ... 211 00:18:58,763 --> 00:18:59,889 ಇನ್ನೂ ತಡೆದಿರುವಳೇ? 212 00:18:59,973 --> 00:19:03,601 ಟವರಿಗೆ ಬಂದಾಗಿನಿಂದ ಅವಳು ಆವಾಹಿಸಿಲ್ಲ. 213 00:19:03,685 --> 00:19:05,812 ಆಕೆಗೆ ಸಮರ್ಥ ಶಿಕ್ಷಕಿಯ ಅವಶ್ಯಕತೆ ಇರಬಹುದು. 214 00:19:08,231 --> 00:19:09,524 ನಾವೆಲ್ಲರೂ ಪ್ರಯತ್ನಿಸಿದ್ದೇವೆ. 215 00:19:10,775 --> 00:19:11,901 ನನ್ನನ್ನು ಕ್ಷಮಿಸಿ, 216 00:19:12,819 --> 00:19:15,613 ನಮ್ಮಲ್ಲಿ ಸ್ಪಷ್ಟವಾಗಿ ನಿಷೇಧಿಸಲ್ಪಟ್ಟವರೆಲ್ಲ ಅಲ್ಲ. 217 00:19:16,948 --> 00:19:21,578 ನಮ್ಮ ಮಿಸ್ಟ್ರೆಸ್ಸ್ ಆಫ್ ನೋವಿಸೆಸ್ ಬಹುಶಃ ಈ ಬಾರಿ ಇದರಲ್ಲಿ ರಿಯಾಯಿತಿ ಕೊಡಬಹುದೇನೋ. 218 00:19:21,661 --> 00:19:23,621 ನಿನ್ನ ಪರಿವೀಕ್ಷಣೆಯಡಿ ಒಬ್ಬ ನವಶಿಷ್ಯೆಯ ಸಾವಾಯಿತು. 219 00:19:25,456 --> 00:19:27,959 ಒನ್ ಪವರ್ ಅಪಾಯಕಾರಿ, ಅದನ್ನು ಬಳಸುವುದು ಅಪಾಯಕಾರಿ. 220 00:19:28,042 --> 00:19:29,294 ಯಾವುದೇ ನಷ್ಟವಾದರೂ ಹೆಚ್ಚೇ. 221 00:19:30,879 --> 00:19:32,630 ಈ ಟವರ್ ಯಾವಾಗಲೂ ತುಂಬಿರುತ್ತಿತ್ತು. 222 00:19:34,173 --> 00:19:37,302 ವರ್ಷಗಳು ಕಳೆದಂತೆ, ಕಡಿಮೆ ಹುಡುಗಿಯರು ಬರುತ್ತಿದ್ದಾರೆ, ಶಕ್ತಿಯೂ ಕಡಿಮೆ. 223 00:19:37,385 --> 00:19:39,596 ಆದರೂ ನಮ್ಮ ಸುತ್ತಲಿನ ಪ್ರಪಂಚ ತಳಮಳಿಸುತ್ತಿದೆ. 224 00:19:42,348 --> 00:19:44,767 ದಿ ಹಂಟ್ ಫಾರ್ ದಿ ಹಾರ್ನ್ ಆಫ್ ವಲೀರ್ ಇಲ್ಲಿಯನನ್ನು ಕರೆಸಿತು, 225 00:19:44,851 --> 00:19:46,311 ಅರಫೆಲ್ ಮೇಲೆ ಟ್ರಾಲಕ್ ದಾಳಿಯಾಯಿತು, 226 00:19:46,394 --> 00:19:49,397 ಮತ್ತು ಸಲ್ದೆಯಲ್ಲಿ ಫಾಲ್ಸ್ ಡ್ರ್ಯಾಗನ್ ಒಬ್ಬ ತನ್ನನ್ನು ಘೋಷಿಸಿಕೊಂಡಿದ್ದಾನೆ. 227 00:19:49,480 --> 00:19:52,317 ಅವನು ಲೋಗೈನಿಗಿಂತ ಹೆಚ್ಚು ಶಕ್ತಿಶಾಲಿ ಎಂದು ಹೇಳುತ್ತಾರೆ. 228 00:19:52,400 --> 00:19:53,526 ನೀವು ಅದನ್ನು ಅನುಭವಿಸಬಹುದು. 229 00:19:54,402 --> 00:19:57,155 ಏನೋ ಬರುತ್ತಿದೆ, ಮತ್ತು ನಾವದಕ್ಕೆ ತಯಾರಾಗಿಲ್ಲ. 230 00:19:58,698 --> 00:20:00,700 ಸಾವಿರ ವರ್ಷಗಳಲ್ಲೇ ಡಾರ್ಕ್ ವಿರುದ್ಧ 231 00:20:00,783 --> 00:20:03,411 ನಮಗೆ ಸಿಕ್ಕಂಥ ಅತ್ಯಂತ ಶಕ್ತಿಶಾಲಿ ಆಯುಧ ಎಂದರೆ ನೈನೀವ್. 232 00:20:04,954 --> 00:20:06,789 ನಾನಾದರೂ ಅವಳ ಬಳಿ ಮಾತನಾಡುವೆ. 233 00:20:11,628 --> 00:20:12,587 ಮಾತು. 234 00:20:12,670 --> 00:20:13,630 ಅಷ್ಟೇ. 235 00:20:13,713 --> 00:20:15,673 ಈಗ ಇಲ್ಲಿಂದ ಹೊರಡಿ, ನೀವೆಲ್ಲರೂ. 236 00:20:17,133 --> 00:20:18,801 ಇದು ತಪ್ಪು, ಸಹೋದರಿ. 237 00:20:23,056 --> 00:20:24,599 ಈಗ, ಅಲನಾ, 238 00:20:25,433 --> 00:20:27,352 ಮಾತನಾಡುವುದರಿಂದ ಯಾರಿಗೇನು ತೊಂದರೆಯಾಗಿದೆ? 239 00:20:39,948 --> 00:20:41,699 ಕುದುರೆಗಳಿಗೆ ತಡಿ ಹಾಕುತ್ತಿದ್ದಾರೆ. 240 00:20:42,533 --> 00:20:43,743 ಈಗಲೇ ಬರುವೆ. 241 00:20:46,537 --> 00:20:49,499 ಒಡತಿಯರಾದ ಅಲ್'ಮಯಿರಾ ಮತ್ತು ಅಲ್'ವೀರರಿಗೆ ಇನ್ನೊಂದು ಪತ್ರವೇ? 242 00:20:53,378 --> 00:20:55,380 ನನಗಿರುವುದೆಲ್ಲಾ ನೈನೀವ್ ಮತ್ತು ಎಗ್ವೀನ್ ಮಾತ್ರ. 243 00:20:56,130 --> 00:20:57,256 ಈಗ ರಾಂಡ್... 244 00:21:01,052 --> 00:21:02,178 ಹೋದ ಮೇಲೆ. 245 00:21:04,263 --> 00:21:05,723 ಮ್ಯಾಟ್ ಎಲ್ಲಿದ್ದಾನೋ ಯಾರಿಗೆ ಗೊತ್ತು? 246 00:21:07,892 --> 00:21:10,061 ತವರಿನಲ್ಲಿ ಅವನ ಬಗ್ಗೆ ಕೇಳುತ್ತಿರುತ್ತೇನೆ, ಆದರೆ… 247 00:21:14,107 --> 00:21:15,358 ಬಾ, 248 00:21:16,067 --> 00:21:18,945 ದಿ ಹಂಟ್ ಫಾರ್ ದಿ ಹಾರ್ನ್ ಆಫ್ ವಲೀರ್ ಕಾಯುತ್ತಿದೆ. 249 00:21:20,655 --> 00:21:23,825 ಲಾರ್ಡ್ ಇಂಗ್ಟರ್ ನೇಮಿಸಿದ ಹೊಸ ಪತ್ತೇದಾರ ಸನ್ನೆಯ ಬೆಂಕಿ ಹಾಕಿದ್ದಾನೆ. 250 00:21:24,283 --> 00:21:25,535 ಅವನಿಗೆ ಏನೋ ದೊರಕಿದೆ. 251 00:21:26,869 --> 00:21:27,996 ಉನೋಗೆ ಇದು ಸಂತಸ ತರಲ್ಲ. 252 00:22:03,239 --> 00:22:04,699 ದೊಡ್ಡ ಪತ್ತೇದಾರನಂತೆ. 253 00:22:05,283 --> 00:22:06,826 ಅವನು ಹಾಕಿದ ಸನ್ನೆಯ ಬೆಂಕಿಯಿಂದ 254 00:22:06,909 --> 00:22:10,788 ಪಡನ್ ಫೈನ್ ಮತ್ತು ಅವನ ಡಾರ್ಕ್ ಫ್ರೆಂಡ್ಸ್ ನಮ್ಮನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. 255 00:22:11,914 --> 00:22:14,459 ಈ ಹೊಸ ಪತ್ತೇದಾರನ ಬಗ್ಗೆ ನನಗೆ ತಿಳಿದಿರುವುದು ಕಡಿಮೆ, 256 00:22:14,542 --> 00:22:17,670 ಲಾರ್ಡ್ ಇಂಗ್ಟರ್ ನೇಮಿಸಿದ ಈ ಮೂಸುಗ, 257 00:22:17,754 --> 00:22:21,758 ಆದರೆ ಆತ ನಿಮ್ಮ ಮುಂದೆ ಏನೇನೂ ಅಲ್ಲ, ಗುರು ನೋಮೆಸ್ಟಾ. 258 00:22:21,841 --> 00:22:24,343 ಫೈನನ ಸುಳಿವು ಕಂಡು ವಾರಗಳೇ ಕಳೆದಿದ್ದರೂ, 259 00:22:24,427 --> 00:22:28,139 ಯಾವಾಗಲೂ ಹೊಸದೊಂದು ಅನ್ವೇಷಣೆ ಸಿಗುವಂತೆಯೇ ಅನಿಸುತ್ತಿರುತ್ತದೆ. 260 00:22:28,222 --> 00:22:29,557 ಕಿಚಾಯಿಸುತ್ತಿರುವೆಯಾ? 261 00:22:30,516 --> 00:22:32,560 ಇಲ್ಲ, ಗೆಳೆಯ, ಆತ ಎಂದಿಗೂ ಮಾಡುವವನಲ್ಲ. 262 00:22:33,686 --> 00:22:37,356 ವಾಚ್ ಹಿಲ್ಲಲ್ಲಿ ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಬಗ್ಗೆ ಮತ್ತೊಮ್ಮೆ ಹೇಳು. 263 00:22:37,440 --> 00:22:39,650 ಪಡನ್ ಫೈನಿಗೆ ಎಷ್ಟು ಹತ್ತಿರ ಇದ್ದೆನೆಂದರೆ, 264 00:22:40,318 --> 00:22:43,321 ಅವನ ಕುಲಗೆಟ್ಟ ಕುಂಡಿಯ ವಾಸನೆ ಬಡಿಯುತ್ತಿತ್ತು. 