1
00:00:12,520 --> 00:00:13.520
ಈ ಸರಣಿಯ ಕತೆ ಮತ್ತು ಪಾತ್ರಗಳು ಕಾಲ್ಪನಿಕ
ಮತ್ತು ಯಾವುದೇ ವ್ಯಕ್ತಿಗೂ ಸಂಬಂಧಿಸಿರುವುದಿಲ್ಲ.
2
00:00:13,600 --> 00:00:14.600
ಈ ಸರಣಿಯಲ್ಲಿ ಕಥೆಗೆ ಪೂರಕವಾಗುವಂಥ ಕೆಟ್ಟ ಭಾಷೆ
ಮತ್ತು ಪ್ರಣಯದ ದೃಶ್ಯಗಳು ಇವೆ.
3
00:00:14,680 --> 00:00:15.680
ಯಾವುದೇ ವ್ಯಕ್ತಿ, ಜಾತಿ, ಸಮಾಜ, ಸಂಸ್ಥೆಯ
ಅವಮಾನ ಮಾಡುವುದು ಇದರ ಉದ್ದೇಶವಲ್ಲ.
4
00:00:15,760 --> 00:00:16.720
ಯಾವುದೇ ತರದ ಮಾದಕ ವಸ್ತು, ಮದ್ಯ, ತಂಬಾಕಿನ
ವಸ್ತುಗಳು, ಅಥವಾ ಮಾಟ, ಮಂತ್ರ, ತಂತ್ರ,
5
00:00:16,840 --> 00:00:17.840
ಕ್ಷುದ್ರವಿದ್ಯೆ ಸಂಬಂಧಿತ ಆಚರಣೆಗಳು, ಅಥವಾ
ಮೂಢನಂಬಿಕೆಗಳನ್ನು ಈ ಸರಣಿಯು ಅಂಗೀಕರಿಸುವುದಿಲ್ಲ.
6
00:00:17,920 --> 00:00:18.920
ಈ ಸರಣಿಯ ಚಿತ್ರೀಕರಣದಲ್ಲಿ ಯಾವುದೇ ವ್ಯಕ್ತಿ
ಅಥವಾ ಪ್ರಾಣಿಗೆ ಹಾನಿಯಾಗಿರುವುದಿಲ್ಲ.
7
00:00:19,000 --> 00:00:20.000
ಸರಣಿಯ ಅಭಿಪ್ರಾಯಗಳನ್ನು ಅಮೇಜಾನ್ ಅಂಗೀಕರಿಸದು.
ವಿಷಯ ಸೂಕ್ಷ್ಮದ್ದು. ನೋಡುಗರ ವಿವೇಚನೆ ಅನುಸರಿಸಿ.
8
00:01:02,440 --> 00:01:04.360
ಸುಳಲ್ - The Vortex
9
00:02:03,760 --> 00:02:07.840
{an8}-ದ್ರೋಹ ಮಾಡಬೇಡಿ!
-ದ್ರೋಹ ಮಾಡಬೇಡಿ!
10
00:02:07,920 --> 00:02:09.160
{an8}ವಡ್ದೆ ಸಿಮೆಂಟ್ ಕಾರ್ಖಾನೆ, ಸಂಬಲೂರ್
11
00:02:09,280 --> 00:02:12.160
{an8}-ಕಾರ್ಮಿಕರಿಗೆ ದ್ರೋಹ ಮಾಡಬೇಡಿ!
-ದ್ರೋಹ ಮಾಡಬೇಡಿ!
12
00:02:12,240 --> 00:02:15.960
-ದ್ರೋಹ ಮಾಡಬೇಡಿ!
-ದ್ರೋಹ ಮಾಡಬೇಡಿ!
13
00:02:16,040 --> 00:02:19.800
-ಕಾರ್ಮಿಕರಿಗೆ ದ್ರೋಹ ಮಾಡಬೇಡಿ!
-ಕಾರ್ಮಿಕರಿಗೆ ದ್ರೋಹ ಮಾಡಬೇಡಿ!
14
00:02:19,880 --> 00:02:23.560
-ನಾವು ಜೀತದಾಳುಗಳಲ್ಲ!
-ನಾವು ಜೀತದಾಳುಗಳಲ್ಲ!
15
00:02:23,600 --> 00:02:27.120
-ನಾವು ಕಾರ್ಮಿಕರು!
-ನಾವು ಕಾರ್ಮಿಕರು!
16
00:02:27,160 --> 00:02:30.360
-ದ್ರೋಹ ಮಾಡಬೇಡಿ!
-ದ್ರೋಹ ಮಾಡಬೇಡಿ!
17
00:02:30,440 --> 00:02:32.560
ಫೋನ್ ಇಡು. ಅಣ್ಣಾ?
18
00:02:32,600 --> 00:02:34.160
ಸಿಮೆಂಟ್ ಮೂಟೆಗಳು ಬೇಕಾ?
19
00:02:34,280 --> 00:02:37.800
-ಇನ್ಸ್ಪೆಕ್ಟರ್ ರೆಜಿನಾ ಬರುತ್ತಿದ್ದಾರೆ!
-ಸಂಬಳ ಮಾತ್ರ ನೀವು ಕೊಡಲ್ಲ!
20
00:02:37,880 --> 00:02:41.800
-ದ್ರೋಹ ಮಾಡಬೇಡಿ!
-ದ್ರೋಹ ಮಾಡಬೇಡಿ!
21
00:02:41,880 --> 00:02:45.640
-ಕಾರ್ಮಿಕರಿಗೆ ದ್ರೋಹ ಮಾಡಬೇಡಿ!
-ಕಾರ್ಮಿಕರಿಗೆ ದ್ರೋಹ ಮಾಡಬೇಡಿ!
22
00:02:45,720 --> 00:02:51.680
-ದ್ರೋಹ ಮಾಡಬೇಡಿ!
-ದ್ರೋಹ ಮಾಡಬೇಡಿ!
23
00:02:53,320 --> 00:02:57.320
-ನಾವು ಜೀತದಾಳುಗಳಲ್ಲ!
-ನಾವು ಜೀತದಾಳುಗಳಲ್ಲ!
24
00:02:57,400 --> 00:03:01.040
-ನಾವು ಕಾರ್ಮಿಕರು!
-ನಾವು ಕಾರ್ಮಿಕರು!
25
00:03:01,560 --> 00:03:04.200
-ಧಿಕ್ಕಾರ, ಧಿಕ್ಕಾರ!
-ಧಿಕ್ಕಾರ, ಧಿಕ್ಕಾರ!
26
00:03:04,280 --> 00:03:07.640
-ಸಿ.ಇ.ಒ ತ್ರಿಲೋಕ್ಗೆ ಧಿಕ್ಕಾರ!
-ಸಿ.ಇ.ಒ ತ್ರಿಲೋಕ್ಗೆ ಧಿಕ್ಕಾರ!
27
00:03:07,720 --> 00:03:10.920
-ಧಿಕ್ಕಾರ, ಧಿಕ್ಕಾರ!
-ಧಿಕ್ಕಾರ, ಧಿಕ್ಕಾರ!
28
00:03:11,000 --> 00:03:13.680
-ಸಿಇಒ ತ್ರಿಲೋಕ್ಗೆ ಧಿಕ್ಕಾರ
-ತ್ರಿಲೋಕ್ಗೆ ಧಿಕ್ಕಾರ
29
00:03:13,760 --> 00:03:16.400
-ಧಿಕ್ಕಾರ, ಧಿಕ್ಕಾರ!
-ಧಿಕ್ಕಾರ, ಧಿಕ್ಕಾರ!
30
00:03:16,480 --> 00:03:19.680
-ಸಿ.ಇ.ಒ ತ್ರಿಲೋಕ್ಗೆ ಧಿಕ್ಕಾರ!
-ಸಿ.ಇ.ಒ ತ್ರಿಲೋಕ್ಗೆ ಧಿಕ್ಕಾರ!
31
00:03:19,760 --> 00:03:22.440
-ಧಿಕ್ಕಾರ, ಧಿಕ್ಕಾರ!
-ನಿಲ್ಲಿಸ್ರಪ್ಪ!
32
00:03:22,520 --> 00:03:25.760
-ನಿಲ್ಲಿಸಿ!
-ಸಿ.ಇ.ಒ ತ್ರಿಲೋಕ್ಗೆ ಧಿಕ್ಕಾರ!
33
00:03:25,840 --> 00:03:29.240
-ಸಿ.ಇ.ಒ ತ್ರಿಲೋಕ್ಗೆ ಧಿಕ್ಕಾರ!
-ಸಿ.ಇ.ಒ ತ್ರಿಲೋಕ್ಗೆ ಧಿಕ್ಕಾರ!
34
00:03:31,000 --> 00:03:34.000
ನಿಮ್ಮ ಮೇಲೆ ಎರಡು ಟ್ರೈನ್ ಹರಿಸೋಕೆ
ನನಗೆ ಜಾಸ್ತಿ ಸಮಯ ಬೇಡ.
35
00:03:34,640 --> 00:03:36.080
ಇದೇ ನನ್ನ ಕೊನೆಯ ಕೊಡುಗೆ!
36
00:03:36,880 --> 00:03:38.520
ಒಪ್ಪಿಗೆಯಾದರೆ ಇರಿ!
37
00:03:38,600 --> 00:03:40.680
ಇಲ್ಲಾ ಬೇರೆಯವರನ್ನ ಕರೆಸಿ ಮಾಡಿಸ್ತೀನಿ!
38
00:03:41,960 --> 00:03:45.080
ಓಯ್! ಹಾಗೆ ಮಾತಾಡೋಕೆ ಎಷ್ಟು ಧೈರ್ಯ ನಿಂಗೆ?
39
00:03:45,480 --> 00:03:47.120
ಬೇರೆಯವರನ್ನ ಕರೆಸಿ ನೋಡು!
40
00:03:47,200 --> 00:03:48.800
ಕಾರ್ಖಾನೆ ಹೊತ್ತಿ ಉರಿಯುತ್ತೆ!
41
00:03:48,880 --> 00:03:51.320
ಧಿಕ್ಕಾರ! ಧಿಕ್ಕಾರ!
42
00:03:52,200 --> 00:03:54.280
ಸಿ.ಇ.ಒ ತ್ರಿಲೋಕ್ಗೆ ಧಿಕ್ಕಾರ!
43
00:03:54,360 --> 00:03:58.280
ಧಿಕ್ಕಾರ! ಧಿಕ್ಕಾರ!
44
00:03:58,360 --> 00:04:01.880
ಸಿ.ಇ.ಒ ತ್ರಿಲೋಕ್ಗೆ ಧಿಕ್ಕಾರ!
45
00:04:01,960 --> 00:04:05.480
ಧಿಕ್ಕಾರ! ಧಿಕ್ಕಾರ!
ಸಿ.ಇ.ಒ ತ್ರಿಲೋಕ್ಗೆ ಧಿಕ್ಕಾರ!
46
00:04:05,560 --> 00:04:09.000
ಸಿ.ಇ.ಒ ತ್ರಿಲೋಕ್ಗೆ ಧಿಕ್ಕಾರ!
47
00:04:09,080 --> 00:04:10.840
ಕಲ್ಲು ಹೊಡೀತಾ ಇದ್ದಾರೆ, ಸರ್!
48
00:04:12,520 --> 00:04:14.440
ಚಾರ್ಜ್!
49
00:04:28,240 --> 00:04:30.480
ನನ್ನ ಯಾಕ್ರೋ ಹೊಡೀತಾ ಇದ್ದೀರಾ? ನಾಯಿಗಳಾ!
50
00:04:30,560 --> 00:04:32.120
ನನ್ನ ಯಾಕೆ ಹೊಡೀತಾ ಇದ್ದೀರಾ?
51
00:04:32,200 --> 00:04:34.240
ಏಯ್! ನಿನ್ನನ್ನ ಬಿಡಲ್ಲ!
52
00:04:34,360 --> 00:04:38.880
ಪೊಲೀಸ್ ದೌರ್ಜನ್ಯಕ್ಕೆ ಧಿಕ್ಕಾರ!
53
00:04:38,920 --> 00:04:40.320
ದಯಾಳನ್!
54
00:04:40,360 --> 00:04:42.240
ಪೊಲೀಸ್ ದೌರ್ಜನ್ಯಕ್ಕೆ ಧಿಕ್ಕಾರ!
55
00:04:42,800 --> 00:04:44.160
ಷಣ್ಮುಗಂ!
56
00:04:47,480 --> 00:04:48.800
ಏಯ್, ಹೋಗಯ್ಯ!
57
00:04:52,080 --> 00:04:53.000
ಜರುಗು, ಜರುಗು.
58
00:04:54,360 --> 00:04:56.240
ಯಾರನ್ನ ಹೊಡೀತಾ ಇದ್ದೀಯ ಗೊತ್ತಾ?
59
00:05:18,080 --> 00:05:19.920
ಮಾಮ, ಎದ್ದೇಳು!
60
00:05:20,760 --> 00:05:23.480
-ಮನೆಗೆ ಹೋಗು. ನನ್ ಮಾತು ಕೇಳು!
-ಸಕ್ಕರೆ, ಇದು ತಪ್ಪು.
61
00:05:27,480 --> 00:05:28.520
ನಡಿ.
62
00:06:15,360 --> 00:06:18.720
ಕೆಲಸದವರ ಸಂಬಳ ಏರಿಸದೇ
ಕಾರ್ಖಾನೆ ನಡೆಸಬೇಕು ಅಂತಿದ್ದಾರೆ!
63
00:06:18,800 --> 00:06:20.880
ಇವರ ದೌರ್ಜನ್ಯಕ್ಕೆ ಕೊನೆ ಯಾವಾಗ?
64
00:06:20,960 --> 00:06:22.680
ಹೋಗ್ಲಿ ಬಿಡು, ಕಾಮ್ರೇಡ್!
65
00:06:22,760 --> 00:06:25.880
ಒಂದು ವಿಷಯ ಮುಗಿದರೆ
ಇನ್ನೊಂದು ದೊಡ್ಡದು ಹುಟ್ಟುತ್ತೆ!
66
00:06:26,680 --> 00:06:29.560
ಹೋರಾಟಗಳಿಗೂ ಕ್ರಾಂತಿಗಳಿಗೂ ಕೊನೆ ಇರುತ್ತಾ?
67
00:06:29,640 --> 00:06:31.160
ಹಣ ಇಟ್ಕೋ, ಅಣ್ಣ.
68
00:06:31,240 --> 00:06:33.160
ಏನಾಯ್ತು, ಭಾವ?
69
00:06:33,240 --> 00:06:34.640
ಇದು ನಮಗೆ ಹೊಸದೇನಲ್ಲ!
70
00:06:34,720 --> 00:06:37.040
ನಿಲಾ ಮನೆಗೆ ಬಂದಳಾ?
71
00:06:37,120 --> 00:06:39.360
ಬಂದು ಹಾಲು ಕುಡಿದು ಈಗ ಓದಿಕೊಳ್ತಾ ಇದ್ದಾಳೆ.
72
00:06:39,440 --> 00:06:41.480
ನಿಮಗೆ ಸ್ವಲ್ಪ ಬಿಸಿ ಕಷಾಯ ಕೊಡಲಾ?
