1 00:00:06,200 --> 00:00:09,366 ಓಕ್ ಮರದ ಎಲೆಗಳು ಕೆಂಪಾಗಲು ಶುರುವಾದಾಗ, ಗ್ರೋವಿಗೆ ಹೊರಡುತ್ತೇವೆ. 2 00:00:09,491 --> 00:00:12,741 ಸಮಸ್ಯೆ ಏನೆಂದರೆ ಇಲ್ಲಿಗೂ ಅಲ್ಲಿಗೂ ಮಧ್ಯೆ ನೂರು ಅಪಾಯಗಳಿವೆ. 3 00:00:13,116 --> 00:00:14,991 ನಾನು ಅಪಾಯ. 4 00:00:15,283 --> 00:00:16,283 ನಿಲ್ಲು! 5 00:00:24,575 --> 00:00:27,200 ನಮ್ಮ ಬೆಳಕು ಕ್ಷೀಣಿಸುತ್ತಿದೆ. 6 00:00:27,533 --> 00:00:31,033 ಈ ಮಿಥ್ರಿಲ್... ಇದರಿಂದಷ್ಟೇ ನಮ್ಮ ವಿಮೋಚನೆಯಾ? 7 00:00:31,408 --> 00:00:35,200 ಇಡೀ ಎಲ್ವೆನ್ ಜನಾಂಗದ ಭವಿಷ್ಯ... 8 00:00:35,241 --> 00:00:36,450 ನಿನ್ನ ಕೈಯಲ್ಲಿದೆ. 9 00:00:37,491 --> 00:00:38,366 ನಾಂಪಟ್! 10 00:00:38,450 --> 00:00:41,241 ಸೌರೊನ್ ನಿಮ್ಮ ಜನರಿಗೂ ವೈರಿಯಾಗಿದ್ದ, ನನ್ನ ಜನರಿಗಾದಂತೆ. 11 00:00:42,158 --> 00:00:45,908 ನ್ಯೂಮೆನೊರ್ ಮತ್ತು ಎಲ್ಫ್ಗಳ ಮೈತ್ರಿಯ ಮತ್ತೆ ಬಲಪಡಿಸೋಣ. 12 00:00:45,991 --> 00:00:47,991 ಸೌತ್ ಲ್ಯಾಂಡ್ಸಿನ ಜನರನ್ನು ಕಾಪಾಡೋಕೆ. 13 00:00:49,991 --> 00:00:51,366 ನನಗೆ ಕೊಡು. 14 00:00:51,491 --> 00:00:52,575 ಅದು ಇಲ್ಲೇ ಕೆಳಗಿದೆ. 15 00:00:57,075 --> 00:01:00,158 ಸೌತ್ ಲ್ಯಾಂಡ್ಸಿನ ನಿಜವಾದ ರಾಜನಿಗೆ ಜಯವಾಗಲಿ! 16 00:01:00,491 --> 00:01:02,325 ಜಯವಾಗಲಿ! 17 00:01:08,700 --> 00:01:09,575 ರಕ್ಷಣೆ ಪಡೆಯಿರಿ! 18 00:01:09,658 --> 00:01:10,658 ಮಹಾರಾಣಿ! 19 00:01:11,783 --> 00:01:13,241 ಥಿಯೋ! 20 00:02:33,366 --> 00:02:39,283 ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ 21 00:04:29,116 --> 00:04:30,116 ಕಾಪಾಡಿ! 22 00:04:37,950 --> 00:04:39,366 ಹಲ್ಬ್ರ್ಯಾಂಡ್! 23 00:04:45,200 --> 00:04:46,366 ಎಲೆಂಡಿಲ್! 24 00:04:49,033 --> 00:04:50,450 ಹಲ್ಬ್ರ್ಯಾಂಡ್! 25 00:04:51,283 --> 00:04:53,366 ಅಮ್ಮ? ಅಮ್ಮ? 26 00:04:55,075 --> 00:04:56,491 ಅಮ್ಮ! 27 00:04:57,366 --> 00:04:58,616 ಈ ಕಡೆ. 28 00:05:00,658 --> 00:05:01,825 ಇಲ್ಲಿ ಬಾ. 29 00:05:07,700 --> 00:05:10,116 - ಗಾಯ ಆಗಿದೆಯಾ? - ಇಲ್ಲ. 30 00:05:12,450 --> 00:05:13,866 ನನ್ನ ಜೊತೆನೇ ಇರು. 31 00:05:15,075 --> 00:05:16,075 ಬಾ. 32 00:05:37,075 --> 00:05:39,658 ಒಂಟಮೋ ಎಲ್ಲಿ? ಒಂಟಮೋ ನನ್ನ ಜೊತೆಯಲ್ಲೇ ಇದ್ದ. 33 00:05:42,325 --> 00:05:43,575 ತೆವಳು. 34 00:05:43,658 --> 00:05:45,158 ತೆವಳು, ನಾನು ನಿನ್ನನ್ನ ಬಿಡಲ್ಲ. 35 00:05:45,575 --> 00:05:47,241 ಸೈನಿಕ, ಈ ಕಡೆ! 36 00:05:49,450 --> 00:05:50,491 ವಲಂಡೀಲ್. 37 00:06:14,950 --> 00:06:17,366 ಸೈನಿಕ, ಆತನು ಬದುಕಿಲ್ಲ. 38 00:06:18,533 --> 00:06:19,533 ಆತನು ಬದುಕಿಲ್ಲ. 39 00:06:20,950 --> 00:06:21,950 ಈ ಕಡೆ! 40 00:06:23,158 --> 00:06:25,366 - ಆತನು ಬದುಕಿಲ್ಲ... - ಬಾ! 41 00:06:25,450 --> 00:06:27,033 ದಯವಿಟ್ಟು ನಮ್ಮನ್ನು ಕಾಪಾಡಿ! 42 00:06:27,116 --> 00:06:30,741 ಸೈನಿಕರೇ, ಆ ಛಾವಣಿ ಕುಸಿಯಲಿದೆ. 43 00:06:31,950 --> 00:06:33,450 ಬೇಗ, ದಾರಿ ಮಾಡಿ. 44 00:06:53,700 --> 00:06:55,950 ಈ ಕಡೆ. ಹೀಗೆ ಬನ್ನಿ. 45 00:06:56,033 --> 00:06:58,366 ನನ್ನ ಕೈ ಹಿಡಿದುಕೋ. ನಿನಗೇನೂ ಆಗಿಲ್ಲ. 46 00:06:58,991 --> 00:07:01,408 ಮುಂದೆ ಹೋಗಿ. ಜೊತೆಯಲ್ಲೇ ಇರಿ. 47 00:07:02,658 --> 00:07:03,991 ಬೇಗ, ಮಹಾರಾಣಿ. 48 00:07:04,075 --> 00:07:05,075 ಹೋಗಿ. 49 00:07:07,616 --> 00:07:08,991 ಸೇತುವೆಯ ಕಡೆಗೆ ಹೋಗಿ. 50 00:07:09,075 --> 00:07:10,491 ಅವರನ್ನು ಹೊರಗೆ ಕಳಿಸಿ! 51 00:07:14,241 --> 00:07:15,241 ಇಲ್ಲ! 52 00:07:24,450 --> 00:07:27,991 ಇಸಿಲ್ದೂರ್! 53 00:07:29,450 --> 00:07:31,783 ಬೋಲ್ಜರ್ಬಕ್ ಬಸವನಹುಳು ಹಿಡಿಯಲು ಹೊರಟ 54 00:07:31,866 --> 00:07:33,658 ಶರತ್ಕಾಲದ ಒಳ್ಳೆಯ ದಿನದಂದು 55 00:07:34,241 --> 00:07:36,450 ನೂರು ದೊಡ್ಡವು ಸಿಕ್ಕವು ಅವನಿಗೆ 56 00:07:36,533 --> 00:07:38,450 ಅವೆಲ್ಲಾ ನನ್ನದಾಗಿದ್ದರೆ ಎಷ್ಟು ಚಂದ 57 00:07:38,533 --> 00:07:39,450 ಮುಂದಕ್ಕೆ. 58 00:07:39,533 --> 00:07:42,033 ಗ್ರೋವ್! ಇದೇ ಇರಬೇಕು. 59 00:07:42,116 --> 00:07:43,616 ಮೂರು ದಿನದ ಹಿಂದೆ ಇದೇ ಹೇಳಿದೆ. 60 00:07:43,700 --> 00:07:46,700 ಇಲ್ಲ, ಇಲ್ಲ, ಸರಿಯಾಗಿದೆ. ನನಗಿದು ನೆನಪಿದೆ. 61 00:07:46,783 --> 00:07:47,950 ಬನ್ನಿ. 62 00:07:48,033 --> 00:07:51,991 ವಾಸನೆ ಬಡಿಯಿತೇ? ಸೌದೆಯ ಹೊಗೆ! ಮಿಕ್ಕವರು ಅಡುಗೆ ಶುರು ಮಾಡಿಕೊಂಡಿರಬೇಕು. 63 00:08:21,741 --> 00:08:23,116 ಬರೋಸ್ ಅವರೇ. 64 00:08:24,575 --> 00:08:25,825 ಏನಾಯಿತು? 65 00:08:26,783 --> 00:08:32,616 ದಕ್ಷಿಣದಲ್ಲಿ ಬೆಂಕಿಯ ಕಲ್ಲುಗಳನ್ನು ಉಗುಳುವ ಬೆಟ್ಟಗಳ ಬಗ್ಗೆ ನನ್ನ ಮುತ್ತಾತ ಹೇಳುತ್ತಿದ್ದರು. 66 00:08:33,575 --> 00:08:35,116 ಅವು ನಿದ್ದೆಗೆ ಜಾರುತ್ತವೆಯಂತೆ. 67 00:08:36,241 --> 00:08:38,283 ಕೆಲವೊಮ್ಮೆ ನೂರಾರು ವರ್ಷಗಳ ಕಾಲ. 68 00:08:40,075 --> 00:08:45,908 ಒಂದು ಹೊಸ ದುಷ್ಟಶಕ್ತಿ ಉದ್ಭವಿಸುವಾಗ ಮತ್ತೆ ಎಚ್ಚರವಾಗುತ್ತವಂತೆ. 69 00:09:08,158 --> 00:09:09,366 ಬ್ರ್ಯಾಂಡಿಫುಟ್. 70 00:09:10,450 --> 00:09:13,283 ಅಲ್ಲಿರುವ ನಿನ್ನ ಸ್ನೇಹಿತ. ಆ ದೊಡ್ಡ ಮನುಷ್ಯ. 71 00:09:14,200 --> 00:09:16,283 - ಅವನೇನಾದರೂ... - ಅವನೇನಾದರೂ? 72 00:09:16,366 --> 00:09:17,866 ಅವನು ಇದನ್ನು ಸರಿಪಡಿಸಬಹುದು. 73 00:09:17,950 --> 00:09:20,075 - ಹೋಗು, ನೋರಿ. - ತೋಳಗಳನ್ನು ಎದುರಿಸಿದ ಹಾಗೆ. 74 00:09:20,158 --> 00:09:22,075 - ಯಾಕೆ ಕಾಯುತ್ತಿದ್ದೀಯಾ? - ಗೊತ್ತಿಲ್ಲ... 75 00:09:22,158 --> 00:09:23,575 ನಮಗಾಗಿ ತುಂಬಾನೇ ಮಾಡಿದ್ದಾನೆ. 76 00:09:24,700 --> 00:09:27,200 ಇನ್ನೂ ಹೆಚ್ಚಾಗಿ ಕೇಳಿದರೆ ಚೆನ್ನಾಗಿರಲ್ವೇನೋ. 77 00:09:28,658 --> 00:09:29,741 ಹಾಗೋ. 78 00:09:32,241 --> 00:09:33,450 ಸರಿ, ನಾನೇ ಕೇಳ್ತೀನಿ. 