265 00:22:43,404 --> 00:22:45,948 ಹಾಲು ಕುಡಿದ ಹಸುಗಳ ಹಿಂಡಿನಂತೆ ನೀವು ಹೊಳೆಯಲ್ಲಿ 266 00:22:46,032 --> 00:22:47,909 ನೀರನ್ನು ಎರಚಾಡದೆ ಇದ್ದಿದ್ದರೆ, 267 00:22:47,992 --> 00:22:50,828 ಇಷ್ಟೊತ್ತಿಗೆ ಅವನ ಹೆಣವನ್ನು ಒಲೆಯ ಮೇಲೆ 268 00:22:50,912 --> 00:22:54,373 ಬೇಯಿಸುತ್ತಾ ವಲೀರಿನ ಕಹಳೆಯಲ್ಲಿ ರಾಗವನ್ನು ನುಡಿಸುತ್ತಿದ್ದೆ. 269 00:22:55,666 --> 00:22:57,794 ನೀನು ಕಿಚಾಯಿಸುತ್ತಿರುವೆ. 270 00:22:57,877 --> 00:23:00,671 -ಮರ್ಯಾದೆ ಇಲ್ಲದ ಮುಂಡೆಮಕ್ಕಳು-- -ಉನೋ. 271 00:23:11,224 --> 00:23:12,308 ಇಲಿಯಾಸ್. 272 00:23:13,184 --> 00:23:15,603 ಫೈನ್ ಮತ್ತು ಅವನ ಡಾರ್ಕ್ ಫ್ರೆಂಡ್ಸ್ 273 00:23:15,686 --> 00:23:19,190 ನಮ್ಮ ಮೇಲೆ ದಾಳಿ ಮಾಡುವ ಮುನ್ನ ಆ ಸನ್ನೆಯ ಬೆಂಕಿಯನ್ನು ಆರಿಸುವೆಯಾ? 274 00:23:20,483 --> 00:23:21,651 ಬೆಂಕಿ ನಾನು ಹಾಕಿದ್ದಲ್ಲ. 275 00:23:29,617 --> 00:23:30,535 ಹೀಗೆ ಬನ್ನಿ. 276 00:23:48,427 --> 00:23:50,805 ಕ್ರಿಯೇಟರ್ ನ ಹಸ್ತದಲ್ಲಿ ಅವರು ಆಶ್ರಯ ಪಡೆಯಲಿ. 277 00:24:11,409 --> 00:24:14,078 ಒಂದು ಮಗು ತಪ್ಪಿಸಿಕೊಂಡಿತು. 278 00:24:37,059 --> 00:24:39,103 ನಾಯಿಯು ಅವಳನ್ನು ಕಾಪಾಡಲು ಯತ್ನಿಸಿತ್ತು. 279 00:24:39,896 --> 00:24:42,064 ಫೈನನ ಡಾರ್ಕ್ ಫ್ರೆಂಡ್ಸಲ್ಲೊಬ್ಬರು. 280 00:24:42,148 --> 00:24:44,317 ಶೈನಾರನ್ ಅಂತ ಕಾಣುತ್ತೆ. 281 00:24:45,610 --> 00:24:49,322 ಫೈನನ್ನು ಫಾಲ್ ದಾರಾಗೆ ಕಳುಹಿಸಲು ನೆರವಾದವರಲ್ಲಿ ಅವನೂ ಒಬ್ಬನಿರಬಹುದು. 282 00:24:49,405 --> 00:24:51,741 ಆಗಿನಿಂದ ಇವನೊಂದಿಗೆ ಪಯಣಿಸುತ್ತಿದ್ದಾನೆ. 283 00:24:53,576 --> 00:24:55,244 -ಮೋಸಗಾರ. -ಇನ್ನು ಸಾಕು! 284 00:24:57,246 --> 00:25:00,499 ಕೊಲೆಯಾದವರನ್ನು ಹೂತು ಬೆಳಿಗ್ಗೆ ಹಿಂಬಾಲಿಸಿ ಹೋಗೋಣ. 285 00:25:12,511 --> 00:25:15,014 ಇದು ಬ್ರೇಕಿಂಗಿಗಿಂತ ಹಿಂದಿನದು ಎಂದು ಖಚಿತವಾಗಿ ಹೇಳುವಿರಾ? 286 00:25:17,308 --> 00:25:20,269 ಸೀ ಫೋಕ್ ಜೊತೆ ಚೌಕಾಸಿ ಮಾಡುವುದರಲ್ಲೇ ಸುಮಾರು ಸಮಯ ಕಳೆದಿದ್ದೇನೆ. 287 00:25:21,479 --> 00:25:23,397 ಮತ್ತು ಅವರು ಈ ಆಟದಲ್ಲಿ ನಿಸ್ಸೀಮರು. 288 00:25:23,898 --> 00:25:25,733 ನಿನಗೆ ಅದರಲ್ಲಿ ಯಾವುದೇ ಆಸಕ್ತಿ ಇಲ್ಲ. 289 00:25:26,734 --> 00:25:28,569 ನಿನಗೆ ಬೇಕಿರುವುದು ಹೃದಯದ ಕಲ್ಲು. 290 00:25:38,371 --> 00:25:41,958 ಕ್ಯೂಂಡಿಲರಿನ ತುಂಡುಗಳು ಅಪರೂಪವೇ, ಹೌದು, ಆದರೆ ನನಗೆ ಇದೇ ಬೇಕೆಂದು ಏಕೆ ಅಂದುಕೊಳ್ಳುವಿರಿ? 291 00:25:42,416 --> 00:25:43,501 ಇದು ಮುರಿದಿದೆ. 292 00:25:44,210 --> 00:25:45,378 ಮತ್ತು? 293 00:25:45,461 --> 00:25:48,005 ಇದನ್ನು ಸಾಕ್ಷಾತ್ ಒನ್ ಪವರಿಂದಲೇ ತಯಾರಿಸಲಾಗಿದೆ. 294 00:25:49,423 --> 00:25:50,883 ಮತ್ತು ನಿನಗೆ ನನಗೆ ಇಬ್ಬರಿಗೂ ಗೊತ್ತು, 295 00:25:52,301 --> 00:25:54,136 ಇದರಲ್ಲಿ ಒಂದು ಸೂಚಿಸುವ ಗುಣ ಇದೆ ಎಂದು. 296 00:25:56,597 --> 00:25:57,765 ಇದು ಮುರಿಯಲಾರದ್ದು. 297 00:26:11,612 --> 00:26:13,281 ಬಂಧವು ಎಲ್ಲವನ್ನೂ ಸುಲಭಗೊಳಿಸಿತ್ತು. 298 00:26:14,115 --> 00:26:17,159 ಅದು ಸ್ನೇಹಿತನಂತೆ, ನಮ್ಮೊಂದಿಗೆಯೇ ನಡೆಯುವುದು, 299 00:26:17,243 --> 00:26:19,453 ನಾವು ಮಾತನಾಡದಿರಲು ಅದೇ ಮಾತನಾಡುವುದು. 300 00:26:19,870 --> 00:26:23,582 ಅವಳಿಗೆ ದಣಿದಿದೆ, ಅವಳಿಗೆ ಹಸಿವಾಗಿದೆ, ಅವಳು ಕೋಪಗೊಂಡಿದ್ದಾಳೆ, ಅವಳು ಭೀತಳಾಗಿದ್ದಾಳೆ. 301 00:26:27,336 --> 00:26:28,504 ಮತ್ತು ಈಗ ಮೌನ. 302 00:26:30,298 --> 00:26:33,426 ಸ್ವಲ್ಪವೇ ಮೌನಕ್ಕೆ ಹೆದರುವ ವ್ಯಕ್ತಿಯಂತೆ ನೀನು ನನಗೆ ಕಂಡುಬರುವುದಿಲ್ಲ. 303 00:26:42,560 --> 00:26:43,686 ಅವಳಿಗೆ ನಾನು ಹೊರಡಬೇಕು. 304 00:26:45,855 --> 00:26:46,814 ನೀನು ಹೊರಡಬಹುದು. 305 00:26:47,690 --> 00:26:49,483 ಅಯಿಸ್ ಸೆಡಾಯಿಗೆ ತನ್ನ ವಾರ್ಡರ್ ಬೇಕು. 306 00:26:50,609 --> 00:26:52,278 ಅಡೆಲಿಯಸ್ ಯಾರೂ ಇಲ್ಲದೆ ನಿಭಾಯಿಸುತ್ತಾಳೆ. 307 00:26:52,361 --> 00:26:53,738 ಆಕೆಗೆ ನೀವಿದ್ದೀರಿ. 308 00:26:54,572 --> 00:26:56,032 ಮೊರೇನ್ ಸಹ ಅಷ್ಟೇ, 309 00:26:56,907 --> 00:26:58,034 ಅವಳಿಗೆ ನಾನು ಬೇಕಿದ್ದರೆ. 310 00:27:06,834 --> 00:27:07,710 ನಾನು ಹೊರಡುವುದಿಲ್ಲ. 311 00:27:08,669 --> 00:27:09,754 ನಿನ್ನಿಷ್ಟದಂತೆ ಮಾಡು. 312 00:27:14,216 --> 00:27:16,552 ನೀನು ಸಹ ಅವಳಂತೆಯೇ ಹಠಮಾರಿ. 313 00:27:21,057 --> 00:27:22,016 ಬಹುತೇಕವಾಗಿ. 314 00:27:25,436 --> 00:27:27,438 ಇದು ನಿಮ್ಮ ಅಧೀನಕ್ಕೆ ಯಾವಾಗ ಬಂತು? 315 00:27:27,521 --> 00:27:28,856 ಒಂದೆರಡು ತಿಂಗಳ ಹಿಂದೆ. 316 00:27:29,774 --> 00:27:32,193 -ಎಲ್ಲಿ? -ಕೈರ್ ಹಿನ್ ಹೊರಗೆ. 317 00:27:32,276 --> 00:27:34,820 ಅಲ್ಲಿದ್ದ ಚಂದ್ರನ ಗಡಿಯಾರ ಈ ವಸಂತ ಕಾಲದ ರಾತ್ರಿಯಂದು ಒಡೆಯಿತು. 318 00:27:40,910 --> 00:27:42,870 ನನ್ನ ಹಿಂಬಾಲಿಸಲು ಜನರನ್ನು ಕಳಿಸಿರುವೆ, ಗೊತ್ತು. 319 00:27:44,455 --> 00:27:47,750 ನನಗೂ ಅವರು ಹೋಗಬೇಕು. ಬೇಡದ ಸಹಚರರು ನನಗೆ ಹಿಡಿಸಲ್ಲ. 320 00:27:47,833 --> 00:27:49,668 ನಿಮ್ಮ ಶತ್ರುಗಳು ನಿಮ್ಮವರೇ. 321 00:27:51,045 --> 00:27:52,922 ಇದರ ಮೇಲೆ ಏನೋ ಬರೆದಂತಿದೆ. 