73
00:06:41,560 --> 00:06:42.720
ಬೇಡ, ಪರವಾಗಿಲ್ಲ.
74
00:06:43,800 --> 00:06:46.000
-ನೀನು ರಾತ್ರಿ ಗುಡಿಗೆ ಹೋಗಬೇಕಲ್ವಾ?
-ಹೌದು.
75
00:06:46,080 --> 00:06:46.920
ಮೆರವಣಿಗೆ.
76
00:06:47,000 --> 00:06:49.200
ದೇವಾಲಯದ ಬಾವುಟ ರಾತ್ರಿ ಹಾರಿಸ್ತಾರೆ.
ಯಾಕೆ?
77
00:06:49,280 --> 00:06:50.600
ವಕೀಲರನ್ನ ನೋಡಬೇಕಾ?
78
00:06:51,240 --> 00:06:53.720
ಇಲ್ಲ... ನೀನು ಹೋಗಿ ಬಾ.
79
00:06:53,800 --> 00:06:55.120
ಬೇಕಾದ್ರೆ ಫೋನ್ ಮಾಡು.
80
00:06:56,000 --> 00:06:57.920
ಸೆಲ್ವಿ. ಸ್ವಲ್ಪ ಟೀ ಕೊಡು.
81
00:07:00,680 --> 00:07:01.720
ನಿಲಾ!
82
00:07:15,520 --> 00:07:16.360
ನಿಲಾ!
83
00:07:47,280 --> 00:07:48.480
ಶೈಕ್ಷಣಿಕ ನಿರ್ವಹಣೆ
84
00:08:02,840 --> 00:08:04.760
ಯಾವಾಗಲೂ ಹಾಡು, ಕುಣಿತ!
85
00:08:04,840 --> 00:08:06.680
ಜೊತೆಗೆ, ಈ ದರಿದ್ರ ಸ್ಪೀಕರ್!
86
00:08:07,480 --> 00:08:11.400
ಮಾದರಿ ಪರೀಕ್ಷೆಯಲ್ಲಿ ಎರಡು ಸಬ್ಜೆಕ್ಟ್ ಫೇಲ್ ಆಗಿ
ಈಗ ಕುಣೀತಾ ಇದ್ದೀಯ?
87
00:08:12,760 --> 00:08:14.080
-ಅಪ್ಪ?
-ಮುಚ್ಚು ಬಾಯಿ!
88
00:08:14,760 --> 00:08:17.800
ತಮಿಳಿನಲ್ಲೂ ಫೇಲ್ ಆಗಿ
ಇಲ್ಲಿ ಬಂದು ಡಾನ್ಸ್ ಮಾಡ್ತಾ ಇದ್ದೀಯ?
89
00:08:17,880 --> 00:08:19.400
10ನೇ ಕ್ಲಾಸ್ನಲ್ಲಿದೀಯ.
90
00:08:19,480 --> 00:08:22.400
ಹಿಂಗೇ ಆದ್ರೆ,
ಪಬ್ಲಿಕ್ ಎಕ್ಸಾಮ್ನಲ್ಲೂ ಫೇಲ್ ಆಗ್ತೀಯ!
91
00:08:22,480 --> 00:08:24.200
ಸಾರಿ, ಅಪ್ಪ.
92
00:08:24,920 --> 00:08:26.520
ಅಪ್ಪ, ಸಾರಿ!
93
00:08:30,320 --> 00:08:31.840
ನಿಮಗೆ ಏಟಾಗಿದೆ!
94
00:08:31,920 --> 00:08:34.200
ವಿಷಯ ಬದಲಾಯಿಸಬೇಡ!
95
00:08:34,280 --> 00:08:36.680
ಓದೋದು ಬಿಟ್ರೆ ನಿಂಗೆ ಬೇರೆ ಏನು ಕೆಲಸ ಇದೆ?
96
00:08:38,040 --> 00:08:41.280
ಜೊತೆಗೆ ಎಕ್ಸ್ಟ್ರಾ ಕ್ಲಾಸ್!
ಅದಕ್ಕೆ ಫೀಸ್ ಬೇರೆ ದಂಡ.
97
00:08:42,040 --> 00:08:44.880
ಎಷ್ಟು ಚೆನ್ನಾಗಿ ಓದ್ತಾ ಇದ್ದೆ. ಈಗೇನಾಯ್ತು?
98
00:08:45,760 --> 00:08:48.040
ಯಾವಾಗ ನೋಡು ಫೋನ್ ಬಿಟ್ರೆ ಬೂಮು.
99
00:08:48,120 --> 00:08:51.320
-ಇದೆಲ್ಲಾ ಕೊಡಿಸಿದ್ದು ನನ್ ತಪ್ಪೇ...
-ಸಾರಿ, ಅಪ್ಪ.
100
00:08:51,400 --> 00:08:56.400
ನೀನು ಮತ್ತೆ ಒಳ್ಳೆ ಅಂಕ ಗಳಿಸೋವರೆಗೂ
ಇದೆಲ್ಲಾ ಬಂದ್.
101
00:08:57,280 --> 00:08:58.440
ಸಾರಿ, ಅಪ್ಪ.
102
00:09:00,360 --> 00:09:01.360
ಸಾರಿ, ಅಪ್ಪ!
103
00:09:03,040 --> 00:09:04.760
-ತೊಲಗು.
-ಸಾರಿ, ಅಪ್ಪ.
104
00:09:06,600 --> 00:09:08.040
ಸಾರಿ, ಅಪ್ಪ.
105
00:09:25,480 --> 00:09:28.520
ರತ್ನಂ, ನಾಳೆಯಿಂದ ನೀನು, ಅರುಣಗಿರಿ
106
00:09:28,640 --> 00:09:33.280
ಮುಂದಿನ ಒಂಭತ್ತು ದಿನಗಳ ಕಾಲ ಹದ್ದುಗಳ ಥರ
ಮಸಣದ ಕೊಳ್ಳೆ ಕಾರ್ಯಕ್ರಮವನ್ನ ನೋಡ್ತಾ ಇರ್ಬೇಕು.
107
00:09:33,360 --> 00:09:37.120
ಈ ಊರಿನ ಕಳ್ಳ ನನ್ ಮಕ್ಳೆಲ್ಲಾ
ಈ ಜನಜಾತ್ರೆ ಸಂದರ್ಭದಲ್ಲಿ
108
00:09:37,200 --> 00:09:40.280
ಸೇಡು ತೀರಿಸಿಕೊಳ್ಳೋದಕ್ಕೆ ಕಾಯ್ತಾ ಇರ್ತಾರೆ.
109
00:09:40,360 --> 00:09:43.640
ಅಮ್ಮ, ಸಕ್ಕರೆ ಅಣ್ಣ ಫೋನ್ ಮಾಡಿದ್ರು.
ಹುಡುಗಿ ಕುಟುಂಬದವರು--
110
00:09:43,720 --> 00:09:45.640
ಗೊತ್ತು! ಸಂಜೆ 5:30ಕ್ಕೆ ಬರ್ತಿದ್ದಾರೆ.
111
00:09:45,760 --> 00:09:47.960
ಹೋಗ್ತಾ ದಾರಿಯಲ್ಲಿ ಹೂವು-ಹಣ್ಣು ತಗೊಳ್ಳೋಣ.
112
00:09:57,400 --> 00:10:00.280
-ತಡೆಗೋಡೆ ಹಾಕಿಸಿ. ನಾನು ಬರ್ತೀನಿ.
-ಸರಿ, ಮೇಡಂ.
113
00:10:06,440 --> 00:10:08.720
ಎತ್ಕೊಳ್ಳಿ, ಅಮ್ಮ. 60 ರುಪಾಯಿ ಅಷ್ಟೇ.
114
00:10:08,760 --> 00:10:10.160
60 ರುಪಾಯಿಗಳಾ?
115
00:10:10,240 --> 00:10:13.040
ಹಬ್ಬ ನೋಡಿ. ಬೇಕಿದ್ರೆ ತಗೊಳ್ಳಿ ಇಲ್ಲಾ ಬಿಡಿ.
116
00:10:13,120 --> 00:10:14.480
ಇದು ಹಗಲು ದರೋಡೆ.
117
00:10:14,520 --> 00:10:16.520
ಇಲ್ಲಿ ತಗೊಳ್ಳಿ. 50 ರುಪಾಯಿ ಅಷ್ಟೇ.
118
00:10:16,640 --> 00:10:18.640
ತಗೊಳ್ಳೋ ಥರ ಬಂದು ಸುಮ್ನೆ ಹೋಗ್ತೀರ.
119
00:10:18,760 --> 00:10:21.640
-ಟೈಮ್ ವೇಸ್ಟ್...
-ಯಾರತ್ರ ಮಾತಾಡ್ತಾ ಇದ್ದೀಯ ಗೊತ್ತಾ?
120
00:10:21,760 --> 00:10:24.360
-ಯಾರು?
-ನೀನು ಬೇರೆ ಊರಿನವನಲ್ವಾ?
121
00:10:24,440 --> 00:10:25.400
-ಹೌದು.
-ಇರು.
122
00:10:25,480 --> 00:10:27.040
-ಅತಿಶಯಂ.
-ಅಂಗಡಿ ಮುಚ್ಚಿಸ್ತೀನಿ.
123
00:10:27,120 --> 00:10:27.960
ಹೇಯ್!
124
00:10:28,960 --> 00:10:30.080
ಬಿಟ್ಟಾಕು.
125
00:10:31,120 --> 00:10:32.400
ಬಿಡು ಅಂದೆ ತಾನೇ!
126
00:10:32,480 --> 00:10:34.880
ಎಲ್ಲಿಂದ ಇಷ್ಟೊಂದು ಕೋಪ ಬರುತ್ತೆ ನಿಂಗೆ?
127
00:10:34,960 --> 00:10:36.880
ಎಲ್ಲಾ ನಿನ್ನಿಂದಾನೆ ಬಂದಿರೋದು.
128
00:10:38,040 --> 00:10:40.760
-ಸರಿ, ನಾನು ಹೊರಡ್ತಿನಿ.
-ಸರಿ, ಸರಿ.
129
00:10:43,120 --> 00:10:45.400
ಈಗಲೇ 3:45 ಆಯ್ತು. ಯಾವಾಗ ಬರ್ತೀಯ?
130
00:10:45,480 --> 00:10:48.080
ನಾನು 5 ಗಂಟೆಗೆ ಬಂದುಬಿಡ್ತೀನಿ. ಹುಷಾರಾಗಿ ಹೋಗು.
131
00:10:48,160 --> 00:10:49.040
ಬೇಗ ಬಾಮ್ಮಾ!
132
00:10:53,640 --> 00:10:54.880
ಹುಷಾರಾಗಿ ಹೋಗು!
133
00:11:06,040 --> 00:11:09.760
ಪರಿಹಾರದ ಬಗ್ಗೆ ಯೋಚಿಸಬೇಡಿ.
ನಾನ್ ಅದನ್ನ ನೋಡಿಕೊಳ್ತೀನಿ. ಆಯ್ತಾ?
134
00:11:10,440 --> 00:11:12.760
ಆಮೇಲೆ ಸಿಗ್ತೀನಿ.
135
00:11:17,520 --> 00:11:19.400
ಲೇಟ್ ಆಯ್ತಾ, ರೆಜಿನಾ ಚಿನ್ನ?
136
00:11:19,480 --> 00:11:22.440
ಅತಿಶಯಂನ ಕಲ್ಸ್ಬೇಕಿತ್ತಲ್ಲ..
ಅವನೂ ಜೊತೆಗೆ ಬರ್ತಿದ್ದ.
137
00:11:24,920 --> 00:11:27.920
ಅವನು ಕಾಲೇಜಿಗೆ ಹೋಗುವಾಗ ಬೈಕ್ ಕೊಡಿಸೋಣ.
138
00:11:28,920 --> 00:11:31.240
ಇದರ ಬಗ್ಗೆ ಈಗಾಗಲೇ ಮಾತಾಡಿದ್ದೀವಲ್ಲ?
139
00:11:32,880 --> 00:11:37.720
ಅವನನ್ನ ತುಂಬಾ ಮುದ್ದಿಸ್ತಾ ಇದ್ದೀವಿ ಅನ್ಸುತ್ತೆ.
ಈಗಲೇ ಎಲ್ಲಾ ಕಡೆ ಜಗಳ ಮಾಡ್ತಾ ಇದಾನೆ.
140
00:11:40,000 --> 00:11:42.120
ವಯಸ್ಸಿನ ಹುಡುಗರು ಹಂಗೇ ಹುಷಾರು ಇರ್ಬೇಕು!
141
00:11:42,200 --> 00:11:45.120
ಇಲ್ಲಾಂದ್ರೆ ನಿಮ್ಮಂಗೆ
ಪುಸ್ತಕದ ಹುಳು ಥರ ಇರಬೇಕಾ?
142
00:11:46,440 --> 00:11:50.640
ಅದಕ್ಕೇನಾ ಈ ಲೇಡಿ ಪೊಲೀಸ್
ಈ ಪುಸ್ತಕದ ಹುಳು ಹಿಂದೆ ಬಿದ್ದಿದ್ದು?
143
00:11:53,600 --> 00:11:55.280
ಏಯ್, ಮುತ್ತು!
144
00:11:55,360 --> 00:11:59.440
ಈ ವಿಷಯ ಸ್ಟೇಷನ್ನಿಗೆ ಹೋಯ್ತು ಅಂದ್ರೆ
ಚರ್ಮ ಸುಲಿದುಬಿಡ್ತೀನಿ!
145
00:12:14,640 --> 00:12:17.040
ತ್ರಿಲೋಕ್ ನಿನಗೆ ಡೌನ್ ಪೇಮೆಂಟ್ ಕೊಟ್ಟರಾ?
146
00:12:17,120 --> 00:12:19.120
ಹಾಂ. ಅವನು ಯಾವ ಬೈಕ್ ಬೇಕು ಅಂದಿದ್ದು?
147
00:12:19,720 --> 00:12:21.560
ಯಾಕೆ? ಅದು ಕೆಟಿಎಂ ಡ್ಯೂಕ್.
148
00:12:22,360 --> 00:12:26.680
ಬೇರೆ ಯಾವುದೋ ಕೊಡಿಸಿ ಹುಟ್ಟುಹಬ್ಬದ ದಿನ
ಅವನ ಪೆಚ್ಚು ಮೋರೆ ನೋಡೋಕೆ ನಂಗಿಷ್ಟ ಇಲ್ಲ.
149
00:12:27,280 --> 00:12:29.960
ಆದರೆ ನನಗ್ಯಾಕೋ ಇದು ಸರಿ ಅನ್ನಿಸ್ತಿಲ್ಲ.
150
00:12:30,480 --> 00:12:32.120
ಲಂಚದ ಬಗ್ಗೆ ಅಂತಲ್ಲ.
151
00:12:32,200 --> 00:12:34.960
ಕಾರ್ಮಿಕರಿಗೆ ವಿರುದ್ಧವಾಗಿ
ಹೋಗ್ತಿದ್ದೀವಿ ಅನ್ಸುತ್ತೆ.