79 00:09:34,616 --> 00:09:35,450 ಸಾಡೊಕ್! 80 00:09:35,533 --> 00:09:37,283 ದಾರಿ ಬಿಡಿ, ಮಕ್ಕಳೇ. 81 00:09:41,950 --> 00:09:43,950 ನವೀಕರಿಸು... 82 00:09:44,033 --> 00:09:48,700 ಮರುಸ್ಥಾಪಿಸು… 83 00:09:51,700 --> 00:09:53,491 ಮರುಸ್ಥಾಪಿಸು… 84 00:09:54,241 --> 00:09:56,075 ಹೂವು... 85 00:09:57,200 --> 00:09:59,408 - ಹೂವು... - ಏನು ಗೊಣಗುತ್ತಿದ್ದಾನೆ? 86 00:09:59,491 --> 00:10:02,700 ಮರಕ್ಕೆ ಅರ್ಥವಾಗಲಿ ಅಂತ ಸಣ್ಣಪುಟ್ಟ ಪದಗಳನ್ನು ಹೇಳುತ್ತಿರಬೇಕು. 87 00:10:02,783 --> 00:10:04,783 ಸಾಡೊಕ್, ಮರಗಳು ಮಾತಾಡಲ್ಲ. 88 00:10:04,866 --> 00:10:05,908 ಕೆಲವು ಮಾತಾಡ್ತವೆ. 89 00:10:06,825 --> 00:10:08,241 ಅವನನ್ನು ವಿಚಲಿತಗೊಳಿಸಬೇಡಿ. 90 00:10:14,116 --> 00:10:17,075 ಮರುಸ್ಥಾಪಿಸು! 91 00:10:17,158 --> 00:10:18,241 ಹೂವು! 92 00:10:18,325 --> 00:10:21,866 ಅಬ್ಬಬ್ಬಾ. ಕೆಲಸ ಮಾಡ್ತಾ ಇದೆ... 93 00:10:23,158 --> 00:10:29,158 ಬದುಕು! 94 00:10:33,658 --> 00:10:35,075 ಅದನ್ನು ಸರಿಪಡಿಸುತ್ತಿದ್ದಾನೆ. 95 00:10:35,158 --> 00:10:37,075 ಸಾಡೊಕ್ ಮಾಡುತ್ತೀನೆಂದು ಹೇಳಿದಂತೆಯೇ. 96 00:10:40,116 --> 00:10:41,200 ಡಿಲ್ಲಿ, ಹಿಂದಕ್ಕೆ ಬಾ! 97 00:10:44,950 --> 00:10:46,866 - ಇಲ್ಲ! - ನೋರಿ! 98 00:10:46,950 --> 00:10:48,825 ನನ್ನ ಮುದ್ದು ಮಕ್ಕಳೇ, ನನ್ನ ಮಕ್ಕಳೇ! 99 00:10:48,908 --> 00:10:50,658 ನೋರಿ! ಡಿಲ್ಲಿ! ಡಿಲ್ಲಿ. 100 00:10:50,741 --> 00:10:53,533 ಡಿಲ್ಲಿ, ನೋರಿ, ಆರಾಮಾಗಿದ್ದೀರಾ? 101 00:10:55,866 --> 00:10:56,991 ತಗೋ. 102 00:10:57,075 --> 00:10:58,658 ಚೆನ್ನಾಗಿದ್ದೀರಾ? 103 00:10:58,741 --> 00:11:00,658 ಚೆನ್ನಾಗಿದ್ದೀನಿ. ಅಂದೆ. 104 00:11:01,283 --> 00:11:02,283 ನಾನು... 105 00:11:23,408 --> 00:11:26,825 ನಮಗೆ ಈ ಬೆಟ್ಟದಿಂದ ಪವಿತ್ರವಾಗಿರುವಂಥದ್ದು ಬೇಕು. 106 00:11:28,616 --> 00:11:31,116 ಹಾಗಾಗಿ ನಾವೂ ಪವಿತ್ರವಾದದ್ದನ್ನು ಅರ್ಪಿಸಲಿದ್ದೇವೆ. 107 00:11:32,575 --> 00:11:36,158 ನಿಮ್ಮ ಮಿಥ್ರಿಲ್ ಗಣಿಗಳಿಗೆ ಬದಲಾಗಿ, 108 00:11:36,241 --> 00:11:38,700 ಎಲ್ಫ್ಗಳು ಈ ನಗರವನ್ನು ಬೇಟೆ, ಧಾನ್ಯ, 109 00:11:38,783 --> 00:11:42,241 ಮತ್ತು ಎರಿಯಡೋರಿನ ಎಲ್ದಾರ್ ಅರಣ್ಯಗಳ ಸೌದೆಗಳಿಂದ 110 00:11:42,325 --> 00:11:47,283 ಮುಂದಿನ ಐದು ಶತಮಾನಗಳವರೆಗೆ ಪೂರೈಸಲು ತಯಾರಾಗಿದ್ದಾರೆ. 111 00:11:47,700 --> 00:11:49,033 ಐದು ಶತಮಾನಗಳಾ? 112 00:11:49,116 --> 00:11:51,658 ಒಳ್ಳೆಯ ಭರವಸೆಯೇ, ಅವರು ಪೂರೈಸಿದರೆ... 113 00:11:52,575 --> 00:11:54,575 ನಾನು ಪೂರೈಸದ ಪ್ರಮಾಣವನ್ನು ಮಾಡಿಯೇ ಇಲ್ಲ. 114 00:11:56,700 --> 00:11:59,450 ಗುಪ್ತ ಭಾಷೆಯ ಕೆಲವು ಪದಗಳನ್ನು ಕಲಿತ ಹಾಗಿದ್ದೀಯಾ. 115 00:12:00,491 --> 00:12:01,741 ಮೆಚ್ಚುವಂಥದ್ದೇ. 116 00:12:03,075 --> 00:12:06,908 ಹೇಳು, ನಾವು ಯಾವುದೇ ಎಲ್ಫನ್ನ ಯಾಕೆ ನಂಬಬೇಕು? 117 00:12:08,741 --> 00:12:09,991 ನಂಬಬೇಡಿ. 118 00:12:12,033 --> 00:12:13,700 ಆದರೆ ನನ್ನನ್ನು ನಂಬಬಹುದು. 119 00:12:14,450 --> 00:12:18,283 ನಾನು ಯಾರೋ ಸಾಮಾನ್ಯ ಎಲ್ಫ್ ಅಲ್ಲ, ಅರ್ಧ ಎಲ್ಫಾದ ಎಲ್ರೊಂಡ್ ನಾನು. 120 00:12:19,033 --> 00:12:23,408 ಎಲ್ಫ್ಗಳಿಗೆ ತಮ್ಮ ಬಗ್ಗೆ ತಮಗೆ ಕಾಣದ್ದು ನನಗೆ ಕಾಣುವುದು. 121 00:12:23,866 --> 00:12:26,658 ಅದಕ್ಕಾಗಿಯೇ ನಾನು ನಿಮ್ಮ ಮುಂದೆ ಈಗ ಒಂಟಿಯಾಗಿ ನಿಂತು… 122 00:12:30,533 --> 00:12:31,700 ಬೇಡಿಕೊಳ್ಳುತ್ತಿರುವೆ. 123 00:12:33,575 --> 00:12:35,741 ನೀವು ನನ್ನ ಜನರನ್ನು ಕಾಪಾಡಲು. 124 00:12:37,450 --> 00:12:41,700 ದಯವಿಟ್ಟು, ಮಹಾರಾಜರೇ. ನಮಗೆ ಸಹಾಯ ಮಾಡಿ. 125 00:12:52,700 --> 00:12:54,700 ನಾನೀಗ ನನ್ನ ಮಗನೊಂದಿಗೆ ಮಾತನಾಡುತ್ತೇನೆ. 126 00:13:17,450 --> 00:13:19,450 ನಿಮ್ಮ ಉತ್ತರ ಏನಾಗಿರಲಿದೆ, ಅಪ್ಪ? 127 00:13:27,116 --> 00:13:32,616 ಆಲೆ ನಮ್ಮ ಜನರನ್ನು ಸೃಷ್ಟಿಸಿದಾಗ, 128 00:13:33,825 --> 00:13:35,825 ನಮ್ಮನ್ನು ಎರಡು ಅಂಶಗಳಿಂದ ತಯಾರಿಸಿದರಂತೆ. 129 00:13:37,033 --> 00:13:38,450 ಬೆಂಕಿ ಮತ್ತು ಕಲ್ಲು. 130 00:13:40,450 --> 00:13:43,991 ನಮ್ಮೊಳಗೆ ಬದುಕಿರುವ ಕಲ್ಲು ಅನಂತಕ್ಕಾಗಿ ಹಾತೊರೆಯುತ್ತಾ 131 00:13:44,075 --> 00:13:46,075 ಕಾಲದ ಸೆಳೆತವನ್ನು ಎದುರಿಸುತ್ತಿದೆ. 132 00:13:47,366 --> 00:13:51,075 ಆದರೆ ಅಗ್ನಿ ಸತ್ಯವನ್ನೇ ಒಪ್ಪಿಕೊಳ್ಳುತ್ತದೆ. 133 00:13:53,616 --> 00:13:56,908 ಅಂದರೆ ಎಲ್ಲಾ ವಸ್ತುಗಳೂ ಒಂದಲ್ಲಾ ಒಂದು ದಿನ ಸೇವಿಸಲ್ಪಟ್ಟು 134 00:13:56,991 --> 00:13:58,950 - ಬೂದಿಯಾಗಿ ಮರೆಯಾಗಲಿವೆ. - ಅಪ್ಪ... 135 00:13:59,033 --> 00:14:01,700 ಇದಕ್ಕೆ ಆಸರೆಯಾಗದ ಭೂಮಿಯನ್ನು ನಾವು ಅಗೆಯುವುದಿಲ್ಲ. 136 00:14:01,908 --> 00:14:04,241 ಕತ್ತಲೆಗೂ ಮೀರಿದ ಆಳವನ್ನು ಅಗೆದು. 137 00:14:04,325 --> 00:14:09,116 ನೆರಳು, ಕಲ್ಲು, ಗಣಿಯ ಪ್ರಲೋಭನೆಗೊಡ್ಡಿ, ಬೆಟ್ಟದಡಿ ನಮ್ಮೆಲ್ಲರನ್ನೂ ಹೂಳಲು ಬಿಡುವುದಿಲ್ಲ. 138 00:14:09,200 --> 00:14:12,283 ಎಲ್ಫ್ಗಳು ಸಾವನ್ನು ತಪ್ಪಿಸಿಕೊಳ್ಳಲೆಂದು 139 00:14:13,533 --> 00:14:15,491 ಕುಬ್ಜರ ಜೀವಗಳನ್ನು ಒತ್ತೆಯಿಡಲಾರೆ. 140 00:14:15,575 --> 00:14:17,158 ಸಾವಿಂದ ತಪ್ಪಿಸಿಕೊಳ್ಳುವುದಾ? 141 00:14:18,700 --> 00:14:19,783 ಅಪ್ಪ! 142 00:14:22,991 --> 00:14:26,408 ನನ್ನ ಗೆಳೆಯ ಮುಳುಗುತ್ತಿದ್ದಾನೆ, 143 00:14:27,700 --> 00:14:30,533 ತನ್ನನ್ನು ದಡಕ್ಕೆ ಎಳೆಯಲು ಕೇಳಿಕೊಳ್ಳುತ್ತಿದ್ದಾನೆ. 144 00:14:30,616 --> 00:14:32,783 ನಿಮಗೆ ಯಾವುದೋ ಕಲ್ಲು ಬೀಳೋ ಭಯ ಅಂತ 145 00:14:32,866 --> 00:14:35,116 ನಾನು ಅವನನ್ನು ದೂರ ತಳ್ಳಬೇಕಾ? 146 00:14:35,241 --> 00:14:38,658 ಎಲ್ಫ್ಗಳ ಹಣೆಬರಹ ಎಷ್ಟೋ ವರ್ಷಗಳ ಹಿಂದೆ ಬರೆದಿದ್ದಾಗಿದೆ. 