322 00:27:53,005 --> 00:27:53,839 ಹೌದು. 323 00:27:55,091 --> 00:27:58,302 ಹಳೆಯ ಗಡಿಯಾರ ಸಿಕ್ಕಿದಾಗ ಅದರ ಮೇಲೆ ಪದ್ಯ ಬರೆದಿತ್ತಂತೆ. 324 00:27:58,386 --> 00:27:59,720 ರಕ್ತದಲ್ಲಿ ಬರೆದಿದ್ದರಂತೆ. 325 00:28:01,013 --> 00:28:02,056 ಓಲ್ಡ್ ಟಂಗ್. 326 00:28:03,265 --> 00:28:04,934 ನನ್ನ ಬಳಿ ಅದರ ಒಂದು ನಕಲು ಪ್ರತಿ ಇದೆ, 327 00:28:05,810 --> 00:28:07,103 ನಿನಗೆ ಆಸಕ್ತಿ ಇದ್ದರೆ. 328 00:28:10,314 --> 00:28:12,149 ಒಳ್ಳೆಯ ಕವನಗಳೆಂದರೆ ನನಗೆ ಯಾವಾಗಲೂ ಇಷ್ಟ. 329 00:28:13,275 --> 00:28:14,151 ಇಲ್ಲ. 330 00:28:14,819 --> 00:28:16,904 ಕೇಳಿದ ಪ್ರಶ್ನೆಗಳು ಬೇಕಾದಷ್ಟಾದವು. 331 00:28:16,987 --> 00:28:18,697 50 ಕಾಸಿಗೆ ನೀನು ಹೃದಯದ ಕಲ್ಲನ್ನು 332 00:28:19,698 --> 00:28:20,908 ಪಡೆಯಬಹುದು. 333 00:28:21,826 --> 00:28:25,538 ಕವನಕ್ಕೆ, ಅಂದರೆ, ಇನ್ನೂ ಐದು ಹೆಚ್ಚು ಬೇಕಾಗಬಹುದು. 334 00:28:25,621 --> 00:28:26,455 ಐದೇ? 335 00:28:27,623 --> 00:28:28,749 ಒಂದು ಕವನಕ್ಕೆ? 336 00:28:29,792 --> 00:28:31,752 ಅದಕ್ಕೆ ಉತ್ತಮ ದೊಮನಿಯ ಓಟದ ಕುದುರೆ ಸಿಗುತ್ತೆ. 337 00:28:31,836 --> 00:28:33,129 ಹೌದು. ನಿಜವೇ. 338 00:28:36,382 --> 00:28:39,927 ಹಾಗಿದ್ದರೆ ಕವನಕ್ಕೆ ಒಂದು ಕಾಸು, ಆದರೆ ಹೃದಯದ ಕಲ್ಲಿಗೆ ನಾನು ರಾಜಿ ಆಗುವುದಿಲ್ಲ. 339 00:28:40,010 --> 00:28:43,431 ಐವತ್ತು ಕಾಸು ಕೊಡು, ಇಲ್ಲದಿದ್ದರೆ ಇಲ್ಲಿಂದ ಅದರೊಂದಿಗೆ ಹೊರಡುತ್ತೇನೆ. 340 00:29:08,539 --> 00:29:09,707 ಇದಷ್ಟೇ ನನಗೆ ಬೇಕಿರುವುದು. 341 00:29:15,421 --> 00:29:18,716 -ನಿಮ್ಮ ಸಮಯ ಮತ್ತು ಪ್ರಯಾಣಕ್ಕಾಗಿ ಧನ್ಯವಾದ. -ಆದರೆ ಹೃದಯದ ಕಲ್ಲು-- 342 00:29:18,799 --> 00:29:22,636 ಆಟದಲ್ಲಿ ಸೀ ಫೋಕ್ ನಿಸ್ಸೀಮರಿರಬಹುದು, ಆದರೆ ಅದನ್ನು ಸೃಷ್ಟಿಸಿದ್ದು ಅಯಿಸ್ ಸೆಡಾಯ್. 343 00:29:24,221 --> 00:29:26,140 ಅವರಿಗೆ ಅವಮಾನ ಮಾಡುವಾಗ ಜಾಗ್ರತೆ ಇರಲಿ. 344 00:29:38,152 --> 00:29:39,778 ನನಗಿದು ಆಗಬೇಕಿತ್ತು, ಅನ್ಸುತ್ತೆ. 345 00:29:45,117 --> 00:29:48,454 ನಿನ್ನನ್ನು ಹಿಂಬಾಲಿಸುತ್ತಿರುವ ಈ ಜನ, ಅವರು ನೋಡಲು ಹೇಗಿದ್ದಾರೆ? 346 00:29:48,537 --> 00:29:50,581 ಅವರನ್ನು ದೂರದಿಂದಷ್ಟೇ ಕಂಡೆ. 347 00:29:51,248 --> 00:29:54,084 ಒಮ್ಮೆ ವೈಟ್ ಬ್ರಿಜ್ಜಿನ ಬಂದರಿನಿಂದ ನಾವು ಹೊರಟಾಗ, 348 00:29:54,168 --> 00:29:56,462 ಕಪ್ಪು ಮೇಲಂಗಿ ತೊಟ್ಟ ಇಬ್ಬರು ಕುದುರೆಗಳ ಮೇಲಿದ್ದರು. 349 00:29:56,545 --> 00:29:58,005 ಅವರ ಮುಖಗಳನ್ನು ಕಂಡೆಯಾ? 350 00:29:59,215 --> 00:30:01,634 ಇಲ್ಲ. ಅವರ ತಲೆಗವಸಿನಿಂದ ಮುಚ್ಚಿತ್ತು. 351 00:30:02,843 --> 00:30:05,262 ನಿನ್ನ ದೋಣಿಗೆ ಹಿಂತಿರುಗು. ಈಗಲೇ. 352 00:30:05,846 --> 00:30:07,848 ಇಲ್ಲಿಯನ್ ಬಳಿ ಕೊಂಡೊಯ್ಯಿ, ನಿಲ್ಲಬೇಡ, 353 00:30:07,932 --> 00:30:09,308 ಮತ್ತೆ ಸಮುದ್ರದ ಕಡೆಗೆ ಹೊರಡು. 354 00:30:09,391 --> 00:30:12,061 ಪೂರ್ವಕ್ಕಾಗಲಿ ಪಶ್ಚಿಮಕ್ಕಾಗಲಿ ಎಷ್ಟೇ ದೂರವಾಗಲಿ, ಆದಷ್ಟು ಬೇಗ ಸಾಗು. 355 00:30:12,144 --> 00:30:15,940 -ಸ್ಪ್ರೇ ಒಂದು ನದಿಯ ದೋಣಿ-- -ಆಳವಿಲ್ಲದ ಕಡೆ ಇರು, ಆದರೆ ಹೋಗು, ಈಗಲೇ. 356 00:30:16,774 --> 00:30:18,776 ನಿನ್ನ ಖರ್ಚುಗಳಿಗೆ ಹತ್ತು ಕಾಸು ಇಲ್ಲಿದೆ. 357 00:30:23,822 --> 00:30:27,660 -ನನ್ನನ್ನು ಯಾವುದರಲ್ಲಿ ಸಿಲುಕಿಸಿರುವೆ? -ದಿ ವೀಲ್ ವೀವ್ಸ್ ಆಸ್ ದಿ ವೀಲ್ ವಿಲ್ಸ್. 358 00:30:29,828 --> 00:30:31,372 ಬೆಳಕು ನಿನ್ನೊಂದಿಗಿರಲಿ. 359 00:31:03,988 --> 00:31:06,365 ಮರದ ಕತ್ತಿಗಳನ್ನೇ ಉಪಯೋಗಿಸಬೇಕಿತ್ತೆಂದು ಗೊತ್ತಿತ್ತು. 360 00:31:06,448 --> 00:31:07,950 ಯಾಕೆ? ಚೆನ್ನಾಗಿ ಮಾಡಿದಳು. 361 00:31:08,033 --> 00:31:09,118 ಇನ್ನೇನು ಸೋಲಿಸಿದ್ದೆ. 362 00:31:09,201 --> 00:31:10,119 ಜಾಗ್ರತೆ, 363 00:31:10,202 --> 00:31:12,955 ಅಯಿಸ್ ಸೆಡಾಯ್ ಆಗೋಕೂ ಮುಂಚೆ ಒಬ್ಬರೊಂದಿಗೆ ಬಂಧವಾಗಬೇಕಾಗುತ್ತದೆ. 364 00:31:13,038 --> 00:31:15,124 ನಾನು ಅಯಿಸ್ ಸೆಡಾಯ್ ಆಗುವ ಯಾವುದೇ ಅಪಾಯದಲ್ಲಿಲ್ಲ. 365 00:31:15,833 --> 00:31:18,377 ಇಂದಿನ ತರಗತಿ ಅಂದುಕೊಂಡಂತೆ ನಡೆಯಲಿಲ್ಲ ಅಂದುಕೊಳ್ಳುವೆ? 366 00:31:20,421 --> 00:31:22,590 ಅವಳೆಂದರೆ ನಿಮಗಿಷ್ಟ ಅಂತ ಗೊತ್ತು, ಆದರೆ ಅಲನಾ ನಿಜವಾಗಿ-- 367 00:31:22,673 --> 00:31:24,633 ಅಲನಾ ಸೆಡಾಯ್ ನಿನಗೆ. 368 00:31:27,720 --> 00:31:29,263 ಅವಳ ಬಗ್ಗೆ ಅಲ್ಲ, ಅದು… 369 00:31:31,640 --> 00:31:32,975 ಈ ಇಡೀ ಜಾಗದ ಬಗ್ಗೆ. 370 00:31:34,268 --> 00:31:35,102 ನನಗೆ ಗೊತ್ತಿಲ್ಲ. 371 00:31:38,314 --> 00:31:41,984 ವಾರ್ಡರ್ ತರಬೇತಿಯ ಮೊದಲ ತಿಂಗಳಲ್ಲಿ, ಒಬ್ಬರೇ ಹತ್ತು ಗಂಡಸರೊಂದಿಗೆ ಹೋರಾಡಲು ಬಿಡುತ್ತಾರೆ. 372 00:31:42,568 --> 00:31:44,528 ಸಾಮಾನ್ಯವಾಗಿ ಒಂದು ಏಟು, 373 00:31:45,237 --> 00:31:48,657 ಅಥವಾ ಎರಡು ಏಟು ಹಾಕಲು ಆಗುತ್ತದೆ, ಸಾವಿಗೆ ಸಮೀಪವಾಗಿ ಹೊಡೆಸಿಕೊಳ್ಳುವಾಗ. 374 00:31:48,741 --> 00:31:51,285 ಆದರೆ ಒಂದು ಮಾತ್ರ ನಿನ್ನನ್ನು ಮುನ್ನಡೆಸುತ್ತದೆ. 375 00:31:52,494 --> 00:31:55,331 ನಿನ್ನನ್ನು ಇಲ್ಲಿಗೆ ಕರೆತಂದ ಕಾರಣವೇ ಅದು. 376 00:31:55,914 --> 00:31:56,749 ಅದು ಯಾವುದು? 377 00:31:57,333 --> 00:31:58,500 ಎಲ್ಲರಿಗೂ ವಿವಿಧವಾದದ್ದು. 