152
00:12:35,760 --> 00:12:38.240
ನಾನೇನೋ ಪೊಲೀಸ್ ಉದ್ಯೋಗದಲ್ಲಿದ್ದು ಲಂಚ ತಗೋತೀನಿ.
153
00:12:38,320 --> 00:12:41.000
ಆದ್ರೆ ಅದನ್ನ ಕೊಡುವಂಥ ಸಂಸ್ಥೆ ನೀವೇ ಆಲ್ವಾ?
154
00:12:41,080 --> 00:12:46.360
ವೈಟ್ ಕಾಲರ್ ಕೆಲಸದಲ್ಲಿದ್ರೂ
ನಾವಿಬ್ರೂ ಬ್ಲೂ ಕಾಲರ್ ಕೆಲಸದವರೇ.
155
00:12:49,800 --> 00:12:53.560
ಚೂಡಿದಾರು, ಕಾಟನ್ ಸೀರೆಗಳು,
ಬ್ಲೌಸುಗಳು ಇಲ್ಲಿ ಸಿಗುತ್ತವೆ!
156
00:12:53,640 --> 00:12:57.120
ಗಿರಾಕಿಗಳನ್ನ ಬೇಗ ವಿಚಾರಿಸೋ.
ಎಷ್ಟು ಸಲ ಹೇಳಬೇಕು ನಿಂಗೆ?
157
00:12:57,200 --> 00:13:00.560
ಏನು ನೋಡ್ತಾ ಇದ್ದೀಯ, ಮಗಳೇ?
ಹಳದಿ ಎಲ್ಲಾ ಕಾರ್ಯಕ್ಕೂ ಹೊಂದುತ್ತೆ.
158
00:13:00,640 --> 00:13:02.840
ಬಿಳಿ ಫಿಟ್, ಗುಲಾಬಿ ಗ್ಲಾಮರ್ ಆಗಿರುತ್ತೆ.
159
00:13:02,920 --> 00:13:05.200
-ನೆಮ್ಮದಿಯಾಗಿ ಕೊಳ್ಳೋದಕ್ಕೂ ಬಿಡಲ್ಲ.
-ನಡಿ.
160
00:13:05,720 --> 00:13:06.560
ಹೇಯ್!
161
00:13:07,760 --> 00:13:10.120
-ಅಕ್ಕ, ಯಾವಾಗ ಬಂದೆ?
-ಈಗಷ್ಟೇ ಬಂದೆ.
162
00:13:10,200 --> 00:13:14.040
ಆ ಕಡೆ ಹೋಗ್ತಾ ಇದ್ರೆ ನೀನು ಕಾಣಿಸಿದೆ,
ಅದಕ್ಕೆ ಇಲ್ಲಿಗೇ ಬಂದೆ.
163
00:13:14,120 --> 00:13:16.480
-ಹೇಗಿದ್ದೀಯಾ?
-ಚೆನ್ನಾಗಿದ್ದೀನಿ. ನೀನು?
164
00:13:16,560 --> 00:13:17.640
ಸೂಪರಾಗಿದ್ದೀನಿ.
165
00:13:17,720 --> 00:13:21.320
ಸರಿಯಾದ ಸಮಯಕ್ಕೇ ಬಂದಿದ್ದೀಯ.
ಇದು ಚೆನ್ನಾಗಿದೆಯಾ?
166
00:13:21,400 --> 00:13:23.560
ನಿನಗೆಲ್ಲಾ ಚೆನ್ನಾಗಿ ಕಾಣುತ್ತೆ, ಚಿನ್ನ.
167
00:13:24,600 --> 00:13:25.880
ನಿಂಗೇನಾದ್ರೂ ಬೇಕಾ?
168
00:13:25,960 --> 00:13:27.840
ಅದನ್ನೆತ್ತಿಕೊಳ್ಳಮ್ಮ. ಹಳದಿ.
169
00:13:27,920 --> 00:13:29.040
ನಾನು ಹೊಲಿಸ್ಕೋತೀನಿ.
170
00:13:29,120 --> 00:13:31.120
ನಮಗೆಲ್ಲಾ ರೆಡಿಮೇಡ್ ಯಾರು ಮಾಡ್ತಾರೆ?
171
00:13:31,200 --> 00:13:33.200
ಹೊಲಿಸೋದಾ? ಇವಳ ಸೈಜು, ಫಿಗರಿಗೆ?
172
00:13:33,280 --> 00:13:36.400
-ಬಂದುಬಿಡ್ತಾರೆ ಎಲ್ಲೆಲ್ಲಿಂದಾನೋ!
-ಅಕ್ಕ, ನೀನು ನೋಡ್ತಾ ಇರು.
173
00:13:36,480 --> 00:13:38.680
ನಾನು ಡಿಸೈನರ್ ಆದ್ಮೇಲೆ ಬೊಟೀಕ್ ಇಟ್ಟು
174
00:13:38,760 --> 00:13:41.640
-ನಿಂಗೆಲ್ಲಾ ತರದ ಬಟ್ಟೆಗಳನ್ನ ಮಾಡ್ತೀನಿ.
-ಅದು ಮಾತು!
175
00:13:44,120 --> 00:13:45.560
-ತುಂಬಾ ಸಂತೋಷ.
-ಕೆಲಸ ನೋಡೋ.
176
00:14:06,320 --> 00:14:07.920
ಊರೆಲ್ಲಾ ಹೂ ಬಿಟ್ಟೈತೆ
177
00:14:08,000 --> 00:14:10.200
ಮಾವ ಉಡುಗೊರೆ ತಂದವ್ನೆ
178
00:14:10,280 --> 00:14:12.160
ಸಂಬಂಧ ಮಾತಾಡಕ್ಕೆ...
179
00:14:12,240 --> 00:14:13.760
ಯಾರು ಬಂದಿದ್ದಾರೆ ನೋಡು.
180
00:14:13,840 --> 00:14:15.720
-ನಮಸ್ಕಾರನಮ್ಮ!
-ಏ, ಪೋಲೀಸಮ್ಮ!
181
00:14:15,800 --> 00:14:18.840
ಹುಡುಗನ ಮನೇಲಿ
ಯಾಕೆ ನಿಶ್ಚಿತಾರ್ಥ ಮಾಡಿಸ್ತಿದ್ದೀಯ?
182
00:14:18,920 --> 00:14:23.080
ಹೌದಜ್ಜಿ. ಇದೆಲ್ಲಾ ಹುಡುಗಿ ಮನೆಯಲ್ಲೇ ನಡೆಯೋದು.
183
00:14:23,160 --> 00:14:26.600
ಆದ್ರೆ ಸಕ್ಕರೆಗೆ ಅವರಮ್ಮ
ಇದ್ದ ಕಡೆನೇ ಮಾಡಬೇಕು ಅಂತ.
184
00:14:26,680 --> 00:14:29.520
ಈಗಿನ ಕಾಲದಲ್ಲಿ ಇಂಥ ಹುಡುಗರು ಸಿಗ್ತಾರಾ ಹೇಳು?
185
00:14:29,600 --> 00:14:31.280
ಆಯ್ತಮ್ಮ, ಬಾಯಿಬಡುಕಿ!
186
00:14:31,360 --> 00:14:34.000
ನಮ್ಮಮ್ಮ ನಿಂಗೆ
ಎಷ್ಟು ಬಿಲ್ಡಪ್ ಕೊಡ್ತಿದ್ದಾರೆ ನೋಡು.
187
00:14:34,880 --> 00:14:37.600
ಚಿಕ್ಕ ಪುಟ್ಟ ಮಾತುಗಳಿಂದ
ಅವನ ಮನಸ ಕದ್ದುಬಿಡು
188
00:14:37,680 --> 00:14:39.760
ನಿನ್ನ ನಲ್ಲ ಎಲ್ಲೂ ಹೋಗದಂತೆ ತಬ್ಬಿಬಿಡು
189
00:14:39,840 --> 00:14:40.960
ಅಮ್ಮಾ!
190
00:14:41,680 --> 00:14:44.160
ನಮ್ಮ ಲಕ್ಷ್ಮಿ. ನರ್ಸಾಗಿದ್ದಾಳೆ.
191
00:14:44,960 --> 00:14:47.200
ಇವಳೇ ರೆಜಿನಾ ಮೇಡಂ ನನಗೆ ನೋಡಿರೋ ಮದುಮಗಳು.
192
00:14:47,880 --> 00:14:49.280
ನಮಗೆ ಜಾಸ್ತಿ ಅನ್ಸಲ್ವಾ?
193
00:14:56,200 --> 00:14:57.680
ಅಮ್ಮನ್ನ ನಾನು ನೋಡ್ಕೋತೀನಿ.
194
00:14:57,760 --> 00:14:59.720
ಆಕೆಯಿಂದ ನಿಂಗೇನೂ ತೊಂದರೆ ಆಗಲ್ಲ.
195
00:14:59,800 --> 00:15:02.560
ನಾನು ಡ್ಯೂಟಿಗೆ ಹೋದಾಗ ಆಯಾ ಬಂದು ನೋಡಿಕೊಳ್ತಾರೆ.
196
00:15:03,280 --> 00:15:04.560
ನಾನೂ ನೋಡ್ಕೋತೀನಿ!
197
00:15:07,640 --> 00:15:09.280
ಲೇ, ತಮ್ಮ!
198
00:15:10,040 --> 00:15:13.800
ಓ, ಸಕ್ಕರೆ, ಲಕ್ಷ್ಮಿಯನ್ನ ತಬ್ಬಿಕೋ
ಎಲ್ಲೂ ಹೋಗದಂತೆ ಅಪ್ಪಿಕೋ
199
00:15:14,360 --> 00:15:15.200
ಬೇಡಾ.
200
00:15:15,280 --> 00:15:17.880
ಚಿಕ್ಕ ಪುಟ್ಟ ಮಾತುಗಳಿಂದ
ಅವನ ಮನಸ ಕದ್ದುಬಿಡು
201
00:15:17,960 --> 00:15:22.000
ಓ, ಸಕ್ಕರೆ, ಲಕ್ಷ್ಮಿಯನ್ನ ತಬ್ಬಿಕೋ
ಎಲ್ಲೂ ಹೋಗದಂತೆ ಅಪ್ಪಿಕೋ
202
00:15:22,080 --> 00:15:25.880
ಏನೂ ಹೇಳದೇ ಇದ್ಬಿಡು
ಅವಳ ಮನಸ ಹೊಕ್ಕಿಬಿಡು
203
00:15:29,280 --> 00:15:32.400
ಶ್ರೀ ಆ. ಪಚ್ಚಮುತ್ತು ಮತ್ತು ಗೋವಿಂದಮ್ಮಾಳರ ಮಗ
204
00:15:32,480 --> 00:15:34.760
ಚಕ್ರವರ್ತಿ ಉರುಫ್ ಸಕ್ಕರೆ
205
00:15:36,120 --> 00:15:42.120
ಮತ್ತು ಶ್ರೀ ಪೆರುಮಾಳ್ ಮತ್ತು ಪೆರಿಯ ಗೌರಿ
ಅಮ್ಮಾಳರ ಮಗಳು ಪರಮೇಶ್ವರಿ ಉರುಫ್ ಲಕ್ಷ್ಮಿ
206
00:15:43,760 --> 00:15:48.000
ಅವರ ಮದುವೆ ಮಾರ್ಚ್ ಒಂದರಂದು ನಿಶ್ಚಯಿಸಲಾಗಿದೆ.
207
00:16:12,160 --> 00:16:15.320
-ವರ್ಷ 1990.
-ಸರಿಯಮ್ಮ.
208
00:16:15,400 --> 00:16:17.840
ಹೌದು. ಸರಿ. 1990ನೇ.
209
00:16:20,520 --> 00:16:23.800
-"ವೈಜಯಂತಿ ಐಪಿಎಸ್ " ಬಿಡುಗಡೆಯಾಯ್ತು.
-ವಿಜಯಶಾಂತಿ ಮಾಡಿದ್ರು.
210
00:16:23,880 --> 00:16:26.360
-ಹಾಂ, ನೋಡಿದ್ದೀರಾ?
-ಹೌದು. ಒಳ್ಳೆ ಸಿನಿಮಾ.
211
00:16:27,360 --> 00:16:28.920
ನನಗಂತೂ ರೋಮಾಂಚನವಾಗಿತ್ತು.
212
00:16:29,960 --> 00:16:32.680
ಆವಾಗಲೇ ಅನ್ಕೊಂಡಿದ್ದು ಪೊಲೀಸ್ ಆಗ್ಬೇಕು ಅಂತ.
213
00:16:33,280 --> 00:16:39.280
ನಾನು ಕೂಡ ಕಡಮೈ ಕನ್ನಿಯಂ ಕಟ್ಟುಪಾಡು
ನೋಡಿ ಪೊಲೀಸ್ ಆಗ್ಬೇಕು ಅಂದುಕೊಂಡಿದ್ದು.
214
00:16:39,360 --> 00:16:41.960
ಹಿಂದಿನ ಕಾಲದ ನ್ಯಾಯಸ್ಥಂಭಗಳೇ ಸರಿ!
215
00:16:42,040 --> 00:16:45.320
ಆದರೀಗ ಟೀಯಲ್ಲಿ ಅದ್ದಿದ
ಬಿಸ್ಕತ್ತುಗಳ ಹಾಗಾಗಿದ್ದೀವಿ.
216
00:16:45,400 --> 00:16:47.400
ಯಾಕಪ್ಪಾ? ಏನಾಯ್ತು?
217
00:16:49,160 --> 00:16:51.640
ಬಿಟ್ಟಿ ಸಾರಾಯಿಗೂ
ತ್ರಿಲೋಕ್ ಹತ್ರ ಕೆಲ್ಸ ಮಾಡ್ತೀವಿ.
218
00:16:53,600 --> 00:16:54.840
ಅದೇ ಜೀವನ.
219
00:16:54,920 --> 00:16:57.480
ಎಲ್ರೂ ದೊಡ್ಡ ಕನಸುಗಳನ್ನೇ ಹೊತ್ತು ತರ್ತೀವಿ.
220
00:16:57,560 --> 00:17:01.440
ವಾಸ್ತವ ಗೊತ್ತಾದಾಗ ಕೆಲವರು ರಾಜಿ ಮಾಡಿಕೊಳ್ತೀವಿ.
221
00:17:02,320 --> 00:17:03.720
ಕೆಲ ರಾಜಕಾರಣಿಗಳೂ ಅಷ್ಟೇ.
222
00:17:04,840 --> 00:17:07.400
ಮೇಡಂ ಇನ್ನೂ ಹಳೇ ಕಾಲದಲ್ಲೇ ಇದ್ದಂಗಿದ್ದಾರೆ.
223
00:17:07,480 --> 00:17:10.480
ಈಗ ಬರ್ತಾ ಇರೋರಿಗೆ ಕೊಳ್ಳೆ ಹೊಡೆಯೋದೇ ಆದ್ಯತೆ.
224
00:17:10,960 --> 00:17:13.440
ಮತ್ತೆ ಸಕ್ಕರೆ ಸಾರ್, ನಿಮಗೆ ಹೆಂಗೆ?