147 00:14:39,491 --> 00:14:42,950 ಹೆಚ್ಚಿನ ಬುದ್ಧಿಯ ಮನಸ್ಸುಗಳಿಂದ, 148 00:14:43,033 --> 00:14:45,325 ನಮ್ಮವರಿಗಿಂತ ದೂರ ದೃಷ್ಟಿ ಉಳ್ಳವರಿಂದ. 149 00:14:46,866 --> 00:14:51,866 ಅವರ ಇಚ್ಛೆಗೆ ವಿರುದ್ಧವಾಗಿ ನಡೆದರೆ ಈ ಇಡೀ ರಾಜ್ಯವೇ ಬೀಳಬಹುದು. 150 00:14:53,825 --> 00:14:55,825 ಬಹುಶಃ ಇಡೀ ಮಿಡ್ಲ್ ಅರ್ಥ್. 151 00:15:07,283 --> 00:15:09,116 ನನ್ನನ್ನು ಕ್ಷಮಿಸು, ಮಗನೇ. 152 00:15:12,825 --> 00:15:14,491 ಆದರೆ ಅವರ ಸಮಯ ಬಂದಿದೆ. 153 00:15:16,158 --> 00:15:19,033 ಹೇನಿನ ಗಡ್ಡದ, ಕಾಳಜಿಯಿಲ್ಲದ ಮೂರ್ಖ ಮುದುಕ! 154 00:15:19,783 --> 00:15:20,991 ಅವರು ಸರಿಯಾಗಿ ಹೇಳಿದ್ದರೆ? 155 00:15:21,075 --> 00:15:23,741 ಇದನ್ನು ಆಗಲು ನೀನು ಬಿಡಬಾರದು! 156 00:15:26,033 --> 00:15:27,991 ನಮಗೆ ಬೇರೆ ಯಾವ ದಾರಿ ಇದೆ? 157 00:15:28,075 --> 00:15:32,116 ಈ ಪ್ರಸ್ತಾವನೆಯಲ್ಲಿ ಬೇರೆ ಕುಬ್ಜ ದೊರೆಗಳು ಆಸಕ್ತಿ ಹೊಂದಿದ್ದರು ಎಂದೆ. 158 00:15:32,200 --> 00:15:34,783 ಗಣಿಯನ್ನು ನಾವೇ ಮತ್ತೆ ತೆರೆದು, 159 00:15:34,866 --> 00:15:37,741 ಮಿಥ್ರಿಲ್ಲನ್ನು ಸಂಗ್ರಹಿಸಲು ಸುರಕ್ಷಿತ ಮಾರ್ಗವಿದೆ ಎಂದರೆ, 160 00:15:37,825 --> 00:15:39,491 ಆತನಿಗೆ ಅವರಾದರೂ ಹೇಳಬಹುದು. 161 00:15:39,575 --> 00:15:42,575 ನಿಮ್ಮ ತಂದೆಯನ್ನು ಬಲವಂತವಾದರೂ ಮಾಡಬಹುದು. 162 00:15:43,158 --> 00:15:45,783 ಅವರು ನನ್ನ ತಂದೆಯಷ್ಟೇ ಅಲ್ಲ, ಡಿಸಾ. 163 00:15:47,658 --> 00:15:49,283 ಅವರು ನಮ್ಮ ರಾಜ. 164 00:15:50,075 --> 00:15:52,658 ರಾಜಾಜ್ಞೆಯನ್ನು ಉಕ್ಕಿನ ಮೇಲಿನ ತುಕ್ಕನ್ನು 165 00:15:52,783 --> 00:15:55,075 ಉದುರಿಸುವಂತೆ ಪರಿಗಣಿಸಲು 166 00:15:55,158 --> 00:15:58,116 ನಮ್ಮ ಮಕ್ಕಳಿಗೆ ಕಲಿಸಿದರೆ ನಾನು ಎಂತಹ ಅಪ್ಪನಾಗುತ್ತೇನೆ? 167 00:16:05,241 --> 00:16:06,491 ಆಯಿತು, ಸರಿ. 168 00:16:07,741 --> 00:16:10,491 ಅವರ ಗಡ್ಡದಲ್ಲಿ ಹೇನಿದೆ ಅಂತ ನಾನು ಹೇಳಬಾರದಿತ್ತು. 169 00:16:12,241 --> 00:16:14,408 - ಮೂರ್ಖ ಅನ್ನಬಾರದಿತ್ತು. - ಹೌದು. 170 00:16:14,491 --> 00:16:15,575 ಇಲ್ಲ. 171 00:16:16,783 --> 00:16:19,991 ಇಲ್ಲ, ನೀನು ನನ್ನ ತಾಯಿಯನ್ನು ಬೈಯ್ಯುವಾಗ ನನಗೆ ಸಹಿಸಲಾಗುವುದಿಲ್ಲ. 172 00:16:21,783 --> 00:16:24,616 ಆದರೆ ನಿಮ್ಮಮ್ಮನಿಗೆ ನಿಜವಾಗಲೂ ಕೂದಲಲ್ಲಿ ಹೇನಿದೆ… 173 00:16:24,700 --> 00:16:26,450 ತಮಾಷೆಗೆ ಅಂದೆ. ತಮಾಷೆ ಮಾಡಿದೆ. 174 00:17:03,700 --> 00:17:06,950 ಊಟಕ್ಕೆ ಇರಲು ನಾನು ನಿನ್ನನ್ನು ಬಲವಂತಪಡಿಸಲಾರೆನು ಅಂದುಕೊಂಡೆಯಾ? 175 00:17:08,200 --> 00:17:10,075 ಗಿಲ್-ಗಾಲಾಡಿಗೆ ತಿಳಿಸಬೇಕು. 176 00:17:12,825 --> 00:17:17,533 ಇಷ್ಟರಲ್ಲೇ ಅವರು ರಾಜನಾಗಿರುವುದಿಲ್ಲ, ಯಾಕಂದ್ರೆ ಲಿಂಡೊನ್ ಇನ್ನಿರದು. 177 00:17:24,783 --> 00:17:26,783 ಹಾಗಿದ್ದರೆ ಇದು ವಿದಾಯವೇ? 178 00:17:28,991 --> 00:17:30,575 ನಾವು ವಿದಾಯ ಹೇಳುವುದಿಲ್ಲ. 179 00:17:39,283 --> 00:17:40,866 - ನಾವು ಹೇಳೋದು... - ನಮಾರೀ. 180 00:17:42,366 --> 00:17:44,575 ಇದು ಕೇವಲ ವಿದಾಯವಷ್ಟೇ ಅಲ್ಲ. 181 00:17:47,658 --> 00:17:51,158 ಇದರ ಅರ್ಥ… " ಒಳ್ಳೆಯದರ ಕಡೆಗೆ ಹೋಗಿ" ಅಂತ. 182 00:19:13,825 --> 00:19:15,033 ಎಲ್ರೊಂಡ್! 183 00:19:28,533 --> 00:19:29,741 ಅವರು ಹೀಗೆ ಯಾಕೆ ಮಾಡಿದರು? 184 00:19:31,491 --> 00:19:32,908 ಇದನ್ನು ಅವರ ನಾಡಾಗಿಸಲು. 185 00:19:34,325 --> 00:19:35,658 ಅವರ ನೆರಳಿನ ನಾಡು. 186 00:19:36,450 --> 00:19:38,783 ಮತ್ತೆ ಅದನ್ನು ವಾಪಸ್ ಕಸಿದು ಅವರನ್ನು ಓಡಿಸೋಣ. 187 00:19:38,866 --> 00:19:41,200 ನಮಗೆ ಸ್ಥಾನವೂ ಇಲ್ಲ, ಸಹಕಾರವೂ ಇಲ್ಲ. 188 00:19:41,866 --> 00:19:43,450 ಈ ನಾಡುಗಳು ಸತ್ತುಹೋಗಿವೆ. 189 00:19:44,158 --> 00:19:45,575 ಬದುಕಿರುವವರೆಡೆ ನೋಡಬೇಕು. 190 00:19:45,658 --> 00:19:47,533 ಅಥವಾ ಅವರ ಕತ್ತಿನಲ್ಲಿ ಕತ್ತಿ ಇಳಿಸಬೇಕು! 191 00:19:49,366 --> 00:19:50,991 ಇದು ಮುಗಿದುಹೋಗಿದೆ. 192 00:19:51,075 --> 00:19:52,783 ನನಗಲ್ಲ. ನಾನು ಅದನ್ನು ಬಿಡೆನು! 193 00:19:52,866 --> 00:19:54,116 ನಾವು ಬಿಡಬೇಕು! 194 00:19:57,616 --> 00:19:58,866 ನಾವು ಬಿಡಬೇಕು. 195 00:20:03,825 --> 00:20:06,908 ನಿನಗ್ಯಾಕೆ ಅಷ್ಟೊಂದು ಚಿಂತೆ? ಅದು ನಿನ್ನ ತಪ್ಪಲ್ಲ. 196 00:20:10,033 --> 00:20:11,241 ಹೌದು, ನನ್ನದೇ. 197 00:20:21,616 --> 00:20:24,158 ಹೋಗ್ತಾ ಇರಿ… ಅಷ್ಟೇ… 198 00:20:30,866 --> 00:20:32,741 ಹಿಂದೆ ಇರುವ ಜನರಿಗೆ ಸಹಾಯ ಮಾಡಿ. 199 00:21:00,866 --> 00:21:02,241 ಇಸಿಲ್ದೂರ್? 200 00:21:14,866 --> 00:21:17,033 - ಮಹಾರಾಣಿ! - ಬದುಕಿದ್ದಾರೆ. 201 00:21:17,116 --> 00:21:18,700 - ನನ್ನ ಮಹಾರಾಣಿ. - ಇಲ್ಲಿದ್ದಾರೆ. 202 00:21:18,783 --> 00:21:21,658 - ಚೆನ್ನಾಗಿದ್ದಾರಾ? - ಹೋದರು ಅಂದುಕೊಂಡೆ. 203 00:21:26,658 --> 00:21:27,908 ಮಹಾರಾಣಿ. 204 00:21:35,033 --> 00:21:36,283 ನನ್ನ ಕುದುರೆಯನ್ನು ತಗೋ. 205 00:21:46,575 --> 00:21:48,283 ನಾಯಕರೇ, ನೀವು… 206 00:21:51,241 --> 00:21:53,366 - ನಾಯಕರೇ... - ಅವನೆಲ್ಲಿ? 207 00:21:58,783 --> 00:22:00,450 ನನ್ನ ಮಗ ಎಲ್ಲಿ? 208 00:22:03,783 --> 00:22:06,408 ಅವರು ಸತ್ತುಹೋಗಿದ್ದಾರೆ, ಅಲ್ಲವೇ? 209 00:22:08,408 --> 00:22:12,283 ಅರೊಂಡೀರ್. ನನ್ನ ಗೆಳೆಯರು. ನನ್ನ... 210 00:22:13,283 --> 00:22:16,491 ನನ್ನ ತಾಯಿ. ಎಲ್ಲರೂ. 211 00:22:17,741 --> 00:22:22,741 ತಿಳಿಯಲಾಗದ್ದರಿಂದ ಮನಸು ಬರಿದಾಗುತ್ತದೆ. ಊಹೆಗಳಿಂದ ಅದನ್ನು ತುಂಬಿಸಬೇಡ. 212 00:22:29,116 --> 00:22:30,825 ನಾವು ಎಲ್ಲಿಗೆ ಹೋಗುತ್ತಿದ್ದೇವೆ? 213 00:22:30,908 --> 00:22:34,283 ಆ ಬೆಟ್ಟದ ತಪ್ಪಲಿನಲ್ಲಿ ನ್ಯೂಮೆನೊರ್ ಬಿಡಾರ ಹೂಡಿದ್ದಾರೆ, 214 00:22:34,366 --> 00:22:35,783 ಆ ದೂರದ ಬೆಟ್ಟದಾಚೆಗೆ. 215 00:22:36,533 --> 00:22:39,908 ಅವರು ಅಲ್ಲಿಗೇ ಬೇಗ ತಲುಪಲಿದ್ದಾರೆ, ಯಾರಾದರೂ ಬದುಕಿದ್ದವರ ಜೊತೆಗೆ. 216 00:22:42,075 --> 00:22:43,491 ನಿನ್ನ ತಾಯಿಯ ಸಮೇತ. 217 00:22:45,616 --> 00:22:48,866 ಹುಷಾರಾಗಿರು. ಓರ್ಕ್ಸ್ ಈಗ ಹಗಲಲ್ಲಿ ಚಲಿಸಲಿದ್ದಾರೆ. 