378 00:31:59,293 --> 00:32:00,461 ನಿಮಗದು ಯಾವುದು? 379 00:32:00,544 --> 00:32:02,296 ಒಬ್ಬ ವಾರ್ಡರ್ ಮೇಲೆ ಪ್ರೀತಿಯಾಯಿತು. 380 00:32:03,339 --> 00:32:04,173 ಮತ್ತು ನಿಮಗೆ? 381 00:32:04,840 --> 00:32:06,675 ಒಬ್ಬ ಅಯಿಸ್ ಸೆಡಾಯ್ ಮೇಲೆ ಪ್ರೀತಿಯಾಯಿತು. 382 00:32:06,759 --> 00:32:09,386 ನನಗೆ ಯಾವಾಗಲೂ ಮೂರನೆಯ ಚಕ್ರದಂತೆ ಭಾಸವಾಗಿಸುವೆ ನೀನು. 383 00:32:14,725 --> 00:32:16,685 ನಿಮ್ಮ ತರಬೇತಿಯ ಕಾಲದಲ್ಲಿ ಪ್ರತಿಯೊಬ್ಬರಿಗೂ 384 00:32:16,769 --> 00:32:18,896 ವಿಶೇಷ ಚಿತ್ರಹಿಂಸೆಗಳನ್ನು ಅಯಿಸ್ ಸೆಡಾಯ್ ಆಯೋಜಿಸುವರು, 385 00:32:18,979 --> 00:32:23,233 ಆದರೆ, ಒಂದು ನೆನಪಿರಲಿ, ಇದರ ಉದ್ದೇಶ ಮಾತ್ರ ಒಂದೇ. 386 00:32:25,235 --> 00:32:29,531 ನೀನು ತುಂಬಾನೇ ಸಮಯ ಉಳಿಸಿ ನೋವಿನಿಂದ ಪಾರಾಗಬಹುದು… 387 00:32:31,241 --> 00:32:35,120 ನೀನು ಆ ಒಂದು ಸರಳ ಪ್ರಶ್ನೆಗೆ ಉತ್ತರಿಸಲಾದರೆ. 388 00:32:37,164 --> 00:32:38,457 ಇಲ್ಲಿಗೆ ಯಾಕೆ ಬಂದೆ? 389 00:32:47,174 --> 00:32:48,175 ಎಗ್ವೀನ್? 390 00:32:50,678 --> 00:32:51,637 ಎಗ್ವೀನ್? 391 00:32:58,227 --> 00:32:59,103 ಒಳಗೆ ಬನ್ನಿ. 392 00:33:00,562 --> 00:33:02,731 ಬಟ್ಟೆ ಉಡಲು ನಿಮಗೆ ಸ್ವಲ್ಪ ಸಮಯ ಬೇಕೇ? 393 00:33:02,815 --> 00:33:04,108 ಒಳಗೆ ಬಾ ಅಂದೆ. 394 00:33:28,882 --> 00:33:29,842 ಹಸಿವಾಗಿದೆಯೇ? 395 00:33:30,759 --> 00:33:31,760 ಇಲ್ಲ, ಧನ್ಯವಾದ. 396 00:33:32,970 --> 00:33:35,806 ಇಂದು ಬೆಳಿಗ್ಗೆ ನಡೆದಿದ್ದರ ಬಗ್ಗೆ ನಿಮ್ಮೊಂದಿಗೆ ಮಾತನಾಡಬೇಕಿತ್ತು. 397 00:33:37,141 --> 00:33:38,851 ಎರಡು ವಿಚಾರ ಒಮ್ಮೆಲೇ ಎತ್ತಿಕೊಳ್ಳುವುದು. 398 00:33:39,393 --> 00:33:42,020 ನಾನೇನೇ ಮಾಡಿದರೂ, ಅದು ತುಂಬಾ… 399 00:33:43,522 --> 00:33:44,940 ಗೋಜಲಾಗುತ್ತದೆ. 400 00:33:45,023 --> 00:33:48,777 ನಾನು ಮೊದಲಿಗೆ ಪ್ರಯೋಗ ಶುರು ಮಾಡಿದಾಗ, 401 00:33:49,278 --> 00:33:53,532 ನನ್ನ ಗಮನವನ್ನು ಇಬ್ಭಾಗ ಮಾಡುವುದು ತುಂಬಾ ಕಷ್ಟವಾಗುತ್ತಿತ್ತು. 402 00:33:53,615 --> 00:33:56,660 ನೀನು ಆರಾಮವಾಗಿರಬೇಕು, 403 00:33:57,995 --> 00:34:00,497 ಮತ್ತು ನಿರೀಕ್ಷೆಗಳೆಲ್ಲವನ್ನೂ ದೂರ ಮಾಡಬೇಕು. 404 00:34:01,373 --> 00:34:03,125 ನಮಗೆ ಒಬ್ಬರೇ ಜೊತೆಗಾರ ಅಭ್ಯಾಸ ಆಗಿದ್ದರೆ, 405 00:34:03,208 --> 00:34:06,587 ಇಬ್ಬರಿಗೆ ತೆರೆದುಕೊಳ್ಳುವುದು ತುಂಬಾನೇ ಕಷ್ಟವಾಗಬಹುದು. 406 00:34:08,839 --> 00:34:10,424 -"ಜೊತೆಗಾರ"? -ನನ್ನ ಸಲಹೆ… 407 00:34:12,009 --> 00:34:14,094 ನಿನ್ನ ಸುಖದ ಮೇಲೆ ಮಾತ್ರ ಗಮನಹರಿಸು. 408 00:34:15,012 --> 00:34:17,097 ಅದು ಚೆನ್ನಾಗಿ ಅನಿಸಲು ಶುರುವಾದಾಗ, 409 00:34:17,181 --> 00:34:19,183 ಆ ಅನುಭವವನ್ನೇ ಅನುಸರಿಸು. 410 00:34:21,226 --> 00:34:25,063 ಅದು ನಿನ್ನ ಆಳದಲ್ಲಿ ಅರಳಲಿ-- 411 00:34:25,147 --> 00:34:27,815 ಕ್ಷಮಿಸಿ, ನೀವು ನನ್ನನ್ನು ಅಪಾರ್ಥ ಮಾಡಿಕೊಂಡಿರಬಹುದು. 412 00:34:27,900 --> 00:34:29,485 ನಾನು ಮಾತನಾಡುತ್ತಿದ್ದದ್ದು… 413 00:34:30,819 --> 00:34:32,237 ತರಗತಿಯ ನೇಯ್ಗೆಯ ಬಗ್ಗೆ? 414 00:34:32,321 --> 00:34:35,114 ಒಮ್ಮೆಲೇ ಭೂಮಿಯ ಎಳೆಗಳು ಮತ್ತು ನೀರಿನ ಎಳೆಗಳ ಮೇಲೆ 415 00:34:35,199 --> 00:34:37,451 ಗಮನ ಹರಿಸುವುದು 416 00:34:37,534 --> 00:34:38,827 ನನಗೆ ಕಷ್ಟ. 417 00:34:40,871 --> 00:34:44,416 ಹಾಗಿದ್ದ ಪಕ್ಷ, ನೀನು ಸಮೂಹ ರಾಶಿಯ ಬದಲು ಒಂಟಿ ಮಣ್ಣಿನ ಕಣಗಳ ಮೇಲೆ 418 00:34:44,500 --> 00:34:46,335 ಮಾತ್ರ ಗಮನಹರಿಸುತ್ತಿರಬಹುದು. 419 00:34:46,418 --> 00:34:49,713 ಎರಡರ ಬದಲಾಗಿ ನೂರಾರು ನೇಯ್ಗೆಗಳನ್ನು ಬಳಸಲು ಪ್ರಯತ್ನಿಸುತ್ತಿರುವೆ. 420 00:34:49,797 --> 00:34:50,839 ಈಗ ಅರ್ಥವಾಯಿತು. 421 00:34:51,757 --> 00:34:54,676 ತುಂಬಾ ಧನ್ಯವಾದ ನಿಮ್ಮೆಲ್ಲಾ… 422 00:34:55,969 --> 00:34:56,844 ಸಹಾಯಕ್ಕಾಗಿ. 423 00:34:57,387 --> 00:34:58,388 ಎಗ್ವೀನ್? 424 00:35:01,517 --> 00:35:04,478 ನೆನಪಿಡು, ಎಲ್ಲವೂ ಪರಿಪೂರ್ಣವಾಗುವ ಮೊದಲು ಗೋಜಲುಮಯವಾಗಿಯೇ ಇರುತ್ತವೆ. 425 00:35:06,647 --> 00:35:09,983 ಮೌಲ್ಯ ಇರುವ ಯಾವುದೂ ಶುಭ್ರ ಮತ್ತು ಚೊಕ್ಕವಾಗಿರುವುದಿಲ್ಲ. 426 00:35:30,420 --> 00:35:32,047 ಇಲ್ಲೇನು ಮಾಡುತ್ತಿರುವೆ? 427 00:35:33,966 --> 00:35:36,343 ನಿನ್ನನ್ನು ಗಮನಿಸುತ್ತಿರುವೆ, ಗೊತ್ತೇನು. 428 00:35:36,426 --> 00:35:38,095 ನೇರವಾಗಿ ಹೇಳಬೇಕೆಂದರೆ, 429 00:35:39,012 --> 00:35:41,306 ನೀನು ತುಂಬಾ ನಿರಾಶಾದಾಯಕವಾಗಿರುವೆ. 430 00:35:42,850 --> 00:35:44,810 ಕತ್ತಿಗಳೊಂದಿಗೆ ನಿನ್ನ ಸಮಯ ಪೋಲು ಮಾಡುತ್ತಿರುವೆ. 431 00:35:44,893 --> 00:35:45,894 ಅದು ನಿನಗೆ ತಕ್ಕುದಲ್ಲ. 432 00:35:46,562 --> 00:35:48,772 ನಿಮ್ಮೆಲ್ಲಾ ಸಹೋದರಿಯರಿಗಿಂತ ವಾರ್ಡರ್ಗಳು ನನಗೆ ಎಲ್ಲವನ್ನೂ 433 00:35:48,856 --> 00:35:50,315 ಐದು ತಿಂಗಳಲ್ಲೇ ಕಲಿಸಿಕೊಟ್ಟಿದ್ದಾರೆ. 434 00:35:50,399 --> 00:35:52,276 ಕತ್ತಿಗಳು ದುರ್ಬಲರಿಗೆ. ಗಂಡಸರಿಗೆ. 435 00:35:53,026 --> 00:35:54,945 ಒಬ್ಬ ಗಂಡಸು ನನ್ನಡೆ ಕತ್ತಿ ಹೊತ್ತು ಬಂದರೆ, 436 00:35:55,863 --> 00:35:57,531 ಇನ್ನೊಂದು ಕತ್ತಿಯೊಂದಿಗೆ ಎದುರಿಸಬಲ್ಲೆ… 437 00:36:00,075 --> 00:36:01,785 ಗಾಳಿಯಿಂದ ತಯಾರಾದದ್ದು. 