225
00:17:13,520 --> 00:17:17.640
ನನಗೇನೂ ನಿಮ್ ಥರ ಸಿನಿಮಾ ನೋಡಿ
ಪೊಲೀಸ್ ಸೇರಬೇಕು ಅನ್ನಿಸಲಿಲ್ಲ.
226
00:17:17,720 --> 00:17:22.320
ಸಮಾಜದಲ್ಲಿ ಗೌರವ ಇರಬೇಕಂದ್ರೆ
ಒಂದು ಹಣ ಇರಬೇಕು ಇಲ್ಲಾ ಪವರ್ ಇರ್ಬೇಕು.
227
00:17:22,440 --> 00:17:23.880
ಅಷ್ಟೇ.
228
00:17:23,960 --> 00:17:27.800
ನಾನು ಹೇಳಲಿಲ್ವಾ,
ಈಗಿನ ಕಾಲದ ಹುಡುಗರು ತುಂಬಾ ಚುರುಕು ಅಂತ?
229
00:17:27,880 --> 00:17:29.760
-ಸುಂದರಂ!
-ಸರ್?
230
00:17:31,040 --> 00:17:32.080
ಥ್ಯಾಂಕ್ಸ್, ಸರ್.
231
00:17:32,200 --> 00:17:35.920
ಚುರುಕಾಗಿರೋದಕ್ಕೇ ಚಿಕ್ಕ ವಡ್ದೆ ತ್ರಿಲೋಕನನ್ನ
ಜೇಬಲ್ಲಿ ಇಟ್ಕೊಂಡಿರೋದು.
232
00:17:37,320 --> 00:17:38.560
ತಗೊಳ್ಳಿ.
233
00:17:38,680 --> 00:17:40.680
ಎಸ್ಐ ಸರ್, ನಾನು ಕೆಳಗೆ ಹೋಗಿ ಬರ್ತೀನಿ.
234
00:17:40,760 --> 00:17:42.640
ಯಾಕೆ? ಯಾತಕ್ಕೆ? ದಂ ಹೊಡೆಯೋಕಲ್ವಾ?
235
00:17:42,720 --> 00:17:44.320
ಇಲ್ಲೇ ಬಂದು ಸೇದಿರಿ.
236
00:17:44,400 --> 00:17:46.800
ಕೆಳಗಡೆ ಸೇದಿದ್ರೂ ಹೊಗೆ ಇಲ್ಲಿಗೇ ಬರುತ್ತೆ.
237
00:17:46,880 --> 00:17:47.960
-ಲೇಯ್.
-ಹಾಂ?
238
00:17:48,040 --> 00:17:49.520
ಏನು ರಾ ಹಾಕಿದ್ದೀಯಾ?
239
00:17:51,440 --> 00:17:52.320
ಹಾಕಿ, ಮೇಡಂ.
240
00:17:54,200 --> 00:17:55.320
ಸರಿ...
241
00:18:02,560 --> 00:18:04.320
ಸರಿ ಇರು. ಫೋನ್ ಮಾಡ್ತೀನಿ.
242
00:18:04,800 --> 00:18:07.760
ಏನ್, ಮಾಮ್? ಇನ್ಸ್ಪೆಕ್ಟರ್ ಫ್ಲಾಟಾ?
243
00:18:08,400 --> 00:18:09.240
ಲೇಯ್.
244
00:18:09,920 --> 00:18:13.440
ಇನ್ಸ್ಪೆಕ್ಟರ್ ಊರಲ್ಲಿರೋ ಟೆನ್ಶನ್ ಎಲ್ಲಾ
ಹೊತ್ಕೊಂಡು ಇದ್ದಾರೆ.
245
00:18:13,520 --> 00:18:15.320
ಅದಕ್ಕೆ ಸ್ವಲ್ಪ ಸುಸ್ತಾಗಿದ್ದಾರೆ.
246
00:18:15,400 --> 00:18:18.880
ಅದಕ್ಕೇನಾ ಎಲ್ರೂ ನಿನ್ನ ಸಕ್ಕರೆ ಅನ್ನೋದು?
247
00:18:18,960 --> 00:18:20.560
ಈ ಜೇನಿನಂಥ ಮಾತುಗಳಿಗಾ?
248
00:18:20,680 --> 00:18:22.520
-ಏಯ್.
-ಅಮ್ಮಾ?
249
00:18:22,560 --> 00:18:24.160
-ಬಾ.
-ಏಯ್.
250
00:18:25,200 --> 00:18:26.760
-ಬಿಡೋ.
-ಅಯ್ಯೋ.
251
00:18:27,560 --> 00:18:28.440
ಬಾಮ್ಮಾ.
252
00:18:32,080 --> 00:18:33.920
ಏನು, ಸರಿಯಾಗಿ ಟೈಟ್ ಆಗಿದ್ದೀಯಾ?
253
00:18:34,000 --> 00:18:36.000
ಟೈಟ್ ಅಲ್ಲ. ಸುಸ್ತು.
254
00:18:36,080 --> 00:18:38.480
ಗೆಳೆಯರ ಜೊತೆ ಮುನ್ನಾರಿಗೆ ಹೋಗ್ತಿದ್ದೀಯಂತೆ?
255
00:18:38,560 --> 00:18:40.440
ಹೌದು. ಇನ್ನರ್ಧ ಗಂಟೆಯಲ್ಲಿ.
256
00:18:40,520 --> 00:18:41.880
ಹುಟ್ಟುಹಬ್ಬದ ಟ್ರೀಟ್.
257
00:18:41,960 --> 00:18:43.080
-ಬಾಮ್ಮಾ.
-ಬಿಡೋ!
258
00:18:43,160 --> 00:18:44.200
-ಬಾರಮ್ಮ.
-ಲೇಯ್.
259
00:18:44,280 --> 00:18:49.440
ಮುನ್ನಾರಿಗೆ ಹೋಗಿ, ರೂಂ ಮಾಡಿ,
ಪಾರ್ಟಿ ಮಾಡ್ಕೊಂಡು ಮಲ್ಕೋಬೇಕು ಅಷ್ಟೇ!
260
00:18:49,520 --> 00:18:51.880
ನಿದ್ದೇಲಿ ಕಾಡು ಹಂದಿಗಳತ್ರ ಕಚ್ಚಿಸ್ಕೋಬೇಡಿ.
261
00:18:51,960 --> 00:18:54.080
ಯಾರು? ನಾವಾ?
262
00:18:54,680 --> 00:18:55.520
ಇದನ್ನ ನೋಡಿ.
263
00:18:57,640 --> 00:19:00.800
ನಿಂಗೆ ವಿದೇಶೀ ಸರಕು
ಸೆಟ್ ಆಗಲ್ಲ ಅಂತ ಗೊತ್ತು ತಾನೆ?
264
00:19:00,920 --> 00:19:02.200
ಮತ್ತು ಯಾಕೆ ಕುಡೀತೀಯ?
265
00:19:02,280 --> 00:19:06.200
ಆರಾಮಾಗಿ ಲೋಕಲ್ ಎಣ್ಣೆ ಕುಡ್ಕೊಂಡಿರು.
ನಾನು ಮೂರು ದಿನದೊಳಗೆ ಬಂದುಬಿಡ್ತೀನಿ.
266
00:19:06,280 --> 00:19:07.400
ಏನು?
267
00:19:08,240 --> 00:19:10.000
ನಾನು ಹೇಳೋದು ಕೇಳ್ಸಲ್ಲ ಬಿಡು.
268
00:19:10,080 --> 00:19:12.200
ನಾಳೆ ಬೆಳಿಗ್ಗೆ ಆರಾಮಾಗಿರ್ತಾರೆ.
269
00:19:12,280 --> 00:19:13.400
ಬಾಮ್ಮಾ, ಹೋಗೋಣ.
270
00:19:13,480 --> 00:19:15.680
-ಬಿಡೋ.
-ಚಿಲ್ ಮಾ, ಬಾ.
271
00:19:15,760 --> 00:19:18.200
ನನ್ ಮನೆಗೆ ನನ್ನನ್ನೇ ಕರೀತಾ ಇದ್ದೀಯಲ್ಲೋ?
272
00:19:18,280 --> 00:19:20.000
ನಿನ್ ಮನೇನೇ, ಮಮ್ಮೀ. ಬಾ!
273
00:19:22,040 --> 00:19:23.320
ದಿನ 0: ಮಸಣದ ಕೊಳ್ಳೆ
ಧ್ವಜಾರೋಹಣ
274
00:19:23,440 --> 00:19:26.320
ಇಂದು ಧ್ವಜಾರೋಹಣ ಮಾಡಿ ನಾಳೆ ಹಬ್ಬ ಶುರು ಮಾಡೋಣ.
275
00:19:26,400 --> 00:19:30.160
ಮಸಣದ ಕೊಳ್ಳೆ ಹಬ್ಬ ಸಂಬಲೂರ ದೇವತೆ
ಅಂಗಾಳ ಪರಮೇಶ್ವರಿಯದ್ದು.
276
00:19:34,000 --> 00:19:35.240
ಮಲಗಿದ್ದೆಯಾ?
277
00:19:35,720 --> 00:19:36.800
ಇನ್ನೂ ಇಲ್ಲ.
278
00:19:45,560 --> 00:19:46.480
ಹಲೋ?
279
00:19:47,720 --> 00:19:48.560
ಹಲೋ??!
280
00:19:55,320 --> 00:19:56.960
ಹಲೋ! ಏನಾಯ್ತು?
281
00:19:57,040 --> 00:19:58.400
ಹೇಯ್, ಸಾರಿ, ಸಾರಿ.
282
00:19:59,080 --> 00:20:02.240
ಪೂಜಾರಿ ಮತ್ತು ಈಶ್ವರನ್ ಬುರುಡೆ
ಹೊತ್ಕೊಂಡು ಹೋಗ್ತಾ ಇದ್ದಾರೆ.
283
00:20:03,280 --> 00:20:04.880
ಯಾರು? ಪೂಜಾರಿನಾ?
284
00:20:05,560 --> 00:20:06.520
ಅವರ್ಯಾಕೆ...
285
00:20:06,560 --> 00:20:09.640
ಅದೆಲ್ಲಾ ಬಿಡು. ನಾಳೆ ಸಿಗ್ತೀಯಾ?
286
00:20:14,320 --> 00:20:15.800
ನಾಳೆ ನಂಗೆ ಡ್ಯೂಟಿ ಇದೆ.
287
00:20:15,920 --> 00:20:18.960
ಲೇ, ಮೊಟ್ಟೆ ಕಣ್ಣು,
ಪೊಲೀಸ್ ಹತ್ರಾನೇ ಸುಳ್ಳು ಹೇಳ್ತೀಯಾ?
288
00:20:22,080 --> 00:20:24.800
ಕೇಳಿಸ್ತಾ ಇಲ್ಲ.
ಇಲ್ಲಿಂದ ಹೊರಟ ಮೇಲೆ ಫೋನ್ ಮಾಡ್ತೀನಿ.
289
00:20:26,960 --> 00:20:29.560
ಮನೆಗೆ ಹೋಗಿ ಫೋನ್ ಮಾಡ್ತೀನಿ.
290
00:20:40,440 --> 00:20:43.960
ದೇವಸ್ಥಾನದ ಧ್ವಜ ಹಾರಿಸ್ತಾ ಇದ್ರೆ
ನೀವು ಇದನ್ನ ಸುಡ್ತಾ ಇದ್ದೀರಾ?
291
00:20:44,040 --> 00:20:45.800
ಮುಗೀತು. ಈಗ ಹೊರಡ್ತಾ ಇದ್ದೀವಿ.
292
00:20:46,800 --> 00:20:48.920
-ಬೇಗ ಹೋಗೋಣ.
-ಮುತ್ತು.
293
00:20:49,560 --> 00:20:52.800
ಎಲ್ರನ್ನೂ ಬಿಟ್ಟು ನೀನೊಬ್ನೇ
ಟೀ ಕುಡೀತಾ ಇದ್ದೀಯಾ?
294
00:20:52,920 --> 00:20:53.800
ಏಯ್!
295
00:20:57,440 --> 00:20:59.080
ಸರ್, ಸರ್?
296
00:20:59,160 --> 00:21:00.320
ಫೋನ್ ರಿಂಗ್ ಆಗ್ತಿದೆ.
297
00:21:00,400 --> 00:21:03.640
ಚೈನ್ ಕಳ್ಳ ನನಗಿದು ಹೇಳಬೇಕಾ?
298
00:21:03,720 --> 00:21:05.760
ನನ್ ಕಿವಿಗೆ ಕೇಳಿಸಲ್ವಾ?
299
00:21:05,800 --> 00:21:07.480
ಕೇಳ್ಸಿತಿದೆ ತಾನೇ ತೇಗಿ?
300
00:21:13,720 --> 00:21:16.560
ಹಲೋ?
301
00:21:21,080 --> 00:21:22.680
ಹೇಯ್, ಬೇಗ ಎತ್ತೋ!
302
00:21:24,520 --> 00:21:27.040
ಹಲೋ, ಹಲೋ?
303
00:21:40,880 --> 00:21:42.320
-ಹಲೋ.
-ಹಲೋ?
304
00:21:50,400 --> 00:21:51.720
ಏನು ವಿಷಯ?
305
00:21:53,200 --> 00:21:54.200
ಏನು ಹೇಳ್ತಿದೀಯಾ?
306
00:21:59,720 --> 00:22:00.920
ತ್ರಿಲೋಕ್!
307
00:22:02,040 --> 00:22:03.160
ತ್ರಿಲೋಕ್?
308
00:22:07,520 --> 00:22:08.560
ಗಣಪತ್!
309
00:23:23,840 --> 00:23:25.480
ಪಕ್ಕಕ್ಕೆ. ಹಿಂದಕ್ಕೆ ಹೋಗಿ.
310
00:23:25,560 --> 00:23:27.080
ಎಡಗಡೆ ಹಾಯಿಸಿ.
311
00:23:27,160 --> 00:23:28.360
ಮೇಲಕ್ಕೇರಿಸಿ.
312
00:23:29,200 --> 00:23:31.080
ಎಡಗಡೆ ಹಾಯಿಸಿ. ಅಷ್ಟೇ!
313
00:23:44,840 --> 00:23:46.720
ತ್ರಿಲೋಕ್ಗೆ ವಿಷಯ ತಿಳಿಸಿದ್ದೀರಾ?
314
00:23:59,440 --> 00:24:01.400
ಈಗಲೇ ಆಂಬುಲೆನ್ಸ್ ಕರೆಸಿ.
315
00:24:01,480 --> 00:24:03.800
ಯಾಕಿಷ್ಟು ಹೊತ್ತು? ಹೋಗ್ರಿ ಹಿಂದೆ!
316
00:24:18,480 --> 00:24:19.920
ಅಣ್ಣಾ!
317
00:24:20,000 --> 00:24:22.840
ಮುತ್ತುಸಾಮಿ ತಾತ ಒಂದಕ್ಕೆ ಹೋಗಕ್ಕೆ
ಒಳಗಡೆ ಹೋಗಿದ್ದ.