218 00:22:50,533 --> 00:22:52,783 ನಾನು ಓರ್ಕ್ಗಳನ್ನು ಹಿಂದೆ ಕೊಂದಿದ್ದೇನೆ. 219 00:22:52,866 --> 00:22:56,283 ನಾನು ನಿನ್ನ ವಯಸ್ಸಿನಲ್ಲಿದ್ದಾಗ ಓರ್ಕ್ಸ್ ಎಂಬುದೇ ಇರಲಿಲ್ಲ. 220 00:22:56,366 --> 00:22:59,491 ಮತ್ತು ಈಗ? ಎಷ್ಟು ಮಂದಿಯನ್ನು ಕೊಂದಿರುವೆ? 221 00:22:59,575 --> 00:23:01,658 - ಬಹಳ. - ಒಳ್ಳೇದು. 222 00:23:02,450 --> 00:23:04,450 ನಾನು ಅಂತಹ ಪದಗಳನ್ನು ಉಪಯೋಗಿಸುವುದಿಲ್ಲ. 223 00:23:05,450 --> 00:23:06,533 ಯಾಕಿಲ್ಲ? 224 00:23:07,158 --> 00:23:10,533 ಕೆಟ್ಟ ಕ್ರಿಯೆಗಳನ್ನು "ಒಳ್ಳೇದು" ಅಂದರೆ ಅದರಿಂದ ಮನಸು ಕೆಡುತ್ತದೆ. 225 00:23:11,866 --> 00:23:14,616 ದುಷ್ಟತನ ನಮ್ಮೊಳಗೆ ಬೆಳೆಯಲು ಅದು ಜಾಗ ಕೊಡುತ್ತದೆ. 226 00:23:15,825 --> 00:23:18,408 ಪ್ರತಿ ಯುದ್ಧ ಒಳಗೂ, ಹೊರಗೂ ನಡೆಯುತ್ತದೆ. 227 00:23:19,616 --> 00:23:21,950 ಪ್ರತಿ ಯೋಧನಿಗೂ ಇದು ಗಮನದಲ್ಲಿರಬೇಕು. 228 00:23:23,491 --> 00:23:26,241 ನಾನೂ ಅಷ್ಟೇ. ನೀನೂ ಅಷ್ಟೇ. 229 00:23:27,908 --> 00:23:29,158 ಹಾಗಿದ್ದರೆ ನಾನು ಯೋಧನಾ? 230 00:23:40,033 --> 00:23:42,158 ಬಹುಶಃ ನಿನ್ನನ್ನು ಒಬ್ಬನಾಗಿ ತಯಾರುಮಾಡಬಹುದು. 231 00:24:21,866 --> 00:24:24,616 ಬಿಡಾರವನ್ನು ತಲುಪಲು ಇನ್ನೂ ಎಷ್ಟು ದೂರವಿದೆ? 232 00:24:25,991 --> 00:24:27,533 ಈ ಉಬ್ಬನ್ನು ದಾಟಿ ಹೋಗಬೇಕಷ್ಟೆ. 233 00:24:40,283 --> 00:24:43,283 ಈ ಹೊಗೆಯನ್ನು ಕಳೆಯಲು ಇನ್ನೂ ಎಷ್ಟು ದೂರ? 234 00:24:46,908 --> 00:24:47,908 ಇಲ್ಲೇ ನಿಲ್ಲಿ. 235 00:24:59,533 --> 00:25:01,700 ಅದರಿಂದ ಎಷ್ಟು ದೂರದಲ್ಲಿದ್ದೇವೆ? 236 00:25:03,116 --> 00:25:04,533 ಸುಮಾರು ಒಂದು ಮೈಲಿ. 237 00:25:06,158 --> 00:25:07,408 ಹಾಗೋ. 238 00:25:22,200 --> 00:25:23,283 ಕಂಡಿರಾ? 239 00:25:26,158 --> 00:25:27,408 ಕೇವಲ ಬೂದಿ. 240 00:25:33,950 --> 00:25:35,783 ನಡೆಯುತ್ತಿರಿ, ನೀವಿಬ್ಬರೂ. 241 00:25:36,866 --> 00:25:40,033 ನನ್ನ ಕುದುರೆಯನ್ನು ಮುನ್ನಡೆಸಿ. ಯಾರಿಗೇನೂ ಹೇಳಬೇಕಿಲ್ಲ. 242 00:25:42,658 --> 00:25:43,825 ಎಲೆಂಡಿಲ್? 243 00:25:46,116 --> 00:25:48,241 ಎಲೆಂಡಿಲ್, ದಯವಿಟ್ಟು. 244 00:25:49,241 --> 00:25:50,491 ನಡೆಯುತ್ತಿರಿ. 245 00:26:16,991 --> 00:26:19,158 ಅವರು ಅದನ್ನು ಮಹಾ ಗ್ರೀನ್ವುಡ್ ಎನ್ನುತ್ತಾರೆ. 246 00:26:19,241 --> 00:26:22,741 ತಲೆಯನ್ನು ಬಗ್ಗಿಸಿ ಆ ಪ್ರಪಾತಗಳ ಮೇಲೆ ನಿಮ್ಮ ಕಣ್ಣಿಡಿ. 247 00:26:22,825 --> 00:26:25,908 ದೊಡ್ಡ ಜನರು ನೆಲೆಸುವ ಸ್ಥಳಗಳು ಆ ದೂರದ ಕಡೆ ಇವೆ. 248 00:26:26,741 --> 00:26:30,658 ಅದೃಷ್ಟ ಇದ್ದರೆ ಅಲ್ಲಿನ ಜನ ನಿನಗೆ ನಕ್ಷತ್ರಗಳನ್ನ ಹುಡುಕಿ ಕೊಡುತ್ತಾರೆ. 249 00:26:36,658 --> 00:26:38,408 ಯಾಕಂದ್ರೆ ನಾನು ನಿನಗೆ ಹೇಳೋದಿಷ್ಟೇ, 250 00:26:38,491 --> 00:26:40,200 ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರು 251 00:26:40,283 --> 00:26:43,241 ಗೊತ್ತಿಲ್ಲದ ಪ್ರದೇಶಗಳಲ್ಲಿ ವಾಸಿಸುತ್ತಿದ್ದರಿಂದ 252 00:26:43,325 --> 00:26:45,366 ಹಾರ್ಫೂಟ್-ಜನ ಅವರನ್ನು ನೋಡಿಲ್ಲ. 253 00:26:45,450 --> 00:26:50,158 ಹುಡುಕಲು ಅದು ಬಹಳ ಕಾಲವೇ. ದೊಡ್ಡ ಕಾಲಿನವನಿಗೂ ಕೂಡ. 254 00:29:07,450 --> 00:29:09,783 ಸುಮ್ಮನೆ ಜಾಡಿನೊಳಗೇ ಇರಬೇಕಿತ್ತು. 255 00:29:12,283 --> 00:29:16,991 ಆ ನಕ್ಷತ್ರ ಉದುರುವುದನ್ನು ನೋಡಿದಾಗ ನಾನು ಸುಮ್ಮನೆ ಇದ್ದುಬಿಡಬೇಕಿತ್ತು. 256 00:29:17,075 --> 00:29:19,450 - ಎಲನೊರ್... - ನೀ ನನಗೆ ಹೇಳಲು ಯತ್ನಿಸಿದೆ, ಅಮ್ಮ. 257 00:29:22,158 --> 00:29:23,783 ಆದರೆ ನನಗೀಗ ಅರ್ಥವಾಗಿದೆ. 258 00:29:26,075 --> 00:29:27,658 ನಾನು ಕೇವಲ ಹಾರ್ಫೂಟ್ ಅಷ್ಟೇ. 259 00:29:32,200 --> 00:29:33,783 ಅದಷ್ಟೇ ಆಗಿರ್ತೀನಿ. 260 00:29:38,158 --> 00:29:40,158 ಮಲಗು ಹೋಗು, ನೋರಿ. 261 00:29:42,533 --> 00:29:44,866 ಇತರರನ್ನು ಬೆಳಗ್ಗೆ ಕಾಯಬಹುದು. 262 00:30:17,366 --> 00:30:19,366 ಎಂದಾದರೂ ಹತ್ತಿರದವರನ್ನು ಕಳೆದುಕೊಂಡಿದ್ದೀಯಾ? 263 00:30:21,075 --> 00:30:22,241 ಅವರಿಗಾ? 264 00:30:24,075 --> 00:30:25,491 ಅಂದರೆ ಸಂಬಂಧಿಕರು. 265 00:30:27,700 --> 00:30:30,033 ನನ್ನ ಸಹೋದರ. ಫಿನ್ರಾಡ್. 266 00:30:36,366 --> 00:30:37,700 ನನ್ನ ಪತಿಯನ್ನೂ ಸಹ. 267 00:30:39,200 --> 00:30:40,616 ಪತಿ? 268 00:30:41,491 --> 00:30:43,991 ಕೆಲೆಬೋರ್ನ್ ಅವರ ಹೆಸರು. 269 00:30:46,991 --> 00:30:48,825 ನಾವೊಂದು ಹೂದೋಟದಲ್ಲಿ ಭೇಟಿಯಾದೆವು. 270 00:30:50,700 --> 00:30:52,700 ನಾನು ನರ್ತಿಸುತ್ತಿದ್ದಾಗ ನನ್ನ ನೋಡಿದರು. 271 00:30:54,991 --> 00:30:56,741 ನೀನು ನರ್ತಿಸುತ್ತಿದ್ಯಾ? 272 00:30:57,908 --> 00:31:00,408 ಯುದ್ಧ ಆಗ ತುಂಬಾ ದೂರದಲ್ಲಿ ಇದ್ದ ಹಾಗಿತ್ತು. 273 00:31:04,241 --> 00:31:06,241 ಅವರು ಅದಕ್ಕೆ ಹೊರಟಾಗ ನಾನವರನ್ನ ರೇಗಿಸಿದೆ. 274 00:31:07,075 --> 00:31:09,075 ಅವರ ರಕ್ಷಾಕವಚ ಸರಿಯಾಗಿ ಹಿಡಿಸುತ್ತಿರಲಿಲ್ಲ. 275 00:31:10,741 --> 00:31:12,408 ಕಪ್ಪೆಚಿಪ್ಪು ಎಂದು ರೇಗಿಸಿದ್ದೆ. 276 00:31:16,825 --> 00:31:18,825 ಅದರ ನಂತರ ನಾನವರನ್ನು ನೋಡಲೇ ಇಲ್ಲ. 277 00:31:29,991 --> 00:31:31,408 ತಾಯಿ. 278 00:31:33,658 --> 00:31:35,116 ನೀವು ಮುಂಚೆ ಹೇಳಿದ್ದು… 279 00:31:36,616 --> 00:31:37,825 ತಪ್ಪು ಹೇಳಿದ್ದೀರಿ. 280 00:31:39,200 --> 00:31:40,575 ತಪ್ಪು ನಿಮ್ಮದಲ್ಲ. 281 00:31:42,200 --> 00:31:43,033 ನನ್ನದು. 282 00:31:43,116 --> 00:31:45,450 ನೀನಿದನ್ನು ಬೇಕಾಗಿ ಮಾಡಲಿಲ್ಲ. 283 00:31:46,075 --> 00:31:50,533 ನಾನು ವೈರಿಗೆ ಶಕ್ತಿಯನ್ನು ಕೊಟ್ಟೆ. ಹಾಗಾಗಿ ನಾನೇ ಜವಾಬ್ದಾರನು. 284 00:31:51,241 --> 00:31:53,408 ಕೆಲವರ ಪ್ರಕಾರ ಹಾಗೇ ಮಾಡಬೇಕು. 285 00:31:55,741 --> 00:31:59,325 ಆದರೆ ಜ್ಞಾನಿಗಳು ನಮ್ಮ ಹೃದಯದಲ್ಲೇನಿದೆ ಅಂತಾನೂ ನೋಡುತ್ತಾರೆ. 