438 00:36:01,869 --> 00:36:05,998 ಎಷ್ಟೋ ಉಕ್ಕಿನ ಕತ್ತಿಗಳಿಗಿಂತ ಮಿಗಿಲು, ಆದರೂ, ಇನ್ನೂ, ಅಷ್ಟೆಲ್ಲಾ ಪ್ರಯೋಜನ ಇಲ್ಲ. 439 00:36:06,790 --> 00:36:09,877 ಯಾಕೆಂದರೆ ಈಗ ನಾನು ಕೈಗಳಿಂದಲೇ ಹೋರಾಡಬೇಕು, 440 00:36:10,377 --> 00:36:11,628 ನನ್ನ ಶಕ್ತಿಯನ್ನು ಕಳೆದುಕೊಂಡು, 441 00:36:12,421 --> 00:36:14,298 ನನ್ನನ್ನು ಅಸಹಾಯಕ ಸ್ಥಿತಿಗೆ ದೂಡಿಕೊಳ್ಳಬೇಕು. 442 00:36:17,718 --> 00:36:19,553 ಇದು ನ್ಯಾಯಯುತ ಕಾಳಗ ಆಗುವುದು ನನಗೆ ಬೇಕಿಲ್ಲ. 443 00:36:22,639 --> 00:36:23,724 ನಾನು ಗೆಲ್ಲಬೇಕು. 444 00:36:32,941 --> 00:36:34,443 ನನ್ನನ್ನು ಬಿಡು! 445 00:36:34,526 --> 00:36:37,237 ರೆಡ್ಸ್ ಜೊತೆ ವಾರ್ಡರ್ಗಳು ಯಾಕಿರುವುದಿಲ್ಲ ಎಂದು ನೀನು ಕೇಳಿದ್ದೆ. 446 00:36:38,697 --> 00:36:40,532 ಏಕೆಂದರೆ ಅವರೊಂದು ವ್ಯಾಕುಲತೆ. 447 00:36:41,575 --> 00:36:42,534 ದೌರ್ಬಲ್ಯ. 448 00:36:43,410 --> 00:36:45,037 ನಮ್ಮನ್ನು ನಾವು ರಕ್ಷಿಸಿಕೊಳ್ಳಬಲ್ಲೆವು. 449 00:36:46,204 --> 00:36:49,124 ವಾರ್ಡರ್ಗಳು ತಮ್ಮ ಸಹೋದರಿಯರ ಪಾದಗಳ ಬಳಿ ಬಿದ್ದಿದ್ದು, 450 00:36:50,250 --> 00:36:51,960 ಅವರನ್ನು ಹೊಗಳುತ್ತಾ, 451 00:36:52,044 --> 00:36:54,922 ಅವರ ಅಹಂಕಾರವನ್ನು ಉಬ್ಬಿಸುವ ವೈಭವೀಕರಿಸಿದ ನಾಯಿಗಳಷ್ಟೇ. 452 00:36:55,422 --> 00:36:57,716 ಮತ್ತು ತುಂಬಾ ನಿಯತ್ತಿನ ವಾರ್ಡರ್ಗಳು, 453 00:36:57,799 --> 00:36:59,426 ನಿನ್ನ ಅಮೂಲ್ಯ ಲಾನ್ನಂತೆ, 454 00:37:00,761 --> 00:37:05,015 ಸಾಧಾರಣವಾಗಿ ಯಾವುದಾದರೂ ಕಾಳಗದಲ್ಲಿ ಹೆಸರಿಲ್ಲದೆ ಸತ್ತು, ತನ್ನ ಅಯಿಸ್ ಸೆಡಾಯ್ ಸಹ ಅವನನ್ನು 455 00:37:05,098 --> 00:37:07,476 -ಮರೆತು ಮತ್ತೊಬ್ಬನೊಂದಿಗೆ ಬಂಧಗೊಳ್ಳುತ್ತಾಳೆ. -ಸಾಕು! 456 00:37:09,811 --> 00:37:11,021 ಇಲ್ಲಿದ್ದಾಳೆ ನೋಡು. 457 00:37:14,566 --> 00:37:18,070 ಆ ನೇಯ್ಗೆಯನ್ನು ಒಮ್ಮೆ ಮಾತ್ರ ನೋಡಿದಷ್ಟರಲ್ಲೇ ಅದನ್ನು ನೀನು ಮರುಸೃಷ್ಟಿಸಿದೆ. 458 00:37:18,153 --> 00:37:20,238 ಈಗ ನೀನು ನನ್ನನ್ನು ಹೋಗಲು ಬಿಡದಿದ್ದರೆ… 459 00:37:24,826 --> 00:37:27,704 -ನನಗೇನು ಮಾಡಿದೆ ನೀನು? -ಸೋರ್ಸಿನಿಂದ ನಿನ್ನನ್ನು ಕಾಪಾಡಿದೆ. 460 00:37:29,456 --> 00:37:32,209 ಈಗಲೂ ಅನುಭವಿಸಬಲ್ಲೆ, ಆದರೆ ಅದನ್ನು ಮುಟ್ಟಲಾರೆ, ಅಲ್ಲವೇ? 461 00:37:35,045 --> 00:37:36,380 ಅದು ನಿನಗೆ ಕೋಪ ತರಿಸುತ್ತಿದೆ. 462 00:37:38,715 --> 00:37:39,841 ಆ ಕೋಪವನ್ನು ಬಳಸಿಕೋ. 463 00:37:41,718 --> 00:37:45,806 ಆವಾಹನೆ ಮಾಡಲು ಕೇವಲ ಒಂದೇ ಮಾರ್ಗವಿದೆ ಎಂದು ನನ್ನ ಸೋದರಿಯರು ನಿನ್ನನ್ನು ನಂಬಿಸಬಹುದು, 464 00:37:45,889 --> 00:37:48,016 ಅಯಿಸ್ ಸೆಡಾಯ್ ಆಗಲು ಒಂದೇ ಮಾರ್ಗವಿದೆ ಎಂದು. 465 00:37:50,268 --> 00:37:51,395 ಅವರು ತಪ್ಪು ತಿಳಿದಿದ್ದಾರೆ. 466 00:37:52,104 --> 00:37:53,355 ನೀನಿಲ್ಲಿ ಕಲಿಯಲು ಬಂದಿರುವೆ. 467 00:37:53,981 --> 00:37:56,566 ಮರಳಿನ ಬಗ್ಗೆಯಲ್ಲ, ಕತ್ತಿಗಳ ಬಗ್ಗೆ ಅಲ್ಲ, 468 00:37:57,234 --> 00:37:58,610 ಆದರೆ ಶಕ್ತಿಯ ಬಗ್ಗೆ. 469 00:38:00,612 --> 00:38:04,324 ಯಾವುದೇ ಗಂಡಸಾಗಲಿ, ಹೆಂಗಸಾಗಲಿ, ಅದನ್ನು ನಿನ್ನಿಂದ ಎಂದಿಗೂ 470 00:38:05,283 --> 00:38:06,451 ಕಸಿಯಲಾರದಷ್ಟು ಶಕ್ತಿಶಾಲಿ 471 00:38:07,202 --> 00:38:09,830 ನೀನಾಗುವುದನ್ನು ನಾನು ನೋಡಬೇಕು. 472 00:38:13,291 --> 00:38:14,376 ನಾನೂ ಕಸಿಯಲಾರದಂತೆ. 473 00:39:11,475 --> 00:39:13,060 ಅವನಿಗಾಗಿ ಇದನ್ನು ಏಕೆ ಮಾಡುತ್ತಿರುವೆ? 474 00:39:13,560 --> 00:39:16,396 ನಿಮ್ಮೆಲ್ಲರಿಗೂ ಮೋಸ ಬಗೆದನು. ಅವನೊಬ್ಬ ಡಾರ್ಕ್ ಫ್ರೆಂಡ್. 475 00:39:17,022 --> 00:39:19,316 ಪ್ರತಿ ಪುರುಷರಿಗೂ ಸೂಕ್ತ ಅಂತ್ಯಸಂಸ್ಕಾರ ಅವಶ್ಯಕ. 476 00:39:19,399 --> 00:39:22,319 ಉನೋ ಆಗಿದ್ದಿದ್ದರೆ, ಅವನ ಹೆಣವನ್ನು ಹದ್ದುಗಳು ತಿನ್ನಲು ಬಿಡುತ್ತಿದ್ದ. 477 00:39:22,444 --> 00:39:25,072 ಅದಕ್ಕಾಗಿಯೇ ಉನೋ ಅಲ್ಲದೆ ನಾನು ಅಧಿಕಾರದಲ್ಲಿರುವುದು. 478 00:39:27,824 --> 00:39:29,493 ಇದರಿಂದ ನಿನಗೆ ಚಿಂತೆಯೇ? 479 00:39:29,576 --> 00:39:32,079 ನಾನು ಅವನಿಗೆ ತೋರಿಸಿದ ಈ ಸಣ್ಣ ಕರುಣೆಯಿಂದ. 480 00:39:32,162 --> 00:39:37,459 ಆ ವ್ಯಕ್ತಿ ದ್ವಾರಗಳನ್ನು ತೆರೆದಿದ್ದರಿಂದ ಫಾಲ್ ದಾರಾದಲ್ಲಿ ನಿಮ್ಮ ನೂರಾರು ಜನ ಸತ್ತರು. 481 00:39:38,502 --> 00:39:40,170 ಅದರಿಂದ ನಿಮಗೆ ಕೋಪ ಬರುವುದಿಲ್ಲವೇ? 482 00:39:40,629 --> 00:39:42,172 ನಿಮಗೆ ಸೇಡು ಬೇಡವೇ? 483 00:39:42,714 --> 00:39:45,801 ಶೈನಾರನ್ನರು ನಮಗೆ ನಡೆದ ಅನ್ಯಾಯಗಳಿಗೆಲ್ಲಾ ಸೇಡು ತೀರಿಸಿಕೊಳ್ಳಲು ಬಯಸಿದರೆ, 484 00:39:45,884 --> 00:39:48,386 ಬಾರ್ಡರ್ ಲ್ಯಾಂಡ್ಸಲ್ಲಿ ಯಾವುದೇ ಶೈನಾರನ್ನರು ಉಳಿದಿರುವುದಿಲ್ಲ. 485 00:39:49,846 --> 00:39:52,599 ಕೋಪದ ಬಗ್ಗೆ ಹೇಳಬೇಕೆಂದರೆ… 486 00:39:55,102 --> 00:39:57,062 ಏನಂದ್ರೆ, ಅದಂತೂ ನನ್ನವರನ್ನು ಮರಳಿ ಕರೆತರದು. 487 00:39:59,689 --> 00:40:03,693 ಟೂ ರಿವರ್ಸಿನ ಜನ ಪಡನ್ ಫೈನಿಗೆ ಎಷ್ಟೆಲ್ಲಾ ಪ್ರೀತಿ ತೋರಿಸಿದರು. 488 00:40:04,945 --> 00:40:06,530 ಯಾವಾಗಲೂ ನಿಂತು ಮಾತನಾಡುತ್ತಿದ್ದೆವು. 