318
00:24:22,920 --> 00:24:25.840
-ಈಗೆಲ್ಲಿದ್ದಾನೋ ಗೊತ್ತಿಲ್ಲ.
-ಹೇಯ್!
319
00:24:28,080 --> 00:24:29.760
ತಡೀರಿ, ಸರ್.
320
00:24:29,840 --> 00:24:31.960
-ಜರುಗು.
-ಯಾರವರನ್ನ ಒಳಗೆ ಬಿಟ್ಟಿದ್ದು?
321
00:25:24,400 --> 00:25:25.520
ಟ್ಯಾಂಕ್!
322
00:26:07,440 --> 00:26:08.640
ಪಪ್ಪ!
323
00:26:10,680 --> 00:26:12.120
ಪಪ್ಪ, ಹುಷಾರಾಗಿದ್ದೀರಾ?
324
00:26:16,200 --> 00:26:18.880
ಷಣ್ಮುಗಂನ ತಲೆ ಮೇಲೆ ಕೂರಿಸಿಕೊಂಡೆ ಅಲ್ಲಾ?
325
00:26:20,400 --> 00:26:22.400
ಹೇಳಿದ ಹಾಗೇ ಸುಟ್ಟು ಹಾಕಿಬಿಟ್ಟ, ಪಪ್ಪ!
326
00:26:23,200 --> 00:26:24.360
ಮಾತು ಉಳಿಸಿಕೊಂಡ.
327
00:26:29,720 --> 00:26:30.560
ಪಪ್ಪ.
328
00:26:31,640 --> 00:26:32.840
ಪಪ್ಪ!
329
00:27:13,880 --> 00:27:15.400
ಶಾರ್ಟ್ ಸರ್ಕ್ಯೂಟಾ?
330
00:27:16,360 --> 00:27:18.040
ಇದು ವಿದ್ಯುತ್ನ ಬೆಂಕಿ ಅಲ್ಲ.
331
00:27:18,880 --> 00:27:21.960
ಇದನ್ನ ನೀರಿನಿಂದಲೇ ಆರಿಸಿದೆವು. ಇದು ಅವಘಡ ಅಲ್ಲ.
332
00:27:22,680 --> 00:27:23.600
ಬೆಂಕಿ ಹಚ್ಚಿರೋದು.
333
00:27:26,480 --> 00:27:28.120
ಸಂಬಲೂರ್ ಚಿಕ್ಕ ಊರು.
334
00:27:28,200 --> 00:27:29.680
ಅಲ್ಲಿ ಇಷ್ಟು ದೊಡ್ಡ ಕಾರ್ಖಾನೆ.
335
00:27:30,320 --> 00:27:31.920
ಯಾರು ಬೆಂಕಿ ಹಚ್ಚಿರಬಹುದು?
336
00:28:14,080 --> 00:28:15.640
ಅಪ್ಪ, ನನ್ನ ಕ್ಷಮಿಸಿ
337
00:29:18,000 --> 00:29:19.240
ನಿಲಾ?
338
00:29:22,000 --> 00:29:23.160
ನಿಲಾ!
339
00:29:24,560 --> 00:29:25.720
ನಿಲಾ.
340
00:29:29,480 --> 00:29:30.600
ನಿಲಾ ರೆಡಿ ಆದ್ಳಾ?
341
00:29:31,280 --> 00:29:32.760
ಶಾಲೆಗೆ ತಡ ಆಯ್ತು.
342
00:29:32,840 --> 00:29:34.120
ಅವಳನ್ನೇ ಕೇಳು.
343
00:29:36,040 --> 00:29:36.960
ನಿಲಾ!
344
00:29:37,040 --> 00:29:40.440
-ಬೈದೆ ಅಂತ ಕೋಪಿಸಿಕೊಂಡಿದ್ದಾಳೆ.
-ಯಾವಾಗ್ಲೂ ಇದ್ದಿದ್ದೇ ಅಲ್ವಾ.
345
00:29:40,520 --> 00:29:43.200
ಅವರಮ್ಮನ ಹಾಗೇ. ತುಂಬಾ ಸೂಕ್ಷ್ಮ ಸ್ವಭಾವದವಳು!
346
00:29:43,720 --> 00:29:46.720
ಬಾಗಿಲು ತೆಗಿಯಮ್ಮ. ಲೇಟ್ ಆಗ್ತಾ ಇದೆ.
347
00:29:48,000 --> 00:29:48.880
ನಿಲಾ.
348
00:29:48,960 --> 00:29:50.160
ನಿಲಾ!
349
00:29:50,960 --> 00:29:52.080
ಮಗಳೇ?
350
00:29:59,480 --> 00:30:01.080
ಅಣ್ಣ, ನಿಲಾ ಎಲ್ಲಣ್ಣ?
351
00:30:01,160 --> 00:30:02.720
ರೂಮಲ್ಲಿಲ್ವಾ?
352
00:30:02,800 --> 00:30:05.840
ಇಲ್ಲ. ರಾತ್ರಿ ಇಲ್ಲಿ ಮಲಗಿದ ಹಾಗೂ ಇಲ್ಲ.
353
00:30:05,920 --> 00:30:09.000
ಎಲ್ಲಾ ನೀಟ್ ಆಗಿದೆ. ಅವಳ ರೂಂ ತರಾನೇ ಇಲ್ಲ.
354
00:30:09,080 --> 00:30:11.120
ನೆನ್ನೆ ರಾತ್ರಿಯಿಂದ ಮನೆಯಲ್ಲಿಲ್ವಾ?
355
00:30:14,640 --> 00:30:16.560
ನಾನು ಮನೆಯೆಲ್ಲಾ ಹುಡುಕಿದೆ.
356
00:30:16,640 --> 00:30:19.880
ಆಸ್ಪತ್ರೆಯಲ್ಲಿ ಮುತ್ತುಸಾಮಿಯನ್ನ ನೋಡಿ
4:30ಕ್ಕೆ ಮನೆಗೆ ಬಂದೆ.
357
00:30:19,960 --> 00:30:22.480
ಅವಳನ್ನ ಎಬ್ಬಿಸೋದು ಬೇಡ ಅಂತ ಹೋಗಿ ಮಲ್ಕೊಂಡೆ.
358
00:30:22,560 --> 00:30:24.440
ಒಳಗೆ ಇದ್ದಾಳಾ ಅಂತ ನೋಡಲಿಲ್ವಾ?
359
00:30:25,560 --> 00:30:27.680
ನಿಲಾ ರಾತ್ರಿಯಿಂದ ಕಾಣೆಯಾಗಿದ್ದಾಳಾ?
360
00:30:27,760 --> 00:30:29.000
'ಕಾಣೆ' ಅನ್ನಬೇಡ.
361
00:30:29,080 --> 00:30:32.240
ಕೋಪ ತಣಿಸೋಕೆ ಎಲ್ಲೋ ಹೋಗಿರ್ತಾಳೆ ಅಷ್ಟೇ.
362
00:30:32,320 --> 00:30:33.560
ಎಲ್ಲಿಗೆ?
363
00:30:42,120 --> 00:30:44.560
ಅಣ್ಣ, ಅವಳ ಸ್ಕೂಟರ್ ಇಲ್ಲೇ ಇದೆ!
364
00:30:44,640 --> 00:30:47.480
ಗಾಡಿ ಇಲ್ಲದೇ ಎಲ್ಲೂ ಹೋಗಲ್ಲ ಅವಳು!
365
00:30:47,560 --> 00:30:49.040
ಏನು ಹೇಳ್ತಾ ಇದ್ದೀರಾ?
366
00:30:55,720 --> 00:30:59.880
ನೀವು ಕರೆ ಮಾಡಿದ ನಂಬರ್ ಸ್ವಿಚ್ ಆಫ್ ಆಗಿದೆ
ಅಥವಾ ಸಂಪರ್ಕಕ್ಕೆ ಸಿಗುತ್ತಿಲ್ಲ.
367
00:30:59,960 --> 00:31:03.360
ನಿಮ್ಮ ಮೇಲೆ ಕೋಪ ಮಾಡಿಕೊಂಡು
ಅವರಮ್ಮನ ಹತ್ತಿರ ಹೋಗಿದ್ರೆ?
368
00:31:03,440 --> 00:31:04.800
ಅಲ್ಲಿಗ್ಯಾಕೆ ಹೋಗ್ತಾಳೆ?
369
00:31:04,880 --> 00:31:07.240
ನಾವೆಷ್ಟೇ ಜಗಳ ಆಡಿದ್ರೂ ಅವಳು ನನ್ನ ಮಗಳು.
370
00:31:07,320 --> 00:31:08.800
ಹೋಗಿ ಬೀಗದ ಕೈ ತಗೊಂಡು ಬಾ.
371
00:31:08,880 --> 00:31:11.080
ಗಾಡಿ ಕೀ ತಗೊಂಡು ಬಾ. ಹೋಗಿ ನೋಡ್ತೀನಿ.
372
00:31:11,160 --> 00:31:14.640
ನೀನು ತಲೆ ಕೆಡಿಸ್ಕೋಬೇಡ.
ಅವಳೆಲ್ಲೂ ಹೋಗಿರಲ್ಲ. ನಾನು ಹುಡುಕ್ತೀನಿ.
373
00:31:29,360 --> 00:31:31.480
ಹಲೋ? ಮಲರ್?
374
00:31:31,560 --> 00:31:33.480
ನಿಲಾ ಅಲ್ಲಿದ್ದಾಳಾ, ಚಿನ್ನ?
375
00:31:33,560 --> 00:31:34.960
ಇಲ್ಲ, ಅಂಕಲ್.
376
00:31:36,040 --> 00:31:38.120
ಕೊನೆಯದಾಗಿ ಅವಳನ್ನ ಯಾವಾಗ ನೋಡಿದೆ?
377
00:31:38,200 --> 00:31:40.120
ನೆನ್ನೆ ಟ್ಯೂಶನ್ ಮುಗಿದ ಮೇಲೆ.
378
00:31:41,160 --> 00:31:43.400
ಸರಿ, ಕಣಮ್ಮ.
379
00:31:49,240 --> 00:31:50.480
ಹಲೋ.
380
00:31:52,040 --> 00:31:54.080
ದೇವರು ನಮಗೆ ಹೇಳಿಕೊಟ್ಟಿದ್ದೇನು?
381
00:31:54,920 --> 00:31:58.040
ಸರಿಯಾದ್ದನ್ನ ಮಾಡೋಕೆ ಹೇಳಿಕೊಟ್ಟಿದ್ದಾರೆ.
ಒಳ್ಳೇದು ಮಾಡೋಕೆ.
382
00:31:58,120 --> 00:32:00.040
ಒಳ್ಳೇದು ಮಾತ್ರ ಮಾಡೋಕೆ.
383
00:32:00,120 --> 00:32:02.640
ಒಳ್ಳೆ ದಾರಿನೇ ಹಿಡಿಯಬೇಕು. ಅದೇ ಅವರು ಸಾರುವುದು.
384
00:32:04,840 --> 00:32:07.240
ಒಂದು ನಿಮಿಷ ಧ್ಯಾನ ಮಾಡೋಣ.
385
00:32:11,880 --> 00:32:16.120
ಹರೇ ರಾಮ, ರಾಮ ರಾಮ, ಹರೇ ಹರೇ...
386
00:32:17,960 --> 00:32:21.000
ದೇವಿ, ಫೋನ್ ಬಂದಿದೆ ಸಂಬಲೂರಿನಿಂದ.
387
00:32:32,040 --> 00:32:34.560
-ಹಲೋ.
-ಅಕ್ಕ, ನಾನು ಸೆಲ್ವಿ.
388
00:32:34,640 --> 00:32:36.200
ನಿಲಾ ಆಶ್ರಮಕ್ಕೆ ಬಂದಿದ್ಳಾ?
389
00:32:37,800 --> 00:32:38.800
ನಿಲಾ?
390
00:32:39,440 --> 00:32:41.160
ಅವಳ್ಯಾಕೆ ಇಲ್ಲಿಗೆ ಬರ್ತಾಳೆ?
391
00:32:42,120 --> 00:32:43.360
ಏನಾಯ್ತು ಅವಳಿಗೆ?
392
00:32:45,000 --> 00:32:46.960
ಏನೂ ಇಲ್ಲ, ಅಕ್ಕ.
393
00:32:47,040 --> 00:32:48.760
ಏನಾದ್ರೂ ಗೊತ್ತಾದ್ರೆ ತಿಳಿಸಿ.
394
00:32:48,840 --> 00:32:50.960
ನಾನು ಮತ್ತೆ ಫೋನ್ ಮಾಡ್ಲಾ?
395
00:32:51,040 --> 00:32:52.760
-ಗುಣ!
-ಹಾಂ, ಅಣ್ಣ?
396
00:32:52,840 --> 00:32:54.760
-ಕೇಳಿಸ್ತಾ ಇದೆಯಾ?
-ಹಾಂ.
397
00:32:54,840 --> 00:32:57.880
ನೆನ್ನೆ ಸಂಜೆ ನಿಲಾನ ಗೋಧೈ
ಕೊನೆಯದಾಗಿ ನೋಡಿದನಂತೆ.
398
00:32:57,960 --> 00:33:01.000
ಮಾರ್ಕೆಟ್ಟಲ್ಲಿ ನೋಡ್ತೀನಿ.
ಟ್ಯೂಶನ್ ಸೆಂಟರ್ನಲ್ಲಿ ಹುಡುಕು.
399
00:33:04,080 --> 00:33:06.000
-ಅಕ್ಕ, ನಿಲಾ ಇಲ್ಲಿಗೆ ಬಂದಳಾ?
-ಏನು?
400
00:33:06,080 --> 00:33:07.320
ನಿಲಾ ಏನಾದ್ರೂ ಬಂದಳಾ?
401
00:33:07,400 --> 00:33:09.600
ನಿಲಾನಾ? ಇಲ್ಲ, ಬರಲಿಲ್ಲ.
402
00:33:13,920 --> 00:33:16.160
-ವೀರಾ, ನಿಲಾನ ನೋಡಿದ್ಯಾ?
-ಯಾರಣ್ಣ?
403
00:33:16,240 --> 00:33:18.520
-ನಮ್ಮಣ್ಣನ ಮಗಳು.
-ಇಲ್ಲ, ನೋಡಲಿಲ್ಲ.
404
00:33:19,480 --> 00:33:20.600
ನಾನೂ ಬರ್ಲಾ ಜೊತೆಗೆ?
405
00:33:37,160 --> 00:33:38.760
ನಿಲಾ ಅಕ್ಕ ಇಲ್ಲಿಗೆ ಬರಲಿಲ್ಲ.
406
00:33:51,280 --> 00:33:52.440
ಭಾವ...
407
00:33:54,000 --> 00:33:55.240
ಏನಾಯ್ತು?
408
00:33:55,320 --> 00:33:57.480
ನಮಸ್ಕಾರ, ಅಣ್ಣ.
409
00:33:57,560 --> 00:33:59.560
ನಿಲಾ ನಂದಿನಿ ಮನೆಗೆ ಹೋಗಿರಬಹುದಾ?
410
00:33:59,640 --> 00:34:02.280
ನನಗೆ ಹೇಳದೇ ಕೊಯಮತ್ತೂರಿಗೆ ಯಾಕೆ ಹೋಗ್ತಾಳೆ?