286 00:32:00,658 --> 00:32:02,241 ಮತ್ತು ಇದು ನಿನ್ನದರಲ್ಲಿರಲಿಲ್ಲ. 287 00:32:04,908 --> 00:32:08,491 ಈ ದಿನದ ಭಾರವನ್ನು ನಿನ್ನ ಹೆಗಲ ಮೇಲೆ ಹೊರಬೇಡ, ಥಿಯೋ. 288 00:32:10,741 --> 00:32:13,491 ಅದನ್ನು ಮತ್ತೆ ಕೆಳಗಿಳಿಸುವುದು ನಿನಗೆ ಕಷ್ಟವಾಗಬಹುದು. 289 00:32:17,200 --> 00:32:21,033 ಆದರೆ ನಾನದನ್ನು ಹೇಗೆ ಬಿಡಲಿ? 290 00:32:29,241 --> 00:32:34,158 ಈ ಪ್ರಪಂಚದಲ್ಲಿ ಕಗ್ಗತ್ತಲೆಯನ್ನೂ ಮೀರಿ ವರ್ತಿಸುವ ಶಕ್ತಿಗಳಿವೆ. 291 00:32:36,116 --> 00:32:38,241 ಬಹುಶಃ ಇಂತಹ ದಿನಗಳಲ್ಲಿ, 292 00:32:38,325 --> 00:32:41,325 ಅವರ ಯೋಜನೆಗಳಲ್ಲಿ ನಂಬಿಕೆ ಇಡದೆ ನಮಗೆ ಬೇರೆ ದಾರಿ ಇಲ್ಲ. 293 00:32:42,616 --> 00:32:44,116 ಮತ್ತು ನಮ್ಮವರ ಶರಣಾಗಿಸುವುದು. 294 00:32:44,700 --> 00:32:47,283 ನನ್ನ ಮನೆ ಇನ್ನಿಲ್ಲ. 295 00:32:50,325 --> 00:32:52,158 ಅದರಲ್ಲಿ ಯಾವ ಯೋಜನೆ ಇದೆ? 296 00:32:58,908 --> 00:33:00,491 ಅದು ನನಗಿನ್ನೂ ಕಾಣುತ್ತಿಲ್ಲ. 297 00:33:21,033 --> 00:33:22,033 ಸ್ವಾಮಿ... 298 00:33:22,575 --> 00:33:23,616 ಮುಚ್ಚಿಕೋ. 299 00:34:13,866 --> 00:34:16,991 ಏನದು? ಯಾವುದರ ವಾಸನೆ ಬಡಿಯಿತು ನಿನಗೆ? 300 00:34:26,741 --> 00:34:27,908 ಬೂದಿ. 301 00:34:28,825 --> 00:34:30,825 ಕೇವಲ ಬೂದಿಯದ್ದು. 302 00:34:33,783 --> 00:34:36,408 ಬನ್ನಿ. ಸಮಯವನ್ನು ಹಾಳು ಮಾಡುತ್ತಿದ್ದೇವೆ. 303 00:34:47,491 --> 00:34:49,366 ಆದಾಗ ವಿಶ್ರಾಂತಿ ಪಡೆದುಕೋ. 304 00:34:50,575 --> 00:34:52,158 ಬೆಳಕು ಹರಿಯುವಷ್ಟರಲ್ಲಿ ಹೊರಡೋಣ. 305 00:34:54,325 --> 00:34:55,741 ಯಾವ ಬೆಳಕು? 306 00:35:27,200 --> 00:35:28,408 ಇನ್ನೊಂದು ಕಂಪನ. 307 00:35:28,991 --> 00:35:31,491 ಕಲ್ಲುಗಳು ವಾಪಸ್ ಕೂರಲು ನಾವು ಸಮಯಾವಕಾಶ ನೀಡಬೇಕು. 308 00:35:44,950 --> 00:35:47,491 ಮನೋನಿಗ್ರಹ, ಎಲ್ಫ್ ಗುರುಗಳೇ. 309 00:35:47,991 --> 00:35:49,991 ಅದರಿಂದ ನಿನಗೆ ಯಶಸ್ಸು ಸಿಗಬಹುದೇ? 310 00:35:51,575 --> 00:35:53,075 ನಮ್ಮ ಸ್ಪರ್ಧೆಯಲ್ಲಿ ಸಿಕ್ಕಿತಲ್ಲ. 311 00:35:54,616 --> 00:35:56,033 ಹೌದಾ? 312 00:36:06,033 --> 00:36:07,033 ಇಲ್ಲ. 313 00:36:08,616 --> 00:36:10,533 ಉದ್ದೇಶಪೂರ್ವಕವಾಗಿ ಸೋತೆಯಾ? 314 00:36:10,616 --> 00:36:12,491 ನನ್ನ ಗುರಿ ನಿನ್ನನ್ನು ಸೋಲಿಸುವುದಲ್ಲ, 315 00:36:12,950 --> 00:36:15,616 ಬದಲಾಗಿ ಇನ್ನಷ್ಟು ಹೊತ್ತು ನೀನು ಕೇಳುವಂತೆ ಮಾಡುವುದು. 316 00:36:16,241 --> 00:36:18,075 ಎಲ್ಫ್ ಸುಳ್ಳುಗಳು. 317 00:36:21,866 --> 00:36:23,491 ನಾನು... 318 00:36:26,491 --> 00:36:27,908 ಸುಸ್ತಾಗಿದ್ದೆ. 319 00:36:37,825 --> 00:36:38,908 ಅದನ್ನು ಸಿಡಿಸು. 320 00:36:43,616 --> 00:36:47,116 ಎಲ್ಫ್ ಆಗಿಯೂ ನೀನು ಸ್ವಲ್ಪ ಕುಬ್ಜರಂತೆಯೇ ಅಂದುಕೊಂಡಿದ್ದೆ. 321 00:36:47,616 --> 00:36:51,450 ಮತ್ತು ನೀನೊಂಥರ ಎಲ್ವಿಶ್ ಕುಬ್ಜ, ಡ್ಯುರಿನ್. 322 00:36:52,991 --> 00:36:54,408 ಡ್ಯುರಿನ್ನ ಮಗ. 323 00:36:55,950 --> 00:36:59,325 - ಮೊಮ್ಮಗ... - ಬೇಕಿದ್ದರೆ ನಕ್ಕುಬಿಡು. 324 00:36:59,408 --> 00:37:03,908 ಒಬ್ಬ ಕುಬ್ಜ ಮಾಡಲಾಗುವಂಥ ಮಹತ್ತರ ಕೆಲಸವೆಂದರೆ ತನ್ನ ತಂದೆಯ ಹೆಸರನ್ನು ಕಾಪಾಡಿಕೊಳ್ಳುವುದು. 325 00:37:10,491 --> 00:37:12,158 ನಮಗೂ ನಮ್ಮದೇ ರಹಸ್ಯ ಹೆಸರುಗಳಿವೆ, 326 00:37:13,158 --> 00:37:15,825 ನಮ್ಮ ಮಧ್ಯೆಯಷ್ಟೇ ಬಳಸಲು. 327 00:37:15,908 --> 00:37:19,241 ನಾವು ಅವನ್ನು ಕುಟುಂಬದವರ ಬಳಿ ಮಾತ್ರ ಹಂಚಿಕೊಳ್ಳುತ್ತೇವೆ. 328 00:37:19,325 --> 00:37:25,283 ಪತ್ನಿಯರು, ತಂದೆ-ತಾಯಿಯರು, ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರ ಬಳಿ. 329 00:37:33,033 --> 00:37:35,533 - ಎಲ್ರೊಂಡ್... - ಇರಲಿ ಬಿಡು, ಡ್ಯುರಿನ್... 330 00:37:38,741 --> 00:37:40,158 ದೂರದ ಕಡೆಗಾಗಿ. 331 00:37:42,616 --> 00:37:43,700 ಆಯಿತು. 332 00:39:02,491 --> 00:39:03,491 ಡ್ಯುರಿನ್... 333 00:39:10,408 --> 00:39:11,533 ಅಪ್ಪ... 334 00:39:14,491 --> 00:39:17,116 ಇದು ನಾವು ಊಹಿಸಿದ್ದಕ್ಕಿಂತ ಹೆಚ್ಚೇ ಇದೆ. 335 00:39:17,200 --> 00:39:19,616 - ಮಹಾರಾಜ ಡ್ಯುರಿನ್, ಅಲ್ಲೊಂದು… - ಸಾಕು! 336 00:39:22,783 --> 00:39:27,033 ಅಪ್ಪ, ಅದನ್ನು ನೋಡಿ ಸಾಕು. 337 00:39:31,033 --> 00:39:32,366 ಎಲ್ಫನ್ನು ಬಂಧಿಸಿ. 338 00:40:25,950 --> 00:40:27,575 ನಿನ್ನ ತಾಯಿ ನಿನ್ನನ್ನು ಹೆತ್ತಾಗ, 339 00:40:30,116 --> 00:40:33,116 ನಿನ್ನೊಳಗೆ ಏನೋ ಒಂದು ವಿರೂಪಗೊಂಡಿತ್ತು. 340 00:40:34,533 --> 00:40:36,616 ನಿನ್ನ ಉಸಿರಾಟ ಅಸಮರ್ಪಕವಾಗಿತ್ತು. 341 00:40:38,783 --> 00:40:43,450 ಸುಣ್ಣದ ಕಲ್ಲುಗಳು ಗೀರಿದಾಗ ಬರುವ ಕ್ಷೀಣ ಶಬ್ದ. 342 00:40:46,116 --> 00:40:48,700 ಮೊದಲ ಚಳಿಗಾಲವನ್ನು ನೀನು ನೋಡುವುದೇ ಇಲ್ಲ ಎಂದರು. 343 00:40:51,783 --> 00:40:53,283 ಮತ್ತು ಪ್ರತಿ ರಾತ್ರಿ, 344 00:40:54,658 --> 00:40:58,658 ನಿನ್ನ ತಾಯಿಯ ಅಳುವ ಕಣ್ಣುಗಳು ನಿದ್ದೆಯನ್ನು ಅಪ್ಪಿಕೊಂಡ ನಂತರ, 345 00:41:00,325 --> 00:41:02,325 ನಾನು ನಿನ್ನನ್ನು ಬೆಂಕಿಯ ಬೆಳಕಿಗೆ ಒಡ್ಡಿ, 346 00:41:04,575 --> 00:41:06,575 ರಾತ್ರಿಯೆಲ್ಲಾ ಮೇಲಕ್ಕೆ ಮಲಗಿಸ್ತಿದ್ದೆ. 347 00:41:08,616 --> 00:41:10,783 ಬಾಧೆಯನ್ನು ಸ್ವಲ್ಪ ಕಡಿಮೆ ಮಾಡುತ್ತಿತ್ತು. 348 00:41:12,075 --> 00:41:13,366 ಮತ್ತು ಒಂದು ರಾತ್ರಿ, 349 00:41:13,450 --> 00:41:16,700 ನಿನ್ನ ಚಿಕ್ಕ, ಬರಿದಾದ ಮುಖವನ್ನು ನೋಡಿದಾಗ, 350 00:41:18,533 --> 00:41:20,533 ಒಬ್ಬ ಹಳೆಯ ಕುಬ್ಜ-ರಾಜನ 351 00:41:22,825 --> 00:41:28,825 ಮಹಾ ಬೂದುಗಡ್ಡವನ್ನು ಅದರಲ್ಲಿ ಗಮನಿಸಿದೆ. 352 00:41:30,158 --> 00:41:34,408 ಒಂದು ಮಹಾ ಸೈನ್ಯದಂತೆ ಅದ್ಭುತವಾಗಿ, ಬಲಶಾಲಿಯಾಗಿತ್ತು. 353 00:41:38,241 --> 00:41:41,450 ಹಾಗೇ ನಿನ್ನ ತಾಯಿ ಎದ್ದಾಗ, 354 00:41:43,491 --> 00:41:46,283 ಇನ್ನು ಮುಂದೆ ಅಳಬೇಕಿಲ್ಲ ಎಂದು ಅವಳಿಗೆ ಹೇಳಿದೆ. 