489 00:40:08,323 --> 00:40:11,326 ಅವನಿಗೆ ಕುಡಿಯಲು ಪಾನೀಯ, ಮತ್ತು ಬೆಚ್ಚನೆಯ ಆಹಾರ, 490 00:40:12,953 --> 00:40:14,162 ಮಲಗಲು ಜಾಗ ಕೊಡುತ್ತಿದ್ದೆವು. 491 00:40:15,122 --> 00:40:16,373 ನಾನೂ ಸಹ. 492 00:40:19,543 --> 00:40:23,296 ಅವನು ನನ್ನ ಪತ್ನಿಯೆಡೆಗೆ ಕೈ ಬೀಸುತ್ತಿರುವ ದೃಶ್ಯ ಈಗಲೂ ನನಗೆ ಕಾಣಿಸುತ್ತಿರುತ್ತದೆ. 493 00:40:27,300 --> 00:40:28,176 ಮತ್ತು ಲೈಲಾ, 494 00:40:29,803 --> 00:40:31,763 ಅವಳ ಮುಖದಲ್ಲಿ ದೊಡ್ಡ ಮುಗುಳ್ನಗೆಯೊಂದಿಗೆ, 495 00:40:32,722 --> 00:40:34,015 ಮರಳಿ ಕೈ ಬೀಸುತ್ತಿರುವಳು. 496 00:40:36,768 --> 00:40:39,104 ಅಷ್ಟೆಲ್ಲಾ ಪ್ರೀತಿಗೆ ಬದಲಾಗಿ, 497 00:40:39,187 --> 00:40:41,189 ನಮ್ಮ ಬಾಗಿಲುಗಳಿಗೆ ಟ್ರಾಲಕ್ಗಳನ್ನು ಕರೆತಂದ. 498 00:40:55,662 --> 00:40:57,747 ನನ್ನೊಳಗೆ ಕ್ರೋಧ ತುಂಬಿದೆ. 499 00:41:00,125 --> 00:41:03,753 ಅವನನ್ನು ಕಂಡುಹಿಡಿಯಲು ನಾವು ಹತ್ತಿರವಾದಷ್ಟೂ, ಅದು ಬೆಳೆಯುತ್ತಾ ಹೋಗುತ್ತದೆ. 500 00:41:06,756 --> 00:41:09,759 ಕೊನೆಗೆ ನಾವು ಮುಖಾಮುಖಿಯಾದಾಗ, ನನ್ನನ್ನು ನಾನು ತಡೆಯಲಾರೆನೇನೋ 501 00:41:10,844 --> 00:41:12,679 ಎಂದು ನನಗೆ ಭಯವಾಗುತ್ತದೆ. 502 00:41:13,430 --> 00:41:14,389 ಯಾವುದರಿಂದ? 503 00:41:14,472 --> 00:41:15,432 ಅವನನ್ನು ಕೊಲ್ಲುವುದರಿಂದ. 504 00:41:17,142 --> 00:41:20,228 ಲೈಲಾಳಂತೆ ಅವನು ನನ್ನ ಮುಂದೆ ರಕ್ತ ಕಾರುವುದನ್ನು ನೋಡುವುದರಿಂದ. 505 00:41:30,280 --> 00:41:31,823 ಫೈನಿಗೆ ಒಂದು ಕಾರಣವಿದ್ದಿರಬಹುದು… 506 00:41:35,619 --> 00:41:36,953 ಅವನು ಮಾಡಿದುದನ್ನು ಮಾಡಿದ್ದಕ್ಕೆ. 507 00:41:39,956 --> 00:41:42,042 ನಿನಗೆ ಉತ್ತರ ಹಿಡಿಸದೆ ಹೋಗಬಹುದು, 508 00:41:44,169 --> 00:41:46,838 ಆದರೂ ಆ ಪ್ರಶ್ನೆಯನ್ನು ಕೇಳುವುದರಲ್ಲಿ ಪ್ರಯೋಜನವಿದೆ. 509 00:42:10,695 --> 00:42:11,696 ಹೇಗೆ ನಡೆಯಿತು? 510 00:42:22,249 --> 00:42:23,500 ಯಾರವನು, ಮೊರೇನ್? 511 00:42:24,417 --> 00:42:25,293 ಬೇಯ್ಲ್ ಡೊಮನ್. 512 00:42:26,795 --> 00:42:28,338 ಇಲ್ಲಿಯನ್ನಿನ ನಾವಿಕ. 513 00:42:29,297 --> 00:42:31,675 ಇಲ್ಲಿ ಯಾಕೆ ಬಂದಿದ್ದ? ಅವನಿಂದ ನಿನಗೇನು ಬೇಕಿತ್ತು? 514 00:42:31,758 --> 00:42:34,302 ಅಯಿಸ್ ಸೆಡಾಯ್ ರಹಸ್ಯಗಳನ್ನು ಇರಿಸಿಕೊಳ್ಳಬಾರದೇ? 515 00:42:37,555 --> 00:42:39,182 ನನ್ನೆಡೆ ನಗಬೇಡ, 516 00:42:39,266 --> 00:42:42,060 ನನ್ನಿಂದ ಸಂಪರ್ಕ ಕಳೆದುಕೊಂಡು ದೂರ ತಳ್ಳಬೇಡ. 517 00:42:42,143 --> 00:42:44,145 ನನ್ನೆಡೆ ನಗುವ ಧೈರ್ಯ ಮಾಡಬೇಡ, 518 00:42:44,229 --> 00:42:45,772 ಎಲ್ಲವೂ ಸರಿ ಇರುವಂತೆ, 519 00:42:45,855 --> 00:42:48,316 ನೀನೇನು ಮಾಡುತ್ತಿರುವೆ ಎಂದು ನಿಖರವಾಗಿ ತಿಳಿದಿಲ್ಲದಿರುವಂತೆ. 520 00:43:12,966 --> 00:43:15,093 ನಾನು ರಾತ್ರಿ ಊಟ ಇಲ್ಲೇ ಮಾಡುತ್ತೇನೆ. 521 00:43:19,431 --> 00:43:20,598 ನೀನೇ ಮಾಡಿಕೋ. 522 00:43:25,353 --> 00:43:26,896 ಎಲ್ಲಿ ಬೇಕಾದರೂ ತಿನ್ನು. 523 00:44:05,435 --> 00:44:07,354 ಏನು ಬಂದಿದೆ ನೋಡು. ಪೆರಿನ್ನಿಂದ. 524 00:44:10,815 --> 00:44:11,775 ಏನು ಮಾಡುತ್ತಿರುವೆ? 525 00:44:13,568 --> 00:44:14,736 ಅದು ಬೆಲ್ ಟೈನ್. 526 00:44:16,446 --> 00:44:17,280 ಇಂದೇ? 527 00:44:20,533 --> 00:44:22,035 ನಾನೇ ಮರೆತಿರುವುದನ್ನು ನಂಬಲಾರೆ. 528 00:44:24,621 --> 00:44:26,122 ಪತ್ರದಲ್ಲಿ ಏನಿದೆ? 529 00:44:33,213 --> 00:44:36,716 ಪಡನ್ ಫೈನ್ ಮತ್ತು ವಲೀರಿನ ಕಹಳೆಗಾಗಿ ಇನ್ನೂ ಹುಡುಕುತ್ತಿದ್ದಾರೆ ಎಂದಿದ್ದಾನೆ, 530 00:44:36,800 --> 00:44:38,218 ಆದರೆ ಜಾಡು ತಪ್ಪಿದೆಯಂತೆ. 531 00:44:41,888 --> 00:44:42,889 ಏನಾಯ್ತು? 532 00:44:47,060 --> 00:44:49,604 "ಈ ಸೈನಿಕರ ಜೊತೆ ಇರುವುದರಲ್ಲಿ ಏನೋ ಇದೆ. 533 00:44:51,189 --> 00:44:54,401 ಕತ್ತಿಗಳು, ಗುರಾಣಿಗಳು ಮತ್ತು ಶತ್ರುಗಳ ಬೆಂಕಿಯ ಬಗ್ಗೆ ಅವರಲ್ಲಿ ಒಂದು ಮಾತಿದೆ. 534 00:44:55,193 --> 00:44:57,946 ಅದು ತುಂಬಾ ಸಂಕೀರ್ಣವಾದದ್ದು ಮತ್ತು ಬಹಳ ಪಕ್ಷಿಗಳನ್ನು ಒಳಗೊಂಡಿದೆ. 535 00:44:59,322 --> 00:45:03,368 ಆದರೆ ವಿಚಾರ ಏನೆಂದರೆ, ಗುರಾಣಿಯೊಂದಿಗೆ ನೀವು ಒಬ್ಬರೇ ನಿಂತರೆ, 536 00:45:03,451 --> 00:45:05,370 ನಿಮ್ಮ ದೇಹವು ಇನ್ನೂ ತೆರೆದುಕೊಂಡಿರುತ್ತದೆ. 537 00:45:05,453 --> 00:45:08,790 ಆದರೆ ಗುಂಪಿನಲ್ಲಿ ಒಬ್ಬರನ್ನೊಬ್ಬರು ಗುರಾಣಿಗಳಿಂದ ರಕ್ಷಿಸಿಕೊಂಡು ನಿಂತರೆ, 538 00:45:08,873 --> 00:45:10,834 ನಿಮ್ಮನ್ಯಾರನ್ನೂ ಏನೂ ಮುಟ್ಟಲಾಗದು. 539 00:45:13,795 --> 00:45:15,088 ನಮ್ಮ ಬಗ್ಗೆ ಯೋಚಿಸುವಂತೆ ಮಾಡಿತು, 540 00:45:16,756 --> 00:45:18,133 ನಮ್ಮೆಲ್ಲರ ಬಗ್ಗೆ, 541 00:45:18,216 --> 00:45:20,468 ಒಟ್ಟಿಗೆ ನಾವು ಅಸಾಧ್ಯವನ್ನು ಹೇಗೆ ಎದುರಿಸಿದೆವು ಅಂತ. 542 00:45:21,678 --> 00:45:24,055 ಆದರೆ ಈಗ, ಜಗತ್ತಿನಲ್ಲಿ ನಾವಿರುವ ಪ್ರತ್ಯೇಕ ಮೂಲೆಗಳಲ್ಲಿ, 543 00:45:24,139 --> 00:45:26,182 ಪ್ರತಿ ದಿನವೂ ತೆರೆದುಕೊಂಡಿರುವಂತೆಯೇ ಇರುತ್ತದೆ. 544 00:45:33,731 --> 00:45:38,069 ನಿಮ್ಮಿಬ್ಬರನ್ನೂ ನೆನೆಸಿಕೊಳ್ಳುವೆ ಎಂದು ಸುತ್ತಿ ಬಳಸಿ ಹೇಳಿದೆನಷ್ಟೇ. 545 00:45:40,071 --> 00:45:40,905 ಮತ್ತು ರಾಂಡ್. 546 00:45:41,906 --> 00:45:42,782 ಲೈಲಾ. 