411
00:34:02,360 --> 00:34:05.560
ನೀವು ಕಳೆದ ಸಲ ಅವಳನ್ನ ನನ್ನ ಜೊತೆ ಬಿಟ್ಟು
ಊರಿಗೆ ಹೋದಾಗ
412
00:34:05,640 --> 00:34:08.920
ಅವಳು ನನಗೂ ಹೇಳದೇ ನಂದಿನಿ ಮನೆಗೆ ಹೋಗಿದ್ದಳು.
413
00:34:09,000 --> 00:34:10.720
ಅಲ್ಲಿಂದ ನನಗೆ ಫೋನ್ ಮಾಡಿದ್ಳಲ್ಲ!
414
00:34:13,320 --> 00:34:16.640
ನಂದಿನಿಗೆ ಫೋನ್ ಮಾಡಿ ನಿಲಾ ಕಾಣಿಸ್ತಿಲ್ಲ ಅಂದ್ರೆ
415
00:34:17,360 --> 00:34:18.640
ಗಾಬರಿ ಆಗಿಬಿಡ್ತಾಳೆ.
416
00:34:26,080 --> 00:34:27.880
-ಏನಮ್ಮಾ, ತಿಂದ್ಯಾ?
-ಏನು ವಿಷಯ?
417
00:34:27,960 --> 00:34:31.160
-ಅದನ್ನ ಕೇಳೋಕೆ ಫೋನ್ ಮಾಡಿದ್ರಾ?
-ಇಲ್ಲ...
418
00:34:31,800 --> 00:34:33.040
ನಿಲಾ ಬಂದಿದ್ಳಾ?
419
00:34:33,120 --> 00:34:35.200
ನಿಲಾನಾ? ಅವಳು ಯಾಕೆ ಬರ್ತಾಳೆ, ಅಪ್ಪ?
420
00:34:35,320 --> 00:34:36.640
ಯಾಕೆ, ಏನಾಯ್ತು?
421
00:34:36,760 --> 00:34:38.560
ಹಲೋ? ಅಪ್ಪ?
422
00:34:38,640 --> 00:34:40.640
ಏನು ನಡೀತಾ ಇದೆ?
423
00:34:40,760 --> 00:34:43.320
ಏನಿಲ್ಲಮ್ಮ. ನನಗೆ ಹೇಳದೇ ಎಲ್ಲೋ ಹೋಗಿದ್ದಾಳೆ.
424
00:34:43,400 --> 00:34:44.760
"ಹೇಳದೇ" ಹೋಗಿದ್ದಾಳಾ?
425
00:34:44,840 --> 00:34:46.200
ನಿನ್ ಜತೆ ಇರ್ಬೋದು ಅನ್ಕೊಂಡೆ.
426
00:34:46,320 --> 00:34:49.640
ಯಾರಾದ್ರೂ ಫ್ರೆಂಡ್ ಮನೇಲಿ ಇರಬಹುದು.
ನಾನು ಮತ್ತೆ ಫೋನ್ ಮಾಡ್ತೀನಿ.
427
00:34:49,680 --> 00:34:50.840
ಸರಿ, ಅಪ್ಪ.
428
00:34:56,280 --> 00:34:57.920
ಇರು. ಒಂದು ಆಟೋ ಬರ್ತಾ ಇದೆ.
429
00:35:14,200 --> 00:35:15.400
ನೀನ್ಯಾಕೆ ಬಂದೆ?
430
00:35:17,800 --> 00:35:18.880
ನಾನು ಅವಳ ಅಮ್ಮ.
431
00:35:21,000 --> 00:35:23.200
ಅಮ್ಮ ಅಂದ್ರೆ ಮಗುವಿನ ಜೊತೆ ಇರೋಳು.
432
00:35:24,400 --> 00:35:28.160
ನೀವೇ ಅಲ್ವಾ ನನಗೆ "ಹೋಗು,
ಮಕ್ಕಳನ್ನ ನೋಡಿಕೊಳ್ತೀನಿ" ಅಂದಿದ್ದು?
433
00:35:29,480 --> 00:35:30.880
ಇದು ನಮ್ಮ ಬಗ್ಗೆ ಅಲ್ಲ.
434
00:35:31,640 --> 00:35:33.120
ನೆನ್ನೆ ಏನು ನಡೀತು?
435
00:35:34,080 --> 00:35:35.640
ಅವಳನ್ನ ಬೈದಿರಾ?
436
00:35:38,640 --> 00:35:39.760
ಹೇಳಿ.
437
00:35:41,080 --> 00:35:44.200
-ಏನಂದ್ರಿ?
-ಅವಳ ರಿಪೋರ್ಟ್ ಕಾರ್ಡ್ ಬಂದಿತ್ತು.
438
00:35:44,320 --> 00:35:46.400
ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಾಳೆ.
439
00:35:46,480 --> 00:35:47.960
ನಾನೇನೂ ಅಷ್ಟಾಗಿ ಬಯ್ಯಲಿಲ್ಲ.
440
00:35:49,000 --> 00:35:51.160
ನಿಮಗೆ ಹಾಗೇ ಅನ್ಸುತ್ತೆ.
441
00:35:51,200 --> 00:35:53.280
ಹೇಗೂ ನೀವು ತುಂಬಾನೇ ಕಠೋರರು.
442
00:35:53,360 --> 00:35:55.520
ನಿಮಗೆ ಕೋಪ ಬಂದ್ರೆ, ಇನ್ನೂ ಹೆಚ್ಚು!
443
00:35:56,640 --> 00:36:01.040
ಮೌಂಟ್ ಫ್ಲವರ್ ಮಿಷನರಿ ಹಾಸ್ಪಿಟಲ್
444
00:36:03,640 --> 00:36:06.800
ನಿಮಗೇ ಗೊತ್ತು,
ಷಣ್ಮುಗಂ ಫ್ಯಾಕ್ಟರಿಗೆ ಬೆಂಕಿ ಇಟ್ಟ ಅಂತ!
445
00:36:06,880 --> 00:36:08.560
ಮತ್ತೆ ಯಾಕೆ ಅರೆಸ್ಟ್ ಮಾಡಿಲ್ಲ?
446
00:36:09,600 --> 00:36:11.440
ತ್ರಿಲೋಕ್, ಅರ್ಥ ಮಾಡಿಕೊಳ್ಳಿ.
447
00:36:11,520 --> 00:36:13.760
ನಿಮ್ಮ ಮಾತಿನ ಮೇಲೇ ಅರೆಸ್ಟ್ ಮಾಡೋಕಾಗಲ್ಲ.
448
00:36:13,840 --> 00:36:16.520
ಏನಾದರೂ ಪುರಾವೆ, ಸಾಕ್ಷಿ ಸಿಗಬೇಕು.
449
00:36:16,600 --> 00:36:18.320
ನೆನ್ನೆ ನನಗೆ ಬೆದರಿಸಿದ್ದಾನೆ.
450
00:36:19,360 --> 00:36:21.480
-ಅದು ಸಾಲದಾ?
-ತ್ರಿಲೋಕ್!
451
00:36:21,560 --> 00:36:23.480
-ಪಪ್ಪ.
-ಮುತ್ತುಸಾಮಿ ಹೇಗಿದ್ದಾನೆ?
452
00:36:24,280 --> 00:36:25.280
ಅವರನ್ನ ನೋಡಿದೆಯಾ?
453
00:36:25,360 --> 00:36:28.960
ಇಲ್ಲಪ್ಪ. ಜೀವಕ್ಕೇನೂ ಅಪಾಯ ಇಲ್ಲ ಅಂದಿದ್ದಾರೆ.
454
00:36:29,040 --> 00:36:33.640
ನಿನ್ ಫ್ಯಾಕ್ಟರಿ ವರ್ಕರ್ ವಾರ್ಡ್ನಲ್ಲಿದ್ದಾನೆ.
ಪೋಲೀಸಿನವರ ಜೊತೆ ಏನ್ಮಾಡ್ತಾ ಇದ್ದೀಯ?
455
00:36:36,760 --> 00:36:38.200
ಇದನ್ನ ಗಾಡೀಲಿ ಹಾಕು, ಮುತ್ತು.
456
00:36:41,120 --> 00:36:43.480
ಸೀರೆಯಲ್ಲಿ ಸಕತ್ತಾಗಿ ಕಾಣಿಸ್ತಿದ್ದೆ.
457
00:36:43,560 --> 00:36:46.560
ಈ ಡ್ರೆಸ್ಸಲ್ಲೂ ಅದ್ಭುತವಾಗಿ ಕಾಣಿಸ್ತಿದ್ದೀಯ.
458
00:36:46,640 --> 00:36:48.480
ಇದು ನನ್ ಯುನಿಫಾರ್ಮ್.
459
00:36:48,560 --> 00:36:49.680
ಅದು ಗೊತ್ತು.
460
00:36:49,800 --> 00:36:51.080
ನಾನು ಹೇಗೆ ಕಾಣಿಸ್ತೀನಿ?
461
00:36:53,560 --> 00:36:57.640
ಚೆನ್ನಾಗಿಲ್ಲ. ನೆನ್ನೆ ಬಿಳಿ ಅಂಗಿ ಮತ್ತು ಪಂಚೆಲಿ
ತುಂಬಾ ಚೆನ್ನಾಗಿ ಕಾಣಿಸ್ತಿದ್ರಿ.
462
00:36:57,760 --> 00:37:02.040
ಪಂಚೆ ಉಟ್ಟುಕೊಂಡು ಕಳ್ಳರನ್ನ
ಅಟ್ಟಿಸಿಕೊಂಡು ಹೋಗೋಕಾಗಲ್ಲವಲ್ಲ?
463
00:37:06,200 --> 00:37:08.160
ಅಗ್ನಿ ಅವಘಡದ ಪೇಷಂಟ್ ಎಲ್ಲಿದ್ದಾರೆ?
464
00:37:08,280 --> 00:37:09.360
ಮುತ್ತುಸಾಮಿ?
465
00:37:13,880 --> 00:37:15.280
ಮುತ್ತುಸಾಮಿಯಣ್ಣ.
466
00:37:19,640 --> 00:37:21.200
ಮುತ್ತುಸಾಮಿ.
467
00:37:21,320 --> 00:37:22.640
ಹೇಗಿದ್ದೀಯಾ?
468
00:37:23,640 --> 00:37:25.200
ಮಲ್ಕೋ, ಮಲ್ಕೋ.
469
00:37:25,320 --> 00:37:27.360
ಚಿಂತಿಸಬೇಡ. ಎಲ್ಲಾ ಸರಿ ಹೋಗುತ್ತೆ.
470
00:37:32,280 --> 00:37:33.640
ಒಂದು ಲಕ್ಷ.
471
00:37:33,760 --> 00:37:35.160
ಇನ್ನೂ ಬೇಕಂದ್ರೆ ಕೇಳಿ.
472
00:37:36,360 --> 00:37:38.960
-ಇವರು ವಡಿವೇಲು.
-ಏನಾದ್ರೂ ಇದ್ರೆ ನನ್ನ ಸಂಪರ್ಕಿಸಿ.
473
00:37:39,040 --> 00:37:40.640
-ನನ್ನ ನಂಬರ್ ಇದೆಯಾ?
-ಹಾಂ.
474
00:37:41,160 --> 00:37:43.160
ಸುಸ್ತಾಗಿ ಕಾಣ್ತೀರ. ಟೀ ಬೇಕಾ?
475
00:37:43,200 --> 00:37:44.200
ಬೇಡ.
476
00:37:44,320 --> 00:37:45.800
ಮುತ್ತು, ಮೇಡಂಗೆ ನೀರು ಕೊಡು.
477
00:37:48,880 --> 00:37:51.640
ಫ್ಯಾಕ್ಟರಿ ಸಿಸಿಟಿವಿ ಫೂಟೇಜ್
ಎಲ್ಲಾ ಸುಟ್ಟು ಹೋಗಿದೆ.
478
00:37:51,760 --> 00:37:53.480
ಮಾನಿಟರಿಂಗ್ ರೂಂ ಬೂದಿಯಾಗಿದೆ.
479
00:37:53,560 --> 00:37:56.160
ಪಕ್ಕದಲ್ಲಿರೋ ಸಿಸಿಟಿವಿ ಫೂಟೇಜ್ಗೆ ಹೇಳಿದ್ದೀನಿ.
480
00:37:56,200 --> 00:37:58.360
ಅವುಗಳಿಂದ ಏನಾದ್ರೂ ಗೊತ್ತಾಗಬಹುದು.
481
00:37:59,600 --> 00:38:03.360
ನಾನಲ್ಲಿಗೆ ಹೋದಾಗ ಮಧ್ಯರಾತ್ರಿ
12ರಿಂದ 12:30 ಆಗಿರಬಹುದು.
482
00:38:03,440 --> 00:38:05.640
ಷಣ್ಮುಗಂ ಬೈಕ್ ಮುಂದಿನ ಗೇಟ್ ಹತ್ರ ಇತ್ತು.
483
00:38:05,680 --> 00:38:08.520
ಗಾಡಿ ಸೈಡ್ ಗೇಟ್ ಹತ್ರ ಇತ್ತು,
ಮುಂದಿನ ಗೇಟ್ ಅಲ್ಲ.
484
00:38:08,600 --> 00:38:10.640
ನಾನೇ ನೋಡಿದೆ ಮುಂದಿನ ಗೇಟ್ ಹತ್ರ ಇತ್ತು.
485
00:38:10,760 --> 00:38:13.640
-ಇಲ್ಲ, ನಾನು ಮನೆಗೆ ಹೋಗುವಾಗ ನೋಡಿದೆ.
-ಇರು.
486
00:38:13,680 --> 00:38:15.120
ನೀನ್ಯಾವಾಗ ಆಕಡೆ ಹೋದೆ?
487
00:38:15,160 --> 00:38:18.120
ರಾತ್ರಿ ಸುಮಾರು 10:15ರಿಂದ 10:30 ಇರಬಹುದು.
488
00:38:18,160 --> 00:38:19.920
ರಾತ್ರಿ 10:15ಕ್ಕಾ?
489
00:38:26,800 --> 00:38:29.320
ಆಗ್ಲೇ ಡ್ರಾಮಾ ಶುರು ಮಾಡ್ಕೊಂಡಿದ್ದಾನೆ.
490
00:38:32,600 --> 00:38:34.280
ಪೊಲೀಸರಿಗೆ ಯಾರು ತಿಳಿಸಿದ್ದು?
491
00:38:39,360 --> 00:38:41.480
ಷಣ್ಮುಗಂ, ನಮ್ ಜೊತೆ ಸ್ಟೇಷನ್ನಿಗೆ ಬನ್ನಿ.
492
00:38:41,560 --> 00:38:43.600
ಯಾಕೆ? ಅವರು ಬರೋದಿಲ್ಲ.
493
00:38:43,640 --> 00:38:45.520
ನೀವು ಕೇಳಿದ್ರಿ ಅಂತ ಕಳಿಸೋಕಾಗಲ್ಲ.