355 00:41:46,366 --> 00:41:52,366 ನಮ್ಮ ಮಗ ಬದುಕಲಿದ್ದು ಬೆಟ್ಟಗಳನ್ನೇ ಜರುಗಿಸುವನು! 356 00:41:58,825 --> 00:42:02,033 ನಾನೊಂದು ಸಣ್ಣ ಗುಂಡಿ ತೋಡಿದಾಗ ನೀವು ಅಷ್ಟೊಂದು ವಿಚಲಿತರಾದರೆ, 357 00:42:02,116 --> 00:42:05,450 ನಾನು ಬೆಟ್ಟಗಳನ್ನು ಹೇಗೆ ಜರುಗಿಸಲಿ, ಅಪ್ಪ? 358 00:42:06,366 --> 00:42:08,450 ನನಗೆ ಮಹತ್ತಾದುದನ್ನೇ ಹೇಳುತ್ತೀರಾ, 359 00:42:09,283 --> 00:42:13,158 ಆದರೆ ನನ್ನೊಳಗಿನ ಮಹತ್ವಾಕಾಂಕ್ಷೆಯನ್ನು, 360 00:42:13,241 --> 00:42:15,200 ನಿಮ್ಮೊಳಗೆ ಹುಟ್ಟದ ಯಾವುದೇ ಆಸೆ, 361 00:42:15,283 --> 00:42:20,408 ಆಲೋಚನೆಗಳನ್ನು ಹೊಸಕಿಹಾಕಿಬಿಡುತ್ತೀರಾ. 362 00:42:20,491 --> 00:42:23,783 ಅತ್ಯಂತ ಭಾರ ಹೊರಬೇಕಾದ ಕಬ್ಬಿಣವು ಗಟ್ಟಿಯಾಗಲು 363 00:42:23,866 --> 00:42:27,200 ಕುಲುಮೆಯಲ್ಲಿ ಅತ್ಯಂತ ಕಠಿಣ ಏಟುಗಳನ್ನು ಸಹಿಸಬೇಕಾಗುತ್ತದೆ! 364 00:42:27,283 --> 00:42:30,908 ನಿಮ್ಮ ಮಿತ್ರರನ್ನು ಸಾವಿನ ಬಳಿ ತಳ್ಳುವುದು ಗಟ್ಟಿಯಾಗುವುದಲ್ಲ! 365 00:42:33,700 --> 00:42:36,908 ಎಲ್ರೊಂಡ್ ನನ್ನ ತಾಯಿಯ ಗರ್ಭದಲ್ಲೇ 366 00:42:36,991 --> 00:42:40,533 ಹುಟ್ಟಿದ ಸಹೋದರನಂತೆ ನನಗೆ. 367 00:42:42,116 --> 00:42:43,825 ಎಷ್ಟು ಧೈರ್ಯ ನಿನಗೆ… 368 00:42:49,616 --> 00:42:51,450 ಎಷ್ಟು ಧೈರ್ಯ ನಿನಗೆ! 369 00:42:53,033 --> 00:42:54,658 ನಿನ್ನವರಿಗೇ ದ್ರೋಹ ಬಗೆಯುವ 370 00:42:54,741 --> 00:42:58,366 ನಿನ್ನ ನಿರ್ಧಾರವನ್ನು ಸಮರ್ಥಿಸಲು ನಿನ್ನ ತಾಯಿಯ ನೆನಪನ್ನು ಉಪಯೋಗಿಸುತ್ತೀಯಾ? 371 00:42:58,450 --> 00:43:01,325 ಇಲ್ಲ! ನಮ್ಮವರಿಗೆ ದ್ರೋಹ ಬಗೆದಿದ್ದು ನೀನು! 372 00:43:01,408 --> 00:43:05,241 ಭೂತಕಾಲದಲ್ಲೇ ಇರಲು ನಮ್ಮ ಭವಿಷ್ಯವನ್ನೇ ಬಲಿಕೊಟ್ಟುಬಿಟ್ಟೆ ನೀನು! 373 00:43:05,325 --> 00:43:07,908 ನೀನು ತೊಟ್ಟಿರುವ ಕಿರೀಟಕ್ಕೇ ಅದು ಕಳಂಕ! 374 00:43:50,491 --> 00:43:51,908 ಬಿಡು. 375 00:43:54,908 --> 00:43:56,575 ಇನ್ನು ಅದು ನಿನ್ನದಲ್ಲ. 376 00:44:13,866 --> 00:44:18,491 ಶರತ್ಕಾಲದ ಆ ದಿನ ಅವನು ಬಸವನಹುಳುಗಳ ಹಿಡಿಯುತ್ತಿದ್ದಾಗ 377 00:44:18,575 --> 00:44:22,366 ಅವನ ಮಗುವು ಅಳುತ್ತಿದ್ದಳು ನದಿಯು ಅವಳನ್ನು ಕಸಿದಿತ್ತು 378 00:44:22,450 --> 00:44:25,658 ಪೋಪ್ಪಿ? ಏನ್ಮಾಡ್ತಾ ಇದ್ದೀಯಾ? 379 00:44:25,741 --> 00:44:27,700 ಒಂದು ತಂಬಿಗೆ ತರ್ತಾ ಇದ್ದೀನಿ. 380 00:44:27,783 --> 00:44:30,700 ಅಯ್ಯೋ, ಆಹಾರವಲ್ಲ. ತಿನ್ನೋದು ನಿಲ್ಲಿಸು! ಅವನ್ನು ಉಳಿಸಬೇಕು. 381 00:44:30,783 --> 00:44:34,575 ನೀನು ಹೋಗಿ ಹೊರಗೆ ನೋಡಿಕೊಂಡು ಬಂದರೆ, ಆಮೇಲೆ ಮಾತಾಡೋಣ. 382 00:44:37,241 --> 00:44:38,241 ಏನು... 383 00:44:43,575 --> 00:44:46,991 - ನೋಡಿ ಅದನ್ನ! ಆಹಾ! - ಈ ಬೆಳೆಯ ಜೊತೆ ಸಂತೆಗೆ ಹೋಗೋಣ... 384 00:44:51,408 --> 00:44:52,408 ತಗೊಳ್ಳಿ... 385 00:44:54,575 --> 00:44:57,700 ನನಗೆ ಅರ್ಥವಾಗುತ್ತಿಲ್ಲ. ಹೇಗೆ? 386 00:44:57,783 --> 00:44:59,033 ಹೇಗಿರಬಹುದು? 387 00:45:00,658 --> 00:45:02,075 ಅವನೇ ಸರಿಮಾಡಿದನು. 388 00:45:03,950 --> 00:45:05,741 ನೀನು ನಂಬುತ್ತೀಯಾ, ನೋರಿ? 389 00:45:05,825 --> 00:45:08,158 ಇಂದು ರಾತ್ರಿ ಚೆನ್ನಾಗಿ ತಿನ್ನೋಕೆ ಇಲ್ಲಿ 390 00:45:08,241 --> 00:45:11,158 ಬೇಕಾದಷ್ಟು ಆಹಾರ ಇದ್ದು, ಫ್ರೋಜನ್ ಫಿಶ್ ವರೆಗೂ ಇರಲಿದೆ. 391 00:45:11,241 --> 00:45:14,366 ಮಲ್ವಾ ಸೇಬಿನ ಹಲ್ವಾ ಏನೋ ಮಾಡಲಿದ್ದಾಳಂತೆ. 392 00:45:14,450 --> 00:45:16,450 - ಸೇಬಿನ ಹುಳಿ. - ಅದನ್ನೇ ನಾನು ಹೇಳಿದ್ದು. 393 00:45:30,075 --> 00:45:31,408 ಅಪ್ಪ. 394 00:45:31,491 --> 00:45:33,783 ಧನ್ಯವಾದ, ಮಲ್ವಾ. ನಿನ್ನ ತಂಗಿ ಎಲ್ಲಿ? 395 00:45:33,866 --> 00:45:37,241 ಸಿಕ್ಕಿತು. ಇಲ್ಲೇನಾದರೂ ಜಾಗ ಇದೆಯಾ? ನಮ್ಮದಾಯಿತು. 396 00:45:37,783 --> 00:45:41,200 ...ತೇಲಿ ಬಂದಿತು ಅವಳು ಅಷ್ಟು ಜೋರಾಗಿ ಅತ್ತಳು 397 00:45:41,283 --> 00:45:43,366 ಕಪ್ಪೆ ಮೀನುಗಳ ರಾಜ 398 00:45:43,450 --> 00:45:45,700 ಅವಳನ್ನು ಬಸವನಹುಳುವಾಗಿ ಮಾಡಿದ 399 00:45:46,158 --> 00:45:50,950 ಮುದಿ ಬೋಲ್ಜರ್ಬಕ್ ಅವಳ ಹಿಡಿದ ಎಷ್ಟು ರಸಯುಕ್ತ, ಎಷ್ಟೊಂದು ಮಧುರ 400 00:45:51,033 --> 00:45:55,033 ಅವನ ಎಳೆ ಮಗಳು ಎಂದರು ಅವನಿಗೆ ಸಹಾಯ ಮಾಡಲಾಗಲಿಲ್ಲ ಆದರೆ... 401 00:47:42,616 --> 00:47:43,783 ಇರು! 402 00:47:45,866 --> 00:47:47,491 ತಪ್ಪು ದಾರಿಯಲ್ಲಿ ಹೋಗ್ತಾ ಇದ್ದೀಯಾ. 403 00:47:49,741 --> 00:47:51,200 ಅವನು ಆ ಕಡೆ ಹೋದ. 404 00:47:52,950 --> 00:47:54,200 ಈಗ ಹೋಗು. 405 00:48:07,866 --> 00:48:09,075 ನೋರಿ! 406 00:48:12,366 --> 00:48:14,283 - ಅವಳನ್ನು ಬಿಡಿ! - ಕೇಳಿದ್ರಲ್ಲ. 407 00:48:14,366 --> 00:48:16,283 - ಹೋಗಿ ಈಗ! - ಹೊರಟುಹೋಗಿ! 408 00:48:17,325 --> 00:48:20,825 ಅವಳ ಕಾಲಿನ ಬೆರಳ ಕೂದಲು ಕೊಂಕಿದರೂ ನಿಮ್ಮ ತಲೆ ತೆಗೆದು ಬಿಡ್ತೀನಿ. 409 00:49:35,908 --> 00:49:38,450 ಬನ್ನಿ. ಸರಿ. ನಿಮ್ಮ ಕೈಗಳನ್ನು ಹೊರಗಿರಿಸಿ. 410 00:49:40,158 --> 00:49:41,158 ಜೊತೆಯಾಗಿ ಈಗ. 411 00:49:45,783 --> 00:49:46,783 ಅಯ್ಯೋ! 412 00:49:49,366 --> 00:49:50,783 ಅವನನ್ನು ನನಗೆ ಕೊಡಿ. 413 00:49:55,991 --> 00:49:56,991 ಇಲ್ಲ! 414 00:49:58,075 --> 00:50:00,491 ನೀನು ಮನೆಗೆ ಹೋಗುತ್ತೀಯ. ಕೇಳಿಸ್ತಾ? 415 00:50:01,533 --> 00:50:02,950 ನೀನು ನಮ್ಮ ಜೊತೆ ಬರ್ತೀಯ. 416 00:50:10,450 --> 00:50:13,283 ದಯವಿಟ್ಟು. ಬೆರೆಕ್. 417 00:50:14,450 --> 00:50:16,700 - ದಯವಿಟ್ಟು. - ಅವನು ನಿಮ್ಮ ಮಾತು ಕೇಳಲ್ಲ. 418 00:50:18,950 --> 00:50:20,950 ಅವನು ನಮ್ಮ ಯಾರ ಮಾತನ್ನೂ ಕೇಳಲ್ಲ. 419 00:50:57,033 --> 00:50:59,616 ಎಲ್ಫನ್ನ ನಾನು ಹಡಗಿಗೆ ಹತ್ತಿಸಿಕೊಳ್ಳಲೇಬಾರದಿತ್ತು. 420 00:51:02,408 --> 00:51:05,075 ಅವಳು ಸಿಕ್ಕಿದಲ್ಲೇ ಸಮುದ್ರದಲ್ಲಿ ಬಿಡಬೇಕಾಗಿತ್ತು. 421 00:52:47,075 --> 00:52:48,491 ಥಿಯೋ? 422 00:53:34,783 --> 00:53:38,616 ಮಹಾರಾಣಿ ರೀಜೆಂಟ್. ಅವಳಿಲ್ಲಿದ್ದಾಳಾ? 