547 00:45:43,450 --> 00:45:45,785 ಅದರಲ್ಲೂ ಈಗ, ಬೆಲ್ ಟೈನಿಗೆ ಇಷ್ಟು ಹತ್ತಿರದಲ್ಲಿ. 548 00:45:47,495 --> 00:45:51,207 ಪ್ರಮಾಣ ಮಾಡೋಣ, ಬರುವ ವರ್ಷ, ನಾವು ನಾಲ್ವರೂ ಒಟ್ಟಿಗೆ ಆಚರಿಸೋಣ ಅಂತ. 549 00:45:53,376 --> 00:45:55,628 ಲೋಯಿಲ್ ಮತ್ತು ನಾನು, ನೀವು ಟಾರ್ ವಲೋನಲ್ಲಿ ಭೇಟಿಯಾಗೋಣ. 550 00:45:57,046 --> 00:45:58,214 ಮತ್ತು, ನಮಗೆ ಅದೃಷ್ಟವಿದ್ದರೆ, 551 00:45:59,132 --> 00:46:00,216 ಅವನೆಲ್ಲೇ ಇದ್ದರೂ, 552 00:46:01,384 --> 00:46:04,220 ಮ್ಯಾಟ್ ತೊಂದರೆಯಿಂದ ಹೊರಗುಳಿದು ನಮ್ಮೊಂದಿಗೆ ಸೇರುವಂತಾಗಲಿ." 553 00:46:07,891 --> 00:46:09,142 "ನಿಮ್ಮಿಬ್ಬರ ನೆನಪಾಗುತ್ತೆ. 554 00:46:09,601 --> 00:46:10,560 ಮತ್ತು ರಾಂಡ್. 555 00:46:11,144 --> 00:46:12,145 ಲೈಲಾ. 556 00:46:12,228 --> 00:46:15,190 ಅದರಲ್ಲೂ ಈಗ, ಬೆಲ್ ಟೈನಿಗೆ ಇಷ್ಟು ಹತ್ತಿರದಲ್ಲಿ. 557 00:46:15,273 --> 00:46:20,612 ಪ್ರಮಾಣ ಮಾಡೋಣ, ಬರುವ ವರ್ಷ, ನಾವು ನಾಲ್ವರೂ ಒಟ್ಟಿಗೆ ಆಚರಿಸೋಣ ಅಂತ. 558 00:46:20,695 --> 00:46:24,657 ಲೋಯಿಲ್ ಮತ್ತು ನಾನು, ನೀವು ಟಾರ್ ವಲೋನಲ್ಲಿ ಭೇಟಿಯಾಗೋಣ." 559 00:46:28,495 --> 00:46:29,913 ಅದು ತುಂಬಾ ನೋವಾಗಬಹುದೇನೋ. 560 00:46:29,996 --> 00:46:33,958 ಇದುವರೆಗೆ 12 ಪತ್ರಗಳು ಬಂದರೂ, ಮ್ಯಾಟ್ ಕೌಥೊನ್ ಬಗ್ಗೆ ಒಂದು ಮಾತಿಲ್ಲ. 561 00:46:35,001 --> 00:46:38,087 ಅವರನ್ನು ನೀನು ತ್ಯಜಿಸಿದ್ದಕ್ಕಾಗಿ 562 00:46:39,547 --> 00:46:40,548 ನಿನ್ನನ್ನು ಕ್ಷಮಿಸುವುದು 563 00:46:42,759 --> 00:46:44,427 ಕಷ್ಟವಾಗಬಹುದು. 564 00:46:47,972 --> 00:46:49,557 ನನ್ನಿಂದ ನಿನಗೇನು ಬೇಕು? 565 00:46:50,892 --> 00:46:52,894 ಅಮಾಯಕತೆ ನಿನಗೆ ಸರಿಹೊಂದದು. 566 00:46:52,977 --> 00:46:55,522 ಆ ಕಠಾರಿಯನ್ನು ನಾನು ಆರು ತಿಂಗಳಿಂದ ಮುಟ್ಟಿಲ್ಲ. 567 00:46:58,441 --> 00:47:00,026 ನಾನು ನಿನಗೆ ಅಪಾಯ ಅಲ್ಲ, 568 00:47:01,361 --> 00:47:03,947 ನಿನ್ನ ರೆಡ್ ಸಹೋದರಿಯರಿಗಾಗಲಿ, ಮೊರೇನಿಗಾಗಲಿ, 569 00:47:04,030 --> 00:47:05,907 ಅಥವಾ ಇಡೀ ವಿಶ್ವಕ್ಕೇ ಆಗಲಿ. 570 00:47:13,498 --> 00:47:14,958 ಬೆಲ್ ಟೈನ್ ಶುಭಾಶಯಗಳು, ಮ್ಯಾಟ್. 571 00:48:26,904 --> 00:48:27,947 ನಾನು... 572 00:48:29,032 --> 00:48:30,408 ರಾಂಡನ್ನು ತುಂಬಾ ನೆನೆಸಿಕೊಳ್ಳುವೆ. 573 00:48:34,829 --> 00:48:37,665 ನಾನು ಈ ಜಾಗದ ಬಗ್ಗೆ ಎಷ್ಟೇ ಜರಿದರೂ, 574 00:48:37,749 --> 00:48:39,000 ನಾನೆಲ್ಲಿಗೂ ಹೋಗುವುದಿಲ್ಲ. 575 00:48:43,630 --> 00:48:46,424 ನಾನಿಲ್ಲಿರುವೆ. ನಿನ್ನೊಂದಿಗಿರುವೆ. ಯಾವಾಗಲೂ. 576 00:49:10,073 --> 00:49:11,032 ರಾಂಡ್ಗಾಗಿ. 577 00:49:11,824 --> 00:49:14,160 ಅವನ ಆತ್ಮ ಮರಳಿ ನಮ್ಮೆಡೆ ಬರಲಿ. 578 00:49:14,911 --> 00:49:16,496 ಈ ಜನ್ಮದಲ್ಲಾದರೂ ಅಥವಾ ಮುಂದಿನದಲ್ಲಾದರೂ. 579 00:49:19,332 --> 00:49:22,251 ಡಾರ್ಕ್ ಒನ್ನಿಂದ ನಮ್ಮೆಲ್ಲರನ್ನೂ ರಕ್ಷಿಸಲು ತನ್ನ ಪ್ರಾಣ ಅರ್ಪಿಸಿದ. 580 00:49:23,670 --> 00:49:25,630 ಆತ ನನಗೆ ಸ್ನೇಹಿತನಾಗಿರುವುದು ಹೆಮ್ಮೆ ಎನಿಸುತ್ತದೆ. 581 00:49:49,904 --> 00:49:50,905 ಧನ್ಯವಾದ. 582 00:50:13,177 --> 00:50:14,429 ನಾವು ಕಾಯಬೇಕೇನು? 583 00:50:14,512 --> 00:50:15,346 ಹೌದು. 584 00:50:17,473 --> 00:50:19,475 -ಈ ರಾತ್ರಿ, ಅವಳು ಬರುತ್ತಾಳೆ. -ಹೌದು, ಖಂಡಿತ. 585 00:50:19,559 --> 00:50:20,852 ಬೇಗನೆ, ಖಂಡಿತವಾಗಲೂ. 586 00:50:21,394 --> 00:50:25,940 ಬಹುಶಃ ಅವಳು ಎಂದಿನಂತಲ್ಲದೆ ತಡವಾಗಿ ಮಧ್ಯಾಹ್ನ ಊಟ ಮಾಡಿರಬಹುದು. 587 00:50:32,947 --> 00:50:36,701 ಲಾನ್, ನೀನು ಇದನ್ನು ತುಂಬಾ ವೈಯಕ್ತಿಕವಾಗಿ ನೋಡುತ್ತಿರುವೆ ಅನಿಸುತ್ತದೆ. 588 00:50:39,954 --> 00:50:42,790 ಇದಕ್ಕೂ ನಿನಗೂ ಯಾವುದೇ ಸಂಬಂಧವಿಲ್ಲ. 589 00:50:43,875 --> 00:50:46,586 ನೀನು ಅದಕ್ಕೆ ಅನುಮತಿಸಿದರೆ ಮಾತ್ರ ನಿನ್ನ ಮೇಲೆ ಪರಿಣಾಮ ಬೀರುತ್ತದೆ. 590 00:50:46,669 --> 00:50:50,298 ಮತ್ತು ನಾನು ನಿಸ್ಸಂದಿಗ್ಧವಾಗಿ ಅದರಿಂದ ಪ್ರಭಾವಿತಳಾಗಿಲ್ಲ. 591 00:50:50,381 --> 00:50:52,425 -ನೀವು ಅವಳ ವಾರ್ಡರ್ ಅಲ್ಲ. -ಅಲ್ಲ. 592 00:50:53,050 --> 00:50:55,303 -ಆದರೆ ಅವಳು ನನ್ನ ಮನೆಯಲ್ಲಿದ್ದಾಳೆ-- -ನಮ್ಮ ಮನೆ. 593 00:50:55,928 --> 00:50:58,806 ಸ್ಪಷ್ಟವಾಗಿ ಹೇಳಬೇಕೆಂದರೆ ನನ್ನ ಮನೆ, ನಿಮ್ಮನ್ನು ಇರಲು ಅನುಮತಿಸಿರುವೆ. 594 00:51:08,566 --> 00:51:11,986 ಆವಾಹನೆ ಮಾಡಬಲ್ಲ ಮಹಿಳೆಯನ್ನು ಒನ್ ಪವರಿನಿಂದ ದೂರ ಮಾಡಿದಾಗ, 595 00:51:12,653 --> 00:51:15,740 ಅದು ಅತ್ಯಂತ ಭೀಕರ ಪ್ರಮಾಣದ ದಾಳಿಯಂತೆ ಭಾಸವಾಗುತ್ತದೆ. 596 00:51:16,491 --> 00:51:19,911 ನಿನ್ನ ದೇಹ ಮತ್ತೆಂದೂ ನಿನ್ನದೆಂಬಂತೆ ಅನಿಸುವುದಿಲ್ಲ. 597 00:51:20,912 --> 00:51:24,332 ಆ ಬಾಧೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ನಿನ್ನ ಮನಸ್ಸು, 598 00:51:24,415 --> 00:51:28,211 ಹಿಂದೆ ನೀನೇನಾಗಿದ್ದೆ ಮತ್ತು ಮುಂದೆ ನೀನು ಎಂದಿಗೂ ಆಗದ್ದನ್ನು ನೆನೆಯುತ್ತಿರುತ್ತದೆ. 599 00:51:28,878 --> 00:51:29,796 ಹೌದು. 600 00:51:30,963 --> 00:51:32,632 ಎಷ್ಟೋ ಮಹಿಳೆಯರು ಚೇತರಿಸಿಕೊಳ್ಳುವುದೇ ಇಲ್ಲ. 601 00:51:35,218 --> 00:51:36,677 ಎಷ್ಟೋ ಮಹಿಳೆಯರು ಸತ್ತು ಹೋಗುತ್ತಾರೆ. 