494
00:38:48,600 --> 00:38:50.440
ಅವರು ಯಾಕೆ ಸ್ಟೇಷನ್ನಿಗೆ ಬರಬೇಕು?
495
00:38:50,520 --> 00:38:54.160
ಬೆಳಿಗ್ಗೆ ಫ್ಯಾಕ್ಟರಿಗೆ ಬೆಂಕಿ ಬೀಳುತ್ತೆ
ಅಂದರು, ರಾತ್ರಿ ಸುಟ್ಟುಹೋಯಿತು.
496
00:38:54,280 --> 00:38:57.480
ಈಗ ಎಲ್ರೂ ಗುಂಪು ಕಟ್ಟಿಕೊಂಡು
ಪೌರುಷ ತೋರಿಸ್ತಾ ಇದ್ದೀರಾ?
497
00:38:58,160 --> 00:39:01.080
ಇದನ್ನ ಸೂಕ್ಷ್ಮವಾಗಿ ಪ್ಲಾನ್ ಮಾಡಿರೋ ಹಾಗಿದೆ?
498
00:39:01,880 --> 00:39:05.160
ನಾನೇನೋ ಕೋಪದಲ್ಲಿ ಹೇಳಿದ್ರೆ
ಅದ್ರಿಂದಲೇ ಅರೆಸ್ಟ್ ಮಾಡ್ತಿದ್ದೀರಾ?
499
00:39:05,280 --> 00:39:08.640
ಇಲ್ಲ! ನೆನ್ನೆ ಫ್ಯಾಕ್ಟರಿ ಸೈಡ್ ಗೇಟ್ ಹತ್ರ
ನಿಮ್ ಬೈಕ್ ನೋಡಿದೆ.
500
00:39:09,480 --> 00:39:12.600
ಇನ್ನೆಲ್ಲಿ ಗಾಡಿ ನಿಲ್ಲಿಸಬೇಕಿತ್ತು?
ನಿಮ್ಮನೆ ಹಿತ್ತಲಲ್ಲಾ?
501
00:39:13,160 --> 00:39:16.200
ಮಗಳು ಕಾಣಿಸ್ತಿಲ್ಲ ಅಂತ ಒದ್ದಾಡ್ತಿದ್ರೆ
ಗಲಾಟೆ ಮಾಡ್ತೀರಾ?
502
00:39:16,320 --> 00:39:20.000
ಅವರ ಮಗಳನ್ನ ಹುಡುಕ್ತಾ ಇದ್ದೀವಿ.
ನಮ್ಮನ್ನ ಹೆದರಿಸಬಹುದು ಅಂದುಕೊಂಡ್ರಾ?
503
00:39:23,640 --> 00:39:26.560
-ಅವನ ಚಿಕ್ಕ ಮಗಳು ಕಾಣಿಸ್ತಿಲ್ಲ.
-ಚಿಕ್ಕವಳಾ?
504
00:39:27,080 --> 00:39:29.520
ದೊಡ್ದವಳೇ ಅಲ್ವಾ ಊರು ಬಿಟ್ಟು ಹೋಗಿದ್ದು?
505
00:39:32,600 --> 00:39:33.640
ಷಣ್ಮುಗಂ!
506
00:39:34,880 --> 00:39:37.280
ಮಗಳು ಕಾಣೆಯಾದರೂ ಯಾಕೆ ಪೊಲೀಸರಿಗೆ ಹೇಳಿಲ್ಲ?
507
00:39:37,960 --> 00:39:40.920
ಇವತ್ತು ಬೆಳಗ್ಗಿನಿಂದ ಅಷ್ಟೇ ಕಾಣಿಸಿಲ್ಲ.
508
00:39:41,920 --> 00:39:43.320
ಅವರತ್ರ ಏನ್ ಮಾತು?
509
00:39:43,400 --> 00:39:47.440
ಆ ಸೇಟು ತ್ರಿಲೋಕ್ ಬಿಸ್ಕೆಟ್ ಹಾಕಿದ್ರೆ
ಹಿಡಿದು ತಿನ್ನೋ ನಾಯಿಗಳು ನೀವು.
510
00:39:51,200 --> 00:39:54.280
ಸಕ್ಕರೆ, ಷಣ್ಮುಗಂನ ಅರೆಸ್ಟ್ ಮಾಡಿ
ಜೀಪ್ ಹತ್ತಿಸಿ.
511
00:39:57,080 --> 00:39:59.000
ಯಾರಾದ್ರೂ ಅಡ್ಡ ಬಂದ್ರೆ ಒಳಗಾಕಿ.
512
00:40:05,080 --> 00:40:06.200
ಹೋಗೋಣ್ವಾ?
513
00:40:17,280 --> 00:40:21.880
ಪೊಲೀಸ್ ದೌರ್ಜನ್ಯಕ್ಕೆ ಧಿಕ್ಕಾರ!
514
00:40:39,040 --> 00:40:41.600
ಮೇಡಂ, ಆಯಪ್ಪನ ಮಗಳು ಕಾಣಿಸ್ತಿಲ್ವಂತೆ.
515
00:40:41,640 --> 00:40:43.320
ಆದ್ರೆ ನಾವು...
516
00:40:43,400 --> 00:40:44.640
ಮುತ್ತು, ನೋಡಿದ್ಯಾ,
517
00:40:45,280 --> 00:40:48.200
ಮಗಳು ಕಾಣಿಸ್ತಿಲ್ಲ ಅಂದಾಗ
ಅಲ್ಲಿನ ಹೆಂಗಸರ ಮುಖಗಳನ್ನ?
518
00:40:48,320 --> 00:40:50.080
ಅದರಲ್ಲೂ ಗುಣ ಹೆಂಡತಿಯನ್ನ?
519
00:40:50,160 --> 00:40:53.920
"ಹೌದು, ಸರ್.
ಬೆಳಗ್ಗಿಂದ ನಿಲಾ ಎಲ್ಲಿದ್ದಾಳೋ ಗೊತ್ತೇ ಇಲ್ಲ!"
520
00:40:55,560 --> 00:40:57.200
ಷಣ್ಮುಗಂ ಅವಳನ್ನ ಬೈದಿರಬಹುದು.
521
00:40:57,320 --> 00:41:00.400
ಅದಕ್ಕವಳು ಬೇಜಾರಾಗಿ ಯಾರದ್ದಾದರೂ
ಮನೆಗೆ ಹೋಗಿರಬಹುದು.
522
00:41:00,480 --> 00:41:03.000
ಮನೆ ಬಿಟ್ಟು ಓಡಿಹೋಗೋದು ಇವರ ಕುಟುಂಬಕ್ಕಿರೋ ರೋಗ.
523
00:41:03,080 --> 00:41:05.520
-ಏನ್ಸಾರ್ ಹೇಳ್ತಾ ಇದ್ದೀರಾ?
-ಇನ್ನೇನು?
524
00:41:05,600 --> 00:41:08.800
ಷಣ್ಮುಗಂ ಹೆಂಡತಿ ಮನೆ ಬಿಟ್ಟು ಆಶ್ರಮ ಸೇರಿದಳು.
525
00:41:08,880 --> 00:41:11.840
ಅವರ ದೊಡ್ಡ ಮಗಳು ನಂದಿನಿ
ಸ್ಕೂಲಲ್ಲಿ ನನ್ ಸಹಪಾಠಿ.
526
00:41:11,920 --> 00:41:14.760
ಆಗಾಗ ಅವರಮ್ಮನ ಜೊತೆ ಇರೋಕೆ
ಆಶ್ರಮಕ್ಕೆ ಹೋಗ್ತಾ ಇದ್ದಳು.
527
00:41:14,840 --> 00:41:17.040
ಜಾಸ್ತಿ ದಿನ ಇರ್ತಿರ್ಲಿಲ್ಲ. ಬಂದುಬಿಡೋಳು.
528
00:41:17,120 --> 00:41:19.480
ಮಕ್ಕಳ ಮೇಲೆ ಯಾವಾಗ್ಲೂ ತಪ್ಪು ಹೊರಿಸೋಕಾಗಲ್ಲ.
529
00:41:19,560 --> 00:41:21.200
ಅಪ್ಪನಂತೂ ನಾಸ್ತಿಕ.
530
00:41:21,320 --> 00:41:22.840
ಅಮ್ಮ ಸಾಧ್ವಿ.
531
00:41:22,920 --> 00:41:25.880
ಇಂಥ ಅಪ್ಪ-ಅಮ್ಮ ಮಧ್ಯೆ ಸಿಕ್ಕಿಕೊಂಡು
ಮಕ್ಕಳೇನು ಮಾಡ್ತಾರೆ?
532
00:41:25,960 --> 00:41:30.160
ನಿಜ. ಹೇಗೂ, ಮೇಡಂಗೂ ಷಣ್ಮುಗಂಗೂ ಜಗಳ ಇದೆ.
533
00:41:30,280 --> 00:41:32.800
ಇದ್ರಲ್ಲಿ ಬೇರೆ
ಸರಿಯಾಗಿ ಸಿಕ್ಕಿಹಾಕಿಕೊಂಡಿದ್ದಾನೆ.
534
00:41:32,880 --> 00:41:34.960
-ಏನಪ್ಪಾ, ಸಕ್ಕರೆ?
-ಮೇಡಂ...
535
00:41:36,640 --> 00:41:39.840
-ಈಗ ಆ ದೊಡ್ಡ ಮಗಳು ಎಲ್ಲಿದ್ದಾಳೆ?
-ಯಾರು? ನಂದಿನಿನಾ?
536
00:41:39,920 --> 00:41:43.560
ಅದೇನೋ ಕೊಯಮತ್ತೂರಲ್ಲಿ ಐಟಿ ಕೆಲಸ
ಮಾಡ್ತಿದ್ದಾಳೆ ಅಂತ ಹುಡುಗರು ಅಂದ್ರು.
537
00:41:48,400 --> 00:41:51.360
ಪೊಲೀಸ್ ದೌರ್ಜನ್ಯಕ್ಕೆ ಧಿಕ್ಕಾರ!
538
00:42:03,400 --> 00:42:04.880
ಹಂಗಾದ್ರೆ ಮಾತಾಡಲ್ವಾ?
539
00:42:05,520 --> 00:42:08.640
ಷಣ್ಮುಗಂನ ಬಿಡುಗಡೆ ಮಾಡಿ!
540
00:42:12,120 --> 00:42:14.200
-ಏನಯ್ಯಾ? ಏನಾದ್ರೂ ಹೇಳಿದ್ರಾ?
-ಇಲ್ಲ ಮೇಡಂ.
541
00:42:18,800 --> 00:42:20.920
ಒಂದೆರಡು ಒದೆ ಬಿದ್ರೆ ಮಾತು ಬರುತ್ತೆ.
542
00:42:22,360 --> 00:42:25.160
ನಾನೊಂದು ಸ್ವಲ್ಪ ವಿಚಾರಣೆ ಮಾಡಿದ್ರೆ...
543
00:42:26,800 --> 00:42:29.840
ಬೇಡ. ಆತ ಕಾರ್ಮಿಕರ ಯೂನಿಯನ್ ಲೀಡರ್.
544
00:42:31,400 --> 00:42:32.800
ನಾನೊಬ್ಳೇ ಮಾತಾಡ್ತೀನಿ.
545
00:42:44,480 --> 00:42:45.640
ಏನು ನಿಮ್ಮ ಸಮಸ್ಯೆ?
546
00:42:46,560 --> 00:42:48.120
ಸುಮ್ನೆ ಒಪ್ಪಿಕೊಂಡುಬಿಡಿ.
547
00:42:50,320 --> 00:42:51.920
ನಾನು ನನ್ನ ಮಗಳನ್ನ ಹುಡುಕಬೇಕು.
548
00:42:54,200 --> 00:42:55.640
ನನ್ನ ಬಿಡಿ.
549
00:43:02,440 --> 00:43:04.640
ರಾತ್ರಿ ಜಾತ್ರೆ ಡ್ಯೂಟಿ ನಾನು ಮಾಡ್ತೀನಿ.
550
00:43:04,680 --> 00:43:08.880
ನೀನು ಸುಂದರಂ, ಮುತ್ತು ಜೊತೆ ಹೋಗಿ
ಸಿಸಿಟಿವಿ ಫೂಟೇಜ್ನಲ್ಲಿ ಸಾಕ್ಷಿ ಹುಡುಕು.
551
00:43:11,080 --> 00:43:13.960
ಸುಮ್ನೇ ಷಣ್ಮುಗಂನ ತುಂಬಾ ಹೊತ್ತು
ಇಟ್ಕೋಳ್ಳೋಕೆ ಆಗಲ್ಲ.
552
00:43:15,640 --> 00:43:16.520
ಹಲೋ?
553
00:43:16,600 --> 00:43:19.160
ಅವರನ್ನ ಬಿಡೋಕೆ ಆಗಲ್ಲ ಅಂದ್ರೆ ಏನರ್ಥ?
554
00:43:19,200 --> 00:43:20.440
ನಿಲಾನೂ ಕಾಣಿಸ್ತಾ ಇಲ್ಲ.
555
00:43:20,520 --> 00:43:23.360
ಬೇಲ್ ಸಿಗ್ಲಿಲ್ಲ ಅಂದ್ರೆ ಅವರು ಜೈಲಲ್ಲೇ ಇರಬೇಕಾ?
556
00:43:23,440 --> 00:43:24.800
ಏನೂ ಗೊತ್ತಾಗ್ತಿಲ್ಲ.
557
00:43:32,680 --> 00:43:34.400
ನಮ್ಮ ಹುಡುಗರಿಂದ ಹುಡುಕಿಸಿ.
558
00:43:35,200 --> 00:43:37.680
ದೇವರ ದಯೆಯಿಂದ ನಿಲಾ ತಾನಾಗೇ ಬಂದ್ರೆ ಸಾಕು.
559
00:43:45,040 --> 00:43:45.880
ಅಕ್ಕ?
560
00:43:48,520 --> 00:43:52.000
ನಿಮಗೆ ಈ ಮಸಣದ ಕೊಳ್ಳೆ
ಮೇಲೆ ನಂಬಿಕೆ ಇಲ್ಲ ಅಂತ ಗೊತ್ತು.
561
00:43:52,680 --> 00:43:55.080
ಆದ್ರೆ ನನ್ನ ಮನಸಲ್ಲಿರೋದನ್ನ ಹೇಳಿಬಿಡ್ತೀನಿ.
562
00:43:56,000 --> 00:44:01.040
ಎಂಟನೇ ದಿನ ರಕ್ತದ ಅನ್ನ ತಿಂತೀನಿ
ಅಂತ ಅಮ್ಮನವರ ಹತ್ರ ಹರಕೆ ಹೊತ್ತರೆ
563
00:44:01,120 --> 00:44:02.440
ಅಂದುಕೊಂಡಿದ್ದು ಆಗುತ್ತೆ.
564
00:44:02,520 --> 00:44:04.360
ಏನು ಹೇಳ್ಬೇಕು ಅಂತಿದ್ದೀಯ, ಸೆಲ್ವಿ?
565
00:44:05,160 --> 00:44:07.920
ಇದು ನಮ್ಮ ಕುಟುಂಬಕ್ಕೆ ಕೆಟ್ಟ ಕಾಲ.