423 00:53:45,866 --> 00:53:47,866 ತಯಾರಿಗಳು ಇನ್ನೇನು ಮುಗಿಯುತ್ತಿವೆ. 424 00:53:48,991 --> 00:53:50,825 ನಾವೊಂದು ಗಂಟೆಯಲ್ಲಿ ಹೊರಡಬಹುದು. 425 00:53:51,408 --> 00:53:53,491 ಮತ್ತೆ ಸೌತ್ ಲ್ಯಾಂಡರ್ಗಳು? 426 00:53:53,575 --> 00:53:57,575 ಸುರಕ್ಷಿತ ತಾಂಡಾಗೆ ಅವರನ್ನು ಕರೆದೊಯ್ಯಲು ಒಂದು ತುಕಡಿ ಇಲ್ಲೇ ಇರಲಿದೆ. 427 00:53:59,491 --> 00:54:01,158 ನಮ್ಮ ಕಾಣೆಯಾದವರನ್ನು ಹುಡುಕಲು. 428 00:54:12,283 --> 00:54:13,283 ಗಲಾಡ್ರಿಯಲ್. 429 00:54:36,866 --> 00:54:38,616 ನ್ಯೂಮೆನೊರಿನಲ್ಲಿ ಯಾರೂ ಮಂಡಿಯೂರರು. 430 00:54:39,741 --> 00:54:41,741 ನೀನು ನ್ಯೂಮೆನೊರಲ್ಲಿಲ್ಲ. 431 00:54:42,866 --> 00:54:44,866 ನೀವ್ಯಾರೂ ಇಲ್ಲ. 432 00:54:45,575 --> 00:54:47,991 ಇದು ನನ್ನದೇ ತಪ್ಪು. 433 00:54:48,533 --> 00:54:51,116 ನಮ್ಮ ಹಡಗುಗಳು ಕಾಯುತ್ತಿವೆ, ರಾಣಿ. 434 00:54:53,908 --> 00:54:56,241 ಈ ನೆಲವನ್ನು ನಮ್ಮ ಹಾಯಿಗಳ ಹಿಂದೆ ಸರಿಸೋಣ. 435 00:55:16,866 --> 00:55:19,700 ನಿನ್ನ ಕನಿಕರ ನನಗೆ ಬೇಡ, ಎಲ್ಫ್. 436 00:55:21,116 --> 00:55:24,116 ಅದನ್ನು ನಮ್ಮ ಶತ್ರುಗಳಿಗಾಗಿ ಉಳಿಸು. 437 00:55:25,991 --> 00:55:28,408 ಅವರೇನು ಶುರು ಮಾಡಿದ್ದಾರೆಂದು ಅವರಿಗೆ ಗೊತ್ತಿಲ್ಲ. 438 00:55:37,075 --> 00:55:39,825 ಯಾಕಂದ್ರೆ ನಾನು, ಮೀರಿಯೆಲ್, 439 00:55:40,866 --> 00:55:43,491 ಆರ್-ಇಂಜಿಲದೂನನ ಮಗಳು, ಶಪಥ ಮಾಡುತ್ತೇನೆ. 440 00:55:44,033 --> 00:55:45,783 ನ್ಯೂಮೆನೊರ್ ವಾಪಸ್ ಬರಲಿದೆ. 441 00:55:48,491 --> 00:55:51,575 ಆಗ ಎಲ್ಫ್ಗಳು ತಯಾರಿರುತ್ತಾರೆ. 442 00:55:55,158 --> 00:55:58,158 ನಾಯಕರೇ, ಅಲೆಯೊಂದಿಗೆ ಸಾಗೋಣ. 443 00:56:01,825 --> 00:56:03,075 ನಾಯಕರೇ? 444 00:56:12,325 --> 00:56:13,575 ಗೊತ್ತಾಯ್ತು. 445 00:56:31,116 --> 00:56:35,116 ಎದ್ದೇಳಮ್ಮ, ಹುಡುಗಿ. ನಿಂತುಕೋ. ಬೇಕಾದುದನ್ನ ಎತ್ಕೋಳ್ಳೋಕೆ ನಂಗೆ ಸಹಾಯ ಮಾಡು. 446 00:56:36,908 --> 00:56:38,908 ನೋರಿ, ಈಗ. 447 00:56:38,991 --> 00:56:41,950 ನಿನ್ನ ಮನಸ್ಸಿಗೆ ಘಾಸಿಯಾಗೋದು ಬೇಡ, ಎಲ್ಲಾ ಸರಿ ಹೋಗುತ್ತೆ. 448 00:56:42,033 --> 00:56:45,783 ಅವಳಿಗೆ ಸುಳ್ಳು ಹೇಳಬೇಡ, ಲಾರ್ಗೋ. ಅವಳಿಗೆ ತುಂಬಾನೇ ವಯಸ್ಸಾಗಿದೆ. 449 00:56:45,866 --> 00:56:48,241 ನಾನು ಸುಳ್ಳು ಹೇಳ್ತಿರಲಿಲ್ಲ. ಎಲ್ಲಾ ಸರಿ ಹೋಗುತ್ತೆ. 450 00:56:48,325 --> 00:56:50,116 ದಯವಿಟ್ಟು, ಬ್ರ್ಯಾಂಡಿಫುಟ್. 451 00:56:50,200 --> 00:56:51,991 ನಮಗೆ ದುಃಖಿಸೋಕಾದರೂ ಒಂದು ಕ್ಷಣ ಕೊಡು. 452 00:56:52,075 --> 00:56:53,366 ದುಃಖಿಸೋದಾ? 453 00:56:53,825 --> 00:56:56,325 ನಮ್ಮಲ್ಲಿ ಉಳಿದಿರೋದು ಇಷ್ಟೇ ಅಂದುಕೊಂಡೆಯಾ? 454 00:56:56,408 --> 00:56:57,908 ನಾವು ಹಾರ್ಫೂಟ್ಗಳು! 455 00:57:09,450 --> 00:57:11,366 ನೋಡಿ, ನಾವು ಡ್ರ್ಯಾಗನ್ಗಳನ್ನು ಕೊಲ್ಲಲ್ಲ. 456 00:57:12,908 --> 00:57:14,991 ಒಡವೆಗಳಿಗಾಗಿ ಅಗೆಯುವವರೂ ಅಲ್ಲ. 457 00:57:15,075 --> 00:57:17,283 ಆದರೆ ನಾವು ಮಾಡಲಿಕ್ಕಾಗೋದು ಒಂದೇ ಕೆಲಸ ಅಂತೀನಿ, 458 00:57:17,366 --> 00:57:20,325 ಮಿಡ್ಲ್ ಅರ್ಥಿನ ಯಾವುದೇ ಜೀವಿಗಿಂತಲೂ ಚೆನ್ನಾಗಿ. 459 00:57:22,700 --> 00:57:24,325 ನಾವು ನಿಯತ್ತಾಗಿ ಇರ್ತೀವಿ. 460 00:57:26,325 --> 00:57:30,366 ದಾರಿ ಎಷ್ಟೇ ತಿರುಗಿದರೂ, ಎಷ್ಟೇ ಕಡಿದಾದರೂ, 461 00:57:32,116 --> 00:57:33,450 ನಾವು ಎದುರಿಸುವೆವು, 462 00:57:34,783 --> 00:57:38,616 ನಮ್ಮ ಪಾದಗಳಿಗಿಂತ ದೊಡ್ಡದಿರುವ ನಮ್ಮ ಹೃದಯಗಳೊಂದಿಗೆ. 463 00:57:41,450 --> 00:57:43,116 ನಾವು ನಡೆದೇ ಹೋಗುತ್ತಿರುತ್ತೇವೆ. 464 00:58:08,825 --> 00:58:11,325 ನೋರಿ. ಎಲ್ಲಿಗೆ ಹೋಗ್ತಿದ್ದೀಯಾ? 465 00:58:14,450 --> 00:58:15,783 ನನ್ನ ಸ್ನೇಹಿತನಿಗೆ ನೆರವಾಗಲು. 466 00:58:16,825 --> 00:58:19,825 ಬರಲಿರುವುದನ್ನು ಅವನಿಗೆ ತಿಳಿಸಿ. ಅಷ್ಟು ಅವನಿಗೆ ಕೊಡಬೇಕು. 467 00:58:19,908 --> 00:58:23,158 ದಾರಿ ಬಿಟ್ಟು ಹೋಗೋದಾ? ಈಗ? ಒಬ್ಬಳೇ? 468 00:58:23,241 --> 00:58:24,491 ಅವಳು ಒಬ್ಬಳೇ ಇರಲ್ಲ. 469 00:58:28,700 --> 00:58:31,783 ಈಗಾಗಲೇ ಬೇಕಾದಷ್ಟು ಜನರನ್ನು ಬಿಟ್ಟಿದ್ದೀವಿ, ಅವನನ್ನ ಬಿಡಲ್ಲ. 470 00:58:34,158 --> 00:58:36,366 ನೀವು ಹುಡುಗಿಯರು ಎಲ್ಲೂ ಹೋಗ್ತಿಲ್ಲ. 471 00:58:37,741 --> 00:58:39,575 ನನ್ನನ್ನ ಬಿಟ್ಟು ಅಂತೂ ಅಲ್ಲ. 472 00:58:43,950 --> 00:58:45,783 ಇದರ ಬಗ್ಗೆ ಖಚಿತವಾ, ಗೋಲ್ಡೀ? 473 00:58:45,866 --> 00:58:49,700 ನೀವು ಆ ಕಾಡಿನೊಳಗೆ ಹೋದರೆ ಜೀವಂತವಾಗಿ ತಿರುಗಿ ಬರದೇ ಇರಬಹುದು. 474 00:58:49,783 --> 00:58:53,491 ದಾರಿ ಹುಡುಕುವವರು ಅವರ ಜೊತೆ ಹೋದರೆ ತಿರುಗಿ ಬರಬಹುದು. 475 00:58:55,325 --> 00:58:59,325 ಬ್ರ್ಯಾಂಡಿಫುಟ್ ಹುಡುಗಿ ಅವನಿಗೆ ನೆರವಾಗಿದ್ದು ಸರಿಯೇ. ಸರಿಯಾಗೇ ಮಾಡಿದಳು. 476 00:58:59,408 --> 00:59:02,908 ಮಲ್ವಾ ಮೆಡೋಗ್ರಾಸ್ಗೆ ಅದನ್ನು ಹೇಳಿಕೊಳ್ಳಲು ತುಂಬಾ ಬಿಂಕ ಎಂದಾದರೆ, 477 00:59:02,991 --> 00:59:06,991 ನಾವು ಚೆನ್ನಾಗಿ ಬದುಕುತ್ತಲೂ ಇಲ್ಲದಿದ್ದರೆ, ಬದುಕುವುದು ಏನು ಚೆನ್ನ, ಸಾಡೊಕ್? 478 00:59:10,866 --> 00:59:14,075 ಗೊತ್ತಾ, ಮಲ್ವಾ, ಒಂದೇ ಒಂದು ಸಲ... 479 00:59:14,158 --> 00:59:18,408 ಒಂದೇ ಒಂದು ಸಲ, ನೀನು ಎಲ್ಲಾ ಬಾರಿಯೂ ಸರಿಯಾಗಿಲ್ಲದಿದ್ದರೆ ಚೆನ್ನಾಗಿರುತ್ತೆ. 480 00:59:19,991 --> 00:59:22,325 ಅಗತ್ಯ ವಸ್ತುಗಳು ಮತ್ತು ನನ್ನ ಕೋಲನ್ನು ತರುವೆನು. 481 00:59:23,241 --> 00:59:24,408 ನಾನೂ ಜೊತೆ ಬರ್ತೀನಿ. 482 00:59:28,075 --> 00:59:30,450 ಹೇಗೂ ಪರವಾಗಿಲ್ಲ, ನಾವೆಲ್ಲಾ ಸಾಯುವೆವು. 483 00:59:31,950 --> 00:59:34,616 ಬನ್ನಿ, ಇಲ್ಲಾಂದ್ರೆ ಇಡೀ ದಿನ ಇಲ್ಲೇ ಇರ್ತೀವಿ. 484 00:59:34,700 --> 00:59:36,616 ಮತ್ತೆ ಅವನನ್ನು ಹುಡುಕಲಾಗುತ್ತಾ? 485 00:59:36,700 --> 00:59:39,741 ಅವನೊಬ್ಬ ದೈತ್ಯ. ಅವನು ಹೇಗೆ ಕಾಣದೇ ಹೋಗ್ತಾನೆ? 486 01:00:03,700 --> 01:00:06,241 ಅವಳು ತನ್ನ ಮಾತನ್ನು ಉಳಿಸಿಕೊಳ್ಳುತ್ತಾಳಂತೀಯಾ? 