602 00:51:37,386 --> 00:51:39,305 ಆದರೆ ಮೊರೇನ್ ಸೆಡಾಯ್ ಅಲ್ಲ. 603 00:51:40,097 --> 00:51:42,892 ಪ್ರತಿ ದಿನವೂ ಆಕೆ ಹೋರಾಡುತ್ತಾಳೆ. 604 00:51:42,975 --> 00:51:44,185 ಮೇಲೇಳುತ್ತಾಳೆ 605 00:51:44,268 --> 00:51:46,979 ಮತ್ತು ಒಂದು ಹೆಜ್ಜೆಯನ್ನು ಇನ್ನೊಂದರ ಮುಂದೆ ಇಡುತ್ತಾಳೆ. 606 00:51:47,063 --> 00:51:48,523 ಆ ಬಾಲ್ದಿಗಳನ್ನು ತುಂಬಿಸುತ್ತಾಳೆ, 607 00:51:48,606 --> 00:51:51,359 ಬಾವಿಯ ಬಳಿ ಎಷ್ಟು ಬಾರಿ ಹೋಗಿ ಬರಬೇಕೆಂದಾದರೂ ಸರಿ, 608 00:51:51,442 --> 00:51:54,403 ದಾರಿಯ ಮಧ್ಯೆ ಎಷ್ಟು ನೀರು ಚೆಲ್ಲಿದರೂ ಸರಿ. 609 00:51:55,738 --> 00:51:59,075 ಮೊರೇನ್ ಸೆಡಾಯಿಯನ್ನು ಕಂಡರೆ ನನಗೆ ಸ್ವಾರ್ಥಿ ಹೆಂಗಸು ಕಾಣಿಸುವುದಿಲ್ಲ. 610 00:51:59,992 --> 00:52:02,745 ಅವಳನ್ನು ಕಂಡರೆ ಶಕ್ತಿ ಕಾಣುತ್ತದೆ. 611 00:52:02,829 --> 00:52:06,123 ನಮ್ಮಿಂದ ಯಾರಿಗೂ ಆಗದಷ್ಟು ಶಕ್ತಿ. 612 00:52:08,042 --> 00:52:13,214 ಅಯಿಸ್ ಸೆಡಾಯ್ ಮತ್ತು ಆಕೆಯ ವಾರ್ಡರ್ ಮಧ್ಯೆಯ ಬಂಧ ಸಂಪರ್ಕಿಸಲು ಇರುವ ಒಂದು ಮಾರ್ಗವೇ, 613 00:52:14,882 --> 00:52:16,133 ಆದರೆ ಅದೊಂದೇ ಅಲ್ಲ. 614 00:52:19,136 --> 00:52:23,140 ನೀವು ಒಟ್ಟಾಗಿ ಕಳೆದಿರುವ 20 ವರ್ಷಗಳು ನಿಮ್ಮ ನಡುವೆ ಇರುವ ಸಾಮಾನ್ಯ ಭಾಷೆ. 615 00:52:24,809 --> 00:52:28,563 ಬಹುಶಃ, ಅವಳನ್ನು ಮಾತನಾಡಿಸಲು ಬಲವಂತಪಡಿಸುವುದರ ಬದಲು, 616 00:52:30,064 --> 00:52:33,901 ನೀನೇ ಮೌನವಾಗಿದ್ದು ನಿಜವಾಗಿ ಆಲಿಸುವುದು ಉತ್ತಮ. 617 00:52:41,075 --> 00:52:43,202 ನಾನು ಮೌನವಾಗಿರಬೇಕೆಂದು ನನಗೊಬ್ಬರು ಹೇಳಿರುವುದು 618 00:52:44,203 --> 00:52:46,497 ನನ್ನ ಜೀವನದಲ್ಲಿ ಇದೇ ಮೊದಲು ಅನ್ಸುತ್ತೆ. 619 00:56:40,564 --> 00:56:41,398 ಲಾನ್! 620 00:58:09,153 --> 00:58:10,446 ನಿನ್ನ ಕಿವಿಗಳನ್ನು ಮುಚ್ಚಿಕೋ! 621 00:58:37,097 --> 00:58:38,724 ನೀನು ನನಗೆ ಏನನ್ನು ಹೇಳುತ್ತಿಲ್ಲ? 622 00:58:57,701 --> 00:58:59,536 ಮುಂದೆ ಈ ಸೀಸನ್ನಲ್ಲಿ 623 00:59:04,166 --> 00:59:07,127 ಒಟ್ಟಿಗೆ ನಾವು ಅಸಾಧ್ಯವನ್ನು ಎದುರಿಸಿದೆವು, ನಾವೆಲ್ಲರೂ. 624 00:59:08,462 --> 00:59:10,506 ಆದರೆ ಈಗ, ಜಗತ್ತಿನ ನಮ್ಮ ಪ್ರತ್ಯೇಕ ಮೂಲೆಗಳಲ್ಲಿ, 625 00:59:10,589 --> 00:59:12,549 ಪ್ರತಿ ದಿನವೂ ತೆರೆದುಕೊಂಡಿರುವಂತೆಯೇ ಇರುತ್ತದೆ. 626 00:59:18,973 --> 00:59:22,101 ಐ ಆಫ್ ದಿ ವರ್ಲ್ಡಲ್ಲಿ ನಾವು ಡಾರ್ಕ್ ಒನ್ನನ್ನು ಸೋಲಿಸಲಿಲ್ಲ. 627 00:59:22,184 --> 00:59:23,936 ಅವನ ಬಲಶಾಲಿ ಸೇನಾಪತಿಯ ಬಿಡುಗಡೆಗೊಳಿಸಿದೆವು. 628 00:59:24,728 --> 00:59:26,146 ಲಾಸ್ಟ್ ಬ್ಯಾಟಲ್ ಬರುತ್ತಿದೆ, 629 00:59:29,358 --> 00:59:31,026 ಮತ್ತು ನಾವದನ್ನು ಈಗಾಗಲೇ ಸೋಲುತ್ತಿದ್ದೇವೆ. 630 00:59:32,987 --> 00:59:35,155 ಚಕ್ರವು ಯಾರಿಗೂ ಬೇಕಾದುದನ್ನು ಕೊಡುವುದಿಲ್ಲ. 631 00:59:35,239 --> 00:59:37,533 ನಿನಗೆ ಏನಾದರೂ ಬೇಕಾದರೆ, ನೀನು ಅದನ್ನು ಪಡೆಯಬೇಕು. 632 00:59:41,662 --> 00:59:42,579 ನಾನು ಸಿದ್ಧಳಿದ್ದೇನೆ. 633 00:59:42,663 --> 00:59:44,623 ಆಕೆ ತನ್ನ ಭಯಗಳನ್ನು ಎದುರಿಸಲಿ. 634 00:59:46,417 --> 00:59:49,378 ದಿ ಹಂಟ್ ಫಾರ್ ದಿ ಹಾರ್ನ್ ಆಫ್ ವಲೀರ್ ಕಾಯುತ್ತಿದೆ. 635 00:59:49,461 --> 00:59:52,172 ಇದರೊಂದಿಗೆ, ಇಡೀ ಜಗತ್ತೇ ನಮ್ಮದಾಗುವುದು. 636 00:59:53,090 --> 00:59:55,718 ಅವನ ಸ್ನೇಹಿತರನ್ನೆಲ್ಲಾ ಡಾರ್ಕಿಗೆ ಒಪ್ಪಿಸಿಬಿಡುತ್ತೇನೆ. 637 00:59:55,801 --> 00:59:58,178 ನನ್ನೊಳಗೆ ಕ್ರೋಧ ತುಂಬಿದೆ. 638 01:00:02,891 --> 01:00:04,852 ನಾನು ಹೊರಡುತ್ತಿದ್ದೇನೆ. ನೀನು ಬರಬೇಕಿಲ್ಲ. 639 01:00:04,935 --> 01:00:07,646 ನಮ್ಮ ಮಿತ್ರರು ತೊಂದರೆಯಲ್ಲಿದ್ದರೆ, ನಾನಿಲ್ಲಿರುವೆ ಎಂದು ಏಕೆ ಅಂದುಕೊಳ್ಳುವೆ? 640 01:00:09,231 --> 01:00:11,900 ಯಾವಾಗಲೂ ಶಕ್ತಿವಂತರೇ ಇತಿಹಾಸ ಬರೆಯುವವರಾಗುವುದಿಲ್ಲ. 641 01:00:11,984 --> 01:00:13,193 ಬದುಕುಳಿದವರು ಬರೆಯುವರು. 642 01:00:17,031 --> 01:00:19,033 ಆದರೆ ಕತ್ತಲಲ್ಲಿ ಸಾಗಲು ಬಹಳಷ್ಟು ದಾರಿಗಳಿವೆ. 643 01:00:22,745 --> 01:00:24,538 ನನ್ನ ಸೋಲುಗಳು ಮರುಕಳಿಸುವುದು ನನಗೆ ಬೇಕಿಲ್ಲ. 644 01:00:24,621 --> 01:00:26,123 ನೀನು ಮಾಡುವುದರ ಮೇಲೆ ನಂಬಿಕೆ ಇದೆ. 645 01:00:26,206 --> 01:00:28,417 ಚಕ್ರದಲ್ಲಿನ ಕಡ್ಡಿಯಾಗಿರೋದು ನನಗೆ ಸಾಕಾಗಿದೆ. 646 01:00:30,127 --> 01:00:31,879 ನೀನು ಕಡ್ಡಿಯಲ್ಲವೋ, ಹುಡುಗ. 647 01:00:32,796 --> 01:00:36,717 ಚಕ್ರವನ್ನೇ ತಿರುಗಿಸುವ ನೀರು ನೀನು, 648 01:00:37,760 --> 01:00:39,678 ಅದನ್ನು ನುಚ್ಚುನೂರೂ ಮಾಡಬಲ್ಲವನು. 649 01:00:45,100 --> 01:00:48,270 ನೀನು ಈ ಜಗತ್ತನ್ನು ರಕ್ಷಿಸಲು ಜನಿಸಿರುವೆ, ಕೇವಲ ನಿನ್ನ ಪ್ರೀತಿಪಾತ್ರರನ್ನಲ್ಲ. 650 01:00:50,731 --> 01:00:53,609 ಇಂದಿನ ವೀರರು. ಅದೇ ನಾವು ಆಗಿರೋದು ಈಗ. 651 01:00:54,860 --> 01:00:56,695 ಹಾಗೆಯೇ ನಡೆದುಕೊಳ್ಳಬೇಕಾದ ಸಮಯ ಬಂದಿದೆ. 652 01:01:00,407 --> 01:01:02,534 ದ ವೀಲ್ ಆಫ್ ಟೈಮ್ ಈಗ ನೋಡಿರಿ 653 01:03:04,656 --> 01:03:06,658 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 654 01:03:06,783 --> 01:03:08,785 ಸೃಜನಶೀಲ ಮೇಲ್ವಿಚಾರಕರು ವಿವೇಕ್