566
00:44:08,760 --> 00:44:12.200
ಷಣ್ಮುಗಂ ಜೈಲಲ್ಲಿದ್ದಾರೆ.
ನಿಲಾ ಎಲ್ಲಿದ್ದಾಳೋ ಗೊತ್ತಿಲ್ಲ.
567
00:44:13,400 --> 00:44:16.400
-ನಾವೇ ಅಮ್ಮನವರ ಹತ್ರ ಕೇಳಿಕೋಬಾರದಾ?
-ಸೆಲ್ವಿ.
568
00:44:16,480 --> 00:44:18.120
ನಾನು ಶುದ್ಧ ಸಸ್ಯಾಹಾರಿ.
569
00:44:19,040 --> 00:44:23.240
ಆಶ್ರಮಕ್ಕೆ ಹೋದ ಮೇಲೆ ಈರುಳ್ಳಿ,
ಬೆಳ್ಳುಳ್ಳಿ ತಿನ್ನೋದೂ ಬಿಟ್ಟುಬಿಟ್ಟೆ.
570
00:44:24,520 --> 00:44:26.440
ನನಗೊಂದು ವಿಷಯ ಅರ್ಥ ಆಗಲ್ಲ.
571
00:44:26,520 --> 00:44:30.480
ಷಣ್ಮುಗಂಗೆ ದೇವರ ಮೇಲೆ ನಂಬಿಕೆ ಇಲ್ಲ.
ನಿಮಗೇನಕ್ಕ?
572
00:44:32,480 --> 00:44:34.480
ಸಸ್ಯಾಹಾರಿ ದೇವ್ರನ್ನ ಮಾತ್ರ ನಂಬ್ತೀರಾ?
573
00:44:34,560 --> 00:44:38.000
ಅಂಗಾಳಮ್ಮ ನಮ್ಮ ದೇವತೆ.
ಅವಳೂ ನಿಮಗೆ ಸರಿ ಹೋಗಲ್ವಾ?
574
00:44:42,480 --> 00:44:44.360
ಇವತ್ತು ಹಬ್ಬದ ಮೊದಲ ದಿನ.
575
00:44:45,280 --> 00:44:48.080
ಅಮ್ಮನಿಗೆ ಅಲಂಕರಿಸಿ
ದೇವಸ್ಥಾನದಲ್ಲಿ ಕೂರಿಸಿರ್ತಾರೆ.
576
00:44:50,080 --> 00:44:54.040
ನನ್ನ ತೃಪ್ತಿಗೆ ನಿಲಾಗೋಸ್ಕರ ಏನಾದ್ರೂ
ಒಂದು ತಾಯತ ತಗೊಂಡು ಬರ್ತೀನಿ.
577
00:45:04,960 --> 00:45:06.320
ಮಸಣದ ಕೊಳ್ಳೆ ಮೊದಲ ದಿನ...
578
00:45:06,400 --> 00:45:08.400
ದಿನ 1: ಮಸಣದ ಕೊಳ್ಳೆ
ಅಮ್ಮನವರ ಮೆರವಣಿಗೆ
579
00:45:08,480 --> 00:45:10.160
ಅಂಗಾಳಮ್ಮನವರ ಮೆರವಣಿಗೆ.
580
00:46:50,400 --> 00:46:52.360
ಯಾರಾದ್ರೂ ಯಾರನ್ನಾದರೂ ಹೊಡೆದರೆ,
581
00:46:52,440 --> 00:46:54.400
ಪೊಲೀಸ್ ಅವರಿಗೋಸ್ಕರ ಹುಡುಕುತ್ತಾರೆ.
582
00:46:54,480 --> 00:46:56.240
ಪೋಲೀಸೇ ಯಾರಿಗಾದ್ರೂ ಹೊಡೆದ್ರೆ?
583
00:46:56,320 --> 00:46:58.640
ಹೇಯ್! ಏನ್ಮಾಡ್ತಾ ಇದ್ದೀಯ? ಯಾರು ನೀನು?
584
00:46:59,320 --> 00:47:03.120
ಷಣ್ಮುಗಂ ಮೊದಲ ಮಗಳು. ನಂದಿನಿ.
ಏನೋ ಟೆನ್ಶನ್ನಲ್ಲಿ ಮಾಡ್ತಾ ಇದ್ದಾಳೆ.
585
00:47:03,200 --> 00:47:04.840
ಟೆನ್ಶನ್ ಏನಲ್ಲ.
586
00:47:04,920 --> 00:47:08.000
ಒಬ್ಬ ಹೆಣ್ಣುಮಗಳು ಕಾಣಿಸ್ತಿಲ್ಲ,
ನೀವು ಟಿವಿ ನೋಡ್ತಿದೀರಾ?
587
00:47:08,080 --> 00:47:10.120
-ಸರಿಯಾಗಿ ಮಾತಾಡು.
-ನಂದಿನಿ...
588
00:47:10,200 --> 00:47:12.000
ನನಗೆ ಅರ್ಥ ಆಗುತ್ತೆ. ಆದ್ರೆ...
589
00:47:12,080 --> 00:47:15.360
ಏನರ್ಥ ಆಗುತ್ತೆ?
ಏನೋ ಗೊತ್ತಿರೋ ಹಾಗೆ ಮಾತಾಡ್ತೀಯ.
590
00:47:15,440 --> 00:47:17.240
ನಾನು, ಸಕ್ಕರೆ. ಚಕ್ರವರ್ತಿ.
591
00:47:17,320 --> 00:47:19.320
ನಿನ್ ಕ್ಲಾಸ್ಮೇಟು! ನೆನಪಾಯ್ತಾ?
592
00:47:20,600 --> 00:47:23.120
ಕ್ಲಾಸ್ಮೇಟ್ ಆದ್ರೆ? ನಾನು ನಿಂಗೆ ಗೊತ್ತಾ?
593
00:47:27,080 --> 00:47:29.920
ಊರಲ್ಲಿದೇ ಸಮಸ್ಯೆ. ಎಲ್ರಿಗೂ ಎಲ್ರೂ ಗೊತ್ತಲ್ಲ?
594
00:47:30,880 --> 00:47:33.080
ಅದೆಲ್ಲಾ ಬಿಡು. ನನ್ ತಂಗಿ ಕಾಣಿಸ್ತಿಲ್ಲ.
595
00:47:33,160 --> 00:47:34.560
ಹುಡುಕೋಕೆ ಆಗುತ್ತಾ ಇಲ್ವಾ?
596
00:47:34,640 --> 00:47:38.600
ಅದಕ್ಕೆ ನಿಮ್ಮನೆಯವರು ದೂರು ಕೊಡಬೇಕು.
ಆಗ್ಲೇ ನಾವು ಏನಾದ್ರೂ ಮಾಡೋಕಾಗೋದು.
597
00:47:38,680 --> 00:47:42.640
ಕಂಪ್ಲೇಂಟ್ ಕೊಡಕ್ಕೆ ಬಂದವರ ಮೇಲೆ
ಬೆಂಕಿ ಇಟ್ಟ ಕೇಸ್ ಹಾಕಿ ಬಂಧಿಸಿದ್ರಲ್ಲ.
598
00:47:43,080 --> 00:47:45.240
ಬಿಡಿ. ನಾನು ಕಂಪ್ಲೇಂಟ್ ಕೊಡ್ತೀನಿ.
599
00:47:45,320 --> 00:47:46.880
-ಬರೆದುಕೋ.
-ಇರಮ್ಮಾ.
600
00:47:46,960 --> 00:47:49.240
ಎಷ್ಟೋ ಕೇಸ್ಗಳು ಜಗಳ ಮಾಡಿ ಓಡಿ ಹೋದವರದ್ದೇ.
601
00:47:49,320 --> 00:47:50.640
ಅವರೇ ವಾಪಸ್ ಬರ್ತಾರೆ.
602
00:47:50,720 --> 00:47:54.000
-ಅದೆಲ್ಲಾ ನಮ್ಮತ್ರ ನಡೆಯಲ್ಲ...
-ಈ ಹುಚ್ಚಿ ಹತ್ರ ಮಾತಾಡ್ಬೇಡಿ.
603
00:47:54,080 --> 00:47:56.440
-ಅವರ ಕುಟುಂಬ ಎಲ್ಲಾ ಹುಚ್ಚರೇ.
-ಯೋ.
604
00:47:56,520 --> 00:47:58.440
-ಯಾರಯ್ಯಾ ಹುಚ್ಚಿ?
-ಮತ್ತಿನ್ನೇನು?
605
00:47:58,520 --> 00:48:01.320
ನೀನು ಮನೆ ಬಿಟ್ಟು ಹೋಗಿಲ್ವಾ?
ನಿಲಾ ನಿನ್ ತಂಗಿ ಅಲ್ವಾ?
606
00:48:01,400 --> 00:48:03.880
ಸುಂದರಂ. ಅನವಸರದ ಮಾತು ಬೇಡ.
607
00:48:03,960 --> 00:48:05.240
ನಂದಿನಿ!
608
00:48:05,320 --> 00:48:06.280
ನಂದಿನಿ.
609
00:48:08,440 --> 00:48:10.360
-ಅಪ್ಪ?
-ಇರು, ನಂದಿನಿ.
610
00:48:10,960 --> 00:48:12.600
-ಅಪ್ಪ.
-ನೀನ್ಯಾಕೆ ಇಲ್ಲಿ ಬಂದೆ?
611
00:48:12,680 --> 00:48:14.160
ಅಪ್ಪ, ನೀವು ಧೈರ್ಯವಾಗಿರಿ.
612
00:48:14,240 --> 00:48:15.760
-ನಿಲಾನ ಹುಡುಕೋಣ.
-ನಂದಿನಿ.
613
00:48:15,840 --> 00:48:17.440
ಮಿತಿ ಮೀರ್ತಾ ಇದ್ದೀಯ ನೀನು.
614
00:48:17,520 --> 00:48:19.480
6 ಗಂಟೆ ಮೇಲೆ ಹೆಂಗಸರು ಇರಬಾರದು.
615
00:48:19,560 --> 00:48:22.120
-ಬೆಳಿಗ್ಗೆ ಬಾ ಹೋಗು.
-ನೀನು ಹೋಗಮ್ಮ.
616
00:48:22,200 --> 00:48:23.320
-ಹೋಗು ಅಂದೆ.
-ಹೋಗು.
617
00:48:23,400 --> 00:48:24.400
-ಅಪ್ಪ.
-ನೀನು ಹೋಗು.
618
00:48:24,520 --> 00:48:26.320
ನಂದಿನಿ, ಹೊರಡು.
619
00:48:27,880 --> 00:48:28.800
ಹೊರಡು.
620
00:48:31,440 --> 00:48:33.040
ಪಾಪ ಅಂತ ಸುಮ್ನೆ ಇದ್ರೆ...
621
00:49:10,000 --> 00:49:10.920
ನಂದು.
622
00:49:18,080 --> 00:49:19.240
ಏನಮ್ಮ ನಡೀತಿದೆ?
623
00:50:11,680 --> 00:50:15.400
ಏನ್ಸಾರ್ ಇದು, ಹೋಗ್ತಾನೇ ಇದೆ,
ಒಳ್ಳೆ ಮುಗಿಯದ ಕತೆಯ ಹಾಗೆ.
624
00:50:15,480 --> 00:50:18.560
ಇದರಿಂದ ಫ್ಯಾಕ್ಟರಿಗೆ ಬೆಂಕಿ
ಇಟ್ಟವರನ್ನ ಹೆಂಗೆ ಹುಡುಕೋದು?
625
00:50:18,640 --> 00:50:20.120
ಎಸ್ಐ ಸಾರ್,
626
00:50:20,200 --> 00:50:23.120
ಇನ್ನು ನನ್ ಕೈಲಾಗಲ್ಲ. ನಿದ್ದೆ ತಡೆಯೋಕಾಗ್ತಿಲ್ಲ.
627
00:50:23,200 --> 00:50:26.880
ಎಷ್ಟೊತ್ತು ಅಂತ ಈ ರಸ್ತೆ ನೋಡ್ಕೊಂಡಿರೋದು?
ನನ್ ಕನಸಲ್ಲೂ ಇದೇ ಬರುತ್ತೆ.
628
00:50:27,640 --> 00:50:31.800
ಇದರಿಂದೇನು ಉಪಯೋಗ, ಸರ್?
ಕ್ಯಾಮೆರಾದಲ್ಲಿ ಏನೂ ಸಿಕ್ಕಿಲ್ಲ.
629
00:50:31,880 --> 00:50:36.200
ಯಾರಾದ್ರೂ ಅನುಮಾನಾಸ್ಪದವಾಗಿ ರೋಡಲ್ಲಿ ಕೈಲಿ
ಒಂದು ಬ್ಯಾಗ್ ಇಟ್ಕೊಂಡು ಓಡಾಡಿದರೆ,
630
00:50:36,280 --> 00:50:39.600
ಅದನ್ನೆಲ್ಲ ಈ ಅಪರಾಧಕ್ಕೆ ಸಾಕ್ಷಿ
ಅಂತ ಪರಿಗಣಿಸಬಹುದಾ?
631
00:50:39,680 --> 00:50:42.040
ಸುಂದರಂ, ಇದನ್ನ ಮಾಡಲೇಬೇಕು.
632
00:50:42,840 --> 00:50:45.120
ನಾವಂದುಕೊಳ್ಳದ ರೀತಿ ಏನೋ ಒಂದು ಸಿಗುತ್ತೆ.
633
00:50:45,200 --> 00:50:47.520
ನಿದ್ದೆ ಬರ್ತಾ ಇದೆ, ಸರ್.
634
00:50:47,600 --> 00:50:49.720
ನೀವೆಲ್ಲಾ ಹೊರಡಿ. ನಾನು ನೋಡಿಕೊಳ್ತೀನಿ.
635
00:50:49,800 --> 00:50:53.040
-ನಾನು ಕೂಡಾನಾ?
-ಟೇಪ್ ಬದಲಾಯಿಸೋದು ಮಕ್ಕಳಾಟ.
636
00:50:53,120 --> 00:50:54.160
ಹೊರಡಿ.
637
00:50:55,800 --> 00:50:58.400
ಮಸಣದ ಕೊಳ್ಳೆಗೆ ದಾಡಿ ಬಿಡ್ಬೇಕು
ಅಂದುಕೊಂಡಿದ್ದಲ್ವಾ?
638
00:50:58,480 --> 00:51:01.560
-ಡಿಎಸ್ಪಿ ಒಪ್ಪಿಕೊಂಡಿದ್ದಾರೆ.
-ಬೀರುವಿನಲ್ಲಿ ಎತ್ತಿಡು.
639
00:51:01,640 --> 00:51:03.720
-ಏನಾದ್ರೂ ಬೇಕಾದ್ರೆ ಕೇಳಿ.
-ಹೋಗಯ್ಯ.
640
00:54:45,720 --> 00:54:47.720
ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ
641
00:54:47,800 --> 00:54:49.800
ಕ್ರಿಯಾತ್ಮಕ ಮೇಲ್ವಿಚಾರಕರು
ಮೌರಿಯ ಅರವಿಂದ್