487 01:00:06,325 --> 01:00:07,491 ಇಲ್ಲ. 488 01:00:08,533 --> 01:00:09,950 ನನಗೆ ಅದು ಖಚಿತವಾಗಿ ಗೊತ್ತು. 489 01:00:11,741 --> 01:00:16,158 ಮೂಳೆಗಳನ್ನು ಕೂಡಿಸಲಾಗಿದೆ, ಗಾಯಕ್ಕೆ ಪಟ್ಟಿ ಮಾಡಿಯಾಗಿದೆ. ನಾವು ಪ್ರಯಾಣಿಸಬಹುದು. 490 01:00:16,741 --> 01:00:18,658 ಎಲ್ಲಿಗೆ ಹೋಗ್ತೀಯಾ? 491 01:00:18,741 --> 01:00:22,033 ಯಾಂಡುಯಿನ್ ಪ್ರವೇಶದ್ವಾರದಲ್ಲಿರೋ ಒಂದು ಹಳೆ ನ್ಯೂಮೆನೊರಿನ ಬಡಾವಣೆ. 492 01:00:22,575 --> 01:00:27,491 ಪೆಲಾರ್ಗಿರ್ ಅಂತ ಕರೆಯುತ್ತಿದ್ದರು. ಅಲ್ಲಿ ಹೊಸ ನೆಲ, ಸ್ವಚ್ಛ ಜಲ ಇದೆ ಅಂತಾರೆ. 493 01:00:28,325 --> 01:00:29,825 ಒಂದು ಹೊಸ ಆರಂಭ. 494 01:00:32,700 --> 01:00:34,658 ಹಾಗಿದ್ದರೆ ನಾನು ಮೇಲರಸರ ಬಳಿಯೇ ಹೋಗುವೆ. 495 01:00:36,950 --> 01:00:38,950 ನನಗೆ ಬರೋದನ್ನ ಎದುರಿಸೋಕೆ. 496 01:00:40,908 --> 01:00:42,158 ಆದರೆ ನಮ್ಮ ರಾಜ? 497 01:00:43,533 --> 01:00:44,783 ನಿಮ್ಮ ರಾಜ? 498 01:00:45,700 --> 01:00:47,116 ನಿಮಗೆ ಯಾರೂ ತಿಳಿಸಲಿಲ್ಲವೇ? 499 01:00:47,741 --> 01:00:49,241 ಯಾವುದರ ಬಗ್ಗೆ ತಿಳಿಸುವುದು? 500 01:00:56,200 --> 01:00:57,366 ಹಲ್ಬ್ರ್ಯಾಂಡ್. 501 01:01:00,325 --> 01:01:01,908 ನೀನು ಸತ್ತು ಹೋದೆ ಅಂದುಕೊಂಡಿದ್ದೆ. 502 01:01:03,366 --> 01:01:05,450 ಸತ್ತಿದ್ದರೆ ಚೆನ್ನಾಗಿರುತ್ತಿತ್ತೇನೋ. 503 01:01:07,491 --> 01:01:11,075 ಸೌತ್ ಲ್ಯಾಂಡರ್ಗಳು ಅವನನ್ನು ರಸ್ತೆಯಲ್ಲಿ ನಿನ್ನೆ ರಾತ್ರಿ ಹೀಗೆ ಕಂಡರು. 504 01:01:12,616 --> 01:01:14,616 ಗಾಯ ರಾತ್ರಿಯೇ ಹದಗೆಟ್ಟಿದೆ. 505 01:01:14,700 --> 01:01:17,700 ಅವನಿಗೆ ರಸ್ತೆಯಲ್ಲೇ ಚಿಕಿತ್ಸೆ ಕೊಡಲು ಪ್ರಯತ್ನಿಸಿದೆ, ಆದರೆ... 506 01:01:23,825 --> 01:01:25,825 ಈ ಗಾಯಕ್ಕೆ ಎಲ್ವಿಶ್ ಔಷಧವೇ ಬೇಕು. 507 01:01:27,116 --> 01:01:28,283 ಅವನು ಸವಾರಿ ಮಾಡಬಲ್ಲನೇ? 508 01:01:28,366 --> 01:01:31,741 ಬೇಕಿರುವ ಸಾಮಗ್ರಿಗಳನ್ನು ಸಂಗ್ರಹಿಸಲು ವೈದ್ಯರಿಗೆ ಹೇಳುವೆ. 509 01:01:40,575 --> 01:01:42,325 ನೋಡು, ಮಿತ್ರ. 510 01:01:43,283 --> 01:01:46,450 ವಿಧಿ ನಮಗೆ ಇನ್ನೊಂದು ತೆಪ್ಪವನ್ನು ತಯಾರು ಮಾಡಿಟ್ಟಿದೆ. 511 01:01:46,533 --> 01:01:48,241 ಇದು ಮುಗಿದಿಲ್ಲ. 512 01:01:48,325 --> 01:01:51,741 ನಾನು ಈ ನೆಲವನ್ನು ತೊರೆದು ಅವರು ಸುಡಲು ಬಿಡುವುದಿಲ್ಲ. 513 01:01:54,033 --> 01:01:55,366 ನೀನೂ ಅಷ್ಟೇ. 514 01:02:22,700 --> 01:02:24,033 ರಾಜನಿಗೆ ಜಯವಾಗಲಿ! 515 01:02:24,783 --> 01:02:28,616 ರಾಜನಿಗೆ ಜಯವಾಗಲಿ! 516 01:02:48,533 --> 01:02:51,533 ಇರಿಸಿಕೋ... ಸೈನಿಕ. 517 01:02:54,950 --> 01:02:56,116 ಸೇನಾಧಿಪತಿ. 518 01:03:05,533 --> 01:03:07,158 ಸೌತ್ ಲ್ಯಾಂಡ್ಸಿಗೆ ಜಯವಾಗಲಿ! 519 01:03:07,241 --> 01:03:10,991 ಸೌತ್ ಲ್ಯಾಂಡ್ಸಿಗೆ ಜಯವಾಗಲಿ! 520 01:03:35,075 --> 01:03:36,491 ನಾನವನಿಗೆ ದ್ರೋಹ ಬಗೆದೆ. 521 01:03:38,908 --> 01:03:41,575 ಎಲ್ಲಾ ನನ್ನದೇ ತಪ್ಪು. 522 01:03:43,658 --> 01:03:44,741 ಇಲ್ಲ. 523 01:03:45,408 --> 01:03:46,700 ಇಲ್ಲ, ನಿನ್ನದಲ್ಲ. 524 01:03:48,325 --> 01:03:49,825 ಮತ್ತೆ ಯಾರದ್ದು? 525 01:03:53,783 --> 01:03:54,950 ನಿನ್ನ ತಂದೆಯದ್ದು. 526 01:03:56,658 --> 01:04:00,658 ಅವರಿಗೆ ತುಂಬಾ ವಯಸ್ಸಾಗಿದೆ, ಅನುಮಾನ ತುಂಬಿದೆ. 527 01:04:01,491 --> 01:04:03,908 ಅವರ ಮನಸ್ಸು ತುಂಬಾ ಬಲಹೀನವಾಗಿದೆ. 528 01:04:04,533 --> 01:04:07,075 ನೆಲಕ್ಕೆ ಎಷ್ಟು ಶಿಖೆಗಳನ್ನು ಅವರು ಎಸೆದರೂ 529 01:04:07,200 --> 01:04:10,533 ಅವರ ಕಣ್ಣುಗಳೀಗ ಮಂಜಾಗಿವೆ, 530 01:04:11,908 --> 01:04:14,366 ಒಂದು ದಿನ ಇದು ನಿನ್ನ ರಾಜ್ಯವಾಗಲಿದೆ. 531 01:04:16,991 --> 01:04:18,991 ನಾಲ್ಕನೆಯ ಡ್ಯುರಿನ್ದು. 532 01:04:19,075 --> 01:04:20,700 ನಿನ್ನ ಸೋದರನದ್ದಲ್ಲ. 533 01:04:22,866 --> 01:04:26,658 ಅಥವಾ ಯಾರೋ ಕುಬ್ಜ-ದೊರೆಯದ್ದಲ್ಲ. ನಿನ್ನದು. 534 01:04:27,866 --> 01:04:29,200 ಮತ್ತು ನನ್ನದು. 535 01:04:30,450 --> 01:04:35,908 ಜೊತೆಯಾಗಿ ಈ ಬೆಟ್ಟ ಮತ್ತು ಮಿಕ್ಕೆಲ್ಲವನ್ನೂ ನಮ್ಮ ಕಾಲ ಮುಗಿಯುವುದರೊಳಗೆ ಆಳೋಣ. 536 01:04:39,241 --> 01:04:42,366 ಆ ಮಿಥ್ರಿಲ್ ನಮಗೆ ಸೇರಿದ್ದು. 537 01:04:43,575 --> 01:04:45,408 ನಿನಗೆ ಮತ್ತು ನನಗೆ. 538 01:04:46,325 --> 01:04:48,741 ಮತ್ತು ಜೊತೆಯಾಗಿ, ಒಂದು ದಿನ, 539 01:04:49,908 --> 01:04:52,158 ನಾವು ಅಗೆಯಲಿದ್ದೇವೆ. 540 01:05:18,783 --> 01:05:23,325 ಅದನ್ನು ಮುಚ್ಚಿಬಿಡಿ. 541 01:05:53,991 --> 01:05:55,241 ನನ್ನ ಮಕ್ಕಳೇ. 542 01:05:56,616 --> 01:05:59,283 ನಿಮ್ಮ ಬಿಸಿಲಿನ ಅಂಗಿ ಮತ್ತು ಶಿಖೆಗಳನ್ನೂ ತೆಗೆಯಿರಿ. 543 01:05:59,950 --> 01:06:02,533 ನಿಮಗೆ ಹಗಲಲ್ಲಿ ಇನ್ನು ಯಾವುದೇ ಭಾರ ಇರದು. 544 01:06:03,908 --> 01:06:05,491 ಈಗ ಇದು ನಮ್ಮ ನೆಲ. 545 01:06:08,741 --> 01:06:10,158 ಇದು ನಮ್ಮ ಮನೆ. 546 01:06:11,575 --> 01:06:15,283 ಅಡಾರಿಗೆ ಜಯವಾಗಲಿ, ಸೌತ್ ಲ್ಯಾಂಡ್ಸಿನ ರಾಜನಿಗೆ! 547 01:06:15,366 --> 01:06:19,116 ಅಡಾರಿಗೆ ಜಯವಾಗಲಿ, ಸೌತ್ ಲ್ಯಾಂಡ್ಸಿನ ರಾಜನಿಗೆ! 548 01:06:19,241 --> 01:06:22,408 ಅಡಾರಿಗೆ ಜಯವಾಗಲಿ, ಸೌತ್ ಲ್ಯಾಂಡ್ಸಿನ ರಾಜನಿಗೆ! 549 01:06:22,491 --> 01:06:25,950 ಅಡಾರಿಗೆ ಜಯವಾಗಲಿ, ಸೌತ್ ಲ್ಯಾಂಡ್ಸಿನ ರಾಜನಿಗೆ! 550 01:06:27,116 --> 01:06:28,408 ಇಲ್ಲ... 551 01:06:30,908 --> 01:06:35,533 ಇನ್ನಿಲ್ಲದ ಜಾಗದ ಹೆಸರು ಅದು. 552 01:06:36,491 --> 01:06:39,075 ಬದಲಾಗಿ ಅದನ್ನು ಏನಂತ ಕರೆಯಬೇಕು, ಲಾರ್ಡ್ ಫಾದರ್? 553 01:06:43,741 --> 01:06:47,866 ಅಡಾರ್! ಅಡಾರ್! ಅಡಾರ್! 554 01:06:57,616 --> 01:07:02,033 ದಿ ಸೌತ್ ಲ್ಯಾಂಡ್ಸ್ 555 01:07:03,533 --> 01:07:09,533 ಮೊರ್ಡೊರ್ 556 01:09:08,700 --> 01:09:10,700 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 557 01:09:10,783 --> 01:09:12,783 ಸೃಜನಾತ್ಮಕ ಮೇಲ್ವಿಚಾರಕ: ಮೌರಿಯಾ. ಸ್. ಅರವಿಂದ್